Tag: ಆತ್ಮಸ್ಥಾನಂದ ಮಹಾರಾಜ್ ಸ್ವಾಮೀಜಿ

  • ಮೋದಿಗೆ ರಾಜಕೀಯ ದಾರಿ ತೋರಿಸಿದ್ದ ಗುರು ಆತ್ಮಸ್ಥಾನಂದ ಮಹಾರಾಜ್ ಸ್ವಾಮೀಜಿ ವಿಧಿವಶ

    ಮೋದಿಗೆ ರಾಜಕೀಯ ದಾರಿ ತೋರಿಸಿದ್ದ ಗುರು ಆತ್ಮಸ್ಥಾನಂದ ಮಹಾರಾಜ್ ಸ್ವಾಮೀಜಿ ವಿಧಿವಶ

    ಕೋಲ್ಕತ್ತಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬದುಕಿನ ಪಥ ಬದಲಿಸಿ ರಾಜಕೀಯ ದಾರಿ ತೋರಿಸಿದ್ದ ಗುರು ಕೋಲ್ಕತ್ತಾ ರಾಮಕೃಷ್ಣಾ ಆಶ್ರಮದ ಆತ್ಮಸ್ಥಾನಂದ ಮಹಾರಾಜ್ ಸ್ವಾಮೀಜಿ ಅವರು ಭಾನುವಾರ ಸಂಜೆ ವಿಧಿವಶರಾಗಿದ್ದಾರೆ. ಇತ್ತ ಪ್ರಧಾನಿ ಮೋದಿ ಅವರು ಗುರುವಿನ ಅಗಲಿಕೆಗೆ ಸಂತಾಪವನ್ನು ಸೂಚಿಸಿದ್ದಾರೆ.

    99 ವರ್ಷದ ಆತ್ಮಸ್ಥಾನಂದ ಮಹಾರಾಜ್ ಶ್ರೀಗಳು ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಆತ್ಮಸ್ಥಾನಂದ ಸ್ವಾಮೀಜಿ ಅವರು ನಿನ್ನೆ ಸಂಜೆ ಕೋಲ್ಕತ್ತಾದ ರಾಮಕೃಷ್ಣ ಆಶ್ರಮದಲ್ಲಿ ವಿಧಿವಶವಾಗಿದ್ದಾರೆ. ಸ್ವಾಮೀಜಿ ಅವರ ಅನಾರೋಗ್ಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಬಂದು ಶ್ರೀಗಳನ್ನು ಭೇಟಿಯಾಗಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಪ್ರವೇಶಿಸುವುದಕ್ಕೂ ಮುನ್ನ ರಾಮಕೃಷ್ಣಾಶ್ರಮದಲ್ಲಿ ಸನ್ಯಾಸಿಯಾಗಲು ಬಯಸಿದ್ದರು. ಆದರೆ ಬಾಲಕ ಮೋದಿ ಕೋರಿಕೆಯನ್ನು ಅಂದು ತಿರಸ್ಕರಿಸಿದ್ದ ಆತ್ಮಸ್ಥಾನಂದ ಸ್ವಾಮೀಜಿ, ಮೋದಿ ಸನ್ಯಾಸತ್ವ ತಡೆದು ದೇಶ ಸೇವೆ ಮಾಡುವಂತೆ ಸಲಹೆ ನೀಡಿದ್ದರು ಎಂದು ಹೇಳಲಾಗಿದೆ.

    ಆತ್ಮಸ್ಥಾನಂದ ಮಹಾರಾಜ್ ಸ್ವಾಮೀಜಿ ಅವರು 1919, ಮೇ 10ರಂದು ಬಾಂಗ್ಲಾದೇಶದ ಢಾಕಾ ಬಳಿಯ ಸಬ್ಜಿಪುರ ಗ್ರಾಮದಲ್ಲಿ ಜನಿಸಿದ್ದರು. 1938ರಲ್ಲಿ ಸ್ವಾಮಿ ವಿಜಯಾನಂದರ ಅನತಿಯಂತೆ ತಮ್ಮ 22ನೇ ವಯಸ್ಸಿನಲ್ಲಿ ಬೇಲುರಿನ ರಾಮಕೃಷ್ಣ ಆಶ್ರಮವನ್ನು ಸೇರಿದ್ದರು.