Tag: ಆತ್ಮಚರಿತ್ರೆ

  • ಸುರೇಶ್ ರೈನಾ ಆತ್ಮಚರಿತ್ರೆ ‘ಬಿಲೀವ್’ ಬಿಡುಗಡೆ

    ಸುರೇಶ್ ರೈನಾ ಆತ್ಮಚರಿತ್ರೆ ‘ಬಿಲೀವ್’ ಬಿಡುಗಡೆ

    ಮುಂಬೈ: ಭಾರತ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಇದೀಗ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಅವರೆ ಬರೆದಿರುವ ಅವರ ಆತ್ಮಚರಿತ್ರೆ ಬಿಲೀವ್ ಎಂಬ ಪುಸ್ತಕವನ್ನು ಇಂದು ಬಿಡುಗಡೆ ಮಾಡಿದ್ದಾರೆ.

    ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ರೈನಾ ಆತ್ಮೀಯ ಗೆಳೆಯ ಮಹೇಂದ್ರ ಸಿಂಗ್ ಧೋನಿಯೊಂದಿಗೆ 2020ರ ಆಗಸ್ಟ್‍ನಲ್ಲಿ ಅಂತರಾಷ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿದ್ದರು. ಇದೀಗ ನಿವೃತ್ತಿಯ ಬಳಿಕ ತಮ್ಮ ವೈಯಕ್ತಿಕ ಬದುಕು ಮತ್ತು ಕ್ರಿಕೆಟ್ ವೃತ್ತಿ ಜೀವನದ ಕುರಿತಾಗಿ ಆತ್ಮಚರಿತ್ರೆಯೊಂದನ್ನು ಬರೆದಿದ್ದಾರೆ. ಇದನ್ನೂ ಓದಿ: ಕುದುರೆ ಜೊತೆ ಧೋನಿ ರೇಸ್

    ರೈನಾ ತಮ್ಮ ಆತ್ಮ ಚರಿತ್ರೆಗೆ ಸಚಿನ್ ತೆಂಡುಲ್ಕರ್ ಅವರು ನೀಡಿರುವ ಸ್ಪೂರ್ತಿಯ ಪದ ‘ಬಿಲೀವ್’ ಎಂಬ ಹೆಸರನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ರೈನಾ ಅವರ ಕ್ರಿಕೆಟ್ ಪಯಣದಲ್ಲಿ ಕಾಣಿಸಿಕೊಂಡ ಸವಾಲುಗಳು, ಗಾಯ, ವೈಫಲ್ಯ, ಸ್ನೇಹ, ಸ್ಟಾರ್ ಆಟಗಾರನಾದ ಕಥೆ ಹೀಗೆ ಹಲವಾರು ವಿಷಯಗಳನ್ನು ಈ ಪುಸ್ತಕದಲ್ಲಿ ಕಾಣಬಹುದಾಗಿದೆ.

    ರೈನಾ ಬಿಲೀವ್ ಎಂಬ ಪದವನ್ನು ಈ ಹಿಂದೆ ತಮ್ಮ ಕೈಯಲ್ಲಿ ಅಚ್ಚೆ ಹಾಕಿಸಿಕೊಂಡಿದ್ದರು. ಇದು ಸಚಿನ್ ಅವರಿಂದ ಸ್ಪೂರ್ತಿಯಾಗಿ ಪಡೆದ ಪದ ಆಗಿರುವುದರಿಂದ ಪುಸ್ತಕಕ್ಕೂ ರೈನಾ ಇದೇ ಹೆಸರು ನೀಡಿದ್ದು, ಆತ್ಮಚರಿತ್ರೆಯನ್ನು ಬರಹಗಾರ ಭರತ್ ಸುಂದರೇಸನ್ ಅವರ ಸಹಾಯದಿಂದ ಬರೆದಿದ್ದಾರೆ. ಇದನ್ನೂ ಓದಿ: ಯುಎಇಯಲ್ಲಿ ಐಪಿಎಲ್ ನಿಗದಿ ಬೆನ್ನಲ್ಲೇ ಟ್ರೋಲ್ ಆದ ಸುರೇಶ್ ರೈನಾ

    https://twitter.com/ImRaina/status/1403365853425397760

    ರೈನಾರ ಈ ಪುಸ್ತಕದಲ್ಲಿ ಭಾರತ ತಂಡದ ಮಾಜಿ ಅಟಗಾರರು ಮತ್ತು ಹಾಳಿ ಆಟಗಾರರ ಬಗ್ಗೆ ಕೆಲವು ಸ್ವಾರಸ್ಯಕರವಾದ ವಿಷಯಗಳಿವೆ. ಇದರೊಂದಿಗೆ ತನ್ನ ಸಹ ಆಟಗಾರರಾಗಿದ್ದ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ ಮತ್ತಿತರರನ್ನು ಯಾವ ರೀತಿ ಅರಿತುಕೊಂಡು ಕ್ರಿಕೆಟ್‍ನಲ್ಲಿ ಮುನ್ನಡೆದೆ ಮತ್ತು ಅವರಿಂದ ಕಲಿತಂತಹ ಪಾಠಗಳು, ಸ್ನೇಹ, ಸಂಬಂಧ ಹೀಗೆ ಹಲವು ವಿಷಯಗಳನ್ನು ಬರೆದುಕೊಂಡಿದ್ದಾರೆ.

    ರೈನಾ ಭಾರತದ ಪರ ಒಟ್ಟು 18 ಟೆಸ್ಟ್ ಪಂದ್ಯದಿಂದ 768ರನ್, 226 ಏಕದಿನ ಪಂದ್ಯದಿಂದ 5,615 ರನ್ ಮತ್ತು 78 ಟಿ20 ಪಂದ್ಯದಿಂದ 1,604 ರನ್ ಗಳಿಸಿದ್ದಾರೆ.ರೈನಾ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಇದೀಗ ಐಪಿಎಲ್‍ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದು, ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ.

  • ಆತ್ಮಚರಿತ್ರೆಯಲ್ಲಿ ರಾಹುಲ್ ಗಾಂಧಿ ವ್ಯಕ್ತಿತ್ವ ಬಣ್ಣಿಸಿದ ಒಬಾಮಾ

    ಆತ್ಮಚರಿತ್ರೆಯಲ್ಲಿ ರಾಹುಲ್ ಗಾಂಧಿ ವ್ಯಕ್ತಿತ್ವ ಬಣ್ಣಿಸಿದ ಒಬಾಮಾ

    – ಶಿಕ್ಷಕರನ್ನು ಮೆಚ್ಚಿಸಲು ನೋಡೋ ವಿದ್ಯಾರ್ಥಿಯಂತೆ

    ವಾರ್ಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ರಾಜಕೀಯ ಅನುಭವ ಹಾಗೂ ಜೀವನದ ಕೆಲ ಸ್ಮರಣೀಯ ನೆನಪುಗಳನ್ನು ‘ಎ ಪ್ರಾಮಿಸ್ಡ್‌ ಲ್ಯಾಂಡ್’ ಪುಸ್ತಕದ ರೂಪದಲ್ಲಿ ಹೊರ ತರುತ್ತಿದ್ದು, ನವೆಂಬರ್ 17 ರಂದು ಪುಸ್ತಕ ಬಿಡುಗಡೆಯಾಗಲಿದೆ.

    ಪುಸ್ತಕದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತು ಒಬಾಮಾ ಆಸಕ್ತಿಕರ ಹೇಳಿಕೆಗಳನ್ನು ನೀಡಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

    ರಾಹುಲ್ ಗಾಂಧಿಯಲ್ಲಿ ಭಯವೆಂಬ ತಿಳಿಯದ ಗುಣವಿದೆ. ತರಗತಿಯಲ್ಲಿ ಶಿಕ್ಷಕರನ್ನು ಮೆಚ್ಚಿಸುವ ವಿದ್ಯಾರ್ಥಿಯಂತೆ ಅತುರವಾಗಿರುತ್ತಾರೆ. ಆದರೆ ಒಂದು ವಿಷಯದ ಕುರಿತು ಆಳವಾಗಿ ಕಲಿತುಕೊಳ್ಳಬೇಕೆಂಬ ಉತ್ಸಾಹ ಮತ್ತು ಅಭಿರುಚಿಯ ಕೊರತೆ ಇದೆ ಎಂದು ಒಬಾಮಾ ಬರೆದುಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

    ಒಟ್ಟಾರೆ 768 ಪುಟಗಳ ಈ ಪುಸ್ತಕದಲ್ಲಿ ಒಬಾಮಾ ತಮ್ಮ ಬಾಲ್ಯದ ಘಟನೆಗಳು, ನೆನಪು, ರಾಜಕೀಯ ಬದುಕು, 2008ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಗೆಲುವು ಹೀಗೆ ಅನೇಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಆಫ್ರಿಕನ್ ಅಮೆರಿಕನ್ ಎಂಬ ಇತಿಹಾಸ ಸೃಷ್ಟಿ ಮಾಡಿರೋ ಒಬಾಮಾ, 2010 ಮತ್ತು 2015 ರಲ್ಲಿ ಭಾರತದ ಪ್ರವಾಸ ಕೈಗೊಂಡಿದ್ದರು. 2009ರ ಜನವರಿಯಿಂದ 2017ರ ಜನವರಿವರೆಗೂ 2 ಅವಧಿಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ರು. ಉಳಿದಂತೆ 2017 ರಲ್ಲಿ ಭಾರತಕ್ಕೆ ಒಬಾಮಾ ಆಗಮಿಸಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು.

  • ತನ್ನ ಆತ್ಮಚರಿತ್ರೆಯ ಸಿನಿಮಾದಲ್ಲಿ ಮಿ. ಪರ್ಫೆಕ್ಟ್ ನಟಿಸಬೇಕು: ದ್ರಾವಿಡ್

    ತನ್ನ ಆತ್ಮಚರಿತ್ರೆಯ ಸಿನಿಮಾದಲ್ಲಿ ಮಿ. ಪರ್ಫೆಕ್ಟ್ ನಟಿಸಬೇಕು: ದ್ರಾವಿಡ್

    ಮುಂಬೈ: ಮಾಜಿ ಕ್ರಿಕೆಟಿಗ ಆಲ್ ರೌಂಡರ್ ರಾಹುಲ್ ದ್ರಾವಿಡ್ ತಮ್ಮ ಆತ್ಮಚರಿತ್ರೆ ಸಿನಿಮಾದಲ್ಲಿ ಬಾಲಿವುಡ್ ಮಿ. ಪರ್ಫೆಕ್ಟ್ ಅಮಿರ್ ಖಾನ್ ನಟಿಸಬೇಕೆಂಬ ತಮ್ಮ ಇಚ್ಛೆಯನ್ನು ಹೊರ ಹಾಕಿದ್ದರು.

    ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ರಾಹುಲ್ ಅವರನ್ನು ನಿಮ್ಮ ಆತ್ಮಚರಿತ್ರೆಯಲ್ಲಿ ಯಾವ ನಟ ನಟಿಸಬೇಕೆಂದು ಪ್ರಶ್ನೆಯನ್ನು ಕೇಳಿದ್ದರು. ಆಗ ರಾಹುಲ್ ನಗುತ್ತಾ ಬಾಲಿವುಡ್ ಮಿ. ಪರ್ಫೆಕ್ಟ್ ಅಮಿರ್ ಖಾನ್ ಅವರ ಹೆಸರನ್ನು ಹೇಳಿದ್ದಾರೆ.

    ಇಎಸ್‍ಪಿಎನ್ ಕ್ರಿಕ್ ಇನ್ಫೋದಲ್ಲಿ ರಾಹುಲ್ ಅವರಿಗೆ 25 ಪ್ರಶ್ನೆಗಳನ್ನು ಕೇಳಲಾಗಿತ್ತು. ಆಗ ಅವರ ಬಯೋಪಿಕ್ ಚಿತ್ರದ ಬಗ್ಗೆಯೂ ಪ್ರಶ್ನಿಸಲಾಗಿತ್ತು. ಅಲ್ಲದೇ ತಮ್ಮ ಕ್ರಿಕೆಟ್ ಕೆರಿಯರ್ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು.

    ನೀವು ಇಷ್ಟು ವರ್ಷ ಆಡಿದ ಕ್ರಿಕೆಟ್ ಪಂದ್ಯದಲ್ಲಿ ಯಾವ ಬ್ಯಾಟ್ಸ್‍ಮೆನ್ ಜೊತೆ ಆಡಲು ಇಷ್ಟಪಡುತ್ತಿದ್ದೀರಿ ಎಂದು ಕೇಳಿದ್ದರು. ಆಗ ರಾಹುಲ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರನ್ನು ಹೇಳಿದ್ದರು.

    ಸದ್ಯ ಈಗಾಗಲೇ ಬಾಲಿವುಡ್‍ನಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ, ಸಚಿನ್ ತೆಂಡೂಲ್ಕರ್ ಹಾಗೂ ಮೊಹಮದ್ ಅಜರುದ್ದೀನ್ ಅವರ ಆತ್ಮಚರಿತ್ರೆ ಸಿನಿಮಾ ಬಂದಿದೆ.

  • ತ್ರಿಮೂರ್ತಿಗಳಿಂದಾಗಿ ನನ್ನ ರಾಜಕೀಯ ಜೀವನ ಹಾಳಾಯ್ತು: ಆತ್ಮಚರಿತ್ರೆಯಲ್ಲಿ ಕೈ ನಾಯಕರ ಬಗ್ಗೆ ಬಿ.ಎ.ಮೊಯಿದ್ದೀನ್ ಅಸಮಾಧಾನ

    ತ್ರಿಮೂರ್ತಿಗಳಿಂದಾಗಿ ನನ್ನ ರಾಜಕೀಯ ಜೀವನ ಹಾಳಾಯ್ತು: ಆತ್ಮಚರಿತ್ರೆಯಲ್ಲಿ ಕೈ ನಾಯಕರ ಬಗ್ಗೆ ಬಿ.ಎ.ಮೊಯಿದ್ದೀನ್ ಅಸಮಾಧಾನ

    ಮಂಗಳೂರು: ಮಾಜಿ ಸಚಿವ ಬಿ.ಎ.ಮೊಯ್ದೀನ್ ಮೊನ್ನೆಯಷ್ಟೆ ನಿಧನರಾಗಿದ್ದಾರೆ. ಆದರೆ, ಅದಕ್ಕೂ ಮುನ್ನ ಮೊಯಿದ್ದೀನ್ ಬರೆದಿಟ್ಟ ಆತ್ಮಚರಿತ್ರೆ ಕಾಂಗ್ರೆಸ್ ರಾಜಕೀಯ ವಲಯದಲ್ಲಿ ಸದ್ದು ಮಾಡುವ ಲಕ್ಷಣ ಕಂಡುಬಂದಿದೆ.

    ತನ್ನನ್ನು ರಾಜಕೀಯದಲ್ಲಿ ಮೇಲೆ ಬರದಂತೆ ತುಳಿದು ಹಿಂಡಿ ಹಿಪ್ಪೆ ಮಾಡಿದ್ದು ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಮತ್ತು ವೀರಪ್ಪ ಮೊಯ್ಲಿ. ಈ ಮೂವರು ತ್ರಿಮೂರ್ತಿಗಳಿಂದಾಗಿ ನನ್ನ ರಾಜಕೀಯ ಜೀವನ ಹಾಳಾಗಿ ಹೋಯ್ತು ಎಂದು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

    ಆತ್ಮಕಥೆಯಾದ `ನನ್ನೊಳಗಿನ ನಾನು’ ಎಂಬ ಪುಸ್ತಕದಲ್ಲಿ ಕೈ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಕಾಂಗ್ರೆಸ್ ಪಾಲಿಗೆ ನಾಲ್ಕಾಣೆ ಸದಸ್ಯನೂ ಅಲ್ಲದ ಜನಾರ್ದನ ಪೂಜಾರಿಯನ್ನು ರಾಜಕೀಯಕ್ಕೆ ಕರೆತಂದಿದ್ದು ವೀರಪ್ಪ ಮೊಯ್ಲಿ. ಆಗಿನ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕೆ.ಕೆ. ಶೆಟ್ಟಿ ಜೊತೆಗಿನ ವೈಮನಸ್ಸಿನಿಂದಾಗಿ ಜಸ್ಟ್ ಒಬ್ಬ ವಕೀಲನಾಗಿದ್ದ ಜನಾರ್ದನ ಪೂಜಾರಿಯನ್ನು ಇಂದಿರಾ ಗಾಂಧಿಗೆ ಪರಿಚಯಿಸಿ, 1977ರಲ್ಲಿ ನೇರವಾಗಿ ಲೋಕಸಭೆ ಚುನಾವಣೆಯ ಟಿಕೆಟ್ ಕೊಡಿಸಿದ್ದರು. ಆಗ ಅವರ ಹೆಸರು ಜನಾರ್ದನ ಅಷ್ಟೇ ಆಗಿತ್ತು, ಆದರೆ ಬಿಲ್ಲವ ಜನರನ್ನು ಓಲೈಸಲು ದೃಷ್ಟಿಯಿಂದ ಜನಾರ್ದನ ಹೆಸರಿನ ಜೊತೆಗೆ ಪೂಜಾರಿ ಎಂದು ಸೇರಿಸಿ ಜನಾರ್ದನ ಪೂಜಾರಿ ಎಂದು ನಾಮಕರಣ ಮಾಡಿದ್ದು ವೀರಪ್ಪ ಮೊಯ್ಲಿ ಎಂದು ಬರೆದಿದ್ದಾರೆ.

    ಪೂಜಾರಿ ಅಧಿಕಾರ ಪಡೆದ ಬಳಿಕ ತನ್ನ ಏಳ್ಗೆಗೆ ಕಾರಣರಾದವರನ್ನೆಲ್ಲ ತುಳಿದರು. ಗ್ರಾಮ ಪಂಚಾಯ್ತಿ ಸದಸ್ಯನಿಂದ ಹಿಡಿದು ಮೇಯರ್, ಶಾಸಕ ಯಾರಾಗಬೇಕು ಅನ್ನೋದು ತಾನು ಹೇಳಿದಂತೆ ನಡೆಯುವಂತೆ ನೋಡಿಕೊಂಡರು. ಆಸ್ಕರ್ ಅನ್ನು ಉಡುಪಿಗೆ ಯುವ ಕಾಂಗ್ರೆಸ್ ಅಧ್ಯಕ್ಷನನ್ನಾಗಿಸಿ, 1980 ರಲ್ಲಿ ಲೋಕಸಭೆ ಟಿಕೆಟ್ ಸಿಗುವಂತೆ ಮಾಡಿದ್ದೆ. ಆದರೆ 1978ರಿಂದ ಬಂಟ್ವಾಳ ಶಾಸಕನಾಗಿದ್ದ ತನಗೆ 1983ರ ಚುನಾವಣೆಯಲ್ಲಿ ಪೂಜಾರಿ, ಮೊಯ್ಲಿ, ಆಸ್ಕರ್ ಸೇರಿ ಟಿಕೆಟ್ ಸಿಗದಂತೆ ಮಾಡಿದ್ದರು. ನನ್ನನ್ನು ಮೂಲೆಗುಂಪು ಮಾಡಿ, ರಮಾನಾಥ ರೈಗೆ ಟಿಕೆಟ್ ಕೊಡಿಸಿದ್ದರು. 1980ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ದೇವರಾಜ ಅರಸು ಜೊತೆಗಿದ್ದ ಕಾರಣಕ್ಕೆ ನನ್ನ ಮೇಲೆ ಹಗೆ ತೀರಿಸಿಕೊಂಡರು. ಈ ಮೂವರಿಗೆ ನಾನೂ ಎಷ್ಟೇ ಅಂಗಲಾಚಿದರೂ ನನ್ನನ್ನು ರಾಜಕೀಯವಾಗಿ ತುಳಿದುಬಿಟ್ಟರು. ಬಳಿಕ ನನಗೆ 1989ರಲ್ಲಿ ರಾಜಕೀಯ ಪುನರ್ಜನ್ಮ ನೀಡಿದ್ದು ರಾಮಕೃಷ್ಣ ಹೆಗಡೆ ಅಂತಾ ಬರೆದುಕೊಂಡಿದ್ದಾರೆ.

    ಮೊಯಿದ್ದೀನ್ ರವರ ಆತ್ಮಚರಿತ್ರೆ ನನ್ನೊಳಗಿನ ನಾನು ಜುಲೈ 20 ರಂದು ಬಿಡುಗಡೆಯಾಗಲಿದೆ.

  • ಅಕ್ರಂ ಲೈಂಗಿಕ ಜೀವನದ ಬಗ್ಗೆ ಪುಸ್ತಕ ಬರೆದ ಇಮ್ರಾನ್ ಖಾನ್ ಮಾಜಿ ಪತ್ನಿ!

    ಅಕ್ರಂ ಲೈಂಗಿಕ ಜೀವನದ ಬಗ್ಗೆ ಪುಸ್ತಕ ಬರೆದ ಇಮ್ರಾನ್ ಖಾನ್ ಮಾಜಿ ಪತ್ನಿ!

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ರ ಮಾಜಿ ಪತ್ನಿ ರೇಹಮ್ ಖಾನ್ ಅವರಿಗೆ ಮಾಜಿ ನಾಯಕ ವಾಸೀಂ ಅಕ್ರಂ ನೋಟಿಸ್ ಜಾರಿ ಮಾಡಿದ್ದಾರೆ.

    ರೇಹಮ್ ಖಾನ್ ತಮ್ಮ ಮುಂಬರುವ ಪುಸ್ತಕದಲ್ಲಿ ಹಲವು ಪಾಕಿಸ್ತಾನಿ ಪ್ರಮುಖರ ಲೈಂಗಿಕ ಜೀವನ ಕುರಿತಂತೆ ವಿವಾದಾತ್ಮಕ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಸದ್ಯ ರೇಹಮ್ ಖಾನ್ ಪುಸ್ತಕದ ಕೆಲ ಪುಟಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಪುಟಗಳಲ್ಲಿ ವಾಸೀಂ ಅಕ್ರಂರ ಮಾಜಿ ಮೊದಲ ಪತ್ನಿಯ ಕುರಿತು ವಿವಾದತ್ಮಾಕ ಮಾಹಿತಿ ನೀಡಿದ್ದಾರೆ.

    ವೈರಲ್ ಆಗಿರುವ ಪುಸ್ತಕದ 402 ಹಾಗೂ 572 ಪುಟಗಳು ವಿವಾದಕ್ಕೆ ಕಾರಣವಾಗಿದ್ದು, ಇದರಲ್ಲಿ ವಾಸೀಂ ಅಕ್ರಂ ತಮ್ಮ ಪತ್ನಿಯನ್ನು ಕಾಮ ತೃಷೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ತನ್ನ ಪತ್ನಿಯೊಂದಿಗೆ ಸ್ವತಃ ತನ್ನ ಕಣ್ಣೆದುರೇ ಲೈಂಗಿಕ ಸಂಬಂಧ ಹೊಂದಲು ಕಪ್ಪು ವರ್ಣಿಯನನ್ನು ನೇಮಿಸಿದ್ದ ಎಂದು ನಮೂದಿಸಿದ್ದಾರೆ. ಅಲ್ಲದೇ ಆಕ್ರಂ ಹಲವು ಗಣ್ಯರ ಜೊತೆ ಅಕ್ರಮ ಲೈಂಗಿಕ ಸಂಕರ್ಪ ಹೊಂದಿದ್ದ ಎಂದು ಉಲ್ಲೇಖಿಸಿದ್ದಾರೆ.

    ಸದ್ಯ ಈ ಕುರಿತು ವಸೀಂ ಅಕ್ರಂ ವೆಸ್ಟ್ ಲಂಡನ್ ನ್ಯಾಯಾಲಯದಿಂದ ರೇಹಮ್ ಖಾನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ ಇದೇ ಪುಸ್ತದಲ್ಲಿ ಮೂವರು ನಾಯಕರ ಖಾಸಗಿ ಲೈಂಗಿಕ ಜೀವನದ ಕುರಿತು ಉಲ್ಲೇಖಿಸಿದ್ದು, ಅವರು ಸಹ ನೋಟಿಸ್ ನೀಡಿದ್ದಾರೆ.

    ಸದ್ಯ ಜಾರಿಗೆ ಆಗಿರುವ ನೋಟಿಸ್ ನಲ್ಲಿ ವಾಸೀಂ ಅಕ್ರಂ ಒಬ್ಬ ಅಂತರಾಷ್ಟ್ರೀಯ ಕ್ರೀಡಾಪಟು. ಶ್ರೇಷ್ಠ ಕ್ರಿಕೆಟರ್ ಗಳಿಂದ ಗುರುತಿಸಲ್ಪಡುವ ವ್ಯಕ್ತಿ. ಒಬ್ಬ ಸಾಮಾಜಿಕ ವ್ಯಕ್ತಿಯಾಗಿರುವುದರಿಂದ ಅವರ ವಿರುದ್ಧ ಈ ರೀತಿಯ ಆಧಾರ ರಹಿತ ಆರೋಪ ಮಾಡಲಾಗಿದೆ. ಅಲ್ಲದೇ ಮೃತ ವಾಸೀಂ ಅವರ ಪತ್ನಿ ಗೌರವ ಮೇಲೆ ಪರಿಣಾಮ ಬೀರಲಿದೆ ಎಂದು ಉಲ್ಲೇಖಿಸಲಾಗಿದೆ.

    ಸದ್ಯ ರೇಹಮ್ ರ ಈ ಹೇಳಿಕೆ ಪಾಕಿಸ್ಥಾನದ ರಾಜಕೀಯದಲ್ಲೂ ಸಾಕಷ್ಟು ತಲ್ಲಣ ಮೂಡಿಸಿದ್ದು, ಪುಸ್ತಕದ ಭಾಗಗಳು ಈಗ ಅಂತರ್ಜಾಲದಲ್ಲಿ ಲೀಕ್ ಆಗಿದ್ದು ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ

    ಲೇಖಕಿ ರೇಹಮ್ ಖಾನ್ ಇಮ್ರಾನ್ ಖಾನ್ ಮಾಜಿ ಪತ್ನಿಯಾಗಿದ್ದು, ಜನವರಿ 2015 ರಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾದ 15 ದಿನಗಳಲ್ಲಿ ಅಂದರೆ 2015 ಅಕ್ಟೋಬರ್ ನಲ್ಲಿ ಇವರ ಇಬ್ಬರ ನಡುವಿನ ದಾಂಪತ್ಯ ಜೀವನ ಮುರಿದು ಬಿದ್ದಿತ್ತು. ಇನ್ನು ವಾಸೀಂ ಬುಶ್ರಾ ಮನೇಕಾ ಅವರೊಂದಗೆ ಎರಡನೇ ಮದುವೆಯಾಗಿದ್ದರು. ಇದಕ್ಕೂ ಮೊದಲು 1995 ರಲ್ಲಿ ಜೆಮಿಮಾ ಗೋಲ್ಡ್ ಸ್ಮಿತ್ ಅವರೊಂದಿಗೆ ವಿವಾಹವಾಗಿ 9 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು.

  • ಇಂದಿರಾ ಗಾಂಧಿಯಂತೆ ಆಗ್ತಿದ್ದಾರೆ ಮೋದಿ, ಇದು ಅಹಂಕಾರದ ಪರಮಾವಧಿ: ದತ್ತಾ

    ಇಂದಿರಾ ಗಾಂಧಿಯಂತೆ ಆಗ್ತಿದ್ದಾರೆ ಮೋದಿ, ಇದು ಅಹಂಕಾರದ ಪರಮಾವಧಿ: ದತ್ತಾ

    ಬೆಂಗಳೂರು: ನಾನೇ ಪ್ರಧಾನಿ, ನಂದೇ ಪಕ್ಷ ಎಂದು ಇಂದಿರಾ ಗಾಂಧಿಯವರು ವರ್ತಿಸಿದ್ದರು. ಅದೇ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವರ್ತಿಸುತ್ತಿದ್ದಾರೆ ಎಂದು ಶಾಸಕ ವೈಎಸ್‍ವಿ ದತ್ತಾ ಹೇಳಿದ್ದಾರೆ.

    ಇದು ಅಹಂಕಾರದ ಪರಮಾವಧಿ. ಒಂದೇ ದೇಶ ಒಂದೇ ಮೋದಿ ಎನ್ನುವ ಕಾಲ ಬರುತ್ತೆ ಎಚ್ಚರ. ಈಗ ಆಹಾರದ ಮೇಲೆ ತುರ್ತು ಪರಿಸ್ಥಿತಿ ಇದೆ. ಮುಂದೆ ರಾಜಕೀಯದ ಮೇಲೆ ತುರ್ತು ಪರಿಸ್ಥಿತಿ ಬರಬಹುದು ಎಂದು ಹೇಳಿದರು.

    ದೇವೇಗೌಡರ ಆತ್ಮಚರಿತ್ರೆಯ ಟ್ರೇಲರ್ ಇವತ್ತು ಬಿಡುಗಡೆ ಮಾಡಲು ತಿಳಿಸಿದ್ದೆ. ಆದರೆ ನವೆಂಬರ್ ತಿಂಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಆತ್ಮಚರಿತ್ರೆ ಬಿಡುಗಡೆಯಾಗಲಿದೆ. ಈ ಆತ್ಮಚರಿತ್ರೆಯು ಬರಿ ದೇವೇಗೌಡರ ಆತ್ಮಚರಿತ್ರೆ ಅಲ್ಲ, ಇತಿಹಾಸ ಬರೆಯುವವರಿಗೆ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದರು.

    ಇನ್ನೂ ನಾಳೆ ನಾಡಿದ್ದರಲ್ಲಿ ಸ್ಫೋಟಕ ಮಾಹಿತಿಗಳ ನೈಜ ಚಿತ್ರಣಗಳು ಹಾಗೂ ರಾಜಕಾರಣಿಗಳ ಬಂಡವಾಳ ಹೊರಗೆ ಬರುತ್ತಿದೆ ಅದನ್ನು ನೋಡೋಣ. ಯುವಕರು ಫ್ಲೆಕ್ಸ್ ಬ್ಯಾನರ್‍ಗಿಂತ ಪಾದಯಾತ್ರೆಗೆ ಮುಂದಾಗಬೇಕು. ಪಾದಯಾತ್ರೆ ಅದ್ಭುತವಾದ ಪ್ರಯೋಗ, ಫೇಸ್‍ಬುಕ್ ವಾಟ್ಸಪ್ ಜೊತೆಗೆ ನಿಮ್ಮ ಕಾಲಿಗೂ ಕೆಲಸ ಕೊಡಿ ಎಂದು ದತ್ತಾ ಯುವಕರಿಗೆ ಕರೆ ನೀಡಿದರು.

  • ‘ದಿ ಗ್ರೇಟ್ ಖಲಿ’ ಆಗಲು ಹೊರಟ್ಟಿದ್ದಾರೆ ಸುಶಾಂತ್ ಸಿಂಗ್ ರಜಪೂತ್

    ‘ದಿ ಗ್ರೇಟ್ ಖಲಿ’ ಆಗಲು ಹೊರಟ್ಟಿದ್ದಾರೆ ಸುಶಾಂತ್ ಸಿಂಗ್ ರಜಪೂತ್

    ಮುಂಬೈ: ಬಾಲಿವುಡ್‍ನಲ್ಲಿ ಕ್ರೀಡಾತಾರೆಗಳ ಆತ್ಮಚರಿತ್ರೆಗಳನ್ನು ಸಿನಿಮಾವನ್ನಾಗಿ ಮಾಡೋದು ಟ್ರೆಂಡ್ ಆಗಿದೆ. ಎಂ.ಎಸ್ ಧೋನಿ ಅವರ ಆತ್ಮಚರಿತ್ರೆಯಲ್ಲಿ ನಟಿಸಿದ ನಂತರ ಸುಶಾಂತ್ ಸಿಂಗ್ ರಾಜ್‍ಪುತ್ ‘ದಿ ಗ್ರೇಟ್ ಖಲಿ’ಯಾಗಿ ಕಾಣಿಸಿಕೊಳ್ಳಲಿದ್ದಾರೆ.

    ವರದಿಗಳ ಪ್ರಕಾರ ಸುಶಾಂತ್ ಸಿಂಗ್ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಕುಸ್ತಿಪಟು ಆದ ದಲೀಪ್ ಸಿಂಗ್ ರಾಣಾ (ದಿ ಗ್ರೇಟ್ ಖಲಿ) ಅವರು ತಮ್ಮ ಆತ್ಮಚರಿತ್ರೆಯನ್ನು ಸಿನಿಮಾವನ್ನಾಗಿ ಮಾಡಲು ಒಪ್ಪಿಗೆ ಕೊಟ್ಟಿದ್ದಾರೆ. ಖಲಿ 7.1 ಅಡಿ ಉದ್ದವಿದ್ದು 157 ಕೆ.ಜಿ ತೂಕವನ್ನು ಹೊಂದಿದ್ದಾರೆ. ಸುಶಾಂತ್‍ಗೆ ಹೇಗೆ ಅವರನ್ನು ಹೋಲುತ್ತಾರೆ ಎಂದು ಎಲ್ಲರಿಗೂ ಅನುಮಾನ ಶುರುವಾಗಿದೆ.

    ಎಂ.ಎಸ್ ಧೋನಿ ಚಿತ್ರದಲ್ಲಿ ಸುಶಾಂತ್ ಲುಕ್, ವಾಕಿಂಗ್ ಸ್ಟೈಲ್ ಎಲ್ಲಾ ಧೋನಿ ರೀತಿಯಲ್ಲೇ ಮಾಡಿದ್ದರು. ಸುಶಾಂತ್ ಮತ್ತು ಖಲಿ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಖಲಿ ಅವರ ಹಾಗೆ ಉದ್ದ ಹಾಗೂ ದಪ್ಪ ಕಾಣಲು ವಿಎಫ್‍ಎಕ್ಸ್ ಬಳಸಲು ಚಿತ್ರ ತಂಡ ಮುಂದಾಗಿದೆ. ಸುಶಾಂತ್ ರಜಪುತ್ ಬಿಟ್ಟರೆ ಖಲಿ ಪಾತ್ರವನ್ನು ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದು ಸಿನಿ ಮಾರುಕಟ್ಟೆಯ ತಜ್ಞರೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.

    ಸುಶಾಂತ್ ಈ ಚಿತ್ರ ಒಪ್ಪಿಕೊಂಡ ನಂತರ ಇದು ಅವರ ಮೂರನೇ ಆತ್ಮಚರಿತ್ರೆಯ ಚಿತ್ರವಾಗುತ್ತದೆ. ಮೊದಲು ಧೋನಿ ಚಿತ್ರ ಬಿಡುಗಡೆ ಆಗಿತ್ತು. ಈಗ ಪ್ಯಾರಾ ಒಲಿಂಪಿಕ್‍ನಲ್ಲಿ ಚಿನ್ನದ ಪದಕ ಗೆದ್ದ ಮುರಳಿಕಾಂತ್ ಪೇಟ್‍ಕರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಂತರ ಖಲಿ ಚಿತ್ರ ಅವರ ಮೂರನೇ ಆತ್ಮಚರಿತ್ರೆಯ ಸಿನಿಮಾವಾಗಿರುತ್ತದೆ.

    ಈ ಮೊದಲು ಬಾಗ್ ಮಿಲ್ಕಾ ಬಾಗ್, ಮೇರಿ ಕೋಮ್, ಎಂ.ಎಸ್ ಧೋನಿ: ದಿ ಅನ್‍ಟೋಲ್ಡ್ ಸ್ಟೋರಿ, ದಂಗಲ್ ಮತ್ತು ಸಚಿನ್-ಎ ಬಿಲಿಯನ್ ಡ್ರೀಮ್ಸ್ ಚಿತ್ರದಲ್ಲಿ ಕ್ರೀಡಾಪಟುಗಳ ಆತ್ಮಚರಿತ್ರೆ ಸಿನಿಮಾವಾಗಿ ಹೊರ ಬಂದಿತ್ತು.

  • ನಾನು ಆತ್ಮಚರಿತ್ರೆ ಬರೆದರೆ ಸಾಕಷ್ಟು ಜನ ಮರ್ಯಾದೆ ಕಳೆದುಕೊಳ್ತಾರೆ: ಸುಬ್ರಮಣಿಯನ್ ಸ್ವಾಮಿ

    ನಾನು ಆತ್ಮಚರಿತ್ರೆ ಬರೆದರೆ ಸಾಕಷ್ಟು ಜನ ಮರ್ಯಾದೆ ಕಳೆದುಕೊಳ್ತಾರೆ: ಸುಬ್ರಮಣಿಯನ್ ಸ್ವಾಮಿ

    ನವದೆಹಲಿ: ರಾಜ್ಯಸಭೆಯ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ನಾನು ಆತ್ಮಚರಿತ್ರೆ ಬರೆದರೆ ಸಾಕಷ್ಟು ಜನ ತಮ್ಮ ಮರ್ಯಾದೆ ಕಳೆದುಕೊಳ್ತಾರೆ ಅಂತ ಮುನ್ನೆಚ್ಚರಿಕೆ ನೀಡಿದ್ದಾರೆ.

    ಭಾನುವಾರದಂದು ಸುಬ್ರಮಣಿಯನ್ ಸ್ವಾಮಿ ಅವರ ಪತ್ನಿ ರಾಕ್ಸ್ನಾ ಸ್ವಾಮಿ ‘ಎವಾಲ್ವಿಂಗ್ ವಿತ್ ಸುಬ್ರಮಣಿಯನ್ ಸ್ವಾಮಿ- ಎ ರೋಲರ್ ಕೋಸ್ಟರ್ ರೈಡ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿ, ತಾನು ಯಾವತ್ತೂ ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಕೇಳಿರಲಿಲ್ಲ. ಪ್ರಧಾನಿಯೂ ಸಚಿವ ಸ್ಥಾನದ ಆಫರ್ ನೀಡರಲಿಲ್ಲ ಅಂದ್ರು. ನಾನು ಸಮಯ ಬಂದಾಗ ಸಚಿವನಾಗ್ತೀನಿ. ಸಮಯ ಬಂದಾಗ ನನಗೆ ಏನು ಬೇಕೋ ಅದನ್ನು ಪಡೆಯುತ್ತೇನೆ ಅಂತ ಹೇಳಿದ್ರು.

    ವಿವಾದಾತ್ಮಕ ಹೇಳಿಕೆಗಳಿಂದ ಹೆಸರುವಾಸಿಯಾಗಿರುವ ಸ್ವಾಮಿ, ನನ್ನ ವಿರುದ್ಧ ಟೀಕೆ ಮಾಡಿದವರನ್ನ ಎಂದಿಗೂ ಸುಮ್ಮನೆ ಬಿಟ್ಟಿಲ್ಲ. ಯಾರಾದ್ರೂ ಟೀಕೆ ಮಾಡಿದ್ರೆ ನಾನು ಅವರ ಬೆನ್ನು ಬೀಳುತ್ತೇನೆ. ಕೊನೆಯವರೆಗೂ ಅವರ ಬೆನ್ನು ಬೀಳುತ್ತೇನೆ ಅಂದ್ರು.

    ನಾನು ಏನು ಮಾಡ್ಬೇಕೋ ಅದನ್ನು ಮಾಡುವುದು ಮತ್ತು ಅದನ್ನು ಸಾಧ್ಯವಾದಷ್ಟೂ ಒಳ್ಳೆಯ ರೀತಿಯಲ್ಲಿ ಮಾಡುವುದೇ ನನ್ನ ಜೀವನದ ಮುಖ್ಯ ಧ್ಯೇಯ ಅಂತ ಸ್ವಾಮಿ ಹೇಳಿದ್ರು.

    ಸ್ವಾಮಿ ಅವರನ್ನ ದೆಹಲಿಯಿಂದ ಅಭ್ಯರ್ಥಿಯಾಗಿ ಪರಿಗಣಿಸಲಾಗಿದೆ ಎಂಬ ವದಂತಿಯ ಬಗ್ಗೆ ಮಾತನಾಡಿದ ಅವರು, ನನಗೆ ದೆಹಲಿಯಿಂದ ಸೀಟ್ ಬೇಕಿಲ್ಲ. ಆದರೂ ಅರವಿಂದ ಕೇಜ್ರಿವಾಲ್‍ಗೆ ಎದುರಾಳಿಯಾಗಿ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಶೇ.80 ರಷ್ಟು ಕಾರ್ಯಕರ್ತರು ಇಚ್ಛಿಸಿದ್ದರು ಎಂದು ಅಂದಿನ ದೆಹಲಿ ಘಟಕದ ಅಧ್ಯಕ್ಷರು ನನಗೆ ಹೇಳಿದ್ದರು. ಆದರೆ ನನಗೆ ದೆಹಲಿಯಿಂದ ಸೀಟು ನಿರಾಕರಿಸಲಾಯ್ತು. ಆ ಬಗ್ಗೆ ನಾನು ದೂರಲಿಲ್ಲ ಅಂದ್ರು

    ಸೀಟ್ ನಿರಾಕರಿಸಿದ್ದು ಯಾರು ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಪುಸ್ತಕ ಬಿಡುಗಡೆಯಾಗುತ್ತಿರುವುದು ನನ್ನದಲ್ಲ. ನಾನು ಪುಸ್ತಕ ಬರೆದಿದ್ದರೆ ಯಾವುದೇ ಸಂಕೋಚವಿಲ್ಲದೆ ಅವರ ಹೆಸರನ್ನು ಬರೆಯುತ್ತಿದ್ದೆ ಅಂದ್ರು.