Tag: ಆತ್ಮಕಥೆ

  • ರತನ್ ಟಾಟಾ ಆತ್ಮಕಥೆ – 2 ಕೋಟಿ ರೂ.ಗೆ ಜಾಗತಿಕ ಹಕ್ಕು ಖರೀದಿ

    ರತನ್ ಟಾಟಾ ಆತ್ಮಕಥೆ – 2 ಕೋಟಿ ರೂ.ಗೆ ಜಾಗತಿಕ ಹಕ್ಕು ಖರೀದಿ

    ನವದೆಹಲಿ: ಭಾರತದ ಪ್ರಸಿದ್ಧ ಉದ್ಯಮಿ ರತನ್ ಟಾಟಾ ಅವರ ಆತ್ಮಕಥೆ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಆತ್ಮಕಥೆಯನ್ನು ಹಾರ್ಪರ್ ಕೋಲಿನ್ಸ್ ಸಂಸ್ಥೆ ಪ್ರಕಟಿಸಲಿದ್ದು, ಬರೋಬ್ಬರಿ 2 ಕೋಟಿ ರೂ.ಗೆ ಜಾಗತಿಕ ಹಕ್ಕನ್ನು ಖರೀದಿಸಿದೆ.

    ರತನ್ ಎನ್. ಟಾಟಾ: ದಿ ಅಥರೈಸ್ಡ್ ಬಯೋಗ್ರಫಿ ಎಂಬ ಶೀರ್ಷಿಕೆಯ ಪುಸ್ತಕವನ್ನು ನಿವೃತ್ತ ಐಎಎಸ್ ಅಧಿಕಾರಿ ಥಾಮಸ್ ಮ್ಯಾಥ್ಯೂ ಬರೆಯಲಿದ್ದಾರೆ. ಈ ವರ್ಷ ನವೆಂಬರ್ ತಿಂಗಳಿನಲ್ಲಿ ಪುಸ್ತಕ ಬಿಡುಗಡೆಯಾಗಲಿದೆ ಎಂದು ಬ್ರಿಟಿಷ್ ಪಬ್ಲಿಷಿಂಗ್ ಹೌಸ್ ತಿಳಿಸಿದೆ.

    ಲೇಖಕ ಥಾಮಸ್ ಮ್ಯಾಥ್ಯೂ ಅವರಿಗೆ ರಥನ್ ಟಾಟಾ ಅವರು ಈ ಮೊದಲೇ ತಮ್ಮ ಆತ್ಮಕಥೆಯನ್ನು ಬರೆಯಲು ಅನುಮತಿ ನೀಡಿದ್ದರು. ಹೀಗಾಗಿ ಟಾಟಾ ಅವರ ಜೀವನದ ಹಲವು ಮಾಹಿತಿಗಳನ್ನು ಥಾಮಸ್‌ಗೆ ನೀಡಿದ್ದು, ಈಗಾಗಲೇ ಮ್ಯಾಥ್ಯೂ ಕಥೆಯನ್ನು ಬರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬೂಸ್ಟರ್ ಡೋಸ್ – ಯಾರು ಪಡೆಯಬಹುದು? ಅರ್ಹತೆ ಏನು?

    ಆತ್ಮಕಥೆಯಲ್ಲಿ ಏನೇನು ಇರಲಿದೆ?
    84 ವರ್ಷ ವಯಸ್ಸಿನ ಟಾಟಾ ಅವರ ಬಾಲ್ಯ, ಕಾಲೇಜು ಜೀವನದ ಕಥೆಗಳೊಂದಿಗೆ, ಮುಖ್ಯ ಘಟನೆಗಳಾದ ಟಾಟಾದ ನ್ಯಾನೋ ಯೋಜನೆ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಪದಚ್ಯುತಿಗೊಳಿಸಿದ ಘಟನೆ, ಹಾಗೂ ಟಾಟಾ ಸ್ಟೀಲ್ ಲಿಮಿಟೆಡ್‌ನ ಕೋರಸ್‌ಅನ್ನು ಸ್ವಾಧೀನಗೊಳಿಸಿದ ಘಟನೆಯ ಬಗೆಗಿನ ವಿವರವಾದ ಮಾಹಿತಿಯನ್ನು ಆತ್ಮಕಥೆಯಲ್ಲಿ ನೋಡಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಸೋಂಕಿಗೆ ತುತ್ತಾದವರಲ್ಲಿ ಯುವಕರದ್ದೇ ಸಿಂಹ ಪಾಲು!

    ಪುಸ್ತಕವನ್ನು ಇಂಗ್ಲಿಷ್ ಹಾಗೂ ಭಾರತದ ಪ್ರಮುಖ ಭಾಷೆಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ಹಾರ್ಪರ್ ಕೋಲಿನ್ಸ್ ಸಂಸ್ಥೆ ತಿಳಿಸಿದೆ.

  • ಭಾರತವನ್ನು ಪ್ರತಿನಿಧಿಸುವ ಮೊದಲೇ ಪಾಕ್ ಪರ ಆಡಿದ್ದ ಸಚಿನ್!

    ಭಾರತವನ್ನು ಪ್ರತಿನಿಧಿಸುವ ಮೊದಲೇ ಪಾಕ್ ಪರ ಆಡಿದ್ದ ಸಚಿನ್!

    ಮುಂಬೈ: ನಿನ್ನೆಯಷ್ಟೇ 45ನೇ ವಸಂತಕ್ಕೆ ಕಾಲಿಟ್ಟ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ವಿಶ್ವಾದ್ಯಂತ ಹಲವು ಅಭಿಮಾನಿಗಳು ಶುಭಕೋರಿದ್ದರು. ಇದೇ ವೇಳೆ ತಮ್ಮ ಕ್ರಿಕೆಟ್ ಜೀವನದ ಕುರಿತು ಸಚಿನ್ ಆಸಕ್ತಿದಾಯಕ ಅಂಶವೊಂದನ್ನು ತಿಳಿಸಿದ್ದಾರೆ.

    ಅಂದಹಾಗೇ 1989 ರಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸಚಿನ್ ಆಡಿದ್ದರು. ಆದರೆ ಈ ಪಂದ್ಯಕ್ಕೂ ಮೊದಲೇ ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ತಂಡದ ಪರವಾಗಿ ಆಡಿದ್ದರು. ಸಚಿನ್ ತಮ್ಮ ಆತ್ಮಕಥೆ `ಪ್ಲೇಯಿಂಗ್ ವಿಥ್ ಮೈ ವೇ’ ಪುಸ್ತಕದಲ್ಲಿ ಪಾಕ್ ಪರ ಆಡಿದ ಪಂದ್ಯವನ್ನು ಮೆಲುಕು ಹಾಕಿದ್ದಾರೆ.

    ಯಾವ ಪಂದ್ಯ?
    1987 ಜನವರಿ 20 ರಂದು ಪಾಕಿಸ್ತಾನ ಹಾಗೂ ಭಾರತ ನಡುವೆ ನಡೆದ ಪ್ರದರ್ಶನ ಪಂದ್ಯವೊಂದರಲ್ಲಿ ಪಾಕ್ ಆಟಗಾರ ಇಮ್ರಾನ್ ಖಾನ್ ಅವರ ಬದಲಿ ಫೀಲ್ಡರ್ ಆಗಿ ಸಚಿನ್ ರನ್ನು ಪಾಕ್ ಪರ ಮೈದಾನಕ್ಕೆ ಕಳುಹಿಸಿಕೊಡಲಾಗಿತ್ತು. ಈ ಪಂದ್ಯದಲ್ಲಿ ಅವರು ಲಾಂಗ್ ಆನ್ ನಲ್ಲಿ 25 ನಿಮಿಷಕ್ಕೂ ಹೆಚ್ಚು ಸಮಯ ಫೀಲ್ಡಿಂಗ್ ನಡೆಸಿ ಕ್ಯಾಚ್ ಸಹ ಪಡೆದಿದ್ದರು. ಈ ವೇಳೆಗೆ 16 ವರ್ಷದ ಸಚಿನ್ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರಲಿಲ್ಲ.

    ಈ ಘಟನೆಗಳನ್ನು ತಮ್ಮ ಪುಸ್ತಕದಲ್ಲಿ ಮೆಲುಕು ಹಾಕಿರುವ ಸಚಿನ್ ಇಮ್ರಾನ್ ಖಾನ್ ಅವರಿಗೆ ಈ ಆಟದ ವಿಚಾರ ನೆನಪನ್ನು ಹೊಂದಿದ್ದಾರೆಯೇ ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ 1996 ರ ಆಕ್ಟೋಬರ್ 4 ರಂದು ಪಾಕ್ ಆಟಗಾರ ಶಹೀದ್ ಆಫ್ರಿದಿ ಸಚಿನ್ ಬ್ಯಾಟ್ ಪಡೆದು ಕೇವಲ 37 ಎಸೆಗಳಲ್ಲಿ ಶತಕ ಸಿಡಿಸಿದ್ದರು. ಇದನ್ನೂ ಓದಿ: ಹುಟ್ಟುಹಬ್ಬದ ದಿನದಂದೇ ಆಸ್ಟ್ರೇಲಿಯಾ ಕ್ರಿಕೆಟ್‍ನಿಂದ ಸಚಿನ್‍ಗೆ ಅವಮಾನ!

  • ಜೈಲಿನಲ್ಲಿ ಆತ್ಮಕಥೆ ಬರೆಯಲು ಶುರುಮಾಡಿದ ಶಶಿಕಲಾ

    ಜೈಲಿನಲ್ಲಿ ಆತ್ಮಕಥೆ ಬರೆಯಲು ಶುರುಮಾಡಿದ ಶಶಿಕಲಾ

    ಬೆಂಗಳೂರು: ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲುಪಾಲಾಗಿರೋ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಇದೀಗ ಆತ್ಮಕಥೆ ಬರೆಯಲು ಹೊರಟಿದ್ದಾರೆ.

    ಜೈಲಿನ ಜೀವನ ಕ್ರಮಕ್ಕೆ ಈಗಾಗಲೇ ಹೊಂದಿಕೊಂಡಿರುವ ಶಶಿಕಲಾ, ಆತ್ಮಕಥೆ ಬರೆಯಲು ಜೀವನದ ಪ್ರಮುಖ ಘಟ್ಟಗಳ ಬಗ್ಗೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದಾರೆ. ಆಯಾ ಸ್ಥಾನದಿಂದ ಅಣ್ಣಾಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಿದ ಶಶಿಕಲಾ, ಪುರಚ್ಚಿ ತಲೈವಿ ಜಯಲಲಿತಾ ಕುರಿತಂತೆ ರಹಸ್ಯಗಳನ್ನು ದಾಖಲಿಸಲಿದ್ದಾರೆ ಎನ್ನಲಾಗಿದೆ. ಶಶಿಕಲಾ ಜೊತೆ ಜೈಲಿನಲ್ಲಿರೋ ಆಕೆಯ ಸಂಬಂಧಿ ಇಳವರಸಿ ರಾಜಕೀಯ ಹಾಗೂ ಖಾಸಗಿ ಜೀವನಕ್ಕೆ ಸಂಬಂಧಿಸಿದ ಘಟನೆಗಳನ್ನ ಶಶಿಕಲಾ ನೆನಪಿಸಿಕೊಳ್ಳಲು ಸಹಾಯ ಮಾಡ್ತಿದ್ದಾರೆ. ಇನ್ನು ಜಯಲಲಿತಾ ನಿಗೂಢ ಸಾವಿನ ಬಗ್ಗೆಯೂ ಈ ಆತ್ಮಕಥೆಯಲ್ಲಿ ಉಲ್ಲೇಖಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕು.

    ಪೆಬ್ರವರಿ 14ರಂದು ಬೆಂಗಳೂರು ವಿಶೇಷ ನ್ಯಾಯಾಲಯದ ತೀರ್ಪು ಎತ್ತಿಹಿಡಿದ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ, ಶಶಿಕಲಾಗೆ 4 ವರ್ಷ ಜೈಲು ಹಾಗೂ 10 ಕೋಟಿ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿತು. ಶಶಿಕಲಾ ಜೊತೆಗೆ ಇಳವರಸಿ ಹಾಗೂ ಸುಧಾಕರನ್ ಕೂಡ ದೋಷಿಗಳೆಂದು ಸಾಬೀತಾಗಿದ್ದು, ಅದ್ಯ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ.