Tag: ಆತ್ನಹತ್ಯೆ

  • ಓಡಿಹೋಗಿದ್ದ ಪತ್ನಿ ಮನೆಗೆ ಬಂದ್ಳು-ಪ್ರಿಯಕರ ಮುತ್ತಿಕ್ಕುವ ಫೋಟೋ ಕಳಿಸಿದ

    ಓಡಿಹೋಗಿದ್ದ ಪತ್ನಿ ಮನೆಗೆ ಬಂದ್ಳು-ಪ್ರಿಯಕರ ಮುತ್ತಿಕ್ಕುವ ಫೋಟೋ ಕಳಿಸಿದ

    -ಮನನೊಂದ ದಂಪತಿ ನೇಣಿಗೆ ಶರಣು
    -ಪ್ರಿಯಕರನ ಟ್ರ್ಯಾಕ್ಟರ್, ಕಾರ್‌ಗೆಬೆಂಕಿ ಹಾಕಿದ ಗ್ರಾಮಸ್ಥರು

    ರಾಮನಗರ: ಗ್ರಾಮ ಯುವಕನೊಂದಿಗೆ ಪತ್ನಿ ಇರುವ ಫೋಟೋಗಳು ಬಹಿರಂಗವಾದ ಹಿನ್ನೆಲೆಯಲ್ಲಿ ಪತಿ, ಪತ್ನಿ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಲೋಕೇಶ್ ಹಾಗೂ ಕೌಸಲ್ಯ ನೇಣಿಗೆ ಶರಣಾದ ದಂಪತಿಗಳಾಗಿದ್ದು, ಇದೇ ಗ್ರಾಮದ ತ್ಯಾಗರಾಜ್‍ರೊಂದಿಗೆ ಕೌಸಲ್ಯ ಅವರು ಇರುವ ಫೋಟೋಗಳು ಗ್ರಾಮದಲ್ಲಿ ವೈರಲ್ ಆಗಿತ್ತು. ಪರಿಣಾಮ ಗ್ರಾಮದಲ್ಲಿ ಇಬ್ಬರ ಬಗ್ಗೆ ಚರ್ಚೆಯಾಗಿತ್ತು. ಇದರಿಂದ ಮನನೊಂದ ದಂಪತಿ ಮರ್ಯಾದೆಗೆ ಅಂಜಿ ನೇಣಿಗೆ ಶರಣಾಗಿದ್ದಾರೆ.

    ಏನಿದು ಪ್ರಕರಣ:
    ಸೋಮವಾರದಂದು ಕೌಸಲ್ಯ, ತ್ಯಾಗರಾಜ್‍ನೊಂದಿಗೆ ಮನೆಬಿಟ್ಟು ತೆರಳಿದ್ದಳು, ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎಂಬ ಮಾಹಿತಿ ಲಭಿಸಿದೆ. ಆದರೆ ಇಂದು ಕೌಸಲ್ಯ ಮತ್ತೆ ಮನೆಗೆ ಹಿಂದಿರುಗಿದ್ದರು. ಈ ವೇಳೆ ಕೌಸಲ್ಯ ತನ್ನೊಂದಿಗೆ ಇರುವ ಫೋಟೋಗಳನ್ನು ತ್ಯಾಗರಾಜ ಆಕೆಯ ಪತಿಗೆ ಕಳುಹಿಸಿದ್ದ. ಫೋಟೋದಲ್ಲಿ ತ್ಯಾಗರಾಜ, ಕೌಸಲ್ಯಗೆ ಮುತ್ತು ಕೊಡುತ್ತಿರುವ ದೃಶ್ಯ ಇದ್ದು, ಇದರಿಂದ ಪತಿ ಲೋಕೇಶ್ ಫೋಟೋ ನೋಡಿ ಸಾಕಷ್ಟು ನೊಂದಿದ್ದ. ಅಲ್ಲದೇ ಈ ಫೋಟೋ ವಿಚಾರವಾಗಿಯೇ ದಂಪತಿ ನಡುವೆ ಜಗಳ ಕೂಡ ನಡೆದಿತ್ತು.

    ಜಗಳ ಬಳಿಕ ದಂಪತಿ ಒಂದೇ ಹಗ್ಗಕ್ಕೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇತ್ತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳುತ್ತಿದಂತೆ ಗ್ರಾಮಸ್ಥರು ಘಟನೆಗೆ ತ್ಯಾಗರಾಜನೇ ಕಾರಣ ಎಂದು ಆತನ ಮನೆಯ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ. ಅಲ್ಲದೇ ತ್ಯಾಗರಾಜಗೆ ಸೇರಿದ್ದ ಒಂದು ಟ್ರ್ಯಾಕ್ಟರ್, ಎರಡು ಕಾರು ಹಾಗೂ ಮನೆಗೆ ಬೆಂಕಿ ಇಟ್ಟಿದ್ದಾರೆ.

    ಘಟನೆ ಬಗ್ಗೆ ಮಾಹಿತಿ ಪಡೆದ ಅಕ್ಕೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ತ್ಯಾಗರಾಜ್ ಕುಟುಂಬಸ್ಥರು ಗ್ರಾಮ ತೊರೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • ಪೋಷಕರು ಹಣ ಮಾತ್ರ ಸೆಂಡ್ ಮಾಡ್ತಿದ್ರು, ವಿಚಾರಿಸುತ್ತಿರಲಿಲ್ಲ- ಡೆತ್‍ನೋಟ್ ಬರೆದು ಆತ್ಮಹತ್ಯೆ

    ಪೋಷಕರು ಹಣ ಮಾತ್ರ ಸೆಂಡ್ ಮಾಡ್ತಿದ್ರು, ವಿಚಾರಿಸುತ್ತಿರಲಿಲ್ಲ- ಡೆತ್‍ನೋಟ್ ಬರೆದು ಆತ್ಮಹತ್ಯೆ

    – ಒಂಟಿತನಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
    – ಹಾಸ್ಟೆಲಿನಲ್ಲಿ ಡೆತ್‍ನೋಟ್ ಬರೆದಿಟ್ಟ ವಿದ್ಯಾರ್ಥಿನಿ

    ಬೆಂಗಳೂರು: ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಮೃತಪಟ್ಟ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದ್ದು, ಆತ್ಮಹತ್ಯೆಗೆ ಒಂಟಿತನನೇ ಕಾರಣ ಎನ್ನುವ ವಿಚಾರ ತಿಳಿದು ಬಂದಿದೆ.

    ಮುಂಬೈ ಮೂಲದ ಸೋಫಿಯಾ ದಮನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ನಗರದ ಖಾಸಗಿ ಕಾಲೇಜಿನಲ್ಲಿ 4ನೇ ಸೆಮಿಸ್ಟರ್ ಓದುತ್ತಿದ್ದ ವಿದ್ಯಾರ್ಥಿನಿ ಸೋಫಿಯಾ ಶವ ಹಾಸ್ಟೆಲಿನ ಕೋಣೆಯ ಬೆಡ್ ಮೇಲೆ ಬುಧವಾರ ಸಂಜೆ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು!

    ಕಳೆದ ಎರಡು ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಸೋಫಿಯಾ ಒಂಟಿತನಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೋಫಿಯಾ ಹಾಸಿಗೆ ಬದಿಯಲ್ಲಿ ನಿದ್ದೆ ಮಾತ್ರೆಗಳ ಖಾಲಿ ಡಬ್ಬಿ ಪತ್ತೆಯಾಗಿದ್ದು, ಜೊತೆಗೆ ಆಕೆಯ ಮೃತದೇಹದ ಪಕ್ಕದಲ್ಲಿ ಡೆತ್‍ನೋಟ್ ದೊರೆತಿದೆ.

    ಡೆತ್‍ನೋಟ್‍ನಲ್ಲಿ ಏನಿದೆ?
    ನನ್ನ ಆತ್ಮಹತ್ಯೆಗೆ ಒಂಟಿತನ ಕಾರಣ. ನನ್ನ ತಂದೆ- ತಾಯಿ ದುಬೈನಲ್ಲಿ ವಾಸಿಸುತ್ತಿದ್ದಾರೆ. ನನಗೆ ಹಣ ಕಳುಹಿಸುತ್ತಿದ್ದ ಅಪ್ಪ- ಅಮ್ಮ ಇದೂವರೆಗೂ ನೀನು ಹೇಗಿದ್ದೀಯಾ ಎಂದು ನನ್ನನ್ನು ವಿಚಾರಿಸುತ್ತಿರಲಿಲ್ಲ. ನನಗೆ ಅಪ್ಪ-ಅಮ್ಮನ ಪ್ರೀತಿ ಇಲ್ಲದಂತಾಗಿದೆ. ನಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಸೋಫಿಯಾ ಬರೆದಿದ್ದಾಳೆ.

    ಸೋಫಿಯಾ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಆ ದಿನ ಬೆಳಗ್ಗೆ ಸಹಪಾಠಿಗಳ ಜೊತೆ ಮಾತಾಡಿದ್ದಾಳೆ. ನೀವು ಕಾಲೇಜಿಗೆ ಹೋಗಿ ನಾನು ಬರುವುದಿಲ್ಲ ಎಂದು ತಿಳಿಸಿದ್ದಾಳೆ. ಬಳಿಕ ಸಂಜೆ ಸಹಪಾಠಿಗಳು ಹಾಸ್ಟೆಲ್ ವಾಪಸ್ ಬಂದಾಗ ಸೋಫಿಯಾ ಶವವಾಗಿ ಪತ್ತೆಯಾಗಿದ್ದಳು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯತಮೆ ಎದುರೇ ಟೆಕ್ಕಿ ಆತ್ಮಹತ್ಯೆ

    ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯತಮೆ ಎದುರೇ ಟೆಕ್ಕಿ ಆತ್ಮಹತ್ಯೆ

    ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯತಮೆ ಎದುರೇ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ನಡೆದಿದೆ.

    ರೋಷನ್(23) ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ. ರೋಷನ್ ಮೂಲತಃ ಹೈದರಾಬಾದ್ ನಿವಾಸಿಯಾಗಿದ್ದು, ಎಚ್‍ಎಸ್‍ಆರ್ ಲೇಔಟ್‍ನ ಐಟಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ರೋಷನ್ ಅದೇ ಕಂಪನಿಯ ಮುಸ್ಲಿಂ ಯುವತಿಯನ್ನು ಪ್ರೀತಿಸುತಿದ್ದ.

    ರೋಷನ್ ಪದೇ ಪದೇ ಪ್ರೀತಿಸು ಎಂದು ಯುವತಿಗೆ ಪೀಡಿಸುತ್ತಿದ್ದನು. ಆದರೆ ಯುವತಿ ರೋಷನ್ ಪ್ರೀತಿಯನ್ನು ನಿರಾಕರಿಸಿದ್ದಳು. ಆಗ ರೋಷನ್ ಯುವತಿಗೆ ಪೀಡಿಸಲು ಶುರು ಮಾಡಿದ್ದನು. ರೋಷನ್ ಕಾಟ ತಾಳಲಾರದೇ ಯುವತಿ ಕೆಲಸ ಬಿಟ್ಟಿದ್ದಳು.

    ಯುವತಿ ಕೆಲಸ ಬಿಟ್ಟು ಅದೇ ಬಿಲ್ಡಿಂಗ್‍ನ ಮೂರನೇ ಮಹಡಿಯ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ರೋಷನ್ ಐದನೇ ಮಹಡಿಯಿಂದ ಮೂರನೇ ಮಹಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೋಷನ್ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಈ ಬಗ್ಗೆ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮದ್ವೆಯಾದ್ರೂ ಹಳೆ ಲವರ್ ಜೊತೆ ಟಚ್-ಗೆಳೆಯರಿಗೆ ಪತ್ರ ಬರೆದು ಪ್ರೇಯಸಿಯೊಂದಿಗೆ ಆತ್ಮಹತ್ಯೆ

    ಮದ್ವೆಯಾದ್ರೂ ಹಳೆ ಲವರ್ ಜೊತೆ ಟಚ್-ಗೆಳೆಯರಿಗೆ ಪತ್ರ ಬರೆದು ಪ್ರೇಯಸಿಯೊಂದಿಗೆ ಆತ್ಮಹತ್ಯೆ

    ಬೆಂಗಳೂರು: ಪ್ರೇಮಿಗಳಿಬ್ಬರು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ರಾಮಮೂರ್ತಿ ನಗರ ಮಂಜುನಾಥ ಬಡಾವಣೆಯಲ್ಲಿ ನಡೆದಿದೆ.

    ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ನಾಗೇಶ್ ಹಾಗೂ ಮುಗಳಬೆಲೆ ಗ್ರಾಮದ ಭಾರತಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಮೃತ ನಾಗೇಶ್ ಆಡುಗೊಡಿಯ ಬಾಷ್ ಕಂಪೆನಿಯಲ್ಲಿ ಟೆಕ್ನಿಷಿಯನ್ ಕೆಲಸ ಮಾಡುತ್ತಿದ್ದರು.

    ಏನಿದು ಪ್ರಕರಣ: ನಾಗೇಶ್ ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿ ಭಾರತಿಯನ್ನು ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದರು. ಆದರೆ ಇವರಿಬ್ಬರ ಮದುವೆಗೆ ಸಮ್ಮತಿಸದ ಪೋಷಕರು ಬೇರೊಂದು ಯುವತಿಯೊಂದಿಗೆ ಮದುವೆ ಮಾಡಿದ್ದರು. ಬಳಿಕ ಇಬ್ಬರಿಗೂ ಒಂದು ಮಗುವು ಜನಿಸಿತ್ತು. ಆದರೆ ಮದುವೆ ಮುನ್ನ ಪ್ರೀತಿಸುತ್ತಿದ್ದ ಭಾರತಿಯೊಂದಿಗೆ ನಾಗೇಶ್ ತನ್ನ ಪ್ರೀತಿಯನ್ನು ಮುಂದುವರೆಸಿದ್ದ ಎನ್ನಲಾಗಿದೆ.

    ಆತ್ನಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿರುವ ನಾಗೇಶ್ ಫೋನ್ ಮೂಲಕ ತನ್ನ ಗೆಳೆಯರಿಗೆ ಪತ್ರವನ್ನು ರವಾನಿಸಿದ್ದಾರೆ. ಪತ್ರದಲ್ಲಿ ತನ್ನ ಪ್ರೇಮಿಯನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಅದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದು, ತನ್ನ ಪತ್ನಿಗೆ ಆಕ್ರಮ ಸಂಬಂಧ ಇದ್ದು, ಮಾವನಿಂದ ಕಿರುಕುಳ ಇತ್ತು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

    ಸದ್ಯ ಕುರಿತು ಮಾಹಿತಿ ಪಡೆದಿರುವ ಕೆಆರ್ ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ನಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸಿಆರ್ ಎಲೆಕ್ಷನ್ ಸೋತಿದ್ದಕ್ಕೆ ರ‍್ಯಾಗಿಂಗ್- ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ಸಿಆರ್ ಎಲೆಕ್ಷನ್ ಸೋತಿದ್ದಕ್ಕೆ ರ‍್ಯಾಗಿಂಗ್- ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ಬೆಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜರಾಜೇಶ್ವರಿ ನಗರದ ಚನ್ನಸಂದ್ರದ ಶಬರಿ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

    ಮೇಘನಾ(18) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೇಘನಾ ಕುಮಾರಸ್ವಾಮಿ ಲೇಔಟ್‍ನ ದಯಾನಂದಸಾಗರ ಕಾಲೇಜಿನಲ್ಲಿ 2ನೇ ಸೆಮಿಸ್ಟರ್ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಳು.

    ಕಾಲೇಜಿನಲ್ಲಿ ನಡೆದ ಕ್ಲಾಸ್ ರೆಪ್ರೆಸೆಂಟೇಟಿವ್ ಎಲೆಕ್ಷನ್ ನಲ್ಲಿ ಮೇಘನಾ ಭಾಗವಹಿಸಿದ್ದಳು. ಆದರೆ ಆ ಎಲೆಕ್ಷನ್ ನಲ್ಲಿ ಸೋತಿದ್ದಕ್ಕೆ ತರಗತಿಯ ಇತರೆ ವಿದ್ಯಾರ್ಥಿಗಳು ಮೇಘನಾಳನ್ನು ರ‍್ಯಾಗಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರದ ಬಗ್ಗೆ ಮೇಘನಾ ತನ್ನ ಪೋಷಕರ ಹತ್ತಿರ ಹೇಳಿಕೊಂಡಿದ್ದಳು.

    ನನ್ನ ಮಗಳು ಸಿಆರ್ ಆಗಬೇಕೆಂದು ಸೌದಾಮಿನಿ ವಿರುದ್ಧ ಎಲೆಕ್ಷನ್ ನಲ್ಲಿ ನಿಂತಳು. ಮೆಜಾರಿಟಿ ಇದೆ, ನಾನು ಎಲೆಕ್ಷನ್ ಗೆ ನಿಲ್ಲುತ್ತೇನೆ ಎಂದು ಹೇಳಿದ್ದಳು. ಆಗ ಅವಳು ನಾಯಿ ಎಂದು ಹೇಳಿದ್ದಾಳೆ. ಆಗ ನನ್ನ ಮಗಳು ಕೂಡ ನಾಯಿ ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲದೇ ಕ್ಲಾಸಿನಲ್ಲಿದ್ದ 70 ಜನರಿಗೆ ನನ್ನ ಮಗಳು ಕೆಟ್ಟವಳು ಎಂದು ಮೆಸೇಜ್ ಕಳುಹಿಸಿದ್ದಾಳೆ. ಆ ಮೆಸೇಜ್‍ನಿಂದ ನನ್ನ ಮಗಳ ಜೊತೆ ಯಾರೂ ಮಾತನಾಡುತ್ತಿರಲಿಲ್ಲ. ಸೌದಾಮಿನಿ, ನಿಖಿಲ್, ನಿಖಿತಾ, ಪೂಜಾ ಹಾಗೂ ಸಂಧ್ಯಾ ಇವರನ್ನ ಕೂಡಲೇ ಬಂಧಿಸಬೇಕು ಎಂದು ಮೇಘನಾ ತಾಯಿ ಹೇಳಿದ್ದಾರೆ.

    ನನ್ನ ಮಗಳು ರ‍್ಯಾಂಕ್ ವಿದ್ಯಾರ್ಥಿನಿ. ಅವಳು ನೋಟ್ಸ್ ಕೇಳಿದರು ಯಾರೂ ಆಕೆಗೆ ನೀಡುತ್ತಿರಲಿಲ್ಲ. ಮಗಳ ಸಮಸ್ಯೆ ಬಗ್ಗೆ ಮಾತನಾಡಲು ಕಾಲೇಜಿನ ಎಚ್‍ಒಡಿ ರಾಜ್‍ಕುಮಾರ್ ಮರಿಸ್ವಾಮಿ ಅವರನ್ನು ಕೇಳಲು ಹೋದಾಗ ಅವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಿಮ್ಮ ಮಗಳು ಸಿಇಟಿ ಕೋಟಾದಿಂದ ಬಂದಿರೋದೋ ಅಥವಾ ಪೇಮೆಂಟ್ ಕೋಟಾದಿಂದ ಬಂದಿರೋದೋ ಎಂದು ಹಿಯಾಳಿಸಿದರು. ನಿಖಿಲ್ ನಾನು ಪೇಮೆಂಟ್ ಕೋಟಾದಿಂದ ಬಂದಿದ್ದೇನೆ ಎಂದು ಹೇಳಿದ ಕೂಡಲೇ ಆತನನ್ನು ಅಲ್ಲಿಂದ ಕಳುಹಿಸಿದರು. ನಾನು ನನ್ನ ಮಗಳು ಸಿಇಟಿ ಕೋಟಾದಿಂದ ಬಂದಿದ್ದಾಳೆಂದು ಹೇಳಿದ್ದಕ್ಕೆ ಸ್ವಲ್ಪ ಅನುಸರಿಸಿ ಹೋಗಬೇಕೆಂದು ಹೇಳಿದ್ರು ಅಂತ ತಿಳಿಸಿದ್ದಾರೆ.

    ಸ್ವಲ್ಪ ದಿನದ ನಂತರ ಪರೀಕ್ಷೆಯ ಫಲಿತಾಂಶ ಬಂದಾಗ ಆ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆಂದು ಮೇಘನಾ ಹೇಳಿದ್ದಳು. ನಂತರ ಮಾರನೇ ದಿನವೇ ದುಡ್ಡು ಕೊಟ್ಟು ಆ ವಿಷಯದಲ್ಲಿ ಪಾಸ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದಳು. ಅಷ್ಟೇ ಅಲ್ಲದೇ ನನ್ನ ಮಗಳು ಕಾಲೇಜಿಗೆ ರಜೆ ಹಾಕಿ ಮಾರನೇ ದಿನ ಹೋಗಿ ನೋಟ್ಸ್ ಕೇಳಿದರೆ ನಾನು ಕೋಡುವುದಿಲ್ಲ ಎಂದು ಹೇಳುತ್ತಿದ್ದರು. ಸೌದಾಮಿನಿ ಸಿಆರ್ ಆದ ನಂತರ ವಾಟ್ಸಪ್ ಗ್ರೂಪ್ ನಲ್ಲಿ ನನ್ನ ಮಗಳ ನಂಬರ್ ಬ್ಲಾಕ್ ಮಾಡಿದ್ದಳು. ಅವಳಿಗೆ ಯಾವ ನೋಟ್ಸ್ ಬರದಂತೆ ಮಾಡಿದ್ದಳು ಎಂದು ಮೇಘನಾ ತಾಯಿ ತಿಳಿಸಿದ್ದಾರೆ.

    ನನ್ನ ಮಗಳಿಗೆ ಆದ ಅನ್ಯಾಯ ಕೇಳಿದಾಗ ಯಾರೂ ನನ್ನ ಮಾತನ್ನು ಕೇಳುತ್ತಿರಲಿಲ್ಲ. ಅಲ್ಲಿ ನಮ್ಮ ಮಾತನ್ನು ಯಾರೂ ಕೇಳುವುದಿಲ್ಲ. ಎಲ್ಲ ಒಂದು ಗುಂಪಾಗಿದ್ದಾರೆ. ಅವರ ಮುಂದೆ ನಾವು ಗೆಲ್ಲಲ್ಲು ಆಗಲ್ಲ, ನಾವು ಸೋತಿದ್ದೇವೆ. ನಾವೇ ಇವರ ಮುಂದೆ ಸೋಲಬೇಕು ಎಂದು ಮೇಘನಾ ಹೇಳುತ್ತಿದ್ದಳು. ಸಿಆರ್ ವಿಷಯಕ್ಕೆ ಜಗಳ ಆಗಿ ಸೌದಾಮಿನಿ ಇಡೀ ಕ್ಲಾಸ್‍ಗೆ ನನ್ನ ಮಗಳ ಜೊತೆ ಸೇರಬಾರದು ಎಂದು ಮೆಸೇಜ್ ಮಾಡುತ್ತಿದ್ದಳು. ಇದ್ದರಿಂದ ನನ್ನ ಮಗಳು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೇಘನಾ ತಾಯಿ ಹೇಳಿದ್ದಾರೆ.

    ಮೇಘನಾ ತಂದೆ ಚಂದ್ರಶೇಖರ್ ಅಂಧರಾಗಿದ್ದು, ಅವರ ಪತ್ನಿ ಲತಾ ಪತಿಯನ್ನ ಕೆಲಸಕ್ಕೆ ಬಿಡಲು ಹೋಗಿದ್ದ ವೇಳೆ ಮೇಘನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೇಘನಾ ಪೋಷಕರು ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

    ಆರ್‍ಆರ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.