Tag: ಆತಂಕವಾದ

  • ‘ದಿ ಕೇರಳ ಸ್ಟೋರಿ’ ಆತಂಕವಾದದ ಸಿನಿಮಾ : ಪ್ರಧಾನಿ ನರೇಂದ್ರ ಮೋದಿ

    ‘ದಿ ಕೇರಳ ಸ್ಟೋರಿ’ ಆತಂಕವಾದದ ಸಿನಿಮಾ : ಪ್ರಧಾನಿ ನರೇಂದ್ರ ಮೋದಿ

    ಇಂದು ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ರಿಲೀಸ್ ಆಗಿದೆ. ಕಥಾವಸ್ತುವಿನ ಕಾರಣದಿಂದಾಗಿ ವಿವಾದಕ್ಕೀಡಾಗಿರುವ ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತನಾಡಿದ್ದಾರೆ. ಬಳ್ಳಾರಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ, ‘ದಿ ಕೇರಳ ಸ್ಟೋರಿ ಆತಂಕವಾದದ ಕಥಾವಸ್ತುವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಹಲವು ವರ್ಷಗಳಿಂದ ಆತಂಕವಾದದ ಸ್ವರೂಪ ಬದಲಾಗಿದೆ’ ಎಂದಿದ್ದಾರೆ.

    ಮುಂದುವರೆದು ಮಾತನಾಡಿದ ಪ್ರಧಾನಿ ಮೋದಿ ‘ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಆತಂಕವಾದದ ಮತ್ತೊಂದು ಮುಖವನ್ನು ಪರಿಚಯಿಸಲಾಗಿದೆ. ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಆದರೆ, ಕಾಂಗ್ರೆಸ್ (Congress) ಪಕ್ಷ ಈ ಕುರಿತು ಮಾತನಾಡದೇ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಆತಂಕವಾದದ ಪರವಾಗಿಯೇ ಮಾತನಾಡುತ್ತಿದೆ’ ಎಂದರು. ಕೇರಳ ರಾಜ್ಯ ಒಂದು ಸುಂದರ ರಾಜ್ಯ ಅಲ್ಲಿ ಪರಿಶ್ರಮಿಗಳು ಇದ್ದಾರೆ ಎಂದು ಹೊಗಳಿದರು. ಇದನ್ನೂ ಓದಿ:ಮೂಗಿನ ಶಸ್ತ್ರಚಿಕಿತ್ಸೆ ಬಳಿಕ ಖಿನ್ನತೆಗೆ ಒಳಗಾಗಿದ್ಯಾಕೆ? ಅಸಲಿ ವಿಚಾರ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

    ದೇಶದಾದ್ಯಂತ ಇಂದು ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಕೇರಳದಲ್ಲಿ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದಾರೆ. ಕೇರಳ ಸರಕಾರದ ಸಪೋರ್ಟ್ ಇಲ್ಲದ ಕಾರಣದಿಂದಾಗಿ ಮತ್ತು ಪ್ರತಿಭಟನೆಯ ಕಾವು ಜೋರಾಗಿದ್ದರಿಂದ ಚಿತ್ರಮಂದಿರಗಳ ಮಾಲೀಕರು ಭಯದಲ್ಲಿದ್ದಾರಂತೆ. ಈ ಕಾರಣದಿಂದಾಗಿ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ.

    ಈಗಾಗಲೇ ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ.