Tag: ಆಡುಗೋಡಿ

  • ಬೆಂಗಳೂರು| ನೇಣು ಬಿಗಿದುಕೊಂಡು ಪೊಲೀಸ್ ಹೆಡ್‌ಕಾನ್ಸ್ಟೇಬಲ್ ಆತ್ಮಹತ್ಯೆ

    ಬೆಂಗಳೂರು| ನೇಣು ಬಿಗಿದುಕೊಂಡು ಪೊಲೀಸ್ ಹೆಡ್‌ಕಾನ್ಸ್ಟೇಬಲ್ ಆತ್ಮಹತ್ಯೆ

    ಬೆಂಗಳೂರು: ಶಿಥಿಲಗೊಂಡಿರುವ ಕಟ್ಟಡದಲ್ಲಿ ಪೊಲೀಸ್ ಹೆಡ್‌ಕಾನ್ಸ್ಟೇಬಲ್ (Head Constable) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಡುಗೋಡಿಯಲ್ಲಿ (Adugodi) ನಡೆದಿದೆ.

    ಮುಬಾರಕ್ ಸಿಕಿಂಧರ್ ಮುಜಾವರ್ ಆತ್ಮಹತ್ಯೆ ಮಾಡಿಕೊಂಡ ಹೆಡ್‌ಕಾನ್ಸ್ಟೇಬಲ್. ಇವರು ಕಳೆದ 15 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹ ವಾಸನೆ ಬಂದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಮುಬಾರಕ್ ಸಿಕಿಂದರ್ ಕಳೆದ ಏಳು ವರ್ಷಗಳಿಂದ ಸಿಎಆರ್ ದಕ್ಷಿಣದಲ್ಲಿ ಕೆಲಸ ಮಾಡಿಕೊಂಡಿದ್ದರು. ಮೂರು ವರ್ಷಗಳ ಹಿಂದೆ ಮದುವೆ ಕೂಡ ಮಾಡಿಕೊಂಡಿದ್ದರು. ಇದನ್ನೂ ಓದಿ: ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಪು, ಶಾಂಪೂ ಬಳಕೆಗೆ ನಿಷೇಧ

    ಫೆಬ್ರವರಿ 9ರಂದು ಆಡುಗೊಡಿ ಪೊಲೀಸ್ ಠಾಣೆಯಲ್ಲಿ ಮುಬಾರಕ್ ಮಿಸ್ಸಿಂಗ್ ಆಗಿದ್ದರು. ಸಹಸಿಬ್ಬಂದಿಯಿಂದ ಮಿಸ್ಸಿಂಗ್ ಕಂಪ್ಲೆಂಟ್ ದಾಖಲು ಮಾಡಲಾಗಿತ್ತು. ಸದ್ಯ ಘಟನಾ ಸ್ಥಳಕ್ಕೆ ಆಡುಗೊಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಯುಎಸ್‌ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್‌

  • ಡ್ರಾಪ್‌ ನೆಪದಲ್ಲಿ ಲೈಂಗಿಕ ದೌರ್ಜನ್ಯ – ಡ್ಯಾನ್ಸ್‌ ಕೊರಿಯೋಗ್ರಾಫರ್‌ ಅರೆಸ್ಟ್‌

    ಡ್ರಾಪ್‌ ನೆಪದಲ್ಲಿ ಲೈಂಗಿಕ ದೌರ್ಜನ್ಯ – ಡ್ಯಾನ್ಸ್‌ ಕೊರಿಯೋಗ್ರಾಫರ್‌ ಅರೆಸ್ಟ್‌

    ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ (Sexual Harassment) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಆಡುಗೋಡಿಯಲ್ಲಿ ಬಂಧಿಸಿದ್ದಾರೆ.

    ತಮಿಳುನಾಡು ಮೂಲದ ಮುಖೇಶ್ವರನ್ ಬಂಧಿತ ಆರೋಪಿ. ಸಂತ್ರಸ್ತ ಯುವತಿಗೆ ಡ್ರಾಪ್ ನೀಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯವೆಸಗಿ ಮುಖೇಶ್ವರನ್‌ ಪರಾರಿಯಾಗಿದ್ದ.

    ಆರೋಪಿ ಆಡುಗೋಡಿಯ ಚಂದ್ರಪ್ಪನಗರದಲ್ಲಿ ವಾಸವಾಗಿದ್ದ. ಬೈಕ್ ನಂಬರ್ ಅಧಾರಿಸಿ ಆರೋಪಿಯನ್ನು ಬಂಧಿಸಲಾಗಿದ್ದು ಈಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಆರೋಪಿ ಡ್ಯಾನ್ಸ್ ಕೊರಿಯೋಗ್ರಫರ್ ಆಗಿದ್ದ ಎಂಬ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ. ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಈಗ ಹೆಚ್‌ಎಸ್‌ಆರ್‌ ಲೇಔಟ್‌ ಠಾಣೆಗೆ ಭೇಟಿ ನೀಡಿ ಕೃತ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಡಿಸಿಪಿ ಸಾರಾ ಫಾತೀಮಾ ಅವರು ಆಯುಕ್ತರಿಗೆ ಮಾಹಿತಿ ನೀಡುತ್ತಿದ್ದಾರೆ.

  • ಬೆಂಗಳೂರು ಟೆಕ್ಕಿ ಮೇಲೆ ಗ್ಯಾಂಗ್ ರೇಪ್?

    ಬೆಂಗಳೂರು ಟೆಕ್ಕಿ ಮೇಲೆ ಗ್ಯಾಂಗ್ ರೇಪ್?

    ಬೆಂಗಳೂರು: ಖಾಸಗಿ ಕಂಪನಿಯೊಂದರ ಟೆಕ್ಕಿ (Techie) ತನ್ನ ಮೇಲೆ ಗ್ಯಾಂಗ್ ರೇಪ್ (Gang Rape) ನಡೆದಿದೆ ಎಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ (Koramangala Police Station) ದೂರು ನೀಡಿದ್ದಾರೆ.

    ಡಿ.12 ರಂದು ರಾತ್ರಿ ಯುವತಿ ಕೋರಮಂಗಲ ಪಬ್ (Pub) ಒಂದಕ್ಕೆ ಹೋಗಿದ್ದಳು. ಬಳಿಕ ಪ್ರಜ್ಞೆ ಬಂದಾಗ ಆಕೆ ಆಡುಗೋಡಿಯ (Adugodi) ದೇವೇಗೌಡ ಲೇಔಟ್ ಬಳಿ ಇದ್ದುದು ತಿಳಿದುಬಂದಿದೆ. ತಕ್ಷಣ ಆಕೆ ಹತ್ತಿರ ಇದ್ದ ಮನೆಯೊಂದರ ಬಾಗಿಲು ಬಡಿದಿದ್ದಾಳೆ. ನಂತರ ಸ್ಥಳೀಯರು 112ಕ್ಕೆ ಕರೆ ಮಾಡಿದ್ದಾರೆ.

    ನಂತರ ಸ್ಥಳಕ್ಕೆ ಆಗಮಿಸಿದ ಆಡುಗೋಡಿ ಪೊಲೀಸರು ಯುವತಿಯ ರಕ್ಷಣೆ ಮಾಡಿದ್ದಾರೆ. ಅಲ್ಲಿಂದ ಆಕೆಯನ್ನು ಕೋರಮಂಗಲ ಠಾಣೆಗೆ ಕರೆತಂದಿದ್ದಾರೆ. ಅಲ್ಲಿ ಯುವತಿ ತಾನು ಪ್ರಜ್ಞಾಹೀನಳಾಗಿದ್ದಾಗ ಅತ್ಯಾಚಾರ ನಡೆದಿರುವ ಶಂಕೆಯಿದೆ ಎಂದು ದೂರು ನೀಡಿದ್ದಾಳೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ಪ್ರಕರಣ – ಮಾಸ್ಟರ್‌ಮೈಂಡ್‌ ಲಲಿತ್‌ ಬಂಧನ

    ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗೋವುಗಳ ಗಂಜಲದ ಗುಂಡಿಗೆ ಬಿದ್ದು ತಂದೆ, ಮಗ ದಾರುಣ ಸಾವು

  • ಮಕ್ಕಳೆದುರೇ ಪತ್ನಿಯ ಗುಪ್ತಾಂಗಕ್ಕೆ ಚಾಕು ಇರಿದು ವಿಕೃತಿ ಮೆರೆದ ರೌಡಿಶೀಟರ್!

    ಮಕ್ಕಳೆದುರೇ ಪತ್ನಿಯ ಗುಪ್ತಾಂಗಕ್ಕೆ ಚಾಕು ಇರಿದು ವಿಕೃತಿ ಮೆರೆದ ರೌಡಿಶೀಟರ್!

    ಬೆಂಗಳೂರು: ರೌಡಿಶೀಟರ್ ಪತಿಯೊಬ್ಬ ಮಕ್ಕಳೆದುರೇ ತನ್ನ ಪತ್ನಿಯ ಗುಪ್ತಾಂಗಕ್ಕೆ ಚಾಕು ಇರಿದು ವಿಕೃತಿ ಮೆರೆದ ಘಟನೆ ಆಡುಗೋಡಿ ಬಳಿಯ ಬಜಾರ್ ಸ್ಟ್ರೀಟ್‍ನಲ್ಲಿ ನಡೆದಿದೆ.

    ನೀಲಸಂದ್ರ ನಿವಾಸಿ ದಯಾನಂದ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ. ಆರೋಪಿ ಭಾನುವಾರ ರಾತ್ರಿ ಕುಡಿದು ಬಂದು ಪತ್ನಿ ಪ್ರಿಯಾಂಕಾ ಫೋನ್‍ನಲ್ಲಿ ಯಾರೊಂದಿಗೋ ಮಾತನಾಡುತ್ತಾಳೆ ಎಂದು ಗಲಾಟೆ ಶುರು ಮಾಡಿದ್ದಾನೆ. ಅಲ್ಲದೇ ಆಕೆ ಕೆಲಸ ಮಾಡುವ ಸ್ಥಳದಲ್ಲಿ ಬೇರೋಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ್ದಾನೆ. ಇದನ್ನೂ ಓದಿ: ಹಿರಿಯ ವಕೀಲ ಸಿ.ವಿ ನಾಗೇಶ್ ಪುತ್ರ ಅರುಣ್ ಹೃದಯಾಘಾತದಿಂದ ನಿಧನ

    ಬಳಿಕ ಆಕೆಯ ತೊಡೆ ಹಾಗೂ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಇಷ್ಟು ಮಾತ್ರವಲ್ಲದೇ ಪ್ರಿಯಾಂಕಾ ಜೋರಾಗಿ ಕಿರುಚಿದ್ದು ಸ್ಥಳೀಯರು ಸೇರಿದ್ದಾರೆ. ಈ ವೇಳೆ ಆರೋಪಿ ಪರಾರಿಯಾಗಿದ್ದಾನೆ. ಕೂಡಲೇ ಸೇರಿದ್ದ ಜನ 112ಕ್ಕೆ ಕರೆ ಮಾಡಿದ್ದು, ಪೊಲೀಸರು (Police) ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆರೋಪಿ ಕೆಲವು ವರ್ಷಗಳ ಹಿಂದೆ ಮಹಿಳೆಯನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರತಿ ದಿನ ಮನೆಗೆ ಬರುವ ಮುನ್ನ ಕುಡಿದು ಬಂದು ಆರೋಪಿ ಗಲಾಟೆ ಮಾಡುತ್ತಿದ್ದ. ಕ್ರೈಂ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಆರೋಪಿ 3 ದಿನದ ಹಿಂದೆಯಷ್ಟೇ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿದ್ದ. ಈ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ.

    ತಕ್ಷಣ ಕಾರ್ಯಾಚರಣೆ ನಡೆಸಿದ ಆಡುಗೋಡಿ (Adugodi) ಪೊಲೀಸರು ಆರೋಪಿ ದಯಾನಂದ್‍ನನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದೇವಾಲಯ, ಮನೆಯಲ್ಲಿ ಕಳ್ಳರ ಕೈಚಳಕ – 2 ಲಕ್ಷ ನಗದು 250 ಗ್ರಾಂ ಬಂಗಾರ ದೋಚಿದ ಖದೀಮರು

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಪ್ರೀತಿಸಿದವಳಿಗಾಗಿ ಅಣ್ಣನ ಮನೆಯಲ್ಲೇ ಕಳ್ಳತನ- ಕದ್ದ ಚಿನ್ನ ಅಡವಿಟ್ಟು ಗೋವಾದಲ್ಲಿ ಮಸ್ತಿ

    ಪ್ರೀತಿಸಿದವಳಿಗಾಗಿ ಅಣ್ಣನ ಮನೆಯಲ್ಲೇ ಕಳ್ಳತನ- ಕದ್ದ ಚಿನ್ನ ಅಡವಿಟ್ಟು ಗೋವಾದಲ್ಲಿ ಮಸ್ತಿ

    ಬೆಂಗಳೂರು: ಪ್ರೀತಿಸಿದವಳಿಗಾಗಿ ಅಣ್ಣನ ಮನೆಯಲ್ಲೇ ಕಳ್ಳತನ (Gold Theft) ಮಾಡಿ ಬಳಿಕ ಗೋವಾದಲ್ಲಿ ಮಸ್ತಿ ಮಾಡಿದವನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಮೊಹಮ್ಮದ್ ಇರ್ಫಾನ್ (Mohammad Irfan) ಎಂದು ಗುರುತಿಸಲಾಗಿದ್ದು, ಈತನನ್ನು ಆಡುಗೋಡಿ ಪೊಲೀಸರು (Adugodi Police) ಬಂಧಿಸಿದ್ದಾರೆ. ಆಡುಗೋಡಿಯ ಮಹಾಲಿಂಗೇಶ್ವರ ಬಂಡೆ ಏರಿಯಾದಲ್ಲಿ ವಾಸವಿದ್ದ ಇರ್ಫಾನ್, ತಾನು ಪ್ರೀತಿಸಿದವಳ ಆಸೆ ಈಡೇರಿಸುವ ಸಲುವಾಗಿ ಅನ್ನವಿತ್ತು, ಆಶ್ರಯ ಕೊಟ್ಟ ಅಣ್ಣನ ಮನೆಯಲ್ಲೇ ತನ್ನ ಕೈಚಳಕ ತೋರಿಸಿದ್ದಾನೆ. ಪ್ರಿಯತಮೆಯ ಗೋವಾ (Goa) ಆಸೆಗೆ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದಾನೆ.

    ಸುದ್ದುಗುಂಟೆಪಾಳ್ಯದಲ್ಲಿ ಸೇಲ್ಸ್ ಮನ್ ಕೆಲಸ ಮಾಡಿಕೊಂಡಿದ್ದ ಸಲ್ಮಾನ್, ಅಣ್ಣ ಸಲ್ಮಾನ್, ಅತ್ತಿಗೆ ಹಾಗೂ ತಾಯಿಯೊಂದಿಗೆ ವಾಸವಿದ್ದ. ಕೆಲಸವಿಲ್ಲದೇ ಓಡಾಡಿಕೊಂಡಿದ್ದ ಈತ ಮನೆಯ ಬೀರುವಿನಲ್ಲಿದ್ದ 103 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ನವೆಂಬರ್ 29ರಂದು ಬೀರು ಪರಿಶೀಲಿಸಿದಾಗ ಕಳ್ಳತನವಾಗಿರುವುದು ಬಯಲಾಗಿತ್ತು. 4-5 ದಿನಗಳಿಂದ ಮನೆಗೆ ಬಾರದೇ ಇದ್ದ ತಮ್ಮ ಇರ್ಫಾನ್ ವಿರುದ್ಧ ಅಣ್ಣ ದೂರು ನೀಡಿದ್ದ. ಇದನ್ನೂ ಓದಿ: ಪೆರೋಲ್ ಪಡೆದು ಪರಾರಿಯಾದಾತ ತನ್ನದೇ ಸಾವಿನ ಕತೆ ಕಟ್ಟಿದ – 15 ವರ್ಷಗಳ ಬಳಿಕ ಮತ್ತೆ ಅಂದರ್

    ದೂರಿನನ್ವಯ ತನಿಖೆ ಕೈಗೊಂಡಾಗ ಕಳ್ಳತನದಲ್ಲಿ ಇರ್ಫಾನ್ ಕೈವಾಡ ಬಯಲಾಗಿದೆ. ಮಾಡೋಕೆ ಕೆಲಸವಿಲ್ಲದಿದ್ದರೂ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಗೋವಾಗೆ ಹೋಗಿ ಮೋಜು-ಮಸ್ತಿ ಮಾಡುವ ಇಚ್ಛೆ ಹೊಂದಿದ್ದ ಇರ್ಫಾನ್ ನ ಪ್ರೇಯಸಿ ಅದರಂತೆ ಹಣ ಹೊಂದಿಸಲು ಮನೆಯಲ್ಲೇ ಕಳ್ಳತನ ಮಾಡಿದ್ದ. ಕದ್ದ ಚಿನ್ನಾಭರಣ ಅಡವಿಟ್ಟು ಪ್ರೇಯಸಿ ಜೊತೆ ಗೋವಾಗೆ ಹೋಗಿದ್ದ. ಗೋವಾದಲ್ಲಿದ್ದಾಗಲೇ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅನೈತಿಕ ಸಂಬಂಧ ಶಂಕೆ- ನೀರು ಅಂತ ಎಣ್ಣೆ ಕಾಯಿಸಿ ಪತ್ನಿ ಮೇಲೆ ಎರಚಿದ್ದವ ಅರೆಸ್ಟ್

    ಅನೈತಿಕ ಸಂಬಂಧ ಶಂಕೆ- ನೀರು ಅಂತ ಎಣ್ಣೆ ಕಾಯಿಸಿ ಪತ್ನಿ ಮೇಲೆ ಎರಚಿದ್ದವ ಅರೆಸ್ಟ್

    ಬೆಂಗಳೂರು: ಅಡುಗೆ ಮನೆಗೆ ಹೋಗಿ ಸ್ನಾನಕ್ಕೆ ನೀರು ಕಾಯಿಸುತ್ತೇನೆ ಎಂದು ಎಣ್ಣೆ ಕಾಯಿಸಿ ಪತ್ನಿಯ ಮೇಲೆ ಎರಚಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಥಾಮಸ್ ಎಂದು ಗುರುತಿಸಲಾಗಿದ್ದು, ಈತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಜನವರಿ 30 ರಂದು ಆಡುಗೋಡಿಯ ಎಲ್ ಆರ್ ನಗರದಲ್ಲಿ ಹೆಂಡತಿ ಅಂಥೋಣಿಯಮ್ಮ ಮೇಲೆ ಥಾಮಸ್ ಬಿಸಿ ಎಣ್ಣೆ ಸುರಿದಿದ್ದನು.

    ಅನೈತಿಕ ಸಂಬಂಧ ಇದೆ ಎಂದು ಪತ್ನಿಯ ಮೇಲೆ ಥಾಮಸ್ ಸಂಶಯ ಪಟ್ಟಿದ್ದನು. ಇದೇ ವಿಚಾರವಾಗಿ ಪತ್ನಿಯೊಂದಿಗೆ ಗಲಾಟೆ ಕೂಡ ಮಾಡಿದ್ದನು. ಅಲ್ಲದೆ ದೊಣ್ಣೆಯಿಂದ ಹಲ್ಲೆ ನಡೆಸಿ ಮೂರ್ಛೆ ತಪ್ಪಿಸಿದ್ದನು. ನಂತರ ಅಡುಗೆ ಮನೆಗೆ ಹೋಗಿ ಸ್ನಾನಕ್ಕೆ ನೀರು ಕಾಯಿಸುತ್ತೇನೆ ಎಂದು ಎಣ್ಣೆ ಕಾಯಿಸಿದ್ದ. ಎಣ್ಣೆ ಕುದಿಯುತ್ತಿದ್ದಂತೆಯೇ ಅದನ್ನು ಪತ್ನಿ ಮೇಲೆ ಎರಚಿದ್ದ.

    ಹೆಂಡತಿ ಮುಖ, ಎದೆ, ಹೊಟ್ಟೆ, ಕಾಲು ಹಾಗೂ ಕೈಗಳ ಮೇಲೆ ಎಣ್ಣೆ ಸುರಿದಿದ್ದ. ಇತ್ತ ಅಮ್ಮನ ಮೇಲೆ ಎಣ್ಣೆ ಎರಚಿದಾಗ ಅಡ್ಡ ಬಂದ ಮಗಳ ಮೇಲೂ ಎಣ್ಣೆ ಚೆಲ್ಲಿದೆ. ಸದ್ಯ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಗಾಯಾಳು ಅಂಥೋಣಿಯಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಹಾಸ್ಟೆಲ್‍ಗೆ ಟ್ರಾವೆಲ್ ಬ್ಯಾಗ್‍ನಲ್ಲಿ ಯುವತಿಯನ್ನು ಕರೆತಂದ ಪ್ರಿಯಕರ – ವೀಡಿಯೋ ಮಣಿಪಾಲದ್ದಲ್ಲ

  • ಬೆಂಗ್ಳೂರಿನಲ್ಲಿ ಕೆಮಿಕಲ್ ಸ್ಫೋಟ – ವ್ಯಕ್ತಿಯ ಕಾಲು ಕಟ್

    ಬೆಂಗ್ಳೂರಿನಲ್ಲಿ ಕೆಮಿಕಲ್ ಸ್ಫೋಟ – ವ್ಯಕ್ತಿಯ ಕಾಲು ಕಟ್

    ಬೆಂಗಳೂರು: ಸಿಲಿಕಾನ್ ಸಿಟಿಯ ಆಡುಗೋಡಿಯಲ್ಲಿ ಕೆಮಿಕಲ್ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ವ್ಯಕ್ತಿಯ ಕಾಲು ಕಟ್ ಆಗಿರುವ ಘಟನೆ ನಡೆದಿದೆ.

    ಆಂಜಿನಪ್ಪ (50) ಸ್ಫೋಟದಿಂದ ಗಾಯಗೊಂಡಿರುವ ವ್ಯಕಿ. ತಕ್ಷಣ ಗಾಯಾಳು ಆಂಜಿನಪ್ಪನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗ್ರಾನೈಟ್ ಕತ್ತರಿಸುವ ಕೆಮಿಕಲ್ ರಿಯಾಕ್ಷನ್‍ನಿಂದ ಸ್ಫೋಟಗೊಂಡಿರುವುದು ತಿಳಿದು ಬಂದಿದೆ.

    ಕಿಡಿಗೇಡಿಗಳು ನಿರ್ಮಾಣ ಹಂತದ ಕಟ್ಟಡದ ಪಕ್ಕ ಇದ್ದ ಕಸದಲ್ಲಿ ಕವರ್‌ಗೆ ಕಟ್ಟಿ ಕೆಮಿಕಲ್ ಎಸೆದು ಹೋಗಿದ್ದರು. ಹೀಗಾಗಿ ಬಿಸಲಿನ ತಾಪಕ್ಕೆ ಕೆಮಿಕಲ್ ರಿಯಾಕ್ಷನ್‍ನಿಂದಾಗಿ ಸ್ಫೋಟಗೊಂಡಿದೆ. ರಿಯಾಕ್ಷನ್ ಆಗಿ ಸ್ಫೋಟಗೊಂಡ ಕೆಮಿಕಲ್ ಯಾವುದು? ಹಾಗೂ ಕೆಮಿಕಲ್ ಯಾವ ಕಾರಣಕ್ಕೆ ತಂದು ಎಸೆಯಲಾಗಿದೆ ಎಂಬುದರ ಬಗ್ಗೆ ಸ್ಥಳದಲ್ಲಿ ಎಫ್‍ಎಸ್‍ಎಲ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

    ರಂಗದಾಸಪ್ಪ ಲೇಔಟ್‍ನಲ್ಲಿ ಖಾಲಿ ಸೈಟ್‍ನಲ್ಲಿ ಕಸದ ರಾಶಿ ಇದೆ. ಗ್ರಾನೈಟ್ ಕತ್ತರಿಸಲು ಬಳಸುವ ಕೆಮಿಕಲ್ ಕಸದೊಳಕ್ಕೆ ಎಸೆಯಲಾಗಿತ್ತು. ಕೆಮಿಕಲ್ ರಿಯಾಕ್ಷನ್‍ನಿಂದ ಸ್ಪೋಟ ಸಂಭವಿಸಿದೆ. ವ್ಯಕ್ತಿಯ ಕಾಲಿಗೆ ಗಾಯವಾಗಿದೆ. ಬೆಂಕಿ ಹೊತ್ತಿಕೊಂಡಿಲ್ಲ, ಪಕ್ಕದಲ್ಲಿದ್ದ ಆಟೋಗೂ ಸಹ ಬೆಂಕಿ ತಗುಲಿಲ್ಲ. ಸದ್ಯ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಕೂಡ ಭೇಟಿ ನೀಡಿ ಪರಿಶೀಲನ ನಡೆಸುತ್ತಿದೆ ಎಂದು ಡಿಸಿಪಿ ಶ್ರೀನಾಥ್ ಜೋಶಿ ಹೇಳಿದರು.

    ಕೆಮಿಕಲ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಟ್ವೀಟ್ ಮಾಡಿದ್ದಾರೆ. “ಆಡುಗೋಡಿಯಲ್ಲಿ ಗ್ರಾನೈಟ್ ಕತ್ತರಿಸಲು ಬಳಸುವ ಕೆಮಿಕಲ್‍ನಿಂದಾಗಿ ಸಣ್ಣ ಪ್ರಮಾಣದ ಸ್ಫೋಟವಾಗಿದೆ. ಇದರಿಂದ ವ್ಯಕ್ತಿಯೊಬ್ಬ ಗಾಯಗೊಂಡಿದ್ದಾರೆ. ಹೀಗಾಗಿ ಯಾರು ಆತಂಕ ಪಡುವ ಅಗತ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.

  • ರಸ್ತೆ ಗುಂಡಿ ತಪ್ಪಿಸೋ ಭರದಲ್ಲಿ ಫುಟ್‍ಪಾತ್‍ಗೆ ಡಿಕ್ಕಿ ಹೊಡೆದ ಕಾರು – 6 ಜನರಿಗೆ ಗಾಯ

    ರಸ್ತೆ ಗುಂಡಿ ತಪ್ಪಿಸೋ ಭರದಲ್ಲಿ ಫುಟ್‍ಪಾತ್‍ಗೆ ಡಿಕ್ಕಿ ಹೊಡೆದ ಕಾರು – 6 ಜನರಿಗೆ ಗಾಯ

    ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ಗುಂಡಿಯನ್ನು ತಪ್ಪಿಸುವ ಭರದಲ್ಲಿ ಫುಟ್ ಪಾತ್‍ಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ಕೋರಮಂಗಲ ವಾಟರ್ ಟ್ಯಾಂಕ್ ಸಿಗ್ನಲ್ ಬಳಿ ನಡೆದಿದೆ.

    ತಡರಾತ್ರಿ ನಡೆದ ಈ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಜನರಿಗೆ ತೀವ್ರ ಗಾಯಗಳಾಗಿವೆ. ಅಪಘಾತದಲ್ಲಿ ಗಾಯಗೊಂಡವರನ್ನು ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 10 ಗಂಟೆಯ ಸಮಯದಲ್ಲಿ ಹೆಚ್‍ಎಸ್‍ಆರ್ ಲೇಔಟ್ ಕಡೆಯಿಂದ ಬಂದ ಟಾಟಾ ಸುಮೊ ಕಾರು ಕೋರಮಂಗಲದ ವಾಟರ್ ಟ್ಯಾಂಕ್ ಬಳಿ ರಸ್ತೆಯಲ್ಲಿದ್ದ ಗುಂಡಿಗಳನ್ನ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಫುಟ್‍ಪಾತ್‍ಗೆ ಡಿಕ್ಕಿ ಹೊಡೆದಿದೆ.

    ಕಾರನ್ನು ವೇಗವಾಗಿ ಚಲಿಸುತ್ತಿದ್ದರಿಂದ ಫುಟ್‍ಪಾತ್ ಬದಿಯ ಸಿಗ್ನಲ್ ಕಂಬಗಳಿಗೆ ಡಿಕ್ಕಿ ಹೊಡೆದು ಸಂಪೂರ್ಣ ಜಖಂಗೊಂಡಿದೆ. ಇನ್ನೂ ಇದೇ ವೇಳೆ ಕಾರಿನಲ್ಲಿ ಇಬ್ಬರು ಯುವತಿಯರು ಸೇರಿ ಒಟ್ಟು ಆರು ಜನರು ಪ್ರಯಾಣಿಸುತ್ತಿದರು ಎಂದು ತಿಳಿದು ಬಂದಿದೆ. ಎಲ್ಲರೂ ಹಬ್ಬ ಪ್ರಯುಕ್ತ ರಜೆ ಇದ್ದರಿಂದ ಔಟಿಂಗ್ ತೆರಳಿದ್ದರು ಎಂದು ತಿಳಿದು ಬಂದಿದೆ.

    ಅಪಘಾತದ ನಡೆದ ಕೂಡಲೇ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೋಲಿಸರು ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಕುಡಿದು ವಾಹನ ಚಲಾಹಿಸಿದ್ದೇ ಅಪಘಾತಕ್ಕೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವೃದ್ಧೆಯ ಕೊಲೆ ಕೇಸ್ ಆರೋಪಿ ಬಂಧನ: ಕೊಲೆಗಾರನ ಸುಳಿವು ನೀಡಿತ್ತು ಚಪ್ಪಲಿ

    ವೃದ್ಧೆಯ ಕೊಲೆ ಕೇಸ್ ಆರೋಪಿ ಬಂಧನ: ಕೊಲೆಗಾರನ ಸುಳಿವು ನೀಡಿತ್ತು ಚಪ್ಪಲಿ

    ಬೆಂಗಳೂರು: ನಗರದ ಅಡುಗೋಡಿಯಲ್ಲಿ ನಡೆದಿದ್ದ ವೃದ್ಧೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    22 ವರ್ಷ ವಯಸ್ಸಿನ ಸೈಯದ್ ನದೀಮ್ ಬಂಧಿತ ಆರೋಪಿ. ಈತ 16ನೇ ತಾರೀಖಿನಂದು ವೃದ್ಧೆ ಗಜಲಕ್ಷ್ಮಿ ಎಂಬವರನ್ನ ಕೊಂದು ಚಿನ್ನಾಭರಣ ದೋಚಿದ್ದ. ವಿವೇಕನಗರದ ನೀಲಸಂದ್ರದಲ್ಲಿ ಈ ಘಟನೆ ನಡೆದಿತ್ತು. 75 ವರ್ಷದ ಗಜಲಕ್ಷ್ಮೀ ಮನೆಯಲ್ಲಿ ಮಲಗಿದ್ದ ವೇಳೆ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೊಲೆಗಾರನ ಪತ್ತೆಗೆ ಬಲೆ ಬೀಸಿದ್ದರು.

    ಚಪ್ಪಲಿ ನೀಡಿತ್ತು ಕೊಲೆಗಾರನ ಸುಳಿವು: ಈ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಸುಳಿವು ನೀಡಿದ್ದು ಚಪ್ಪಲಿ. ಚಪ್ಪಲಿಯಲ್ಲಿದ್ದ ತೂತುಗಳಿಂದ ಪೊಲೀಸರು ಕೊಲೆಗಾರನನ್ನ ಪತ್ತೆ ಹಚ್ಚಿದ್ದಾರೆ. ಆರೋಪಿ ಕೊಲೆ ಮಾಡಿದ ಬಳಿಕ ಚಪ್ಪಲಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದ. ಚಪ್ಪಲಿಯನ್ನು ಪರಿಶೀಲಿಸಿದ ಪೊಲೀಸರು ಚಪ್ಪಲಿಯಲ್ಲಿರೋ ರಂಧ್ರ ನೋಡಿದ್ರು. ವೆಲ್ಡಿಂಗ್ ಮಾಡೋರ ಚಪ್ಪಲಿಯಲ್ಲಿ ಮಾತ್ರ ಈ ರೀತಿಯ ರಂಧ್ರಗಳಿರುತ್ತೆ ಎಂದು ತಿಳಿದು ಪರಿಶೀಲನೆ ನಡೆಸಿದ್ದರು.

    ಬಳಿಕ ಸೈಯದ್‍ನನ್ನು ಪತ್ತೆ ಹಚ್ಚಿದ್ರು. ಸೈಯದ್ ಕೂಡ ವೆಲ್ಡಿಂಗ್ ಮಾಡೋ ಜಾಗದಲ್ಲಿ ಕೆಲಸ ಮಾಡ್ತಿದ್ದ. ಇದೀಗ ಈತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.