Tag: ಆಡುಗೆ ಕೋಣೆ

  • ಶಶಿಕಲಾಗೆ ಕಿಚನ್ ಅಲ್ಲದೇ ಜೈಲಿನಲ್ಲಿದೆ ವಿಶೇಷ ವಿಸಿಟಿಂಗ್ ರೂಂ!

    ಶಶಿಕಲಾಗೆ ಕಿಚನ್ ಅಲ್ಲದೇ ಜೈಲಿನಲ್ಲಿದೆ ವಿಶೇಷ ವಿಸಿಟಿಂಗ್ ರೂಂ!

    ಬೆಂಗಳೂರು: ಶಶಿಕಲಾ ರಾಜಾತಿಥ್ಯ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಐಶಾರಾಮಿ ಜೀವನಕ್ಕೆ ಪರಪ್ಪನ ಅಗ್ರಹಾರದಲ್ಲಿ ಇನ್ನಷ್ಟು ವ್ಯವಸ್ಥೆ ಇರುವುದು ಬೆಳಕಿಗೆ ಬಂದಿದೆ.

    ವಿಶೇಷ ಕಿಚನ್ ಅಲ್ಲದೇ ಅಲ್ಲದೇ ವಿಶೇಷ ವಿಸಿಟಿಂಗ್ ರೂಂ ಶಶಿಕಲಾಗೆ ಇರುವುದು ತಿಳಿದು ಬಂದಿದೆ. ಸೆಕೆಂಡ್ ಫ್ಲೋರ್‍ನಲ್ಲಿ ಡಿಐಜಿ ಚೇಂಬರ್ ಪಕ್ಕದಲ್ಲೇ ಈ ಐಶಾರಾಮಿ ವಿಸಿಟಿಂಗ್ ರೂಂ ಇದೆ.

    ವಿಸಿಟಿಂಗ್ ಕೊಠಡಿಯಲ್ಲಿ ಒಂದು ಟೇಬಲ್, ನಾಲ್ಕು ಚೇರ್‍ಗಳಿದ್ದು, ದಿನಕರ್ ಸೇರಿದಂತೆ ಯಾರೇ ಬಂದರೂ ವಿಸಿಟಿಂಗ್ ರೂಂನಲ್ಲೇ ಶಶಿಕಲಾರನ್ನು ಭೇಟಿ ಮಾಡುತ್ತಾರೆ.

    ಈ ಕೊಠಡಿಗೆ ಶಶಿಕಲಾ ಬಿಟ್ಟರೆ ಬೇರೆ ಯಾರಿಗೂ ಎಂಟ್ರಿ ಇಲ್ಲ ಅಷ್ಟೇ ಅಲ್ಲದೇ ಈ ಕೊಠಡಿಯಲ್ಲಿ ಯಾವುದೇ ಸಿಸಿಟಿವಿ ಅಳವಡಿಕೆ ಮಾಡಿಲ್ಲ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ತೆಲಗಿಗೆ ಸಂಬಂಧಿಸಿದ ಸುದ್ದಿಯನ್ನು ಪಬ್ಲಿಕ್ ಟಿವಿ ಬ್ರೇಕ್ ಮಾಡಿದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಸಿಎಂ ಸಿದ್ದರಾಮಯ್ಯ ನವರು ಟ್ವೀಟ್ ಮಾಡಿದ್ದು, ವಿನಯ್ ಕುಮಾರ್ ಅವರ ಅಧ್ಯಕ್ಷತೆಯ ಸಮಿತಿಯು ಒಂದು ವಾರದಲ್ಲಿ ತನ್ನ ಪ್ರಾಥಮಿಕ ವರದಿ ಸಲ್ಲಿಸಲಿದ್ದು, ಒಂದು ತಿಂಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳ ತನಿಖೆಗೆ ನಿವೃತ್ತ ಐಎಎಸ್ ಅಧಿಕಾರಿ ವಿನಯಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದ ಹೇಳಿದ್ದಾರೆ.

    ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಶಶಿಕಲಾಗೆ ಅಡುಗೆ ಮನೆ- 2 ಕೋಟಿ ಲಂಚ ಪಡೆದು ಐಷಾರಾಮಿ ಸೌಲಭ್ಯ 

    ಇದನ್ನೂ ಓದಿ: ಹಣ ಕೊಟ್ರೆ ಜೈಲಲ್ಲೇ ಅರಮನೆ ಸೌಕರ್ಯ: ಆರೋಪ ಸುಳ್ಳು ಎಂದ ಡಿಜಿ, ತನಿಖೆ ಮಾಡ್ಲಿ ಎಂದ ರೂಪಾ