ನವದೆಹಲಿ: ಕುಡಿದ ಅಮಲಿನಲ್ಲಿ ಫುಟ್‌ಪಾತ್‌ನಲ್ಲಿ (Footpath) ಮಲಗಿದ್ದವರ ಮೇಲೆ ಆಡಿ ಕಾರು (Audi Car) ಹರಿಸಿದ ಪರಿಣಾಮ ಐವರು ಗಾಯಗೊಂಡಿರುವ ಘಟನೆ ದೆಹಲಿಯ ವಸಂತ್ ವಿಹಾರ್‌ನಲ್ಲಿ (Vasant Vihar) ನಡೆದಿದೆ.
ಆಡಿ ಕಾರು ಚಾಲಕ ಕುಡಿದ ಮತ್ತಿನಲ್ಲಿ ಫುಟ್‌ಪಾತ್ ಮೇಲೆ ಮಲಗಿದ್ದ ರಾಜಸ್ಥಾನದ ಮಹಿಳೆ, ಪತಿ ಮತ್ತು ಮಗಳು ಹಾಗೂ ಮತ್ತೊಂದು ದಂಪತಿ ಮೇಲೆ ಕಾರು ಹರಿಸಿದ್ದಾನೆ. ನೋಯ್ಡಾದಿಂದ ಮನೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಮುಕುಟ – ಸೋಮವಾರ ಸಿಗಂದೂರು ಸೇತುವೆ ಲೋಕಾರ್ಪಣೆ
ಕೋಲಾರ: ಆಡಿ ಕಾರೊಂದು (Audi Car) ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ ಉಂಟಾದ ಪರಿಣಾಮ ಮೂವರು ವಿದ್ಯಾರ್ಥಿಗಳು (Students) ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಬಚಾವಾದ ಘಟನೆ ಕೋಲಾರ (Kolar) ಹೊರವಲಯದಲ್ಲಿ ನಡೆದಿದೆ.
ಬಂಗಾರಪೇಟೆ (Bangarpet) ಮುಖ್ಯರಸ್ತೆ ಸಹಕಾರ ನಗರದಲ್ಲಿ ಘಟನೆ ನಡೆದಿದೆ. ಮೃತರನ್ನು ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ ಬಸವರಾಜ್ ಹಾಗೂ ಬಂಗಾರಪೇಟೆಯ ನಿಶ್ಚಲ್ ಎಂದು ಗುರುತಿಸಲಾಗಿದೆ. ಮೃತರು ಪ್ರಸಿದ್ಧ ಯೂನಿವರ್ಸಿಟಿವೊಂದರ ವಿದ್ಯಾರ್ಥಿಗಳು. ಬಂಗಾರಪೇಟೆಯ ಸಾಯಿ ಗಗನ್ ಘಟನೆಯಲ್ಲಿ ಪಾರಾಗಿದ್ದಾನೆ. ವಿದ್ಯಾರ್ಥಿಗಳು ಸಾಯಿ ಗಗನ್ ಮನೆಗೆ ಬಂದಿದ್ದರು. ಅಲ್ಲಿಂದ ವಾಪಸ್ ಕೋಲಾರಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರು: ಆಡಿ ಕಾರು (Audi Car) ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.
ತಾಲೂಕಿನ ಹಿರೇಗೌಜ (Hiregowja) ಗೇಟ್ ಬಳಿ ಈ ಘಟನೆ ನಡೆದಿದ್ದು, ಮೃತನನ್ನು 28 ವರ್ಷದ ದರ್ಶನ್ ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಶಶಿಕುಮಾರ್ ಎಂಬವರಿಗೆ ತೀವ್ರ ಗಾಯಗಳಾಗಿದ್ದರಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 173ರಲ್ಲಿ ನಡೆದ ಭೀಕರ ಅಪಘಾತದಿಂದ ಬೈಕಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತವಾದ ಕೂಡಲೇ ಕಾರು ಚಾಲಕ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ ; ಮೂವರು ಯುವಕರು ಸಾವು
ಮುಂಬೈ: 1985ರ ವಿಶ್ವಚಾಂಪಿಯನ್‌ನಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನಕ್ಕೆ ಬಹುಮಾನವಾಗಿ ಸಿಕ್ಕ ಆಡಿ 100 ಸೆಡನ್ ಕಾರನ್ನು ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ ಮರಳಿ ಪಡೆದಿದ್ದಾರೆ.
ಆಡಿ 100 ಕಾರು ಹಾಳಾಗಿದ್ದರಿಂದ ಅದನ್ನು ರಿಪೇರಿಗಾಗಿ ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ನಿರ್ವಹಿಸುತ್ತಿರುವ ಸೂಪರ್ ಕಾರ್ ಕ್ಲಬ್ ಗ್ಯಾರೇಜ್ (SCCG)ಗೆ ಬಿಡಲಾಗಿತ್ತು. ಆ ಕಾರಿನ ಕೆಲ ಬಿಡಿ ಭಾಗಗಳು ಸಂಗ್ರಹಿಸಲು ಕಷ್ಟಸಾಧ್ಯವಾಗಿದ್ದರಿಂದ ರಿಪೇರಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೂ ಬಿಡದೇ ತನ್ನ ಪ್ರಯತ್ನ ಮುಂದುವರಿಸಿದ ಎಸ್‌ಸಿಸಿ ಗ್ಯಾರೆಜ್ ಸತತ 8 ತಿಂಗಳ ಪ್ರಯತ್ನದಿಂದಾಗಿ ಕಾರನ್ನು ದುರಸ್ತಿ ಮಾಡಿ ರವಿಶಾಸ್ತ್ರೀ ಅವರಿಗೆ ಹಸ್ತಾಂತರಿಸಿದೆ.
ಈ ಸಂತಸವನ್ನು ಹಂಚಿಕೊಂಡಿರುವ ರವಿಶಾಸ್ತ್ರೀ ಅವರು, ಇದು 37 ವರ್ಷಗಳ ಹಿಂದೆ ನಾನು ಪಡೆದ ಕಾರಿನಂತೆಯೇ ಕಾಣುತ್ತದೆ. ಯಾವುದರಲ್ಲೂ ಬದಲಾವಣೆಯಾಗಿಲ್ಲ. ಅವರು ರಿಪೇರಿ ಮಾಡಿರುವ ರೀತಿ ನಂಬಲಾಗುತ್ತಿಲ್ಲ. ಕಾರಿನ ಕೀಲಿ ನನ್ನ ಕೈ ಸೇರುತ್ತಿದ್ದಂತೆ 37 ವರ್ಷಗಳ ಹಿಂದಿನ ನೆನಪುಗಳು ಮತ್ತೆ ಮರುಕಳಿಸಿದವು ಎಂದು ಹೇಳಿದ್ದಾರೆ.
ಆ ಸಂದರ್ಭದಲ್ಲಿ ಚಾಲನಾ ಪರವಾನಗಿ ಇಲ್ಲದೆಯೇ ಕಾರು ಚಲಾಯಿಸಿದ್ದೆ. ಟೂರ್ನಿಯ ಪಂದ್ಯವೊಂದರಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾಗ ಮೈದಾನದ ಮಿಡ್ ವಿಕೆಟ್ ಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಆಗಾಗ ಕಣ್ಣು ಹಾಯಿಸುತ್ತಿದ್ದೆ. ಏಕೆಂದರೆ ಕಾರನ್ನು ಗೆಲ್ಲಲು ನಾನು ಮುಂಚೂಣಿಯಲ್ಲಿರುವ ಆಟಗಾರನೆಂಬುದು ತಿಳಿದಿತ್ತು. ಕಾರನ್ನು ಹಡಗಿನಲ್ಲಿ ಭಾರತಕ್ಕೆ ತಂದಾಗ 10 ಸಾವಿರಕ್ಕೂ ಹೆಚ್ಚು ಜನ ಜಮಾಯಿಸಿದ್ದರು ಎಂದು ಶಾಸ್ತ್ರೀ ನೆನಪನ್ನು ಹಂಚಿಕೊಂಡಿದ್ದಾರೆ.
ರಾಜೀವ್ ಗಾಂಧಿ ಅವರು ಭಾರತದ ಪ್ರಧಾನಿಯಾಗಿದ್ದಾಗ ನಾನು ಈ ಬಗ್ಗೆ ಮಾತನಾಡಿದ್ದೆ. ಅವರು ಈ ಕಾರನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಎಲ್ಲ ತೆರಿಗೆ ಮನ್ನಾ ಮಾಡಿದ್ದರು. ಇಲ್ಲದಿದ್ದರೆ ಹೆಚ್ಚಿನ ತೆರಿಗೆಯಿಂದ ತರಲಾಗುತ್ತಿರಲಿಲ್ಲ ಎಂದು ಹೇಳಿಕೊಂಡರು.
ಹಿನ್ನೆಲೆ ಏನು?: 1985ರ ವಿಶ್ವಚಾಂಪಿಯನ್ ಶಿಪ್‌ನಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನಕ್ಕೆ ರವಿಶಾಸ್ತ್ರೀ ಅವರಿಗೆ ಆಡಿ 100 ಸೆಡನ್ ಕಾರನ್ನು ಬಹುಮಾನವಾಗಿ ನೀಡಲಾಗಿತ್ತು. 32 ವರ್ಷಗಳ ಹಿಂದೆ ಆಸ್ಪ್ರೇಲಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ಟೆಸ್ಟ್ ಸರಣಿಯ 5 ಪಂದ್ಯಗಳಲ್ಲಿ ರವಿಶಾಸ್ತ್ರಿ ಒಟ್ಟು 182 ರನ್ ಮತ್ತು 8 ವಿಕೆಟ್ ಪಡೆದಿದ್ದರು. ಈ ಸಾಧನೆಗಾಗಿ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಪ್ರಶಸ್ತಿಗೆ ಭಾಜನರಾಗಿದ್ದ ಶಾಸ್ತ್ರೀ ಅವರಿಗೆ ಆಡಿ 100 ಸೆಡನ್ ಕಾರನ್ನು ಬಹುಮಾನವಾಗಿ ನೀಡಲಾಗಿತ್ತು.
ಬೆಂಗಳೂರು: ಕೋರಮಂಗಲದ ಮಂಗಳಾ ಕಲ್ಯಾಣ ಮಂಟಪದ ಬಳಿ ನಡೆದ ಭೀಕರ ಕಾರು ಅಪಘಾತಕ್ಕೆ ನೀರಿನ ಬಾಟಲ್ ಸಹ ಕಾರಣವಾಗಿರಬಹುದು ಎಂಬ ಮಾತು ಕೇಳಿ ಬಂದಿದೆ.
ಹೌದು. ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತಗಳ ಪಟ್ಟಿಗೆ ಈ ಅಪಘಾತ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ವಿವಿಧ ಆಯಾಮಗಳಿಂದ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ಒಂದು ತಂಡ 7 ಮಂದಿ ಕಾರಿನಲ್ಲಿ ಪ್ರಯಾಣ ಮಾಡುವುದಕ್ಕೂ ಮೊದಲು ಎಲ್ಲೆಲ್ಲಿಗೆ ಹೋಗಿದ್ದರು? ಏನು ಮಾಡಿದ್ದರು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದರೆ ಇನ್ನೊಂದು ತಂಡ ಆಡಿ ಕಾರು ಇಷ್ಟೊಂದು ವೇಗವಾಗಿ ಹೋಗಲು ಕಾರಿನಲ್ಲೇ ಯಾವುದಾದರೂ ತಾಂತ್ರಿಕ ದೋಷ ಇತ್ತೆ ಎಂಬುದರ ಬಗ್ಗೆ ತನಿಖೆ ಆರಂಭಿಸಿದೆ.
ಈ ತನಿಖೆಯ ವೇಳೆ ನೀರಿನ ಬಾಟಲ್ ಸಿಕ್ಕಿದೆ. ನೀರಿನ ಬಾಟಲ್ ಕಾರಿನಲ್ಲಿ ಇರುವುದು ಸಾಮಾನ್ಯ. ಆದರೆ ಇಲ್ಲಿ ನೀರಿನ ಬಾಟಲ್ ಈ ಎಲ್ಲಿ ಸಿಕ್ಕಿದೆ ಎನ್ನುವುದು ಮುಖ್ಯವಾಗುತ್ತದೆ. ಈ ಪ್ರಕರಣದಲ್ಲಿ ಕಾಲಿನ ಭಾಗದಲ್ಲಿರುವ ಬ್ರೇಕ್ ಲಿವರ್ ಕೆಳಗಡೆ ವಾಟರ್ ಬಾಟಲ್ ಬಿದ್ದಿತ್ತು. ಇದರಿಂದಾಗಿ ಓವರ್ ಸ್ಪೀಡ್‍ನಲ್ಲಿದ್ದ ಕಾರನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಇದ್ದಿರಬಹುದು ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ : ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಶಿತಾ, ಬಿಂದು
ನೀರಿನ ಬಾಟಲ್ ಪೂರ್ಣವಾಗಿ ಭರ್ತಿಯಾಗಿದ್ದರೆ ಬ್ರೇಕ್ ಹಾಕಲು ಸಾಧ್ಯವಾಗುವುದೇ ಇರುವುದಿಲ್ಲ. ಹೀಗಾಗಿ ಆಡಿ ಕಾರು ನಿಯಂತ್ರಣಕ್ಕೆ ಸಿಗದೇ ಮಿತಿ ಮೀರಿದ ವೇಗದಲ್ಲಿ ಸಂಚರಿಸಿ ಈ ದುರ್ಘಟನೆ ಸಂಭವಿಸಿರುವ ಸಾಧ್ಯತೆಯಿದೆ.
ಬೆಂಗಳೂರು: ಕಾರು ಗುದ್ದಿದ ರಭಸಕ್ಕೆ ಹಿಂದುಗಡೆ ಮಧ್ಯಭಾಗದಲ್ಲಿ ಕುಳಿತಿದ್ದ ಯುವತಿಯ ತಲೆ ಮುಂಭಾಗದ ಗ್ಲಾಸಿಗೆ ಬಡಿದು ಸಿಕ್ಕಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ತಡರಾತ್ರಿ 1:30ರ ವೇಳೆಗೆ ಕೋರಮಂಗಲ ಮಂಗಳ ಕಲ್ಯಾಣ ಮಂಟಪದಲ್ಲಿ 7 ಮಂದಿಯನ್ನು ಬಲಿ ತೆಗೆದುಕೊಂಡ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೇಗವಾಗಿ ಬಂದ ಕಾರು ಫುಟ್‍ಪಾತ್ ಹತ್ತಿ ಪಕ್ಕದ ಕಟ್ಟಡದ ಕಾಂಪೌಂಡಿಗೆ ಬಡಿದು ನಂತರ ವಿದ್ಯುತ್ ಕಂಬಕ್ಕೆ ಗುದ್ದಿ ಹಿಂದಕ್ಕೆ ಬಂದಿದೆ. ಅಪಘಾತದ ರಭಸಕ್ಕೆ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಡಿ ಕಾರಿನ ಮುಂಭಾಗ ಸಂಪೂರ್ಣ ಅಪ್ಪಚ್ಚಿಯಾಗಿದೆ. ಪಬ್ಲಿಕ್ ಟಿವಿಗೆ ಪ್ರತ್ಯಕ್ಷದರ್ಶಿ ಪ್ರಭು ಅಪಘಾತದ ನಂತರ ಏನಾಯ್ತು ಎಂಬುದನ್ನು ವಿವರಿಸಿದ್ದಾರೆ.
ಪ್ರತ್ಯಕ್ಷದರ್ಶಿಯ ಮಾತು
ನಾನು ಓಲಾ ಕ್ಯಾಬ್ ಓಡಿಸುತ್ತಿದ್ದು ಕಾರು ಪಾರ್ಕ್ ಮಾಡಿ ರೂಮಲ್ಲಿ ನಿದ್ದೆ ಮಾಡುತ್ತಿದ್ದೆ. ರಾತ್ರಿ 1:34ಕ್ಕೆ ಜೋರಾಗಿ ಶಬ್ಧ ಕೇಳಿತು. ಕೂಡಲೇ ಎದ್ದು ನೋಡಿದಾಗ ಕಾರಿನಲ್ಲಿ ದಟ್ಟ ಹೊಗೆ ಬರುತ್ತಿತ್ತು. ಇದನ್ನೂ ಓದಿ : ಕೋರಮಂಗಲದಲ್ಲಿ ಭೀಕರ ಅಪಘಾತ – ಹೊಸೂರು ಶಾಸಕನ ಪುತ್ರ ಸಾವು
ತಕ್ಷಣ ರಸ್ತೆಯಲ್ಲಿ ಬರ್ತಿದ್ದ ಕೆಲವು ವಾಹನ ತಡೆದು ಕಾರಿನಲ್ಲಿ ಇದ್ದವರ ರಕ್ಷಣೆಗೆ ಯತ್ನಿಸಿದೆವು. ಈ ವೇಳೆ ಕೆಲವರು ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದರು.
ಗುದ್ದಿದ ರಭಸಕ್ಕೆ ಗಾಡಿಯ ಬಾಗಿಲು ತೆಗೆಯಲು ಸಾಧ್ಯವಾಗಿರಲಿಲ್ಲ. ಲಾಕ್ ಆಗಿತ್ತು. 20 ನಿಮಿಷ ಪ್ರಯತ್ನಪಟ್ಟ ಬಳಿಕ ಡೋರ್ ಓಪನ್ ಮಾಡಿದ್ದೆವು. ಈ ವೇಳೆ ಒಬ್ಬ ವ್ಯಕ್ತಿ ಕೆಮ್ಮುತ್ತಿದ್ದರು. ಉಳಿದವರಲ್ಲಿ ಯಾರಿಗೂ ಪ್ರಜ್ಞೆಯೇ ಇರಲಿಲ್ಲ.
ಸ್ಥಳಕ್ಕೆ ಬಂದ ಕೆಲವರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅದರಲ್ಲೂ ಹಿಂದುಗಡೆ ಮಧ್ಯಭಾಗದಲ್ಲಿ ಕುಳಿತಿದ್ದ ಯುವತಿ ತಲೆ ಮುಂಭಾಗದ ಗ್ಲಾಸಿಗೆ ಬಡಿದು ಸಿಕ್ಕಿಕೊಂಡಿತ್ತು. ಕಾರಿನಲ್ಲಿದ್ದವರು ನೈಟ್ ಡ್ರೆಸ್ ಧರಿಸಿದ್ದರು ಮತ್ತು ಅವರ ಕೈ ಕಾಲು ಕಟ್ ಆಗಿತ್ತು. ವಿಪರೀತ ರಕ್ತ ಸುರಿಯುತ್ತಿತ್ತು. ಎಂದು ಘಟನೆಯನ್ನು ವಿವರಿಸಿದರು. ಇದನ್ನೂ ಓದಿ: ಭೀಕರ ಅಪಘಾತವಾದರೂ ಆಡಿ ಕಾರಿನ ಏರ್ ಬ್ಯಾಗ್ ಓಪನ್ ಆಗಿಲ್ಲ ಯಾಕೆ?
ಈ ಅಪಘಾತದ ಬಗ್ಗೆ ಕ್ಯಾಬ್ ಚಾಲಕ ಸತೀಶ್ ದೂರು ನೀಡಿದ ಹಿನ್ನೆಲೆಯಲ್ಲಿ ಆಡುಗೋಡಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಕೋರಮಂಗಲದಲ್ಲಿ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತಕ್ಕೆ 7 ಮಂದಿಯ ಸಾವನ್ನಪ್ಪಿದ್ದು ಆಡಿ ಕಾರಿನ ಏರ್ ಬ್ಯಾಗ್ ಯಾಕೆ ತರೆಯಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ರಭಸಕ್ಕೆ ಆಡಿ ಕ್ಯೂ 3 ಕಾರು ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಗುದ್ದಿದ ರಭಸಕ್ಕೆ ಏರ್ ಬ್ಯಾಗ್ ಓಪನ್ ಆಗಬೇಕಿತ್ತು. ಆದರೆ ಈ ಅಪಘಾತದ ವೇಳೆ ಏರ್ ಬ್ಯಾಗ್ ಓಪನ್ ಆಗಿಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇದನ್ನೂ ಓದಿ : ಕೋರಮಂಗಲದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 7 ಮಂದಿ ಬಲಿ
ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಪ್ರತಿಕ್ರಿಯಿಸಿ, ಆಡಿ ಕಾರು ನೇರವಾಗಿ ಫುಟ್ ಪಾತ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ನಜ್ಜುಗುಜ್ಜಾಗಿದೆ. ಯಾರು ಕೂಡ ಸೀಟ್ ಬೆಲ್ಟ್ ಹಾಕದ ಹಿನ್ನೆಲೆಯಲ್ಲಿ ಏರ್ ಬ್ಯಾಗ್ ಓಪನ್ ಆಗದ ಕಾರಣ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ನಿರ್ಲಕ್ಷ್ಯದ ಚಾಲನೆ ಘಟನೆ ಕಾರಣವಾಗಿದೆ. ನಿರ್ಲಕ್ಷ್ಯದ ಚಾಲನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂಚಾರಿ ನಿಯಮ ಸಂಪೂರ್ಣವಾಗಿ ಮೇಲ್ನೋಟಕ್ಕೆ ಉಲ್ಲಂಘನೆ ಆಗಿದೆ ಎಂದು ಹೇಳಿದರು.
ಜರ್ಮನಿ ಮೂಲದ ಆಡಿ ಕಂಪನಿ ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತದೆ. ಸಂಚಾರದ ಸಮಯದಲ್ಲಿ ಸೀಟ್ ಬೆಲ್ಟ್ ಹಾಕುವುದು ಕಡ್ಡಾಯ ಮಾಡಲಾಗಿದೆ. ಸೀಟ್ ಬೆಲ್ಟ್ ಹಾಕದೇ ಸಂಚರಿಸಿದರೆ ದಂಡ ವಿಧಿಸಲಾಗುತ್ತದೆ.
ಬೆಂಗಳೂರು: ಕೋರಮಂಗಲದ ಮಂಗಳ ಕಲ್ಯಾಣಮಂಟಪದ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 7 ಮಂದಿ ಮೃತಪಟ್ಟಿದ್ದಾರೆ.
ಫುಟ್ ಪಾತ್ ಮೇಲಿದ್ದ ವಿದ್ಯುತ್ ಕಂಬಕ್ಕೆ ಆಡಿ ಕ್ಯೂ 3 ಕಾರು ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಲ್ಕು ಪುರುಷರು, ಮೂವರು ಮಹಿಳೆಯರು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ.
ರಾತ್ರಿ 1:30ರ ಸುಮಾರಿಗೆ ಈ ಘಟನೆ ನಡೆದಿದ್ದು ಕರುಣಾಸಾಗರ, ಬಿಂದು, ಇಶಿತಾ, ಡಾ.ಧನುಶಾ, ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಮೃತಪಟ್ಟಿದ್ದಾರೆ. ಮೃತರೆಲ್ಲರೂ 20-30ರ ವಯೋಮಾನದವರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ವಿದ್ಯುತ್ ಬಿಲ್ ಕೇಳಿದಕ್ಕೆ ಕಲೆಕ್ಟರ್‌ಗೆ ಹಿಗ್ಗಾಮುಗ್ಗಾ ಥಳಿಸಿದ ತಂದೆ ಮಗ
ಅಕ್ಷಯ್ ಗೋಯಲ್ ಕೇರಳ, ಉತ್ಸವ್ ಹರ್ಯಾಣ, ರೋಹಿತ್ ಹುಬ್ಬಳ್ಳಿ, ಕರುಣಾ ಸಾಗರ್ ಹೊಸೂರು ಮೂಲದವರಾಗಿದ್ದಾರೆ. ಕರುಣಾಸಾಗರ, ಬಿಂದು ದಂಪತಿಯಾಗಿದ್ದರು. ಕಾರಿನ ಮುಂಬದಿ ಸೀಟಿನಲ್ಲಿ ಮೂವರು ಕುಳಿತಿದ್ದರೆ ಹಿಂಬದಿ ನಾಲ್ವರು ಕುಳಿತಿದ್ದರು. ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ : ಯುವತಿಗೆ ಮದುವೆ ನಿಶ್ಚಯ- ಕತ್ತು ಕೊಯ್ದ ಪಾಗಲ್ ಪ್ರೇಮಿ
ಅಪಘಾತಕ್ಕೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ವೇಗದ ಚಾಲನೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಮದ್ಯ ಸೇವಿಸಿ ಚಾಲನೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.