Tag: ಆಡಿಯೋ

  • ಭಾರೀ ಮೊತ್ತಕ್ಕೆ ‘F0R REGN’  ಚಿತ್ರದ ಆಡಿಯೋ ಹಕ್ಕು ಸೇಲ್

    ಭಾರೀ ಮೊತ್ತಕ್ಕೆ ‘F0R REGN’ ಚಿತ್ರದ ಆಡಿಯೋ ಹಕ್ಕು ಸೇಲ್

    ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿಯಾಗಿ ನಟಿಸಿರುವ  “F0R REGN”. (ಫಾರ್ ರಿಜಿಸ್ಟರೇಷನ್) ಚಿತ್ರದ ಆಡಿಯೋ ಹಕ್ಕನ್ನು ಪ್ರತಿಷ್ಟಿತ ಜಂಕಾರ್ ಮ್ಯೂಸಿಕ್ ಸಂಸ್ಥೆ ಭಾರೀ ಮೊತ್ತ‌ ನೀಡಿ ಖರೀದಿಸಿದೆ. ಈ ಚಿತ್ರದಲ್ಲಿ ಆರು ಹಾಡುಗಳಿದ್ದು,   ಬಹದ್ದೂರ್ ಚೇತನ್ ಕುಮಾರ್, ಕವಿರಾಜ್ ಹಾಗೂ ನಾಗಾರ್ಜುನ ಶರ್ಮ ಬರೆದಿದ್ದಾರೆ. ವಿಜಯ್ ಪ್ರಕಾಶ್, ಚಂದನ್ ಶೆಟ್ಟಿ ಹಾಗೂ ವಾಸುಕಿ ವೈಭವ್ ಹಾಡಿದ್ದಾರೆ. ಆರ್.ಕೆ.ಹರೀಶ್ ಈ ಚಿತ್ರದ ಸಂಗೀತ ನಿರ್ದೇಶಕರು. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರಬಾಕಿಯಿದ್ದು, ಉಳಿದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಮಾತಿನ ಜೋಡಣೆ ನಡೆಯುತ್ತಿದೆ. ಬೆಂಗಳೂರು, ಉಡುಪಿ, ಮಂಗಳೂರು ಹಾಗೂ ಸಕಲೇಶಪುರದಲ್ಲಿ ಚಿತ್ರೀಕರಣ ನಡೆದಿದೆ. ” ದಿಯಾ” ಹಾಗೂ “ಲವ್ ಮಾಕ್ಟೇಲ್” ಚಿತ್ರಗಳ ಮೂಲಕ ಸಿನಿರಸಿಕರ ಮನಗೆದ್ದಿರುವ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಜೋಡಿಯ ಈ ಚಿತ್ರದ  ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯಿದೆ.  ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ನಿಶ್ಚಲ್ ಫಿಲಂಸ್ ಮೂಲಕ  ಎನ್ .ನವೀನ್ ರಾವ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.  ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ.  ಅಭಿಷೇಕ್ ಕಲ್ಲತ್ತಿ- ಅಭಿಷೇಕ್ ಕಾಸರಗೋಡು  ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿದೆ.

    Live Tv
    [brid partner=56869869 player=32851 video=960834 autoplay=true]

  • ಮುಕ್ತ ವಿವಿ ಕುಲಪತಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ- ಆಡಿಯೋ ರಿಲೀಸ್ ಮಾಡಿದ್ದಕ್ಕೆ ಹಲ್ಲೆ ಯತ್ನ

    ಮುಕ್ತ ವಿವಿ ಕುಲಪತಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ- ಆಡಿಯೋ ರಿಲೀಸ್ ಮಾಡಿದ್ದಕ್ಕೆ ಹಲ್ಲೆ ಯತ್ನ

    ಮೈಸೂರು: ಶಿಕ್ಷಣದಿಂದ ವಂಚಿತರಾದವರಿಗೆ ದೂರ ಶಿಕ್ಷಣ (Education) ನೀಡುವ ಸಲುವಾಗಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವನ್ನ ಸ್ಥಾಪನೆ ಮಾಡಲಾಗಿದೆ. ಆದರೆ ಮುಕ್ತ ವಿಶ್ವವಿದ್ಯಾಲಯ (Karnataka State Open University) ಶಿಕ್ಷಣಕ್ಕಿಂತ ಹೆಚ್ಚಾಗಿ ಹಗರಣಗಳಲ್ಲೇ ಸದ್ದು ಮಾಡಿದೆ. ಇದೀಗ ಮುಕ್ತ ವಿವಿಯ ಕುಲಪತಿ (Vice Chancellor) ಗಳ ವಿರುದ್ದವೇ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.

    ಮೈಸೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಕೆ ಮಹದೇವ್ ಕುಲಪತಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಇಂದು ದಾಖಲೆಗಳನ್ನ ಬಿಡುಗಡೆ ಮಾಡಲು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಡಾ.ಕೆ.ಮಹದೇವ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಮಂಡ್ಯದ ರೀಜಿನಲ್ ಡೈರೆಕ್ಟರ್ ಸುಧಾಕರ್ ಹೊಸಳ್ಳಿ ಎಂಬವರು ಹಲ್ಲೆಗೆ ಯತ್ನಿಸಿದ್ದು ಈ ಕುರಿತು ದೂರು ದಾಖಲಾಗಿದೆ.

    ಮುಕ್ತ ವಿವಿಯ ಕುಲಪತಿ ಪ್ರೊ.ವಿದ್ಯಾಶಂಕರ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ. ರಾತ್ರಿಪೂರ್ತಿ ಕರೆ ಮಾಡಿ ಕಿರುಕುಳ ನೀಡ್ತಿದ್ದಾರೆ. ಮೊಬೈಲ್‍ಗೆ ರೀಚಾರ್ಜ್ ಮಾಡಿಸಿ, ಹಣ (Money) ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದೆಲ್ಲವೂ ಆಕೆಯ ಗಂಡನಿಗೆ ಗೊತ್ತಾಗಿದೆ. ಮಹಿಳೆಯ ಗಂಡ ಮತ್ತು ಕುಲಪತಿ ಮಾತನಾಡಿರುವ ಆಡಿಯೋವನ್ನು ನಾನು ಬಿಡುಗಡೆ ಮಾಡಿದ್ದೇನೆ. ಇದನ್ನು ತಡೆಯುವ ಉದ್ದೇಶದಿಂದ ಕೆಎಸ್‍ಒಯು ಮಂಡ್ಯ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಸುಧಾಕರ್ ಹೊಸಳ್ಳಿ ಸೇರಿ ಮತ್ತಿಬ್ಬರು ಪ್ರಯತ್ನ ಮಾಡಿದ್ದಾರೆ ಎಂದು ಮೈಸೂರಿನ ಕೆ.ಆರ್.ಠಾಣೆ (K.R Police Station) ಯಲ್ಲಿ ಕೆ.ಮಹದೇವ್ ದೂರು ನೀಡಿದ್ದಾರೆ.

    ಹಲ್ಲೆಗೆ ಯತ್ನಿಸಿರೋ ಡಾ.ಸುಧಾಕರ್ ಹೊಸಳ್ಳಿ ದಾವಣಗೆರೆ (Davanagere) ಯ ರೀಜನಲ್ ಸೆಂಟರ್‍ನಲ್ಲಿದ್ದಾಗಲೇ ಸಸ್ಪೆಂಡ್ ಆಗಿದ್ದ. ಅವನನ್ನ ಡಾ.ವಿದ್ಯಾಶಂಕರ್ ಮಂಡ್ಯಕ್ಕೆ ವರ್ಗಾವಣೆ ಮಾಡಿದ್ದಾನೆ. ಹಾಗಾಗಿ ವಿದ್ಯಾಶಂಕರ್ ಕುಮ್ಮಕ್ಕಿನಿಂದ ಸುಧಾಕರ್ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಮುಕ್ತ ವಿಶ್ವವಿದ್ಯಾಲಯ ಚನ್ನಾಗಿ ನಡೆಯುತ್ತಿದೆ. ಆದರೆ ಅದನ್ನು ನಡೆಸುವ ಕುಲಪತಿ ಸರಿ ಇಲ್ಲ. ಅವನ ವಿರುದ್ಧದ ಹೋರಾಟವೂ ನಿಲ್ಲುವುದಿಲ್ಲ ಎಂದು ಡಾ.ಕೆ.ಮಹದೇವ್ ತಿಳಿಸಿದ್ರು.

    ಹಿಂದೆ ಇದೇ ಮುಕ್ತ ವಿವಿಯಲ್ಲಿ ನಡೆದ ಮಾಸ್ಕ್ ಕಾರ್ಡ್ (Marks Card) ಹಗರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಕುಲಪತಿಗಳ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿರೋದು ಮುಕ್ತ ವಿವಿಗೆ ಮತ್ತೊಂದು ಕಪ್ಪು ಚುಕ್ಕಿಯಾಗಿದೆ. ಇದನ್ನೂ ಓದಿ: ಮದುವೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಜನ- ಊಟ ಬೇಕಾದ್ರೆ ಆಧಾರ್ ತೋರಿಸಿ ಎಂದ ವಧು ಕಡೆಯವರು

    Live Tv
    [brid partner=56869869 player=32851 video=960834 autoplay=true]

  • ಪೋಷಕರಿಂದಲೇ ನನಗೆ ಸಾವು – ಹತ್ಯೆಗೂ ಮುನ್ನ ಪೊಲೀಸರಿಗೆ ಬರೆದ ಪತ್ರ ಔಟ್

    ಪೋಷಕರಿಂದಲೇ ನನಗೆ ಸಾವು – ಹತ್ಯೆಗೂ ಮುನ್ನ ಪೊಲೀಸರಿಗೆ ಬರೆದ ಪತ್ರ ಔಟ್

    ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದ್ದ ಮರ್ಯಾದ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಯುವತಿಗೆ ತನ್ನ ಸಾವು ಯಾರಿಂದ ಬರುತ್ತದೆ ಎಂಬ ವಿಚಾರ ಮೊದಲೇ ತಿಳಿದುಬಂದಿದ್ದು, ತನ್ನ ಸಾವಿಗೆ ಕಾರಣ ಯಾರೆಂದು ಬಹಿರಂಗ ಪಡಿಸಿರುವ ಆಡಿಯೋ ಲಭ್ಯವಾಗಿದೆ.

    ಹೌದು, ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಅಪ್ರಾಪ್ತ ಮಗಳನ್ನು ತಂದೆ ಮತ್ತು ತಾಯಿ ಇಬ್ಬರು ಸೇರಿ ಕೊಲೆ ಮಾಡಿದ್ದರು. ದ್ವಿತೀಯ ಪಿಯು ವಿದ್ಯಾರ್ಥಿನಿ ಶಾಲಿನಿ (17) ಮಂಜುನಾಥ್ ಅವರನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದು ತಂದೆ ಸುರೇಶ್ ಹಾಗೂ ತಾಯಿ ಬೇಬಿ ಮಗಳನ್ನು ಹತ್ಯೆಗೈದಿದ್ದರು. ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ಪೋಷಕರು

    ಇದೀಗ ಶಾಲಿನಿ ಸಾಯುವ ಮುನ್ನ ತನ್ನ ಪ್ರಿಯಕರನೊಂದಿಗೆ ಮಾತನಾಡಿರುವ ಆಡಿಯೋ ಪೊಲೀಸರಿಗೆ ಲಭ್ಯವಾಗಿದ್ದು, ನಾನೇನಾದರೂ ಸತ್ತರೆ ಅದಕ್ಕೆ ನಮ್ಮ ಅಪ್ಪ ಅಮ್ಮನೇ ಕಾರಣ. ನನ್ನನ್ನ ಕಿಡ್ನಾಪ್ ಮಾಡಿಸುವ ಪ್ಲ್ಯಾನ್ ಮಾಡಿದ್ದಾರೆ. ಬಾಲ ಮಂದಿರದಿಂದ ನೀನು ನಿನ್ನಷ್ಟದ ಹಾಗೇ ಇರು ಎಂದು ಕರೆದುಕೊಂಡು ಬಂದರು. ಆದರೆ ಪಾಂಡವಪುರದಲ್ಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ ಎಂದು ಈ ಕುರಿತಂತೆ ಪಿರಿಯಾಪಟ್ಟಣ ಪೊಲೀಸರಿಗೆ ಮೂರು ಪುಟಗಳ ಸುದೀರ್ಘ ಪತ್ರವನ್ನು ಯುವತಿ ಬರೆದಿದ್ದಾಳೆ. ಅಲ್ಲದೇ ತಾನು ಮಾತನಾಡಿರುವುದನ್ನು ರೆಕಾರ್ಡ್ ಮಾಡಿ ಪಿರಿಯಾಪಟ್ಟಣ ಪೊಲೀಸರಿಗೆ ಕೊಡುವಂತೆ ಪ್ರಿಯಕರ ಮಂಜುನಾಥ್‍ಗೂ ಕೂಡ ತಿಳಿಸಿದ್ದಾಳೆ. ಇದನ್ನೂ ಓದಿ: 105 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಿಸಿ ಗಿನ್ನಿಸ್ ದಾಖಲೆ ಬರೆದ NHAI

  • ದುಡ್ಡು ಕೊಟ್ರೆ ಟ್ರೈನಿಂಗ್‌ ಇಲ್ಲದೇ ಸಿಗುತ್ತೆ ಬ್ಯೂಟಿಪಾರ್ಲರ್ ಸರ್ಟಿಫಿಕೇಟ್..!

    ದುಡ್ಡು ಕೊಟ್ರೆ ಟ್ರೈನಿಂಗ್‌ ಇಲ್ಲದೇ ಸಿಗುತ್ತೆ ಬ್ಯೂಟಿಪಾರ್ಲರ್ ಸರ್ಟಿಫಿಕೇಟ್..!

    ಬೆಂಗಳೂರು: ಬ್ಯೂಟಿ ಪಾರ್ಲರ್‌ಗೆ ಹೆಣ್ಣುಮಕ್ಕಳು ಹೋಗೋದು ಕಾಮನ್. ಕೆಲವರಂತೂ ತಿಂಗಳಿಗೆ ಒಂದು ಬಾರಿಯಾದ್ರೂ ಹೋಗೇ ಹೋಗ್ತಾರೆ. ಆದರೆ ಈಗ ಶಾಕಿಂಗ್ ವಿಷಯ ಬಯಲಾಗಿದೆ.

    ಬ್ಯೂಟಿಷಿಯನ್ಸ್ ಗಳು ನೋಂದಾಯಿತ ಬ್ಯೂಟಿಪಾರ್ಲರ್ ನಲ್ಲಿ ವರ್ಷಗಟ್ಟಲೇ ಟ್ರೈನಿಂಗ್‌ ಮಾಡಿ ಪ್ರಾಕ್ಟಿಕಲ್ ತರಬೇತಿಯನ್ನೂ ಪಡೆದುಕೊಂಡು ಅದಾದ ಬಳಿಕ ಅವರಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಆದರೀಗ ನೋಂದಾಯಿತ ಪಾರ್ಲರ್ ಅಸೋಸಿಯೇಷನ್ ಹೆಸರಿನಲ್ಲಿಯೇ 10 ಸಾವಿರ ದುಡ್ಡು ಕೊಟ್ರೇ ಯಾರಿಗೆ ಬೇಕಾದ್ರೂ, ಎಷ್ಟು ಬೇಕಾದ್ರೂ ಪಟಾಫಟ್ ಅಂತಾ ಟ್ರೈನಿಂಗ್‌ ಕೇಳದೇ ಸರ್ಟಿಫಿಕೇಟ್ ಕೊಡುವ ಏಜೆಂಟರು ಹುಟ್ಟುಕೊಂಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಇದನ್ನೂ ಓದಿ: ಹನುಮನ ಜನ್ಮಸ್ಥಳಕ್ಕಾಗಿ ನಿಲ್ಲದ ರಾಜ್ಯಗಳ ಕ್ಯಾತೆ – ಹನುಮಂತ ಹುಟ್ಟಿದ್ದು ಗೋವಾದಲ್ಲಿ ಎಂದ ಶ್ರೀನಿವಾಸ್ ಖಲಾಪ್

    ಸ್ವತಃ ಈ ಆರೋಪ ಮಾಡ್ತಾ ಇರೋದು ಕರ್ನಾಟಕ ಬ್ಯೂಟಿ ಪಾರ್ಲರ್ ಅಸೋಸಿಯೇಷನ್. ಇವರದ್ದೇ ಸಂಸ್ಥೆಯ ಹೆಸರು ಬಳಸಿಕೊಂಡು ಸರ್ಟಿಫಿಕೇಟ್ ಮಾಡಿ ಕೆಲ ಏಜೆಂಟ್‌ರು ಮಾರಾಟ ಮಾಡುತ್ತಾ ಇದ್ದಾರೆ ಎಂದು ಸಂಘಟನೆ ಆರೋಪಿಸಿದೆ. ಈ ಸಂಬಂಧ ಮಾತನಾಡಿರುವ ಆಡಿಯೋ ಸಹ ಲೀಕ್ ಆಗಿದೆ. ಇದನ್ನೂ ಓದಿ: ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಸೇವೆ – ಷರತ್ತು ವಿಧಿಸಿ ಆರೋಪಿಗೆ ಜಾಮೀನು

    ಈ ರೀತಿ ಬೇಕಾಬಿಟ್ಟಿ ದುಡ್ಡಿಗೆ ಸರ್ಟಿಫಿಕೇಟ್ ಮಾರಾಟ ಮಾಡೋದ್ರಿಂದ ಸೈಡ್‌ಎಫೆಕ್ಟ್ ಉಂಟಾಗುತ್ತದೆ. ಸಾಮಾನ್ಯವಾಗಿ ಆಯಾಯ ಚರ್ಮಕ್ಕೆ ಹೊಂದುವ ಪ್ರಾಡೆಕ್ಟ್ ಬಳಕೆ ಮಾಡಬೇಕು. ಕೆಲವು ಬಿಪಿ ಶುಗರ್ ಸಮಸ್ಯೆ ಇರೋರಿಗೆ ಕೆಲ ಪ್ರಾಡೆಕ್ಟ್ ಅಲರ್ಜಿ ಇರುತ್ತೆ. ಇದೆಲ್ಲವನ್ನು ತರಬೇತಿ ಪಡೆದುಕೊಂಡವರಿಗೆ ಅಷ್ಟೇ ಅರ್ಥವಾಗುತ್ತದೆ. ಆದರೆ ಹೀಗೆ ಟ್ರೈನಿಂಗ್‌ ಇಲ್ಲದೇ ಸರ್ಟಿಫಿಕೇಟ್ ಕೊಡುವ ದಂಧೆಯಿಂದ ನಿಜವಾಗಿಯೂ ತರಬೇತಿ ಪಡೆದವರಿಗೆ ಸಮಸ್ಯೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

    ಆಡಿಯೋ ನಲ್ಲಿ ಏನಿದೆ?

    • ಏಜೆಂಟ್ – ಅದು ಮಾಡಿಸಿರೋದು ಏಜೆಂಟ್
      ಅನಿತಾ – ಯಾರು?
    • ಏಜೆಂಟ್ – ಅದಕ್ಕೆ ಒಬ್ರು ಏಜೆಂಟ್ ರ‍್ತಾರೆ ಅವ್ರು ಮಾಡಿಸೋದು
      ಅನಿತಾ – ಹೋ ಅದಕ್ಕೆ ಏಜೆಂಟ್ ಬೇರೆ ರ‍್ತಾರಾ?
    • ಅನಿತಾ – ನಮ್ಗೆ ಬೇಕು ಅಂದ್ರೆ?
      ಏಜೆಂಟ್ – ಅದನ್ನು ಹತ್ತುಸಾವಿರ ಕೊಟ್ಟುಮಾಡಿಸಿರೋದು
    • ಏಜೆಂಟ್ – ನಿಮ್ಗೆ ಬೇಕಾದ್ರೇ ಹೇಳಿ ಮಾಡಿಸಿಕೊಡ್ತೀನಿ ನಾನು
      ಅನಿತಾ – ಹಂಗಾದ್ರೇ ಬೇಕು 2 ಸರ್ಟಿಫಿಕೇಟ್
    • ಏಜೆಂಟ್ – 2 ಯಾಕೆ 10 ಕೊಡ್ತೀನಿ ಬೇಕಾದ್ರೇ

  • ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ – 2 ಬಾರಿ ಅಬಾರ್ಷನ್ ಮಾಡಿಸಿದ್ದ ರೇಖಾ

    ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ – 2 ಬಾರಿ ಅಬಾರ್ಷನ್ ಮಾಡಿಸಿದ್ದ ರೇಖಾ

    ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿಂತೆ ಸುಮಾ-ರೇಖಾ ನಡುವಿನ ಸಂಭಾಷಣೆಯ ಮತ್ತೊಂದು ಆಡಿಯೋ ವೈರಲ್ ಆಗುತ್ತಿದೆ.

    ಹೌದು, ಇಷ್ಟು ದಿನ ಸುಮಾ-ರೇಖಾ ಹಲವಾರು ವಿಚಾರಗಳಿಗೆ ಜಗಳ ಆಡಿದ್ದ ಆಡಿಯೋ ವೈರಲ್ ಆಗಿತ್ತು. ಆದರೆ ಇದೀಗ ರೇಖಾ ಅಬಾರ್ಷನ್ ಮಾಡಿಸಿಕೊಂಡಿರುವ ವಿಚಾರವಾಗಿ ಇಬ್ಬರು ಮಾತನಾಡಿರುವ ಆಡಿಯೋ ರಿವೀಲ್ ಆಗಿದೆ. ಇದನ್ನೂ ಓದಿ: ಅನಂತ ರಾಜು ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್- ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ ರೇಖಾ..?

    ಅನಂತ ರಾಜು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಸತ್ಯ ಹೊರಬರುತ್ತಿದೆ. ರೇಖಾ ತಾಯಿಯಾಗಿರುವುದರ ಬಗ್ಗೆ ಸುಮಾ-ರೇಖಾ ಮಾತನಾಡಿದ್ದಾರೆ. ಆಡಿಯೋದಲ್ಲಿ ಎರಡು ಬಾರಿ ಅಬಾರ್ಷನ್ ಮಾಡಿಕೊಂಡಿರುವುದಾಗಿ ರೇಖಾ ಹೇಳಿದ್ದಾರೆ. ಇದನ್ನೂ ಓದಿ: ಚಂದ್ರಶೇಖರ ಕಂಬಾರರ ಹೆಸರಿನಲ್ಲಿ ವಂಚನೆಗೆ ಯತ್ನ: ದೂರು ದಾಖಲು

    ತಾಯಿಯಾಗಿರುವ ವಿಚಾರ ಅನಂತುಗೆ ಹೇಳಿದ್ಯಾ ಇಲ್ಲವಾ ಅಂತಾ ರೇಖಾಗೆ ಸುಮಾ ಕೇಳಿದಾಗ, ವಾಟ್ಸಪ್‍ನಲ್ಲಿ ಅನಂತುಗೆ ಹೇಳಿದ್ದೆ ಅಂತ ರೇಖಾ ಕಣ್ಣೀರು ಹಾಕಿದ್ದಾರೆ. ಅದರಲ್ಲೂ ಎರಡು ಬಾರಿ ತಾಯಿಯಾಗಿದ್ದು, ಎರಡು ಬಾರಿಯೂ ಅಬಾರ್ಷನ್ ಮಾಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ

    ನನಗೆ ಈಗಾಗಲೇ ಎರಡು ಮಗು ಇದೆ. ಮತ್ತೊಂದು ಮಗು ಇದ್ದರೆ ಸಾಕುವುದಕ್ಕೆ ಕಷ್ಟ ಆಗುತ್ತದೆ. ನಾಳೆ ವಿನೋದ್‍ಗೆ ಗೊತ್ತಾದರೆ ತೊಂದರೆಯಾಗುತ್ತದೆ. ನನ್ನನ್ನು ನಂಬುವುದಾದರೆ ಮಗು ತೆಗೆಸು ಅಂತ ಅನಂತರಾಜು ಅಂದಿದ್ದರು. ಹೀಗಾಗಿ ಮಗು ಅಬಾರ್ಷನ್ ಮಾಡಿಸಿದ್ದೆ. ಎರಡು ಬಾರಿ ಅಬಾರ್ಷನ್ ಮಾಡಿಸಿದ್ದು ಅನಂತುಗೆ ಗೊತ್ತಿತ್ತು ಅಂತ ರೇಖಾ, ಸುಮಾಗೆ ತಿಳಿಸಿದ್ದಾರೆ.

  • PSI ನೇಮಕಾತಿಯ ಯಾವುದೇ ಬ್ಯಾಚ್‌ನಲ್ಲಿ ಅಕ್ರಮ ನಡೆದಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ

    PSI ನೇಮಕಾತಿಯ ಯಾವುದೇ ಬ್ಯಾಚ್‌ನಲ್ಲಿ ಅಕ್ರಮ ನಡೆದಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ

    ಬೆಂಗಳೂರು: ಪಿಎಸ್‌ಐ ನೇಮಕಾತಿಯ ಯಾವುದೇ ಬ್ಯಾಚ್‌ನಲ್ಲಿ ಅಕ್ರಮವಾಗಿದ್ದರೂ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    basavaraj bommai

    ಬೆಂಗಳೂರಿನಲ್ಲಿ ಆರ್.ಟಿ.ನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿರುವ ಆಡಿಯೋ ನಾನೂ ಕೇಳಿಲ್ಲ. ಆದರೆ, ಯಾವ ಮೆಟೀರಿಯಲ್ ಇದ್ದರೂ ತನಿಖೆಯಾಗುತ್ತದೆ. ಇಬ್ಬರ ನಡುವೆ ಮಾತುಕತೆಯಾಗಿದೆ. ಅವರಿಬ್ಬರು ಯಾರು? ಅವರ ಅರ್ಹತೆ ಏನೆಂಬುದು ತನಿಖೆಯಲ್ಲಿ ತಿಳಿಯುತ್ತದೆ. ಆಡಿಯೋವನ್ನೂ ತನಿಖೆಗೆ ಒಳಪಡಿಸಿ ಯಾರೇ ತಪ್ಪಿತಸ್ಥರಿದ್ದರೂ, ಯಾವುದೇ ಬ್ಯಾಚ್‌ನವರಾಗಿದ್ದರೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಶಾಂತಿ ದೃಷ್ಟಿಯಿಂದ ಬುಲ್ಡೋಜರ್ ಕ್ರಮ ಅವಶ್ಯ: ಮುತಾಲಿಕ್

    BASAVARJ BOMMAI (1)

    ಇದೇ ವೇಳೆ `ಕಳೆದ 15 ದಿನಗಳ ಹಿಂದೆ ಶಾಲೆಗಳಿಗೆ ಬಂದಿದ್ದ ಬಾಂಬ್ ಬೆದರಿಕೆ ಇ-ಮೇಲ್ ಸಿರಿಯಾ ಹಾಗೂ ಪಾಕಿಸ್ತಾನದಿಂದ ಬಂದಿದೆ’ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಇ-ಮೇಲ್ ಮೂಲವನ್ನು ಪತ್ತೆಹಚ್ಚಲಾಗುವುದು. ಈ ಕುರಿತು ಇ-ಮೇಲ್ ಮೂಲವನ್ನು ಪತ್ತೆಹಚ್ಚಲು ಪೊಲೀಸ್ ಆಯುಕ್ತರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಆದೇಶ ಕೈ ಸೇರುವ ಮುನ್ನವೇ ಯೂನಿಫಾರ್ಮ್‌ ಹಾಕ್ಕೊಂಡು ಬಿಲ್ಡಪ್‌

    ಇವೆಲ್ಲವೂ ಆಗಾಗ್ಗೆ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಗಳಾಗುತ್ತವೆ. ಕಳೆದ ವರ್ಷವೂ ಆಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇ-ಮೇಲ್ ಮೂಲವನ್ನು ಪತ್ತೆ ಹಚ್ಚಲಾಗುವುದು. ಯಾವ ದೇಶದಿಂದ ಬಂದಿದೆ ಎಂದು ಗೊತ್ತಾಗುತ್ತದೆ. ಕೆಲವು ಸಂದರ್ಭದಲ್ಲಿ ಆ ದೇಶದ ಅಧಿಕಾರಿಗಳಿಗೆ ತಿಳಿಸಿ, ಕೆಲವರನ್ನು ಬಂಧಿಸಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

  • ಯಾರೇ ಲಂಚ ಕೇಳಿದರೂ ಆಡಿಯೋ – ವೀಡಿಯೋ ನನಗೇ ಕಳುಹಿಸಿ: ಪಂಜಾಬ್ ಸಿಎಂ

    ಯಾರೇ ಲಂಚ ಕೇಳಿದರೂ ಆಡಿಯೋ – ವೀಡಿಯೋ ನನಗೇ ಕಳುಹಿಸಿ: ಪಂಜಾಬ್ ಸಿಎಂ

    ಚಂಡೀಗಡ: ಪಂಜಾಬ್‍ನ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ `ಭ್ರಷ್ಟಾಚಾರ ಮುಕ್ತ’ ಸಹಾಯವಾಣಿ ಪ್ರಾರಂಭಿಸುತ್ತಿದ್ದು, ಮಾರ್ಚ್ 23ರಂದು ಅನಾವರಣಗೊಳ್ಳಲಿದೆ.

    ಸ್ವಾತಂತ್ರ್ಯ ಹೋರಾಟಗಾರ ಭಗತ್‍ಸಿಂಗ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 23ರಂದು ಸಹಾಯವಾಣಿ ಪ್ರಾರಂಭಿಸಲಾಗುತ್ತದೆ ಎಂದೂ ಅವರು ಭರವಸೆ ನೀಡಿದ್ದಾರೆ. ಇದನ್ನೂ ಓದಿ:  ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

    `ಸಹಾಯವಾಣಿ ಸಂಖ್ಯೆಯು ನನ್ನ ವೈಯಕ್ತಿಕ ಸಂಪರ್ಕ ಸಂಖ್ಯೆಯಾಗಿದ್ದು, ಯಾರೇ ಲಂಚ ಕೇಳಿದರೂ ಅದರ ಆಡಿಯೋ, ವಿಡಿಯೋ ಅನ್ನು ಈ ಸಂಖ್ಯೆಗೆ ಕಳುಹಿಸಿ’ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

    ಯಾವುದೇ ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ಕೊಡಬೇಕು ಎನ್ನುವುದು ನನ್ನ ಉದ್ದೇಶವಲ್ಲ. ಶೇ.99 ಸರ್ಕಾರಿ ನೌಕರರು ಪ್ರಾಮಾಣಿಕರಾಗಿದ್ದಾರೆ. ಆದರೆ, ಶೇ.1 ರಷ್ಟು ನೌಕರರು ಭ್ರಷ್ಟರಾಗಿದ್ದಾರೆ. ಎಎಪ್ ನಿಂದ ಮಾತ್ರ ಈ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯ ಆದ್ದರಿಂದ ಈ ಸಹಾಯವಾಣಿ ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹ್ಯಾಪಿ ಬರ್ತ್ ಡೇ ಅಪ್ಪು : ದಕ್ಷಿಣದ ಸಿನಿತಾರೆಯರ ಭಾವುಕ ಸಂದೇಶ 

  • ಆಡಿಯೋ ಮತ್ತು  ಟ್ರೇಲರ್‌ನೊಂದಿಗೆ ಪ್ರೇಕ್ಷಕರೆದುರು ಬಂದ ‘ಗರುಡಾಕ್ಷ’ ಚಿತ್ರತಂಡ

    ಆಡಿಯೋ ಮತ್ತು ಟ್ರೇಲರ್‌ನೊಂದಿಗೆ ಪ್ರೇಕ್ಷಕರೆದುರು ಬಂದ ‘ಗರುಡಾಕ್ಷ’ ಚಿತ್ರತಂಡ

    ಸಿನಿಮಾರಂಗ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೂ ಪ್ರಯತ್ನಗಳು, ಅದೃಷ್ಟ ಪರೀಕ್ಷೆಗಳು, ಕನಸು ಕಾಣೋದು ಇದ್ಯಾವುದು ನಿಲ್ಲೋದಿಲ್ಲ. ಅಂತಹದ್ದೊಂದು ಸೆಳೆತದ ಶಕ್ತಿ ಈ ಬಣ್ಣದ ಲೋಕಕ್ಕಿದೆ. ಎಲ್ಲೋ ಮೂಲೆಯಲ್ಲಿದ್ದವರನ್ನು ಒಮ್ಮೆಯಾದ್ರು ಈ ಗಾಂಧೀನಗರ ಕೈಬೀಸಿ ಕರೆಯದೇ ಇರೋದಿಲ್ಲ. ಹೀಗೆ ಆಕರ್ಷಿತರಾಗಿ ಒಂದೊಳ್ಳೆ ಪ್ರಯತ್ನ ಹಾಗೂ ಕನಸಿನೊಂದಿಗೆ ಬಂದಿರುವ ಬಹುತೇಕ ಹೊಸ ಪ್ರತಿಭೆಗಳೇ ತುಂಬಿರುವ ಚಿತ್ರತಂಡವೇ ಗರುಡಾಕ್ಷ. ಶ್ರೀಧರ್ ವೈಷ್ಣವ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಗರುಡಾಕ್ಷ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಹಿಡಿದು ಪ್ರೇಕ್ಷಕರೆದುರು ಬಂದು ನಿಂತಿದೆ.

    ತೆರೆಗೆ ಬರಲು ಸಜ್ಜಾಗಿರುವ ಗರುಡಾಕ್ಷ ಚಿತ್ರತಂಡ ಚಿತ್ರದ ಟ್ರೇಲರ್ ಹಾಗೂ ಆಡಿಯೋವನ್ನು ಬಿಡುಗಡೆ ಮಾಡಿದೆ. ಟ್ರೇಲರ್ ನೋಡುಗರಿಗೆ ಚಿತ್ರತಂಡದ ಪರಿಶ್ರಮ ಎದ್ದು ಕಾಣುತ್ತೆ. ಚಿತ್ರದ ಹಾಡುಗಳು ಕೂಡ ಅಷ್ಟೇ ಭರವಸೆ ಮೂಡಿಸಿವೆ. ಪ್ರೀತಿ, ವಿಶ್ವಾಸ, ನಂಬಿಕೆ, ಸ್ವಾರ್ಥ, ಹಣ, ದುರಾಸೆ ಈ ಚಿತ್ರದ ಕಥಾವಸ್ತು. ಇದರ ಜೊತೆಗೆ ತಂದೆ ಮಗನ ಬಾಂಧವ್ಯದ ಎಳೆ ಹಾಗೂ ಥ್ರಿಲ್ಲಿಂಗ್ ಕಥಾನಕವೂ ಸಿನಿಮಾದಲ್ಲಿದೆ ಎನ್ನುತ್ತೆ ಚಿತ್ರತಂಡ. ಸಿನಿಮಾಗೆ ಸಂಬಂಧಿಸಿದ ಬಹುತೇಕ ಕೆಲಸ ಕಾರ್ಯಗಳು ಮುಗಿದಿದ್ದು, ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಚಾರ ಕಾರ್ಯಕ್ಕೆ ಆರಂಭ ನೀಡಿದೆ ಗರುಡಾಕ್ಷ ಚಿತ್ರತಂಡ.

    ಚೇತನ್ ಯದು ಚಿತ್ರದ ನಾಯಕ ನಟ. ಹಲವು ಧಾರಾವಾಹಿಗಳಲ್ಲಿ ಖಳನಟನಾಗಿ, ಸಹನಟ ಅಭಿನಯಿಸಿರುವ ಅನುಭವ ಇವರಿಗಿದೆ. ಆ ಅನುಭವವನ್ನೆಲ್ಲ ಒಟ್ಟುಗೂಡಿಸಿ ತೆರೆಯ ಮೇಲೆ ಚೊಚ್ಚಲ ಬಾರಿಗೆ ನಾಯಕ ನಟನಾಗಿ ಮಿಂಚಲು ಸಜ್ಜಾಗಿದ್ದಾರೆ ಚೇತನ್ ಯದು. ಇವರಿಗೆ ನಾಯಕಿಯಾಗಿ ರಕ್ಷಾ ತೆರೆ ಹಂಚಿಕೊಂಡಿದ್ದಾರೆ. ಸತ್ಯರಾಜ್, ರಫೀಕ್, ವಸಂತ ಕುಮಾರ್, ಕುಮುದಾ, ಪಲ್ಲವಿ, ಉಗ್ರಂ ರೆಡ್ಡಿ, ಕಲ್ಕಿ ಒಳಗೊಂಡಂತೆ ನವ ಕಲಾವಿದರ ದಂಡು ಚಿತ್ರದಲ್ಲಿದೆ. ಇದನ್ನೂ ಓದಿ: ಕರುನಾಡ ರತ್ನ ಅಪ್ಪು ದನಿಯಾಗಿದ್ದ ‘ಹರೀಶ ವಯಸ್ಸು 36’ ಚಿತ್ರದ ಹಾಡಿಗೆ ಸಿನಿರಸಿಕರ ಮೆಚ್ಚುಗೆ..!

    ಕ್ಷೀರಪಥ ಮೂವೀಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು ಎಸ್. ನರಸಿಂಹ ಮೂರ್ತಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀವತ್ಸ ಸಂಗೀತ ನಿರ್ದೇಶನ, ವೀರೇಶ್ ಛಾಯಾಗ್ರಹಣ ಚಿತ್ರಕ್ಕಿದೆ. ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಸದ್ಯದಲ್ಲೇ ಸಿನಿಮಾ ಬಿಡುಗಡೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ.

  • RRR ಆಡಿಯೋ ಖರೀದಿ -ಒಪ್ಪಂದಕ್ಕೆ ಸಹಿ ಹಾಕಿದ ಲಹರಿ ಸಂಸ್ಥೆ

    RRR ಆಡಿಯೋ ಖರೀದಿ -ಒಪ್ಪಂದಕ್ಕೆ ಸಹಿ ಹಾಕಿದ ಲಹರಿ ಸಂಸ್ಥೆ

    ಬೆಂಗಳೂರು: ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಬಹುನಿರೀಕ್ಷಿತ RRR ಚಿತ್ರದ ಆಡಿಯೋ ಪಡೆದುಕೊಂಡ ಒಪ್ಪಂದಕ್ಕೆ ಲಹರಿ ಸಂಸ್ಥೆ ಇಂದು ಸಹಿ ಹಾಕಿದೆ.

    ಕೆಲದಿನಗಳ ಹಿಂದೆ ಲಹರಿ ಸಂಸ್ಥೆ ಆರ್‍ಆರ್‍ಆರ್ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿತ್ತು. ಇದೀಗ ಲಹರಿ ಸಂಸ್ಥೆಯು ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ಆರ್‍ಆರ್‍ಆರ್ ಅಗ್ರಿಮೆಂಟ್ ಗೆ ಸೈನ್ ಮಾಡಿರುವ ಅಧಿಕೃತವಾಗಿ ಪತ್ರವನ್ನು ಪಡೆಯುವ ಮೂಲಕ ಹಕ್ಕನ್ನು ಪಡೆದುಕೊಂಡಿದೆ. ಆಗಸ್ಟ್ 1ರ ಬೆಳಗ್ಗೆ 11 ಗಂಟೆಗೆ ಆರ್‍ಆರ್‍ಆರ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ. ಇದನ್ನೂ ಓದಿ: RRR ಆಡಿಯೋ ರೈಟ್ಸ್ ಲಹರಿ ಪಾಲು

    ಲಹರಿ ಸಂಸ್ಥೆ ಹೈದರಾಬಾದ್‍ನಲ್ಲಿ ಲಿಖಿತವಾಗಿ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ನವೀನ್, ಕೀರವಾಣಿ ಜೊತೆ ಸಭೆಯಲ್ಲಿ ಭಾಗಿಯಾಗಿದ್ದರು. 28 ಕೋಟಿ ರೂ.ಗೆ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ ಎಂದು ತಿಳಿದು ಬಂದಿದೆ.

    ಆರ್‌ಆರ್‌ಆರ್‌ ಚಿತ್ರದ ಆಡಿಯೋ ಹಕ್ಕನ್ನು ಭಾರೀ ಮೊತ್ತಕ್ಕೆ ಖರೀದಿಸಲಾಗಿದೆ. ಒಟ್ಟು 5 ಭಾಷೆಗಳಲ್ಲಿ ಆರ್‌ಆರ್‌ಆರ್‌ ತೆರೆಕಾಣುತ್ತಿದ್ದು, ಐದೂ ಭಾಷೆಯ ಆಡಿಯೋ ಹಕ್ಕನ್ನು ಲಹರಿ ಹಾಗೂ ಟಿ ಸಿರೀಸ್ ತಮ್ಮ ಜೋಳಿಗೆಗೆ ಹಾಕಿಕೊಂಡಿವೆ. ಬಾಹುಬಲಿ ಚಿತ್ರದ ಆಡಿಯೋ ಹಕ್ಕನ್ನೂ ಇದೇ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿತ್ತು.  ಇದನ್ನೂ ಓದಿ: RRR ಸಿನಿಮಾದ ಒಂದು ಸಾಂಗ್ ಶೂಟ್‍ಗೆ ರಾಜಮೌಳಿ ಬೃಹತ್ ಪ್ಲಾನ್

    ಈಗಾಗಲೇ ಆರ್‌ಆರ್‌ಆರ್‌ ಸಿನಿಮಾದ ಚಿತ್ರೀಕರಣ ಕೊನೇಯ ಹಂತ ತಲುಪಿದ್ದು, ಇದೇ ಆಗಸ್ಟ್ 1 ರಂದು ವಿಶೇಷ ಹಾಡನ್ನು ಬಿಡುಗಡೆಗೊಳಿಸಲು ಚಿತ್ರ ತಂಡ ಸಿದ್ಧತೆ ನಡೆಸಿದೆ. ಇದರ ಮಧ್ಯೆಯೇ ಜುಲೈ 15ರಂದು ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಲು ಸಹ ತಯಾರಿ ನಡೆದಿದೆ. ಈ ಮೇಕಿಂಗ್ ವೀಡಿಯೋ ನಿಮ್ಮನ್ನು ಆರ್‍ಆರ್‍ಆರ್ ಪ್ರಪಂಚಕ್ಕೆ ಕೊಂಡೊಯ್ಯಲಿದ್ದು, ಈ ಮೂಲಕ ಚಿತ್ರವನ್ನು ಹೇಗೆ ನಿರ್ಮಿಸಲಾಗಿದೆ ಎಂಬುದರ ಝಲಕ್ ತೋರಿಸಲಾಗುತ್ತಿದೆ.

    ಹೀಗೆ ಆರ್‌ಆರ್‌ಆರ್‌ ಸಿನಿಮಾ ಕುರಿತು ಚಿತ್ರ ತಂಡ ಬ್ಯಾಕ್ ಟು ಬ್ಯಾಕ್ ಅಪ್‍ಡೇಟ್ ನೀಡುತ್ತಿದೆ. ಅಂದಹಾಗೆ ಬಹುನಿರೀಕ್ಷಿತ ಆರ್‍ಆರ್‍ಆರ್ ಸಿನಿಮಾ ಅಕ್ಟೋಬರ್ 13ರಂದು ವಿಶ್ವಾದ್ಯಂತ ತೆರೆಗಪ್ಪಳಿಸುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಹೀಗಾಗಿ ಅಭಿಮಾನಿಗಳು ಆರ್‍ಆರ್‍ಆರ್ ಅಪ್‍ಡೇಟ್ಸ್‍ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

  • ಚರ್ಚಾಸ್ಪದ ಧ್ವನಿಸುರುಳಿ ಒಂದು ಕುಚೋದ್ಯ: ಶ್ರೀನಿವಾಸ್ ಪೂಜಾರಿ

    ಚರ್ಚಾಸ್ಪದ ಧ್ವನಿಸುರುಳಿ ಒಂದು ಕುಚೋದ್ಯ: ಶ್ರೀನಿವಾಸ್ ಪೂಜಾರಿ

    ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿದ್ದಾರೆ ಎನ್ನಲಾಗುತ್ತಿರುವ ಚರ್ಚಾಸ್ಪದ ಧ್ವನಿ ಸುರುಳಿ ಒಂದು ಕುಚೋದ್ಯ, ಸುಳ್ಳು ಆಡಿಯೋ ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದ್ದಾರೆ.

    ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಕುಂದಾಪುರದಲ್ಲಿ ಪ್ರತಿಕ್ರಿಯೆ ನೀಡಿದ ಕೋಟ ಶ್ರೀನಿವಾಸ್ ಪೂಜಾರಿ ಅವರು, ನಳಿನ್ ಕುಮಾರ್ ಕಟೀಲ್ ಸಂಘಟನೆಯಿಂದ ಬಂದವರು. ಸಂಘಟನೆಯ ಸೂತ್ರವನ್ನು ತಿಳಿದಿರುವವರು. ರಾಜ್ಯಾಧ್ಯಕ್ಷ ಕಟೀಲ್ ಬಹಳ ಸೂಕ್ಷ್ಮಮತಿಗಳು. ನನಗೆ ಧ್ವನಿಸುರುಳಿ ಬಗ್ಗೆಯೇ ಸಂಶಯವಿದೆ. ಮೊದಲು ಆಡಿಯೋ ಬಗ್ಗೆ ತನಿಖೆಯಾಗಬೇಕು ಎಂದರು.

    ಸಂಪೂರ್ಣ ತನಿಖೆಗೆ ಮುಖ್ಯಮಂತ್ರಿಗಳಲ್ಲಿ ನಾನು ಆಗ್ರಹಿಸುತ್ತಿದ್ದೇನೆ. ನಳಿನ್ ಕುಮಾರ್ ಕಟೀಲ್ ಅವರ ಸ್ವರಭಾರ ಇದಲ್ಲ. ಹಾಗಾಗಿ ನಾನು ಧ್ವನಿಸುರುಳಿಯ ಬಗ್ಗೆ ನನಗೆ ಸಂಶಯವಿದೆ. ಮೊದಲು ತನಿಖೆಯಾಗಲಿ ಎಂದಿದ್ದಾರೆ.