Tag: ಆಡಿಯೋ

  • ಸಿಡಿ ಜಿದ್ದು ಬಿಡುವಂತೆ ಸಹೋದರರ ಉಪದೇಶ – ಆದ್ರೆ ದೆಹಲಿ ಅಂಗಳಕ್ಕೂ ಕೇಸ್ ಕೊಂಡೊಯ್ಯಲು ಮುಂದಾದ ಜಾರಕಿಹೊಳಿ

    ಸಿಡಿ ಜಿದ್ದು ಬಿಡುವಂತೆ ಸಹೋದರರ ಉಪದೇಶ – ಆದ್ರೆ ದೆಹಲಿ ಅಂಗಳಕ್ಕೂ ಕೇಸ್ ಕೊಂಡೊಯ್ಯಲು ಮುಂದಾದ ಜಾರಕಿಹೊಳಿ

    ಬೆಂಗಳೂರು: ರಮೇಶ್ ಜಾರಕಿಹೊಳಿ (Ramesh Jarkiholi) ಅವರಿಗೆ ಡಿಕೆ ಶಿವಕುಮಾರ್ (DK Shivakumar) ಮೇಲಿನ ಸಿಟ್ಟು ಹಾಗೂ ಸಿಡಿ (CD) ಜಿದ್ದು ತೀವ್ರಗೊಂಡಿದೆ. ಯಾರ ಮಾತೂ ಕೇಳದ ಸಾಹುಕಾರ್ ಸಿಡಿ ಕೇಸ್ ಸಿಬಿಐ ತನಿಖೆಗೆ ಕೊಡುವಂತೆ ಪಟ್ಟು ಮುಂದುವರಿಸಿದ್ದಾರೆ. ಈ ಚುನಾವಣೆಯೊಳಗೆ ಸಿಬಿಐಗೆ (CBI) ಕೇಸ್ ಕೊಡಿಸಲು ಹಠ ಹಿಡಿದು ಕೂತಿದ್ದಾರೆ. ಈ ಮೂಲಕ ಡಿಕೆಶಿ ಮೇಲೆ ಸೇಡು ತೀರಿಸಿಕೊಳ್ಳಲು ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ.

    ಇದೀಗ ಸಾಹುಕಾರ್ ವೇಗಕ್ಕೆ ಬ್ರೇಕ್ ಹಾಕಲು ಅವರ ಕುಟುಂಬ ಮುಂದಾಗಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡೆಗೆ ಅವರ ಸಹೋದರರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಸಾಹುಕಾರ್ ಧೋರಣೆ, ಹಠ ಒಪ್ಪದ ಜಾರಕಿಹೊಳಿ ಸಹೋದರರು, ಇಷ್ಟೊಂದು ದ್ವೇಷ ಬೇಡ, ಸರಿಯಲ್ಲ ಎಂದು ಕಿವಿ ಮಾತು ಹೇಳಿದ್ದಾರೆನ್ನಲಾಗಿದೆ.

    ನಿನ್ನ ಹಠದಿಂದ ಈಗಾಗಲೇ ಸಾಕಷ್ಟು ನಷ್ಟ ಆಗಿಹೋಗಿದೆ. ಈ 2 ವರ್ಷ ನಮ್ಮ ಕುಟುಂಬವೂ ಮುಜುಗರ ಅನುಭವಿಸಿದೆ. ಈಗ ಇದೆಲ್ಲವನ್ನೂ ನಿಲ್ಲಿಸು. ಇನ್ನು ಇದನ್ನು ಮುಂದುವರಿಸಿದರೆ ಮತ್ತಷ್ಟು ಆಪತ್ತು, ನಷ್ಟ ಆಗುತ್ತದೆ. ನೀನು ಅವರತ್ತ ಕಲ್ಲೆಸೆದರೆ ಅವರೂ ನಿನ್ನೆಡೆ ಎಸೆಯುತ್ತಾರೆ. ಈ ರೀತಿ ಸೇಡಿನ ರಾಜಕೀಯಕ್ಕೆ ಅಂತ್ಯ ಇರುವುದಿಲ್ಲ, ಇದರಿಂದ ವಿನಾಶ ಮಾತ್ರ. ಸಾರ್ವಜನಿಕ ಬದುಕು, ಮುಂದೆ ನಡೆಯುವ ಹಾದಿಯ ಬಗ್ಗೆ ಗಮನ ಕೊಡು ಎಂದು ಜಾರಕಿಹೊಳಿ ಸಹೋದರರು ಅಣ್ಣ ರಮೇಶ್ ಜಾರಕಿಹೊಳಿಗೆ ಉಪದೇಶ ಮಾಡಿದ್ದಾರೆ.

    ಇದೀಗ ಸಹೋದರರ ಸಲಹೆಗೆ ಗೋಕಾಕ್ ಸಾಹುಕಾರ್ ನಡೆ ಏನು ಎನ್ನುವ ಕುತೂಹಲ ಮೂಡಿದೆ. ಸಹೋದರರ ಉಪದೇಶಕ್ಕೆ ರಮೇಶ್ ಜಾರಕಿಹೊಳಿ ಮಣಿಯುತ್ತಾರಾ ಅಥವಾ ಇಲ್ಲವಾ ಎನ್ನುವುದು ಸ್ಪಷ್ಟವಿಲ್ಲ. ಇನ್ನುಮೇಲಾದರೂ ರಮೇಶ್ ಸಿಟ್ಟು, ಜಿದ್ದು ತಣ್ಣಗಾಗುತ್ತಾ ಎಂಬುದು ಅವರ ಬೆಂಬಲಿಗರೂ ನಿರೀಕ್ಷೆ ಹುಟ್ಟಿಸಿದೆ. ಅಥವಾ ನನಗೆ ನನ್ನ ಹಠ, ಸೇಡೇ ಮುಖ್ಯ ಎಂದು ಸಿಡಿ ವಾರ್ ಮುಂದುವರಿಸುತ್ತಾರಾ ಎಂಬುದು ತಿಳಿಯದೇ ಹೋಗಿದೆ. ಇದನ್ನೂ ಓದಿ: ಕಾರ್ಕಳದಿಂದ ಮುತಾಲಿಕ್ ಸ್ಪರ್ಧೆ – ಬಿಜೆಪಿಯಿಂದ ಅಭ್ಯರ್ಥಿ ಹಾಕಬೇಡಿ: ಶ್ರೀರಾಮಸೇನೆ ಒತ್ತಾಯ

    ಆದರೆ ಇದಕ್ಕೆ ವ್ಯತಿರಿಕ್ತವೆಂಬಂತೆ ರಮೇಶ್ ಜಾರಕಿಹೊಳಿ ಇದೀಗ ದೆಹಲಿಗೆ ಹೊರಟು ನಿಂತಿದ್ದಾರೆ. ಗುರುವಾರ ಸಂಜೆ ದೆಹಲಿಗೆ ತೆರಳಲಿರುವ ಸಾಹುಕಾರ್ ಶುಕ್ರವಾರ ಅಮಿತ್ ಶಾ ಭೇಟಿಗೆ ಮುಂದಾಗಲಿದ್ದಾರೆ. ಸಿಡಿ ಕೇಸ್ ಸಿಬಿಐ ತನಿಖೆಗೆ ವಹಿಸುವಂತೆ ಅಮಿತ್ ಶಾ ಬಳಿ ರಮೇಶ್ ಮತ್ತೊಮ್ಮೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ಅಮಿತ್ ಶಾ ಬೆಳಗಾವಿಗೆ ಬಂದಾಗಲೂ ಇದೇ ಒತ್ತಾಯವನ್ನು ರಮೇಶ್ ಜಾರಕಿಹೊಳಿ ಪ್ರಸ್ತಾಪಿಸಿದ್ದರು. ಒಟ್ಟಿನಲ್ಲಿ ಸಿಡಿ ಕೇಸ್ ಹೈಕಮಾಂಡ್ ಅಂಗಳಕ್ಕೆ ತಲುಪುತ್ತಿದ್ದು, ಮುಂದಿನ ವಿದ್ಯಮಾನಗಳು ಕುತೂಹಲ ಮೂಡಿಸಿವೆ. ಇದನ್ನೂ ಓದಿ: ಸೊರಬದಲ್ಲಿ ಸಹೋದರರ ಸವಾಲ್ – ದಾಯಾದಿಗಳ ಜಿದ್ದಾಜಿದ್ದಿ ಈ ಬಾರಿ ಮತ್ತಷ್ಟು ಜೋರು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಾ ಫಸ್ಟ್ ರೌಂಡ್ ಬಳಿಕ ರಮೇಶ್ ಜಾರಕಿಹೊಳಿ ಸಿಡಿ ಬಾಂಬ್ ಏಕೆ?

    ಶಾ ಫಸ್ಟ್ ರೌಂಡ್ ಬಳಿಕ ರಮೇಶ್ ಜಾರಕಿಹೊಳಿ ಸಿಡಿ ಬಾಂಬ್ ಏಕೆ?

    ಬೆಂಗಳೂರು: ಕಿತ್ತೂರು ಕರ್ನಾಟಕದಲ್ಲಿ ಅಮಿತ್ ಶಾ (Amit Shah) ಫಸ್ಟ್ ರೌಂಡ್ ಬಳಿಕ ಸಿಡಿ ಕದನ ಮತ್ತೆ ಶುರುವಾಗಿದೆ. ಅಮಿತ್ ಶಾ ಬಂದು ಹೋಗುವ ತನಕ ಸುಮ್ಮನಿದ್ದು ಈಗ ಅಸಲಿ ಎಲೆಕ್ಷನ್ ಆಟ ಶುರು ಮಾಡಿದ್ದಾರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi).

    ಜಾರಕಿಹೊಳಿ ಡಿಕೆಶಿ (DK Shivakumar) ವಿರುದ್ಧ ಸಮರ ಸಾರಲು ಬಿಜೆಪಿ (BJP) ಹೈಕಮಾಂಡ್ ಬಳಿ ಅನುಮತಿ ಕೇಳಿ ಪಡೆದಿದ್ದಾರೆ ಎನ್ನಲಾಗಿದೆ. ಪರ್ಸನಲ್ ಆಗಿ ನನ್ನ ದಾಳಿ ಇರುತ್ತದೆ. ನನಗೆ ಪರ್ಮಿಶನ್ ಕೊಡಿ ಎಂದು ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದರು ಎನ್ನಲಾಗಿದೆ.

    ನನ್ನ ಮರ್ಯಾದೆ ಹೋಗಿದೆ, ಅಧಿಕಾರ ಹೋಗಿದೆ, ಈಗ ನನ್ನ ಹಠ ಗೆಲ್ಲಬೇಕೆಂಬ ಅಸ್ತ್ರ ಮುಂದಿಟ್ಟು ರಮೇಶ್ ಜಾರಕಿಹೊಳಿ ಹೊಸ ಗೇಮ್ ಚಾಲೂ ಮಾಡಿರುವ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಪರ್ಸನಲ್ ಅಟ್ಯಾಕ್ ಏನಾದರೂ ಮಾಡಿಕೊಳ್ಳಿ. ಆದರೆ ಪಾರ್ಟಿಗೆ ಡ್ಯಾಮೇಜ್ ಆಗದ ರೀತಿ ನಡೆದುಕೊಳ್ಳಿ ಎಂದು ಬಿಜೆಪಿ ಹೈಕಮಾಂಡ್ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಇದನ್ನೂ ಓದಿ: 2+1 ಬೆಳಗಾವಿ ಜಿದ್ದು: ಎಲೆಕ್ಷನ್ ವೇಳೆ ಸಿಡಿ, ಆಡಿಯೋ ಬಾಂಬ್ ಸಮರ ಹೆಚ್ಚಾಗುತ್ತಾ?

    ಇದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ಹಳೇ ಕೇಸ್ ಹೊಸ ನಶೆ ಎಂಬ ರೀತಿಯಲ್ಲಿ ರಾಜಕೀಯ ದಾಳಿ ನಡೆಸಿದ್ದಾರೆ. ಇದೇ ವೇಳೆ ಪೊಲಿಟಿಕಲ್ ಚಾರ್ಜ್ ಶೀಟ್ ಹಾಕಿರುವ ರಮೇಶ್ ಜಾರಕಿಹೊಳಿ, 10 ಸಾವಿರ ಕೋಟಿ ಫೈಲ್ ಕ್ಲಿಯರ್ ರಹಸ್ಯದ ಹೊಸ ಬಾಂಬ್ ಹಾಕಿದ್ದಾರೆ. ಹಾಗಾದರೆ ರಮೇಶ್ ಜಾರಕಿಹೊಳಿ ಆರೋಪಕ್ಕೆ ಡಿಕೆಶಿ ಪ್ರತಿ ಅಸ್ತ್ರ ರೆಡಿ ಇದೆಯಾ? ಎಂಬ ಕುತೂಹಲವಿದ್ದು, ಇಬ್ಬರ ಜಿದ್ದಾಜಿದ್ದಿನ ಗುದ್ದಾಟ ರೋಚಕ ಪಡೆದುಕೊಳ್ಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕಾಮನ್ ಸೆನ್ಸ್ ಇಲ್ಲ – `ವಿಷಕನ್ಯೆ’ ಪದ ಬಳಕೆಗೆ ಹೆಬ್ಬಾಳ್ಕರ್ ಸಹೋದರ ಖಂಡನೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಪಕ್ಷ ತೊರೆಯುವುದು ಗ್ಯಾರಂಟಿ – ಸ್ಫೋಟಕ ಆಡಿಯೋ ವೈರಲ್

    ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಪಕ್ಷ ತೊರೆಯುವುದು ಗ್ಯಾರಂಟಿ – ಸ್ಫೋಟಕ ಆಡಿಯೋ ವೈರಲ್

    ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಹಾಸನ ಜಿಲ್ಲೆಯಲ್ಲಿ ಪಕ್ಷಾಂತರ ಪಾಲಿಟಿಕ್ಸ್‌ ಮಾತು ಕೇಳಿಬರುತ್ತಿದೆ. ಅರಸೀಕೆರೆಯ ಜೆಡಿಎಸ್‌ (JDS) ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalingegowda) ಅವರು ಪಕ್ಷ ತೊರೆಯುವುದು ಗ್ಯಾರಂಟಿ ಎನ್ನಲಾಗುತ್ತಿದೆ.

    ಗ್ರಾಮ ಪಂಚಾಯಿತಿ ಸದಸ್ಯೆ ಪತಿ ವಾಸು ಎಂಬವರಿಗೆ ಹಣಕ್ಕಾಗಿ ಧಮ್ಕಿ ಹಾಕಿರುವ ಆಡಿಯೋ ವೈರಲ್‌ ಆಗಿದೆ. ಇದರಲ್ಲಿ ಶಿವಲಿಂಗೇಗೌಡರು ಜೆಡಿಎಸ್‌ ತೊರೆಯುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋಗೆ ಪ್ಲಾನ್

    ಜಕ್ಕನಹಳ್ಳಿ ಗ್ರಾಪಂ ಸದಸ್ಯೆ ಸೌಮ್ಯ ಪತಿ ವಾಸು ಜೊತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿರುವ ಆಡಿಯೋದಲ್ಲಿ, “ನಾನು ಕೊಟ್ಟಿದ್ದ 50 ಸಾವಿರ ಹಣವನ್ನು ವಾಪಸ್‌ ಕೊಡು. ನೀನು ಆ ಕಡೆ (ಜೆಡಿಎಸ್‌) ಇದ್ದೀಯಾ. ನನ್ನ ಪರವಾಗಿ ಇಲ್ಲ. ಹೀಗಾಗಿ ಹಣ ತಂದು ಕೊಡು” ಎಂದು ಧಮ್ಕಿ ಹಾಕಿದ್ದಾರೆ.

    ಅದಕ್ಕೆ ವಾಸು, “ನಾನೇನಾದ್ರೂ ನಿನ್‌ ಹತ್ರ ಹಣ ಕೇಳಿದ್ನಾ ಅಣ್ಣ. ಈಗ ನನ್‌ ಹತ್ರ ಇಲ್ಲ. ಏನ್‌ ಮಾಡ್ಕೋತೀಯಾ ನೀನು? ಜೈಲಿಗೆ ಕಳಿಸ್ತೀಯಾ, ಕೊಲೆ ಮಾಡಿಸ್ತೀಯಾ? ಮಾಡಿಸ್ಕೊ. ಈಗ ನನ್ನ ಬಳಿ ಹಣ ಇಲ್ಲ” ಎಂದು ಎದುರುತ್ತರ ನೀಡಿದ್ದಾರೆ. ಇದಕ್ಕೆ ಶಿವಲಿಂಗೇಗೌಡರು ಮಾತನಾಡಿ, “ನೀನು ದೊಡ್ಡ ಮನುಷ್ಯ ಅಂತಾ ಜೈಲಿಗೆ ಕಳಿಸ್ತಾರಾ? ಅದೆಲ್ಲ ನನಗೆ ಗೊತ್ತಿಲ್ಲ, ನನ್‌ ಹಣ ನನಗೆ ತಂದು ಕೊಡು” ಎಂದು ಕೇಳಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಅಂಕಲ್ ನಮ್ಗೆ ಮೇಲ್ಸೇತುವೆ ಬೇಡ- ಸಿಎಂಗೆ 2 ಸಾವಿರ ವಿದ್ಯಾರ್ಥಿಗಳಿಂದ ಪತ್ರ

    ನಾನು ಯಾವ ಪಕ್ಷದಲ್ಲಿ ಇದ್ದರೂ ನೀನು ನನ್ನ ಜೊತೆ ಇರಬೇಕು ಅಂತಾ ವಾಸುಗೆ ಶಿವಲಿಂಗೇಗೌಡರು ದುಡ್ಡು ಕೊಟ್ಟಿದ್ದರು ಎನ್ನಲಾಗಿದೆ. ಈಗ ವಾಸು ಜೆಡಿಎಸ್‌ ಪರವೇ ಇದ್ದು, ಶಿವಲಿಂಗೇಗೌಡರು ಪಕ್ಷ ಬಿಡಲು ತೀರ್ಮಾನಿಸಿದ್ದಾರೆ. ವಾಸು ತನ್ನ ಪರ ಇಲ್ಲ ಎಂದು ಹಣ ವಾಪಸ್‌ ನೀಡುವಂತೆ ಕೇಳಿದ್ದಾರೆ. ಈ ಸಂಭಾಷಣೆಯ ಆಡಿಯೋ ವೈರಲ್‌ ಆಗಿದೆ.‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೋವಿಂದ ಹೊರ ಬಂದು ‘ಟ್ಯಾಟೋ’ ಹಾಕಿಸಿಕೊಂಡ ವೈಷ್ಣವಿ ಗೌಡ: ಸಖತ್ತಾದ ವಿಡಿಯೋ

    ನೋವಿಂದ ಹೊರ ಬಂದು ‘ಟ್ಯಾಟೋ’ ಹಾಕಿಸಿಕೊಂಡ ವೈಷ್ಣವಿ ಗೌಡ: ಸಖತ್ತಾದ ವಿಡಿಯೋ

    ತಾನು ಮದುವೆ ಆಗಬೇಕಿದ್ದ ಹುಡುಗನ ಕುರಿತಾದ ಆಡಿಯೋವೊಂದು ನಟಿ ವೈಷ್ಣವಿ  ಮತ್ತು ನಟ ವಿದ್ಯಾಭರಣ್ ನಡುವಿನ ಬಾಂಧವ್ಯವನ್ನೇ ಹೊಸಕಿ ಹಾಕಿತ್ತು. ಆಡಿಯೋ ಬಂದಾಗಿನಿಂದ ವೈಷ್ಣವಿ ಗೌಡ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಮಗಳು ತುಂಬಾ ನೊಂದುಕೊಂಡಿದ್ದಾಳೆ. ಅವಳು ಅದರಿಂದ ಆಚೆ ಬರಲು ಸಾಕಷ್ಟು ಸಮಯ ಬೇಕು. ನಡೆದಿರುವ ಘಟನೆಯನ್ನು ಇಷ್ಟು ಬೇಗ ಅವಳು ಮರೆಯಲು ಸಾಧ್ಯವಿಲ್ಲ ಎಂದು ವೈಷ್ಣವಿ ತಾಯಿ ಮೊನ್ನೆಯಷ್ಟೇ ಹೇಳಿದ್ದರು.

    ಆದರೆ, ವೈಷ್ಣವಿ ತುಂಬಾ ಗಟ್ಟಿಗಿತ್ತಿ. ಆಗಿರುವ ಎಲ್ಲ ಘಟನೆಗೆ ಕೇವಲ ಮೂರೇ ಮೂರು ದಿನಕ್ಕೆ ಗೋಲಿ ಹೊಡೆದು, ಟ್ಯಾಟೋ ಅಂಗಡಿಗೆ ಬಂದಿದ್ದಾರೆ. ಚಂದಾದ ಟ್ಯಾಟೋ ಹಾಕಿಸಿಕೊಂಡು ‘ದಿ ರೇಸಿಂಗ್ ವುಮನ್ ಸಿಂಬಲ್’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ತಾಯಿ ಅಂದುಕೊಂಡಷ್ಟು ತಾವು ಅಧೈರ್ಯಳಲ್ಲ ಎನ್ನುವುದನ್ನು ತೋರಿಸಿದ್ದಾರೆ.

    https://youtube.com/shorts/XqPQz4zSXzk?feature=share

    ಅಷ್ಟಕ್ಕೂ ವೈಷ್ಣವಿ ಮತ್ತು ವಿದ್ಯಾಭರಣ್ ಇತ್ತೀಚೆಗಷ್ಟೇ ಪರಿಚಯವಾದವರು ಅಲ್ಲ. ಅವರು 2017ರಿಂದಲೂ ಪರಿಚಯಸ್ಥರು ಎನ್ನುತ್ತಾರೆ ವೈಷ್ಣವಿ ಗೌಡ ತಾಯಿ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಹಲವಾರು ವಿಷಯಗಳನ್ನು ಹಂಚಿಕೊಂಡರು. ವಿದ್ಯಾಭರಣ್ ಫ್ಯಾಮಿಲಿ ಆರೇಳು ವರ್ಷಗಳಿಂದಲೂ ಗೊತ್ತು. ಆದರೆ, ಸಂಪರ್ಕದಲ್ಲಿ ಇರಲಿಲ್ಲವೆಂದು ಹೇಳಿದ್ದಾರೆ. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ

    ವೈಷ್ಣವಿ ಕುಟುಂಬಕ್ಕೆ ವಿದ್ಯಾಭರಣ್ ಪರಿಚಯವಾಗಿದ್ದು ಒಬ್ಬ ನಟನಾಗಿದೆ. 2017ರಲ್ಲಿ ಶುರುವಾದ ಚಾಕೋಲೇಟ್ ಬಾಯ್ ಸಿನಿಮಾದಲ್ಲಿ ವಿದ್ಯಾಭರಣ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದರೆ, ವೈಷ್ಣವಿ ಆ ಸಿನಿಮಾದ ನಾಯಕಿ. ಈ ಚಿತ್ರದ ಮುಹೂರ್ತ ಬೆಂಗಳೂರಿನ ಬಸವನ ಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ನಡೆದಿತ್ತು. ಅಲ್ಲಿಯೇ ವಿದ್ಯಾಭರಣ್ ಮತ್ತ ವೈಷ್ಣವಿ ಕುಟುಂಬ ಪರಸ್ಪರ ಪರಿಚಯ ಮಾಡಿಕೊಂಡಿದೆ. ಅಲ್ಲಿಂದ ಒಂಬತ್ತು ದಿನಗಳ ಕಾಲ ಸಿನಿಮಾದ ಶೂಟಿಂಗ್ ಕೂಡ ನಡೆದಿದೆ.

    ವಿದ್ಯಾಭರಣ್ ತಂದೆಯವರೇ ನಿರ್ಮಿಸಿದ್ದ ಬಾಬಾ ದೇವಸ್ಥಾನದಲ್ಲಿ ಎರಡ್ಮೂರು ದಿನಗಳ ಕಾಲ ಚಾಕೋಲೇಟ್ ಬಾಯ್ ಚಿತ್ರದ ಶೂಟಿಂಗ್ ನಡೆದಿತ್ತು. ಇದೇ ಸಂದರ್ಭದಲ್ಲಿ ವಿದ್ಯಾಭರಣ್ ಅವರ ಮನೆಗೂ ವೈಷ್ಣವಿ ತಾಯಿ ಹೋಗಿ ಬಂದಿದ್ದರಂತೆ. ಈ ಸಿನಿಮಾ ಅರ್ಧಕ್ಕೆ ನಿಂತ ಮೇಲೂ ಕೆಲ ತಿಂಗಳ ಕಾಲ ಪರಸ್ಪರ ಮಾತನಾಡಿದ್ದಾರೆ. ಆನಂತರ ಸಂಪರ್ಕ ಕಳೆದುಕೊಂಡಿದ್ದು. ಇತ್ತೀಚೆಗಷ್ಟೇ ಮತ್ತೆ ಬಾಂಧವ್ಯ ಬೆಳೆದು ಬೀಗರು ಆಗುವ ಮಟ್ಟಕ್ಕೆ ತಲುಪಿತ್ತು. ಆದರೆ, ಅಷ್ಟರಲ್ಲಿ ಆಡಿಯೋ ಹುಡುಗಿಯೊಬ್ಬಳು ಎಡವಟ್ಟು ಮಾಡಿಬಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಡಿಯೋ ಹುಡುಗಿ ಹೇಳಿದಷ್ಟು ನನ್ನ ಮಗ ಕೆಟ್ಟವನಲ್ಲ: ವಿದ್ಯಾಭರಣ್ ತಾಯಿ

    ಆಡಿಯೋ ಹುಡುಗಿ ಹೇಳಿದಷ್ಟು ನನ್ನ ಮಗ ಕೆಟ್ಟವನಲ್ಲ: ವಿದ್ಯಾಭರಣ್ ತಾಯಿ

    ಟಿ ವೈಷ್ಣವಿ ಮತ್ತು ವಿದ್ಯಾಭರಣ್ ನಿಶ್ಚಿತಾರ್ಥ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿದ್ಯಾಭರಣ್ ನಡತೆ ಸರಿ ಇಲ್ಲ ಎಂದು ಹುಡುಗಿಯೊಬ್ಬಳು ಆಡಿಯೋ ಮೂಲಕ ಹೇಳಿದ ವಿಷಯ ಮೊದಲು ಗೊತ್ತಾಗಿದ್ದು ವೈಷ್ಣವಿ ಅವರ ತಾಯಿಗೆ. ಈ ವಿಡಿಯೋ ಇಟ್ಟುಕೊಂಡು ವಿದ್ಯಾಭರಣ್ ತಾಯಿಯನ್ನು ವೈಷ್ಣವಿ ತಾಯಿ ವಿಚಾರಿಸಿದಾಗ, ವಿದ್ಯಾಭರಣ್ ತಾಯಿ ವಾಯ್ಸ್ ನೋಟ್ಸ್ ವೊಂದನ್ನು ಕಳುಹಿಸಿದ್ದಾರೆ.

    ವೈಷ್ಣವಿ ಅವರ ತಾಯಿಗೆ ಕಳುಹಿಸಿದ ವಾಯ್ಸ್ ನೋಟ್ಸ್ ಅನ್ನು ಮಾಧ್ಯಮಗಳ ಮುಂದೆ ಕೇಳಿಸಿದ್ದು, ‘ನೀವು ಸಮಾಧಾನವಾಗಿರಿ. ನಮ್ಮ  ಕಡೆಯಿಂದ ತಪ್ಪಾಗಿದೆ. ಆ ಹುಡುಗಿ ಹೇಳುವಷ್ಟು ನನ್ನ ಮಗ ಕೆಟ್ಟವನಲ್ಲ. ಯಾರು ಹೀಗೆ ಮಾಡಿದ್ದಾರೆ ಅನ್ನೊದನ್ನ ಪತ್ತೆ ಹಚ್ಚುವವರೆಗೆ ಸ್ವಲ್ಪ ಸಮಾಧಾನವಾಗಿರಿ’ ಎಂದು ವಿದ್ಯಾಭರಣ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದಾರೆ. ಇದನ್ನೂ ಓದಿ: ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

    ವಿದ್ಯಾಭರಣ್ ಕೂಡ ಮಾಧ್ಯಮಗಳ ಮುಂದೆ ಈ ವಿಷಯವನ್ನು ಪದೇ ಪದೇ ಹೇಳುತ್ತಲೇ ಇದ್ದಾರೆ. ನನಗೆ ಗರ್ಲ್ ಫ್ರೆಂಡ್ ಇದ್ದದ್ದು ನಿಜ. ಆದರೆ, ನಾನು ಯಾರೊಂದಿಗೂ ಕೆಟ್ಟದ್ದಾಗಿ ನಡೆದುಕೊಂಡಿಲ್ಲ. ರಿಲೇಶನ್ಶಿಪ್ ಅಲ್ಲಿ ಇದ್ದದ್ದು ಹಳೆಯ ಕಥೆ. ಅದನ್ನು ಗುರಿಯಾಗಿಸಿಕೊಂಡು ಈ ರೀತಿ ಮಾತಾಡುತ್ತಿದ್ದಾರಾ ಗೊತ್ತಿಲ್ಲ. ಒಟ್ಟಿನಲ್ಲಿ ನನ್ನ ಮತ್ತು ನನ್ನ ಕುಟುಂಬದ ಮಾನವನ್ನು ಕಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

    ವಿದ್ಯಾಭರಣ್ ಬಗ್ಗೆ ಮಾತನಾಡಿದ ಆಡಿಯೋ ಹುಡುಗಿ, ನಟಿ ಎಂದು ಹೇಳಲಾಗಿದ್ದು, ಆ ಹುಡುಗಿ ಮಾಧ್ಯಮವೊಂದರ ಜೊತೆ ಮಾತನಾಡಿ ಆಡಿಯೋ ಹರಿಬಿಟ್ಟಿದ್ದಾರೆ. ಈಗ ಅದೇ ಆಡಿಯೋ ವೈಷ್ಣವಿ ಮತ್ತು ವಿದ್ಯಾಭರಣ್ ಬದುಕಿಗೆ ಮುಳ್ಳಾಗಿ ಕಾಡುತ್ತಿದೆ. ಈ ಸಂಬಂಧ ಇನ್ನು ಮುಂದುವರೆಯುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ವೈಷ್ಣವಿ ಅವರ ತಾಯಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ವೈಷ್ಣವಿ ಮತ್ತು ವಿದ್ಯಾಭರಣ್ ಮಧ್ಯ ಹುಳಿ ಹಿಂಡಿದೋರ ಹುಡುಕಾಟ

    ವೈಷ್ಣವಿ ಮತ್ತು ವಿದ್ಯಾಭರಣ್ ಮಧ್ಯ ಹುಳಿ ಹಿಂಡಿದೋರ ಹುಡುಕಾಟ

    ಟ ವಿದ್ಯಾಭರಣ್ ಮೇಲೆ ಗುರುತರ ಆರೋಪ ಮಾಡಿ ಆಡಿಯೋ ಹರಿಬಿಟ್ಟವರ ಹುಡುಕಾಟ ಶುರುವಾಗಿದೆ. ನಿನ್ನೆಯಷ್ಟೇ ವಿದ್ಯಾಭರಣ್ ಆಡಿಯೋ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದರು. ಅದನ್ನು ಗಂಭೀರವಾಗಿ ತಗೆದುಕೊಂಡಿರುವ ಪೊಲೀಸರು, ಆ ಆಡಿಯೋದಲ್ಲಿ ಇರುವವರ ಗುರುತಿಗೆ ಬಲೆ ಬೀಸಿದ್ದಾರೆ. ಈ ಆಡಿಯೋದಿಂದಾಗಿ ವೈಷ್ಣವಿ ಮತ್ತು ವಿದ್ಯಾಭರಣ್ ನಿಶ್ಚಿತಾರ್ಥವೇ ಮುರಿದು ಬಿದ್ದಿದೆ. ಆಡಿಯೋದಲ್ಲಿ ತಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಲಾಗಿದೆ. ಅವರು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಅವರ ಮಾತುಗಳಿಂದಾಗಿ ತಮಗೂ ಮತ್ತು ತಮ್ಮ ಕುಟುಂಬಕ್ಕೂ ಮುಜುಗರ ಉಂಟಾಗಿದೆ. ಆಡಿಯೋದಲ್ಲಿ ಮಾತನಾಡಿದವರು ಯಾರು ಎಂಬುದನ್ನು ಪತ್ತೆ ಮಾಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ವಿದ್ಯಾಭರಣ್.

    ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ವಿಷಯ ನಾನಾ ರೂಪಗಳನ್ನು ಪಡೆದುಕೊಳ್ಳುತ್ತಿದೆ. ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ಇಬ್ಬರೂ ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದು, ಅದು ನಿಶ್ಚಿತಾರ್ಥ ಅಲ್ಲ, ಕೇವಲ ಹಣ್ಣು ಕಾಯಿ ಇಡುವ ಶಾಸ್ತ್ರ ಎಂದು ಸ್ಪಷ್ಟ ಪಡಿಸಿದ್ದಾರೆ. ಆದರೆ, ವಿದ್ಯಾಭರಣ್ ಬಗ್ಗೆ ನಟಿಯೊಬ್ಬಳು ಮಾತನಾಡಿದ್ದಾಳೆ ಎನ್ನಲಾದ ಆಡಿಯೋ ಮಾತ್ರ ನಾನಾ ಅನುಮಾನಗಳನ್ನು ಹುಟ್ಟು ಹಾಕಿದೆ.

    ಈ ಕುರಿತಂತೆ ಪಬ್ಲಿಕ್‌ ಟಿವಿ ಜೊತೆಗೆ ಮಾತನಾಡಿದ ವಿದ್ಯಾಭರಣ್ ಅವರು, ವೈಷ್ಣವಿ ಜೊತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಪ್ರಾಥಮಿಕ ಮಾತುಕತೆಯಾಗಿತ್ತು. ಆದರೆ ಈ ಫೋಟೋ ಎಲ್ಲಿಂದ ವೈರಲ್ ಆಯಿತು ಎನ್ನುವುದು ಗೊತ್ತಿಲ್ಲ. ನಮ್ಮ ಕುಟುಂಬದವರ ವರ್ಚಸ್ಸನ್ನು ಹಾಳು ಮಾಡಲು ಪ್ಲಾನ್ ಮಾಡಿದ್ದಾರೆ. ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಕೆ ನೇರವಾಗಿ ಬಂದು ಆರೋಪವನ್ನು ಮಾಡಬಹುದಿತ್ತು. ನನ್ನ ಮೊದಲ ಫಿಲ್ಮ್ ಬಂದಾಗಲೇ ಇವರು ಆರೋಪ ಮಾಡಬಹುದಿತ್ತು. ಹೆಸರು ಹೇಳಲು ಧೈರ್ಯವಿಲ್ಲದಿರುವ ಆಕೆ ಆರೋಪ ಮಾಡುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್

    ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡುವ ಬದಲು ಆಕೆಯೇ ಕಂಪ್ಲೆಂಟ್ ಕೊಡಬಹುದಿತ್ತು. ನಮ್ಮ ಏಳಿಗೆಯನ್ನು ಸಹಿಸಲು ಸಾಧ್ಯವಾಗದೇ ಇರುವ ಹಿತಶತ್ರುಗಳು ಹೀಗೆ ಮಾಡುತ್ತಿದ್ದಾರೆ. ನಾನು ಇನ್‍ಸ್ಟಾಗ್ರಾಮ್ ಅನ್ನು ಮೊದಲೇ ಡಿಲೀಟ್ ಮಾಡಿದ್ದೇನೆ. ನನ್ನ ಇನ್‍ಸ್ಟಾಗ್ರಾಮ್ ಹ್ಯಾಕ್ ಆಗಿತ್ತು. ತುಂಬಾ ಹಿಂದೆಯೇ ಡಿಲೀಟ್ ಆಗಿದೆ. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.  ಆಡಿಯೋದಲ್ಲಿ ಮಾತನಾಡಿದವರು ಕಿರುತೆರೆ ನಟಿ ಎಂದು ಹೇಳಲಾಗುತ್ತಿದ್ದು, ಆದರೆ, ಆ ವಾಯ್ಸು ತಮಗೆ ಗೊತ್ತಿಲ್ಲ ಎಂದು ವಿದ್ಯಾಭರಣ್ ತಿಳಿಸಿದ್ದಾರೆ.

    ನನ್ನ ರೀತಿ ಬೇರೆ ಯಾವ ಹುಡುಗನಿಗೂ ಹೀಗೆ ಆಗಬಾರದು. ಇವತ್ತು ಬುದ್ಧಿ ಕಲಿಸಿಲ್ಲ ಅಂದರೆ, ನಾಳೆ ಇದೇ ರೀತಿ ಸಾಕಷ್ಟು ಜನರಿಗೆ ಆಗುತ್ತದೆ. ನಾನು ಮೂರು ತಿಂಗಳು ಯಾವ ಹುಡುಗಿಯನ್ನು ಕೂಡ ಕರೆದುಕೊಂಡು ಬಂದಿಲ್ಲ. ನೇರವಾಗಿ ಬಂದು ದೂರು ಕೊಡದೇ ಈ ರೀತಿ ಮಾಡಿರುವುದರಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಡಿಯೋ ನಟಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ವಿದ್ಯಾಭರಣ್

    ಆಡಿಯೋ ನಟಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ವಿದ್ಯಾಭರಣ್

    ಮ್ಮ ಮೇಲೆ ಗುರುತರ ಆರೋಪ ಮಾಡಿದ ಆಡಿಯೋ ವಿರುದ್ಧ ನಟ ವಿದ್ಯಾಭರಣ್ ಇಂದು ದೂರು ದಾಖಲಿಸಿದ್ದಾರೆ. ಆಡಿಯೋದಲ್ಲಿ ತಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಲಾಗಿದೆ. ಅವರು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಅವರ ಮಾತುಗಳಿಂದಾಗಿ ತಮಗೂ ಮತ್ತು ತಮ್ಮ ಕುಟುಂಬಕ್ಕೂ ಮುಜುಗರ ಉಂಟಾಗಿದೆ. ಆಡಿಯೋದಲ್ಲಿ ಮಾತನಾಡಿದವರು ಯಾರು ಎಂಬುದನ್ನು ಪತ್ತೆ ಮಾಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ವಿದ್ಯಾಭರಣ್.

    ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ವಿಷಯ ನಾನಾ ರೂಪಗಳನ್ನು ಪಡೆದುಕೊಳ್ಳುತ್ತಿದೆ. ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ಇಬ್ಬರೂ ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದು, ಅದು ನಿಶ್ಚಿತಾರ್ಥ ಅಲ್ಲ, ಕೇವಲ ಹಣ್ಣು ಕಾಯಿ ಇಡುವ ಶಾಸ್ತ್ರ ಎಂದು ಸ್ಪಷ್ಟ ಪಡಿಸಿದ್ದಾರೆ. ಆದರೆ, ವಿದ್ಯಾಭರಣ್ ಬಗ್ಗೆ ನಟಿಯೊಬ್ಬಳು ಮಾತನಾಡಿದ್ದಾಳೆ ಎನ್ನಲಾದ ಆಡಿಯೋ ಮಾತ್ರ ನಾನಾ ಅನುಮಾನಗಳನ್ನು ಹುಟ್ಟು ಹಾಕಿದೆ. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ಈ ಕುರಿತಂತೆ ಪಬ್ಲಿಕ್‌ ಟಿವಿ ಜೊತೆಗೆ ಮಾತನಾಡಿದ ವಿದ್ಯಾಭರಣ್ ಅವರು, ವೈಷ್ಣವಿ ಜೊತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಪ್ರಾಥಮಿಕ ಮಾತುಕತೆಯಾಗಿತ್ತು. ಆದರೆ ಈ ಫೋಟೋ ಎಲ್ಲಿಂದ ವೈರಲ್ ಆಯಿತು ಎನ್ನುವುದು ಗೊತ್ತಿಲ್ಲ. ನಮ್ಮ ಕುಟುಂಬದವರ ವರ್ಚಸ್ಸನ್ನು ಹಾಳು ಮಾಡಲು ಪ್ಲಾನ್ ಮಾಡಿದ್ದಾರೆ. ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಕೆ ನೇರವಾಗಿ ಬಂದು ಆರೋಪವನ್ನು ಮಾಡಬಹುದಿತ್ತು. ನನ್ನ ಮೊದಲ ಫಿಲ್ಮ್ ಬಂದಾಗಲೇ ಇವರು ಆರೋಪ ಮಾಡಬಹುದಿತ್ತು. ಹೆಸರು ಹೇಳಲು ಧೈರ್ಯವಿಲ್ಲದಿರುವ ಆಕೆ ಆರೋಪ ಮಾಡುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ.

    ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡುವ ಬದಲು ಆಕೆಯೇ ಕಂಪ್ಲೆಂಟ್ ಕೊಡಬಹುದಿತ್ತು. ನಮ್ಮ ಏಳಿಗೆಯನ್ನು ಸಹಿಸಲು ಸಾಧ್ಯವಾಗದೇ ಇರುವ ಹಿತಶತ್ರುಗಳು ಹೀಗೆ ಮಾಡುತ್ತಿದ್ದಾರೆ. ನಾನು ಇನ್‍ಸ್ಟಾಗ್ರಾಮ್ ಅನ್ನು ಮೊದಲೇ ಡಿಲೀಟ್ ಮಾಡಿದ್ದೇನೆ. ನನ್ನ ಇನ್‍ಸ್ಟಾಗ್ರಾಮ್ ಹ್ಯಾಕ್ ಆಗಿತ್ತು. ತುಂಬಾ ಹಿಂದೆಯೇ ಡಿಲೀಟ್ ಆಗಿದೆ. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.  ಆಡಿಯೋದಲ್ಲಿ ಮಾತನಾಡಿದವರು ಕಿರುತೆರೆ ನಟಿ ಎಂದು ಹೇಳಲಾಗುತ್ತಿದ್ದು, ಆದರೆ, ಆ ವಾಯ್ಸು ತಮಗೆ ಗೊತ್ತಿಲ್ಲ ಎಂದು ವಿದ್ಯಾಭರಣ್ ತಿಳಿಸಿದ್ದಾರೆ.

    ನನ್ನ ರೀತಿ ಬೇರೆ ಯಾವ ಹುಡುಗನಿಗೂ ಹೀಗೆ ಆಗಬಾರದು. ಇವತ್ತು ಬುದ್ಧಿ ಕಲಿಸಿಲ್ಲ ಅಂದರೆ, ನಾಳೆ ಇದೇ ರೀತಿ ಸಾಕಷ್ಟು ಜನರಿಗೆ ಆಗುತ್ತದೆ. ನಾನು ಮೂರು ತಿಂಗಳು ಯಾವ ಹುಡುಗಿಯನ್ನು ಕೂಡ ಕರೆದುಕೊಂಡು ಬಂದಿಲ್ಲ. ನೇರವಾಗಿ ಬಂದು ದೂರು ಕೊಡದೇ ಈ ರೀತಿ ಮಾಡಿರುವುದರಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ಸೋಮಶೇಖರ್ ಗೆ ಅವಾಚ್ಯ ಪದಗಳಿಂದ ಬೈದ ನಟಿ ನಯನಾರ ಆಡಿಯೋ ವೈರಲ್

    ನಟ ಸೋಮಶೇಖರ್ ಗೆ ಅವಾಚ್ಯ ಪದಗಳಿಂದ ಬೈದ ನಟಿ ನಯನಾರ ಆಡಿಯೋ ವೈರಲ್

    ಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ನಟಿ ನಯನಾ ತಮ್ಮದೇ ತಂಡದ ಸದಸ್ಯನೊಬ್ಬನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎನ್ನಲಾದ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನಯನಾ ಆಡಿದ ಮಾತುಗಳಿಂದ ನೊಂದುಕೊಂಡಿರುವ ನಟ ಸೋಮಶೇಖರ್, ಬೆಂಗಳೂರಿನ ಆರ್.ಆರ್ ನಗರದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಸೋಮಶೇಖರ್ ಅವರೇ ನೀಡಿರುವ ಆಡಿಯೋದಲ್ಲಿ ನಯನಾ ಆಡಬಾರದ ಪದಗಳನ್ನು ಆಡಿದ್ದಾರೆ. ಆ ಆಡಿಯೋ ವಾಟ್ಸಪ್ ಅಮೂಲಕ ಸಾಕಷ್ಟು ಜನರಿಗೆ ಹಂಚಿಕೆಯಾಗಿದೆ.

    ಈ ಘಟನೆಗೆ ಸಂಬಂಧಿಸಿದಂತೆ ಮೂರು ಆಡಿಯೋಗಳು ವೈರಲ್ ಆಗಿದ್ದು, ನಯನಾ ಸಭ್ಯವಲ್ಲದ ಪದಗಳನ್ನು ಆಡಿದ್ದಾರೆ. ‘ನಾನು ಎಂಥವಳು ಅಂತ ನಿನಗೆ ಗೊತ್ತಿಲ್ಲ. ಬೆಂಗಳೂರಿಗೆ ಬಂದ ಮೇಲೆ ನನ್ನನ್ನು ನೀನು ಕಾಣದೇ ಇದ್ದರೆ, ನಾನು ಏನು ಅಂತ ತೋರಿಸ್ತೇನೆ. ನಾನು ಏನು ಮಾಡಬಹುದು ಅಂತ ಅಂದಾಜು ನಿನಗಿರಲ್ಲ’ ಎಂದು ಧಮಕಿ ಕೂಡ ಹಾಕಿದ್ದಾರೆ. ಅಲ್ಲದೇ, ಮಾತಿನ ಮಧ್ಯ ಒಂದೊಂದು ಅಸಭ್ಯ ಪದಗಳನ್ನೂ ಬಳಸುತ್ತಾರೆ. ಈ ಆಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ. ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿಗೆ IFFI ವ್ಯಕ್ತಿತ್ವ ಪ್ರಶಸ್ತಿ ಗೌರವ

    ಹಣದ ಹಂಚಿಕೆ ವಿಚಾರಕ್ಕೆ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೋಮಶೇಖರ್ ಆರೋಪ ಮಾಡಿದ್ದು, ಜೀವ ಬೆದರಿಕೆ ಮತ್ತು ನಿಂದನೆ ಆರೋಪದಡಿ ದೂರು ದಾಖಲಾಗಿದೆ. ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಗ್ಯಾಂಗ್ಸ್ ಕಾರ್ಯಕ್ರಮದಲ್ಲಿ ನಯನಾ ಮತ್ತು ಟೀಮ್ ಬಹುಮಾನವಾಗಿ 3 ಲಕ್ಷ ರೂಪಾಯಿ ಹಣ ಪಡೆದಿತ್ತು. ಈ ತಂಡದಲ್ಲಿ ಸೋಮಶೇಖರ್ ಕೂಡ ಇದ್ದ. ಈ ಹಣದಲ್ಲಿ ಸರಿಯಾದ ಪಾಲು ಆಗಿಲ್ಲ ಎನ್ನುವ ಕಾರಣಕ್ಕಾಗಿ ಸೋಮಶೇಖರ್ ಮತ್ತು ನಯನಾ ಮಧ್ಯ ಮನಸ್ತಾಪ ಆಗಿತ್ತು ಎಂದು ಹೇಳಲಾಗುತ್ತಿದೆ.

    ನಯನಾರ ಧ್ವನಿ ಎಂದು ಹೇಳಲಾದ ಆಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಸೋಮಶೇಖರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಪೊಲೀಸರು ಬಂದು ನಿನ್ನ ಅರೆಸ್ಟ್ ಮಾಡುತ್ತಾರೆ. ನಾನು ಸ್ಟೇಶನ್ ನಲ್ಲೇ ಇದ್ದೇನೆ. ನೀನು ಹಣ ಕೊಡದೇ ಇದ್ದರೆ, ನಿನ್ನನ್ನು ಏನು ಬೇಕಾದರೂ ಮಾಡುವುದಕ್ಕೆ ರೆಡಿ ಎಂದು ನಯನಾರ ಧ್ವನಿ ಎಂದು ಹೇಳಲಾದ ಆಡಿಯೋದಲ್ಲಿ ಅವಾಜ್ ಹಾಕುವಂತಹ ಮಾತುಗಳು ಇವೆ.

    ನಯನಾ ಆರೋಪದಲ್ಲಿ ಹುರುಳಿಲ್ಲ. ನಾನು ಯಾರಿಗೂ ಹಣ ಕೊಡಬೇಕಾಗಿಲ್ಲ. ಚಾನಲ್ ಹೇಳಿದಂತೆ ನಾನು ಮಾಡಿದ್ದೇನೆ. ಆದರೆ, ನಯನಾ ಹಣದ ವಿಚಾರವಾಗಿ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಬರೆದಿದ್ದಾರೆ ಸೋಮಶೇಖರ್. ಸದ್ಯ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜಾದ್ ಖಾನ್ ಗೆ ಮಂಗಳಮುಖಿ ಜೊತೆ ಸಂಬಂಧ

    ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜಾದ್ ಖಾನ್ ಗೆ ಮಂಗಳಮುಖಿ ಜೊತೆ ಸಂಬಂಧ

    ನ್ನಡದ ನಟಿ ದಿವ್ಯಾ ಶ್ರೀಧರ್ (Divya Shridhar) ಹಾಗೂ ಅಮ್ಜಾದ್ ಖಾನ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಈ ಸುದ್ದಿಯಿಂದ ಸ್ವತಃ ದಿವ್ಯಾ ಶಾಕ್ ಆಗಿದ್ದಾರೆ. ಸದ್ಯ ಅಮ್ಜಾದ್ ಖಾನ್ ಜೈಲಿನಲ್ಲಿದ್ದು, ಈ ಸಂದರ್ಭದಲ್ಲಿ ಅವರಿಗೆ ಮಂಗಳಮುಖಿ ಜೊತೆ ಸಂಬಂಧ ಇತ್ತು ಎನ್ನುವ  ಆಡಿಯೋ ವೈರಲ್ ಆಗಿದೆ. ಸಂಬಂಧ ಇತ್ತು ಎಂದು ಸ್ವತಃ ಆ ಮಂಗಳಮುಖಿಯೇ ಹೇಳಿರುವ ಆಡಿಯೋ (Audio) ಅದಾಗಿದೆ. ಅಲ್ಲದೇ, ಮಂಗಳಮುಖಿ ಜೊತೆ ಅಮ್ಜಾದ್ ಇರುವಂತಹ ಫೋಟೋಗಳು ಕೂಡ ಹರಿದಾಡುತ್ತಿವೆ.

    ಪ್ರಿಯದರ್ಶಿನಿ (Priyadarshini) ಹೆಸರಿನ ಈ ಮಂಗಳಮುಖಿ ಸದ್ಯ ಇರುವುದು ಮಲೇಶಿಯಾದಲ್ಲಿ. ಈಕೆಯ ಜೊತೆಯೇ ಅಮ್ಜಾದ್ ಗೆ ಸಂಬಂಧವಿತ್ತು ಎಂದು ಆ ಆಡಿಯೋದಲ್ಲಿ ಹೇಳಲಾಗಿದೆ. ‘ಅವನು ನನ್ನನ್ನು ಪ್ರೀತಿಸಿದ. ಆನಂತರ ಗೊತ್ತಾಯಿತು ಅವನೊಬ್ಬ ಹೆಣ್ಣುಬಾಕಾ ಅಂತ. ಚೆನ್ನೈನಲ್ಲಿ ಅವನು ನನ್ನ ಜೊತೆ ಸಹ ಜೀವನ ನಡೆಸಿದ್ದಾನೆ. ಅಲ್ಲದೇ, ವಿವಾಹ ಕೂಡ ಆಗಿದ್ದ. ಎರಡು ವರ್ಷ ಒಟ್ಟಿಗೆ ಇದ್ದೆವು. ಆಮೇಲೆ ನನ್ನನ್ನು ಅವನು ದೂರ ಮಾಡಿದ. ನಾನು ನೋವು ತಾಳಲಾರದೆ ಮಲೇಶಿಯಾಗೆ ಹೊರಟೆ’ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ಈ ಆಡಿಯೋ ಇದೀಗ ಸಖತ್ ವೈರಲ್ ಆಗಿದೆ. ಅಮ್ಜಾದ್ ಸದ್ಯ ಜೈಲಿನಲ್ಲಿ ಇರುವುದರಿಂದ ಈ ಆಡಿಯೋ ಅವರ ಜೀವನಕ್ಕೆ ಯಾವೆಲ್ಲ ರೀತಿಯಲ್ಲಿ ತೊಂದರೆ ತಂದು ಇಡಲಿದೆ ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆ. ಈ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಸ್ವತಃ ದಿವ್ಯಾ ಶ್ರೀಧರ್ ಅವರೇ ಶಾಕ್ ಗೆ ಒಳಗಾಗಿದ್ದು, ಆ ಹುಡುಗಿ ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನ ಕೂಡ ಮಾಡಿಕೊಳ್ಳುತ್ತಿದ್ದಾರಂತೆ.

    ಪತಿ ಮೇಲೆ ಸ್ವತಃ ದಿವ್ಯಾ ಶ್ರೀಧರ್ ಅವರೇ ದೂರು ನೀಡಿದ್ದರು. ಅಮ್ಜಾದ್ (Amjad Khan) ಬಂಧನಕ್ಕೂ ಮುನ್ನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಹಿಳಾ ಆಯೋಗ ಕೂಡ  ಪ್ರವೇಶ ಮಾಡಿತ್ತು. ಕರ್ನಾಟಕದ ನಟಿ ದಿವ್ಯಾ ಶ್ರೀಧರ್ ಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಆಗ್ರಹಿಸಿ, ಈ ಕುರಿತಂತೆ ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿ ಮೂಲಕವೂ ಮಾತನಾಡಿದ್ದರು.

    ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿಯಲ್ಲಿ ಮಾತನಾಡುವುದರ ಜೊತೆಗೆ ಲಿಖಿತ ರೂಪದಲ್ಲೂ ಆಯೋಗಕ್ಕೆ ಪತ್ರ ಬರೆದು, ದಿವ್ಯಾಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರಂತೆ. ದಿವ್ಯಾ ಶ್ರೀಧರ್ ತನ್ನ ಗಂಡನಿಂದ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರಿಂದ ಅವರಿಗೆ ರಕ್ಷಣೆ ನೀಡಬೇಕು. ಗರ್ಭಿಣಿ ಅನ್ನುವುದನ್ನೂ ನೋಡದೇ ಆಕೆಯ ಪತಿಯು ಹೊಟ್ಟೆಗೆ ಒದ್ದಿರುವ ಕುರಿತು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

    ಸ್ಯಾಂಡಲ್ ವುಡ್ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ದಿವ್ಯಾ ಶ್ರೀಧರ್, ಆನಂತರ ಕಿರುತೆರೆ ಜಗತ್ತಿಗೆ ಕಾಲಿಟ್ಟರು. ಸಿನಿಮಾ ರಂಗದಲ್ಲಿ ಅಷ್ಟೇನೂ ಮಿಂಚದೇ ಇದ್ದರೂ, ಆಕಾಶ ದೀಪ ಧಾರಾವಾಹಿ ಮೂಲಕ ಸಖತ್ ಫೇಮಸ್ ಆದರು. ಈ ಧಾರಾವಾಹಿಯ ಯಶಸ್ಸು ಅವರನ್ನು ತಮಿಳು ಕಿರುತೆರೆ ಜಗತ್ತಿಗೂ ಕಾಲಿಡುವಂತೆ ಮಾಡಿತು. ತಮಿಳು ಧಾರಾವಾಹಿಯಲ್ಲೂ ದಿವ್ಯಾ ಸಾಕಷ್ಟು ಹೆಸರು ಮಾಡಿದರು.

    ತಮಿಳು ಧಾರಾವಾಹಿಯ ಸಂದರ್ಭದಲ್ಲೇ ನಟ ಅನರ್ವ್ ಅಲಿಯಾಸ್ ಅಮ್ಜದ್ ಖಾನ್ ಜೊತೆ ಸ್ನೇಹ ಬೆಳೆದು, ಅದು ಪ್ರೀತಿಗೂ ತಿರುಗಿ ನಂತರ ಮದುವೆಯಾಗಿದ್ದಾರೆ. ದಿವ್ಯಾ ಪ್ರಗ್ನೆಂಟ್ ಎಂದು ತಿಳಿಯುತ್ತಿದ್ದಂತೆಯೇ ಪತಿ ಅವರಿಂದ ದೂರವಾಗುವುದಕ್ಕೆ ಶುರು ಮಾಡಿದರು ಎಂದು ಆರೋಪಿಸಿದ್ದಾರೆ ದಿವ್ಯಾ. ಅಲ್ಲದೇ, ತಮಗೆ ಪತಿಯಿಂದ ದೈಹಿಕ ಹಿಂಸೆ ಸೇರಿದಂತೆ ಹಲವು ಆರೋಪಗಳನ್ನು ದಿವ್ಯಾ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು: ಆಡಿಯೋ ವೈರಲ್

    ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು: ಆಡಿಯೋ ವೈರಲ್

    ಮಡಿಕೇರಿ: ಕೊಡಗಿನಲ್ಲಿ (Kodagu) ಹಿಂದಿನಿಂದಲೂ ಒಬ್ಬರಲ್ಲಾ ಒಬ್ಬ ಉಗ್ರರು ಬಂದು ನೆಲೆಕಂಡುಕೊಂಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅಬ್ದುಲ್ ಮದನಿ ಕೂಡ ಕೊಡಗಿನ ಹೊಸತೋಟಕ್ಕೆ ಬಂದು ತಂಗಿದ್ದು ಹೊಸ ವಿಚಾರವೇನು ಅಲ್ಲ. ಆದರೆ ಈಗ ಮಡಿಕೇರಿ ನಗರಕ್ಕೆ ಪೆಟ್ರೋಲ್ ಬಾಂಬ್ (Bomb) ಹಾಕಬೇಕು ಎಂದು ಮಾತನಾಡಿರುವ ಆಡಿಯೋ (Audio) ಮಡಿಕೇರಿ (Madikeri) ನಗರದ ಜನತೆಯಲ್ಲಿ ಆತಂಕ ಮೂಡಿಸಿದೆ.

    ದೇಶದಲ್ಲಿ ಅಪಾಯಕಾರಿ ಬೆಳವಣಿಗೆಗಳು, ದೇಶ ವಿದ್ರೋಹಿ ಚಟುವಟಿಕೆಗಳು ನಡೆಯಲು ಸಂಚು ರೂಪಿಸಲಾಗುತ್ತಿದೆ ಎಂದು ಪಿಎಫ್‍ಐ (PFI) ಸಂಘಟನೆಯನ್ನು ಇತ್ತೀಚೆಗಷ್ಟೇ ನಿಷೇಧ ಮಾಡಲಾಗಿದೆ. ಆದರೆ ಕಳೆದ ಆರು ತಿಂಗಳ ಹಿಂದೆ ಅಂದರೆ ಏಪ್ರಿಲ್ 25 ರಂದು ಮಡಿಕೇರಿ ನಗರ ಸಭೆ ಸದಸ್ಯ ಜೆಡಿಎಸ್‍ನ ಮುಸ್ತಫಾ ಎಂಬುವರು ಆತನ ಸ್ನೇಹಿತ ಬೆಟ್ಟಗೇರಿಯ ಅಬ್ದುಲ್ಲಾ ಎಂಬುವರೊಂದಿಗೆ ಮಡಿಕೇರಿ ನಗರಕ್ಕೆ ಬಾಂಬ್ ಹಾಕಬೇಕು. ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು. ನಮ್ಮವರು ಒಂದಷ್ಟು ಜನರು ಸತ್ತರೂ ಪರವಾಗಿಲ್ಲ ಎಂದು ಮಾತನಾಡಿರುವ ಆಡಿಯೋ ಲೀಕ್ ಆಗಿದ್ದು, ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ. 50ಕ್ಕೂ ಹೆಚ್ಚು ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಪೆಟ್ರೋಲ್ ಬಾಂಬ್ ಹಾಕಬೇಕು ಎಂದು ಮಲೆಯಾಳಂ ಭಾಷೆಯಲ್ಲಿ ಮಾತನಾಡಿರುವ ಆಡಿಯೋ ಹರಿದಾಡುತ್ತಿದೆ. ಇದನ್ನೂ ಓದಿ: RSS ಬಗ್ಗೆ ಹೊಟ್ಟೆ ಕಿಚ್ಚಿದ್ದವರಿಗೆ ಮದ್ದಿಲ್ಲ: ಪ್ರಮೋದ್ ಮಧ್ವರಾಜ್

    50 ಜನರ ತಂಡ ಕಟ್ಟಿ ತರಬೇತಿ ಮಾಡಬೇಕು. ಇದಕ್ಕೆ ಎಲ್ಲರೂ 50 ಸಾವಿರ ಒಂದು ಲಕ್ಷ ಹಾಕಬೇಕು. ಅದನ್ನು ಬಳಸಿಕೊಂಡು ಮಡಿಕೇರಿ ನಗರಕ್ಕೆ ಪೆಟ್ರೋಲ್ ಬಾಂಬ್ ಹಾಕಿಬಿಡೋದು. ಆ…. ನನ್ನ ಮಕ್ಕಳಿಗೆ ಬುದ್ದಿ ಕಲಿಸಬೇಕು. ಇಡೀ ಮಡಿಕೇರಿ ಟೌನ್ ಹೊತ್ತಿ ಉರಿಯಬೇಕು. ಮಡಿಕೇರಿ ಮಾತ್ರ ಅಲ್ಲ ಎಲ್ಲಾ ಕಡೆ ಹಾಕಬೇಕು. ಅಲ್ಲ ಅಲ್ಲ.. ಇಡೀ ಮಡಿಕೇರಿ ಹೊತ್ತಿ ಉರಿಯಬೇಕು. ಅವರೂ ಸಾಯಲಿ, ನಾವು ಸಾಯೋಣ. ಒಟ್ನಲ್ಲಿ ಅವರಿಗೆ ಭಯ ಹುಟ್ಟಬೇಕು. 50 ಜಾಗದಲ್ಲಿ ಬಾಂಬ್ ಹಾಕಬೇಕು. ಆಗ ಅವರ ಪಾರ್ಟಿ ಲೈಫ್ ಲಾಂಗ್ ಇರಲ್ಲ. ಬಿಜೆಪಿಯವರು ನಿಲ್ಲೋದಕ್ಕೂ ಹೆದರಬೇಕು. ಈ ಬಾರಿ ರಾಜ್ಯದಲ್ಲಿ ಬಿಜೆಪಿ (BJP) ಸೋಲುತ್ತದೆ. ಆಗ ಇವರಿಗೆ ಗೊತ್ತಾಗುತ್ತದೆ. ಡಿಕೆ ಶಿವಕುಮಾರ್ (D.K Shivakumar)  ಮೈಂಡ್ ಹಿಂದುತ್ವದ್ದು, ಸಿದ್ದರಾಮಯ್ಯ (Siddaramaiah) ಮೈಂಡ್ ಜಾತ್ಯಾತೀತ ಮೈಂಡ್. ಎರಡೂ ಒಂದೇ ಆಗಲು ಸಾಧ್ಯವಿಲ್ಲ ಎಂದು ಪರಸ್ಪರ ಮಾತನಾಡಿರುವ ಆಡಿಯೋ ಫೋನ್‍ನಲ್ಲಿ ರೆಕಾರ್ಡ್ ಆಗಿದೆ. ಇದನ್ನೂ ಓದಿ: ಆನ್‌ಲೈನ್ ಶಿಕ್ಷಣವೇ ವಿದ್ಯಾರ್ಥಿಗಳಿಗೆ ಶಿಕ್ಷೆ – ನ್ಯಾ. ಮಲ್ಲಿಕಾರ್ಜುನ ಗೌಡ

     

    ಮಡಿಕೇರಿ ನಗರದ ನಿವಾಸಿ ಶೇಷಪ್ಪ ರೈ ಎಂಬವರು ಮುಸ್ತಫಾ ಅವರಿಗೆ ಯಾವುದೋ ವ್ಯವಹಾರದ ವಿಷಯ ಮಾತನಾಡುವುದಕ್ಕೆ ಕರೆ ಮಾಡಿದ್ದಾರೆ. ಈ ವೇಳೆ ಮುಸ್ತಫಾ, ಶೇಷಪ್ಪ ರೈ ಅವರ ಫೋನ್ ಕಟ್ ಮಾಡುವ ಬದಲು, ಮಿಸ್ ಆಗಿ ರಿಸೀವ್ ಮಾಡಿ ಫೋನ್ ಅನ್ನು ತನ್ನ ಜೇಬಿನಲ್ಲಿ ಇರಿಸಿಕೊಂಡಿದ್ದಾರೆ. ಬಳಿಕ ಮಡಿಕೇರಿಯಲ್ಲಿ ಪೆಟ್ರೋಲ್ ಬಾಂಬ್ ಹಾಕುವ ವಿಷಯವನ್ನು ತನ್ನ ಸ್ನೇಹಿತ ಅಬ್ದುಲ್ಲಾ ಎಂಬುವವನೊಂದಿಗೆ ನೇರವಾಗಿ ಮಾತನಾಡಿದ್ದಾರೆ. ಈ ಎಲ್ಲಾ ವಿಷಯ ಮುಸ್ತಫಾಗೆ ಕರೆ ಮಾಡಿದ್ದ ಶೇಷಪ್ಪ ರೈ ಅವರ ಫೋನ್‌ನಲ್ಲಿ ಕಾಲ್ ರೆಕಾರ್ಡ್ ಆಗಿದೆ. ಇತ್ತೀಚೆಗೆ ಕಾಲ್ ರೆಕಾರ್ಡ್‍ಗಳನ್ನು ಪರಿಶೀಲನೆ ನಡೆಸುವಾಗ ಇದು ಬೆಳಕಿಗೆ ಬಂದಿದ್ದು ಶೇಷಪ್ಪ ರೈ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಶೇಷಪ್ಪ ರೈ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರದ ಪೊಲೀಸರು ಮಡಿಕೇರಿ ನಗರಸಭೆ ಸದಸ್ಯ ಮುಸ್ತಫಾ, ಬೆಟ್ಟಗೇರಿ ಅಬ್ದುಲ್ಲಾ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]