Tag: ಆಡಿಯೋ ಲಾಂಚ್

  • ನನ್ನಿಂದ ನೋವಾಗಿದ್ದಲ್ಲಿ ಕ್ಷಮೆ ಇರಲಿ- ಕಿಚ್ಚ ಸುದೀಪ್

    ನನ್ನಿಂದ ನೋವಾಗಿದ್ದಲ್ಲಿ ಕ್ಷಮೆ ಇರಲಿ- ಕಿಚ್ಚ ಸುದೀಪ್

    ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯಾಗಬೇಕಿದ್ದ ಪೈಲ್ವಾನ್ ಚಿತ್ರದ ಧ್ವನಿ ಸುರಳಿ ಕಾರ್ಯಕ್ರಮವನ್ನು ಮುಂದೂಡಿದ್ದಕ್ಕೆ ಸುದೀಪ್ ತಮ್ಮ ಸ್ನೇಹಿತರ ಬಳಿ ಕ್ಷಮೆ ಕೇಳಿದ್ದಾರೆ.

    ನಟ ಸುದೀಪ್ ಈ ಕುರಿತು ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. “ಎಲ್ಲ ಸ್ನೇಹಿತರ ಬಳಿ ನಾನು ಕ್ಷಮೆ ಕೇಳುತ್ತಿದ್ದೇನೆ. ಎಲ್ಲರೂ ನನ್ನನ್ನ ಕ್ಷಮಿಸಿ ಆಡಿಯೋ ಕಾರ್ಯಕ್ರಮವನ್ನು ಪೋಸ್ಟ್ ಪೋನ್ ಮಾಡುತ್ತಿದ್ದೇನೆ. ಖಂಡಿತವಾಗಿ ಹೀಗೆ ಮಾಡಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಆದರೆ ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡಬೇಕಿದೆ. ಹೀಗಾಗಿ ಈ ಎನರ್ಜಿಯನ್ನು ಅಲ್ಲಿಗೆ ಹಾಕಿ ಎಂದು ಎಲ್ಲ ಹುಡುಗರನ್ನು ಕೇಳಿಕೊಂಡಿದ್ದೇನೆ” ಎಂದಿದ್ದಾರೆ.

    ನಾನು ಆಡಿಯೋ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡುತ್ತಿಲ್ಲ, ಪೋಸ್ಟ್ ಪೋನ್ ಮಾಡುತ್ತಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಸಪೋರ್ಟ್ ಬೇಕು ಎಂದು ಚಿತ್ರತಂಡದ ಎಲ್ಲ ಕಲಾವಿದರ ಬಳಿ ಮನವಿ ಮಾಡಿಕೊಂಡಿದ್ದಾರೆ. ನನ್ನ ಮೇಲೆ ಬೇಜಾರು ಮಾಡಿಕೊಳ್ಳುವುದು ಅಥವಾ ಕೋಪ ಮಾಡಿಕೊಳ್ಳುವುದು ಮಾಡಬೇಡಿ. ನನ್ನಿಂದ ನೋವಾಗಿದ್ದಲ್ಲಿ ಕ್ಷಮೆ ಇರಲಿ. ಈ ಒಂದು ವಿಚಾರಕ್ಕೆ ನನ್ನೊಂದಿಗೆ ಇದ್ದೀರಾ ಎಂದು ನಾನು ನಂಬಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ.

    ಸದ್ಯಕ್ಕೆ ಪೈಲ್ವಾನ್ ಆಡಿಯೋ ಲಾಂಚನ್ನು ಪೋಸ್ಟ್ ಪೋನ್ ಮಾಡಿದ್ದೇನೆ. ಇದು ಸಂಭ್ರಮಾಚಾರಣೆಯ ಸಮಯವಲ್ಲ. ಈ ಒಂದು ವಿಚಾರದಲ್ಲಿ ನನಗೆ ಸಪೋರ್ಟ್ ಮಾಡಿ, ಎಲ್ಲರಿಗೂ ಧನ್ಯವಾದಗಳು. ಮತ್ತೊಮ್ಮೆ ಎಲ್ಲರ ಬಳಿ ಸುದೀಪ್ ಕ್ಷಮೆಯಾಚಿಸಿದ್ದಾರೆ.

  • #MeToo  ಅಭಿಯಾನದಲ್ಲಿ ಮಾನ್ವಿತಾ ಹುಡುಗರ ಪರ ಬ್ಯಾಟಿಂಗ್

    #MeToo ಅಭಿಯಾನದಲ್ಲಿ ಮಾನ್ವಿತಾ ಹುಡುಗರ ಪರ ಬ್ಯಾಟಿಂಗ್

    ಬೆಂಗಳೂರು: ಬಾಲಿವುಡ್‍ನಿಂದ ಹಿಡಿದು ಸ್ಯಾಂಡಲ್‍ವುಡ್ ವರೆಗೂ `ಮಿ ಟೂ’ದೇ ಸಿಕ್ಕಾ ಪಟ್ಟೆ ಸದ್ದು, ಈಗ ಇದೇ ಟಾಪಿಕ್ ಬಗ್ಗೆ ಚಂದನವನದ ಟಗರು ಪುಟ್ಟಿ ಮಾನ್ವಿತಾ ಖಡಕ್ ಆಗಿ ಮಾತನಾಡಿದ್ದಾರೆ.

    ಕೆಂಡಸಂಪಿಗೆ ಬೆಡಗಿ ಮಾನ್ವಿತಾ ಅವರು ಸಿನಿರಂಗದಲ್ಲಿ ನಡೆಯುತ್ತಿದ್ದ ‘ಮಿ ಟೂ’ ಬಗ್ಗೆ `ತಾರಕಾಸುರ’ ಸಿನಿಮಾದ ಆಡಿಯೋ ಲಾಂಚ್ ನಲ್ಲಿ ಮಾತನಾಡಿದ್ದಾರೆ. ಹುಡುಗ ನೋಡಿದ ತಕ್ಷಣ, ರೇಗಿಸಿದ ತಕ್ಷಣ ಅದನ್ನು ಲೈಂಗಿಕ ಕಿರುಕುಳ ಅಂತ ಹೇಳಬೇಡಿ. ಕೆಲವರು ಸುಮ್ಮನೆ ಪ್ರಚಾರಕ್ಕೋಸರ ಆರೋಪ ಮಾಡಬಾರದು ಎಂದು ಹುಡುಗಿಯರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ನಾನು ಹೃದಯ ಪೂರ್ವಕವಾಗಿ ಹೇಳುತ್ತೇನೆ. ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದ ಗಂಡು ಮಕ್ಕಳಿಗೆ ಶಿಕ್ಷೆ ಆಗಬೇಕು. ಆದರೆ ಗಂಡಸರ ಬಗ್ಗೆ ಯಾರೂ ಸುಮ್ಮಸುಮ್ಮನೆ ಆರೋಪ ಮಾಡಬಾರದು ಎಂದು ಮಾನ್ವಿತಾ ಅವರು ಹೇಳಿದ್ದಾರೆ.

    ಸದ್ಯಕ್ಕೆ ಮಾನ್ವಿತಾ ನಟಿಯಾಗಿ ‘ತಾರಕಾಸುರ’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಸಂಗೀತ ನಿರ್ದೇಶಕ ಧರ್ಮ ವಿಶ್ ಮತ್ತು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಕಾಂಬಿನೇಷನ್‍ನ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ರಥಾವರ ಸಿನಿಮಾದಲ್ಲಿ `ಹುಡುಗಿ ಕಣ್ಣು ಲೋಡೆಡ್ ಗನ್ನು’ ಹಾಡಿನ ಈ ಜೋಡಿ ಮತ್ತೆ ಮೋಡಿ ಮಾಡುವುದಕ್ಕೆ ನಾಲ್ಕು ಹಾಡುಗಳನ್ನ ರೆಡಿ ಮಾಡಿಕೊಂಡಿದೆ.

    ವಿ. ನಾಗೇಂದ್ರ ಪ್ರಸಾದ್, ಬಹುದ್ಧೂರ್ ಚೇತನ್, ನಾಗತಿಹಳ್ಳಿ ಚಂದ್ರ ಶೇಖರ್, ಕವಿರಾಜ್ ತಾರಕಾಸುರನಿಗೆ ಸಾಹಿತ್ಯ ಬರೆದಿದ್ದಾರೆ. ಈಗಾಗಲೇ ಶಿವಣ್ಣ ಹಾಡಿರುವ ಕನ್ನಡ ಕಲಿಯೋ ಸಾಂಗ್ ಯುಟ್ಯೂಬ್‍ನಲ್ಲಿ ಒಳ್ಳೆ ಸೌಂಡ್ ಮಾಡುತ್ತಿದೆ. ಈಗ ಸಾಧು ಕೋಕಿಲಾ ಕಂಠಸಿರಿಯಲ್ಲಿ ಮೂಡಿ ಬಂದಿರುವ ಮತ್ತೊಂದು ಹಾಡು ಸದ್ದು ಮಾಡುವ ಕ್ಲೂ ಕೊಟ್ಟಿದೆ. ಇನ್ನು ನವೀನ್ ಸಜ್ಜು ಮತ್ತು ಕೈಲಾಶ್ ಖೇರ್ ಕೂಡ ಅಷ್ಟೇ ಖಡಕ್ ಆಗಿ ಹಾಡಿದ್ದಾರೆ.

    ಅಳಿವಿನ ಅಂಚಿನಲ್ಲಿರುವ ಒಂದು ಜನಪದ ಕಲೆಗೆ ಸಿನಿಮಾ ಟಚ್ ಕೊಟ್ಟು ಥೇಟರ್ ಗೆ ಎಂಟ್ರಿ ಕೊಡುವುದಕ್ಕೆ ‘ತಾರಕಾಸುರ’ ಸಿನಿಮಾ ರೆಡಿಯಾಗಿದೆ. ಹಾಲಿವುಡ್‍ನ ಡ್ಯಾನಿ ಕೂಡ ಈ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿರುವುದು ಮತ್ತೊಂದು ಸ್ಪೆಷಲ್ ಆಗಿದೆ. ಸದ್ಯದಲ್ಲೇ ಟ್ರೇಲರ್ ಕೂಡ ರಿಲೀಸ್ ಮಾಡುವ ಪ್ಲಾನ್‍ ನಲ್ಲಿ ಚಿತ್ರತಂಡ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ಎಂಎಲ್‍ಎ’ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲ!

    ‘ಎಂಎಲ್‍ಎ’ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲ!

    ಬೆಂಗಳೂರು: ಬಿಗ್ ಬಾಸ್-4 ವಿಜೇತ ಪ್ರಥಮ್ ಎಂಎಲ್‍ಎ ಸಿನಿಮಾದಲ್ಲಿ ನಟಿಸುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಎಂಎಲ್‍ಎ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

    ಪ್ರಥಮ್ ಎಂಎಲ್‍ಎ ಸಿನಿಮಾದ ಆಡಿಯೋ ಲಾಂಚ್‍ಗೆ ದರ್ಶನ್ ಅವರನ್ನು ಕರೆಸಿ ಅವರ ಬಗ್ಗೆ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ನಿಜಕ್ಕೂ ದರ್ಶನ್ ಸರ್ ಈ ಕಾರಣಕ್ಕೆ ಗ್ರೇಟ್. ಅಂದು ಮೈಸೂರಿನಲ್ಲಿ ಯಜಮಾನ ಸಿನಿಮಾ ಶೂಟಿಂಗ್ ನಡೀಬೇಕಾದ್ರೆ ಕಾಲ್ ಮಾಡಿ ಹೋಗಿದ್ದೆ. ನನ್ನನ್ನು ಕಂಡೊಡನೆ ಬಹಳ ಪ್ರೀತಿಯಿಂದ ಮಾತನಾಡಿದ್ದರು ಎಂದು ಪ್ರಥಮ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

    ನಾನು ದರ್ಶನ್‍ರನ್ನು ಭೇಟಿ ಮಾಡಿ ಅವರನ್ನು ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಹ್ವಾನ ಮಾಡಿದೆ. ಖಂಡಿತಾ ಬರ್ತೀನಮ್ಮ ಎಂದು ಹೇಳಿದ್ದರು. ಅವರ ಬ್ಯುಸಿ ಶೆಡ್ಯೂಲ್‍ನಲ್ಲಿ ಎಲ್ಲಿ ಮರೆತುಬಿಡುತ್ತಾರೆ ಎಂದುಕೊಂಡೆ, ಆಗ ಅವರ ಆಪ್ತರ ಮೂಲಕ ಬೆಂಬಿಡದೆ ಬಾಸ್ ಬೆನ್ನು ಹತ್ತಿದೆ. ಮೊನ್ನೆ ನಾನೇ ಅವರಿಗೆ ಕರೆ ಮಾಡಿ ಮನವಿ ಮಾಡಿಕೊಂಡೆ, ಆಗ ಒಪ್ಪಿಕೊಂಡರು ಎಂದು ಪ್ರಥಮ್ ತಿಳಿಸಿದ್ದಾರೆ.

    ದರ್ಶನ್ ಸರ್ ಯಾವತ್ತೂ ಕೊಟ್ಟ ಮಾತು ಬದಲಿಸಿಲ್ಲ. ಇದ್ದಕ್ಕೆ ಈ ಮನುಷ್ಯನ್ನ ಕಂಡರೆ ಜನ ಪ್ರೀತಿಯಿಂದ ಹಿಂದೆ ಬೀಳುತ್ತಾರೆ. ಇವರಿಂದ ನಾನು ಕಲಿತ ಪಾಠ ಏನೆಂದರೆ ಕೊಟ್ಟ ಮಾತು ಈ ಇಂಡಸ್ಟ್ರಿಯಲ್ಲಿ ತಪ್ಪಬಾರದು ಎಂದು ಪ್ರಥಮ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.