Tag: ಆಡಿಯೋ ರಿಲೀಸ್

  • ಜುಲೈ 28ಕ್ಕೆ ಶಿವಣ್ಣ-ರಜನಿ ಕಾಂಬಿನೇಷನ್ ನ ‘ಜೈಲರ್’ ಸಿನಿಮಾದ ಆಡಿಯೋ ರಿಲೀಸ್

    ಜುಲೈ 28ಕ್ಕೆ ಶಿವಣ್ಣ-ರಜನಿ ಕಾಂಬಿನೇಷನ್ ನ ‘ಜೈಲರ್’ ಸಿನಿಮಾದ ಆಡಿಯೋ ರಿಲೀಸ್

    ದೇ ಮೊದಲ ಬಾರಿಗೆ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕನ್ನಡದ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಚಿತ್ರವೊಂದು ರೆಡಿಯಾಗಿದೆ. ಜೈಲರ್ ಹೆಸರಿನಲ್ಲಿ ಮೂಡಿ ಬಂದಿರುವ ಸಿನಿಮಾದ ಆಡಿಯೋ ರಿಲೀಸ್ (Audio Release) ಇವೆಂಟ್ ಇದೇ ಜುಲೈ 28ರಂದು ಚೆನ್ನೈನಲ್ಲಿ (Chennai) ನಡೆಯಲಿದೆ. ನೆಹರು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದ್ದು, ಶಿವಣ್ಣ ಕೂಡ ಭಾಗಿಯಾಗಲಿದ್ದಾರೆ.

    ಮತ್ತೊಂದು ಖುಷಿ ಸಂಗತಿ ಅಂದರೆ ‘ಜೈಲರ್’ (Jailer) ಸಿನಿಮಾದ ಕರ್ನಾಟಕ ವಿತರಣಾ (Distributed) ಹಕ್ಕು ಕರ್ನಾಟಕದ ಜಯಣ್ಣಗೆ ಸಿಕ್ಕಿದ್ದು, ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೊಡ್ಡದೊಂದು ಗೆಲುವು ಕಾಣದ ಜಯಣ್ಣಗೆ ಈ ಸಿನಿಮಾ ಕೈ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ.

    ಒಂದು ಕಡೆ ಸಿನಿಮಾವನ್ನು ರಿಲೀಸ್ ಮಾಡಲು ದೇಶಾದ್ಯಂತ ಸರ್ವಸಿದ್ದತೆ ನಡೆಸಿದ್ದರೆ, ಮತ್ತೊಂದು ಕಡೆ  ಚಿತ್ರದ ಟೈಟಲ್ (Title) ತಂಡಕ್ಕೆ ಸಂಕಷ್ಟ ತಂದಿದೆ ಈ ಸಿನಿಮಾ ಮೂರು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಮಲಯಾಳಂ (Malayalam) ನಿರ್ದೇಶಕರೊಬ್ಬರು ಟೈಟಲ್ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾರೆ.

    ಮಲಯಾಳಂನಲ್ಲಿ ಈಗಾಗಲೇ ನಿರ್ದೇಶಕ ಸಕ್ಕಿರ್ ಮಡತ್ತಿಲ್ಲ (Sakkir Madattilla) ‘ಜೈಲರ್’ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಅದು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಮಲಯಾಳಂನಲ್ಲಿ ರಜನಿ ಜೈಲರ್ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದರಿಂದ, ಮಲಯಾಳಂನಲ್ಲಿ ಟೈಟಲ್ ಬದಲಾಯಿಸಿ ರಿಲೀಸ್ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದರು. ಆದರೆ, ಅದು ಆಗುವುದಿಲ್ಲ ಎಂದು ಸನ್ ಪಿಕ್ಚರ್ ನಿರ್ಮಾಣ ಸಂಸ್ಥೆ ಉತ್ತರ ಬರದಿತ್ತು.

    ಈಗ ಸಕ್ಕಿರ್ ಮಡತ್ತಿಲ್ಲ ತಮಿಳಿನ ಜೈಲರ್ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಮೊದಲು ಜೈಲರ್ ಹೆಸರಿನಲ್ಲಿ ತಾವು ಸಿನಿಮಾ ಮಾಡಿದ್ದರಿಂದ ಮತ್ತು ಮಲಯಾಳಂನಲ್ಲಿ ತಮಗೆ ರಜನಿ ಸಿನಿಮಾದಿಂದ ತೊಂದರೆ ಆಗುವುದರಿಂದ, ಟೈಟಲ್ ಬದಲಾಯಿಸುವಂತೆ ಅವರು ಕೋರ್ಟ್ ಗೆ ಮೊರೆ ಹೋಗಿದ್ದಾರೆ. ಇದನ್ನೂ ಓದಿ:ಡೈರೆಕ್ಟರ್ ಕ್ಯಾಪ್ ತೊಟ್ಟ ‘ಚುಟು ಚುಟು’ ಕೊರಿಯೋಗ್ರಾಫರ್ ಭೂಷಣ್ ಮಾಸ್ಟರ್

    ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ತಲೈವ ವೃತ್ತಿ ಬದುಕಿನ ವಿಶೇಷ ಚಿತ್ರ‌ ಇದಾಗಿದ್ದು, ದಕ್ಷಿಣ ಭಾರತ ಹಾಗೂ ಬಾಲಿವುಡ್‌ ದಿಗ್ಗಜರು‌ ಜೈಲರ್ ಸಿನಿಮಾದ ಭಾಗವಾಗಿದ್ದಾರೆ. ಸದ್ಯ ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿರುವ ಈ ಚಿತ್ರ ಆಗಸ್ಟ್ 10ಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದೆ.

    ಸನ್ ಪಿಕ್ಚರ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ (Nelson Dilip Kumar) ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್ (Shivaraj Kumar) ವಿಶೇಷ ಪಾತ್ರದಲ್ಲಿ ನಟಿಸಿರೋದು ಕುತೂಹಲ ಕೆರಳಿಸಿದೆ. ಇನ್ನು ಬಾಲಿವುಡ್‌ ನಟ ಜಾಕಿ ಶ್ರಾಫ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ (Mohanlal), ಟಾಲಿವುಡ್ ನಟ ಸುನಿಲ್, ನಾಗಬಾಬು, ನಟಿ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ ನಟಿಸಿದ್ದು, ಸಿನಿಪ್ರಿಯರಿಗೆ ಇವರೆಲ್ಲರನ್ನೂ ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಸಿಗಲಿದೆ.

     

    ಅಣ್ಣಾತ್ತೆ ಬಳಿಕ ರಜನಿ ನಟಿಸಿರುವ 169ನೇ ಸಿನಿಮಾ ಜೈಲರ್. ತಲೈವ ಹೊಸ ಸಿನಿಮಾ ಎಂಟ್ರಿಗೆ ಕಾದು‌ ಕುಳಿತಿರುವ ಅಭಿಮಾನಿಗಳು ಹಬ್ಬ ಮಾಡಲು ಸಜ್ಜಾಗಿದ್ದಾರೆ. ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ‌ ನಿರ್ದೇಶನದ ಜೈಲರ್ ಸಿನಿಮಾವನ್ನೂ ಚೆನ್ನೈ, ಮಂಗಳೂರು, ಹೈದರಾಬಾದ್, ಕೇರಳ ಸೇರಿದಂತೆ ಹಲವೆಡೆ ಶೂಟಿಂಗ್ ನಡೆಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೇಮಿಗಳ ದಿನದಂದು ‘ಪೊಗರು’ ಆಡಿಯೋ ಅಬ್ಬರ – ದಾವಣಗೆರೆಯಲ್ಲಿ ನಡೆಯಲಿದೆ ಅದ್ಧೂರಿ ಕಾರ್ಯಕ್ರಮ

    ಪ್ರೇಮಿಗಳ ದಿನದಂದು ‘ಪೊಗರು’ ಆಡಿಯೋ ಅಬ್ಬರ – ದಾವಣಗೆರೆಯಲ್ಲಿ ನಡೆಯಲಿದೆ ಅದ್ಧೂರಿ ಕಾರ್ಯಕ್ರಮ

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ‘ಪೊಗರು’ ಚಿತ್ರ ಬಿಡುಗಡೆಗೆ ಕೌಂಟ್‍ಡೌನ್ ಶುರುವಾಗಿದೆ. ಇದೀಗ ಅಭಿಮಾನಿಗಳಿಗೆ ಆಕ್ಷನ್ ಪ್ರಿನ್ಸ್ ಮತ್ತೊಂದು ಉಡುಗೊರೆ ನೀಡಲು ನಿರ್ಧರಿಸಿದ್ದು, ಆಡಿಯೋ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆಡಿಯೋ ಬಿಡುಗಡೆ ಬಗ್ಗೆ ಧ್ರುವ ಸರ್ಜಾ ಮಾಹಿತಿ ಹಂಚಿಕೊಂಡಿದ್ದಾರೆ.

    ಪ್ರೇಮಿಗಳ ದಿನದಿಂದು ‘ಪೊಗರು’ ಆಡಿಯೋ ಗ್ರ್ಯಾಂಡ್ ಆಗಿ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ದು, ದಾವಣಗೆರೆಯ ಸರ್ಕಾರಿ ಹೈಸ್ಕೂಲ್ ಗ್ರೌಂಡ್‍ನಲ್ಲಿ ಅದ್ದೂರಿಯಾಗಿ ಪೊಗರು ಆಡಿಯೋ ಬಿಡುಗಡೆಯಾಗಲಿದೆ. ಆಡಿಯೋ ರಿಲೀಸ್ ಸಾಕಷ್ಟು ಸರ್ಪ್ರೈಜ್ ನಿಂದ ಕೂಡಿರಲಿದೆ ಎಂದು ಆಕ್ಷನ್ ಪ್ರಿನ್ಸ್ ತಿಳಿಸಿದ್ದು, ಆಡಿಯೋ ರಿಲೀಸ್ ಸುದ್ದಿ ಕೇಳುತ್ತಿದ್ದಂತೆ ಧ್ರುವ ಅಭಿಮಾನಿ ಬಳಗದ ಸಂಭ್ರಮ ದುಪ್ಪಟ್ಟಾಗಿದೆ.

    ನಂದಕಿಶೋರ್ ನಿರ್ದೇಶನದಲ್ಲಿ ‘ಪೊಗರು’ ಚಿತ್ರ ಮೂಡಿಬಂದಿದ್ದು, ತೆಲುಗು, ತಮಿಳಿನಲ್ಲೂ ಈ ಬಾರಿ ಆಕ್ಷನ್ ಪ್ರಿನ್ಸ್ ಮೋಡಿ ಮಾಡಲಿದ್ದಾರೆ. ರಶ್ಮಿಕಾ ಮಂದಣ್ಣ, ಧ್ರುವ ಸರ್ಜಾ ಜೋಡಿಯಾಗಿ ನಟಿಸಿದ್ದು, ಆಕ್ಷನ್ ಜೊತೆ ತಾಯಿ ಸೆಂಟಿಮೆಂಟ್ ಕೂಡ ಪೊಗರು ಸಿನಿಮಾದಲ್ಲಿದೆ. ಬಿ.ಕೆ ಗಂಗಾಧರ್ ನಿರ್ಮಾಣದಲ್ಲಿ ಬಿಗ್ ಬಜೆಟ್‍ನಲ್ಲಿ ಚಿತ್ರ ನಿರ್ಮಾಣವಾಗಿದೆ. ಕೆ.ವಿ.ಎನ್ ಪ್ರೊಡಕ್ಷನ್ಸ್ ಪೊಗರು ಸಿನಿಮಾವನ್ನು ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಮಾಡುತ್ತಿದ್ದು, ಫೆಬ್ರವರಿ 19ರಿಂದ ಪೊಗರು ಅಬ್ಬರ ಚಿತ್ರಮಂದಿರಗಳಲ್ಲಿ ಶುರುವಾಗಲಿದೆ.

    ಕೊರೊನಾ ಲಾಕ್‍ಡೌನ್ ನಂತರ ಬಿಡುಗಡೆಯಾಗುತ್ತಿರುವ ಬಿಗ್ ಬಜೆಟ್ ಹಾಗೂ ಬಿಗ್ ಸ್ಟಾರ್ ಕಾಸ್ಟ್ ಸಿನಿಮಾ ಇದಾಗಿದೆ. ಚಿತ್ರದ ಡೈಲಾಗ್ ಟ್ರೈಲರ್ ಹಾಗೂ ಕರಾಬು ಸಾಂಗ್ ಸೂಪರ್ ಹಿಟ್ ಆಗಿದ್ದು, ತೆರೆ ಮೇಲೆ ಆಕ್ಷನ್ ಪ್ರಿನ್ಸ್ ನಟೋರಿಯಸ್ ಆಕ್ಷನ್ ಸೀನ್‍ಗಳ ಅಬ್ಬರ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಸಿನಿಮಾ ಪ್ರಚಾರ ಕಾರ್ಯದಲ್ಲಿ ‘ಪೊಗರು’ ಚಿತ್ರತಂಡ ಬ್ಯುಸಿಯಾಗಿದ್ದು, ಚೆನೈನಲ್ಲಿ ಈಗಾಗಲೇ ಪ್ರಚಾರ ಕಾರ್ಯ ಮುಗಿಸಿರುವ ಚಿತ್ರತಂಡ ತೆಲುಗಿನಲ್ಲಿ ಚಿತ್ರದ ಪ್ರಚಾರ ಆರಂಭಿಸಲಿದೆ.

    ಶ್ರೇಯಸ್ ಮೀಡಿಯಾ ‘ಪೊಗರು’ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಗ್ರ್ಯಾಂಡ್ ಆಗಿ ನಡೆಸಿಕೊಡಲಿದ್ದು, ದಾವಣಗೆರೆಯಲ್ಲಿ ಆಕ್ಷನ್ ಪ್ರಿನ್ಸ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

  • ಮನೆಯಿಂದ ಹೊರ ಹೋಗ್ತಿದ್ದಂತೆ ಪುನೀತ್‍ರಿಂದ ಎಫ್‍ಬಿ ಲೈವ್

    ಮನೆಯಿಂದ ಹೊರ ಹೋಗ್ತಿದ್ದಂತೆ ಪುನೀತ್‍ರಿಂದ ಎಫ್‍ಬಿ ಲೈವ್

    ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅವರು ಐಟಿ ದಾಳಿ ಮುಗಿದ ತಕ್ಷಣ ಮನೆಯಿಂದ ಹೊರ ಬಂದು ಅಭಿಮಾನಿಗಳನ್ನು ಮಾತನಾಡಿಸಿ ಹುಬ್ಬಳ್ಳಿಗೆ ತೆರಳಿದ್ದಾರೆ. ಈ ವೇಳೆ ಕಾರಿನಲ್ಲಿಯೇ ಫೇಸ್‍ಬುಕ್ ಲೈವ್ ಮಾಡಿ ಮಾತನಾಡಿದ್ದಾರೆ.

    ನಟ ಪುನೀತ್ ಮನೆಯಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಕೆಲವು ಕ್ಷಣ ಮಾತನಾಡಿದ್ದು, ಐಟಿ ಅಧಿಕಾರಿಗಳು ಬಂದು ಅವರ ಕೆಲಸ ಏನು ಅದನ್ನು ಮಾಡಿದ್ದಾರೆ. ಅವರಿಗೆ ನಾವು ಸಹಕರಿಸಿದ್ದೇವೆ. ಐಟಿ ಅಧಿಕಾರಿಗಳು ತುಂಬಾ ಪ್ರೊಫೆಶನಲ್ ಆಗಿ ಕೆಲಸ ಮಾಡಿದ್ದಾರೆ. ಏನು ತೊಂದರೆ ಆಗಿಲ್ಲ ಎಂದು ಕಾರು ಹತ್ತಿ ಹೊರಟ್ಟಿದ್ದಾರೆ.

    ಕಾರ ಹತ್ತಿದ ತಕ್ಷಣ ಪುನೀತ್ ಫೇಸ್‍ಬುಕ್‍ನಲ್ಲಿ ಲೈವ್ ಬಂದು, ಎಲ್ಲರಿಗೂ ನಮಸ್ಕಾರ, ಇಂದು ಸಂಜೆ ನಮ್ಮ ಸಿನಿಮಾ ‘ನಟಸಾರ್ವಭೌಮ’ ಆಡಿಯೋ ರಿಲೀಸ್ ಹುಬ್ಬಳ್ಳಿಯಲ್ಲಿ ಆಗುತ್ತಿದೆ. ಆದ್ದರಿಂದ ನಾವೆಲ್ಲ ಬರುತ್ತಿದ್ದೇವೆ. ನಿಮ್ಮನ್ನು ಅಲ್ಲಿಯೇ ಭೇಟಿ ಮಾಡುತ್ತೇವೆ. ಎಲ್ಲರೂ ಬನ್ನಿ ಕಾರ್ಯಕ್ರಮವನ್ನು ಎಂಜಾಯ್ ಮಾಡಿ” ಎಂದು ಹೇಳಿದ್ದಾರೆ.

    ಇಂದು ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಸಂಜೆ ಸುಮಾರು 5 ಗಂಟೆಗೆ ಪುನೀತ್ ಅಭಿನಯದ `ನಟಸಾರ್ವಭೌಮ’ ಸಿನಿಮಾದ ಧ್ವನಿಸುರುಳಿ ಬಿಡುಗಡೆಯಾಗುತ್ತಿದೆ. ಪುನೀತ್ ಮನೆಯ ಐಟಿ ದಾಳಿ ಶುಕ್ರವಾರ ರಾತ್ರಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಇಂದು ಕಾರ್ಯಕ್ರಮಕ್ಕೆ ಹೋಗಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಪುನೀತ್ ಹುಬ್ಬಳ್ಳಿಗೆ ಹೊರಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 17 ವರ್ಷದ ನಂತ್ರ ಹುಚ್ಚ ಸಿನಿಮಾದ ನೆನಪು ಬಿಚ್ಚಿಟ್ಟ ಸುದೀಪ್

    17 ವರ್ಷದ ನಂತ್ರ ಹುಚ್ಚ ಸಿನಿಮಾದ ನೆನಪು ಬಿಚ್ಚಿಟ್ಟ ಸುದೀಪ್

    ಬೆಂಗಳೂರು: ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಅಭಿನಯದ ಹುಚ್ಚ ಸಿನಿಮಾ ರಿಲೀಸ್ ಆಗಿ 17 ವರ್ಷ ಕಳೆದಿದೆ. ಈಗ ಅದರ ಮುಂದುವರಿದ ಭಾಗ ಹುಚ್ಚ 2 ನಿಮ್ಮನ್ನ ರಂಜಿಸುವುದಕ್ಕೆ ಸಿದ್ಧವಾಗುತ್ತಿದೆ.

    ಡಾರ್ಲಿಂಗ್ ಕೃಷ್ಣ ಹುಚ್ಚ 2 ನಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಹುಚ್ಚ 2 ಸಿನಿಮಾದ ಹಾಡುಗಳನ್ನ ಕಿಚ್ಚ ರಿಲೀಸ್ ಮಾಡಿದ್ದಾರೆ. ಅನೂಪ್ ಸೀಳಿನ್ ಚಿತ್ರದ ಹಾಡುಗಳಿಗೆ ಟ್ಯೂನ್ ಕಂಪೋಸ್ ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಸುದೀಪ್, ಹುಚ್ಚ 2 ಆಡಿಯೋ ರಿಲೀಸ್ ಮಾಡಿದ್ದೇವೆ. ನನ್ನ ಸಿನಿಮಾ ರಿಲೀಸ್ ಮಾಡಿ 17 ವರ್ಷ ಆಗಿದೆ. ಆದರೆ ನನಗೆ 17 ಆಗಿದೆ ಎಂದು ಅನ್ನಿಸುತ್ತಿಲ್ಲ. ಅದರ ನೆನಪುಗಳು ಯಾವಾಗಲೂ ಅಳಿಸುವುದಿಲ್ಲ. ನಾನು ಓಂ ಪ್ರಕಾಶ್ ತುಂಬಾ ಸಿನಿಮಾ ಮಾಡಿದ್ದೇವೆ. ಆದರೆ ಈ ರೀತಿ ಮ್ಯಾಜಿಕ್ ಕ್ರಿಯೇಟ್ ಮಾಡಿಲ್ಲ. ಕೆಲವು ಸಿನಿಮಾ ಮಾತ್ರ ಈ ರೀತಿಯ ಮ್ಯಾಜಿಕ್ ಕ್ರಿಯೇಟ್ ಮಾಡುತ್ತವೆ. ಈ ಸಿನಿಮಾದಿಂದಲೇ ನಾನು ಇಲ್ಲಿವರೆಗೂ ಬಂದಿರುವುದು ಎಂದರು. ಇವತ್ತಿಗೂ ಈ ಸಿನಿಮಾವನನ್ನು ಕೈಯಲ್ಲಿ ಹಿಡಿದಿದ್ದರೆ ಇದು ನನ್ನ ಎನ್ನಿಸುತ್ತದೆ ಎಂದರು.

    ಈ ಸಿನಿಮಾ ಬಗ್ಗೆ ಹೇಳ ಬೇಕೆಂದರೆ ಟ್ರೈಲರ್ ತುಂಬಾ ಚನ್ನಾಗಿದೆ. ಈ ಸಿನಿಮಾ ನೋಡಿದರೆ ಹಳೇ ಓಂ ಪ್ರಕಾಶ್ ಕಾಣಿಸುತ್ತಾರೆ. ತುಂಬಾ ಖುಷಿಯಾಯಿತು. ಇದಕ್ಕೆ ಅನೂಪ್ ಸೀಳಿನ್ ಅವರು ಸಂಗೀತ ಕಂಪೋಸ್ ಮಾಡಿದ್ದಾರೆ. ಈ ಸಿನಿಮಾ ನನಗೆ ಹತ್ತಿರವಾದ ಸಿನಿಮಾವಾಗಿದೆ ಎಂದು ಹೇಳಿ ಚಿತ್ರತಂಡಕ್ಕೆ ಶುಭಾ ಹಾರೈಸಿ ಸಿನಿಮಾ ಯಶಸ್ವಿಯಾಗಲಿ ಎಂದು ಹೇಳಿದ್ದಾರೆ.

    ಹುಚ್ಚ – 2 ಸಿನಿಮಾದಲ್ಲಿ ದೊಡ್ಡ ತಾರಾ ಬಳಗವಿದ್ದು, ಅವಿನಾಶ್, ಸಾಯಿಕುಮಾರ್, ಸಾಧುಕೋಕಿಲಾ, ಶ್ರಾವ್ಯ, ಮಾಳವಿಕಾ ಅವಿನಾಶ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಹಾಡು, ಟ್ರೈಲರ್ ಗಳ ಬಗ್ಗೆ ಸುದೀಪ್ ತಮ್ಮ ಮೆಚ್ಚುಗೆಯನ್ನು ಹೇಳಿಕೊಂಡಿದ್ದಾರೆ.