Tag: ಆಡಿಯೋ ಕ್ಲಿಪ್

  • ರಾಜಮಾರ್ಗದಲ್ಲಿ ಎದುರಿಸಲು ಧೈರ್ಯವಿಲ್ಲದ್ದಕ್ಕೆ ಸುಳ್ಳು ಆರೋಪ – ತೇಜಸ್ವಿ ಸೂರ್ಯ

    ರಾಜಮಾರ್ಗದಲ್ಲಿ ಎದುರಿಸಲು ಧೈರ್ಯವಿಲ್ಲದ್ದಕ್ಕೆ ಸುಳ್ಳು ಆರೋಪ – ತೇಜಸ್ವಿ ಸೂರ್ಯ

    ಬೆಂಗಳೂರು: ಕಾಂಗ್ರೆಸ್ ಬಿಡುಗಡೆಗೊಳಿಸಿರುವ ಆಡಿಯೋ ಕ್ಲಿಪ್ ಬಗ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

    ಬೊಮ್ಮನಹಳ್ಳಿಯ ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಂಡು ಮಾಧ್ಯಮಗಳ ಜೊತೆ ಮಾತನಾಡಿದ ತೇಜಸ್ವಿ ಸೂರ್ಯ, ಕಾಂಗ್ರೆಸ್ ನಾಯಕರಿಗೆ ಚುನಾವಣೆಯನ್ನು ರಾಜಮಾರ್ಗದಲ್ಲಿ ಎದುರಿಸಲು ಧೈರ್ಯವಿಲ್ಲ. ಅವರೆಲ್ಲ ಪುಕ್ಕಲರಾಗಿದ್ದು, ಜನತೆ ನಮಗೆ ತೋರಿಸುತ್ತಿರುವ ಪ್ರೀತಿ ನೋಡಿ ಅವರಿಗೆ ಹೆದರಿಕೆ ಆಗಿದೆ. ಹಾಗಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ನೂರು ರೀತಿ ಆರೋಪ ಮಾಡಿದರೂ ಎದುರಿಸುವ ಶಕ್ತಿ ಜೊತೆಗೆ ನಮ್ಮ ನಾಯಕರ ಆಶೀರ್ವಾದ ನನ್ನೊಂದಿಗಿದೆ. ಜನರ ಪ್ರೀತಿಯೊಂದಿಗೆ ಪ್ರಧಾನಿ ಮೋದಿಯವರ ಶ್ರೀರಕ್ಷೆ ನನಗಿದೆ ಎಂದರು. ಇದನ್ನೂ ಓದಿ: ನಾಚಿಕೆ ಆಗ್ಬೇಕು, ನಿಮ್ಮ ವಿರುದ್ಧ ಕಾನೂನು ಸಮರ: ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತಾ ಗುಡುಗು

    ಈ ರೀತಿಯ ಕ್ಷುಲ್ಲಕ ವಿಷಯಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಕಾನೂನಿನ ಮೊರೆ ಹೋಗುಗ ಬಗ್ಗೆ ಹಿರಿಯ ನಾಯಕರಿಂದ ಮಾರ್ಗದರ್ಶನ ಪಡೆಯುತ್ತೇನೆ. ಜನ ಕಾಂಗ್ರೆಸ್ಸಿನ ಡರ್ಟಿ ಟ್ರಿಕ್ ಡಿಪಾರ್ಟ್ ಮೆಂಟ್ ಹೇಗೆ ಕೆಲಸ ಮಾಡುತ್ತೆ ಅಂತ 70 ವರ್ಷದಿಂದ ನೋಡಿದ್ದಾರೆ. ಜನ ಮತದಾನನ ದಿವಸ ಎಲ್ಲದಕ್ಕೂ ಉತ್ತರ ಕೊಡುತ್ತಾರೆ ಎಂದು ಹೇಳುವ ಮೂಲಕ ಗೆಲುವು ನನ್ನದೇ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ತೇಜಸ್ವಿ ಸೂರ್ಯ ವಿರುದ್ಧ ಎಫ್‍ಐಆರ್ ದಾಖಲಾಗಿಲ್ಲ: ಡಿಸಿಪಿ ಇಶಾ ಪಂತ್

    https://www.youtube.com/watch?v=b_yx7ATOliM