Tag: ಆಡಳಿತಾಧಿಕಾರಿ

  • ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಆಡಳಿತಾಧಿಕಾರಿ

    ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಆಡಳಿತಾಧಿಕಾರಿ

    ಬೆಂಗಳೂರು: ಚಿತ್ರದುರ್ಗದ ಮುರುಘಾ ಮಠಕ್ಕೆ(Chitradurga Muruga Mutt) ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್(Vastrad) ಅವರನ್ನು ಆಡಳಿತಾಧಿಕಾರಿಯನ್ನಾಗಿ(Administrator) ನೇಮಿಸಿದೆ.

    ಲೆಕ್ಕಪತ್ರ ನಿರ್ವಹಣೆ, ಮಠದ ಚರ ಹಾಗೂ ಸ್ಥಿರಾಸ್ತಿ ಹಿತದೃಷ್ಟಿಯಿಂದ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಸರ್ಕಾರ ಅಡ್ವೋಕೇಟ್ ಜನರಲ್ ಅಭಿಪ್ರಾಯ ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿ ವರದಿಯನ್ನು ಪರಿಶೀಲಿಸಿ ಈ ನಿರ್ಧಾರ ಕೈಗೊಂಡಿದೆ.

    ಇನ್ನು ಮುಂದೆ ಮುರುಘಾ ಮಠದ ಟ್ರಸ್ಟ್ ಮತ್ತು ಶಿಕ್ಷಣ ಸಂಸ್ಥೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಆಡಳಿತಾಧಿಕಾರಿ ನೋಡಿಕೊಳ್ಳಲಿದ್ದಾರೆ.  ಇದನ್ನೂ ಓದಿ: ಭಾರತ – ಚೀನಾ ಸಂಘರ್ಷಕ್ಕೆ ಮೂಲ ಕಾರಣ ನೆಹರೂ – ಸಿ.ಟಿ ರವಿ

    ಜಿಲ್ಲಾಧಿಕಾರಿಗಳ ವರದಿಯಲ್ಲಿ ಏನಿತ್ತು?
    ಶಿವಮೂರ್ತಿ ಮುರುಘಾ ಶರಣರು ಸೆ.1 ರಿಂದ ನ್ಯಾಯಾಂಗ ಬಂಧನದಲ್ಲಿರುವುದರಿಂದ ಮಠದ ಒಟ್ಟು ಸ್ಥಿರಾಸ್ತಿಗೆ ಮತ್ತು ಮಠದ ಹಣಕಾಸು ನಿರ್ವಹಣೆಯನ್ನು ನೋಡಿಕೊಳ್ಳುವುದು ಕಷ್ಟಕರವಾಗಿರುತ್ತದೆ. ಈ ಟ್ರಸ್ಟ್ ಸಾರ್ವಜನಿಕ ಟ್ರಸ್ಟ್ ಆಗಿರುವುದರಿಂದ ಆಸ್ತಿಗಳ ನಿರ್ವಹಣೆಗಳ ತೊಡಕುಂಟಾಗುತ್ತಿದೆ

    ದುರಾಡಳಿತ ಹಾಗೂ ಹಣಕಾಸು ದುರುಪಯೋಗ ಆದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ದಕ್ಕೆಯಾಗುವ ಸಂಭವ ಇರುತ್ತದೆ. ಆದ ಕಾರಣ ಟ್ರಸ್ಟ್ ಮತ್ತು ವಿದ್ಯಾಸಂಸ್ಥೆಯ ನಿರ್ವಹಣೆಗೂ ಸಹ ತೊಂದರೆ ಉಂಟಾಗುತ್ತದೆ. ಈ ಸಂಸ್ಥೆಗೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಮಠದ ಜೀವ ಪೀಠಾಧಿಪತಿ ಹಾಗೂ ವಿದ್ಯಾ ಸಂಸ್ಥೆಗೆ ಅಜೀವ ಅಧ್ಯಕ್ಷರು ಆಗಿರುವುದರಿಂದ ಮಠದ ಹಾಗೂ ವಿದ್ಯಾ ಸಂಸ್ಥೆಗಳ ಅನಾನುಕೂಲಗಳನ್ನು ತಪ್ಪಿಸಲು ಸಾರ್ವಜನಿಕ ಹಿತದೃಷ್ಟಿಯಿಂದ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ವರದಿಯಲ್ಲಿ ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಮಠದ ಆಡಳಿತಾಧಿಕಾರಿ, ಅಧಿಕಾರಿ ಪತ್ನಿ ವಿರುದ್ಧ ಕೇಸ್

    ಮುರುಘಾ ಮಠದ ಆಡಳಿತಾಧಿಕಾರಿ, ಅಧಿಕಾರಿ ಪತ್ನಿ ವಿರುದ್ಧ ಕೇಸ್

    ಚಿತ್ರದುರ್ಗ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಅಡಿಯಲ್ಲಿ ಮುರುಘಾ ಮಠದ ಆಡಳಿತಾಧಿಕಾರಿಯೂ ಆಗಿರುವ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    CRIME 2

    ಮುರುಘಾ ಮಠದ ಹಾಸ್ಟೆಲ್ ವಾರ್ಡನ್ ರಶ್ಮಿ ಅವರು ನೀಡಿದ ದೂರನ್ನು ಆಧರಿಸಿ ಎಸ್.ಕೆ.ಬಸವರಾಜನ್ ವಿರುದ್ಧ ಸೆಕ್ಷನ್ 354 (ಅತ್ಯಾಚಾರಕ್ಕೆ ಯತ್ನ) ಹಾಗೂ ಬಸವರಾಜನ್ ಮತ್ತು ಸೌಭಾಗ್ಯ ವಿರುದ್ಧ ಸೆಕ್ಷನ್ 341, 342, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ – ಮುರುಘಾ ಶರಣರ ವಿರುದ್ಧ ಕೇಸ್‌

    ಆಡಳಿತಾಧಿಕಾರಿ ಬಸವರಾಜನ್ ಹಾಸ್ಟೆಲ್ ಪರಿಶೀಲನೆ ಮಾಡುವ ನೆಪದಲ್ಲಿ ಆಗಾಗ್ಗೆ ಬಂದು ದೇಹದ ಅಂಗಾಂಗಗಳನ್ನು ಮುಟ್ಟಿ ಹಿಂಸೆ ನೀಡುತ್ತಿದ್ದರು. ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರತಿರೋಧ ತೋರಲಾಯಿತು. ಇದರಿಂದ ವಿಚಾರ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆಗೆ ಮೆಗಾ ಟ್ವಿಸ್ಟ್: ವೈರಲ್ ವಿಡಿಯೋ ಬಗ್ಗೆ ಅನುಮಾನ

    ಮಠದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಿಬ್ಬರು ವೈಯಕ್ತಿಕ ಕಾರಣ ನೀಡಿ ಹಾಸ್ಟೆಲ್ ನಿಂದ ಹೊರ ಹೋಗಿದ್ದರು. ಆದರೆ ಅವರು ಮನೆಗೆ ತೆರಳದೇ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ತಲುಪಿದ್ದರು. ಆದರೆ ಮಕ್ಕಳ ಸಂಬಧಪಟ್ಟವರಿಗೆ ಮಾಹಿತಿ ನೀಡದೇ ತನ್ನ ಮನೆಯಲ್ಲೇ ಅಕ್ರಮವಾಗಿ ಮನೆಯಲ್ಲಿ ಇರಿಸಿಕೊಂಡಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿದ ಸರಕಾರ : ಚುನಾವಣೆ ಅನಿವಾರ್ಯ

    ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿದ ಸರಕಾರ : ಚುನಾವಣೆ ಅನಿವಾರ್ಯ

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಬೆನ್ನೆಲ್ಲೆ, ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ಕೂಡ ನಡೆಸಬೇಕೆಂದು ಮತ್ತು ಚುನಾವಣೆ ನಡೆಯುವವರಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ನಿರ್ಮಾಪಕ ಕೃಷ್ಣೇಗೌಡ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ್ದರು. ಅದರ ಅನ್ವಯ, ಇದೀಗ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

    ಈಗಿರುವ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಅಧಿಕಾರ ಅವಧಿ ಸೆಪ್ಟೆಂಬರ್ 2021ಕ್ಕೆ ಮುಕ್ತಾಯವಾಗಿತ್ತು. ಆನಂತರ ಚುನಾವಣೆ ನಡೆಸದೇ ಅಧಿಕಾರಿ ಮುಂದುವರೆಸಲಾಗಿತ್ತು. ಹಾಗಾಗಿ ನಿರ್ಮಾಪಕ ಕೃಷ್ಣೇಗೌಡ ಅವರು ಸಹಕಾರ ಇಲಾಖೆಗೆ ಪತ್ರ ಬರೆದು, ‘ಸೆಪ್ಟೆಂಬರ್ 2021ರಲ್ಲೇ ಸಂಘದ ಪದಾವಧಿಯು ಮುಕ್ತಾಗೊಂಡಿರುವುದು ಕಂಡು ಬಂದಿದ್ದು, ಅವಧಿ ಮುಗಿದಿರುವ ಆಡಳಿತ ಮಂಡಳಿಯು ಅನಧಿಕೃತವಾಗಿ ಮುಂದುವರೆದಿರುತ್ತದೆ. ಸಂಘದ ಆಡಳಿತ ಮಂಡಳಿ ಚುನಾವಣೆಯನ್ನು ನಿಗದಿತ ಅವಧಿಯಲ್ಲಿ ನಡೆಸಲು ವಿಫಲವಾಗಿರುವುದರಿಂದ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ ಎಂದು’ ಆದೇಶದ ಹೊರಡಿಸಲಾಗಿದೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್

    ಸರಕಾರವು ಆಡಳಿತಾಧಿಕಾರಿಯನ್ನು ನೇಮಿಸಿರುವ ಕಾರಣದಿಂದಾಗಿ ಅಧ್ಯಕ್ಷರಾಗಿದ್ದ ಡಿ.ಕೆ.ರಾಮಕೃಷ್ಣ ಅವರು ರಾಜೀನಾಮೆ ಕೊಡುವಂತಾಗಿದೆ. ಅಲ್ಲದೇ, ಆಡಳಿತಾಧಿಕಾರಿಯು ಕೂಡಲೇ ಸಂಘದ ಪ್ರಭಾರ ವಹಿಸಿಕೊಂಡು, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರಕಾರಕ್ಕೆ ವರದಿ ಸಲ್ಲಿಸಬೇಕಾಗಿದೆ. ಈ ಆದೇಶ ಪ್ರತಿಯನ್ನು ನಿರ್ಮಾಪಕ ಕುಮಾರ್ ಶ್ರೀನಿವಾಸ್ ಮೂರ್ತಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡು ಶೀಘ್ರದಲ್ಲೇ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

    Live Tv

  • ಕೊಲ್ಲರು ಮೂಕಾಂಬಿಕಾ ದೇಗುಲದ ಲಕ್ಷ್ಮಿ ಮಂಟಪ ಪ್ರವೇಶಿಸಿದ ಮಾಜಿ ಮಹಿಳಾ ಅಧಿಕಾರಿ- ಭಕ್ತರಿಂದ ಭಾರೀ ಆಕ್ರೋಶ

    ಕೊಲ್ಲರು ಮೂಕಾಂಬಿಕಾ ದೇಗುಲದ ಲಕ್ಷ್ಮಿ ಮಂಟಪ ಪ್ರವೇಶಿಸಿದ ಮಾಜಿ ಮಹಿಳಾ ಅಧಿಕಾರಿ- ಭಕ್ತರಿಂದ ಭಾರೀ ಆಕ್ರೋಶ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಕ್ಷ್ಮಿ ಮಂಟಪವನ್ನು ವಿವಾದಿತ ಮಹಿಳಾ ಅಧಿಕಾರಿಯೊಬ್ಬರು ಪ್ರವೇಶಿಸಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ. ಈ ವಿಡಿಯೋ ವಾಟ್ಸಾಪ್‍ನಲ್ಲಿ ಹರಿದಾಡುತ್ತಿದ್ದು, ಅರ್ಚಕರ ವಿರುದ್ಧ ಭಕ್ತರು ಕಿಡಿಕಾರಿದ್ದಾರೆ.

    ಬೈಂದೂರಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಉಮಾ ಅವರು ಲಕ್ಷ್ಮಿ ಮಂಟಪ ಪ್ರವೇಶಿಸಿದ್ದಾರೆ. ದೇವಸ್ಥಾನದ ಒಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಮುಖಂಡರೊಬ್ಬರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ನೋಡಿದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯಾಕೆ ಪ್ರವೇಶಿಸಬಾರದು?
    ನವರಾತ್ರಿಯಲ್ಲಿ ಕೊಲ್ಲೂರಿನಲ್ಲಿ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯ ಇದೆ. ನವರಾತ್ರಿಯ ಮೊದಲ ದಿನ ಒಬ್ಬರಿಗೆ, ಎರಡನೇ ದಿನ ಇಬ್ಬರಿಗೆ ಹೀಗೆ ಕ್ರಮವಾಗಿ ನೀಡುತ್ತಾ ಬಂದು ಕೊನೆಯ (9ನೇ) ದಿನ ಗ್ರಾಮದ 9 ಜನ ಬ್ರಾಹ್ಮಣ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯವಿದೆ. ಆ ಸಂದರ್ಭದಲ್ಲಿ ಮಾತ್ರ ಮಹಿಳೆಯರು ಲಕ್ಷ್ಮಿ ಮಂಟಪ ಪ್ರವೇಶಿಸಬಹುದು. ಆದರೆ ಅಧಿಕಾರಿ ಉಮಾ ಅವರು ನವರಾತ್ರಿ ದೇವಸ್ಥಾನ ಭೇಟಿ ಸಂದರ್ಭದಲ್ಲಿ ಲಕ್ಷ್ಮಿ ಮಂಟಪ ಪ್ರವೇಶಿಸಿದ್ದರಿಂದ ಅಪಚಾರ ಆಗಿದೆ ಎಂಬುದು ಸದ್ಯದ ಆರೋಪ.

    ಉಮಾ ಅವರು ಅಧಿಕಾರದಲ್ಲಿ ಅನೇಕ ಅಕ್ರಮಗಳು ನಡೆದಿದ್ದು, ಭಕ್ತರೊಬ್ಬರು ಹರಕೆ ನೀಡಿದ್ದ ಚಿನ್ನವನ್ನು ಅಡ ಇಟ್ಟು ದೇವಳದ ಸಿಬ್ಬಂದಿ ಗೋಲ್‍ಮಾಲ್ ಮಾಡಿದ್ದರು. ಅವರು ಅಧಿಕಾರದಲ್ಲಿ ಇರುವುದಾಗ ಲಕ್ಷ್ಮಿ ಮಂಟಪ ಪ್ರವೇಶಕ್ಕೆ ಅವಕಾಶ ಕೊಟ್ಟಿತ್ತು. ಆದರೆ ಈಗ ವಿವಾದ ಎದುರಿಸುತ್ತಿರುವಾಗ ದೇವಸ್ಥಾನ ಹಾಗೂ ಲಕ್ಷ್ಮಿ ಮಂಟಪ ಪ್ರವೇಶ ನೀಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.

    ಉಮಾ ಈ ಹಿಂದೆ ಅಧಿಕಾರಿಯಾಗಿದ್ದರು ಎಂಬ ಕಾರಣಕ್ಕೆ ಕೆಲ ಅರ್ಚಕರು ಲಕ್ಷ್ಮಿ ಮಂಟಪ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಇದನ್ನು ನೋಡಿದ ಮತ್ತೊಂದು ಗುಂಪು ಇದಕ್ಕೆ ತಗಾದೆ ಎತ್ತಿದೆ. ಇತ್ತ ಭಕ್ತರು ಕೂಡ ಅರ್ಚಕರ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರ- ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಎಸ್‍ಕೆ ಮುಖರ್ಜಿ

    ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರ- ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಎಸ್‍ಕೆ ಮುಖರ್ಜಿ

    ಬೆಂಗಳೂರು: ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಹಿಂದೆ ಸರಿದಿದ್ದಾರೆ.

    “ನನ್ನ ವಿರುದ್ಧ ಪ್ರತಿವಾದಿ ಮಠದವರು ಪೂರ್ವಾಗ್ರಹ ಭಾವನೆ ವ್ಯಕ್ತಪಡಿಸಿರುವುದರಿಂದ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇನೆ” ಎಂಬ ಕಾರಣ ನೀಡಿ ನ್ಯಾ. ಎಸ್.ಕೆ. ಮುಖರ್ಜಿ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.

    ಈ ಮೂಲಕ ರಾಘವೇಶ್ವರ ಶ್ರೀ ವಿರುದ್ಧದ ದಾಖಲಾದ ಪ್ರಕರಣದಿಂದ ಹಿಂದೆ ಸರಿದ ಏಳನೇ ನ್ಯಾಯಮೂರ್ತಿಯಾಗಿದ್ದಾರೆ.

    ಮುಖರ್ಜಿ ಅವರು ಕೋರ್ಟ್‌ನಲ್ಲಿ ನಡೆಸಿದ ವಿಚಾರಣೆ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ವರದಿ ನೋಡಿದರೆ ಅವರು ಈ ಪ್ರಕರಣದಲ್ಲಿ ಪೂರ್ವಗ್ರಹ ಪೀಡಿತರಾಗಿದ್ದಾರೆ. ಈ ಕಾರಣಕ್ಕೆ ನಮಗೆ ಈ ಪ್ರಕರಣದಲ್ಲಿ ನ್ಯಾಯ ಸಿಗುವ ಸಾಧ್ಯತೆ ಕಾಣುತ್ತಿಲ್ಲ. ಆದ್ದರಿಂದ ಅವರು  ತಮ್ಮ ಮುಂದಿರುವ ರಾಮಚಂದ್ರಾಪುರ ಮಠದ ವಿರುದ್ಧದ ಪಿಐಎಲ್‌ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಅಖಿಲ ಹವ್ಯಕ ಮಹಾಸಭಾ ಈ ಹಿಂದೆ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿತ್ತು.

    ಈ ಹಿಂದೆ ಅತ್ಯಾಚಾರ ಆರೋಪ ಬಂದಾಗ ಆರು ನ್ಯಾಯಾಧೀಶರು ವಿಚಾರಣೆ ನಡೆಸೋದಿಲ್ಲ ಅಂತ ಪ್ರಕರಣದಿಂದ ಹಿಂದೆ ಹೋಗಿದ್ರು. ನ್ಯಾ. ಕೆ.ಎನ್ ಫಣೀಂದ್ರ, ನ್ಯಾ. ರಾಮ್‍ಮೋಹನ್ ರೆಡ್ಡಿ, ನ್ಯಾ. ಎನ್ ಕುಮಾರ್, ನ್ಯಾ. ಹೆಚ್‍ಜಿ ರಮೇಶ್, ನ್ಯಾ ಭಜಂತ್ರಿ ಹಾಗೂ ನ್ಯಾ. ಸುಭ್ರೋ ಕಮಲ್ ಮುಖರ್ಜಿ ವಿವಿಧ ಕಾರಣಗಳಿಂದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು.

    ರಾಮಚಂದ್ರಪುರ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಎದುರ್ಕಳ ಈಶ್ವರ ಭಟ್ ಮತ್ತು ಜೈಕೃಷ್ಣ ಅವರು ಹೈಕೋರ್ಟ್ ಮೊರೆ ಹೋಗಿದ್ದರು. 22 ಬ್ಯಾಂಕ್ ಅಕೌಂಟ್‍ಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಸರ್ಕಾರಕ್ಕೆ ತನಿಖೆ ನಡೆಸುವಂತೆ ಆದೇಶಿಸಿತ್ತು.

    ಮನವಿಯಲ್ಲಿ ಏನಿತ್ತು?: ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕು ಮತ್ತು ಸ್ವಾಮೀಜಿ ಮಠದಲ್ಲಿದ್ದು ಅಧಿಕಾರ ಚಲಾಯಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿಎದುರ್ಕಳ ಈಶ್ವರ ಭಟ್ ಮತ್ತು ಜೈಕೃಷ್ಣ ಅವರು 2016ರ ಏಪ್ರಿಲ್ 30 ರಂದು ಅಂದಿನ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಅವರಿಗೆ ಮನವಿ ಸಲ್ಲಿಸಿದ್ದರು. ಪೀಠಾಧಿಪತಿ ಸ್ಥಾನದಿಂದ ರಾಘವೇಶ್ವರ ಶ್ರೀಗಳನ್ನು ಕೆಳಗಿಳಿಸಬೇಕು. ಮಠದ ಸ್ಥಿರ ಮತ್ತು ಚರಾಸ್ತಿ ಮೇಲೆ ನಿಯಂತ್ರಣ ಹೊಂದದಂತೆ ಸೂಚಿಸಬೇಕು. ಪೂಜಾ ಕಾರ್ಯವನ್ನು ಹೊರತು ಪಡಿಸಿ ಮಠದ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳಲು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದರು.