Tag: ಆಟೋ ರಾಜ

  • `ಶೈಲೂ’ ನಟಿ ಭಾಮಾ ದಾಂಪತ್ಯ ಬದುಕಿನಲ್ಲಿ ಬಿರುಕು?

    `ಶೈಲೂ’ ನಟಿ ಭಾಮಾ ದಾಂಪತ್ಯ ಬದುಕಿನಲ್ಲಿ ಬಿರುಕು?

    ನ್ನಡದ ಶೈಲೂ, ಆಟೋರಾಜ, ರಾಗಾ, ಮೊದಲ ಸಲ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿ ಭಾಮಾ (Actress Bhama) ನಟಿಸಿದ್ದಾರೆ. ಇದೀಗ ತಮ್ಮ ವೈಯಕ್ತಿಕ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ಭಾಮಾ ಅವರ ಸೋಷಿಯಲ್ ಮೀಡಿಯಾ ಫೋಟೋಗಳು ಡಿಲೀಟ್ ಆಗಿರೋದ್ರಿಂದ ಅನೇಕ ಅನುಮಾನ ಶುರುವಾಗಿದೆ. ಪತಿಯಿಂದ ನಟಿ ದೂರ ಸರಿದಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

    2018ರಿಂದ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ ಭಾಮಾ ಅವರ ವೈಯಕ್ತಿಕ ಬದುಕಲ್ಲಿ ಬಿರುಗಾಳಿ ಎದ್ದಿದೆ ಎನ್ನಲಾಗುತ್ತಿದೆ. 2020ರಲ್ಲಿ ಉದ್ಯಮಿ ಅರುಣ್ (Arun) ಅವರನ್ನು ಭಾಮಾ ಮದುವೆಯಾಗಿದ್ದರು. ಎರಡು ವರ್ಷದ ಮಗಳು ಕೂಡ ಇದ್ದಾರೆ. ಪತಿ, ಮಗಳು, ಸಂಸಾರ ಎಂದು ಬ್ಯುಸಿಯಿದ್ದ ನಟಿ ಬದುಕಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ

    ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಭಾಮಾ ಅವರು ಮದುವೆ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ಪತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ಆದರೆ ಈಗ ಪತಿಯ ಜೊತೆಗಿನ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದಾರೆ. ಇದರಿಂದ ಭಾಮಾ ಅವರು ಪತಿಯಿಂದ ಬೇರೆ ಆಗಿದ್ದಾರಾ ಎಂಬ ಚರ್ಚೆ ನಡೆಯುತ್ತಿದೆ.

     

    View this post on Instagram

     

    A post shared by Bhamaa (@bhamaa)

    ಇನ್ನೂ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಭಾಮಾ ದಂಪತಿ ಅದ್ದೂರಿಯಾಗಿ ಆಚರಿಸಿದ್ದರು. ಈ ಕುರಿತ ವೀಡಿಯೋ ಕೂಡ ಶೇರ್ ಮಾಡಿದ್ದರು. ಬಳಿಕ ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ ಫೋಟೋ ಹಂಚಿಕೊಂಡಿಲ್ಲ. ಹಾಗಾಗಿ ಅನುಮಾನ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಂದನವನದ ಹಿರಿಯ ನಿರ್ಮಾಪಕ ಸಿ.ಜಯರಾಮ್ ಇನ್ನಿಲ್ಲ

    ಚಂದನವನದ ಹಿರಿಯ ನಿರ್ಮಾಪಕ ಸಿ.ಜಯರಾಮ್ ಇನ್ನಿಲ್ಲ

    ಬೆಂಗಳೂರು: ಆಟೋ ರಾಜ, ನಾ ನಿನ್ನ ಬಿಡಲಾರೆಯಂತಹ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಹಿರಿಯ ನಿರ್ಮಾಪಕ ಸಿ. ಜಯರಾಮ್ ನಿಧನರಾಗಿದ್ದಾರೆ.

    auto raja

    ಸೆ.9ರ ಬೆಳಗಿನ ಜಾವ ಜಯರಾಮ್‍ರವರು ಕೊನೆಯುಸಿರೆಳೆದಿದ್ದು, ಇದೀಗ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವಾರು ಗಣ್ಯಾತಿ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. 70-80ರ ದಶಕದಲ್ಲಿ ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಅವರು ನಂತರ ಸಿನಿಮಾ ನಿರ್ಮಾಣದಿಂದ ದೂರ ಉಳಿದಿದ್ದರು. ಇದನ್ನೂ ಓದಿ: ಮುಂಬೈನಿಂದಲೇ ಕರೆ ಮಾಡಿ ವಕೀಲರ ಜೊತೆ ಅನುಶ್ರೀ ಮಾತು!

    na ninna bidalare

    ಶ್ರೀನಾಥ್ ಹಾಗೂ ಆರತಿ ಅಭಿನಯದ ಪಾವನ ಗಂಗ, ರಜನಿಕಾಂತ್ ಮತ್ತು ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ್ದ ಗಲಾಟೆ ಸಂಸಾರ, ಆನಂತ್ ನಾಗ್‍ರವರ ‘ನಾ ನಿನ್ನ ಬಿಡಲಾರೆ’, ಶಂಕರ್ ನಾಗ್ ನಟಿಸಿದ್ದ ಆಟೋ ರಾಜ ಹೀಗೆ ಹಲವಾರು ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಜಯರಾಮ್ ನೀಡಿದ್ದಾರೆ. ಅಲ್ಲದೇ ಜಯರಾಮ್‍ರವರು ಪಾರ್ವತಮ್ಮ ರಾಜ್‌ ಕುಮಾರ್‌ರವರ ಸಹೋದರಿಯನ್ನೇ ವಿವಾಹವಾಗಿದ್ದರು. ಇದನ್ನೂ ಓದಿ: ತಲ್ವಾರ್‌ನಿಂದ ಕೇಕ್ ಕತ್ತರಿಸಿ ಬರ್ತ್‍ಡೇ ಆಚರಿಸಿಕೊಂಡ ಡಾಬಾ ಮಾಲೀಕ

    prakash

    ಸದ್ಯ ಜಯರಾಮ್ ಅವರ ಪುತ್ರ ಮಿಲನ ಪ್ರಕಾಶ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡು ದೊಡ್ಡ ಹೆಸರು ಮಾಡಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರ ಮಿಲನ, ವಂಶಿ, ವಿನಯ್ ರಾಜ್ ಕುಮಾರ್ ಅವರ ಸಿದ್ದಾರ್ಥ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್, ಯಶ್ ಹಾಗೂ ವಿಜಯ್ ರಾಘವೇಂದ್ರರವರು ನಟಿಸಿರುವ ಗೋಕುಲ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.