Tag: ಆಟೋ ಮೊಬೈಲ್‌

  • 99,900 ರೂಪಾಯಿಗೆ TVS ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

    99,900 ರೂಪಾಯಿಗೆ TVS ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

    ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್, ಇಂದು ‘ಟಿವಿಎಸ್ ಆರ್ಬಿಟರ್’ (TVS Orbiter) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಬೆಲೆ ರೂ 99,900 (ಎಕ್ಸ್-ಶೋರೂಮ್, ಬೆಂಗಳೂರು; PM ಇ-ಡ್ರೈವ್ ಸ್ಕೀಮ್ ಸೇರಿದಂತೆ).

    ಆರ್ಬಿಟರ್ 3.1kWh ಬ್ಯಾಟರಿ ಪ್ಯಾಕ್‌ನೊಂದಿಗೆ ಮಾತ್ರ ಲಭ್ಯವಿದ್ದು, ಒಮ್ಮೆ ಚಾರ್ಜ್ ಮಾಡಿದರೆ 158km ಚಲಿಸುತ್ತದೆ ಎಂದು ಕಂಪನಿ ಹೇಳಿದೆ. ಆದರೆ ನಿಜವಾದ ರೇಂಜ್ ಸುಮಾರು 120 ಕಿಮೀ ನೀಡಬಹುದು. ಸ್ಕೂಟರ್‌ನ ಗರಿಷ್ಠ ವೇಗವನ್ನು ಗಂಟೆಗೆ 68 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ.

    ಟಿವಿಎಸ್ ಆರ್ಬಿಟರ್‌ಗೆ ಓಲಾ S1Z ಮತ್ತು ರಿವರ್ ಇಂಡೀ ಸ್ಕೂಟರ್‌ಗಳಲ್ಲಿ ನೀಡಿರುವಂತೆ 14-ಇಂಚಿನ ಮುಂಭಾಗದ ಚಕ್ರ ನೀಡಲಾಗಿದೆ. ಹಿಂಭಾಗದ ಚಕ್ರ 12 ಇಂಚಿದೆ. ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಓವರ್-ದಿ-ಏರ್ ಅಪ್‌ಡೇಟ್‌ಗಳು, ಆಂಟಿ-ಥೆಫ್ಟ್, ಕ್ರ್ಯಾಶ್ ಮತ್ತು ಜಿಯೋ-ಫೆನ್ಸಿಂಗ್ ಒಳಗೊಂಡ ಸುರಕ್ಷತಾ ಎಚ್ಚರಿಕೆಗಳನ್ನು ಕನೆಕ್ಟೆಡ್ ಆಪ್ ಮೂಲಕ ಪಡೆಯಬಹುದಾಗಿದೆ. ಈಕೋ ಮತ್ತು ಪವರ್ ಮೋಡ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, ಪಾರ್ಕಿಂಗ್ ಅಸಿಸ್ಟ್ (ರಿವರ್ಸ್ ಫಂಕ್ಷನ್) ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಈ ಸ್ಕೂಟರ್‌ ಹೊಂದಿದೆ.

    ಆರ್ಬಿಟರ್‌ನಲ್ಲಿ ಹ್ಯಾಂಡಲ್‌ಬಾರ್-ಮೌಂಟೆಡ್ LED ಹೆಡ್‌ಲ್ಯಾಂಪ್, LED ಲೈಟ್ ಸ್ಟ್ರಿಪ್‌, ಎರಡು ಹೆಲ್ಮೆಟ್‌ಗಳನ್ನು ಇಡಬಹುದಾದ 34-ಲೀಟರ್ ಅಂಡರ್ ಸೀಟ್ ಸ್ಟೋರೇಜ್, ವಿಶಾಲವಾದ 290 ಎಂಎಂ ಫ್ಲಾಟ್ ಫ್ಲೋರ್‌ಬೋರ್ಡ್, ಮುಂತಾದ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಆರ್ಬಿಟರ್ ನಿಯಾನ್ ಸನ್ ಬರ್ಸ್ಟ್, ಸ್ಟ್ರಾಟೋಸ್ ಬ್ಲೂ, ಲೂನಾರ್ ಗ್ರೇ, ಮಾರ್ಟಿಯನ್ ಕಾಪರ್, ಕಾಸ್ಮಿಕ್ ಟೈಟಾನಿಯಂ ಮತ್ತು ಸ್ಟೆಲ್ಲಾರ್ ಸಿಲ್ವರ್ ಎಂಬ ಆರು ಬಣ್ಣಗಳಲ್ಲಿ ಲಭ್ಯವಿದೆ.

  • ಏಪ್ರಿಲ್‌ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್‌ ಕಾರು‌ ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್‌ – ಆರಂಭಿಕ ಬೆಲೆ ಎಷ್ಟು?

    ಏಪ್ರಿಲ್‌ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್‌ ಕಾರು‌ ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್‌ – ಆರಂಭಿಕ ಬೆಲೆ ಎಷ್ಟು?

    ವಾಷಿಂಗ್ಟನ್:‌ ಪ್ರಧಾನಿ ನರೇಂದ್ರ ಮೋದಿ ಅವರು ಎಲಾನ್‌ ಮಸ್ಕ್‌ (Elon Musk) ಅವರನ್ನು ಅಮೆರಿಕದಲ್ಲಿ ಭೇಟಿಯಾದ ಬೆನ್ನಲ್ಲೇ ಮಹತ್ವದ ಬೆಳವಣಿಗೆಗಳು ಕಂಡುಬಂದಿವೆ. ಮಸ್ಕ್‌ ನೇತೃತ್ವದ ಟೆಸ್ಲಾ ಕಂಪನಿ ಮುಂದಿನ ಏಪ್ರಿಲ್‌ ವೇಳೆಗೆ ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್‌ ಕಾರುಗಳನ್ನ (Tesla Electric Car) ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.

    ಮೂಲಗಳ ಪ್ರಕಾರ, ರಿಟೇಲ್‌ ಉದ್ಯಮ ಶುರು ಮಾಡಲು ಮುಂದಾಗಿರುವ ಟೆಸ್ಲಾ ಕಂಪನಿಯು ತನ್ನ ಬರ್ಲಿನ್‌ ಪ್ಲ್ಯಾಂಟ್‌ನಿಂದ ಎಲೆಕ್ಟ್ರಿಕ್‌ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಶೋರೂಮ್‌ಗಾಗಿ ಮುಂಬೈನ (Munbai) ಬಾಂದ್ರಾನಲ್ಲಿ ಮತ್ತು ದೆಹಲಿಯ ಏರೋಸಿಟಿಯಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ. ಆದ್ರೆ ಭಾರತದಲ್ಲಿ (India) ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಯಾವುದೇ ಯೋಜನೆಯನ್ನ ಟೆಸ್ಲಾ ಸದ್ಯಕ್ಕೆ ಹೊಂದಿಲ್ಲ. ಇದನ್ನೂ ಓದಿ: ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು

    ಆರಂಭಿಕ ಬೆಲೆ ಹೇಗೆ?
    ಸದ್ಯ ರಿಟೇಲ್‌ ವ್ಯಾಪಾರಕ್ಕೆ ಮುಂದಾಗಿರುವ ಟೆಸ್ಲಾ, 25,000 ಡಾಲರ್ (ಸುಮಾರು 22 ಲಕ್ಷ ರೂ.) ಆರಂಭಿಕ ಬೆಲೆಯಿಂದ ಮಾರಾಟ ಪ್ರಾರಂಭಿಸಲು ಪ್ಲ್ಯಾನ್‌ ಮಾಡಿದೆ. ಇದರೊಂದಿಗೆ 2025ರ ಅಂತ್ಯದ ವೇಳೆಗೆ 1 ಶತಕೋಟಿ ವಹಿವಾಟು ನಡೆಸುವ ಗುರಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರ್ ಇ ವಿಟಾರಾ ಅನಾವರಣ; 500 ಕಿಮೀ ರೇಂಜ್

    ಭಾರತದಲ್ಲಿ ಟೆಸ್ಲಾ ನೇಮಕಾತಿ ಶುರು:
    ಅಮೆರಿಕದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಖ್ಯಾತ ಉದ್ಯಮಿ ಎಲಾನ್‌ ಮಸ್ಕ್‌ ಅವರ ಭೇಟಿ ಬಳಿಕ, ಟೆಸ್ಲಾ ಆಟೋಮೊಬೈಲ್‌ ಸಂಸ್ಥೆಯು ಭಾರತದಲ್ಲಿ ನೇಮಕಾತಿಯನ್ನು ಆರಂಭಿಸಿದೆ. ಟೆಸ್ಲಾ ಕಂಪನಿಯು ಗ್ರಾಹಕ ಸಂಪರ್ಕ ಮತ್ತು ಆಡಳಿತ ಸೇರಿದಂತೆ ಒಟ್ಟು 13 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಮುಂಬೈ ಮತ್ತು ದೆಹಲಿ ಕೇಂದ್ರಿತ ನೇಮಕಾತಿಗಳಿಗೆ ಟೆಸ್ಲಾ ಮುಂದಡಿ ಇಟ್ಟಿದೆ. ಇದನ್ನೂ ಓದಿ: ಮಾರುತಿಯ 40 ವರ್ಷದ ಓಟಕ್ಕೆ ಟಾಟಾ ಬ್ರೇಕ್‌ – ಪಂಚ್‌ ದೇಶದ ನಂ.1 ಕಾರು!

  • ಗ್ರಾಹಕರಿಗೆ ಶಾಕ್‌ ಕೊಟ್ಟ Maruti Suzuki – ಏಪ್ರಿಲ್‌ನಿಂದ ಬೆಲೆ ಮತ್ತಷ್ಟು ದುಬಾರಿ!

    ಗ್ರಾಹಕರಿಗೆ ಶಾಕ್‌ ಕೊಟ್ಟ Maruti Suzuki – ಏಪ್ರಿಲ್‌ನಿಂದ ಬೆಲೆ ಮತ್ತಷ್ಟು ದುಬಾರಿ!

    ಮುಂಬೈ: ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ (Maruti Suzuki India) ಮುಂಬರುವ ದಿನಗಳಲ್ಲಿ ತನ್ನ ಉತ್ಪನ್ನಗಳ ಮೇಲಿನ ಬೆಲೆ ಹೆಚ್ಚಿಸಲು ನಿರ್ಧರಿಸಿದೆ. ಏಪ್ರಿಲ್‌ 1 ರಿಂದಲೇ ಎಲ್ಲಾ ವಾಹನಗಳ ಮೇಲಿನ ಬೆಲೆಯನ್ನು ಹೆಚ್ಚಿಸಲಾಗುತ್ತದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ಗುರುವಾರ ತಿಳಿಸಿದೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರತಿಷ್ಠಿತ ಟಾಟಾ ಮೋಟರ್ಸ್‌ (TaTa Motors) ಏಪ್ರಿಲ್‌ 1 ರಿಂದ ವಾಣಿಜ್ಯ ವಾಹನಗಳ ಮೇಲಿನ ಬೆಲೆ ಶೇ.5 ರಷ್ಟು ಹೆಚ್ಚಿಸುವ ನಿರ್ಧಾರ ಪ್ರಕಟಿಸಿತ್ತು. ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ ಕಂಪನಿಯೂ ಏಪ್ರಿಲ್‌ 1 ರಿಂದ ತನ್ನ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಬೆಲೆ ಶೇ.2 ರಷ್ಟು ಹೆಚ್ಚಿಸುವುದಾಗಿ ತಿಳಿಸಿತ್ತು. ಈ ಬೆನ್ನಲ್ಲೇ ಮಾರುತಿ ಸುಜುಕಿ ಕಾರು ತಯಾರಕ ಕಂಪನಿ ಬೆಲೆ ಹೆಚ್ಚಿಸುವ ನಿರ್ಧಾರ ಪ್ರಕಟಿಸಿದೆ. ಇದನ್ನೂ ಓದಿ: ಗ್ಲಾಮರಸ್‌ ಲುಕ್‌ನ ಕವಾಸಕಿ Versys 1000 ಭಾರತದಲ್ಲಿ ಬಿಡುಗಡೆ – ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ?

    ಸರ್ಕಾರದ ನೀತಿಗಳು, ಹಣದುಬ್ಬರ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಆರ್ಥಿಕತೆ ಸರಿದೂಗಿಸಲು ಕಾರುಗಳ ಬೆಲೆ ಏರಿಸುವುದು ಅನಿವಾರ್ಯ. ಏಪ್ರಿಲ್‌ನಿಂದ ಬೆಲೆ ಏರಿಕೆ ಅನ್ವಯವಾಗಲಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ. ಇದನ್ನೂ ಓದಿ: ವಾಣಿಜ್ಯ ವಾಹನಗಳ ಖರೀದಿದಾರರಿಗೆ Tata Motors ಶಾಕ್‌ – ಏಪ್ರಿಲ್‌ 1ರಿಂದ ಬೆಲೆ ಏರಿಕೆ

    ಮಾರುತಿ ಸುಜುಕಿ ನಿರಂತರವಾಗಿ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಮತ್ತು ಭಾಗಶಃ ಸರಿದೂಗಿಸಲು ಪ್ರಯತ್ನಿಸುತ್ತಿದೆ. ಇದರ ಹೊರತಾಗಿಯೂ ವಾಹನಗಳ ಬೆಲೆ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಹೇಳಿದೆ. ಆದರೆ ನಿಖರ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.

  • ಮಹೀಂದ್ರಾ ಎಕ್ಸ್‌ಯುವಿ 400 ಎಲೆಕ್ಟ್ರಿಕ್ ಕಾರು ಅನಾವರಣ

    ಮಹೀಂದ್ರಾ ಎಕ್ಸ್‌ಯುವಿ 400 ಎಲೆಕ್ಟ್ರಿಕ್ ಕಾರು ಅನಾವರಣ

    ಹೀಂದ್ರಾ & ಮಹೀಂದ್ರಾ ಕಂಪನಿಯು (Mahindra & Mahindra) ಬಹುನಿರೀಕ್ಷಿತ ಎಕ್ಸ್‌ಯುವಿ 400 ಎಲೆಕ್ಟ್ರಿಕ್ ಎಸ್‍ಯುವಿಯನ್ನು (Electric xuv) ಅನಾವರಣಗೊಳಿಸಿದೆ. ಇದರ ರೇಂಜ್ ಬರೋಬ್ಬರಿ 456 ಕಿಲೋಮೀಟರ್. ಎಕ್ಸ್‌ಯುವಿ 400 ಜನವರಿ 2023ರಲ್ಲಿ ಬಿಡುಗಡೆಯಾಗಲಿದೆ.

    ಎಕ್ಸ್‌ಯುವಿ 400 ಈಗಾಗಲೇ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ 300 ಕಾರನ್ನೇ (Car) ಹೋಲುತ್ತದೆ. ಡಿಸೆಂಬರ್ 2022ರಲ್ಲಿ ಈ ಹೊಸ ಎಲೆಕ್ಟ್ರಿಕ್ ಕಾರು ಟೆಸ್ಟ್ ಡ್ರೈವ್‍ಗೆ ಲಭ್ಯವಿರಲಿದ್ದು, ಜನವರಿ 2023ರಲ್ಲಿ ಬುಕ್ಕಿಂಗ್‌ ಓಪನ್ ಆಗಲಿದೆ. ಜನವರಿಯಲ್ಲಿ ಕಂಪನಿಯು ಕಾರಿನ ಬೆಲೆಯನ್ನು ತಿಳಿಸಲಿದೆ ಹಾಗೂ ಅದೇ ತಿಂಗಳಲ್ಲಿ ಡೆಲಿವರಿ ಕೂಡ ಆರಂಭಿಸಲಿದೆ. ಇದನ್ನೂ ಓದಿ: 12 ಸಾವಿರ ರೂ. ಒಳಗಿನ ಚೀನಿ ಫೋನ್‌ಗಳನ್ನು ನಿಷೇಧಿಸಲ್ಲ: ಕೇಂದ್ರ ಸರ್ಕಾರ

    ಎಕ್ಸ್‌ಯುವಿ 400 ಕಾರಿನಲ್ಲಿ 39.4kWh ಬ್ಯಾಟರಿ ಇದ್ದು, 150hp ಪವರ್ ಮತ್ತು 310Nm ಟಾರ್ಕ್ ಉತ್ಪಾದಿಸಲಿದೆ. 50kW DC ಫಾಸ್ಟ್ ಚಾರ್ಜರ್ ಮುಖಾಂತರ ಈ ಕಾರನ್ನು 0-80% ಚಾರ್ಜ್ ಮಾಡಲು ಕೇವಲ 50 ನಿಮಿಷಗಳು ಸಾಕು. 7.2 kW/32A ಚಾರ್ಜರ್ ಪಯೋಗಿಸಿದರೆ ಚಾರ್ಜ್ ಆಗಲು 6 ಗಂಟೆ 30 ನಿಮಿಷಗಳು ಬೇಕು. 3.3 kW/16A ಸ್ಟ್ಯಾಂಡರ್ಡ್ ಚಾರ್ಜರ್ ಮೂಲಕ 100% ಚಾರ್ಜ್ ಮಾಡಲು 13 ಗಂಟೆಗಳು ಬೇಕಾಗುತ್ತದೆ. ಈ ಬ್ಯಾಟರಿ IP67 ರೇಟಿಂಗ್ ಹೊಂದಿದೆ. ಇದನ್ನೂ ಓದಿ: ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡೋ ಮುನ್ನ ಎಚ್ಚರ!

    ಫನ್, ಫಾಸ್ಟ್ ಮತ್ತು ಫಿಯರ್‌ಲೆಸ್‌ ಎಂಬ ಮೂರು ಡ್ರೈವ್ ಮೋಡ್‍ಗಳು ಈ ಕಾರಿನಲ್ಲಿವೆ. ಎಕ್ಸ್‌ಯುವಿ 400 ಕಾರನ್ನು ಕೇವಲ ಒಂದೇ ಪೆಡಲ್ ಬಳಸಿ ಓಡಿಸಬಹುದು ಎಂದು ಮಹೀಂದ್ರಾ ಕಂಪನಿಯು ಹೇಳುತ್ತಿದೆ. ರೀಜೆನರೇಟಿವ್ ಬ್ರೇಕಿಂಗ್ ವ್ಯವಸ್ಥೆ ಅಷ್ಟು ಬಲಶಾಲಿಯಾಗಿರಲಿದೆ ಎಂಬುದು ತಿಳಿಯಬಹುದಾಗಿದೆ.

    ಎಕ್ಸ್‌ಯುವಿ ಸ್ವಯಂಚಾಲಿತ ಹವಾನಿಯಂತ್ರಣ (Air  Conditioner) ವ್ಯವಸ್ಥೆ, ಸನ್‍ರೂಫ್, ಕ್ರೂಸ್ ಕಂಟ್ರೋಲ್, ಆ್ಯಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, 7 ಇಂಚಿನ ಟಚ್‍ಸ್ಕ್ರೀನ್ ಮತ್ತು ಕನೆಕ್ಟಡ್‌ ಕಾರ್ ವ್ಯವಸ್ಥೆಯನ್ನು ಎಕ್ಸ್‌ಯುವಿ 400 ಕಾರು ಒಳಗೊಂಡಿದೆ. 6 ಏರ್‌ ಬ್ಯಾಗ್‌, ನಾಲ್ಕೂ ಚಕ್ರಗಳಿಗೆ ಡಿಸ್ಕ್ ಬ್ರೇಕ್ ನೀಡಲಾಗಿದೆ.

    ಹೊಸ ಎಕ್ಸ್‌ಯುವಿ 400 ಕಾರು ಟಾಟಾ ನೆಕ್ಸಾನ್ ಇವಿ ಮತ್ತು ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಕಾರುಗಳೊಂದಿಗೆ ಪೈಪೋಟಿಗೆ ಇಳಿಯಲಿದೆ. ಇದರ ಬೆಲೆ 16 ಲಕ್ಷದಿಂದ 20 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]