Tag: ಆಟೋ ದರ ಏರಿಕೆ

  • ಗುಡ್‌ನ್ಯೂಸ್ – ಏ.1ರಿಂದ ಆಟೋ ದರ ಏರಿಕೆ ಇಲ್ಲ!

    ಗುಡ್‌ನ್ಯೂಸ್ – ಏ.1ರಿಂದ ಆಟೋ ದರ ಏರಿಕೆ ಇಲ್ಲ!

    ಬೆಂಗಳೂರು: ಬಸ್, ಮೆಟ್ರೋ ದರ ಏರಿಕೆಯಿಂದಾಗಿ ಕಂಗೆಟ್ಟಿರುವ ಬೆಂಗಳೂರಿಗರಿಗೆ (Bengaluru) ರಿಲ್ಯಾಕ್ಸ್ ಆಗಲಿದ್ದು, ಏ.1ರಿಂದ ಆಟೋ ದರ ಏರಿಕೆಗೆ (Auto Rate Hike) ತಾತ್ಕಾಲಿಕ ಬ್ರೇಕ್ ಬಿದ್ದಿದೆ.

    ಈ ವರ್ಷದ ಆರಂಭದಿಂದಲೂ ನಿತ್ಯ ದರ ಏರಿಕೆ ಸುದ್ದಿ ಕೇಳಿ ಬೆಂಗಳೂರಿಗರು ಬೇಸತ್ತಿದ್ದರು. ಬಸ್, ಮೆಟ್ರೋ ದರ, ನೀರಿನ ದರ ಏರಿಕೆ ಬಳಿಕ ಏ.1ರಿಂದ ಆಟೋ ದರ ಕೂಡ ಏರಿಕೆಯಾಗಲಿದೆ ಎಂದು ಕೇಳಿಬರುತ್ತಿತ್ತು. ಆದರೆ ಇದೀಗ ಆಟೋ ದರ ಏರಿಕೆಗೆ ಜಿಲ್ಲಾಡಳಿತ ತಡೆ ನೀಡಿದೆ.ಇದನ್ನೂ ಓದಿ: ಸ್ಲೀಪ್‌ ಡಿವೋರ್ಸ್‌ನಲ್ಲಿ ಭಾರತಕ್ಕೆ ಅಗ್ರ ಸ್ಥಾನ – ಏನಿದು ನಿದ್ರಾ ವಿಚ್ಛೇದನ?

    ಆಟೋ ದರ ಪರಿಷ್ಕರಣೆ ಸಂಬಂಧ ವಾರದ ಹಿಂದೆಯಷ್ಟೇ ಸಾರಿಗೆ ಇಲಾಖೆಯು (Transport Department) ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಏ.1ರಿಂದ ದರ ಏರಿಕೆ ಆಗುತ್ತದೆ ಎಂದು ಆಟೋ ಚಾಲಕರು ಖುಷಿಯಲ್ಲಿದ್ದರು. ಆದರೆ ಬೆಂಗಳೂರು ಡಿಸಿ ಮಾತ್ರ ಸದ್ಯಕ್ಕೆ ಆಟೋ ದರ ಏರಿಕೆ ಇಲ್ಲ, ದರ ಏರಿಕೆ ಸಂಬಂಧ ಸಾರಿಗೆ ಇಲಾಖೆಯಿಂದ ಸಭೆ ಮಾಡಿ ರಿಪೋರ್ಟ್ ಸಿದ್ಧಪಡಿಸಬೇಕಿದೆ. ಆ ನಂತರ ಮತ್ತೊಂದು ಮೀಟಿಂಗ್ ಮಾಡಿ ದರ ಏರಿಕೆ ನಿರ್ಧಾರ ಆಗಬೇಕು. ದರ ಏರಿಕೆ ಎಷ್ಟಾಗುತ್ತೆ? ಹೇಗೆ ಎನ್ನುವ ತೀರ್ಮಾನ ಆಗಲಿದೆ. ಈ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿ, ದರ ಪರಿಷ್ಕರಣೆ ಫೈನಲ್ ಆಗಬೇಕಾದರೆ ಇನ್ನೂ ಹೆಚ್ಚಿನ ಕಾಲಾವಕಾಶ ಬೇಕಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಅತ್ತ ಜನ ನಿಟ್ಟುಸಿರು ಬಿಟ್ಟರೆ, ಇತ್ತ ಆಟೋ ಚಾಲಕರಿಗೆ ಕೊಂಚ ಬೇಸರವಾಗಿದೆ. ಯುಗಾದಿ (Yugadi) ಹಬ್ಬಕ್ಕೆ ಆಟೋ ಏರಿಕೆಯ ಗಿಫ್ಟ್ ಸಿಗುತ್ತದೆ ಎಂದು ಆಟೋ ಚಾಲಕರು, ಸಂಘಟನೆಗಳು ಖುಷಿಯಲ್ಲಿದ್ದರು. ಆದ್ರೆ ಸದ್ಯಕ್ಕೆ ದರ ಏರಿಕೆ ಆಗಲ್ಲ ಎಂದು ತಿಳಿಸಿದೆ.

    ಈ ಹಿಂದೆ 2011ರಲ್ಲಿ ಆಟೋ ದರ ಪರಿಷ್ಕರಣೆ ಆಗಿತ್ತು. ಅದಾದ ನಂತರ 2021ರಲ್ಲಿ ಅಂದರೆ 10 ವರ್ಷಗಳ ಬಳಿಕ ದರ ಪರಿಷ್ಕರಣೆ ಆಗಿತ್ತು. ಹಿಂದಿನ ಪರಿಷ್ಕರಣೆಗೆ 10 ವರ್ಷಗಳ ಗ್ಯಾಪ್ ಇದೆ. ಇದೀಗ ಮೂರೇ ವರ್ಷಕ್ಕೆ ಆಟೋ ದರ ಪರಿಷ್ಕರಣೆ ಮಾಡಿ ಎಂದು ಒತ್ತಾಯ ಕೇಳಿ ಬಂದಿದ್ದು, ಇದು ಸರಿಯಿದಿಯಾ? ಇಲ್ವಾ? ಎನ್ನುವ ಪರಿಶೀಲನೆಗೂ ಜಿಲ್ಲಾಡಳಿತ ಮುಂದಾಗಿದೆ.ಇದನ್ನೂ ಓದಿ: ವಿಜಯೇಂದ್ರ, ಯತ್ನಾಳ್ ಟೀಂಗೆ ‘ಹೈ’ ಶಾಕ್ – ಐವರು ನಾಯಕರಿಗೆ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್

  • ಬಸ್, ಮೆಟ್ರೋ ಬಳಿಕ ಹಾಲು ಆಟೋ ದರ ಏರಿಕೆಗೆ ಮುಹೂರ್ತ ಫಿಕ್ಸ್

    ಬಸ್, ಮೆಟ್ರೋ ಬಳಿಕ ಹಾಲು ಆಟೋ ದರ ಏರಿಕೆಗೆ ಮುಹೂರ್ತ ಫಿಕ್ಸ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಸ್, ಮೆಟ್ರೋ ದರ ಏರಿಕೆ ಬಳಿಕ ಇದೀಗ ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್ ಆಗಿದೆ. ಜೊತೆಗೆ ಬಜೆಟ್ ನಂತರ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ.

    ರಾಜ್ಯದ ಇತ್ತೀಚಿಗಷ್ಟೇ ಬಸ್ ಹಾಗೂ ಬೆಂಗಳೂರಿನಲ್ಲಿ ಮೆಟ್ರೋ ದರ ಏರಿಕೆಯಾಗಿತ್ತು. ಇದೀಗ ಶೀಘ್ರದಲ್ಲೇ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ. ಈ ಕುರಿತು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ದರ ಏರಿಕೆ ಮಾಡುವುದಾಗಿ ಸುಳಿವು ಕೊಟ್ಟಿದ್ದಾರೆ. ಬಜೆಟ್ ಬಳಿಕ ಹಾಲಿನ ದರ ಏರಿಕೆಯಾಗಲಿದ್ದು, ಸದ್ಯ ಒಕ್ಕೂಟಗಳ ಬೇಡಿಕೆ ಪ್ರಕಾರ ಕೆಎಂಎಫ್ ಸರ್ಕಾರಕ್ಕೆ 5 ರೂ. ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದೆ.ಇದನ್ನೂ ಓದಿ: ಮಹಾ ಅಸೆಂಬ್ಲಿಯಿಂದ ಅಬು ಅಜ್ಮಿ ಸಸ್ಪೆಂಡ್ – ನಮ್ಮಲ್ಲಿಗೆ ಕಳಿಸಿ ಟ್ರೀಟ್ಮೆಂಟ್ ಕೊಡ್ತೀವೆಂದ ಯೋಗಿ

    ಇನ್ನೊಂದು ಕಡೆ ರೈತರು 10 ರೂ. ಏರಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಒಕ್ಕೂಟ ಹಾಗೂ ರೈತರ ಮನವಿ ಪರಿಶೀಲಿಸಿ, ಸರ್ಕಾರ ಏರಿಕೆ ದರ ನಿರ್ಧಾರ ಮಾಡಲಿದೆ. ಏಪ್ರಿಲ್ ಮೊದಲ ವಾರದಲ್ಲಿ ಕೆಎಂಎಫ್ ಜೊತೆ ಸಿಎಂ ಸಭೆ ನಡೆಸುವ ಸಾಧ್ಯತೆಯಿದೆ.

    ಹಾಲಿನ ದರ ಲೀಟರ್‌ಗೆ ಎಷ್ಟಿದೆ? ಎಷ್ಟಾಗಬಹುದು?
    ಹಾಲು – ಎಷ್ಟಿದೆ? ಎಷ್ಟಾಗಬಹುದು?
    ನೀಲಿ ಪ್ಯಾಕೆಟ್ – 44ರೂ 46 ರಿಂದ 48 ರೂ.
    ಆರೆಂಜ್ ಪ್ಯಾಕೆಟ್ – 48 ರೂ. 50 ರಿಂದ 52 ರೂ.
    ಶುಭಂ ಪ್ಯಾಕೆಟ್ – 50 ರೂ 52 ರಿಂದ 54 ರೂ.
    ಸಮೃದ್ಧಿ ಪ್ಯಾಕೆಟ್ – 53 ರೂ. 55 ರಿಂದ 58 ರೂ.

    ಬಿಎಂಟಿಸಿ, ಮೆಟ್ರೋ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಆಟೋ ದರವು ಜಾಸ್ತಿ ಆಗುವ ನಿರೀಕ್ಷೆಯಿದ್ದು, 1 ಕಿ.ಮೀಗೆ 5 ರೂ. 2 ಕಿಮೀಗೆ 10 ರೂ. ಏರಿಕೆ ಮಾಡಲು ಆಟೋ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಇದೇ 12 ರಂದು ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ದರ ಏರಿಕೆ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಸದ್ಯ ಬೆಂಗಳೂರಲ್ಲಿ ಕನಿಷ್ಠ ಆಟೋ ಮೀಟರ್ ದರ ಎರಡು ಕಿ.ಮೀ ಗೆ 30 ರೂ. ಇದೆ. ಇದೀಗ ಕನಿಷ್ಠ ದರವನ್ನು 40 ರೂ. ಏರಿಕೆ ಮಾಡುವಂತೆ ಆಟೋ ಸಂಘಗಳು ಮನವಿ ಮಾಡಿವೆ.ಇದನ್ನೂ ಓದಿ: ವರ್ತಿಕಾ ಕಟಿಯಾರ್ ದೂರು ನೀಡಿದ ಬೆನ್ನಲ್ಲೇ ಐಎಸ್‌ಡಿಯಿಂದ ಡಿ.ರೂಪಾ ವರ್ಗಾವಣೆ