Tag: ಆಟೋ ಡ್ರೈವರ್

  • ಆಟೋ ಡ್ರೈವರ್ ಅಭಿಮಾನಕ್ಕೆ ಡಿಂಪಲ್ ಕ್ವೀನ್ ರಚಿತಾ ಭಾವುಕ

    ಆಟೋ ಡ್ರೈವರ್ ಅಭಿಮಾನಕ್ಕೆ ಡಿಂಪಲ್ ಕ್ವೀನ್ ರಚಿತಾ ಭಾವುಕ

    – ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು

    ಬೆಂಗಳೂರು: ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲು, ಅವರನ್ನು ಭೇಟಿ ಮಾಡಲು ಕಾತುರದಿಂದ ಕಾಯುತ್ತಿರುತ್ತಾರೆ. ಅದೇ ರೀತಿ ನಟಿ ರಚಿತಾ ರಾಮ್ ನೋಡಲು ಆಟೋ ಚಾಲಕರೊಬ್ಬರು ಅವರ ಮನೆಯ ಬಳಿಯೇ ಕಾದು ಕುಳಿತ್ತಿದ್ದರು. ಅವರ ಅಭಿಮಾನಕ್ಕೆ ಡಿಂಪಲ್ ಕ್ವೀನ್ ರಚಿತಾ ಭಾವುಕರಾಗಿದ್ದಾರೆ.

    ನಟಿ ರಚಿತಾ ರಾಮ್ ಆಟೋ ಡ್ರೈವರ್ ಅಭಿಮಾನವನ್ನು ಕಂಡು ಭಾವುಕರಾದ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    “ಅಭಿಮಾನಿಗಳೇ ದೇವ್ರು” ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ. ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನ ವ್ಯಕ್ತಪಡಿಸುತ್ತಾರೆ. ಇದರಿಂದ ತುಂಬಾ ಸಂತೋಷ ಆಗುತ್ತೆ. ಆದರೆ ಬೆಳಗ್ಗೆ ಅಮ್ಮ ಬಂದು “ರಚ್ಚು ಬೆಳಗ್ಗೆ ಬೆಳಗ್ಗೆನೇ ಯಾರೋ ಮನೆ ಮುಂದೆ ಕಾಯುತ್ತಿದ್ದಾರೆ ನೋಡು ಅಂದ್ರು”, ನಾನು ಹೊರಗಡೆ ಬಂದು ನೋಡಿದೆ.

    ಈ ವೇಳೆ ಒಂದು ಆಟೋ ಪಕ್ಕ ಮೂರು ಜನ ನಮ್ಮ ಮನೆಯ ಕಡೆ ಮುಖ ಮಾಡಿ ನಿಂತಿದ್ದರು. ನನ್ನ ನೋಡುತ್ತಿದ್ದ ಹಾಗೆ ತುಂಬಾ ಎಕ್ಸೈಟ್ ಆದರು. ನಂತರ ನಾನು ಅವರ ಬಳಿ ಹೋಗುತ್ತಿದ್ದಂತೆ ನನ್ನ ಒಂದು ಮಾತು ಆಡಕ್ಕೂ ಬಿಡದೆ, “ಮೇಡಂ ನಾವು ನಿಮ್ಮ ದೊಡ್ಡ ಅಭಿಮಾನಿ ಮೇಡಂ, ನನ್ನ ಆಟೋ ಮೇಲೆ ಮೊದಲ ಫೋಟೋ ನಿಮ್ಮದೇ ಇರಬೇಕು ಮೇಡಂ” ಎಂದು ಗಿಫ್ಟ್ ವ್ರಾಪರ್ ಒಪೆನ್ ಮಾಡಿಸಿ ನನ್ನ ಫೋಟೋನ ಆಟೋ ಮೇಲೆ ಅಂಟಿಸಿ ನನ್ನ ಆಟೋಗ್ರಾಫ್ ತೆಗೆದುಕೊಂಡರು.

    ಅವರ ನೆಚ್ಚಿನ ಆಟೋ ಜೊತೆ ನನ್ನ ಫೋಟೋ ಕ್ಲಿಕ್ಕಿಸಿ ತಾವೂ ಸೆಲ್ಫಿ ತೆಗೆದುಕೊಂಡು ಹೊರಡಲು ಮುಂದಾದರು. ಈ ವೇಳೆ ನಾನು ನಿಜಕ್ಕೂ ಭಾವುಕನಾದೆ. ಹೆಸರು ಕೇಳಬೇಕು ಎನ್ನುವಷ್ಟರಲ್ಲಿ ತುಂಬಾ ಉತ್ಸಾಹಿಕನಾಗಿ ನಗುತ್ತಲೇ ಹೊರಟೇ ಬಿಟ್ಟರು. ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ, ನನ್ನ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ. ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನ ಸುಖಕರವಾಗಿರಿಸಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೀನಿ.

    https://www.instagram.com/p/CCJU_4eg7Qq/?igshid=21r4ng4ded5k

    ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು
    ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಲ್ಲ ಶೂನ್ಯ. ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ. ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ. ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನ ನಿಮ್ಮ ಇನ್‍ಸ್ಟಾಗ್ರಾಂನ ಖಾತೆಯಲ್ಲಿ ಹಾಕಿ ನನ್ನನ್ನ ಟ್ಯಾಗ್ ಮಾಡಿ. ನಾನು ರೀ ಪೋಸ್ಟ್ ಮಾಡುತ್ತೇನೆ. ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ” ಎಂದು ಭಾವುಕದಿಂದ ಬರೆದುಕೊಂಡಿದ್ದಾರೆ.

  • ಮಗಳ ಮದ್ವೆಗೆ ಆಹ್ವಾನಿಸಿದ್ದ ಆಟೋ ಚಾಲಕನನ್ನು ಭೇಟಿ ಮಾಡಿದ ಮೋದಿ

    ಮಗಳ ಮದ್ವೆಗೆ ಆಹ್ವಾನಿಸಿದ್ದ ಆಟೋ ಚಾಲಕನನ್ನು ಭೇಟಿ ಮಾಡಿದ ಮೋದಿ

    ಲಕ್ನೋ: ಆಟೋ ಡೈವರ್ ತನ್ನ ಮಗಳ ಮದುವೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಆಹ್ವಾನ ನೀಡಿದ್ದರು. ಇದೀಗ ಮೋದಿ ಆ ಆಟೋ ಚಾಲಕರನ್ನು ಭೇಟಿಯಾಗಿದ್ದಾರೆ.

    ಭಾನುವಾರ ಪ್ರಧಾನಿ ಮೋದಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆಟೋ ಡ್ರೈವರ್ ಮಂಗಲ್ ಕೇವತ್‍ರನ್ನು ಭೇಟಿ ಮಾಡಿದ್ದಾರೆ. ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಕಳೆದ ಭಾನುವಾರ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ ತಮ್ಮ ಮಗಳ ಮದುವೆಗೆ ಆಹ್ವಾನ ನೀಡಿದ್ದ ಆಟೋ ಚಾಲಕ ಮಂಗಲ್ ಕೇವತ್‍ರನ್ನು ಭೇಟಿ ಮಾಡಿದ್ದಾರೆ.

    ಕೇವತ್ ಮತ್ತು ಕುಟುಂಬದವರ ಆರೋಗ್ಯ, ಯೋಗಕ್ಷೇಮವನ್ನು ಮೋದಿ ಅವರು ವಿಚಾರಿಸಿದ್ದಾರೆ. ಕೇವತ್ ಮತ್ತು ಅವರ ಕುಟುಂಬದವರು ತಮ್ಮ ಗ್ರಾಮದಲ್ಲಿರುವ ಗಂಗಾ ನದಿ ದಡವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದರು. ಹೀಗಾಗಿ ಸ್ವಚ್ಛ ಭಾರತ್ ಅಭಿಯಾನಕ್ಕೆ ಕೇವತ್ ನೀಡಿದ ಕೊಡುಗೆಯನ್ನು ಮೋದಿ ಅವರು ಶ್ಲಾಘಿಸಿದ್ದಾರೆ.

    ಆಟೋ ಡ್ರೈವರ್:
    ವಾರಣಾಸಿಯ ದೊಮ್ರಿ ಎಂಬ ಗ್ರಾಮದ ನಿವಾಸಿ ಮಂಗಲ್ ಕೇವತ್, ಪ್ರಧಾನಿ ಮೋದಿ ಅವರಿಗೆ ತಮ್ಮ ಮಗಳ ಮದುವೆಗೆ ಬರುವಂತೆ ಆಹ್ವಾನ ಪತ್ರಿಕೆ ಕಳುಹಿಸಿದ್ದರು. ಕೇವತ್ ಪ್ರಧಾನ ಮಂತ್ರಿಗಳ ಕಚೇರಿಗೆ ಹೋಗಿ ಫೆಬ್ರವರಿ 12 ರಂದು ತಮ್ಮ ಮಗಳ ಮದುವೆಗೆ ಬರಬೇಕೆಂದು ಪತ್ರವನ್ನು ಕಳುಹಿಸಿದ್ದರು.

    ನಾನು ವೈಯಕ್ತಿಕವಾಗಿ ದೆಹಲಿಯ ಪ್ರಧಾನ ಮಂತ್ರಿಗಳ ಕಚೇರಿಗೆ ಹೋಗಿ ಮಗಳ ಮದುವೆಗೆ ಬರುವಂತೆ ಪ್ರಧಾನಿ ಮೋದಿ ಅವರಿಗೆ ಆಮಂತ್ರಣ ಪತ್ರಿಕೆ ನೀಡಿದ್ದೆ. ಪ್ರಧಾನಿ ಮೋದಿ ನಮ್ಮ ದೇವರು ಮತ್ತು ಗುರು. ಹೀಗಾಗಿ ಅವರಿಗೆ ಮೊದಲ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿದ್ದೆ. ನಂತರ ಮೋದಿ ಅವರು ನನ್ನ ಮಗಳ ಮದುವೆ ಶುಭಾಶಯ ಕೋರಿ ಪತ್ರ ಬರೆದಿದ್ದರು. ನಿಜಕ್ಕೂ ನಮಗೆ ತುಂಬಾ ಸಂತಸವಾಗಿತ್ತು ಎಂದು ಕೇವತ್ ತಿಳಿಸಿದ್ದರು.

  • ಕಾಣೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ- ಕೊಲೆ ಶಂಕೆ

    ಕಾಣೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ- ಕೊಲೆ ಶಂಕೆ

    ಚಾಮರಾಜನಗರ: ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಆಟೋ ಡ್ರೈವರ್ ಇದೀಗ ಶವವಾಗಿ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

    ಆಟೋ ಡ್ರೈವರ್ ನಾಗ (30) ಶವ ತೆರಕಣಾಂಬಿ ಕೆರೆಯಲ್ಲಿ ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳಿಂದಲೂ ಕೂಡ ನಾಗ ಕಾಣೆಯಾಗಿರುವ ಬಗ್ಗೆ ಸ್ನೇಹಿತರು, ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಇದೀಗ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಕೆರೆಯಲ್ಲಿ ಮೃತ ದೇಹ ಸಿಕ್ಕಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೀಗ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ತೆರಕಣಾಂಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಯಾಗಿರೋ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

  • ಐಟಿ ದಾಳಿಗೀಡಾದ ಆಟೋ ಚಾಲಕನಿಂದ ದಿವಂಗತ ಮಾಜಿ ಸಿಎಂ ಪುತ್ರನಿಗೆ ಕಿರುಕುಳ!

    ಐಟಿ ದಾಳಿಗೀಡಾದ ಆಟೋ ಚಾಲಕನಿಂದ ದಿವಂಗತ ಮಾಜಿ ಸಿಎಂ ಪುತ್ರನಿಗೆ ಕಿರುಕುಳ!

    ಬೆಂಗಳೂರು: ಆಟೋ ಚಾಲಕ ಸುಬ್ರಹ್ಮಣ್ಯ ಮೇಲೆ ಐಟಿ ದಾಳಿ ನಡೆದ ಬಳಿಕ ಈತನ ಅಸಲಿತನ ಒಂದೊಂದೇ ಬಯಲಾಗುತ್ತಿದೆ.

    2013ರಲ್ಲಿ ಆಟೋದಲ್ಲಿ ವೈಟ್‍ಫೀಲ್ಡ್ ನಲ್ಲಿರುವ ವಿಲ್ಲಾಗೆ ಬಂದ ಸುಬ್ರಮಣ್ಯ ವಿದೇಶಿ ಮಹಿಳೆ ವಿಲ್ಲಾ ತೆಗೆದುಕೊಳ್ಳುತ್ತಾರೆ ಎಂದು ವಿಲ್ಲಾ ಮಾಲೀಕರಾದ ಲಕ್ಷ್ಮೀ ಜತ್ತಿಗೆ ಹೇಳಿದ್ದಾನೆ. ಆದರೆ ವಿಲ್ಲವನ್ನು ಫಾರಿನ್ ಲೇಡಿ ಲೋರಾ ಸುಬ್ರಹ್ಮಣ್ಯ ಹೆಸರಿಗೆ ಮಾಡಿದ್ದೇ ತಡ, ಬಡ್ಡಿ ವ್ಯವಹಾರ ಮಾಡಿಕೊಂಡು ಹತ್ತಾರು ಆಟೋಗಳನ್ನು ಬಾಡಿಗೆಗೆ ಬಿಟ್ಟಿದ್ದಾನೆ.

    ಆರು ಜನ ಬಾಡಿ ಗಾರ್ಡ್ಸ್ ಇಟ್ಟುಕೊಂಡು ಮಧ್ಯರಾತ್ರಿ ತನಕ ಕುಡಿದು ದಾಂಧಲೆ ಮಾಡುತ್ತಾನೆ. ವಿಲ್ಲಾದ ತುಂಬೆಲ್ಲ ಸಿಸಿಟಿವಿ ಹಾಕ್ಕೊಂಡು ಅದರ ಡಿವಿಆರ್ ನ್ನು ತನ್ನ ಮನೆಯಲ್ಲಿ ಇಟ್ಕೊಂಡಿದ್ದಾನೆ. ಕೇಳೋಕೆ ಹೋದವರ ಮೇಲೆ ಜಾತಿ ನಿಂದನೆ ಕೇಸ್ ಹಾಕುತ್ತಾನೆ. ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಬಿಡಿ ಜತ್ತಿ ಮಗನಾಗಿ ಕೇವಲ ಆಟೋ ಡ್ರೈವರ್ ಗೆ ಹೆದರಿಕೊಂಡು ಬದುಕುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಒಟ್ಟಿನಲ್ಲಿ ಇಡೀ ವಿಲ್ಲಾಗೆ ನಾನೋಬ್ಬನೆ ಲೋಕಲ್, ಬಾಲ ಬಿಚ್ಚಿದ್ರೆ ಹುಷಾರ್ ಎಂದು ಬೆದರಿಕೆ ಹಾಕುತ್ತಿದ್ದು, ಇನ್ನಾದ್ರು ಸ್ಥಳೀಯ ಪೊಲೀಸರು ಈ ಆಟೋವಾಲನಿಂದ ಇಲ್ಲಿನ ವಾಸಿಗಳ ರಕ್ಷಣೆ ಮಾಡಲಿ ಎಂದು ಡಿ.ಬಿ ಜತ್ತಿ ಒತ್ತಾಯಿಸಿದ್ದಾರೆ.

  • ಬೆಂಗ್ಳೂರಿನ ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ

    ಬೆಂಗ್ಳೂರಿನ ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ

    ಬೆಂಗಳೂರು: ನಗರದ ಆಟೋ ಡ್ರೈವರ್ ಮನೆ ಮೇಲೆ ಐಟಿ ಅಧಿಕಾರಿಗಳು ಏಪ್ರಿಲ್ 16ರಂದು ದಾಳಿ ನಡೆಸಿ ಅಪಾರ ಆಸ್ತಿಯ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ವೈಟ್ ಫೀಲ್ಡ್ ಬಳಿಯಿರೋ ಆಟೋ ಡ್ರೈವರ್ ಸುಬ್ರಮಣಿ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮನೆ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ. ಆಟೋ ಓಡಿಸಿಕೊಂಡು ಲಕ್ಸುರಿಯಾಗಿ ಜೀವನ ನಡೆಸ್ತಿದ್ದಾನೆ ಅನ್ನೋ ಮಾಹಿತಿ ತಿಳಿದು ರೇಡ್ ಮಾಡಿದ್ದ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಸುಬ್ರಮಣಿ ಕೋಟಿಗಟ್ಟಲೇ ಬಂಡವಾಳ ಹೂಡಿ ವಿಲ್ಲಾ ಖರೀದಿ ಮಾಡಿರೋದು ದಾಳಿಯಲ್ಲಿ ಬೆಳಕಿಗೆ ಬಂದಿದೆ.

    ಏಪ್ರಿಲ್ 16 ರಂದು ರೇಡ್ ಮಾಡಿರುವ ಮೂರು ಜನ ಐಟಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳಗ್ಗೆ 10.30ಕ್ಕೆ ಬಂದ ಅಧಿಕಾರಿಗಳು ಮಧ್ಯಾಹ್ನ 2:30 ರ ವರೆಗೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲ ಸಿಕ್ಕಿರುವ ದಾಖಲೆಗಳ ಬಗ್ಗೆ ವಿವರಣೆ ನೀಡುವಂತೆ ಐಟಿ ಅಧಿಕಾರಿಗಳಿಂದ ಸೂಚನೆ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೊಟೀಸ್ ನೀಡಿ ತೆರಳಿದ್ದಾರೆ.

  • ವಿಡಿಯೋ ಮಾಡಿ ಆಟೋ ಡ್ರೈವರ್ ಆತ್ಮಹತ್ಯೆ

    ವಿಡಿಯೋ ಮಾಡಿ ಆಟೋ ಡ್ರೈವರ್ ಆತ್ಮಹತ್ಯೆ

    ಬೆಂಗಳೂರು: ಆಟೋ ಡ್ರೈವರೊಬ್ಬರು ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.

    ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೆಂಕಟೇಶ್ ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸುಬೇದಾರ ಪಾಳ್ಯದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

    ತನ್ನ ಪತಿಗೆ ಡಿವೋರ್ಸ್ ಕೊಟ್ಟ ಬಳಿಕ ಯಶೋದ ಎಂಬ ಮಹಿಳೆ ಹಲವು ವರ್ಷಗಳಿಂದ ವೆಂಕಟೇಶ್ ಇರೋ ಏರಿಯಾದಲ್ಲೇ ವಾಸವಾಗಿದ್ದರು. ಇತ್ತ ಸಾಲದಿಂದ ಮನೆ ಮಠ ತೊರೆದಿದ್ದ ವೆಂಕಟೇಶ್ ಗೆ ಯಶೋದಾರ ಪರಿಚಯವಾಗಿತ್ತು. ವೆಂಕಟೇಶ್, ಯಶೋದ ಬಳಿಯೂ ಕೂಡ ಸಾಲ ಮಾಡಿದ್ದರು. ಜೊತೆಗೆ ದಿನವಿಡೀ ಮದ್ಯ ಸೇವಿಸಿ ವೆಂಕಟೇಶ್, ಯಶೋದ ಮನೆಗೆ ಹೋಗುತ್ತಿದ್ದರು. ಇದೇ ವಿಚಾರವಾಗಿ ಯಶೋದ ಗುರುವಾರ ರಾತ್ರಿ ವೆಂಕಟೇಶ್‍ಗೆ ಕ್ಲಾಸ್ ತೆಗೆದುಕೊಂಡಿದ್ದರು. ಶುಕ್ರವಾರ ಬೆಳಗ್ಗೆ ವೆಂಕಟೇಶ್, ವಿಡಿಯೋ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ನನ್ನ ಸಾವಿಗೆ ಯಶೋದ ಆಗಲಿ ಆಕೆಯ ಮಗಳಾಗಲಿ ಕಾರಣ ಅಲ್ಲ. ನನ್ನ ಸಾವಿಗೆ ನಾನೇ ಕಾರಣ. ನಾನು ಯಶೋದ ಬಳಿಯೂ ಸಾಲ ಮಾಡಿಕೊಂಡಿದ್ದೇನೆ. ನನ್ನ ಆಟೋ ಮಾರಿ ಬಂದ ಹಣವನ್ನು ಯಶೋದಾಗೆ ನೀಡಿ. ಮುಂದಿನ ಜನ್ಮ ಇದ್ರೆ ಯಶೋದ ಅವರೇ ನನ್ನ ಹೆಂಡತಿಯಾಗಿ ಬರಲಿ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಸಾಲಬಾಧೆಗೆ ಹೆದರಿ ಆಟೋಡ್ರೈವರ್ ವೆಂಕಟೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರಯಾಣಿಕರಿಗೆ ಉಚಿತ ಸೇವೆ ನೀಡಿ ಸರ್ಜಿಕಲ್ ಸ್ಟ್ರೈಕ್ 2 ಸಂಭ್ರಮಿಸಿದ ಆಟೋ ಡ್ರೈವರ್

    ಪ್ರಯಾಣಿಕರಿಗೆ ಉಚಿತ ಸೇವೆ ನೀಡಿ ಸರ್ಜಿಕಲ್ ಸ್ಟ್ರೈಕ್ 2 ಸಂಭ್ರಮಿಸಿದ ಆಟೋ ಡ್ರೈವರ್

    ನವದೆಹಲಿ: ಪುಲ್ವಾಮಾ ದಾಳಿಯ ಪ್ರತಿಕಾರ ತೀರಿಸಿಕೊಂಡ ಹಿನ್ನಲೆಯಲ್ಲಿ ದೇಶವ್ಯಾಪಿ ಸಂತೋಷ ಮನೆ ಮಾಡಿದೆ. ಕೆಲವರು ಪಟಾಕಿ ಸಿಡಿಸಿ, ಸ್ವೀಟ್ ಹಂಚಿ ಸರ್ಜಿಕಲ್ ಸ್ಟ್ರೈಕ್ 2 ಅನ್ನು ಸಂಭ್ರಮಿಸಿದ್ದಾರೆ. ಆದರೆ ದೆಹಲಿಯ ಆಟೋ ಡ್ರೈವರ್ ಒಬ್ಬರು ವಿನೂತನ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.

    ಆಟೋ ಚಾಲಕ ಮನೋಜ್ ಅವರು ಫೆಬ್ರವರಿ 26ರಂದು (ಮಂಗಳವಾರ) ತಮ್ಮ ಆಟೋದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರಿಗೆಲ್ಲ ಉಚಿತವಾಗಿ ಸೇವೆ ಒದಗಿಸಿದ್ದಾರೆ. ಜೊತೆಗೆ ತಮ್ಮ ಆಟೋದಲ್ಲಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಹಾಗೂ ಭಾರತೀಯ ವಾಯು ಪಡೆ ಇಂದು ನಡೆಸಿದ ಸರ್ಜಿಕಲ್ ಸ್ಟ್ರೈಕ್ 2 ನಿಂದಾಗಿ ಎಲ್ಲರಿಗೂ ಉಚಿತ ಪ್ರಯಾಣ ಎಂದು ಬ್ಯಾನರ್ ಹಾಕಿದ್ದಾರೆ. ಇದನ್ನು ಓದಿ: ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಮನೋಜ್ ಅವರು, ಉಚಿತ ಆಟೋ ಸೇವೆಗಿಂತ ಹೆಚ್ಚೇನೂ ಮಾಡಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ನನ್ನ ಆಟೋದಲ್ಲಿ ಮಂಗಳವಾರ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೆ ಯಾವುದೇ ರೀತಿ ದರ ವಿಧಿಸುತ್ತಿಲ್ಲ. ಇದು ನನಗೆ ಹೆಚ್ಚು ಖುಷಿ ತಂದಿದೆ ಎಂದು ಹೇಳಿದ್ದಾರೆ.

    ಭಾರತೀಯ ವಾಯು ಪಡೆ ಮಂಗಳವಾರ ಮುಂಜಾನೆ 3.45ರ ಸುಮಾರಿಗೆ ಮೊದಲು ಬಾಲಕೋಟ್ ಮೇಲೆ ದಾಳಿ ಮಾಡಿತ್ತು. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಬಾದ್ ಮೇಲೆ ದಾಳಿ ಮಾಡಲಾಗಿತ್ತು. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ದಾಳಿ ಮಾಡಿದೆ. ಇದನ್ನು ಓದಿ: ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

    ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದ ಬಾಲಕೋಟ್ ನೆಲೆಯಲ್ಲಿ 300 ಉಗ್ರರು, ತರಬೇತುದಾರರು ಹಾಗೂ ಜೈಶ್ ಸಂಘಟನೆಯ ಕಮಾಂಡೋಗಳು ಬಲಿಯಾಗಿದ್ದಾರೆ. ಜೊತೆಗೆ ಈ ದಾಳಿಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಅಲಿಯಾಸ್ ಉಸ್ತಾದ್ ಘೋರಿ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಸ್ವಾರ್ಥವಾಗಿ ತಾಯಿ, ಮಗುವನ್ನು ಕಾಪಾಡಿ, ತನ್ನ ಜೀವ ಕಳೆದುಕೊಂಡ ಆಟೋ ಡ್ರೈವರ್

    ನಿಸ್ವಾರ್ಥವಾಗಿ ತಾಯಿ, ಮಗುವನ್ನು ಕಾಪಾಡಿ, ತನ್ನ ಜೀವ ಕಳೆದುಕೊಂಡ ಆಟೋ ಡ್ರೈವರ್

    ನವದೆಹಲಿ: ಆಟೋ ಚಾಲಕನೊಬ್ಬ ತಾಯಿ ಮತ್ತು ಒಂದು ವರ್ಷದ ಮಗುವಿನ ಜೀವವನ್ನು ಉಳಿಸಿ, ಕೊನೆಗೆ ತನ್ನ ಜೀವವನ್ನೇ ಕಳೆದುಕೊಂಡಿರುವ ದುರದೃಷ್ಟಕರ ಘಟನೆ ದೆಹಲಿಯಲ್ಲಿ ನಡೆದಿದೆ.

    30 ವರ್ಷದ ಪವನ್ ಶಾ ಇಬ್ಬರ ಜೀವ ಉಳಿಸಿದ ಆಟೋ ಡ್ರೈವರ್. ಶಾ ಕಳೆದ ಶನಿವಾರ ಬೆಳಗ್ಗೆ ಸುಮಾರು 10.45ಕ್ಕೆ ಪ್ರಯಾಣಿಕರನ್ನು ಬಿಟ್ಟು ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ದೆಹಲಿಯ ಮೀತಾಪುರ ಕಾಲುವೆಯ ಸೇತುವೆಯ ಮೇಲೆ ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ನಿಂತಿದ್ದರು. ಅದನ್ನು ನೋಡಿದ ಶಾ ಆಟೋ ನಿಲ್ಲಿಸಿದ್ದಾರೆ. ನಂತರ ಶಾ ನೋಡನೋಡುತ್ತಿದ್ದಂತೆ ಮಹಿಳೆ ಮಗುವಿನೊಂದಿಗೆ ನೀರಿಗೆ ಬಿದ್ದಿದ್ದಾರೆ.

    ಶಾ ಒಂದು ಕ್ಷಣವೂ ಯೋಚನೆ ಮಾಡದೇ ಅವರನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ. ಬಳಿಕ ಈಜಿಕೊಂಡು ಮಹಿಳೆ ಬಳಿ ಹೋಗಿದ್ದಾರೆ. ಆದರೆ ಇಬ್ಬರನ್ನು ಒಂದೇ ಸಲ ಕಾಪಾಡಲು ಸಾಧ್ಯವಾಗುವುದಿಲ್ಲ ಎಂದು ಅರಿತ ಶಾ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ತಕ್ಷಣ ದಾರಿಯಲ್ಲಿ ಹೋಗುತ್ತಿದ್ದ ರಾಜವೀರ್, ಜಮೀಲ್ ಮತ್ತು ಸಂಜೀವ್ ಮೂವರು ಯುವಕರು ಶಾ ಕೂಗಿದ ಶಬ್ದ ಕೇಳಿ ಸಹಾಯಕ್ಕಾಗಿ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ವೇಳೆ ಶಾ, ತಾಯಿ ಮತ್ತು ಮಗುವಿನ ತಲೆ ನೀರಿನಲ್ಲಿ ಮುಳುಗದಂತೆ ಮೇಲೆತ್ತಲು ಪ್ರಯತ್ನಿಸಿದ್ದರು. ತಕ್ಷಣ ಮೂವರು ಒಂದು ಮಾನವ ಸರಪಣಿ ಸಿದ್ಧಪಡಿಸಿ ತಾಯಿ ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಶಾನನ್ನು ರಕ್ಷಿಸಲು ಹೋಗುವಷ್ಟರಲ್ಲಿ ನೀರಿನ ರಭಸಕ್ಕೆ ಶಾ ಕೊಚ್ಚಿ ಹೋಗಿದ್ದಾರೆ. ತನ್ನ ಪ್ರಾಣವನ್ನು ಲೆಕ್ಕಿಸದೆ ತಾಯಿ ಮತ್ತು ಮಗುವಿನ ಪ್ರಾಣ ಉಳಿಸಿದ ಆಟೋ ಡ್ರೈವರ್ ಆತನ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇತ್ತ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಶಾನನ್ನು ರಕ್ಷಿಸಲಾಗದೆ ಅಸಹಾಯಕವಾಗಿ ಮೂವರು ನೋಡುತ್ತಾ ನಿಂತಿದ್ದರು. ನಂತರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರ ತಂಡ ಆಗಮಿಸಿ ಶೋಧಕಾರ್ಯ ನಡೆಸಿದ್ದಾರೆ. ಅವರ ಜೊತೆ ಇತರ ಆಟೋ ಚಾಲಕರು ಕೂಡ ಬೋಟ್ ಮೂಲಕ ಹೋಗಿ ಹುಡುಕಾಟ ನಡೆಸಿದ್ದಾರೆ. ಆದರೆ ಎಷ್ಟು ಹುಡುಕಾಡಿದರೂ ಶಾ ಮಾತ್ರ ಪತ್ತೆಯಾಗಿಲ್ಲ. ಆದ್ದರಿಂದ ಅವರು ಮೃತಪಟ್ಟಿರಬಹದು ಎಂದು ಶಂಕಿಸಲಾಗಿದೆ.

    ಇತ್ತ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಮಹಿಳೆ ಪತಿಯೊಂದಿಗೆ ಜಗಳವಾಡಿಕೊಂಡು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದರು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಜೀವನ ರಕ್ಷಾ ಶೌರ್ಯ ಪ್ರಶಸ್ತಿಗೆ ಆಟೋ ಡ್ರೈವರ್ ಶಾ ಹೆಸರನ್ನು ಶಿಫಾರಸ್ಸು ಮಾಡಲಾಗುವುದು ಎಂದು ಡಿಸಿಪಿ ಚಿನ್ಮಯ್ ಬಿಸ್ವಾಲ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಳಿತ ಸ್ಥಿತಿಯಲ್ಲೇ ಆಟೋ ಚಾಲಕ ದುರ್ಮರಣ

    ಕುಳಿತ ಸ್ಥಿತಿಯಲ್ಲೇ ಆಟೋ ಚಾಲಕ ದುರ್ಮರಣ

    ಬೆಂಗಳೂರು: ಆಟೋ ಚಾಲಕರೊಬ್ಬರು ಕುಳಿತ ಸ್ಥಿತಿಯಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ವೆಸ್ಟ್ ಆಫ್ ಕಾರ್ಡ್ ರೋಡಿನ ನಂದಿನ ಪ್ಯಾಲೇಸ್ ಬಳಿ ಈ ಘಟನೆ ನಡೆದಿದ್ದು, ಆಟೋ ಚಾಲಕನ ಮೈಮೇಲೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಹೃದಯಾಘಾತವಾಗಿ ಮೃತಪಟ್ಟಿರುವ ಅನುಮಾನ ವ್ಯಕ್ತವಾಗಿದೆ.

    ಚಾಲಕನ ಡ್ರೈವಿಂಗ್ ಲೈಸನ್ಸ್ ನಲ್ಲಿ ಆಸಿಫ್ ಎಂದು ಹೆಸರಿದೆ. ಭಾನುವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಪ್ರಯಾಣಿಕರು ಆಟೋ ಬಾಡಿಗೆಗೆ ಕೇಳಲು ಹೋದಾಗ ಆಸಿಫ್ ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

  • ಸಿನಿಮಾದಲ್ಲಿ ಗರ್ಲ್‍ಫ್ರೆಂಡ್‍ ಗೆ ನಂಬರ್ ಕೊಟ್ಟ ಹೀರೋ: ಫಜೀತಿಗೆ ಸಿಲುಕಿದ ರಿಯಲ್ ಆಟೋ ಡ್ರೈವರ್!

    ಸಿನಿಮಾದಲ್ಲಿ ಗರ್ಲ್‍ಫ್ರೆಂಡ್‍ ಗೆ ನಂಬರ್ ಕೊಟ್ಟ ಹೀರೋ: ಫಜೀತಿಗೆ ಸಿಲುಕಿದ ರಿಯಲ್ ಆಟೋ ಡ್ರೈವರ್!

    ಢಾಕಾ: ಸಿನಿಮಾದಲ್ಲಿ ನಟರೊಬ್ಬರು ಫೋನ್ ನಂಬರ್ ಬಳಸಿದ್ದರಿಂದ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆಟೋ ಡ್ರೈವರ್ ಈಗ ಫಜೀತಿಗೆ ಸಿಕ್ಕಿಕೊಂಡಿದ್ದಾರೆ.

    ಹೌದು. ಬಾಂಗ್ಲಾದೇಶದ ಪ್ರಸಿದ್ಧ ನಟ ಶಕೀಬ್ ಖಾನ್ ಅವರು ಅಭಿನಯಿಸಿದ್ದ ‘ರಾಜನೀತಿ’ ಸಿನಿಮಾ ಜೂನ್ ನಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಶಕೀಬ್ ಖಾನ್ ಅವರು ತಮ್ಮ ಸ್ನೇಹಿತೆಗೆ ಒಂದು ನಂಬರ್ ಕೊಟ್ಟಿದ್ದರು. ಆ ನಂಬರ್ ಇಜಜುಲ್ ಮಿಯಾ ಎಂಬವರ ಮೊಬೈಲ್ ನಂಬರ್ ಆಗಿದ್ದು ಈಗ ದಿನಕ್ಕೆ ನೂರಕ್ಕೂ ಅಧಿಕ ಕರೆಗಳು ಬರುತ್ತಿದೆ.

    ಚಿತ್ರದಲ್ಲಿ ನನ್ನ ಫೋನ್ ನಂಬರ್ ಬಳಸಿದರಿಂದ ನನ್ನ ಜೀವನ ಹಾಳಾಗಿ ಹೋಗಿದೆ. ಹಲೋ, ಶಕೀಬ್ ನಾನು ನಿಮ್ಮ ಅಭಿಮಾನಿ. ನಾನು ನಿಮ್ಮ ಜೊತೆ ಎರಡು ನಿಮಿಷ ಮಾತಾಡಬೇಕು ಎಂದು ಹೇಳಿ ಶಕೀಬ್ ಅವರ ಮಹಿಳಾ ಅಭಿಮಾನಿಗಳಿಂದ ನನಗೆ ದಿನಕ್ಕೆ 100 ಕರೆಗಳು ಬರುತ್ತಿದೆ ಎಂದು ಇಜಜುಲ್ ಮಿಯಾ ಹೇಳಿದ್ದಾರೆ.

    ಚಿತ್ರ ಬಿಡುಗಡೆಯಾದ ನಂತರ ಮಹಿಳೆಯರಿಂದ ಕರೆಗಳು ಬರುತ್ತಿರುವುದನ್ನು ಗಮನಿಸಿದ ನನ್ನ ಪತ್ನಿ ನನಗೆ ಅಕ್ರಮ ಸಂಬಂಧವಿದೆ ಎಂದು ತಿಳಿದು ನನ್ನನ್ನು ತೊರೆಯಲು ಮುಂದಾಗಿದ್ದಳು ಎಂದು ಅವರು ನೋವನ್ನು ತೋಡಿಕೊಂಡಿದ್ದಾರೆ.

    ಸಮಸ್ಯೆಯಾದರೂ ಹೊಸ ಫೋನ್ ನಂಬರ್ ತೆಗೆದುಕೊಳ್ಳಬಹುದಿತ್ತಲ್ಲ ಎನ್ನುವ ಪ್ರಶ್ನೆಗೆ, ಬಹಳ ವರ್ಷಗಳಿಂದ ಈ ಫೋನ್ ನಂಬರ್ ಬಳಸುತ್ತಿದ್ದು, ಗ್ರಾಹಕರಿಗೆ ಈ ನಂಬರ್ ನೀಡಿದ್ದೇನೆ. ನಂಬರ್ ಬದಲಾಯಿಸಿದರೆ ನನ್ನ ಉದ್ಯೋಗಕ್ಕೆ ಸಮಸ್ಯೆಯಾಗಬಹುದು ಎನ್ನುವ ಕಾರಣಕ್ಕೆ ಹೊಸ ನಂಬರ್ ತೆಗೆದುಕೊಳ್ಳಲಿಲ್ಲ ಎಂದು ಮಿಯಾ ಉತ್ತರಿಸಿದ್ದಾರೆ.

    ಹೊಸದಾಗಿ ನಾನು ಮದುವೆಯಾಗಿದ್ದು ಹಾಗೂ ನನಗೆ ಒಬ್ಬಳು ಹೆಣ್ಣು ಮಗಳು ಕೂಡ ಇದ್ದಾಳೆ. ಈ ಹಿಂದೆ ನಾನು ಶಕೀಬ್ ಎಂದು ತಿಳಿದುಕೊಂಡು ಒಬ್ಬ ಅಭಿಮಾನಿ ನಾನು ಇರುವ ಜಾಗ ತಿಳಿದುಕೊಂಡು 500 ಕಿ.ಮಿ ಫಾಲೋ ಮಾಡಿದ್ದ ಎಂದು ತಿಳಿಸಿದರು.

    ತನಗೆ ಆಗುತ್ತಿರುವ ಮಾನಸಿಕ ಕಿರುಕುಳದಿಂದ ಬೇಸತ್ತು ಹೋಗಿರುವ ಇಜಜುಲ್ ಮಿಯಾ ಅವರು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ಸೂವ್ ಖಾನ್ ವಿರುದ್ಧ ಕೋರ್ಟ್ ಮೊರೆಹೋಗಿದ್ದು, 50 ಲಕ್ಷ ಟಕಾ(ಅಂದಾಜು 39.38 ಲಕ್ಷ ರೂ.) ಪರಿಹಾರ ನೀಡಲು ಆದೇಶಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಮಿಯಾ ಪರ ವಕೀಲ ಮಜೀದ್ ಅವರು ಪ್ರತಿಕ್ರಿಯಿಸಿ, ಈ ವಾರ ನಾನು ಕಕ್ಷಿದಾರರ ಪರವಾಗಿ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದೇನೆ. ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲು ಜಿಲ್ಲಾ ನ್ಯಾಯಾಧಿಶರು ಹಿಂದೇಟು ಹಾಕಿದರು. ಆದರೆ ಫೋನ್ ಕರೆಯಿಂದ ಮಿಯಾ ಅವರ ಜೀವನ ಹೇಗೆ ಹಾಳಾಗಿದೆ ಎಂಬುದಕ್ಕೆ ಸಾಕ್ಷ್ಯವನ್ನು ಸಲ್ಲಿಸಿದ ಬಳಿಕ ಜಡ್ಜ್ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿಸಿದರು.