Tag: ಆಟೋ ಡ್ರೈವರ್

  • ಆಟೋ ಚಾಲಕರ ಸಂಘಕ್ಕೆ ರಾಯಭಾರಿಯಾದ ರಚ್ಚು

    ಆಟೋ ಚಾಲಕರ ಸಂಘಕ್ಕೆ ರಾಯಭಾರಿಯಾದ ರಚ್ಚು

    ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಆಟೋ ಚಾಲಕರ ಸಂಘದ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ಖಾಕಿ ಶರ್ಟ್ ಧರಿಸಿಕೊಂಡೇ ಆಟೋ ಚಲಾಯಿಸಿ ಖುಷಿ ಪಟ್ಟಿದ್ದಾರೆ.

    ಬೆಂಗಳೂರಿನಿಂದ (Bengaluru) ನೂರಾರು ಆಟೋ ಚಾಲಕರು ಆರ್.ಆರ್ ನಗರದ ಅವರ ನಿವಾಸದ ಬಳಿ ಜಮಾಯಿಸಿ ರಚಿತಾರನ್ನ ಅಫಿಷಿಯಲ್ ಆಗಿ ಚಾಲಕರ ಸಂಘದ (Auto Drivers Association) ರಾಯಭಾರಿಯನ್ನಾಗಿ ಮಾಡಿಕೊಳ್ಳುವ ಕಾರ್ಯಕ್ರಮ ಮಾಡಿದ್ದಾರೆ. ಆಟೋ ಎದುರು ಆಟೋ ಚಾಲಕರ ವಸ್ತ್ರದಲ್ಲೇ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ ರಚಿತಾ ರಾಮ್. ಈ ವಿಚಾರವನ್ನ ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

    ʻಅತಿರಥ ಮಹಾರಥ ಸಾರಥಿಗಳಿಗೆ ನನ್ನ ಸಮಸ್ಕಾರ, ನನ್ನನ್ನು ಆಟೋ ಚಾಲಕರ ಸಂಘದ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಕ ಮಾಡಿದ್ದಕ್ಕೆ ಧನ್ಯವಾದಗಳುʼ ಎಂದಿದ್ದಾರೆ ರಚಿತಾ. ಅನೇಕ ಮಹಿಳಾ ಆಟೋ ಚಾಲಕಿಯರೂ ಸೇರಿದಂತೆ ಆಟೋ ಚಾಲಕರು ರಚಿತಾ ಮನೆ ಮುಂದೆ ಭರ್ಜರಿಯಾಗಿ ಜಮಾಯಿಸಿದ್ದರು. ಆಟೋ ಚಾಲಕಿಯರ ಜೊತೆ ತಾವೂ ಖಾಕಿ ಶರ್ಟ್ ಧರಿಸಿಯೇ ನಿಂತಿದ್ದರು ರಚಿತಾ. ಇದೀಗ ರಚಿತಾ ರಾಮ್ ಆಟೋ ಚಾಲಕರ ಸಂಘದ ರಾಯಭಾರಿ.

  • ಎಂಟು ಜನರಿಗೆ ಅಂಗಾಂಗ ದಾನ ಮಾಡಿ ಉಸಿರು ಬಿಟ್ಟ ಸಿದ್ದಾಪುರದ ಆಟೋ ಚಾಲಕ

    ಎಂಟು ಜನರಿಗೆ ಅಂಗಾಂಗ ದಾನ ಮಾಡಿ ಉಸಿರು ಬಿಟ್ಟ ಸಿದ್ದಾಪುರದ ಆಟೋ ಚಾಲಕ

    ಕಾರವಾರ: ತನ್ನ ಸಾವಿನಲ್ಲೂ ಎಂಟು ಜನರಿಗೆ ಅಂಗಾಂಗ ದಾನ ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ‌ ಆಟೋ ಚಾಲಕ ಸಾರ್ಥಕತೆ ಮೆರೆದಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶಿರಳಗಿ ಮೂಲದ ವಿನಾಯಕ ವೆಂಕಟೇಶ ನಾಯ್ಕ ಅವರು ಜುಲೈ 27 ರಂದು ಬೆಂಗಳೂರಿನಲ್ಲಿ ಆಟೋ ಚಲಾಯಿಸುತ್ತಿದ್ದಾಗ ಬೆಂಗಳೂರಿನ ಸೀತಾ ಸರ್ಕಲ್ ಬಳಿ ಬಿಎಂಟಿಸಿ ಬಸ್ ಹಿಂಭಾಗದಿಂದ ರಿಕ್ಷಕ್ಕೆ ಗುದ್ದಿತ್ತು‌. ಆಟೋದಲ್ಲಿ ಇದ್ದ ಪ್ರಯಾಣಿಕರು ಸಾವು ಕಂಡಿದ್ದರೆ, ವಿನಾಯಕ್ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು.

    ಅಪಘಾತದಿಂದ ವಿನಾಯಕ ವೆಂಕಟೇಶ್ ನಾಯ್ಕ ಕೋಮಾಕ್ಕೆ ಜಾರಿದ್ದರು. ಆದರೆ, ಬದುಕಿಗಾಗಿ 13 ದಿನಗಳ ಹೋರಾಟ ನಡೆಸಿದರೂ ಮಿದುಳು ನಿಷ್ಕ್ರಿಯವಾಗಿತ್ತು. ಹೀಗಾಗಿ, ಅವರ ಆಸೆಯಂತೆ ಅಂಗಾಂಗವನ್ನು ದಾನ ಮಾಡಲಾಗಿದ್ದು, ಎಂಟು ಜನರಿಗೆ ಅವರ ಅಂಗಗಳನ್ನು ನೀಡಲಾಗಿದೆ.

    ಈ ಮೂಲಕ ತನ್ನ ಸಾವಿನಲ್ಲೂ ಇನ್ನೊಬ್ಬರ ಜೀವನಕ್ಕೆ ಬೆಳಕಾಗಿದ್ದು, ಸಾರ್ಥಕತೆ ಮೆರೆದಿದ್ದಾರೆ. ಭಾನುವಾರ ಅವರ ಮೃತದೇಹವನ್ನು ಸಿದ್ದಾಪುರದ ಶಿರಳಿಗೆ ತರಲಾಗಿದ್ದು, ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.

  • ಬೆಂಗಳೂರಿಗರಿಗೆ ಮತ್ತೊಂದು ಶಾಕ್ – ಇಂದಿನಿಂದ ಆಟೋ ದರ ಏರಿಕೆ

    ಬೆಂಗಳೂರಿಗರಿಗೆ ಮತ್ತೊಂದು ಶಾಕ್ – ಇಂದಿನಿಂದ ಆಟೋ ದರ ಏರಿಕೆ

    – 2 ಕಿಮೀಗೆ ಕನಿಷ್ಠ ದರ 36 ರೂಪಾಯಿ ಫಿಕ್ಸ್‌

    ಬೆಂಗಳೂರು: ಬಸ್, ಮೆಟ್ರೋ ನಂತರ ಇಂದಿನಿಂದ ಆಟೋ ದರ (Auto Rate) ಏರಿಕೆಯಾಗುತ್ತಿದ್ದು, ಬೆಂಗಳೂರಿಗರ ಜೇಬಿಗೆ ಕತ್ತರಿ ಬೀಳುತ್ತಿದೆ. ಒಂದೆಡೆ ಸರ್ಕಾರ ಆಟೋ ದರ ಏರಿಕೆ ಮಾಡಿದ್ರೆ, ಮತ್ತೊಂದೆಡೆ ಸುಲಿಗೆ ಮಾಡೋ ಆಟೋ ಚಾಲಕರ ಆಪರೇಷನ್‌ಗೆ ಟ್ರಾಫಿಕ್ ಪೋಲಿಸರು ಮುಂದಾಗಿದ್ದಾರೆ.

    ಕಳೆದ ತಿಂಗಳ 14ನೇ ತಾರೀಖಿನಂದು ಬೆಂಗಳೂರು (Bengaluru) ಆಟೋ ದರವನ್ನು ಹೆಚ್ಚಿಸಿ ಬೆಂಗಳೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ರು. ಈ ಆದೇಶ ಇಂದಿನಿಂದ ಜಾರಿಗೆ ಬರ್ತಿದ್ದು, ಬೆಂಗಳೂರಿಗರಿಗೆ ದುಬಾರಿ ದುನಿಯಾದಲ್ಲಿ ಆಟೋ ಪ್ರಯಾಣ ದರವೂ ಹೊರೆಯಾಗಲಿದೆ. ಇದನ್ನೂ ಓದಿ: ಲವ್ವರ್‌ ಜೊತೆ ಗಂಡನ ಹತ್ಯೆ – ಧರ್ಮಸ್ಥಳಕ್ಕೆ ಹೋಗಿದ್ದಾನೆಂದು ಕಥೆ ಕಟ್ಟಿ ಹಬ್ಬ ಮಾಡಿದ್ದ ಪತ್ನಿ ಅಂದರ್‌

    2 ಕಿಮೀಗೆ ಕನಿಷ್ಠ ಪ್ರಯಾಣ ದರ 30 ರಿಂದ 36ಕ್ಕೆ ಏರಿಕೆ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಡಿಸಿ ಜಗದೀಶ್ ಆದೇಶ ಹೊರಡಿಸಿದ್ದಾರೆ. ಇದು ರಾಜಧಾನಿ ಜನರ ಜೇಬಿಗೆ ಕತ್ತರಿ ಹಾಕಲಿದೆ. ಇಂದಿನಿಂದ ಆಟೋ ದರ ಎಷ್ಟು ಹೆಚ್ಚಾಗಲಿದೆ ಅನ್ನೋದನ್ನು ನೋಡೋದಾದ್ರೇ… ಇದನ್ನೂ ಓದಿ: 69 ದೇಶಗಳಿಗೆ ಸುಂಕದ ಬರೆ – ಭಾರತಕ್ಕೆ 25%, ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ ಟ್ರಂಪ್‌

    ಆಟೋ ಪ್ರಯಾಣ ದುಬಾರಿ?
    – ಮೊದಲ 2 ಕಿ.ಮೀಗೆ ಕನಿಷ್ಠ 36 ರೂ.
    – ನಂತರ ಪ್ರತಿ ಕಿ.ಮೀಗೆ 18 ರೂ.
    – ಮೊದಲ ಐದು ನಿಮಿಷ ಕಾಯುವಿಕೆ ಉಚಿತ
    – ಪ್ರತಿ 15 ನಿಮಿಷ ಕಾಯುವಿಕೆ ದರ 10 ರೂ.
    – 20 ಕೆಜಿ ಲಗೇಜ್ ಉಚಿತ
    – 20 ಕೆಜಿಗಿಂತ ಹೆಚ್ಚಿದ್ರೆ 10 ರೂ. ಲಗೇಜ್ ಶುಲ್ಕ
    – ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ಒಂದೂವರೆ ಪಟ್ಟು ದರ
    – ಹೊಸ ದರ ಪಟ್ಟಿ ಆಟೋದ ಮೇಲೆ ಕಡ್ಡಾಯ ಹಾಕಬೇಕು
    – ಪರಿಷ್ಕೃತ ದರದ ಹೊಸ ಮೀಟರ್ ಅ.31ರ ಒಳಗೆ ಹಾಕಿಸಬೇಕು.

    ಈ ದರ ಏರಿಕೆಯ ನಂತರವೂ ಹೆಚ್ಚು ಹಣ ಪಡೆದ್ರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಮತ್ತೊಂದೆಡೆ ಆಟೋರಿಕ್ಷಾ ವಾಹನಗಳ ವಿರುದ್ದ ವಿಶೇಷ ಕಾರ್ಯಾಚರಣೆ ಸಂಚಾರಿ ಪೋಲಿಸರು ಕೈಗೆತ್ತಿಕೊಂಡಿದ್ದಾರೆ. ಬೆಂಗಳೂರು ನಗರ ಸಂಚಾರ ಪೋಲಿಸರು ಸಾರ್ವಜನಿಕರಿಂದ ಅತೀ ಹೆಚ್ಚು ಬಾಡಿಗೆ ಸಂಗ್ರಹಿಸುತ್ತಿರೋದು, ಸಾರ್ವಜನಿಕರು ಕರೆದ ಕಡೆಗೆ ಬಾಡಿಗೆ ಹೋಗದೇ ಇದ್ದು ಅಥವಾ ನಿಯಮ ಉಲ್ಲಂಘನೆ ಮಾಡೋ ಆಟೋಗಳ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

  • ಹೆಣ್ಣುಮಕ್ಕಳಿಗೆ ಅಟೋ ಕಲಿಸಿಕೊಟ್ಟ ಡಬಲ್‌ ಸ್ಟಾರ್‌ ಪ್ರಭಾವತಿಗೆ ನಾರಿ ನಾರಾಯಣಿ ಗೌರವ

    ಹೆಣ್ಣುಮಕ್ಕಳಿಗೆ ಅಟೋ ಕಲಿಸಿಕೊಟ್ಟ ಡಬಲ್‌ ಸ್ಟಾರ್‌ ಪ್ರಭಾವತಿಗೆ ನಾರಿ ನಾರಾಯಣಿ ಗೌರವ

    ತನ್ನ ಜೀವನ ನಿರ್ವಹಣೆಗಾಗಿ ಹಿಡಿದದ್ದು ಆಟೋ ಓಡಿಸುವ ಕೆಲಸ. ಈಗ ತನ್ನ ಜೀವನ ನಡೆಸುವ ಜೊತೆ ಜೊತೆಗೆ ನೂರಾರು ಮಹಿಳೆಯರಿಗೂ ದಾರಿ ದೀಪವಾಗಿದ್ದಾರೆ.

    ಇವರ ಹೆಸರು ಪ್ರಭಾವತಿ. ಆದರೆ ಇವರಿಗೆ ಜನ ಕೊಟ್ಟಿರುವುದು ಡಬಲ್ ಸ್ಟಾರ್ ಪ್ರಭಾವತಿ ಎಂಬ ಪಟ್ಟ. ಹೇಗಾದ್ರೂ ಮಾಡಿ ಜೀವನ ಸಾಗಿಸಬೇಕು ಅನಿವಾರ್ಯತೆಗೆ ಬಿದ್ದ ಬೆಂಗಳೂರಿನ ಪ್ರಭಾವತಿ ಕೈಹಿಡಿದು ಬದುಕು ಕೊಟ್ಟಿದ್ದು ಆಟೋ.

    ಆರಂಭದಲ್ಲಿ ಆಟೋ ಕಲಿಯಬೇಕು ಅಂದಾಗ ಸಾಕಷ್ಟು ಸವಾಲುಗಳು ಎದುರಾಗಿದ್ದವು. ಆದರೆ ಇದೆಲ್ಲವನ್ನು ಮೆಟ್ಟಿ ನಿಂತು ಆಟೋ ಓಡಿಸಿ ತಮ್ಮ ಬದುಕು ಕಟ್ಟಿಕೊಂಡ್ರು. ಅಲ್ಲಿಗೆ ಸುಮ್ಮನಾಗದ ಇವರು ತಮ್ಮಂತೆ ಅನಿವಾರ್ಯತೆ ಇದ್ದ ಹೆಣ್ಣುಮಕ್ಕಳಿಗೆ ಉಚಿತ ಆಟೋ ತರಬೇತಿ ಶುರು ಮಾಡಿದರು. ಕಳೆದ ಎರಡು ವರ್ಷದಲ್ಲಿ 200ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ತರಬೇತಿ ನೀಡಿ ಜೀವನಕ್ಕೆ ದಾರಿ ಮಾಡಿದ್ದಾರೆ.

    ಕಷ್ಟದಲ್ಲಿದ್ದ ಅದೆಷ್ಟೋ ಹೆಣ್ಣುಮಕ್ಕಳಿಗೆ ಸ್ವಾವಲಂಬನೆ ಜೀವನ ಪಾಠ ಹೇಳುತ್ತಿರುವ ಡಬಲ್ ಸ್ಟಾರ್ ಪ್ರಭಾವತಿ ನಿಜಕ್ಕೂ ಸ್ಫೂರ್ತಿ. ಈ ಅಪರೂಪದ ಸಾಧಕಿಗೆ ನಾರಿನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹರ್ಷಿಸುತ್ತಿದೆ.

  • ಆರ್‌ಟಿಓ ಕಚೇರಿಗೆ ಆಟೋ ಡ್ರೈವರ್‌ಗಳ ಮುತ್ತಿಗೆ

    ಆರ್‌ಟಿಓ ಕಚೇರಿಗೆ ಆಟೋ ಡ್ರೈವರ್‌ಗಳ ಮುತ್ತಿಗೆ

    ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾವಿರಾರು ಆಟೋ, ಕ್ಯಾಬ್ ಚಾಲಕರು ಸಾರಿಗೆ ಇಲಾಖೆ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿದ್ರು. ಸಾವಿರಾರು, ಆಟೋ ಕ್ಯಾಬ್‍ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಶಾಂತಿನಗರದ ಬಿಟಿಎಸ್ ರೋಡ್ ಬ್ಲಾಕ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ರು.

    ಆರ್‌ಟಿಓ ಕಚೇರಿಗೆ ನುಗ್ಗಿದ ಚಾಲಕರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯ್ತು. ಪೊಲೀಸರನ್ನೇ ತಳ್ಳಿ ಸಾರಿಗೆ ಕಚೇರಿಗೆ ನುಗ್ಗಲು ಯತ್ನಿಸಿದ್ರು. ಸರ್ಕಾರ ಫೆಬ್ರವರಿಯಲ್ಲೇ ಒನ್ ಸಿಟಿ ಒನ್ ರೇಟ್ ಆದೇಶ ಹೊರಡಿಸಿದ್ದು, ಯಾವುದೇ ಅಗ್ರಿಗೇಟರ್ ಕಂಪನಿಗಳು ಆದೇಶ ಪಾಲನೆ ಮಾಡುತ್ತಿಲ್ಲ. ಆರ್‍ಟಿಓ ಅಧಿಕಾರಿಗಳು ಆದೇಶ ಪಾಲನೆ ಮಾಡದ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚಾಲಕರು ಕಿಡಿಕಾರಿದ್ರು.

    ಓಲಾ- ಉಬರ್ ಸೇರಿದಂತೆ ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪನಿಗಳು ದುಪ್ಪಟ್ಟು ಲಾಭ ಪಡೆಯುತ್ತಿವೆ. ಆದರೆ ಚಾಲಕರಿಗೆ ಯಾವುದೇ ಲಾಭ ಸಿಗುತ್ತಿಲ್ಲ ಅಂತ ಕಿಡಿಕಾರಿದ್ರು. ಆಟೋ-ಕ್ಯಾಬ್‍ಗಳನ್ನು ರೋಡ್‍ಗೆ ಅಡ್ಡಲಾಗಿ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಪ್ರತಿಭಟನೆ ಬೆನ್ನಲ್ಲೇ ಸಾರಿಗೆ ಇಲಾಖೆ 11 ವಿಶೇಷ ತಂಡ ರಚಿಸಿದ್ದು, ನಾಳೆಯಿಂದ ಬೈಕ್ ಟ್ಯಾಕ್ಸಿ ಮೇಲೆ ರೇಡ್ ಮಾಡಲಿದೆ. ಇದನ್ನೂ ಓದಿ: ಜು.8 ರಿಂದ ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಬಿಡುಗಡೆ: ಚಲುವರಾಯಸ್ವಾಮಿ

    ಆಟೋ ಚಾಲಕರ ಬೇಡಿಕೆಗಳೇನು..?
    1. ಒನ್ ಸಿಟಿ ಒನ್ ಫೇರ್ ಜಾರಿಯಾಗಬೇಕು
    2. ರ್ಯಾಪಿಡೋ ಬೈಕ್ ಟ್ಯಾಕ್ಸಿ ನಿಲ್ಲಬೇಕು
    3. ಆರ್‌ಟಿಓ ಅಧಿಕಾರಿಗಳು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಕಾರ್ಯಾಚರಣೆ ಮಾಡಬೇಕು
    4. ಪೋರ್ಟರ್ ಕಂಪನಿಯನ್ನು ಬ್ಯಾನ್ ಮಾಡಬೇಕು
    5. ಸ್ಕೂಲ್ ವಾಹನಗಳಿಗೆ ಪರ್ಮಿಟ್ ನೀಡಬೇಕು

  • ಅಪ್ಪ-ಅಮ್ಮ ಬಿಟ್ರೆ ದರ್ಶನ್ ನನಗೆ ದೇವರು- ‘ದಾಸ’ನ ಭೇಟಿಗೆ ಬಂದ ಆಟೋ ಡ್ರೈವರ್

    ಅಪ್ಪ-ಅಮ್ಮ ಬಿಟ್ರೆ ದರ್ಶನ್ ನನಗೆ ದೇವರು- ‘ದಾಸ’ನ ಭೇಟಿಗೆ ಬಂದ ಆಟೋ ಡ್ರೈವರ್

    – ನಟ ಬೇಗ ಜೈಲಿಂದ ಬಿಡುಗಡೆಯಾಗಲಿ ಅಂತಾ ಶಂಖನಾದ

    ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕಿಡ್ನಾಪ್ (Renukaswamy Case) ಹಾಗೂ ಕೊಲೆ ಪ್ರಕರಣ ಸಂಬಂಧ ದರ್ಶನ್ & ಗ್ಯಾಂಗ್ ಪರಪ್ಪನ ಅಗ್ರಹಾರ ಸೇರಿದೆ. ಇಂದು ಭಾನುವಾರ ಆಗಿರುವ ಕಾರಣ ಯಾರಿಗೂ ಭೇಟಿಗೆ ಅವಕಾಶ ಇಲ್ಲ. ಆದರೂ ಅಭಿಮಾನಿಗಳು ದರ್ಶನ್ ಭೇಟಿಗೆ ಯತ್ನಿಸುತ್ತಿದ್ದಾರೆ.

    ಹೌದು. ದರ್ಶನ್ ಭೇಟಿಯಾಗಲೆಂದು ಬೆಂಗಳೂರಿನ ಮಾರತ್‍ಹಳ್ಳಿಯಿಂದ ಆಟೋ ಡ್ರೈವರ್ ಸುನೀಲ್ ಬಂದಿದ್ದಾನೆ. ಈತ ನಾನು ತಿಂಗಳಿಗೆ ಒಮ್ಮೆ ದರ್ಶನ್ (Challenging Star Darshan) ಅಣ್ಣನ ಭೇಟಿ ಮಾಡುತ್ತಿದ್ದೆ. ಆದರೆ ಈಗ ಜೈಲಿನಲ್ಲಿ ಇದ್ದಾರೆ. ಹಾಗಾಗಿ ನೋಡಲು ಬಂದೆ. ನಮ್ ಬಾಸ್ ಒಳ್ಳೆಯ ಕೆಲಸಗಳನ್ನು ಜನರಿಗೆ ಮಾಡುತ್ತಿದ್ದರು. ಆದರೆ ಈಗ ಅವರು ಈಗ ಜೈಲಿನಲ್ಲಿ ಇದ್ದಾರೆ. ತಂದೆ ತಾಯಿ ಬಿಟ್ರೆ ದರ್ಶನ್ ನನಗೆ ದೇವರು ಎಂದು ಹೇಳಿದ್ದಾನೆ.

    ಇನ್ನೊಂದೆಡೆ ಶಂಖ ಊದಿ ಜಾಗಟೆ ಬಾರಿಸಿದ ದಾಸಪ್ಪ. ತುರುವೇಕೆರೆಯಿಂದ ಬಂದಿರುವ ಗೋವಿಂದರಾಜು ಎಂಬ ದಾಸಪ್ಪ, ದರ್ಶನ್ ಆದಷ್ಟು ಬೇಗ ಜೈಲಿಂದ ಬಿಡುಗಡೆಯಾಗಲಿ ಎಂದು ಶಂಖ ಊದಿ ಜಾಗಟೆ ಬಾರಿಸಿದರು. ನಮ್ಮಂತಹ ವಿಕಲಚೇತನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಹಾಗಾಗಿ ಅವರು ಬೇಗ ಜೈಲಿಂದ ಬಿಡುಗಡೆಯಾಗಲಿ ಎಂದು ಬಂದಿದ್ದೇನೆ ಎಂದು ದಾಸಪ್ಪ ಹೇಳಿದ್ದಾರೆ.

    ನಟ ದರ್ಶನ್ ಜೈಲು ಸೇರಿದಾಗಿನಿಂದ ಫ್ಯಾನ್ಸ್ ಅವರ ಭೇಟಿಗೆ ಹಾತೊರೆಯುತ್ತಿದ್ದಾರೆ. ಆದರೆ ಯಾರಿಗೂ ಅವಕಾಶ ಕೊಟ್ಟಿಲ್ಲ. ಇದನ್ನೂ ಓದಿ: ದರ್ಶನ್‌ ಪ್ರಕರಣದ ಬಗ್ಗೆ ಜಗ್ಗೇಶ್‌ ಪ್ರತಿಕ್ರಿಯೆ

  • ಲೇಡಿ ಆಟೋ ಡ್ರೈವರ್ ಕಷ್ಟಕ್ಕೆ ಬೆಳಕಾದ ಪಬ್ಲಿಕ್ ಟಿವಿ

    ಲೇಡಿ ಆಟೋ ಡ್ರೈವರ್ ಕಷ್ಟಕ್ಕೆ ಬೆಳಕಾದ ಪಬ್ಲಿಕ್ ಟಿವಿ

    ರಾಯಚೂರು: ನಗರದ ಲೇಡಿ ಆಟೋ ಡ್ರೈವರ್ (Lady Auto Driver) ಕಷ್ಟಕ್ಕೆ ಪಬ್ಲಿಕ್ ಟಿವಿಯ (Public TV) ಬೆಳಕು ಕಾರ್ಯಕ್ರಮ (Belaku Program) ಕೈ ಹಿಡಿದಿದೆ.

    ರಾಯಚೂರಿನಲ್ಲಿ (Raichur) ಶಿಕ್ಷಣ ಸಂಸ್ಥೆ ನಡೆಸುತ್ತಿರುವ ರೇಖಾ ಕೇಶವ ರೆಡ್ಡಿ, ರಿಮ್ಸ್ ನೇತ್ರಾಧಿಕಾರಿ ಪ್ರಭನಗೌಡ ಸೇರಿ ಹಲವು ದಾನಿಗಳು ಮತ್ತು ಎಸ್‌ಬಿಐ ಬ್ಯಾಂಕ್ ನೆರವಿನೊಂದಿಗೆ ಆಟೋ ಚಾಲಕಿ ನಿರ್ಮಲಾ ಅವರಿಗೆ ಬದುಕಿನ ಬಂಡಿ ಎಳೆಯಲು ಹೊಸ ಆಟೋ ಸಿಕ್ಕಿದೆ. ಈ ಮೂಲಕ ನಿರ್ಮಲಾ ಅವರಿಗೆ ತನ್ನ ಸ್ವಂತ ದುಡಿಮೆಯಲ್ಲಿ ಸ್ವಾಭಿಮಾನದ ಬದುಕು ಮುಂದುವರೆಸಲು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಶಕ್ತಿ ನೀಡಿದೆ. ಇದನ್ನೂ ಓದಿ: 50 ಪ್ರಯಾಣಿಕರನ್ನು ಬಿಟ್ಟುಹೋದ ವಿಮಾನ – ಗೋ ಫಸ್ಟ್‌ಗೆ DGCA ನೋಟಿಸ್

    ನಿರ್ಮಲಾ ಅವರ ಕಷ್ಟ ಕಾರ್ಪಣ್ಯಗಳ ಬಗ್ಗೆ ಡಿಸೆಂಬರ್ 5ರಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ವರದಿ ಬಿತ್ತರವಾಗಿತ್ತು. ಇದನ್ನೂ ಓದಿ: ಡೆಡ್ಲಿ ಮೆಟ್ರೋಗೆ ಇಬ್ಬರು ಬಲಿ – ಪಿಲ್ಲರ್ ದುರಂತಕ್ಕೆ ಕಾರಣಗಳೇನು?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮನೆಯವರಿಗೆ ಕರೆ ಮಾಡಿ ಆಟೋ ಡ್ರೈವರ್ ಆತ್ಮಹತ್ಯೆ

    ಮನೆಯವರಿಗೆ ಕರೆ ಮಾಡಿ ಆಟೋ ಡ್ರೈವರ್ ಆತ್ಮಹತ್ಯೆ

    ಮಡಿಕೇರಿ: ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಟೋ ಚಾಲಕ (Auto Driver) ಶುಕ್ರವಾರ ರಾತ್ರಿ ಮನೆಯವರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ (Madikeri) ನಗರದ ಹೊರವಲಯದಲ್ಲಿ ಇರುವ ಕೂಟ್ಟುಹೊಳೆಯಲ್ಲಿ ನಡೆದಿದೆ.

    ಮಡಿಕೇರಿಯ ಆಜಾದ್ ನಗರ ನಿವಾಸಿ ಆಟೋ ಡ್ರೈವರ್ ಸೈಫು(31) ಮೃತ ವ್ಯಕ್ತಿ. ಕಳೆದ ರಾತ್ರಿ ಮನೆಯವರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸೈಫು ತಿಳಿಸಿದ್ದಾನೆ. ಕರೆ ಬಂದ ಬಳಿಕ ಮನೆಯವರು ಗಾಬರಿಯಿಂದ ಮಡಿಕೇರಿ ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಮಡಿಕೇರಿ ಹೊರವಲಯದ ಕೂಟುಹೊಳೆಯ ಸುತ್ತಮುತ್ತ ಹುಡುಕಾಟ ನಡೆಸಿದಾಗ, ಹೊಳೆ ಬದಿ ಆಟೋ (Auto) ಪತ್ತೆಯಾಗಿದೆ. ಅಲ್ಲದೆ ಕೂಟುಹೊಳೆ ಬದಿಯಲ್ಲಿ ಸೈಫು ಆಟೋದಲ್ಲಿ ಮೊಬೈಲ್ (Mobile), ಪರ್ಸ್ ಸಿಕ್ಕಿದೆ.

    ಈ ಹಿನ್ನೆಲೆಯಲ್ಲಿ ತಕ್ಷಣವೇ ಮನೆಯರು ಪೊಲೀಸ್ ಠಾಣೆಗೆ (Police Station) ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ರಾತ್ರಿ ವೇಳೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅದಾದ ಬಳಿಕ ರಾತ್ರಿ ಆಗಿದ್ದರಿಂದ ಹೊಳೆಯಲ್ಲಿ ಮೃತದೇಹ ಶೋಧಕಾರ್ಯ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಬೆಳಿಗ್ಗೆಯೇ ಮೃತ ದೇಹವನ್ನು ಪೊಲೀಸ್ ಇಲಾಖೆ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹೊಳೆಯ ಮಧ್ಯಭಾಗದಲ್ಲಿ ಮೃತ ದೇಹ ಸಿಕ್ಕಿದೆ. ಇದನ್ನೂ ಓದಿ: ಮೊದಲ ವಿವಾಹ ಮುಚ್ಚಿಟ್ಟು ಎರಡನೇ ಮದುವೆ – ತಾಳಿಕಟ್ಟೋ ಮುನ್ನವೇ ನಯವಂಚಕನ ಬಣ್ಣ ಕಳಚಿಟ್ಟ ಪತ್ನಿ

    crime

    ಹೊಳೆಯಿಂದ ಸೈಫು ಮೃತದೇಹ ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ ಮರಣೋತ್ತರ ಪರೀಕ್ಷೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಹಲವು ದಿನಗಳಿಂದ ಆಟೋ ಚಾಲಕ ಅನಾರೋಗ್ಯದಿಂದ ಬಳಲುತ್ತಿದ್ದ ಎಂದು ಹೇಳಲಾಗುತ್ತಿದೆ. ಇನ್ನೂ ಘಟನೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಒಬ್ಬಳ ಹಿಂದೆ ಬಿದ್ದ ಇಬ್ಬರು ಹುಡುಗ್ರು – ಪ್ರೀತಿ ವಿಚಾರಕ್ಕೆ ನಡೀತು ಎರಡು ಗ್ಯಾಂಗ್ ಮಧ್ಯೆ ಗುದ್ದಾಟ

    Live Tv
    [brid partner=56869869 player=32851 video=960834 autoplay=true]

  • ಬೇರೊಬ್ಬಳ ಜೊತೆಗಿನ ಅಫೇರ್ ಬಗ್ಗೆ ಪ್ರಶ್ನೆ ಮಾಡಿದ ವಿಧವೆಯ ಕೊಲೆ

    ಬೇರೊಬ್ಬಳ ಜೊತೆಗಿನ ಅಫೇರ್ ಬಗ್ಗೆ ಪ್ರಶ್ನೆ ಮಾಡಿದ ವಿಧವೆಯ ಕೊಲೆ

    – ವಿಧವೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆಟೋ ಡ್ರೈವರ್
    – ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿ

    ತಿರುವನಂತಪುರಂ: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಆಟೋ ಡ್ರೈವರ್ ಕೊಲೆ ಮಾಡಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಶೋಭಾ (37) ಮೃತ ಮಹಿಳೆ. ಆರೋಪಿ ಬಿಬಿನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಶೋಭಾ ವಿಧವೆಯಾಗಿದ್ದು, ಆರೋಪಿ ಆಡೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು.

    ಏನಿದು ಪ್ರಕರಣ?
    ಮಂದಮಚೇರಿ ಮೂಲದ ಶೋಭಾ ಆಗಸ್ಟ್ 24 ರಂದು ಕಾಣೆಯಾಗಿದ್ದು, ಕುಟುಂಬದವರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದ ಪೊಲೀಸರಿಗೆ ಆಗಸ್ಟ್ 28 ರಂದು ಶೋಭಾ ಮನೆಯಿಂದ ಸುಮಾರು 34 ಕಿ.ಮೀ ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ.

    ಮೃತ ಶೋಭಾಗೆ ಮದುವೆಯಾಗಿದ್ದು, ಪತಿ ಮೃತಪಟ್ಟಿದ್ದನು. ಆರೋಪಿ ಬಿಬಿನ್ ಫೇಸ್‍ಬುಕ್ ಮೂಲಕ ಶೋಭಾಗೆ ಪರಿಚಯವಾಗಿದ್ದನು. ನಂತರ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಆದರೆ ಬಿಬಿನ್ ಇತ್ತೀಚೆಗೆ ಇನ್ನೊಬ್ಬ ಯುವತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದನು. ಈ ಬಗ್ಗೆ ಮಾತನಾಡಲು ಶೋಭಾ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊನೆಗೆ ಆರೋಪಿ ಬಿಬಿನ್ ಕೋಪದಲ್ಲಿ ಶೋಭಾಳನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಮೃತ ಶೋಭಾಳ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದನು. ಪೊಲೀಸರು ಶೋಭಾ ಫೋನ್ ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ. ಆಗ ಆರೋಪಿ ಬಿಬಿನ್ ಶೋಭಾಳನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ಇದೀಗ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಕೊರೊನಾ ಗೆದ್ದ ವಾರಿಯರನ್ನು 140 ಕಿಮೀ ಕ್ರಮಿಸಿ ಡ್ರಾಪ್ ಕೊಟ್ಟ ಲೇಡಿ ಆಟೋ ಡ್ರೈವರ್

    ಕೊರೊನಾ ಗೆದ್ದ ವಾರಿಯರನ್ನು 140 ಕಿಮೀ ಕ್ರಮಿಸಿ ಡ್ರಾಪ್ ಕೊಟ್ಟ ಲೇಡಿ ಆಟೋ ಡ್ರೈವರ್

    – ಮಹಿಳಾ ಚಾಲಕಿ ಕೆಲಸಕ್ಕೆ ವಿವಿಎಸ್ ಲಕ್ಷ್ಮಣ್ ಸಲಾಂ

    ಹೈದರಾಬಾದ್: ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ಕೊರೊನಾ ವಾರಿಯರನ್ನು 140 ಕಿಮೀ ಕ್ರಮಿಸಿ ಮಹಿಳಾ ಆಟೋ ಡ್ರೈವರ್ ಒಬ್ಬರು ಡ್ರಾಪ್ ಮಾಡಿರುವ ಘಟನೆ ಮಣಿಪುರದ ಇಂಪಾಲ್‍ನಲ್ಲಿ ನಡೆದಿದೆ.

    ಕೊರೊನಾ ಸೋಂಕಿಗೆ ಒಳಗಾಗಿದ್ದ ನರ್ಸ್ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದರು. ಆದರೆ ಅವರನ್ನು ಮನೆಗೆ ಡ್ರಾಪ್ ಮಾಡಲು ಸ್ಥಳೀಯ ವಾಹನ ಚಾಲಕರು ನಿರಾಕರಿಸಿದ್ದರು. ಈ ವೇಳೆ ವಾರಿಯರ್ ಸಹಾಯಕ್ಕೆ ಬಂದ ಮಹಿಳಾ ಆಟೋ ಚಾಲಕಿ ಎಚೆ ಲೈಬಿ ಒನಮ್, ರಾತ್ರಿ ವೇಳೆ ಸುಮಾರು 140 ಕಿಮೀ ಆಟೋ ಚಾಲನೆ ಮಾಡಿಕೊಂಡು ಹೋಗಿ ನರ್ಸ್ ಅವರನ್ನು ಮನೆ ತಲುಪಿಸಿದ್ದಾರೆ.

    ಆಟೋ ಚಾಲಕಿ ಎಚೆ ಲೈಬಿ ಒನಮ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿರುವ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್, ಎಚೆ ಲೈಬಿ ಒನಮ್ ಅವರ ಫೋಟೋವನ್ನು ಟ್ವೀಟ್ ಮಾಡಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೇ ಅವರ ನಿಸ್ವಾರ್ಥ ಸೇವೆಗೆ ಧನ್ಯವಾದ ತಿಳಿಸಿದ್ದಾರೆ.