Tag: ಆಟೋ ಚಾಲಕರು

  • ಶಕ್ತಿ ಯೋಜನೆಯಿಂದ ಆಟೋದವರಿಗೆ ಸಮಸ್ಯೆಯಾದ್ರೆ ಸರ್ಕಾರ ಪರಿಹಾರ ನೀಡಲಿದೆ – ರಾಮಲಿಂಗಾರೆಡ್ಡಿ

    ಶಕ್ತಿ ಯೋಜನೆಯಿಂದ ಆಟೋದವರಿಗೆ ಸಮಸ್ಯೆಯಾದ್ರೆ ಸರ್ಕಾರ ಪರಿಹಾರ ನೀಡಲಿದೆ – ರಾಮಲಿಂಗಾರೆಡ್ಡಿ

    ಬೆಂಗಳೂರು: ಶಕ್ತಿ ಯೋಜನೆಯಿಂದ (Shakti Scheme) ಆಟೋ ಚಾಲಕರಿಗೆ (Auto Drivers) ಸಮಸ್ಯೆಯಾದರೆ, ಸರ್ಕಾರ ಅವರ ನೆರವಿಗೆ ಧಾವಿಸೋ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಭೋಜೇಗೌಡ ಪ್ರಶ್ನೆ ಕೇಳಿದರು. ಶಕ್ತಿ ಯೋಜನೆ ಪರಿಣಾಮ ಆಟೋ ರಿಕ್ಷಾಗಳ ಮೇಲೆ ಬಿದ್ದಿದೆ. ಉಚಿತ ಬಸ್ ಪ್ರಯಾಣದಿಂದ ಆಟೋದವರು ಜೀವನ ಮಾಡಲು ಆಗುತ್ತಿಲ್ಲ. ರಾಜ್ಯದಲ್ಲಿ ಸುಮಾರು 5 ಲಕ್ಷ ಆಟೋ ಚಾಲಕರು ಇದ್ದಾರೆ. ಅವರಿಗೆ ಜೀವನ ಮಾಡಲು ಆಗುತ್ತಿಲ್ಲ. ಇವರ ನೆರವಿಗೆ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಪರ್ಧಿಸಲು ಪಕ್ಷ ಸೂಚನೆ ನೀಡಿದ್ರೆ ಆದೇಶ ಪಾಲಿಸಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯ

    ಇದಕ್ಕೆ ಉತ್ತರ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಜೂನ್ 11ಕ್ಕೆ ಶಕ್ತಿ ಯೋಜನೆ ಪ್ರಾರಂಭ ಆಯ್ತು. ಉತ್ತಮವಾಗಿ ಯೋಜನೆ ನಡೆಯುತ್ತಿದೆ. ಯೋಜನೆ ಜಾರಿ ಆಗಿ ಒಂದು ತಿಂಗಳು ಆಗಲಿ. ಆಟೋದವರಿಗೆ ಏನ್ ಸಮಸ್ಯೆ ಆಗಿದೆ ಅಂತ ನೋಡೋಣ ಎಂದು ಹೇಳಿದರು.

    ಈವರೆಗೂ ಯಾವ ಆಟೋ ಚಾಲಕರ ಸಂಘದವರು ನನ್ನ ಬಳಿ ಬಂದು ಕಷ್ಟ ಅಂತ ಹೇಳಿಲ್ಲ. ಯಾವುದೇ ಆಟೋ ಚಾಲಕರು ನನಗೆ ಮನವಿ ಮಾಡಿಲ್ಲ. ಒಂದು ತಿಂಗಳು ಆಗಲಿ, ಬಳಿಕ ಪರಿಶೀಲನೆ ಮಾಡಿ ಆಟೋದವರಿಗೆ ಸಮಸ್ಯೆಯಾದರೆ ಸರ್ಕಾರ ಪರಿಹಾರ ಕೊಡಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: 40% ಕಮಿಷನ್ ಸೇರಿ ಎಲ್ಲದರ ತನಿಖೆಯಾಗ್ಲಿ- ಸಿದ್ದರಾಮಯ್ಯಗೆ ಬೊಮ್ಮಾಯಿ ಸವಾಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಕ್ತಿ ಯೋಜನೆ ರದ್ದು ಮಾಡಿ- ಸಿಎಂಗೆ ಆಟೋ ಚಾಲಕರ ಮನವಿ

    ಶಕ್ತಿ ಯೋಜನೆ ರದ್ದು ಮಾಡಿ- ಸಿಎಂಗೆ ಆಟೋ ಚಾಲಕರ ಮನವಿ

    ಬೆಂಗಳೂರು: ಆಟೋಚಾಲಕರ ಸಂಘವು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಮನವಿಯೊಂದನ್ನು ಮಾಡಿದೆ.

    ಶಕ್ತಿ ಯೋಜನೆ ರದ್ದು ಮಾಡಿ ಎಂದು ಆಟೋ ಚಾಲಕರು (Auto Drivers) ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಸಿಎಂಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ನಾಳೆಯಿಂದಲೇ ಜಾರಿ – ಸಚಿವ ಮುನಿಯಪ್ಪ

    ಶಕ್ತಿ ಯೋಜನೆಯಿಂದ (Shakthi Scheme) ನಮಗೆ ಲಾಸ್ ಆಗ್ತಿದೆ. ಜೀವನ ನಿರ್ವಹಣೆಗೆ ಕಷ್ಟ ಆಗ್ತಿದೆ. ಶಕ್ತಿ ಯೋಜನೆ ಮುಂದುವರೆಸಿದ್ರೆ ನಮ್ಮ ಜೀವನ ಬೀದಿಗೆ ಬರುತ್ತದೆ. ಹೀಗಾಗಿ ಶಕ್ತಿ ಯೋಜನೆ ರದ್ದು ಮಾಡಿ. ಅಥವಾ ಆಟೋ ಚಾಲಕರಿಗೂ ಅರ್ಥಿಕ ಸಹಾಯ ಮಾಡಿ ಎಂದು ªಮನವಿ ವೇಳೆ ಆಟೋ ಚಾಲಕರು ತಿಳಿಸಿದ್ದಾರೆ.

    ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯು ಬಡಕುಟುಂಬಗಳ ಮಹಿಳೆಯರು ತಮ್ಮ ಜೀವನ ನಿರ್ವಹಣೆಗೆ ಊರಿಂದ ಊರಿಗೆ ಹೋಗಿ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಿದೆ. ಇನ್ನೂ ಹಲವು ಮಹಿಳೆಯರು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಹೀಗೆ ಕ್ಷೇತ್ರ ಭೇಟಿ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂಧ ಜೋಡಿಗೆ ಬೆಳಕಾದ 400 ಆಟೋ ಚಾಲಕರು

    ಅಂಧ ಜೋಡಿಗೆ ಬೆಳಕಾದ 400 ಆಟೋ ಚಾಲಕರು

    ಬೆಂಗಳೂರು: ಅಂಧರ ಬಾಳಿಗೆ ಆಟೋ ಚಾಲಕರ (Auto Drivers) ಸೇನೆ ಹೊಸ ಬೆಳಕು ನೀಡಿದೆ. ಪ್ರೀತಿಸಿ ಆರ್ಥಿಕ ಸಮಸ್ಯೆಯಿಂದ ಮದುವೆಯಾಗದೇ ಇದ್ದ ಅಂಧ ಪ್ರೇಮಿಗಳಿಗೆ (Blind Couple) ಆಟೋ ಚಾಲಕರೆಲ್ಲಾ ಸೇರಿ ಅಪರೂಪದ ಮದುವೆ (Marriage) ಮಾಡಿಸಿದ್ದಾರೆ. ಆಟೋ ಚಾಲಕರ ಸಮ್ಮುಖದಲ್ಲೇ ಸಪ್ತಪದಿ ತುಳಿದ ಜೋಡಿ, ಹೊಸ ಜೀವನ ಆರಂಭಿಸಿದ್ದಾರೆ.

    ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬೇಗುರಿನ ಅಕ್ಷಯನಗರದ ವಿನಾಯಕ ದೇವಸ್ಥಾನದಲ್ಲಿ ಈ ಅಂಧ ಜೋಡಿಗೆ ಆಟೋ ಚಾಲಕರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ವಧುವಿಗೆ 3 ಗ್ರಾಂ ಚಿನ್ನದ ತಾಳಿ, ಕಾಲುಂಗುರ, ಸೀರೆ ಹಾಗೂ ವರನಿಗೆ ಬಟ್ಟೆ ಕೊಡಿಸಿ, ಸಂಪ್ರದಾಯದಂತೆ ಮದುವೆ ಮಾಡಿಸಿದ್ದಾರೆ. ವಧು-ವರನಿಗೆ ತಂದೆ ತಾಯಿ, ಸಂಬಂಧಿಕರು ಇರಲಿಲ್ಲ. 400 ಆಟೋ ಚಾಲಕರೇ ಇಂತಿಷ್ಟು ಹಣ ಸಂಗ್ರಹಿಸಿ ಮದುವೆ ಕಾರ್ಯಕ್ರಮ ಮಾಡಿದ್ದಾರೆ. ಇದನ್ನೂ ಓದಿ: Bengaluru-Mysuru Expressway ನಲ್ಲಿ ಬೇಸಿಗೆ ಮಳೆಗೇ ಅವಾಂತರ- ವಾಹನ ಸವಾರರ ಪರದಾಟ

    ವರ ಮಂಜುನಾಥ್ ಕೋಲಾರ ಮೂಲದವರಾಗಿದ್ದು, ಬಿಎ ವ್ಯಾಸಂಗ ಮಾಡಿದ್ದಾರೆ. ವಧು ದೇವಿರಮ್ಮ ಹಾಸನ ಮೂಲದವರು. ಅವರಿಬ್ಬರು ಹುಟ್ಟುತ್ತಲೇ ಅಂಧರು. ವಯಸ್ಸು 30 ದಾಟಿದರೂ ಇಬ್ಬರಿಗೆ ಮದುವೆಯ ಭಾಗ್ಯ ಬಂದಿರಲಿಲ್ಲ. ಹೀಗೆ ಕುಗ್ಗಿ ಹೋಗುತ್ತಿದ್ದ ಸಮಯದಲ್ಲೇ ಇಬ್ಬರಿಗೆ ಪ್ರೀತಿ ಚಿಗುರೊಡೆದಿತ್ತು. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ಇದೀಗ ಅಂಧ ಜೋಡಿಯ ಬಾಳಿಗೆ 400 ಆಟೋ ಚಾಲಕರು ಬೆಳಕಾಗಿದ್ದಾರೆ. ಇದನ್ನೂ ಓದಿ: `ಕೈ’ ಟಿಕೆಟ್ ಆಕಾಂಕ್ಷಿಯಿಂದ ಸೀರೆ, ತವಾ ವಿತರಣೆ- ಉಡುಗೊರೆ ಸಿಗದ ಮಹಿಳೆಯರು ಗರಂ

  • ಆಟೋ ಚಾಲಕರ ಸಂಘಕ್ಕೆ ವಾರ್ಷಿಕ 1 ಲಕ್ಷ ರೂ. ಸಹಾಯಧನ: ಸಚಿವ ಕೆ.ಗೋಪಾಲಯ್ಯ

    ಆಟೋ ಚಾಲಕರ ಸಂಘಕ್ಕೆ ವಾರ್ಷಿಕ 1 ಲಕ್ಷ ರೂ. ಸಹಾಯಧನ: ಸಚಿವ ಕೆ.ಗೋಪಾಲಯ್ಯ

    ಬೆಂಗಳೂರು: ಪ್ರತಿ ತಿಂಗಳು ಪ್ರತಿಯೊಬ್ಬ ಆಟೋ ಚಾಲಕ 500 ರೂ. ಉಳಿತಾಯ ಮಾಡಿದರೆ, ಸಂಘಕ್ಕೆ ವಾರ್ಷಿಕ 1 ಲಕ್ಷ ರೂ. ಸಹಾಯಧನ ನೀಡುತ್ತೇವೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

    ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರಮಿಕ ವರ್ಗವಾದ ನೀವು ಆರ್ಥಿಕ ಉಳಿತಾಯಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಸಲಹೆ ನೀಡಿದರು. ಇದನ್ನೂ ಓದಿ: ನ್ಯುಮೋನಿಯಾದಿಂದ ಮೃತಪಟ್ಟ ಪತ್ನಿಯ ನೆನಪಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ ಪತಿ!

    ನಿಮ್ಮದೇ ಆದ ಸಂಘ ಮಾಡಿಕೊಂಡು ಅದರಲ್ಲಿ ಉಳಿತಾಯ ಮಾಡುತ್ತ ಬನ್ನಿ. ಪ್ರತಿ ತಿಂಗಳು ಪ್ರತಿಯೊಬ್ಬ ಆಟೋಚಾಲಕ 500 ರೂ ಉಳಿತಾಯ ಮಾಡಿದರೆ ನಾನು ಸಂಘಕ್ಕೆ ವರ್ಷಕ್ಕೆ ಒಂದು ಲಕ್ಷ ರೂ. ಸಹಾಯಧನ ನೀಡುತ್ತೇನೆ ಎಂದರು. ಇದನ್ನೂ ಓದಿ: ದಕ್ಷಿಣ ಕನ್ನಡ: ದಾರಿಯಲ್ಲಿ ಐದು ಗ್ರಾನೈಡ್ ಪತ್ತೆ!

    ಇದೇ ವೇಳೆ ನಟ ಪುನೀತ್‌ ಅವರನ್ನು ಸ್ಮರಿಸಿದ ಸಚಿವರು, ಪುನೀತ್ ರಾಜ್‌ಕುಮಾರ್ ಅವರ ನಿಧನದ ನೋವಿನಿಂದ ನಾನೂ ಸೇರಿದಂತೆ ನಾಡಿನ ಅಪಾರ ಅಭಿಮಾನಿಗಳು, ಹಿತೈಷಿಗಳು ಹೊರಬಂದಿಲ್ಲ. ಅವರ ನಿಧನ ರಾಜ್ಯಕ್ಕೆ ಮತ್ತು ಕನ್ನಡ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ವಿಷಾದಿಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗ ಸೇರಿದಂತೆ ವಿವಿಧ ಕನ್ನಡ ಪರ ಮತ್ತು ಆಟೋಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • ನವೆಂಬರ್ 9ರಿಂದ ಎಎಪಿ ವತಿಯಿಂದ ಆಟೋ ಚಾಲಕರ ಪ್ರತಿಭಟನೆ

    ನವೆಂಬರ್ 9ರಿಂದ ಎಎಪಿ ವತಿಯಿಂದ ಆಟೋ ಚಾಲಕರ ಪ್ರತಿಭಟನೆ

    ಬೆಂಗಳೂರು: ಆಟೋ ರಿಕ್ಷಾಗಳಿಗೆ ಬಳಸುವ ಎಲ್‍ಪಿಜಿ ಬೆಲೆಯು ಕಳೆದ ಒಂದು ವರ್ಷದಲ್ಲಿ ಸುಮಾರು ಎರಡು ಪಟ್ಟು ಏರಿಕೆಯಾಗಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯ ಆಟೋ ಚಾಲಕರ ಘಟಕವು ನವೆಂಬರ್ 9ರಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

    ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಮ್ ಆದ್ಮಿ ಪಾರ್ಟಿಯ ಆಟೋ ಘಟಕದ ರಾಜ್ಯಾಧ್ಯಕ್ಷರಾದ ಅಯೂಬ್ ಖಾನ್, “ಪದೇಪದೇ ಎಲ್‍ಪಿಜಿ ಬೆಲೆ ಏರಿಕೆ ಮಾಡುವ ಕೇಂದ್ರ ಸರ್ಕಾರವು ಆಟೋ ಚಾಲಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಲೀಟರ್ ಗೆ 38 ರೂಪಾಯಿಯಿದ್ದ ಎಲ್‍ಪಿಜಿ ಬೆಲೆ ಈಗ 66 ರೂಪಾಯಿ ತಲುಪಿದೆ. ಅಂದರೆ, ಕೇವಲ ಒಂದು ವರ್ಷದಲ್ಲಿ 28 ರೂಪಾಯಿ ಏರಿಕೆಯಾಗಿದೆ. ಕಳೆದ ವಾರ ಒಂದೇ ಸಲ 6 ರೂಪಾಯಿ ಹೆಚ್ಚಿಸಲಾಗಿದೆ. ಪ್ರಯಾಣಿಕರು ನೀಡುವ ಹಣವು ಎಲ್‍ಪಿಜಿಗೇ ಖರ್ಚಾಗುತ್ತಿದ್ದು, ಆದಾಯವಿಲ್ಲದೇ ಚಾಲಕರ ಬದುಕು ದುಸ್ತರವಾಗಿದೆ. ಆಟೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

    “ಎಲ್‍ಪಿಜಿ ಪೂರೈಸುವ ಕಂಪನಿಗಳ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ. ಈ ಸರ್ಕಾರಕ್ಕೆ ಆಟೋ ಚಾಲಕರು ಹಾಗೂ ಪ್ರಯಾಣಿಕರ ಹಿತ ಬೇಕಾಗಿಲ್ಲ. ಉದ್ಯಮಿಗಳು ಕೊಡುವ ಹಣದ ಆಸೆಗಾಗಿ ಸಾಮಾನ್ಯ ಜನರ ಜೀವನವನ್ನು ಶೋಚನೀಯ ಸ್ಥಿತಿಗೆ ತಳ್ಳಲಾಗುತ್ತಿದೆ. ಉಳ್ಳವರ ಪರವಾಗಿರುವ ಈ ಸರ್ಕಾರವನ್ನು ಆಡಳಿತದಿಂದ ಕಿತ್ತೊಗೆಯುವವರೆಗೂ ಜನಸಾಮಾನ್ಯರಿಗೆ ನೆಮ್ಮದಿ ಎಂಬುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದೀಪಾವಳಿಯ ಫ್ಯಾಮಿಲಿ ಫೋಟೋ ಹಂಚಿಕೊಂಡು ಬಿಗ್ ಬಿ ಸಂಭ್ರಮ

    ಬೆಂಗಳೂರು ನಗರ ಎಎಪಿ ಆಟೋ ಚಾಲಕರ ಘಟಕದ ಅಧ್ಯಕ್ಷರಾದ ವೆಂಕಟಗೌಡ ಮಾತನಾಡಿ, “ಎಲ್‍ಪಿಜಿ ಬೆಲೆ ಏರಿಕೆ ಖಂಡಿಸಿ ನವೆಂಬರ್ 9ರ ಮಂಗಳವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಆಟೋ ಚಾಲಕರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದಿನಿಂದ ಆಟೋ ಚಾಲಕರು ಕಪ್ಪು ಪಟ್ಟಿ ಧರಿಸಿ ಚಾಲನೆ ಮಾಡುವ ಮೂಲಕ ಜನವಿರೋಧಿ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲಿದ್ದಾರೆ. ಶ್ರೀಸಾಮಾನ್ಯರಿಗೆ ಕಂಟಕವಾಗಿರುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಹೇಳಿದರು. ಇದನ್ನೂ ಓದಿ: ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ – 10 ಮಂದಿ ಸಜೀವ ದಹನ

    ಬೆಂಗಳೂರು ನಗರದ ಎಎಪಿ ಆಟೋ ಚಾಲಕರ ಘಟಕದ ಪ್ರಧಾನ ಕಾರ್ಯದರ್ಶಿ ಉಸ್ಮಾನ್, ಹಾಗೂ ಆತೀಕ್ ಅಹಮದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ವ್ಯಾಕ್ಸಿನ್ ಪಡೆಯದ ಆಟೋ ಚಾಲಕರು ಆಟೋವನ್ನು ರಸ್ತೆಗಿಳಿಸುವಂತಿಲ್ಲ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

    ವ್ಯಾಕ್ಸಿನ್ ಪಡೆಯದ ಆಟೋ ಚಾಲಕರು ಆಟೋವನ್ನು ರಸ್ತೆಗಿಳಿಸುವಂತಿಲ್ಲ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

    ವಿಜಯಪುರ: ವ್ಯಾಕ್ಸಿನ್ ಹಾಕಿಸಿಕೊಳ್ಳದ ಆಟೋ ಚಾಲಕರು ಆಟೋಗಳನ್ನ ರಸ್ತೆಗೆ ಇಳಿಸುವ ಹಾಗಿಲ್ಲ. ಇನ್ನು ಈವರೆಗೂ ವ್ಯಾಕ್ಸಿನ್ ಪಡೆಯದ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುವ ಹಾಗಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ ಸುನೀಲ್‍ಕುಮಾರ್ ಖಡಕ್ ನಿರ್ಧಾರಕ್ಕೆ ಮುಂದಾಗಿದ್ದಾರೆ.

    ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಎಷ್ಟೇ ಹೇಳಿದರೂ, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಕಟ್ಟಡ ಕಾರ್ಮಿಕರು ಕೇಳುತ್ತಿಲ್ಲ. ನಾವು ಆರೋಗ್ಯವಾಗಿದ್ದೀವಿ ವ್ಯಾಕ್ಸಿನ್ ಯಾಕೆ ಎಂದು ಹೇಳುತ್ತಿದ್ದಾರೆ.

    ಹೀಗಾಗಿ ಗರಂ ಆಗಿರುವ ಡಿಸಿ ಸುನೀಲ್‍ಕುಮಾರ್, ವ್ಯಾಕ್ಸಿನ್ ಹಾಕಿಸಿಕೊಂಡರೇ ಮಾತ್ರ ಆಟೋ ಓಡಿಸಬೇಕು. ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡಬಹುದು. ಇಲ್ಲದಿದ್ದರೆ ಪಾಲಿಕೆ ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಲೇ ಬಾರದು ಎಂದು ಆದೇಶಿಸಿದ್ದಾರೆ.

    ವಿಜಯಪುರದಲ್ಲಿ 6 ಸಾವಿರದಷ್ಟು ಬೀದಿಬದಿ ವ್ಯಾಪಾರಿಗಳಿದ್ದಾರೆ, ಆದರೆ, ಅರ್ಧದಷ್ಟು ಜನರು ಕೂಡ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ. 75 ಸಾವಿರ ಕಟ್ಟಡ ಕಾರ್ಮಿಕರಿದ್ದು, ಅವರು ಕೂಡ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಎಂದು ಡಿಸಿ ಸುನೀಲ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಕೋಟೆನಾಡಲ್ಲಿ ಬಂದ್ ಆಗಿದ್ದ ಪ್ರವಾಸಿ ತಾಣಗಳು ಓಪನ್

  • ಉಪೇಂದ್ರ ಕೆಲ್ಸಕ್ಕೆ ಅಣ್ಣನ ಸಾಥ್ – ವಿವಾಹ ವಾರ್ಷಿಕೋತ್ಸವದ ಹಣ ನೀಡಿದ ಸುಧೀಂದ್ರ

    ಉಪೇಂದ್ರ ಕೆಲ್ಸಕ್ಕೆ ಅಣ್ಣನ ಸಾಥ್ – ವಿವಾಹ ವಾರ್ಷಿಕೋತ್ಸವದ ಹಣ ನೀಡಿದ ಸುಧೀಂದ್ರ

    ಬೆಂಗಳೂರು: ಸ್ಯಾಂಡಲ್‍ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಕ್ಕೆ ಅವರ ಅಣ್ಣ ಸುಧೀಂದ್ರ ಅವರು ಉಪೇಂದ್ರ ಅವರ ಜೊತೆಗೆ ಕೈ ಜೋಡಿಸಿದ್ದಾರೆ.

    ಉಪೇಂದ್ರ ಅವರ ಅಣ್ಣ ಸುಧೀಂದ್ರ ಹಾಗೂ ಅತ್ತಿಗೆ ವೀಣಾ ಅವರು ಇಂದು 26ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಆಟೋ ಚಾಲಕರಿಗೆ ದಿನಸಿ ಕಿಟ್‍ಗಳನ್ನು ನೀಡುವ ಸಲುವಾಗಿ ಈ ದಿನ ಮೂರು ಲಕ್ಷ ರೂಪಾಯಿಗಳನ್ನು ಉಪೇಂದ್ರ ಅವರ ಕೈಗೆ ನೀಡಿದ್ದಾರೆ. ವಿವಾಹ ವಾರ್ಷೀಕೋತ್ಸವ ಅಂಗವಾಗಿ ಆರ್ಥಿಕ ನೆರವನ್ನು ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಈ ಬಗ್ಗೆ ಉಪೇಂದ್ರ ಅವರು ಬಹಳ ಖುಷಿ ಹಾಗೂ ಹೆಮ್ಮೆಯಿಂದಲೇ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದು, ಅಣ್ಣ ಸುಧೀಂದ್ರ ಮತ್ತು ಅತ್ತಿಗೆ ವೀಣಾ ಅವರ 26 ನೇ ಮದುವೆ ವಾರ್ಷಿಕೋತ್ಸವ ಸಲುವಾಗಿ ಮೂರು ಲಕ್ಷ ರೂಗಳನ್ನು ಆಟೋ ಚಾಲಕರಿಗೆ ಕಿಟ್ ವಿತರಿಸಲು ನೀಡಿದ್ದಾರೆ. ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

    ಉಪೇಂದ್ರ ಅವರು, ಹಿರಿಯ ಕಲಾವಿದರು, ಬಡವರು , ಆಟೋಚಾಲಕರು ಹೀಗೆ ಹಲವು ಮಂದಿಗೆ ದಿನಸಿ ಕಿಟ್ ನೀಡುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉಪೆಂದ್ರ ಅವರ ಸಾಮಾಜಿಕ ಕಾರ್ಯಕ್ಕೆ ಹಲವರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.

  • ಆಟೋ ಚಾಲಕರನ್ನು ಠಾಣೆಗೆ ಕರೆಸಿ ಸನ್ಮಾನಿಸಿದ ಪೊಲೀಸರು

    ಆಟೋ ಚಾಲಕರನ್ನು ಠಾಣೆಗೆ ಕರೆಸಿ ಸನ್ಮಾನಿಸಿದ ಪೊಲೀಸರು

    ಯಾದಗಿರಿ: ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ಯಾದಗಿರಿ ಪೊಲೀಸರು ವಿಭಿನ್ನ ಪ್ರಯತ್ನ ಮಾಡಿದ್ದು, ಆಟೋ ಚಾಲಕರನ್ನು ಠಾಣೆಗೆ ಕರೆಸಿ ಸನ್ಮಾನ ಮಾಡಿದ್ದಾರೆ. ಈ ಮೂಲಕ ವಿಭಿನ್ನವಾಗಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ.

    ಇಷ್ಟು ದಿನ ಆಟೋಚಾಲಕರನ್ನು ಠಾಣೆಗೆ ಕರೆದು ಎಚ್ಚರಿಗೆ ನೀಡುತ್ತಿದ್ದ ಪೊಲೀಸರು, ಇಂದು ಠಾಣೆಗೆ ಕರೆದು ಸನ್ಮಾನಿಸಿ ರಸ್ತೆ ಮತ್ತು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವಂತೆ ಮನವಿ ಮಾಡಿದ್ದಾರೆ. ಯಾದಗಿರಿ ಡಿವೈಎಸ್ಪಿ ಸಂತೋಷ ಬನ್ನಹಟ್ಟಿ ಮತ್ತು ಟ್ರಾಫಿಕ್ ಪಿಎಸ್‍ಐ ಪ್ರದೀಪ್ ಬಿಸೆ, ಚಂದ್ರನಾಥ್ ನಗರದಲ್ಲಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಹೊಸ ಸಂಪ್ರದಾಯಕ್ಕೆ ಮುಂದಾಗಿದ್ದಾರೆ.

    ಆಟೋ ಚಾಲಕರು, ವಾಹನ ಸವಾರರನ್ನು ಠಾಣೆಗೆ ಕರೆದು, ಸನ್ಮಾನ ಮಾಡಿ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಆಟೋ ಚಾಲಕರು ಸೇರಿದಂತೆ, ನಗರದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಸಂಚಾರಿ ಠಾಣಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಆಟೋಚಾಲಕರು ಮತ್ತು ಸಂಚಾರಿ ಠಾಣೆ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

  • ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗದಗ್‍ನಲ್ಲಿ ಸ್ಮರಣೋತ್ಸವ

    ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗದಗ್‍ನಲ್ಲಿ ಸ್ಮರಣೋತ್ಸವ

    ಗದಗ: ಪುಲ್ವಾಮಾ ದಾಳಿ ವೇಳೆ ಹುತಾತ್ಮರಾದ ಯೋಧರಿಗಾಗಿ ವಿಭಿನ್ನ ಹಾಗೂ ವಿಶಿಷ್ಟವಾಗಿ ಸ್ಮರಣೋತ್ಸವ ಕಾರ್ಯಕ್ರಮವನ್ನು ಗದಗ ಜಿಲ್ಲೆಯಲ್ಲಿ ನಡೆಸಲಾಯಿತು.

    ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ ಹುತಾತ್ಮ ಯೋಧರ ಭಾವಚಿತ್ರಗಳನ್ನು ಆಟೋದಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ಮರಣೋತ್ಸವ ಆಚರಿಸಿದರು. ಈ ಆಟೋ ರ‍್ಯಾಲಿಗೆ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಸಿ.ಸಿ ಪಾಟೀಲ್ ವೀರಯೋಧರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಈ ಸಂದರ್ಭದ್ಲಿ ಇತ್ತೀಚಿಗೆ ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ ಯೋಧರಿಗೆ ಸನ್ಮಾನಿಸಲಾಯಿತು. ಅವರು ಸಹ ಇಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

    ನಗರದ ತೋಂಟದಾರ್ಯ ಮಠದಿಂದ ಆರಂಭವಾದ ರ್ಯಾಲಿ, ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾತ್ಮ ಗಾಂಧಿ ವೃತ್ತದ ವರೆಗೆ ಈ ಆಟೋ ರ್ಯಾಲಿ ನಡೆಯಿತು. ಈ ವೇಳೆ ಸಚಿವ ಸಿ.ಸಿ.ಪಾಟೀಲ್, ಶಾಸಕ ಕಳಕಪ್ಪ ಬಂಡಿ, ಎಸ್.ವಿ ಸಂಕನೂರ ಸೇರಿದಂತೆ ಅನೇಕರು ಸ್ಮರಣೋತ್ಸವದಲ್ಲಿ ಭಾಗಿಯಾಗಿದ್ದರು.

    ಗದಗ ಆಟೋ ಚಾಲಕ ಸಂಘದಿಂದ ಭಾರತೀಯ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು. ದಾರಿಯುದ್ದಕ್ಕೂ ಪುಷ್ಪಗಳನ್ನು ಎರಚುವ ಮೂಲಕ ಭಾರತ ಮಾತೆಗೆ ಜೈಘೋಷ ಕೂಗಿದರು.

  • ರಾಣೇಬೆನ್ನೂರಿನ ಆಟೋ ಚಾಲಕರ ಪರಿಸರ ಪ್ರೇಮ-ಹುಟ್ಟುಹಬ್ಬಕ್ಕೆ ಸಸಿ ನೆಟ್ಟು ಹಸಿರು ಕಾಂತ್ರಿ!

    ರಾಣೇಬೆನ್ನೂರಿನ ಆಟೋ ಚಾಲಕರ ಪರಿಸರ ಪ್ರೇಮ-ಹುಟ್ಟುಹಬ್ಬಕ್ಕೆ ಸಸಿ ನೆಟ್ಟು ಹಸಿರು ಕಾಂತ್ರಿ!

    ಹಾವೇರಿ: ಹುಟ್ಟುಹಬ್ಬದ ಆಚರಣೆ ಅಂದರೆ ಕೇಕ್ ಕತ್ತರಿಸುವುದು, ಭರ್ಜರಿ ಪಾರ್ಟಿ ಮಾಡುವುದು ಸಾಮಾನ್ಯ. ಆದರೆ ಹಾವೇರಿಯ ರಾಣೇಬೆನ್ನೂರಿನ ಆಟೋ ಚಾಲಕರು ತಮ್ಮ ಹುಟ್ಟು ಹಬ್ಬದ ಆಚರಣೆ ವೇಳೆ ಸಸಿ ನೆಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.

    ಜಿಲ್ಲೆಯ ರಾಣೇಬೆನ್ನೂರು ನಗರದ ರೈಲು ನಿಲ್ದಾಣದ ಎದುರಿನ ಈ ಗಿಡಗಳನ್ನ ನೆಟ್ಟಿದ್ದು ಇದೇ ಆಟೋ ಚಾಲಕರು. ಆಟೋ ಚಾಲಕರ ಸಂಘ ಕಟ್ಟಿಕೊಂಡಿರೋ 40 ಚಾಲಕರು, ಪ್ರತಿಯೊಬ್ಬರ ಜನ್ಮದಿನದಂದು ಒಂದೊಂದು ಸಸಿ ನೆಡುತ್ತಿದ್ದಾರೆ. ಅಲ್ಲದೇ ಅವುಗಳನ್ನು ನಿರಂತರವಾಗಿ ಪೋಷಣೆ ಮಾಡುತ್ತಿದ್ದಾರೆ.

    ಪ್ರಮುಖವಾಗಿ ಶೋಭಾಬಲ, ಹುಲಗಿಲ, ರೇನ್ ಟ್ರೀ, ನೇರಳೆ, ಬೇವು ಸೇರಿದಂತೆ ಹಲವು ಸಸಿಗಳನ್ನ ನೆಟ್ಟು ಅವುಗಳನ್ನ ಮರಗಳಾಗಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಪ್ರತಿಯೊಂದು ಸಸಿಗೂ ಮಹಾತ್ಮರ ಹೆಸರು ಇಟ್ಟಿದ್ದಾರೆ. ಜೊತೆಗೆ ಇಡೀ ನಗರದ ತುಂಬ ಸಸಿಗಳನ್ನ ನೆಡುವ ಸಂಕಲ್ಪ ಮಾಡಿದ್ದಾರೆ.

    ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ಸಂದೇಶ ಸಾರುತ್ತಿರುವ ಆಟೋ ಚಾಲಕರ ಪರಿಸರ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ.