Tag: ಆಟೋ ಅಂಬುಲೆನ್ಸ್

  • ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆಯಿಂದ ಉಚಿತ ಆಟೋ ಅಂಬುಲೆನ್ಸ್

    ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆಯಿಂದ ಉಚಿತ ಆಟೋ ಅಂಬುಲೆನ್ಸ್

    ಕಲಬುರಗಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಕರೆದೊಯ್ಯಲು ದಿನದ 24 ಗಂಟೆಯೂ ಆಟೋ ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ಒಟ್ಟು ಐದು ಆಟೋಗಳನ್ನು ರಸ್ತೆಗಿಳಿಸಲಾಗಿದೆ.

    ಈ ಆಟೋಗಳಲ್ಲಿ ಡ್ರೈವರ್ ಹಾಗೂ ಓರ್ವ ಸೂಪರ್‍ವೈಸರ್ ನಿಯೋಜಿಸಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಆದೇಶ ಹೊರಡಿಸಿದ್ದಾರೆ. ಪ್ರತಿ ದಿನ ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆಯವರೆಗೆ ಆಟೋ ಡ್ರೈವರ್ ಗಳಾದ ಶೇಖ್ ರಶೀದ್ (ಮೊ.9060637888), ಶೇಖ್ ಶಬ್ಬೀರ್ (ಮೊ.9900562301) ಹಾಗೂ ರವಿಚಂದ್ರ (ಮೊ.9035853125) ಅವರಿಗೆ ಸಂಪರ್ಕಿಸಬಹುದಾಗಿದೆ.

    ರಾತ್ರಿ 10 ರಿಂದ ಬೆಳಗ್ಗೆ 8 ಗಂಟೆಯವರೆಗೆ ಆಟೋ ಡ್ರೈವರ್ ಗಳಾದ ಇಸಾಕ್ (ಮೊ.9538369631) ಹಾಗೂ ಶಕೀಲ ಮಿಯಾ (ಮೊ.7676704268) ಅವರಿಗೆ ಸಂಪರ್ಕಿಸಬಹುದು. ಅಲ್ಲದೆ ಸೂಪರ್‍ವೈಸರ್ ಪ್ರೇಮ ಶಿಲ್ದ್ (ಮೊ.9483855538) ಅವರಿಗೆ ಕರೆ ಮಾಡಬಹುದು.

    ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು, ರೋಗಿಗಳ ಹಿತದೃಷ್ಟಿಯಿಂದ ದಿನದ 24 ಗಂಟೆಯೂ ಪಾಳಿಯಂತೆ ಕಾರ್ಯನಿರ್ವಹಿಸಲು ಈ ಐದು ಆಟೋಗಳನ್ನೊಳಗೊಂಡಂತೆ ಡ್ರೈವರ್ ಹಾಗೂ ಓರ್ವ ಸುಪರ್‍ವೈಸರ್ ನಿಯೋಜಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ವೆಬ್‍ಸೈಟ್ www.gulbargacity.mrc.gov.in, ಪಾಲಿಕೆಯ ಇ-ಮೇಲ್ ವಿಳಾಸ itstaff_ulb_gulbarga@yahoo.com, ಪಾಲಿಕೆಯ ವಾಟ್ಸಪ್ ಸಂಖ್ಯೆ 8277777728 ಹಾಗೂ ಪಾಲಿಕೆಯ ದೂರವಾಣಿ ಸಂಖ್ಯೆ 08472-260776ಗೆ ಸಂಪರ್ಕಿಸಬಹುದು.

  • ಆಟೋವನ್ನೇ ಅಂಬುಲೆನ್ಸ್ ಮಾಡಿ ಬಡ ಜನರಿಗೆ ಉಚಿತವಾಗಿ ಸೇವೆ

    ಆಟೋವನ್ನೇ ಅಂಬುಲೆನ್ಸ್ ಮಾಡಿ ಬಡ ಜನರಿಗೆ ಉಚಿತವಾಗಿ ಸೇವೆ

    – ಬಂದ ಲಾಭವನ್ನು ಚಾಲಕನಿಂದ ಅನಾಥಾಶ್ರಮಕ್ಕೆ ದಾನ

    ಬೆಳಗಾವಿ: ಕಳೆದ ಮೂರು ವರ್ಷಗಳಿಂದ ಆಟೋವನ್ನೇ ಅಂಬುಲೆನ್ಸ್ ಮಾಡಿಕೊಂಡು ಸಾರ್ವಜನಿಕರ ಸಹಾಯಕ್ಕೆ ಆಟೋ ಚಾಲಕರೊಬ್ಬರು ಟೊಂಕಕಟ್ಟಿ ನಿಂತಿದ್ದಾರೆ.

    ಮಂಜುನಾಥ ಪೂಜಾರಿ ರಾತ್ರಿಯ ಅಂಬುಲೆನ್ಸ್ ಮನುಷ್ಯ ಎಂದು ದಾಖಲೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ವೀರೇಶ ಕಿವಡಸಣ್ಣವರ ಹೇಳಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಪೂಜಾರಿ, 2004ರಲ್ಲಿ ರಸ್ತೆಯ ಅಪಘಾತದಲ್ಲಿ ನಾನು ಅಸ್ವಸ್ಥನಾಗಿ ನನ್ನ ಕಾಲುಗಳು ಮೂರು ತುಂಡಾಗಿತ್ತು. ಹಾಗಾಗಿ ಜನರ ರಕ್ಷಣೆಗಾಗಿ ಸ್ವತಃ ನಾನು ನನ್ನ ಆಟೋವನ್ನೇ ಅಂಬುಲೆನ್ಸ್ ಮಾಡಿ ಬಡ ಜನರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತೇನೆ ಎಂದರು.

    ಬೆಳಗ್ಗಿನ ಸಮಯದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ರಾತ್ರಿಯ ಸಮಯದಲ್ಲಿ ಬಡವರಿಗಾಗಿ ಆಟೋ ಅಂಬುಲೆನ್ಸ್ ಸೇವೆ ನೀಡುತ್ತಿದ್ದೇನೆ. ಈ ಅಂಬುಲೆನ್ಸ್ ನಿಂದ ಬಂದ ಲಾಭವನ್ನು ನಾನು ಅನಾಥ ಆಶ್ರಮಕ್ಕೆ ನೀಡುತ್ತೇನೆ ಎಂದು ಮಂಜುನಾಥ್ ತಿಳಿಸಿದರು.

    ಇದೇ ವೇಳೆ ನಾಗರತ್ನಾ, ನಿಂಗಪ್ಪ ಪೂಜಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  • ಉಚಿತ ಆಟೋ ಅಂಬುಲೆನ್ಸ್ – 76ನೇ ವಯಸ್ಸಿನಲ್ಲೂ ಚಾಲಕನಾಗಿ ಸೇವೆ

    ಉಚಿತ ಆಟೋ ಅಂಬುಲೆನ್ಸ್ – 76ನೇ ವಯಸ್ಸಿನಲ್ಲೂ ಚಾಲಕನಾಗಿ ಸೇವೆ

    ನವದೆಹಲಿ: 76 ವರ್ಷದ ವ್ಯಕ್ತಿಯೊಬ್ಬರು ‘ಉಚಿತ ಆಟೋ ಅಂಬುಲೆನ್ಸ್’ ಚಲಾಯಿಸುವ ಮೂಲಕ ಎಲ್ಲರ ಮನ ಗೆದಿದ್ದಾರೆ.

    ದೆಹಲಿಯ ಮಾಜಿ ಟ್ರಾಫಿಕ್ ವಾರ್ಡನ್ ಆಗಿ ನಿವೃತ್ತಿಗೊಂಡಿರುವ ಹರ್ಜಿಂದರ್ ಸಿಂಗ್ ತಮ್ಮ ಆಟೋವನ್ನು ಉಚಿತ ಅಂಬುಲೆನ್ಸ್ ಆಗಿ ಪರಿವರ್ತಿಸಿದ್ದಾರೆ. ಅಲ್ಲದೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ಜನರಿಗೆ ಉಚಿತವಾಗಿ ನೆರವು ನೀಡಲು ಅವರು ಆಟೋ ಅಂಬುಲೆನ್ಸ್ ನಡೆಸುತ್ತಿದ್ದಾರೆ. ಹರ್ಜಿಂದರ್ ತಮ್ಮ ಆಟೋ ಅಂಬುಲೆನ್ಸ್ ನಲ್ಲಿ ಅಪಘಾತದಲ್ಲಿ ಗಾಯಗೊಂಡವರನ್ನು ಉಚಿತವಾಗಿ ಕರೆದುಕೊಂಡು ಹೋಗುವುದಲ್ಲದೇ, ತುರ್ತು ಸಂದರ್ಭಗಳಲ್ಲಿ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗೊಂಡವರಿಗೆ ಉಚಿತವಾಗಿ ಪ್ರಥಮ ಚಿಕಿತ್ಸೆ ನೀಡುತ್ತಾರೆ.

    ಯಾವುದೇ ವ್ಯಕ್ತಿ ಅಪಘಾತದಲ್ಲಿ ಗಾಯಗೊಂಡರೆ, ಹಾಗೂ ನಾನು ಅಲ್ಲಿ ಹಾಜರಿದ್ದರೆ, ನಾನು ಅವರ ಜೀವ ಉಳಿಯಲಿ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ. ಪ್ರತಿದಿನ ಅಪಘಾತದಲ್ಲಿ ಗಾಯಗೊಂಡ ಒಬ್ಬ ವ್ಯಕ್ತಿಗೆ ನಾನು ಸಹಾಯ ಮಾಡುತ್ತೇನೆ. ಟ್ರಾಫಿಕ್ ವಾರ್ಡನ್ ಆಗಿದ್ದಾಗ ನಾನು ಅಪಘಾತದಲ್ಲಿ ಗಾಯಗೊಂಡವರನ್ನು ನೋಡಿದ್ದೇನೆ. ಆಗ ಅವರಿಗೆ ಸಹಾಯ ಮಾಡಬೇಕು ಎಂದು ಅನಿಸುತಿತ್ತು. ಆಟೋ ಖರೀದಿಸಿದ ನಂತರ ನಾನು ಸಹಾಯ ಮಾಡಬೇಕು ಎಂದುಕೊಂಡೆ. ನನ್ನ ಕೆಲಸದ ಸಮಯ ಮುಗಿದ ನಂತರ ನಾನು ಅಪಘಾತ ಪ್ರದೇಶದಲ್ಲಿ ತಿರುಗಾಡುತ್ತೇನೆ ಎಂದರು.

    ಮೊದಲು ನನ್ನ ಆಟೋದಲ್ಲಿ ಮಾತ್ರೆಗಳ ಬಾಕ್ಸ್ ಇರಲಿಲ್ಲ ಹಾಗೂ ಪ್ರಥಮ ಚಿಕಿತ್ಸೆ ಹೇಗೆ ನೀಡಲಾಗುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ. ಹಾಗಾಗಿ ತುರ್ತು ಸಂದರ್ಭಗಳಲ್ಲಿ ಯಾವ ಔಷಧಿ ಬಳಸಬಹುದು ಎಂದು ಕಂಡುಹಿಡಿಯಲು ನಾನು ಒಂದು ಸಣ್ಣ ಕೋರ್ಸ್ ಮಾಡಿದೆ. ಈಗ ನಾನು ಡಯಾಬಿಟಿಸ್ ಮಾತ್ರೆಗಳನ್ನು ಉಚಿತವಾಗಿ ನೀಡುತ್ತಿದ್ದೇನೆ. ಯಾರಿಗಾದರೂ ಸಹಾಯ ಮಾಡುವುದಕ್ಕಿಂತ ಉತ್ತಮವಾದ ಭಾವನೆ ಇಲ್ಲ ಎಂದು ಹರ್ಜಿಂದರ್ ಸಿಂಗ್ ತಿಳಿಸಿದ್ದಾರೆ.

    ಸರಿಯಾದ ಸಮಯಕ್ಕೆ ಸಹಾಯ ಸಿಗದ ಕಾರಣ ರಸ್ತೆ ಅಪಘಾತದಲ್ಲಿ ಜನ ಬಲಿಯಾಗುತ್ತಾರೆ. ಈ ವೇಳೆ ಅಲ್ಲಿರುವ ಜನರು ಸಹಾಯ ಮಾಡದೇ ಸುಮ್ಮನೆ ನಿಂತು ನೋಡುತ್ತಾರೆ. ನಾನು ಅವರಲ್ಲಿ ಒಬ್ಬನಾಗಲು ಇಷ್ಟಪಡುವುದಿಲ್ಲ ಎಂದು ಹರ್ಜಿಂದರ್ ಸಿಂಗ್ ಹೇಳಿದ್ದಾರೆ.