Tag: ಆಟಿಕೆ

  • ಆಟವಾಡುತ್ತಾ ಆಟಿಕೆಯ LED ಬಲ್ಬ್ ನುಂಗಿದ 9 ತಿಂಗಳ ಕಂದಮ್ಮ!

    ಆಟವಾಡುತ್ತಾ ಆಟಿಕೆಯ LED ಬಲ್ಬ್ ನುಂಗಿದ 9 ತಿಂಗಳ ಕಂದಮ್ಮ!

    ಅಹಮ್ಮದಾಬಾದ್: ಮಧ್ಯಪ್ರದೇಶದ ರಟ್ಲಾಮ್‍ನಲ್ಲಿ 9 ತಿಂಗಳ ಪುಟ್ಟ ಕಂದಮ್ಮವೊಂದು ಆಕಸ್ಮಿಕವಾಗಿ ಆಟಿಕೆಯ ಸಣ್ಣ ಎಲ್‍ಇಡಿ ಬಲ್ಬ್ (LED Bulb) ನುಂಗಿರುವ ಆಘಾತಕಾರಿ ಘಟನೆ ನಡೆದಿದೆ.

    ಮಗು ಬಲ್ಬ್ ನುಂಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪೋಷಕರು ಮಗುವನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ ಸಂಭ್ರಮಾಚರಣೆ ಮಾಡಿದವರ ಮೇಲೆ ಕಾಶ್ಮೀರಿ ವಿದ್ಯಾರ್ಥಿಗಳಿಂದ ಹಲ್ಲೆ

    ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗು ಆಟಿಕೆ ಮೊಬೈಲ್ ಫೋನ್‍ನೊಂದಿಗೆ (Mobile phone) ಆಟವಾಡುತ್ತಿತ್ತು. ಈ ಮೊಬೈಲ್ ಫೋನ್‍ನಲ್ಲಿರುವ ಆಂಟೆನಾದಲ್ಲಿ ಎಲ್‍ಇಡಿ ಬಲ್ಬ್ ಇತ್ತು. ಆ ಬಲ್ಬ್ ಅನ್ನು ಕಂದಮ್ಮ ಬಾಯಿಗೆ ಹಾಕಿಕೊಂಡು ಆಟವಾಡುತ್ತಾ ನುಂಗಿಬಿಟ್ಟಿದೆ. ಬಲ್ಬ್ ನುಂಗಿದ ತಕ್ಷಣವೇ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

    ಸಿವಿಲ್ ಆಸ್ಪತ್ರೆಯ (Civil Hospital) ಚಿಕಿತ್ಸಾ ಮೇಲ್ವೀಚಾರಕ ಡಾ. ರಾಕೇಶ್ ಜೋಶಿ ಈ ಸಂಬಂಧ ಪ್ರತಿಕ್ರಿಯಿಸಿ, ಉಸಿರಾಟದ ಸಮಸ್ಯೆ ಕಣಿಸಿಕೊಂಡಿದ್ದರಿಂದ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಮಗುವಿನ ಎಕ್ಸ್ ರೇ ತೆಗೆದು ನೋಡಿದಾಗ ಮಗು ಬಲ್ಬ್ ನುಂಗಿರುವುದು ಬೆಳಕಿಗೆ ಬಂದಿದೆ. ಬ್ರಾಂಕೋಸ್ಕೋಪ್ ಬಳಸಿ ವಸ್ತುವನ್ನು ಹೊರತೆಗೆಯಲು ಪ್ರಯತ್ನಿಸಿದರೂ ತೆಗೆಯಲು ಸಾಧ್ಯವಾಗಿಲ್ಲ ಎಂದರು.

    ಎರಡನೇ ಪ್ರಯತ್ನದಲ್ಲಿ ಬಲ್ಬ್ ಹೊರತೆಗೆಯುವುದರಲ್ಲಿ ಯಶಸ್ವಿಯಾದೆವು. ಮಕ್ಕಳಿಗೆ ಆಟಿಕೆಗಳನ್ನು ಕೊಡುವಾಗ ಸ್ವಲ್ಪ ಎಚ್ಚರವಹಿಸಬೇಕು ಎಂಬುದನ್ನು ಈ ಮೂಲಕ ಎಲ್ಲಾ ತಾಯಂದಿರು ಎಚ್ಚರವಹಿಸಿಕೊಳ್ಳಬೇಕು ಎಂದು ಜೋಶಿ ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಎಸ್‌ಐ ಮಾರ್ಕ್ ಇಲ್ಲದ 70 ಲಕ್ಷ ಮೌಲ್ಯದ ಚೀನಾ ಆಟಿಕೆ ವಶ

    ಭೋಪಾಲ್: ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಅಧಿಕಾರಿಗಳು ಗುರುವಾರ ನಗರದ ಖಾಸಗಿ ಮಾಲ್‌ಗಳಿಗೆ ದಾಳಿ ಮಾಡಿ ಸುಮಾರು 70 ಲಕ್ಷ ರೂ. ಮೌಲ್ಯದ ಐಎಸ್‌ಐ ಗುರುತು ಇಲ್ಲದ ಆಟಿಕೆಗಳನ್ನು ವಶಪಡಿಸಿಕೊಂಡಿದ್ದಾರೆ.

    ಬಿಐಎಸ್ ಹಿರಿಯ ವಿಜ್ಞಾನಿ ರಮಣ್ ತ್ರಿವೇದಿಯವರ ಮೇಲ್ವಿಚಾರಣೆಯಲ್ಲಿ ದಾಳಿ ನಡೆಸಲಾಗಿದ್ದು, ಮಾಲ್‌ಗಳಿಂದ ಐಎಸ್‌ಐ ಗುರುತು ಇಲ್ಲದ ಚೀನಾ ಆಟಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

    ಕೆಲವು ನಿರ್ದಿಷ್ಟ ಮಾಹಿತಿಯ ಮೇರೆಗೆ ಬಿಐಎಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮಾಲ್‌ಗಳಿಂದ ದೊಡ್ಡ ಪ್ರಮಾಣದ ಆಟಿಕೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆಟಿಕೆಗಳನ್ನು ಯಾವ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ ಮತ್ತು ಇಂತಹ ವ್ಯವಹಾರ ಯಾವಾಗಿನಿಂದ ನಡೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಕೊಲ್ಲಲು ಬಂದವ್ರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಬಚಾವ್ ಮಾಡಿದ್ಲು!

    ಐಎಸ್‌ಐ ಗುರುತು ಇಲ್ಲದ ಆಟಿಕೆ ನಿಷೇಧ:
    ಐಎಸ್‌ಐ ಗುರುತು ಇಲ್ಲದ ಆಟಿಕೆಗಳನ್ನು ಮಾರಾಟ ಮಾಡುವುದನ್ನು ದೇಶದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ ಮಾರುಕಟ್ಟೆಗಳಲ್ಲಿ ಐಎಸ್‌ಐ ಗುರುತು ಇಲ್ಲದ ಆಟಿಕೆಗಳ ಮಾರಾಟ ನಡೆಯುತ್ತಿದೆ. ಇಂತಹ ಅಕ್ರಮ ಮಾರಾಟದ ಬಗ್ಗೆ ನಮಗೆ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಅಧಿಕಾರಿ ಅಮರ್ ಉಜಾಲಾ ತಿಳಿಸಿದ್ದಾರೆ.

    ನಾವು ಆಟಿಕೆಗಳ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ ಕಠಿಣ ಕ್ರಮ ಕೈಗೊಂಡಿದ್ದೇವೆ. ಬಿಐಎಸ್ ಅಧಿಕಾರಿಗಳು ಅಂಗಡಿಗಳನ್ನು ಸೀಲ್ ಮಾಡಿದ್ದಾರೆ. ಜೊತೆಗೆ ಚೈನೀಸ್ ಆಟಿಕೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮದ ವಿಚಾರಕ್ಕೆ ಬಂದ ಪಕ್ಕದ ಮನೆಯವರಿಗೆ ಸಲ್ಮಾನ್ ಕ್ಲಾಸ್

    ಭಾರತ ಸರ್ಕಾರ ಮಾರ್ಗಸೂಚಿಗಳ ಪ್ರಕಾರ ಐಎಸ್‌ಐ ಗುರುತು ಇಲ್ಲದ ಆಟಿಕೆಗಳು ಮಕ್ಕಳಿಗೆ ಹಾನಿಕಾರಕ. ಅಂಗಡಿಯವರು ಇದನ್ನೆಲ್ಲ ಲೆಕ್ಕಿಸದೇ ತಮ್ಮ ಲಾಭಕ್ಕಾಗಿ ವಿದೇಶದಿಂದ ಕಡಿಮೆ ಬೆಲೆಗೆ ಆಟಿಕೆಗಳನ್ನು ಆಮದು ಮಾಡಿಕೊಂಡು ಇಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಇದೀಗ ಭೋಪಾಲ್‌ನಲ್ಲಿ ಬಿಐಎಸ್ ಅಧಿಕಾರಿಗಳ 13 ಸದಸ್ಯರ ತಂಡ ಹಲವೆಡೆ ದಾಳಿ ನಡೆಸುತ್ತಿದ್ದಾರೆ.

  • ಆಟಿಕೆ ಗನ್ ಬಳಸಿ ಬ್ಯಾಂಕ್ ದರೋಡೆಗೆ ಯತ್ನ

    ಆಟಿಕೆ ಗನ್ ಬಳಸಿ ಬ್ಯಾಂಕ್ ದರೋಡೆಗೆ ಯತ್ನ

    – ಇಬ್ಬರ ಬಂಧನ

    ಶ್ರೀನಗರ: ಆಟಿಕೆ ಗನ್ ಬಳಸಿ ಬ್ಯಾಂಕ್ ದರೋಡೆಗೆ ಯತ್ನಿಸಿದ ಇಬ್ಬರನ್ನು ಬಂಧಿಸಿರುವ ಘಟನೆ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದರೋಡೆಗೆ ಯತ್ನಿಸಿದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

    ಇಬ್ಬರು ಯುವಕರು ಆಟಿಕೆ ಬಂದೂಕು ಹಿಡಿದು ನಾಥನುಸಾ ಗ್ರಾಮದ ಗ್ರಾಮೀಣ ಬ್ಯಾಂಕ್ ಪ್ರವೇಶ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿಗೆ ಗನ್ ತೋರಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಬ್ಯಾಂಕಿನಲ್ಲಿದ್ದ ಗ್ರಾಹಕರಿಗೆ ಕೈಯಲ್ಲಿರುವ ಗನ್ ಆಟಿಕೆ ಎಂದು ಅನುಮಾನ ಬಂದಿದೆ. ಕೂಡಲೇ ಬ್ಯಾಂಕ್ ಪ್ರವೇಶ ದ್ವಾರದ ಶೆಟರ್ ಎಳೆದು ಇಬ್ಬರನ್ನು ಹಿಡಿದಿದ್ದಾರೆ. ನಂತರ ಬ್ಯಾಂಕ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರ ಬಳಿಯಲ್ಲಿದ್ದ ಆಟಿಕೆ ಗನ್, ಜೇಬಿನಲ್ಲಿದ್ದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದ ಮಾದಕ ವಸ್ತುವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

  • ಕೊರೊನಾ ಸೋಂಕಿತ ಮಕ್ಕಳಲ್ಲಿ ನಗು ತರಿಸಿದ ಕೋವಿಡ್-19 ವೈದ್ಯ ಜಾಕಾ

    ಕೊರೊನಾ ಸೋಂಕಿತ ಮಕ್ಕಳಲ್ಲಿ ನಗು ತರಿಸಿದ ಕೋವಿಡ್-19 ವೈದ್ಯ ಜಾಕಾ

    -ವೈದ್ಯರ ಆಲೋಚನೆಗೆ ಜಿಲ್ಲಾಧಿಕಾರಿ ಪತ್ನಿ ಮತ್ತು ಎಸ್‍ಪಿ ಪತ್ನಿ ಸಾಥ್
    -ಚಿಕಿತ್ಸೆ ಜೊತೆಯಲ್ಲಿಯೇ ಮಕ್ಕಳಿಗೆ ಆಟ

    ಯಾದಗಿರಿ: ಜಿಲ್ಲೆಯಲ್ಲಿ ಸದ್ಯ ಕೊರೊನಾ ರುದ್ರ ತಾಂಡವಾಡುತ್ತಿದೆ. ಮಹಾರಾಷ್ಟ್ರದಿಂದ ಬಂದ ಕಾರ್ಮಿಕರಿಗೆ ಕೋವಿಡ್ ಎಂಬ ಬೇತಾಳ ಬೆನ್ನು ಬಿದ್ದಿದ್ದಾನೆ. ಹೀಗಾಗಿ ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ 300ರ ಸಮೀಪ ಬಂದು ನಿಂತಿದೆ. ಈ 300ರಲ್ಲಿ ವೃದ್ಧರು, ಯುವಕರು, ಗರ್ಭಿಣಿ, ಬಾಣಂತಿಯರು ಹೀಗೇ ಎಲ್ಲಾ ವಯಸ್ಸಿನವರು ಇದ್ದಾರೆ. ಇದರ ಜೊತೆಗೆ ಹಾಲು ಕುಡಿಯುವ ಕಂದಮ್ಮಗಳಿಂದ 10 ವರ್ಷದ ವರೆಗಿನ ಮಕ್ಕಳು ಅತೀ ಹೆಚ್ಚಾಗಿರುವುದು, ಬಹಳಷ್ಟು ನೋವಿನ ಸಂಗತಿ.

    ಜಿಲ್ಲೆಯಲ್ಲಿ ಇದುವರೆಗೆ 55ಕ್ಕೂ ಅಧಿಕ ಮಕ್ಕಳು ಕೊರೊನಾ ಪಾಸಿಟಿವ್ ಗೆ ಒಳಗಾಗಿವೆ. ಈ ಎಲ್ಲಾ ಮಕ್ಕಳನ್ನು ಸದ್ಯ ಯಾದಗಿರಿ ನಗರದ ಹೊರ ವಲಯದಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಮಕ್ಕಳು ಈ ಅವಧಿಯಲ್ಲಿ ಬಹಳಷ್ಟು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಯಾಕೆಂದರೆ ಚಿಕಿತ್ಸಾ ಅವಧಿ ದೀರ್ಘವಾಗಿದ್ದು, ಮಕ್ಕಳು ಆಟವಿಲ್ಲದೆ, ಜೊತೆಗಾರಿಲ್ಲದೆ ಕೊರಗುತ್ತಿವೆ.

    ಮಕ್ಕಳ ಈ ಪರಿಸ್ಥಿತಿ ಕಂಡ ಕೋವಿಡ್ ವಿಶೇಷ ಸೇವೆ ಸಲ್ಲಿಸುತ್ತಿರುವ ಡಾ.ವಿರೇಶ್ ಜಾಕಾ, ಒಂದು ವಿಭಿನ್ನ ಆಲೋಚನೆಯನ್ನು ಮಾಡಿ ಮಕ್ಕಳ ಮುಖದಲ್ಲಿ ನಗು ತರಸಲು ಮುಂದಾಗಿದ್ದಾರೆ. ಜಾಕಾ ತಮ್ಮ ಮನೆಯಲ್ಲಿರುವ ಆಟಿಕೆಗಳ ಜೊತೆ ಹೊಸ ಗೊಂಬೆಗಳನ್ನು ಖರೀದಿಸಿ ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ನೀಡುತ್ತಿದ್ದಾರೆ. ವೈದ್ಯರ ಈ ಆಲೋಚನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಪತ್ನಿ ಡಾ.ತೇಜಾ ಮತ್ತು ಎಸ್ ಪಿ ಅವರ ಪತ್ನಿ ರುತುಜಾ ತಮ್ಮ ಮಕ್ಕಳ ಆಟಿಕೆ ಮತ್ತು ಹೊಸ ಗೊಂಬೆಗಳನ್ನು ಖರಿದೀಸಿ ಆಸ್ಪತ್ರೆಗೆ ನೀಡಿದ್ದಾರೆ.

    ಇದೇ ರೀತಿ ಯಾದಗಿರಿಯ ಹಿರಿಯ ಅಧಿಕಾರಿಗಳು, ವೈದ್ಯರು ತಮ್ಮ ಮಕ್ಕಳ ಆಟಿಕೆಗಳ ಜೊತೆ ಹೊಸ ಗೊಂಬೆಗಳನ್ನು ಕೋವಿಡ್ ನಿಂದ ಬಳಲುತ್ತಿರುವ ಮಕ್ಕಳಿಗೆ ನೀಡುತ್ತಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಜಿಲ್ಲಾಡಳಿತದ ಜೊತೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಆಟಿಕೆ ಆಡಿ ವರ್ಷಕ್ಕೆ 70 ಕೋಟಿ ರೂ. ಸಂಪಾದಿಸಿದ 6ರ ಪೋರ!

    ಆಟಿಕೆ ಆಡಿ ವರ್ಷಕ್ಕೆ 70 ಕೋಟಿ ರೂ. ಸಂಪಾದಿಸಿದ 6ರ ಪೋರ!

    ವಾಷಿಂಗ್ಟನ್: ಚಿಕ್ಕ ಮಕ್ಕಳು ಆಟಿಕೆಗಳ ಜೊತೆ ಆಟವಾಡುತ್ತಾರೆ. ಆದರೆ ಅಮೆರಿಕದ 6 ವರ್ಷದ ಬಾಲಕ ಆಟಿಕೆಗಳ ಜೊತೆ ಆಟವಾಡಿ ಸುಮಾರು 70 ಕೋಟಿ ರೂ. ಸಂಪಾದನೆ ಮಾಡಿದ್ದಾನೆ.

    ಇತ್ತೀಚೆಗೆ ಫೋರ್ಬ್ಸ್ ಅತೀ ಹೆಚ್ಚು ಸಂಪಾದನೆ ಮಾಡುವ ಯೂಟ್ಯೂಬ್‍ರ್ಸ್ ಪಟ್ಟಿಯನ್ನ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಅಮೆರಿಕದ 6 ವರ್ಷದ ಬಾಲಕ ರಯಾನ್ ಹೆಸರಿದೆ. ಈತ ತನ್ನ ಆಟಿಕೆಗಳು ಮತ್ತು ಮಿಠಾಯಿಗಳ ವಿಮರ್ಶೆ ಮಾಡುವುದರ ಮೂಲಕ ಒಂದು ವರ್ಷದಲ್ಲಿ 11 ದಶಲಕ್ಷ ಡಾಲರ್ (ಅಂದಾಜು 70 ಕೋಟಿ ರೂ.) ಸಂಪಾದನೆ ಮಾಡಿದ್ದಾನೆ.

    ಫೋರ್ಬ್ಸ್ ನ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ರಯಾನ್ 8 ನೇ ಸ್ಥಾನದಲ್ಲಿದ್ದಾನೆ. ಯೂಟ್ಯೂಬ್‍ನಲ್ಲಿ “ರಯಾನ್ ಟಾಯ್ಸ್ ರಿವೀವ್” ಚಾನೆಲ್ ನನ್ನು ಈತನ ಪೋಷಕರು ಆರಂಭಿಸಿದ್ದು, ಹಲವಾರು ಟಾಯ್ಸ್ ಗಳ ವಿಮರ್ಶೆ ಮಾಡಿ ಅದರ ವಿಡಿಯೋಗಳನ್ನು ಯೂಟ್ಯೂಬ್‍ಗೆ ಅಪ್ಲೋಡ್ ಮಾಡಲಾಗಿದೆ.

    ಈ ಬಾಲಕನಿಗೆ ಕಾರ್‍ಗಳು, ರೈಲುಗಳು, ಥಾಮಸ್ ಅಂಡ್ ಫ್ರೆಂಡ್ಸ್, ಲೀಗೋ, ಸೂಪರ್‍ಹೀರೋಸ್, ಡಿಸ್ನಿ ಆಟಿಕೆ ಇತ್ಯಾದಿಗಳನ್ನು ತುಂಬಾ ಪ್ರೀತಿಸುತ್ತಾನೆ. ಜೊತೆಗೆ ಕುಟುಂಬದ ಮೋಜು, ಸಾಹಸಗಳನ್ನು ಇಷ್ಟಪಟ್ಟಿದ್ದಾನೆ. ಅಷ್ಟೇ ಅಲ್ಲದೇ ಮಕ್ಕಳಿಗಾಗಿ ಮೋಜು ಮತ್ತು ಸುಲಭವಾದ ವಿಜ್ಞಾನ ಪ್ರಯೋಗಳನ್ನು ಮಾಡುತ್ತಾನೆ.

    ರಯಾನ್ ಪೋಷಕರು 2015 ಮಾರ್ಚ್ ನಲ್ಲಿ ಈ ಚಾನೆಲ್ ಪ್ರಾರಂಭಿಸಿದ್ದರು. ಪ್ರಾರಂಭವಾದ 4 ತಿಂಗಳಲ್ಲಿ ದೈತ್ಯ ಮೊಟ್ಟೆಯ ಜೊತೆಗೆ ಡಾಯ್ಸ್ ಡಿಸ್ನಿ ಕಾರುಗಳು ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಆ ವಿಡಿಯೋ ಡಿಸೆಂಬರ್ 2017 ಕ್ಕೆ ಸುಮಾರು 800 ಮಿಲಿಯನ್ ವೀಕ್ಷಣೆಯಾಗಿತ್ತು. ನಂತರ ಏಪ್ರಿಲ್ 2016 ರಲ್ಲಿ ಇನ್ನೊಂದು ವಿಡಿಯೋ ಅಪ್ಲೋಡ್ ಮಾಡಿದ್ದರು. ಅದು ಸುಮಾರು 100 ಕೋಟಿ ಬಾರಿ ವೀಕ್ಷಣೆಯಾಗಿದೆ.

    ರಯಾನ್ ಟಾಯ್ಸ್ ರಿವೀವ್ ಚಾನೆಲ್‍ಗೆ ಸುಮಾರು 1 ಕೋಟಿ (10 ಮಿಲಿಯನ್) ಜನರು ಸಬ್ಸ್ ಸ್ಕ್ರೈಬ್ ಆಗಿದ್ದು, ಅವನು ಅಪ್ಲೋಡ್ ಮಾಡಿದ ಡಜನ್ಸ್ ವಿಡಿಯೋಗಳನ್ನು ಸುಮಾರು 1,600 ಕೋಟಿ (16 ಬಿಲಿಯನ್) ಬಾರಿ ವೀಕ್ಷಣೆ ಮಾಡಲಾಗಿದೆ.

    ಈಗ ಮತ್ತೆ ಈ ಕುಟುಂಬ “ರಯಾನ್ ಫ್ಯಾಮಿಲಿ ರಿವೀವ್” ಎಂಬ ಎರಡನೇ ಚಾನೆಲ್ ಪ್ರಾರಂಭಿಸಿದ್ದಾರೆ. ಇದು ಕುಟುಂಬದ ಪ್ರತಿದಿನ ಸಾಹಸ ಮತ್ತು ರಯಾನ್ ಸಹೋದರಿಯರಾದ ಎಮ್ಮಾ ಮತ್ತು ಕೇಟ್ ಅವರ ಮೇಲೆ ಕೇಂದ್ರಿಕರಿಸಲಾಗಿದೆ. 10 ಲಕ್ಷಕ್ಕೂ ಅಧಿಕ ಮಂದಿ ಚಾನೆಲ್ ಸಬ್ಸ್ ಸ್ಕ್ರೈಬ್ ಮಾಡಿದ್ದಾರೆ.