Tag: ಆಟಗಾರ್ತಿ

  • ನಿವೃತ್ತಿ ಘೋಷಿಸಿದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್

    ನಿವೃತ್ತಿ ಘೋಷಿಸಿದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್

    ವಾಷಿಂಗ್ಟನ್: ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕ್ರೀಡೆಯಿಂದ ನಿವೃತ್ತಿ ಹೊಂದುತ್ತಿರುವ ಬಗ್ಗೆ ಸುಳಿವು ನೀಡಿದ್ದಾರೆ. 32 ಬಾರಿ ಗ್ರ್ಯಾಂಡ್ ಸ್ಲಾಮ್‌ನಲ್ಲಿ ಗೆದ್ದಿರುವ, 40 ವರ್ಷದ ಸೆರೆನಾ ಟೆನಿಸ್‌ಗೆ ವಿದಾಯ ಹೇಳಲು ಕ್ಷಣಗಣನೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

    ನೀವು ಯಾವುದನ್ನಾದರೂ ತುಂಬಾ ಪ್ರೀತಿಸಿದಾಗ ಅದಕ್ಕೆ ಸಮಯ ಕಷ್ಟಗಳನ್ನು ಕೊಡುತ್ತದೆ. ನಾನು ಟೆನಿಸ್ ಅನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಇದೀಗ ಕ್ಷಣಗಣನೆ ಪ್ರಾರಂಭವಾಗಿದೆ. ನಾನು ಒಬ್ಬ ತಾಯಿಯಾಗಿ ಗಮನಹರಿಸಬೇಕಿದೆ, ಆಧ್ಯಾತ್ಮಿಕ ಗುರಿಗಳನ್ನು ತಲುಪಬೇಕಿದೆ. ಅಂತಿಮವಾಗಿ ವಿಭಿನ್ನ, ರೋಮಾಂಚನಕಾರಿ ಸೆರೆನಾಳನ್ನು ಕಂಡುಹಿಡಿಯಬೇಕಿದೆ. ಮುಂದಿನ ಕೆಲವು ವಾರಗಳ ವರೆಗೆ ಈ ಕ್ಷಣವನ್ನು ಸವಿಯಲಿದ್ದೇನೆ ಎಂದು ಸೆರೆನಾ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಬರೆದುಕೊಂಡಿದ್ದಾರೆ.

     

     

    View this post on Instagram

     

    A post shared by Serena Williams (@serenawilliams)

    ನಿವೃತ್ತಿ ಎಂಬ ಪದವನ್ನು ನಾನು ಎಂದಿಗೂ ಇಷ್ಟಪಟ್ಟಿಲ್ಲ. ಇದು ನನಗೆ ಆಧುನಿಕ ಪದದಂತೆ ಭಾಸವಾಗುವುದಿಲ್ಲ. ನಾನು ಇದನ್ನು ಪರಿವರ್ತನೆ ಎಂದು ಭಾವಿಸುತ್ತೇನೆ. ಆದರೆ ನಾನು ಆ ಪದವನ್ನು ಹೇಗೆ ಬಳಸುತ್ತೇನೆ ಎಂಬುದರ ಕುರಿತು ಸೂಕ್ಷ್ಮವಾಗಿರಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮುಂದಿನ ಕಾಮನ್‌ವೆಲ್ತ್ ಗೇಮ್ಸ್ ಎಲ್ಲಿ-ಯಾವಾಗ? – ಇಲ್ಲಿದೆ ಡೀಟೈಲ್ಸ್

    ಬಹುಶಃ ನಾನು ಏನನ್ನು ಮಾಡುತ್ತಿದ್ದೇನೆ ಎಂಬುದನ್ನು ವಿವರಿಸಲು ಅತ್ಯುತ್ತಮ ಪದ ವಿಕಾಸವಾಗಿದೆ. ನಾನು ಟೆನಿಸ್‌ನಿಂದ ದೂರವಾಗಿ, ಮುಖ್ಯವಾದ ಇತರ ವಿಷಯಗಳ ಕಡೆಗೆ ಬೆಳೆಯುತ್ತಿದ್ದೇನೆ ಎಂಬುದನ್ನು ತಿಳಿಸಬೇಕಿದೆ. ಕೆಲವು ವರ್ಷಗಳ ಹಿಂದೆ ನಾನು ಸದ್ದಿಲ್ಲದೆ ಸೆರೆನಾ ವೆಂಚರ್ಸ್, ವೆಂಚರ್ ಕ್ಯಾಪಿಟಲ್ ಸಂಸ್ಥೆಯನ್ನು ಪ್ರಾರಂಭಿಸಿದ್ದೆ. ಅದರ ಬಳಿಕ ನಾನು ಕುಟುಂಬವನ್ನು ಪ್ರಾರಂಭಿಸಿದೆ. ನಾನು ಆ ಕುಟುಂಬವನ್ನು ಬೆಳೆಸಲು ಬಯಸುತ್ತೇನೆ ಎಂದು ಸೆರೆನಾ ತಿಳಿಸಿದ್ದಾರೆ.

    ಸೆರೆನಾ 1999ರಲ್ಲಿ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಪಂದ್ಯಾವಳಿ ಗೆದ್ದಿದ್ದರು. ಈ ವರ್ಷದ ಯುಎಸ್ ಓಪನ್ ಪಂದ್ಯಾವಳಿ ಬಳಿಕ ಟೆನಿಸ್ ತ್ಯಜಿಸಲು ಯೋಜಿಸುತ್ತಿರುವುದಾಗಿ ಸೆರೆನಾ ತಿಳಿಸಿದ್ದಾರೆ. ಇದನ್ನೂ ಓದಿ: ನೆರವು ಕೇಳಿದ್ದಕ್ಕೆ ನೀವು ದೆಹಲಿ ಪ್ರತಿನಿಧಿಸಿದ್ರಾ ಎಂದು ಪ್ರಶ್ನಿಸಿದ್ದ AAP ಶಾಸಕನಿಗೆ ಸರ್ಟಿಫಿಕೇಟ್‌ ತೋರಿಸಿ ತಿರುಗೇಟು ಕೊಟ್ಟ ಕುಸ್ತಿಪಟು

    Live Tv
    [brid partner=56869869 player=32851 video=960834 autoplay=true]

  • ಉಡುಪಿನಂತೆ ಬಣ್ಣ ಹಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ ಟೆನ್ನಿಸ್ ತಾರೆ

    ಉಡುಪಿನಂತೆ ಬಣ್ಣ ಹಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ ಟೆನ್ನಿಸ್ ತಾರೆ

    ವಾಷಿಂಗ್ಟನ್: ಡೆನ್ಮಾರ್ಕ್‍ನ ಟೆನ್ನಿಸ್ ತಾರೆ ಕ್ಯಾರೋಲಿನ್ ವೋಜ್ನಿಯಾಕಿ ಉಡುಪಿನಂತೆ ಬಣ್ಣ ಹಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಕ್ಯಾರೋಲಿನ್ ವೋಜ್ನಿಯಾಕಿ ಒಂದು ಕಾಲದಲ್ಲಿ ಟೆನ್ನಿಸ್ ಲೋಕದಲ್ಲಿ ಮಿಂಚಿದ್ದರು. ಅವರು 2018ರಲ್ಲಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು. ಆದರೆ 2020ರ ಮೊದಲ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ಭಾಗವಹಿಸಿದ ನಂತರ ಜನವರಿ 24ರಂದು ದಿಢೀರ್ ಆಗಿ ನಿವೃತ್ತಿ ಘೋಷಿಸಿ ಟೆನ್ನಿಸ್ ಪ್ರೇಮಿಗಳಿಗೆ ಆಘಾತ ನೀಡಿದ್ದರು.

    29 ವರ್ಷದ ಸುಂದರಿ ಕ್ಯಾರೋಲಿನ್ ವೋಜ್ನಿಯಾಕಿ ಅವರು ಟೆನ್ನಿಸ್ ನಿವೃತ್ತಿ ಬಳಿಕ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಅವರು ಅಮೆರಿಕದ ‘ಸ್ಪೋಟ್ರ್ಸ್ ಇಲ್ಯುಸ್ಟ್ರೇಟೆಡ್ ಸ್ವಿಮ್ ಸೂಟ್’ ನಿಯತಕಾಲಿಕೆಗಾಗಿ ‘ಬಾಡಿ ಪೈಂಟಿಂಗ್’ ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ.

    ಕ್ಯಾರೋಲಿನ್ ವೋಜ್ನಿಯಾಕಿ ಅವರು 15 ಗಂಟೆಗೂ ಅಧಿಕ ಸಮಯದಲ್ಲಿ ಬಾಡಿ ಪೇಂಟಿಂಗ್ ಮಾಡಿಸಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಅಮೆರಿಕದ ಸೇಂಟ್ ವಿನ್ಸೆಂಟ್‍ನ ಬೀಚ್‍ನಲ್ಲಿ ಖ್ಯಾತ ಛಾಯಾಗ್ರಾಹಕ ಫ್ರೆಡೆರಿಕ್ ಫಿನೆಟ್ ಮಾಜಿ ಟೆನ್ನಿಸ್ ಆಟಗಾರ್ತಿಯ ಸೌಂದರ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

    ಟೆನ್ನಿಸ್ ಆಟದೊಂದಿಗೆ ಕ್ಯಾರೋಲಿನ್ ವೋಜ್ನಿಯಾಕಿ ತಮ್ಮ ಸೌಂದರ್ಯದಿಂದಲೂ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹೀಗಾಗಿ ಮಾಡೆಲಿಂಗ್ ಕ್ಷೇತ್ರದಲ್ಲೂ ಕ್ಯಾರೋಲಿನ್ ವೋಜ್ನಿಯಾಕಿ ಮಿಂಚಿದ್ದಾರೆ.