ಚಿಕ್ಕೋಡಿ(ಬೆಳಗಾವಿ): ಅಪಾಯವನ್ನು ಲೆಕ್ಕಿಸದೇ ಟ್ರಾಕ್ಟರ್ ಹಗ್ಗ-ಜಗ್ಗಾಟ ಆಟ ಆಯೋಜನೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ಆಟ ಆಯೋಜನೆ ಮಾಡಲಾಗಿದೆ. ಅಪಾಯವನ್ನು ಕಣ್ಮುಂದೆ ಇಟ್ಟುಕೊಂಡು ಗ್ರಾಮದ ಬೀರಲಿಂಗೇಶ್ವರ ಜಾತ್ರೆಯ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದೆ. ಅಥಣಿ ಚಮಕೇರಿ ರೋಡ್ ಮೇಲೆ ಆಯೋಜಕರಿಂದ ಟ್ರ್ಯಾಕ್ಟರ್ಗಳ ರೇಸ್ ಇಟ್ಟುಕೊಳ್ಳಲಾಗಿದೆ.
ಒಟ್ಟಿನಲ್ಲಿ ಅಪಾಯಕಾರಿ ಟ್ರ್ಯಾಕ್ಟರ್ ರೇಸ್ ನಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮ ವಹಿಸದೆ ಆಟ ಆಯೋಜನೆ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ ವಾಪಸ್
ಲಕ್ನೋ: ಮನೆಯಿಂದಾಚೆ ಆಟವಾಡುತ್ತಿದ್ದ ಅಕ್ಕ, ತಮ್ಮ ಇಬ್ಬರು ಚರಂಡಿಗೆ ಬಿದ್ದು ಸಾವನ್ನಪಿರುವ ಘಟನೆ ನಡೆದಿದೆ.
ರುಬೀನಾ (9) ಹತ್ತು ತಿಂಗಳ ಕಿರಿಯ ಸಹೋದರ ಸುಮಿತ್ ಕುಮಾರ್ ಮೃತರಾಗಿದ್ದಾರೆ. ಇಬ್ಬರು ಆಟವಾಡುತ್ತಿದ್ದಾಗ ಅಲ್ಲೇ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದಿದ್ದಾರೆ. ಚರಂಡಿ ಸುಮಾರು 15 ಅಡಿ ಆಳವಿದ್ದುದರಿಂದ ಮಕ್ಕಳಿಬ್ಬರು ಸಾವನ್ನಪಿದ್ದಾರೆ.
ಬಿಹಾರದ ಸಮಸ್ತಿಪುರದ ನಿವಾಸಿ ಶಂಭು ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಕೊಳಗೇರಿಯಲ್ಲಿ ವಾಸಿಸುತ್ತಿದ್ದಾರೆ. ಸೋಮವಾರ ಸಂಜೆ 4:30ಕ್ಕೆ ಹಿರಿಯ ಮಗಳು ರುಬೀನಾ, ಸುಮಿತ್ ಕುಮಾರ್‍ನ ಜೊತೆ ಮನೆ ಬಳಿ ಆಟವಾಡುತ್ತಿದ್ದರು. ಈ ವೇಳೆ ಇಬ್ಬರೂ ಅನುಮಾನಾಸ್ಪದವಾಗಿ ಚರಂಡಿಗೆ ಬಿದ್ದಿದ್ದಾರೆ. ಇದನ್ನೂ ಓದಿ:ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್
ಮಕ್ಕಳಿಬ್ಬರು ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಅವರನ್ನು ಹುಡುಕತೊಡಗಿದಾಗ ಸುಮಾರು ಅರ್ಧ ಗಂಟೆಯ ನಂತರ ರುಬೀನಾ ಮತ್ತು ಅವಳ ಸಹೋದರ ಚರಂಡಿಯಲ್ಲಿ ಕಂಡು ಬಂದಿದೆ. ಚರಂಡಿಯಿಂದ ಇಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಬ್ಬರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಗುದ್ದಿದ ಕಾರ್- ಐದು ಮಂದಿ ಸ್ಥಳದಲ್ಲೇ ಸಾವು
ಹೈದರಾಬಾದ್: ನಟಿ, ರಾಜಕಾರಣಿ ರೋಜಾ ಅವರು ತಮ್ಮ ಬಿಡುವಿಲ್ಲದ ರಾಜಕೀಯ, ಸಿನಿಮಾ ದಿನಚರಿಯ ನಡುವೆ ಮಕ್ಕಳ ಜೊತೆಗೆ ಥ್ರೋಬಾಲ್ ಆಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ರೋಜಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಗರಿ ಕ್ಷೇತ್ರದಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ಅವರು ಕೂಡ ಆಟ ಆಡಿ ರೋಜಾ ಗಮನಸೆಳೆದಿದ್ದಾರೆ. ರೋಜಾ ಅವರು ಇತ್ತೀಚೆಗೆ ಅಂಡರ್-17 ಮತ್ತು 17 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗಗಳಲ್ಲಿ ಥ್ರೋಬಾಲ್ ಸ್ಪರ್ಧೆಗಳನ್ನು ಪ್ರಾರಂಭಿಸಿದ್ದಾರೆ. ಶಾಸಕಿಯಾಗಿ ಜನರೊಂದಿಗೆ ಒಬ್ಬರಾಗಿ ಬೆರೆಯುತ್ತಿರುವ ರೋಜಾ, ಇದೇ ವೇಳೆ ಅನೇಕ ಜನರ ಸಮಸ್ಯೆ ಆಲಿಸಿ ಅದನ್ನು ಪರಿಹರಿಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸೀರೆ ಎತ್ತಿಕಟ್ಟಿ ಕಬಡ್ಡಿ ಅಖಾಡಕ್ಕಿಳಿದ ರೋಜಾ
ಇತ್ತೀಚೆಗಷ್ಟೇ ಚುನಾವಣಾ ಪ್ರಚಾರಕ್ಕೆ ಹೋಗಿರುವ ವೇಳೆ ಕಬಡ್ಡಿ ಅಖಾಡಲ್ಲಿ ಇಳಿದು ಆಟ ಆಡುವ ಮೂಲಕವಾಗಿ ಯುವಕರನ್ನು ಹುರಿದುಂಬಿಸಿದ್ದರು. ಆದರೆ ಇದೀಗ ಥ್ರೋಬಾಲ್ ನಲ್ಲೂ ಮಿಂಚಿದ್ದಾರೆ. ಸಿನಿಮಾ, ರಿಯಾಲಿಟಿ ಶೋ, ಕಾಮಿಡಿ ಶೋಗಳಲ್ಲಿ ತನ್ನ ದಿನನಿತ್ಯದ ತಮ್ಮ ನಗುವಿನ ಮೂಲಕ ಅಭಿಮಾನಿಗಳನ್ನು ಆಕರ್ಷಿಸುವ ರೋಜಾಗೆ ಆಟದಲ್ಲಿಯೂ ಆಸ್ತಿ ಇದೆ ಎಂಬುದು ಈ ಮೂಲಕವಾಗಿ ಗೊತ್ತಾಗಿದೆ. ಇದನ್ನೂ ಓದಿ: ಪುನೀತ್ ನಿಧನಕ್ಕೆ ಬಹುಭಾಷಾ ನಟಿ ರೋಜಾ ಕಂಬನಿ
ಬೆಂಗಳೂರು: ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ. 8ನೇ ಆವೃತ್ತಿಯ ಬೆಂಗಳೂರಿನಲ್ಲೇ ನಡೆಯಲಿದೆ ಪ್ರೊ ಕಬಡ್ಡಿ ಲೀಗ್ (Pro Kabaddi League) (ಪಿಕೆಎಲ್) ಡಿಸೆಂಬರ್ 22ರಿಂದ ಆರಂಭಗೊಳ್ಳಲಿದ್ದು, ಇಡೀ ಟೂರ್ನಿಗೆ ಬೆಂಗಳೂರು Bengaluru) ಆತಿಥ್ಯ ವಹಿಸಲಿದೆ.
ಬಹು ನಗರಗಳಲ್ಲಿ ನಡೆಯುತ್ತಿದ್ದ ಟೂರ್ನಿಯನ್ನು ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಒಂದೇ ನಗರಕ್ಕೆ ಸೀಮಿತಗೊಳಿಸಲಾಗಿದ್ದು, ಬೆಂಗಳೂರಿನ ಕಂಠೀರವ ಕ್ರಿಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ.
2014ರಲ್ಲಿ ಆರಂಭಗೊಂಡಿದ್ದ ಪ್ರೊ ಕಬಡ್ಡಿ ಲೀಗ್‍ಗೆ ಮೊದಲ ಆವೃತ್ತಿಯಿಂದಲೂ ಬೆಂಗಳೂರು ಆತಿಥ್ಯ ವಹಿಸಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ 2017, 2018ರಲ್ಲಿ ಬೆಂಗಳೂರಿನಿಂದ ಟೂರ್ನಿ ಎತ್ತಂಗಡಿಯಾಗಿತ್ತು. ಬಳಿಕ 2019ರಲ್ಲಿ ಟೂರ್ನಿಯು ಬೆಂಗಳೂರಿಗೆ ವಾಪಸಾಗಿತ್ತು. ಇದೀಗ ಬೆಂಗಳೂರಿನಲ್ಲೇ ಟೂರ್ನಿ ನಡೆಯಲಿದೆ. ಇದನ್ನೂ ಓದಿ: ಕ್ಯಾಚ್ ಬಿಟ್ಟು ಮ್ಯಾಚ್ ಸೋತ ಚೆನ್ನೈ – ಡೆಲ್ಲಿಗೆ 3 ವಿಕೆಟ್ ರೋಚಕ ಜಯ
ಕೊರೊನಾ ಕಾರಣ 2020ರಲ್ಲಿ ಟೂರ್ನಿ ನಡೆದಿರಲಿಲ್ಲ. ಆದರೆ ಈ ಬಾರಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪಂದ್ಯಾವಳಿ ಆಯೋಜಿಸಲು ಮುಂದಾಗಿರುವ ಆಯೋಜಕರಾದ ಮಶಾಲ್ ಸ್ಪೊಟ್ರ್ಸ್ ಸಂಸ್ಥೆ, ಕಠಿಣ ಬಯೋ ಬಬಲ್ Bio Bubble) ಸಿದ್ಧಪಡಿಸಿ ಆಟಗಾರರನ್ನು ಉಳಿಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಕ್ರಿಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.\
ತಂಡಗಳ ಆಟಗಾರರು ಟೂರ್ನಿ ಆರಂಭಗೊಳ್ಳುವ 14 ದಿನಗಳ ಮೊದಲೇ ಬೆಂಗಳೂರಿಗೆ ಆಗಮಿಸಲಿದ್ದು, ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ 2 ಡೋಸ್ ಕೊರೊನಾ ಲಸಿಕೆ ಪಡೆದಿರಬೇಕು ಎಂದು ಆಯೋಜಕರು ಷರತ್ತು ವಿಧಿಸಿದ್ದಾರೆ. ಇದನ್ನೂ ಓದಿ: ಭಾರತ, ಪಾಕಿಸ್ತಾನ ಟಿ20 – ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್
ದೇಶದ ಅತಿದೊಡ್ಡ ಸ್ಪರ್ಧಾತ್ಮಕ ಟೂರ್ನಿಯನ್ನು ಆಯೋಜಿಸಲು ಬೆಂಗಳೂರಿನಲ್ಲಿ ಸಕಲ ಸೌಲಭ್ಯಗಳು ಇವೆ. 8ನೇ ಆವೃತ್ತಿಯ ಪ್ರೊ ಕಬಡ್ಡಿಯನ್ನು ಯಶಸ್ವಿಯಾಗಿ ಆಯೋಜಿಸುತ್ತೆವೆ ಎಂದು ಮಶಾಲ್ ಸ್ಪೋರ್ಟ್ಸ್‌ನ ಸಿಇಒ ಹಾಗೂ ಲೀಗ್‍ನ ಆಯುಕ್ತ ಅನುಪಮ್ ಗೋಸ್ವಾಮಿ ತಿಳಿಸಿದ್ದಾರೆ. ಟೂರ್ನಿಯನ್ನು ಒಂದೇ ನಗರದಲ್ಲಿ ನಡೆಸಲು ನಿರ್ಧರಿಸಿದಾಗ ಅಹಮದಾಬಾದ್, ಬೆಂಗಳೂರು ಹಾಗೂ ಜೈಪುರ ನಗರಗಳನ್ನು ಗುರುತಿಸಲಾಗಿತ್ತು. ಬಳಿಕ ಎಲ್ಲಾ ರೀತಿಯಲ್ಲೂ ಸೂಕ್ತ ಎನ್ನುವ ಕಾರಣ ಬೆಂಗಳೂರನ್ನು ಅಂತಿಮಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಎರಡು ಬಾರಿ ಒಲಿಂಪಿಕ್ಸ್ ಪದಕ ತನ್ನದಾಗಿಸಿಕೊಂಡಿರುವ ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ್ದಾರೆ.
ಒಲಂಪಿಕ್ಸ್ ವಿಜೇತೆ ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿ ದೀಪಿಕಾ ಗಮನ ಸೆಳೆದಿದ್ದಾರೆ. ಅಲ್ಲದೆ ಈ ಫೋಟೋಗಳನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕ್ಯಾಲರಿ ಬರ್ನ್ ಆಗಿ ಮುಖದಲ್ಲಿ ಬೆವರಿಳಿದಿದೆ. ಇದರಿಂದ ಮುಖದ ಕಾಂತಿ ಹೆಚ್ಚಿದೆ ಎಂದು ನಟಿ ದೀಪಿಕಾ ಬರೆದುಕೊಂಡಿದ್ದರು. ಪಿವಿ ಸಿಂಧು ಕಾಮೆಂಟ್ ಮಾಡಿ ಎಷ್ಟು ಕ್ಯಾಲರಿ ಬರ್ನ್ ಆಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಅರಣ್ಯಕ್ಕೆ ಬಿಟ್ಟು ಬಂದರೂ ಗೊಬ್ಬರದ ಲಾರಿ ಏರಿ ಮತ್ತೆ ಪೇಟೆಗೆ ಬಂದ ಕೋತಿ
ಈ ವಿಶೇಷ ಪಂದ್ಯಕ್ಕಾಗಿ ದೀಪಿಕಾ ಕಪ್ಪು ಧಿರಿಸು ಧರಿಸಿದ್ದರು. ಸಿಂಧೂ ಕೂಡ ಅದೇ ರೀತಿಯ ಬಟ್ಟೆ ಧರಿಸಿದ್ದು ವಿಶೇಷವಾಗಿತ್ತು. ಸಿಂಧು ನೇರಳೆ ಮತ್ತು ಗುಲಾಬಿ ಬಣ್ಣಗಳ ಟಾಪ್ ಧರಿಸಿದ್ದರು. ಇಬ್ಬರು ಬೆವರಿಳಿಸುವಂತೆ ಆಟವಾಡಿದ್ದು, ಈ ಆಟದಲ್ಲಿ ಯಾರಿಗೆ ಗೆಲುವು ಆಯಿತು ಎಂಬುದನ್ನು ಮಾತ್ರ ತಿಳಿಸಿಲ್ಲ. ಆದರೆ ನಟಿ ದೀಪಿಕಾ ಈ ಆಟದಿಂದ ತಮ್ಮ ಮುಖದ ಕಾಂತಿ ಹೆಚ್ಚಿತು ಎಂದಿದ್ದಾರೆ.
ನಟಿ ದೀಪಿಕಾ ಇತ್ತೀಚಿನ ದಿನಗಳಲ್ಲಿ ಒಲಿಂಪಿಕ್ಸ್ ವಿಜೇತೆ ಪಿವಿ ಸಿಂಧು ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸಿಂಧುಗಾಗಿ ವಿಶೇಷ ಔತಣ ಕೂಟವನ್ನು ಮುಂಬೈನ ರೆಸ್ಟೋರೆಂಟ್‍ನಲ್ಲಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಆಯೋಜಿಸಿದ್ದರು. ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ ಕೂಡ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದರು. ನಟಿ ದೀಪಿಕಾ ಕೂಡ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಟುವಾಗಿದ್ದರು. ನಟಿ ದೀಪಿಕಾ ಕೂಡ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಟುವಾಗಿದ್ದರು. ಇದೀಗ ಪಿವಿ ಸಿಂಧು ಜೊತೆಗೆ ಮೈದಾನಲ್ಲಿ ಕಾಣಿಸಿಕೊಂಡಿರುವುದು ಸಖತ್ ಸುದ್ದಿಯಲ್ಲಿದೆ.
ಹಾಸನ: ಜೋಕಾಲಿ ಆಟವಾಡುವ ಸಂದರ್ಭದಲ್ಲಿ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಮನೋಜ್ (8), ಮೃತಪಟ್ಟ ಬಾಲಕನಾಗಿದ್ದು, ಅರಸೀಕೆರೆ ತಾಲೂಕಿನ ಬೆಂಡೆಕೆರೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಈತ ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ಇದನ್ನೂ ಓದಿ: ಮೊಬೈಲ್ ನುಂಗಿ 4 ದಿನ ಹೊಟ್ಟೆಯಲ್ಲಿಟ್ಟುಕೊಂಡ
ಮಗುವಿನ ಪೋಷಕರು ಕೃಷಿ ಕಾರ್ಯಕ್ಕೆಂದು ಮಗುವನ್ನು ಮನೆಯಲ್ಲಿ ಬಿಟ್ಟು ತೆರಳಿದ್ದರು. ಈ ವೇಳೆ ಮನೆಯಲ್ಲಿ ಕಟ್ಟಿದ ಜೋಕಾಲಿಯಲ್ಲಿ ಮಗು ಆಟವಾಡುವ ಸಂದರ್ಭದಲ್ಲಿ, ಕುತ್ತಿಗೆಗೆ ಹಗ್ಗ ಸಿಲುಕಿಕೊಂಕೊಂಡಿದೆ. ಮನೋಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಾಣವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ನಟನೆಯಲ್ಲಿ ತಮ್ಮದೇ ಅಗಿರುವ ಚಾಪನ್ನು ಮೂಡಿಸಿದ್ದಾರೆ. ಕ್ರಿಕೆಟ್‍ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಚೆಸ್‍ನಲ್ಲೂ ಘಟಾನುಘಟಿಗೆ ಪೈಪೋಟಿ ನೀಡಲು ರೆಡಿಯಾಗಿದ್ದಾರೆ ಕಿಚ್ಚ ಸುದೀಪ್ ಎನ್ನುವ ಸುದ್ದಿಯೊಂದು ಹೊರ ಬಿದ್ದಿದೆ.
ನಟನೆ, ನಿರ್ದೇಶನ, ಸಿನಿಮಾ ನಿರ್ಮಾಣ, ರಿಯಾಲಿಟಿ ಶೋ ನಿರೂಪಣೆ, ಅಡುಗೆ ಸೇರಿದಂತೆ ಹಲವು ವಿಷಯಗಳಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಕ್ರೀಡೆಯಲ್ಲೂ ಆಸಕ್ತಿ ಅಪಾರ. ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನಲ್ಲಿ ಮಿಂಚಿದ ನಟ ಇದೀಗ ಚೆಸ್‍ನಲ್ಲಿ ಗಮನ ಸೆಳೆಯಲು ಸಜ್ಜಾಗಿದ್ದಾರೆ. 5 ಬಾರಿ ವರ್ಲ್ಡ್ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರ ಖ್ಯಾತಿ ದೊಡ್ಡದು. ಚೆಸ್‍ನಲ್ಲಿ ಅವರಿಗೆ ಪೈಪೋಟಿ ನೀಡುವುದು ಎಂದರೆ ಸುಲಭದ ಮಾತಲ್ಲ. ಈಗ ಅವರ ಜೊತೆ ಕಿಚ್ಚ ಸುದೀಪ್ ಸ್ಪರ್ಧೆ ನಡೆಸಲಿದ್ದಾರೆ. ಅಖಾಡವು ಸಜ್ಜಾಗಿದೆ.
We are humbled that superstar @KicchaSudeep is joining hands in our initiative of raising funds for @AkshayaPatra‘s mission through a game of chess with @vishy64theking!
Proceeds will go towards serving individuals who are at-risk of hunger through this devastating second wave. pic.twitter.com/8i4KMrzBre
ವಿಶ್ವನಾಥನ್ ಆನಂದ್ ಜೊತೆ ಸುದೀಪ್ ಚೆಸ್ ಆಡಲಿರುವುದು ಒಂದು ಒಳ್ಳೆಯ ಉದ್ದೇಶಕ್ಕಾಗಿ. ಕೊರೊನಾದಿಂದಾಗಿ ಇಡೀ ದೇಶವೇ ಕಷ್ಟದ ಪರಿಸ್ಥಿತಿಯಲ್ಲಿದೆ. ಕೊರೊನಾ ವಿರುದ್ಧ ಹೋರಾಡಲು ಹಣ ಸಂಗ್ರಹ ಮಾಡುವ ಸಲುವಾಗಿ ಈ ಆಟ ಆಯೋಜಿಸಲಾಗಿದೆ.
ಜೂ.13ರಂದು ಸಂಜೆ 5 ಗಂಟೆಗೆ ಚೆಕ್‍ಮೇಟ್ ಕೊರೊನಾ- ಸೆಲೆಬ್ರಿಟಿ ಎಡಿಷನ್ ಆರಂಭ ಆಗಲಿದೆ. ಇದರಲ್ಲಿ ವಿಶ್ವನಾಥನ್ ಆನಂದ್ ಜೊತೆ ಕಿಚ್ಚ ಸುದೀಪ್ ಮಾತ್ರವಲ್ಲದೆ ಅನೇಕ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಬಾಲಿವುಡ್ ನಟ ಆಮೀರ್ ಖಾನ್ ಕೂಡ ವಿಶ್ವನಾಥನ್ ಆನಂದ್‍ಗೆ ಪೈಪೋಟಿ ನೀಡಲಿದ್ದಾರೆ. ಆ ಮೂಲಕ ನಿಧಿ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ.
ಪರದೆ ಮೇಲೆ, ಮೈದಾನದಲ್ಲಿ ಕಿಚ್ಚನ ಖದರ್ ನೋಡಿದವರು ಈಗ ಚೆಸ್‍ನಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಎನ್ನುವುದನ್ನು ಅಭಿಮಾನಿಗಳು ನೋಡಲು ಉತ್ಸುಕರಾಗಿದ್ದಾರೆ. ಅಕ್ಷಯ ಪಾತ್ರಾ ಫೌಂಡೇಶನ್ ಹಾಗೂ ಚೆಸ್ ಡಾಟ್ ಕಾಮ್ ಜೊತೆಯಾಗಿ ಈ ಆಟವನ್ನು ಆಯೋಜಿಸಿವೆ. Chess.com – India ಯೂಟ್ಯೂಬ್ ಚಾನೆಲ್‍ನಲ್ಲಿ ಆಟ ಪ್ರಸಾರ ಆಗಲಿದೆ.
These are going to be some very exciting and extremely memorable games! ❤️
ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಚೆಸ್ ಗ್ರ್ಯಾಂಡ್‍ಮಾಸ್ಟರ್ ವಿಶ್ವನಾಥನ್ ಅವರ ನಡುವಿನ ರೋಚಕ ಆಟ ಹೇಗೆ ಇರಲಿದೆ ಎನ್ನುವ ಕುತುಹೊಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಅಭಿಮಾನಿಗಳು ಈ ಆಟವನ್ನು ವೀಕ್ಷಿಸಲು ಉತ್ಸುಹಕರಾಗಿದ್ದಾರೆ.
ಬಿಗ್ ಬಾಸ್ ನೀಡಿದ ಟಾಸ್ಕ್‌ವೊಂದರಲ್ಲಿ ನನಗೆ ಅನ್ಯಾಯವಾಗಿದೆ ಅಂತ ಪ್ರಿಯಾಂಕಾ ತಕರಾರು ಶುರು ಮಾಡಿದ್ದರು. ಅದು ಯಾವ ಮಟ್ಟಕ್ಕೆ ಹೋಗಿತ್ತೆಂದರೆ, ರಾತ್ರಿ ಲೇಟ್ ಆದರೂ ಯಾರೂ ಊಟ ಕೂಡ ಮಾಡಲಿಕ್ಕೆ ಆಗಿರಲಿಲ್ಲ. ಮನೆ ಮಂದಿ ಬಂದು ಕೇಳಿಕೊಂಡರು ಪ್ರಿಯಾಂಕ ಒಪ್ಪಿಕೊಳ್ಳಲು ಸಿದ್ಧವಾಗಿರಲಿಲ್ಲ.
ಬಿಗ್ ಬಾಸ್ ಒಂದು ಟಾಸ್ಕ್ ನೀಡಿದರು. ಆ ಪ್ರಕಾರ, ಕೈ-ಕಾಲು ಬಳಸದೇ ತೇವಳಿಕೊಂಡು ಬರೀ ತಲೆಯಿಂದ ಬಾಲ್ ಅನ್ನು ಒಂದು ತುದಿಯಿಂದ ಮತ್ತೊಂದು ತುದಿಗೆ ತಲುಪಿಸಬೇಕಿತ್ತು. ಇದರಲ್ಲಿ ಪ್ರಶಾಂತ್ ಸಂಬರಗಿ, ಅರವಿಂದ್, ಪ್ರಿಯಾಂಕಾ ಭಾಗವಹಿಸಿದರು. ಆಗ ಅರವಿಂದ್ ಆಕಸ್ಮಿಕವಾಗಿ ಪ್ರಿಯಾಂಕಾ ಅವರ ಕೋರ್ಟ್‍ನಲ್ಲಿದ್ದ ಬಾಲ್ ಅನ್ನು ತಳ್ಳಿದರು. ಇದರಿಂದ ಕೋಪಗೊಂಡ ಪ್ರಿಯಾಂಕಾ ಆಟವನ್ನು ಮುಂದವರಿಸಲಿಲ್ಲ. ಆದರೆ, ಅರವಿಂದ್ ಮತ್ತು ಪ್ರಶಾಂತ್ ಮುಗಿಸಿದರು. ಅಂತಿಮವಾಗಿ ತೀರ್ಪುಗಾರರಾಗಿದ್ದ ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್, ವೈಷ್ಣವಿ ಗೌಡ ಅವರು ಅರವಿಂದ್‍ಗೆ ಮೊದಲ ಸ್ಥಾನ ಹಾಗೂ ಪ್ರಿಯಾಂಕಾಗೆ ಮೂರನೇ ಸ್ಥಾನ ನೀಡಿದರು. ಇದು ಪ್ರಿಯಾಂಕಾಗೆ ಬೇಸರ ತರಿಸಿತು. ನಾನು ಮೂರನೇ ಸ್ಥಾನವನ್ನು ಒಪ್ಪಿಕೊಳ್ಳಲ್ಲ ಎಂದು ತಕರಾರು ತೆಗೆದಿದ್ದರು.
ನಾನು ತಳ್ಳುತ್ತಿದ್ದ ಬಾಲ್ ಅನ್ನು ಅರವಿಂದ್ ಬೇರೆಡೆಗೆ ತಳ್ಳಿದ್ದರಿಂದ ನನಗೆ ಮೋಸವಾಗಿದೆ. ಈ ತೀರ್ಪನ್ನು ಒಪ್ಪಲ್ಲ ಎಂದು ಪ್ರಿಯಾಂಕಾ ಗರಂ ಆದರು. ಮಂಜು ಜೊತೆಗೆ ಜೋರು ವಾಗ್ವಾದ ಮಾಡಿದರು. ನ್ಯಾಯ ಸಿಗುವವರೆಗೂ ನಾನು ಮೂರನೇ ಸ್ಥಾನ ಒಪ್ಪಿಕೊಳ್ಳಲ್ಲ ಎಂದು ಹಠ ಹಿಡಿದರು. ಕೊನೆಗೆ ಮನೆ ಮಂದಿಯೆಲ್ಲ ಹಸಿವು ಎಂದು ನರಳಾಡಬೇಕಾದ ಪರಿಸ್ಥಿತಿ ಬಂತು. ಗೇಮ್ ಮುಗಿಯುವವರೆಗೂ ಊಟ ಮಾಡುವಂತೆ ಇರಲಿಲ್ಲ. ಕೊನೆಗೂ ಪ್ರೀಯಾಂಕ ಒಪ್ಪಿಕೊಂಡು ಹೋಗಿ ಮೂರನೇ ಸ್ಥಾನದಲ್ಲಿ ಕುಳಿತುಕೊಂಡರು.
ಆಟ ಆಡುವಾಗ ನನ್ನ ತಪ್ಪಿರಲಿಲ್ಲ ಆದರೂ ನನಗೆ ಮೂರನೇ ಸ್ಥಾನ ನೀಡಲಾಗುತ್ತಿದೆ ಎಂದು ಪ್ರಿಯಾಂಕಾ ಬೇಸರ ಮಾಡಿಕೊಂಡರು. ಕೊನೆಗೆ ಮೂರನೇ ಸ್ಥಾನವನ್ನು ಒಪ್ಪಿಕೊಂಡ 3ನೇ ಬೋಗಿಯಲ್ಲಿದ್ದ ರಘು ಗೌಡ ಅವರನ್ನು ಎರಡನೇ ಬೋಗಿಗೆ ಕಳುಹಿಸಿ, ಅವರು 3ನೇ ಬೋಗಿಯಲ್ಲಿ ಕೂತರು. ಅಂತಿಮವಾಗಿ ಈ ಆಟ ಇಲ್ಲಿಗೆ ಮುಗಿಯಿತು. ಕೊನೇ ಬೋಗಿಯಲ್ಲಿರುವ ಪ್ರಿಯಾಂಕಾ ಮತ್ತು ದಿವ್ಯಾ ಸುರೇಶ್ ನೇರವಾಗಿ ನಾಮಿನೇಟ್ ಆಗಿದ್ದಾರೆ ಎಂದು ಬಿಗ್ ಬಾಸ್ ಘೋಷಿಸಿದರು. ನಂತರ ಪ್ರಿಯಾಂಕಾ ಕಣ್ಣೀರಿಟ್ಟಿದ್ದಾರೆ ಮಂಜು ಮತ್ತು ದಿವ್ಯಾ ಉರುಡುಗ ಸಾಕಷ್ಟು ಸಮಾಧಾನ ಮಾಡಲು ಪ್ರಯತ್ನಿಸಿದರು.
ಬಿಗ್‍ಬಾಸ್ನ ಒಂದು ಗೇಮ್ ಮನೆಯಲ್ಲಿ ಬೇಸರವನ್ನುಂಟು ಮಾಡಿದೆ. ಸ್ಪರ್ಧಿಗಳು ಪ್ರಿಯಾಂಕ ಅವರ ಕುರಿತಾಗಿ ಬೇಸರಗೊಂಡರು. ಮನೆಯಲ್ಲಿ ಬಿಗ್‍ಬಾಸ್ ಹೊಸ ಆಟಗಳು ಏನೆಲ್ಲಾ ತಿರುವುದಕೊಡಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಹೈದರಾಬಾದ್: ನಟಿ, ರಾಜಕಾರಣಿ ರೋಜಾ ಆಂಧ್ರಪ್ರದೇಶದಲ್ಲಿ ನಡೆಯಲಿರುವ ಎರಡು ನಗರಪಾಲಿಕೆ ಚುನಾವಣೆ ಪ್ರಚಾರದ ವೇಳೆ ಯುವಕರೊಂದಿಗೆ ಕಬಡ್ಡಿ ಆಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಶಾಸಕಿ ಹಾಗೂ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ ಮಂಡಳಿ ಅಧ್ಯಕ್ಷೆ ಆಗಿರುವ ರೋಜಾ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಸ್ಥಳಿಯ ನಾಯಕರು ಮತ್ತು ಪುತ್ತೂರ್ ಮುನ್ಸಿಪಾಲಿಟಿ ನಾಯಕರ ಜತೆ ಓಡಾಡಿ ತಮ್ಮ ಬೆಂಬಲಿಗರಿಗೆ ಮತ ಹಾಕುವಂತೆ ಮನವಿ ಮಾಡಿದರು.
ಪ್ರಚಾರಕ್ಕೆಂದು ಹೋದವೇಳೆ ಚಿತ್ತೂರ್ ಜಿಲ್ಲೆಯ ನಿಂದ್ರಾದಲ್ಲಿರುವ ಶಾಲೆಯಲ್ಲಿ ಕಬಡ್ಡಿ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಟೂರ್ನಮೆಂಟ್ ಬಳಿ ಹೋದ ರೋಜಾ, ಆಟಗಾರರನ್ನು ಹುರಿದುಂಬಿಸಲು ಸೀರೆ ಎತ್ತಿ ಸೊಂಟಕ್ಕೆ ಕಟ್ಟಿಕೊಂಡು ಕಬಡ್ಡಿ ಅಖಾಡಕ್ಕಿಳಿದಿದ್ದಾರೆ.
ಕಬಡ್ಡಿ..ಕಬಡ್ಡಿ ಎನ್ನುತ್ತಾ ಕೆಲಕಾಲ ಆಟವಾಡಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಸದಾ ಟೀಕಿಸುವ ಮೂಲಕವಾಗಿ ಸುದ್ದಿಯಾಗುವ ನಟಿ ಮಣಿ ಇದೀಗ ಕಬಡ್ಡಿ ಆಟವನ್ನು ಆಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟಿಯಾಗಿರುವ ಮುದ್ದು ಮೊಗದ ಚೆಲುವೆ ಅದಿತಿ ಪ್ರಭುದೇವ ಶಾಲಾ ಮಕ್ಕಳ ಜೊತೆಯಲ್ಲಿ ಜೂಟಾಟ ಆಡಿದ್ದಾರೆ. ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ.
ಸರ್ಕಾರಿ ಶಾಲೆಯ ಮಕ್ಕಳ ಜೊತೆಗೆ ಒಂಟಿಕಾಲಿನ ಆಟವಾಡುತ್ತಾ ಮಕ್ಕಳ ಜೊತೆಗೆ ಸಮಯ ಕಳೆದಿದ್ದಾರೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎಷ್ಟೆಲ್ಲ ನೆನಪುಗಳು ಶೂಟಿಂಗ್ ಬಿಡುವಿನ ಸಮಯದಲ್ಲಿ, ಹಳ್ಳಿ ಸೊಗಡಿನ ಮುಗ್ಧ ನಗುಗಳ ಜೊತೆಯಲ್ಲಿ ಆಟವಾಡಿ ಕಾಲ ಕಳೆದ ಈ ಸಂತೋಷಕ್ಕೆ ಬೆಲೆ ಕಟ್ಟಲಾದೀತೆ? ನನಗೆ ಹತ್ತು ವರ್ಷಗಳ ಹಿಂದೆ ಹೋದಂತೆ ಭಾಸವಾಯಿತ್ತು. ಜೊತೆಗೆ ಹೆಚ್ಚು ಕಡಿಮೆ ಶಾಲಾ ಉಡುಪು ಕೂಡಾ ಈ ಶಾಲಾ ಮಕ್ಕಳ ಯೂನಿಫಾರ್ಮ್‍ನಂತೆ ಇತ್ತು ಎಂದು ಬರೆದುಕೊಂಡು ಸಂತೋಷವನ್ನು ಅಪ್ಪಟ ಕನ್ನಡ ಹುಡುಗಿ ಅದಿತಿ ಪ್ರಭುದೇವ ಹಂಚಿಕೊಂಡಿದ್ದಾರೆ.
ಮಕ್ಕಳ ಜೊತೆಗೆ ಆಟವಾಡುತ್ತಾ ತಾವು ಮಕ್ಕಳಂತೆ ಸಂತೋಷವಾಗಿ ಕೆಲ ಸಮಯ ಕಳೆದಿದ್ದಾರೆ. ಅದಿತಿ ಮಕ್ಕಳ ಜೊತೆಯಲ್ಲಿ ಆಟವಾಡುತ್ತಾ ಬಾಲ್ಯಕ್ಕೆ ಜಾರಿ ತಮ್ಮ ಶಾಲಾ ದಿವನ್ನು ನೆನೆಪಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ವೀಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿತ್ತಿದ್ದಾರೆ. ನೆಟ್ಟಿಗರು ಅದಿತಿ ಆಟವಾಡುತ್ತಿರುವುದನ್ನು ಕಂಡು ಕಮೆಂಟ್‍ಗಳ ಸುರಿಮಳೆಗೈದಿದ್ದಾರೆ.
ಸದ್ಯ ತೋತಾಪುರಿ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ಅದಿತಿ ಕೊಂಚ ಸಮಯ ಬಿಡುವು ಮಾಡಿಕೊಂಡು ಹಳ್ಳಿ ಶಾಲಾ ಮಕ್ಕಳ ಜೊತೆಗೆ ಆಟವಾಡಿದ್ದಾರೆ. ಆಟದ ಫೋಟೋ. ವೀಡಿಯೋವನ್ನು ಕ್ಲಿಕ್ಕಿಸಿಕೊಂಡ ಅದಿತಿ ಪ್ರಭುದೇವ ತಮ್ಮ ಬಾಲ್ಯದ ನೆನಪುಗಳನ್ನು ಮೆಲಕು ಹಾಕಿದ್ದಾರೆ.