Tag: ಆಜಾದ್ ನಗರ

  • ಮಾನವ ಹಕ್ಕುಗಳ ಹೆಸರಲ್ಲಿ ಮಹಿಳೆಯರಿಗೆ ವಂಚನೆ – ನಾಲ್ವರನ್ನು ಮದುವೆಯಾದವನಿಗೆ ಬಿತ್ತು ಬೀದಿಯಲ್ಲಿ ಗೂಸಾ

    ಮಾನವ ಹಕ್ಕುಗಳ ಹೆಸರಲ್ಲಿ ಮಹಿಳೆಯರಿಗೆ ವಂಚನೆ – ನಾಲ್ವರನ್ನು ಮದುವೆಯಾದವನಿಗೆ ಬಿತ್ತು ಬೀದಿಯಲ್ಲಿ ಗೂಸಾ

    ದಾವಣಗೆರೆ: ಮಾನವ ಹಕ್ಕುಗಳು ಎಂಬ ಸಂಸ್ಥೆ ಕಟ್ಟಿಕೊಂಡು ರಾಜ್ಯಾಧ್ಯಕ್ಷ ಕೂಡ ಆಗಿದ್ದ ವ್ಯಕ್ತಿ ಸಂಘಕ್ಕೆ ತದ್ವಿರುದ್ಧವಾಗಿ ಒಂದಲ್ಲ, ಎರಡಲ್ಲ, 4 ಮದುವೆ ಆಗಿ ಮಹಿಳೆಯರ ಹಕ್ಕುಗಳನ್ನೇ ಕಿತ್ತುಕೊಂಡು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

    ದಾವಣಗೆರೆಯ (Davanagere) ಆಜಾದ್ ನಗರ (Azad Nagar) ನಿವಾಸಿ ಮಹಮ್ಮದ್ ವಾಸೀಂ ಬರೋಬ್ಬರಿ 4 ಮದುವೆಯಾಗಿದ್ದಾನೆ. ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ಅಂತ ಕಟ್ಟಿಕೊಂಡು ಅದಕ್ಕೆ ರಾಜ್ಯಾಧ್ಯಕ್ಷನೂ ಆಗಿದ್ದ. ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇನೆ ಎಂದು ವಿಧವೆ, ಪತಿಯಿಂದ ದೂರಾದವರು, ಅಮಾಯಕ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ. ಅಂತಹವರ ಜೊತೆ ಮೊದಲು ಸ್ನೇಹ ಬೆಳೆಸಿ ಬಳಿಕ ಮದುವೆಯಾಗಿ ಬಾಳು ಕೊಡುವುದಾಗಿ ನಂಬಿಸುತ್ತಿದ್ದ.

    ಈತನನ್ನು ನಂಬಿದ ಮಹಿಳೆಯರು ಮದುವೆಗೆ ಒಪ್ಪಿ ನಿಖಾ ಮಾಡಿಕೊಳ್ಳುತ್ತಿದ್ದ. ಸ್ವಲ್ಪ ದಿನ ಕಳೆದ ಮೇಲೆ ತವರು ಮನೆಯಿಂದ ಹಣ ತರುವಂತೆ, ಆಸ್ತಿ ಇದ್ದರೆ ಸೇಲ್ ಆಗ್ರಿಮೆಂಟ್ ಮಾಡಿಕೊಂಡುವಂತೆ ಒತ್ತಾಯ ಮಾಡುತ್ತಿದ್ದ. ಹೀಗೆ ಮಹಿಳೆಯರಿಗೆ ನಿರಂತರವಾಗಿ ಮೋಸ ಮಾಡಿಕೊಂಡು ಹೋಗಿದ್ದಾನೆ.

    ಇದೀಗ ವಾಸೀಂ ಮೂರನೇ ಹೆಂಡತಿಗೆ ಮೋಸ ಮಾಡಿ ನಾಲ್ಕನೇ ಹೆಂಡತಿ ಮನೆಯಲ್ಲಿದ್ದಾಗ ಮೂರನೇ ಹೆಂಡತಿ ರೆಡ್‌ಹ್ಯಾಂಡ್ ಆಗಿ ಹಿಡಿದು ಆತನ ಬಂಡವಾಳ ಬಯಲು ಮಾಡಿದ್ದಾಳೆ. ವಾಸೀಂ ಮೊದಲ ಮದುವೆ ಆಗಿದ್ದು ಕೂಡ ವಿಧವೆಯನ್ನೇ. ಆಕೆಗೆ ಹಾಗೂ ಆಕೆಯ ಮಕ್ಕಳಿಗೂ ಆಶ್ರಯವಾಗಿ ಇರುತ್ತೇನೆ ಎಂದು ಮದುವೆ ಆಗಿ ವಂಚಿಸಿದ್ದಾನೆ. ನನಗೂ ನನ್ನ ಮಕ್ಕಳಿಗೆ ಏನು ಉಳಿದಿಲ್ಲ. ಇಂತಹ ಕಿರಾತಕನಿಗೆ ಕಠಿಣ ಶಿಕ್ಷೆಯಾಗಬೇಕು. ಅವನನ್ನು ಬಂಧಿಸಬೇಕು ಎಂದು ಆತನ ಮೊದಲ ಪತ್ನಿ ಅಜ್ಮತ್‌ಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗ್ರಾಹಕರೇ ಎಚ್ಚರ – ಮನೆ ಮನೆಗೆ ವಿತರಣೆಯಾಗುವ ಗ್ಯಾಸ್ ಸಿಲಿಂಡರ್‌ನಲ್ಲಿ ಭಾರೀ ವಂಚನೆ

    ವಾಸೀಂನ ಕರ್ಮಕಾಂಡದ ಬಗ್ಗೆ ಮುಸ್ಲಿಂ ಜಮಾತ್‌ಗೆ ತಿಳಿಸಿದರೂ ಏನೂ ಕ್ರಮ ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರನ್ನು ನೀಡಲಾಗಿದ್ದು, ಅವರು ಕೂಡಾ ಆತನ ಪರವಾಗಿಯೇ ಮಾತನಾಡುತ್ತಾರೆ ಎಂದು ಆರೋಪಿಸಲಾಗುತ್ತಿದೆ. ಅವನಿಗೆ ತಕ್ಕಪಾಠ ಕಲಿಸಬೇಕೆಂದು ವಂಚನೆಗೆ ಒಳಗಾದವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 200 ರನ್‌ಗಳ ಭರ್ಜರಿ ಗೆಲುವು – ವಿಂಡೀಸ್‌ ವಿರುದ್ಧ ಸತತ 13ನೇ ಏಕದಿನ ಸರಣಿ ಗೆದ್ದ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಟ್ಟಡದ ಮೇಲಿನಿಂದ ಬಿದ್ದು ಮಗು ಸಾವು

    ಕಟ್ಟಡದ ಮೇಲಿನಿಂದ ಬಿದ್ದು ಮಗು ಸಾವು

    ಬೆಂಗಳೂರು: ಆಟ ಆಡುತ್ತಿದ್ದ ಒಂದೂವರೆ ವರ್ಷದ ಮಗುವೊಂದು ಕಟ್ಟಡದ ಮೇಲಿನಿಂದ ಬಿದ್ದು ಸಾವನ್ನಪ್ಪಿದ ಘಟನೆ ಚಾಮರಾಜಪೇಟೆ (Chamrajpet) ಪೊಲೀಸ್ ಠಾಣೆ ವ್ಯಾಪ್ತಿಯ ಆಜಾದ್ ನಗರದಲ್ಲಿ (Azad Nagar) ನಡೆದಿದೆ.

    ನಗರದ 6ನೇ ಕ್ರಾಸ್‍ನ ವಿನಯ್ ಎಂಬುವವರ ಪುತ್ರಿ ದೀಕ್ಷಾ ಮೃತಪಟ್ಟ ಮಗು. ರಾತ್ರಿ 9 ಗಂಟೆಗೆ ಮಗುವಿಗೆ ತಾಯಿ ಊಟ ಮಾಡಿಸುತ್ತಿದ್ದಾಗ ಆಟವಾಡುತ್ತ ಗ್ರಿಲ್ (Grill)  ಮೇಲೆ ಹತ್ತಿದೆ. ಕ್ಷಣಾರ್ಧದಲ್ಲಿ ನೋಡು ನೋಡುತ್ತಿದ್ದಂತೆ ಮಗು ಜಾರಿ ಕೆಳಗೆ ಬಿದ್ದಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮಗು ಕೊನೆಯುಸಿರೆಳೆದಿದೆ.

    ಕಳೆದ ವಾರ ಕೆಂಗೇರಿಯಲ್ಲಿ (Kengeri) ಇದೇ ರೀತಿ ಘಟನೆ ನಡೆದು ಮಗುವೊಂದು ಮೃತಪಟ್ಟಿತ್ತು. ಇದನ್ನೂ ಓದಿ: ಕರ್ತವ್ಯನಿರತ ಬಸ್ ಕಂಡಕ್ಟರ್‌ಗೆ ಎದೆನೋವು- ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಸಿಗದೆ ನರಳಾಟ