Tag: ಆಜಾದಿ ಕಾ ಅಮೃತ ಮಹೋತ್ಸವ

  • 75ನೇ ಸ್ವಾತಂತ್ರ್ಯ ಸಂಭ್ರಮ – ಬಾವುಟವನ್ನು ಮಡಿಸೋದು ಹೇಗೆ?

    75ನೇ ಸ್ವಾತಂತ್ರ್ಯ ಸಂಭ್ರಮ – ಬಾವುಟವನ್ನು ಮಡಿಸೋದು ಹೇಗೆ?

    ನವದೆಹಲಿ: ಕೇಂದ್ರ ಸರ್ಕಾರವೂ 75ನೇ ಸ್ವಾಂತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಈಗಾಗಲೇ ಸಿದ್ಧಗೊಂಡಿದ್ದು ಅಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ಅನೇಕ ಕಾರ್ಯಕ್ರಮವನ್ನುಜಾರಿಗೆ ತರುತ್ತಿದೆ. ಹರ್ ಘರ್ ತಿರಂಗ (ಪ್ರತಿ ಮನೆಯಲ್ಲೂ ಬಾವುಟ)ವು ಅಜಾದಿ ಕಾ ಅಮೃತ ಮಹೋತ್ಸವ ಅಡಿಯಲ್ಲಿ ಬರುವ ಮಹತ್ವದ ಕಾರ್ಯಕ್ರಮವಾಗಿದೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸೂಚನೆಯೊಂದನ್ನು ಬಿಡುಗಡೆ ಮಾಡಿದೆ.

    ಹೌದು.. ಹರ್ ಘರ್ ತಿರಂಗ ಆಚರಿಸುವ ಉತ್ಸಾಹದಲ್ಲಿ ಯಾವುದೇ ಪ್ರಮಾದ ಅಥವಾ ದೇಶ ದ್ರೋಹದ ಕೆಲಸವಾಗದಿರಲಿ ಎಂದು ಬಾವುಟವನ್ನು ಮಡಿಸುವ ಸರಿಯಾದ ಮಾರ್ಗದ ಬಗ್ಗೆ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬಾವುಟವನ್ನು ಹಂತ ಹಂತವಾಗಿ ಯಾವ ರೀತಿಯಾಗಿಮಡಿಸಬೇಕು ಎನ್ನುವ ಎಲ್ಲಾ ಕ್ರಮಗಳನ್ನು ನೀಡಿದೆ. ಅವು ಈ ರೀತಿ ಆಗಿದೆ.

    ಮೊದಲಿಗೆ ರಾಷ್ಟ್ರಧ್ವಜವನ್ನು ಅಡ್ಡಲಾಗಿ ಇರಿಸಬೇಕು. ನಂತರ ಮಧ್ಯದಲ್ಲಿರುವ ಬಿಳಿ ಪಟ್ಟಿಯ ಅಡಿಯಲ್ಲಿ ಕೇಸರಿ ಹಾಗೂ ಹಸಿರು ಪಟ್ಟಿಗಳನ್ನು ಮಡಿಸಬೇಕು. ಅದಾದ ಬಳಿಕ ಕೇಸರಿ ಮತ್ತು ಹಸಿರು ಬಣ್ಣದ ಪಟ್ಟಿಯೊಂದಿಗೆ ಅಶೋಕ ಚಕ್ರ ಮಾತ್ರ ಕಾಣುವ ರೀತಿಯಲ್ಲಿ ಬಿಳಿ ಬಣ್ಣದ ಪಟ್ಟಿಯನ್ನು ಮಡಿಸಬೇಕು. ಇದಾದ ನಂತರ ಮಡಿಸಿದ ರಾಷ್ಟ್ರ ಧ್ವಜವನ್ನು ಅಂಗೈ ಅಥವಾ ತೋಳುಗಳ ಮೇಲೆ ತೆಗೆದುಕೊಂಡು ಹೋಗಬೇಕು. ಈ ಎಲ್ಲಾ ನಿಯಮಗಳು ರಾಷ್ಟ್ರಧ್ವಜವನ್ನು ಮಡಿಸುವಾಗ ಅನುಸರಿಸಲೇ ಬೇಕಾದ ಕ್ರಮಗಳಾಗಿವೆ. ಇದನ್ನೂ ಓದಿ: ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಉಗ್ರರ ಕರಿ ನೆರಳು – ಕೆಂಪುಕೋಟೆಯ ಸುತ್ತ 1,000 ಅಧಿಕ ಸಿಸಿಟಿವಿ ಕ್ಯಾಮೆರಾ

    75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮಂಗಳವಾರದಂದು ಪ್ರಧಾನಿ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ರಾಷ್ಟ್ರಧ್ವಜವನ್ನು ತಮ್ಮ ಪ್ರೊಫೈಲ್ ಪಿಕ್ಚರ್ ಆಗಿ ಬದಲಾಯಿಸಿಕೊಂಡಿದ್ದರು. ಅಷ್ಠ ಅಲ್ಲದೇ ಈ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಈ ಅಭಿಯಾನಕ್ಕೆ ಈಗಾಗಲೇ ದೇಶಾದ್ಯಂತ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಅನೇಕ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ.

    ಕೇವಲ ಬಿಜೆಪಿಯೊಂದೇ ಅಲ್ಲದೇ ಕಾಂಗ್ರೆಸ್‍ನವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ತಮ್ಮ ಪ್ರೊಫೈಲ್‍ನಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ರಾಷ್ಟ್ರಧ್ವಜವನ್ನು ಹಿಡಿದಿರುವ ಫೋಟೋವನ್ನು ಹಾಕಿದ್ದಾರೆ. ಅಷ್ಟೇ ಅಲ್ಲದೇ ರಾಹುಲ್ ಗಾಂಧಿ ನಮ್ಮ ತಿರಂಗ, ನಮ್ಮ ದೇಶದ ಹೆಮ್ಮೆ, ರಾಷ್ಟ್ರಧ್ವಜ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್‍ನವರಿಗೆ ಇರುವುದು ಹುಸಿ ಪ್ರೇಮ: ಬಿಜೆಪಿ

    Live Tv
    [brid partner=56869869 player=32851 video=960834 autoplay=true]

  • ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಉಗ್ರರ ಕರಿ ನೆರಳು – ಕೆಂಪುಕೋಟೆಯ ಸುತ್ತ 1,000 ಅಧಿಕ ಸಿಸಿಟಿವಿ ಕ್ಯಾಮೆರಾ

    ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಉಗ್ರರ ಕರಿ ನೆರಳು – ಕೆಂಪುಕೋಟೆಯ ಸುತ್ತ 1,000 ಅಧಿಕ ಸಿಸಿಟಿವಿ ಕ್ಯಾಮೆರಾ

    ನವದೆಹಲಿ: ದೇಶದಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿದ್ದು, ಈ‌ ಸಂಭ್ರಮಾಚರಣೆ ಮೇಲೆ ಭಯೋತ್ಪಾದಕರ ಕರಿ ನೆರಳು ಬಿದ್ದಿದೆ. ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ವೇಳೆ ಭಯೋತ್ಪಾದಕ ಚಟುವಟಿಕೆಗಳು ನಡೆಯುವ ಬೆದರಿಕೆಗಳು ಬಂದಿದೆ.

    ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್ ಸಂಘಟನೆಗಳಿಂದ ಸಂಭವನೀಯ ದಾಳಿಗಳ ಬಗ್ಗೆ ಗುಪ್ತಚರ ಇಲಾಖೆಯಿಂದ ಎಚ್ಚರಿಕೆ ಬಂದಿದ್ದು ಕೆಂಪುಕೋಟೆಯ ಸುತ್ತ ಭದ್ರತೆ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಕೆಂಪುಕೋಟೆಯ ಸುತ್ತ ಭಾರಿ ಭದ್ರತೆ ನಿಯೋಜಿಸಲು ಸಿದ್ದತೆಗಳು ಆರಂಭಗೊಂಡಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರತದ ಮೇಲೆ ಉಗ್ರರ ದಾಳಿ ಭೀತಿ: ಗುಪ್ತಚರ ಇಲಾಖೆ ಎಚ್ಚರಿಕೆ

    ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕೆಂಪುಕೋಟೆಗೆ ಸಿಸಿಟಿವಿ ಸರ್ಪಗಾವಲು ಹಾಕಲು ತಿರ್ಮಾನಿಸಿದ್ದು, 1,000 ಕ್ಕೂ ಇಂಟರ್ನೆಟ್ ಪ್ರೊಟೊಕಾಲ್ (IP) ಆಧಾರಿತ ಸಿಸಿಟಿವಿಗಳ ಅಳವಡಿಕೆಗೆ ನಿರ್ಧಾರ ಮಾಡಲಾಗಿದೆ. 2 ಮೆಗಾ ಪಿಕ್ಸೆಲ್‌ನ 80% IP ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಕೆಂಪುಕೋಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಸುಮಾರು 20%ನಷ್ಟು 4 ಮೆಗಾಫಿಕ್ಸೆಲ್‌ನ IP ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಕೋಟೆಯ ಆವರಣದೊಳಗೆ ಅಳವಡಿಕೆಗೆ ಚಿಂತಿಸಿದೆ.

    ಇಂಟರ್ನೆಟ್ ಪ್ರೊಟೊಕಾಲ್ ಸಿಸಿಟಿವಿ ಕ್ಯಾಮೆರಾಗಳು ಹೆಚ್ಚು ಸ್ಪಷ್ಟತೆ ಹೊಂದಿದ್ದು, ದೃಶ್ಯಗಳಲ್ಲಿ ವಿಶೇಷ ಜೂಮ್ ವ್ಯವಸ್ಥೆ ಹೊಂದಿದೆ. ಅಲ್ಲದೇ ಇದರಲ್ಲಿ ಮುಖ, ಧ್ವನಿ ಪತ್ತೆ ಮಾಡುವ ಸಾಮರ್ಥ್ಯವೂ ಇದೆ. ಅನುಮಾನಾಸ್ಪದ ಜನರ ಚಲನೆಯನ್ನು ಸುಲಭವಾಗಿ ಈ ಕ್ಯಾಮೆರಾಗಳ ಮೂಲಕ ಪತ್ತೆ ಹಚ್ಚಬಹುದಾಗಿದೆ. ಇನ್ನು ಎಂದಿಗಿಂತ ಹೆಚ್ಚು ಪೊಲೀಸ್ ಭದ್ರತೆಯೂ ಇರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಮುಂದಿನ CJI ಆಗಿ ಯು.ಯು.ಲಲಿತ್‌ ಹೆಸರು ಶಿಫಾರಸು

    Live Tv
    [brid partner=56869869 player=32851 video=960834 autoplay=true]