Tag: ಆಗ್ ಸಾನ್ ಸೂಕಿ

  • ಚುನಾವಣಾ ವಂಚನೆ ಪ್ರಕರಣದಲ್ಲಿ ಆಂಗ್ ಸಾನ್ ಸೂಕಿ ತಪ್ಪಿತಸ್ಥೆ- 3 ವರ್ಷ ಜೈಲು

    ಚುನಾವಣಾ ವಂಚನೆ ಪ್ರಕರಣದಲ್ಲಿ ಆಂಗ್ ಸಾನ್ ಸೂಕಿ ತಪ್ಪಿತಸ್ಥೆ- 3 ವರ್ಷ ಜೈಲು

    ನೈಪಿಡಾವ್: ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಶುಕ್ರವಾರ ಚುನಾವಣಾ ವಂಚನೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಅವರಿಗೆ ನ್ಯಾಯಾಧೀಶರು ಕಠಿಣ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ನೊಬೆಲ್ ಪ್ರಶಸ್ತಿ ಪುರಸ್ಕೃತೆ ಹಾಗೂ ಉಚ್ಛಾಟಿತ ನಾಯಕಿಯನ್ನು ಹಲವು ಆರೋಪಗಳ ಮೇಲೆ ಕಳೆದ ವರ್ಷದ ಆರಂಭದಲ್ಲಿಯೇ ಬಂಧಿಸಲಾಗಿದೆ. ಈಗಾಗಲೇ 17 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದ್ದು, ಆಕೆ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

    2020ರಲ್ಲಿ ಮ್ಯಾನ್ಮಾರ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ(ಎನ್‌ಎಲ್‌ಡಿ) ಪಕ್ಷದಲ್ಲಿ ಸೂಕಿ ಅಗಾಧ ಶಾಸಕಾಂಗ ಬಹುಮತ ಪಡೆದು ಗೆದ್ದಿದ್ದರು. ಅವರು ಪ್ರಬಲ ಮಿಲಿಟರಿ ರಚಿಸಿದ ಪಕ್ಷವನ್ನೇ ಸೋಲಿಸಿದ್ದರು. ಆದರೆ ಬಳಿಕ ಅವರು ಚುನಾವಣೆಯಲ್ಲಿ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಇಂದು ಅವರು ತಪ್ಪಿತಸ್ಥೆ ಎಂದು ನಿರ್ಣಯಿಸಲಾಗಿದೆ. ಇದನ್ನೂ ಓದಿ: ಕೋವಿಶೀಲ್ಡ್ ಪಡೆದು ಪುತ್ರಿ ಸಾವು – ಬಿಲ್‌ಗೇಟ್ಸ್ ವಿರುದ್ಧ 1,000 ಕೋಟಿ ಪರಿಹಾರಕ್ಕಾಗಿ ತಂದೆಯ ಕಾನೂನು ಹೋರಾಟ

    76 ವರ್ಷದ ಸೂಕಿ ಅವರು ಭ್ರಷ್ಟಾಚಾರದಂತಹ ಹಲವು ಆರೋಪಗಳ ಮೇಲೆ 1 ವರ್ಷಕ್ಕೂ ಹೆಚ್ಚು ಸಮಯದಿಂದ ವಿಚಾರಣೆಯಲ್ಲಿದ್ದಾರೆ. ಇದಕ್ಕಾಗಿ ಸಂಯೋಜಿತ ಗರಿಷ್ಠ ಶಿಕ್ಷೆ 190 ವರ್ಷಗಳಿಗಿಂತ ಹೆಚ್ಚಾಗಿದೆ. ಸೂಕಿಗೆ ಮಾಧ್ಯಮಗಳೊಂದಿಗೆ ಮಾತನಾಡಲು ಅವಕಾಶವಿಲ್ಲದಿರುವುದರಿಂದ ಅವರ ಈಗಿನ ಕಠಿಣ ಶಿಕ್ಷೆ ಏನು ಎಂಬುದು ಅಸ್ಪಷ್ಟವಾಗಿದೆ. ಇದನ್ನೂ ಓದಿ: ಅರ್ಜೆಂಟೀನಾ ಉಪಾಧ್ಯಕ್ಷೆಗೆ ಗುಂಡಿಕ್ಕಿ ಕೊಲ್ಲಲು ಯತ್ನ – ವೀಡಿಯೋ ವೈರಲ್‌

    Live Tv
    [brid partner=56869869 player=32851 video=960834 autoplay=true]

  • ಮ್ಯಾನ್ಮಾರ್ ಮಾಜಿ ನಾಯಕಿ ಆಂಗ್ ಸಾನ್ ಸೂಕಿಗೆ 4 ವರ್ಷ ಜೈಲು ಶಿಕ್ಷೆ

    ಮ್ಯಾನ್ಮಾರ್ ಮಾಜಿ ನಾಯಕಿ ಆಂಗ್ ಸಾನ್ ಸೂಕಿಗೆ 4 ವರ್ಷ ಜೈಲು ಶಿಕ್ಷೆ

    ನೈಪಿಡಾವ್: ನೋಬೆಲ್ ಶಾಂತಿ ವಿಜೇತೆ ಹಾಗೂ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಮ್ಯಾನ್ಮಾರ್ ಕೋರ್ಟ್ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಚೋದನೆಗೆ ಹಾಗೂ ಕಾನೂನು ಉಲ್ಲಂಘನೆಯ ಆರೋಪದ ಮೇಲೆ ಡಿಸೆಂಬರ್ 6 ರಂದು ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಇದನ್ನೂ ಓದಿ: ಜಿಯೋ ಮಾರ್ಟ್ ವಿರುದ್ಧ ಸಿಡಿದ 4.50 ಲಕ್ಷ ಸೇಲ್ಸ್‌ಮನ್ಸ್

    ಫೆಬ್ರವರಿ 1 ರಂದು ಮಿಲಿಟರಿ ದೇಶದದ ಚುಕ್ಕಾಣಿ ಹಿಡಿದ ಬಳಿಕ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ವಿರುದ್ಧದ ಮೊದಲ ತೀರ್ಪು ಹೊರ ಬಿದ್ದಿದೆ. 76 ವರ್ಷದ ಮಾಜಿ ನಾಯಕಿ ಕೋವಿಡ್-19 ಕಾನೂನುಗಳ ಉಲ್ಲಂಘನೆ, ಅಧಿಕೃತ ಕಾನೂನು ರಹಸ್ಯಗಳ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಪರಿಷತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೀದರ್‌ನಲ್ಲಿ ಕುದುರೆ ವ್ಯಾಪಾರ ಜೋರು

    ಸಾಮಾನ್ಯ ಜನರು ಈ ರೀತಿಯ ತಪ್ಪು ಎಸಗಿದ್ದಲ್ಲಿ 100 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ವರದಿಯಾಗಿದೆ. ಫೆಬ್ರವರಿ 1 ರಂದು ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಮಾಜಿ ನಾಯಕ ವಿನ್ ಮೈಂಟ್ ಕೂಡಾ ಇದೇ ರೀತಿಯಲ್ಲಿ ಜೈಲು ಶಿಕ್ಷೆಯನ್ನು ಪಡೆದಿದ್ದರು.

  • ಜಾಗತಿಕ ಸಮುದಾಯದ ಒತ್ತಡಕ್ಕೆ ಭಯಪಡಲ್ಲ: ಆಂಗ್ ಸಾನ್ ಸೂಕಿ

    ಜಾಗತಿಕ ಸಮುದಾಯದ ಒತ್ತಡಕ್ಕೆ ಭಯಪಡಲ್ಲ: ಆಂಗ್ ಸಾನ್ ಸೂಕಿ

    ನೇಪಿಡಾ: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆ ಆಗುತ್ತಿರುವ ರೋಹಿಂಗ್ಯಾ ಮುಸ್ಲಿಮರ ಸಂಘರ್ಷದಲ್ಲಿ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ ಹೇಳಿದ್ದಾರೆ.

    ಮ್ಯಾನ್ಮಾರ್ ವಿದೇಶಾಂಗ ಸಚಿವೆ ಆಗಿರುವ ಆಂಗ್ ಸಾನ್ ಸೂಕಿ, ತಮ್ಮ ದೇಶದಲ್ಲಿ ನಡೆಯುತ್ತಿರುವ ರೋಹಿಂಗ್ಯಾ ಮುಸ್ಲಿಮ್ ಸಂಘರ್ಷದ ಕುರಿತು ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡುವ ಮೂಲಕ ಮೌನವನ್ನು ಮುರಿದಿದ್ದಾರೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಟೀಕೆಗಳನ್ನು ಎದುರಿಸುತ್ತಿರುವ ಮ್ಯಾನ್ಮಾರ್, ದೇಶದ ಕಾನೂನು ಸುವ್ಯವಸ್ಥೆಯ ರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡುತ್ತದೆಯೇ ಹೊರತು ಜಾಗತಿಕ ಸಮುದಾಯದ ಒತ್ತಡಕ್ಕೆ ಭಯ ಪಡುವುದಿಲ್ಲ. ಇಲ್ಲಿನ ವಸ್ತು ಸ್ಥಿತಿಯನ್ನು ಕಣ್ಣಾರೆ ಕಂಡಾಗ ಮಾತ್ರ ಪರಿಸ್ಥಿತಿಯನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ದೇಶದಲ್ಲಿ ಹಲವು ತಿಂಗಳುಗಳ ಕಾಲ ಶಾಂತಿ ಹಾಗೂ ಸುವ್ಯವಸ್ಥೆ ಸ್ಥಾಪನೆಯಾಗಿತ್ತು. ಆದರೆ ಆಗಸ್ಟ್ 25 ರಂದು 30 ಪೊಲೀಸ್ ಔಟ್‍ಪೋಸ್ಟ್ ಮೇಲೆ ಮುಸ್ಲಿಂ ಶಸ್ತ್ರಸಜ್ಜಿತ ಗುಂಪುಗಳು ದಾಳಿಯನ್ನು ನಡೆಸುವ ಮೂಲಕ ಅಶಾಂತಿಯನ್ನು ಸೃಷ್ಟಿಸಿತ್ತು. ಈ ದಾಳಿಯನ್ನು ನಡೆಸಿದ ಅರ್ಕನ್ ರೋಹಿಂಗ್ಯಾ ಮುಸ್ಲಿಮ್ ಸಂಘಟನೆಯನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಲಾಗಿದೆ ಎಂದರು.

    ಮಾಧ್ಯಮಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ದೇಶದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅಪಪ್ರಚಾರವನ್ನು ಮಾಡುತ್ತಿವೆ. ಬೇರೆ ಯಾವ ಭಾಗದಲ್ಲಿಯೂ ನಡೆಯದ ಘಟನೆಗಳು ಇಲ್ಲಿ ಮಾತ್ರ ಏಕೆ ನಡೆಯುತ್ತಿವೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. 70 ವರ್ಷಗಳ ಅಂತಾರಾಷ್ಟ್ರೀಯ ಸಂಘರ್ಷದ ನಂತರ ಮ್ಯಾನ್ಮಾರ್ ನಲ್ಲಿ ಶಾಂತಿ ನೆಲೆಸಿದೆ. ಹಲವು ಮುಸ್ಲಿಮ್ ಕುಟುಂಬಗಳು ಇಂದಿಗೂ ಮ್ಯಾನ್ಯಾರ್ ಹಳ್ಳಿಗಳಲ್ಲಿ ಉಳಿದುಕೊಂಡಿವೆ ಎಂದು ಮಾಹಿತಿ ನೀಡಿದರು.

    ಮಾನವ ಹಕ್ಕುಗಳ ರಕ್ಷಣೆಗಾಗಿ ದೇಶದ ಎಲ್ಲ ಗಡಿ ಪ್ರದೇಶಗಳನ್ನು ಒಳಗೊಂಡಂತೆ ಪ್ರತ್ಯೇಕ ಸಮಿತಿಯೊಂದನ್ನು ನಮ್ಮ ಸರ್ಕಾರವು ರಚಿಸಿದೆ. ನಮ್ಮ ದೇಶದಲ್ಲಿ ನಾವು ಶಾಂತಿ ನೆಲೆಸುವುದನ್ನು ಬಯಸುತ್ತೇವೆ. ಅಲ್ಲದೆ ಎಲ್ಲಾ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸಹ ಖಂಡಿಸುತ್ತೇವೆ ಎಂದರು.

    ದೇಶವನ್ನು ತೊರೆದಿರುವ 4 ಲಕ್ಷ ರೋಹಿಂಗ್ಯಾ ಮುಸ್ಲಿಮರು ಮತ್ತೆ ಮ್ಯಾನ್ಯಾರ್ ಗೆ ಬರಲು ಬಯಸಿದರೆ ವಾಪಸ್ ಕರೆತರಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ರೋಹಿಂಗ್ಯಾ ಮುಸ್ಲಿಮರಲ್ಲಿ ಸಾಮರಸ್ಯವನ್ನು ತಂದು ದೇಶದಲ್ಲಿ ಮತ್ತೆ ಶಾಂತಿಯನ್ನು ಸ್ಥಾಪಿಸಲು ನಾವು ಮುಂದಾಗುತ್ತೇವೆ. ಈ ರೀತಿಯ ಸಂಘರ್ಷ ನಡೆಯಲು ಕಾರಣ ಏನೆಂಬುದನ್ನು ತಿಳಿಯಲು ನಾವು ರೋಹಿಂಗ್ಯಾರ ಜೊತೆ ಮಾತುಕತೆ ನಡೆಸುತ್ತೇವೆ ಎಂದರು.

    ಮ್ಯಾನ್ಯಾರ್ ಸೇನೆ ರೋಹಿಂಗ್ಯಾ ಮುಸ್ಲಿಮರು ನೆಲೆಸಿರುವ ಗ್ರಾಮಗಳಿಗೆ ತೆರಳಿ ಅವರಿಗೆ ಹಿಂಸೆ ನೀಡಿದ್ದು ಅಲ್ಲದೇ ಅವರನ್ನು ಅಲ್ಲಿಂದ ಓಡಿಸಿದ್ದಾರೆ ಎಂದು ವಿಶ್ವಸಂಸ್ಥೆ ಆರೋಪಿಸಿತ್ತು.

    ಇದನ್ನೂ ಓದಿ: ರೋಹಿಂಗ್ಯಾ ಮುಸ್ಲಿಮರಿಂದ ದೇಶದ ಭದ್ರತೆಗೆ ಅಪಾಯ- ಭಾರತ ಸರ್ಕಾರ