Tag: ಆಗಸ್ಟ್

  • ಕೊರೊನಾ: ಆಗಸ್ಟ್ ಬಿಗ್ ಚಾಲೆಂಜ್‍ಗೆ ಬಿಬಿಎಂಪಿ ಮೆಗಾ ಪ್ಲಾನ್

    ಕೊರೊನಾ: ಆಗಸ್ಟ್ ಬಿಗ್ ಚಾಲೆಂಜ್‍ಗೆ ಬಿಬಿಎಂಪಿ ಮೆಗಾ ಪ್ಲಾನ್

    ಬೆಂಗಳೂರು: ಕೊರೊನಾ ಜುಲೈ ತಿಂಗಳಲ್ಲಿ 48,775 ಕೇಸ್ ದಾಟಿದೆ. ಏಪ್ರಿಲ್, ಮೇ, ಜೂನ್‍ಗಿಂತ ಜುಲೈನಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ನಿತ್ಯ ಕೊರೊನಾ ಪಾಸಿಟಿವ್ ಪ್ರಕರಣ ಸಂಖ್ಯೆ ಶರವೇಗವಾಗಿ ಹೆಚ್ಚಳವಾಗುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಕೊರೊನಾ ಸೋಂಕಿತ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಕೊರೊನಾ ಸೋಂಕಿನ ಹರಡುವಿಕೆ ಹೆಚ್ಚಾಗುವ ಸೂಚನೆ ಲಭಿಸಿರುವುದರಿಂದ ಆಗಸ್ಟ್ ಬಿಗ್ ಚಾಲೆಂಜ್ ಎದುರಿಸಲು ಬೆಂಗಳೂರು ಮಹಾನಗರ ಪಾಲಿಗೆ ಮೆಗಾ ಪ್ಲಾನ್ ಸಿದ್ಧಪಡಿಸಿದೆ.

    ನಗರದಲ್ಲಿ ಕಳೆದ ಒಂದು ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಸಾವಿರ ಲೆಕ್ಕಾದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಲಭ್ಯವಿರುವ 4 ಲಕ್ಷ ಕಿಟ್ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಲ್ಲಿ 2 ಲಕ್ಷ ಕಿಟ್ ಬೆಂಗಳೂರಿಗೆ ಬಳಸಿಕೊಳ್ಳುವ ಚಿಂತನೆ ಇದೆ. ನಿರಂತರವಾಗಿ ನಗರದ 198 ವಾರ್ಡ್ ಗಳಲ್ಲೂ ಕೊರೊನಾ ಟೆಸ್ಟ್ ನಡೆಯಲಿದೆ.

    ಆಗಸ್ಟ್ ಮೊದಲ ದಿನದಿಂದಲೇ ಕಂಟೈನ್‍ಮೆಂಟ್ ನಿಯಮಗಳು ಬದಲಾಗಲಿದೆ. ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ಕಂಟೈನ್‍ಮೆಂಟ್ ಮತ್ತಷ್ಟು ಬಿಗಿ ಮಾಡುವ ಲೆಕ್ಕಾಚಾರ ಬಿಬಿಎಂಪಿ ಮುಂದಿದೆ. ನಗರದ ಸ್ಲಂ, ಬಡ ಹಾಗೂ ಮಧ್ಯಮ ವರ್ಗದ ಜನರು ವಾಸಿಸುವ ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಬಿಬಿಎಂಪಿಯೇ ಅಗತ್ಯ ವಸ್ತು ಕೊಡುವುದು. ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಸಂಬಳ ಕಡಿತವಾದಂತೆ ನಿಗಾ ವಹಿಸುವುದು ಸೇರಿದಂತೆ ಆಕ್ಸಿ ಮೀಟರ್, ಅಗತ್ಯ ಮಾತ್ರೆ ನೀಡುವ ಚಿಂತನೆ ನಡೆದಿದೆ.

    ಮಾಸ್ಕ್ ಹಾಗೂ ಸಾಮಾಜಿಕ ಅಂತರ ವಿಚಾರವಾಗಿ ದಂಡ ಹೆಚ್ಚಿಸಲು ಪಾಲಿಕೆ ಪ್ರಸ್ತಾವನೆ ನೀಡಿದೆ. ಈ ಪ್ರಕಾರ 200 ರೂ. ರಿಂದ 1 ಸಾವಿರ ರೂ. ದಂಡ ಹೆಚ್ಚಳವಾಗುವ ಸಾಧ್ಯತೆ ಇದೆ.

    ನಗರದಲ್ಲಿ ಸದ್ಯ 40 ರಿಂದ 45 ರಷ್ಟು ಮಂದಿ ಹೋ ಐಸೋಲೇಷನ್‍ನಲ್ಲಿದ್ದಾರೆ. ಇಂತಹ ಕೊರೊನಾ ಸೋಂಕಿತರಿಗೆ ಆಕ್ಸಿ ಮೀಟರ್ ನಲ್ಲಿ 95 ರಷ್ಟು ರೇಟಿಂಗ್ ಇದ್ದರೆ ಸಾಂಸ್ಥಿಕ ಕ್ವಾರಂಟೈನ್ ಅಗತ್ಯವಿಲ್ಲ. ರೋಗಗಳಿಗೆ ಅಗತ್ಯವಿರುವ ಔಷಧಿಗಳನ್ನು ಪೂರೈಕೆ ಮಾಡಿದರೆ ಗುಣಮುಖರಾಗುವ ಸಾಧ್ಯತೆ ಇದೆ. ಆದ್ದರಿಂದ ಬಹುತೇಕ ಶೇ.90 ರಷ್ಟು ಮಂದಿಯನ್ನು ಹೋಂ ಐಸೋಲೇಷನಲ್ಲೇ ಉಳಿಯುವಂತೆ ಮಾಡಲು ಚಿಂತನೆ ನಡೆಸಲಾಗಿದೆ.

  • ಆಗಸ್ಟ್ 15ರೊಳಗೆ ಭಾರತ್ ಬಯೋಟೆಕ್‍ನ ‘ಕೋವಾಕ್ಸಿನ್’ ಲಸಿಕೆ ಬಿಡುಗಡೆ

    ಆಗಸ್ಟ್ 15ರೊಳಗೆ ಭಾರತ್ ಬಯೋಟೆಕ್‍ನ ‘ಕೋವಾಕ್ಸಿನ್’ ಲಸಿಕೆ ಬಿಡುಗಡೆ

    – ಕೊರೊನಾಗೆ ಭಾರತದ ಮೊದಲ ಲಸಿಕೆ

    ಹೈದರಾಬಾದ್: ಕೋವಿಡ್ 19ಗೆ ಭಾರತದ ಕಂಪನಿಯೊಂದು ಲಸಿಕೆಯನ್ನು ಕಂಡು ಹಿಡಿದಿದೆ. ಆಗಸ್ಟ್ 15ರೊಳಗೆ ಸಾರ್ವಜನಿಕ ಬಳಕೆಗಾಗಿ ಈ ಲಸಿಕೆ ಬಿಡುಗಡೆ ಮಾಡುವ ಬಗ್ಗೆ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮಾಹಿತಿ ನೀಡಿದೆ.

    ಈ ಕೋವಾಕ್ಸಿನ್ ಎಂಬ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಡುಹಿಡಿದಿದೆ. ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮತ್ತು ರಾಷ್ಟ್ರೀಯ ವೈರಾಲಜಿ ಇನ್‍ಸ್ಟಿಟ್ಯೂಟ್(ಎನ್‍ಐವಿ) ಸಹಭಾಗಿತ್ವದಲ್ಲಿ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ. ಇದೀಗ ಲಸಿಕೆ ಬಿಡುಗಡೆಯ ಬಗ್ಗೆ ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ ಅವರು ಭಾರತ್ ಬಯೋಟೆಕ್ ಮತ್ತು ವೈದ್ಯಕೀಯ ಕಾಲೇಜುಗಳ ಪ್ರಧಾನ ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

    ಕೋವಿಡ್ ಲಸಿಕೆ ಪ್ರಯೋಗ ಪ್ರಕ್ರಿಯೆಯನ್ನು ಪಾಸ್ಟ್ ಟ್ರ್ಯಾಕ್ ವಿಧಾನದಲ್ಲಿ ಪೂರ್ಣಗೊಳಿಸಿ. ಇದರಿಂದ ಆಗಸ್ಟ್ 15ರೊಳಗೆ ಕ್ಲಿನಿಕಲ್ ಪ್ರಯೋಗ ಪ್ರಾರಂಭಿಸಬಹುದು ಎಂದು ಬಲರಾಮ್ ಭಾರ್ಗವ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಐಸಿಎಂಆರ್, ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆ ಮುಖ್ಯಸ್ಥ ಸುರೇಶ್. ಜಿ ಭಾಟೆ ಅವರಿಗೂ ಪತ್ರ ಬರೆದಿದೆ.

    ಈ ಹಿಂದೆ ಭಾರತ್ ಬಯೋಟಿಕ್ ಕಂಪನಿಯ ಆಡಳಿತ ನಿರ್ದೇಶಕ ಕೃಷ್ಣ ಪ್ರತಿಕ್ರಿಯಿಸಿ, ಕೊವಾಕ್ಸಿನ್ ದೇಶದ ಮೊದಲ ಕೋವಿಡ್ 19 ಔಷಧಿ ಎಂದು ಹೇಳಲು ಬಹಳ ಹೆಮ್ಮೆ ಆಗುತ್ತದೆ. ಅಲ್ಲದೆ ಈಗಾಗಲೇ ಎರಡು, ಮೂರು ಸಣ್ಣ ಕಂಪನಿಗಳು ಔಷಧಿ ಅಭಿವೃದ್ಧಿ ಪಡಿಸುತ್ತಿವೆ. ಈ ಕಂಪನಿಗಳು ದೊಡ್ಡ ಕಂಪನಿಗಳ ಸಹಯೋಗದೊಂದಿಗೆ ಔಷಧಿ ತಯಾರಿಸುವ ಕೆಲಸ ಮಾಡುತ್ತಿವೆ. ನಾವು ಔಷಧಿ ನಿರ್ಮಾಣಕ್ಕೆ ಕೈ ಹಾಕಿದ್ದೇವೆ ಎಂದು ಮಾಧ್ಯಮಕ್ಕೆ ತಿಳಿಸಿದ್ದರು.

  • ಆಗಸ್ಟ್ ಬಳಿಕವಷ್ಟೇ ಶಾಲೆ ಕಾಲೇಜು ಪುನಾರಂಭ – ಸಚಿವ ರಮೇಶ್ ಪೋಖ್ರಿಯಾಲ್

    ಆಗಸ್ಟ್ ಬಳಿಕವಷ್ಟೇ ಶಾಲೆ ಕಾಲೇಜು ಪುನಾರಂಭ – ಸಚಿವ ರಮೇಶ್ ಪೋಖ್ರಿಯಾಲ್

    ನವದೆಹಲಿ: ಮಾರ್ಚ್ 16ರಿಂದ ದೇಶದ್ಯಾಂತ ಬಂದ್ ಆಗಿರುವ ಶಾಲೆ ಕಾಲೇಜುಗಳು ಆಗಸ್ಟ್ ಬಳಿಕವಷ್ಟೇ ಪುನಾರಂಭಗೊಳ್ಳಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ ನಿಶಾಂಕ್ ಪೋಖ್ರಿಯಾಲ್ ಸ್ಪಷ್ಟಪಡಿಸಿದ್ದಾರೆ.

    ದೆಹಲಿಯಲ್ಲಿ ನಡೆದ ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಅವರು ಶಾಲೆ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಮಾತನಾಡಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಆಗಸ್ಟ್ ಬಳಿಕ ಶಾಲೆ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಚಿಂತಿಸಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಕರು ಇತರೆ ಸಿಬ್ಬಂದಿಗಳಿಂದ ಪ್ರತ್ಯೇಕ ಮೂರು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.

    ಲಾಕ್‍ಡೌನ್ ವಿನಾಯತಿ ಬಳಿಕ ದೇಶದಲ್ಲಿ ಶಾಲೆ ಕಾಲೇಜು ಪುನಾರಂಭಗೊಳ್ಳುವ ಮಾತುಗಳು ಕೇಳಿ ಬರುತ್ತಿದೆ. ಶಾಲೆ ಕಾಲೇಜುಗಳು ಪುನಾರಂಭಕ್ಕೆ ಸಿದ್ಧತೆ ಮಾಡಿಕೊಳುತ್ತಿದ್ದು, ಜುಲೈನಿಂದ ಶಾಲೆ ಕಾಲೇಜುಗಳು ಶೇಕಡಾ 30% ಹಾಜರಾತಿಯೊಂದಿಗೆ ಬೆಳಗ್ಗೆ ಮತ್ತು ಸಂಜೆಯ ಕ್ಲಾಸ್‍ಗಳು ಆರಂಭವಾಗಲಿದೆ. ಅಲ್ಲದೇ ಹಸಿರು ಕಿತ್ತಳೆ ವಲಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಶುರುವಾಗಲಿದೆ. ರಾಜ್ಯ ಸರ್ಕಾರ ಇದಕ್ಕೆ ಅನುಮತಿ ನೀಡಲಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಶಾಲೆ ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಸದ್ಯ ಅನುಮತಿ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದ್ದಾರೆ.

    ಆದರೆ ಸಿಬಿಎಸ್‍ಸಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಸ್‍ಎಸ್‍ಎಲ್‍ಸಿ ಪಿಯುಸಿ ಹಾಗೂ ಡಿಪ್ಲೋಮಾ, ಪದವಿ ಪರೀಕ್ಷೆಗಳು ಬಾಕಿ ಉಳಿದುಕೊಂಡಿದ್ದು ಆಗಸ್ಟ್ ಅಂತ್ಯದ ವೇಳೆಗೆ ಪರೀಕ್ಷೆ ನಡೆಸಿ ಫಲಿತಾಂಶ ನೀಡುವ ಪ್ರಯತ್ನ ಮಾಡಲಿದ್ದೇವೆ. ಆಗಸ್ಟ್ ಬಳಿಕ ಪರಿಸ್ಥಿತಿ ಅನುಸರಿಸಿ ಶಾಲೆ ಕಾಲೇಜುಗಳನ್ನು ಆರಂಭಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

  • ಚಾರ್ಮಾಡಿ ಘಾಟ್ ಒಂದು ತಿಂಗಳು ಬಂದ್ – ಜಿಲ್ಲಾಧಿಕಾರಿ ಆದೇಶ

    ಚಾರ್ಮಾಡಿ ಘಾಟ್ ಒಂದು ತಿಂಗಳು ಬಂದ್ – ಜಿಲ್ಲಾಧಿಕಾರಿ ಆದೇಶ

    ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿಘಾಟ್ ರಸ್ತೆಗೆ ಭಾರೀ ಮಳೆಯಿಂದ ಹಾನಿಯಾಗಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಎಲ್ಲಾ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ.

    ಭಾರೀ ಮಳೆಗೆ ಚಾರ್ಮಾಡಿ ಘಾಟ್ ಹಲವು ಭಾಗಗಳಲ್ಲಿ ರಸ್ತೆ ಮೇಲೆ ಗುಡ್ಡ ಕುಸಿತವಾಗಿತ್ತು. ಸದ್ಯ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಕಾರ್ಯ ಪೂರ್ಣಗೊಂಡರೂ, ಕೆಲವೆಡೆ ರಸ್ತೆ ಕುಸಿತವಾಗಿರುವುದರಿಂದ ಆಗಸ್ಟ್ 15 ರಿಂದ ಸೆಪ್ಟೆಂಬರ್ 14 ವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

    ಚಿಕ್ಕಮಗಳೂರಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿದೆ. ಇವುಗಳ ದುರಸ್ಥಿಗೆ 1 ತಿಂಗಳ ಸಮಯಾವಕಾಶದ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿರುವುದರಿಂದ ಮಾರ್ಗವನ್ನು ಬಂದ್ ಮಾಡಲಾಗಿದೆ.

    ಕಳೆದ ವರ್ಷದ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿದು ಹಲವು ಬಾರಿ ಸಂಚಾರವನ್ನು ಬಂದ್ ಮಾಡಲಾಗಿತ್ತು. ಈ ಬಾರಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಭಾರೀ ಪ್ರಮಾಣದ ಮರಗಳು ಕೂಡ ರಸ್ತೆ ಮೇಲೆ ಉರುಳಿ ಬಿದ್ದಿದೆ. ರಸ್ತೆಗಳ ಕೆಲ ತಿರುವುಗಳಲ್ಲಿ ರಸ್ತೆ ಭಾಗಶಃ ಕೊಚ್ಚಿ ಹೋಗಿದೆ. ಶತಮಾನಗಳಿಂದಲೂ ತನ್ನ ಸೌಂದರ್ಯ ಉಳಿಸಿಕೊಂಡಿದ್ದ ಚಾರ್ಮಾಡಿ ಘಾಟ್‍ನಲ್ಲಿ ಈಗ ಗುಡ್ಡ ಕುಸಿತವೇ ಕಣ್ಣಿಗೆ ರಾಚುತ್ತಿದ್ದು, ತಿರುವುಗಳಲ್ಲಿ ಭೂಭಾಗ ಬಾಯ್ತೆರೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.

  • ಫಸ್ಟ್ ಟೈಂ ಅಲ್ಟೋ ಹಿಂದಿಕ್ಕಿದ ಡಿಸೈರ್: ಆಗಸ್ಟ್ ನಲ್ಲಿ ಯಾವ ಕಾರು ಎಷ್ಟು ಮಾರಾಟವಾಗಿದೆ?

    ಫಸ್ಟ್ ಟೈಂ ಅಲ್ಟೋ ಹಿಂದಿಕ್ಕಿದ ಡಿಸೈರ್: ಆಗಸ್ಟ್ ನಲ್ಲಿ ಯಾವ ಕಾರು ಎಷ್ಟು ಮಾರಾಟವಾಗಿದೆ?

    ಬೆಂಗಳೂರು: ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಡಿಸೈರ್ ಭಾರತದಲ್ಲಿ ಮಾರಾಟವಾದ ಟಾಪ್-10 ಕಾರುಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್‍ಐಎಎಂ) ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಅವಧಿಯಲ್ಲಿ
    30,934 ಡಿಸೈರ್ ಕಾರುಗಳು ಮಾರಾಟವಾಗಿದ್ದರೆ, 21,521 ಆಲ್ಟೋ ಕಾರುಗಳು ಮಾರಾಟವಾಗಿದೆ.

    ಈ ಪಟ್ಟಿಯಲ್ಲಿ ಮಾರುತಿ ಇಂಡಿಯಾ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದು ಟಾಪ್ 10 ಕಾರುಗಳ ಪಟ್ಟಿಯಲ್ಲಿ 7 ಕಾರುಗಳು ಸ್ಥಾನ ಪಡೆದುಕೊಂಡಿದ್ದರೆ, ಹುಂಡೈ ಕಂಪೆನಿಯ ಮೂರು ಕಾರುಗಳು ಸ್ಥಾನ ಪಡೆದುಕೊಂಡಿದೆ.

    ಯಾವ ಕಾರುಗಳು ಎಷ್ಟು ಮಾರಾಟವಾಗಿದೆ?
    1. ಮಾರುತಿ ಸುಜುಕಿ ಡಿಸೈರ್ – 30,934


    2. ಮಾರುತಿ ಅಲ್ಟೋ – 21,521


    3. ಮಾರುತಿ ಬಲೆನೊ – 17,190


    4. ಮಾರುತಿ ವಿಟಾರಾ ಬ್ರೆಜಾ – 14,396


    5. ಮಾರುತಿ ವ್ಯಾಗನ್ ಆರ್ – 13,907


    6. ಸ್ವಿಫ್ಟ್ – 12,631


    7. ಹುಂಡೈ ಗ್ರಾಂಡ್ ಐ10 – 12,306


    8. ಹುಂಡೈ ಗ್ರಾಂಡ್ ಐ20 – 11,832


    9. ಹುಂಡೈ ಕ್ರೇಟಾ – 10,158


    10. ಸೆಲರಿಯೋ – 9,210