Tag: ಆಗಸ್ಟ್

  • ಆಗಸ್ಟ್ 2ರಂದು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ರಿಲೀಸ್

    ಆಗಸ್ಟ್ 2ರಂದು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ರಿಲೀಸ್

    ಕೆಲ ತಿಂಗಳ ಹಿಂದೆಯಷ್ಟೇ ‘ಆರ್ಟಿಕಲ್ 370’ ಸಿನಿಮಾ ರಿಲೀಸ್ ಆಗಿ ವಿವಾದವೊಂದರ ಕಥೆಯನ್ನು ಹೇಳಲಾಗಿತ್ತು. ಅದರ ಹಿಂದೆಯೂ ದಿ ಕಾಶ್ಮೀರ್ ಫೈಲ್ಸ್, ದಿ ಕೇರಳ ಸ್ಟೋರಿಯಂತಹ ಚಿತ್ರಗಳು ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದ್ದವು. ಈ ಬೆನ್ನಲ್ಲೇ ಮತ್ತೊಂದು ವಿವಾದಿತ ವಿಷಯದ ಚಿತ್ರ ಮೂಡಿ ಬಂದಿತ್ತು. ಅದೇ ದಿ ಸಾಬರಮತಿ ರಿಪೋರ್ಟ್.

    ವಿವಾದಿತ ವಿಷಯವೊಂದನ್ನು ಹೊತ್ತು ರೆಡಿಯಾಗಿರುವ ‘ದಿ ಸಾಬರಮತಿ ರಿಪೋರ್ಟ್’ (The Sabarmati Report) ಸಿನಿಮಾ ಟೀಮ್ ನಿಂದ ಹೊಸ ಸುದ್ದಿಯೊಂದು ಬಂದಿದ್ದು, ಇದೇ ಆಗಸ್ಟ್ 2 (August)ರಂದು ಈ ಸಿನಿಮಾವನ್ನು ದೇಶಾದ್ಯಂತ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರಂತೆ.

    2002ರ ಫೆಬ್ರವರಿ 27 ರಂದು ನಡೆದ ಗೋಧ್ರಾ ರೈಲು ದುರಂತವನ್ನು ಆಧರಿಸಿ ಈ ಸಿನಿಮಾ ಮೂಡಿ ಬಂದಿದ್ದು, ಈ ದುರಂತದಲ್ಲಿ 59 ಜನರ ಸಜೀವ ದಹನವಾಗಿತ್ತು. ಅದರ ಹಿಂದಿನ ಕರಾಳ ಮುಖವನ್ನು ತೋರಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆಯಂತೆ. ಈಗಾಗಲೇ ಚಿತ್ರದ ಟ್ರೈಲರ್ (Trailer) ರಿಲೀಸ್ ಆಗಿದ್ದು, ಪರ ವಿರೋಧದ ಕಾಮೆಂಟ್ ಗಳು ಕೇಳಿ ಬಂದಿವೆ.

     

    ರಂಜನ್ ಚಂಡೇಲ್ (Ranjan Chandel) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ವಿಕ್ರಾಂತ್ ಮಾಸ್ಸಿ (Vikrant Massey) ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇಲ್ಲಿ ಅವರದ್ದು ಪತ್ರಕರ್ತ ಹಾಗೂ ಸುದ್ದಿ ವಾಚನ ಮಾಡುವ ಪಾತ್ರ. ಟ್ರೈಲರ್ ನಲ್ಲೂ ಅದನ್ನು ಸ್ಪಷ್ಟವಾಗಿಯೇ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಸಾಕಷ್ಟು ಸೂಕ್ಷ್ಮ ವಿಚಾರಗಳಿದ್ದು, ಆಗಸ್ಟ್ 2 ರಂದು ಎಲ್ಲದಕ್ಕೂ ಉತ್ತರ ಸಿಗಲಿದೆ.

  • 1901ರ ನಂತರ 2023ರ ಆಗಸ್ಟ್‌ನಲ್ಲೇ ಅತಿ ಕಡಿಮೆ ಮಳೆ ದಾಖಲು

    1901ರ ನಂತರ 2023ರ ಆಗಸ್ಟ್‌ನಲ್ಲೇ ಅತಿ ಕಡಿಮೆ ಮಳೆ ದಾಖಲು

    ವರ್ಷ ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಬಿದ್ದ ಸರಾಸರಿ ಮಳೆಯು 1901ರ ನಂತರ ದಾಖಲಾಗಿರುವ ಮಳೆಯ ಪ್ರಮಾಣಕ್ಕಿಂತ ಅತೀ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಂಕಿ-ಸಂಖ್ಯೆಗಳು ತೋರಿಸಿವೆ.

    ಹೌದು. 2023ರ ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ 16.27 ಸೆಂ.ಮೀಟರ್ ಮಳೆ ಸುರಿದಿದೆ. ಇದು ಸರಾಸರಿಗಿಂತ 36%ದಷ್ಟು ಕಡಿಮೆಯಾಗಿದೆ. ಈ ತಿಂಗಳಿನಲ್ಲಿ ಸರಾಸರಿ 25.4 ಸೆಂಟಿಮೀಟರ್ ಮಳೆ ಸುರಿಯುತ್ತದೆ. ಇದಕ್ಕಿಂತ ಮೊದಲು ಅಂದರೆ 2005ರಲ್ಲಿ ಇಡೀ ದೇಶದಲ್ಲಿಯೇ ಆಗಸ್ಟ್ ತಿಂಗಳಿನಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಈ ವರ್ಷ ದೇಶಾದ್ಯಂತ ಸರಾಸರಿ 19.12 ಮೀಟರ್ ಮಳೆ ಸುರಿದಿತ್ತು. ದೇಶದಲ್ಲಿ ಸುಮಾರು 36% ರಷ್ಟು ಜಿಲ್ಲೆಗಳು ಅಂದರೆ 263 ಜಿಲ್ಲೆಗಳಲ್ಲಿ ಸರಾಸರಿಗಿಂತ 20% ಅಥವಾ ಅದಕ್ಕಿಂತ ಹೆಚ್ಚಿನ ಮಳೆ ಕೊರತೆ ಕಾಣಿಸಿಕೊಂಡಿದೆ ಎಂಬುದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಮಳೆ ಕೊರತೆಯಿಂದಾಗಿ ತಾಪಮಾನ ಏರಿಕೆ ಕಂಡಿದೆ.

    ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಆಗಸ್ಟ್ ನಲ್ಲಿ ಬೀದರ್ ಜಿಲ್ಲೆಯಲ್ಲಿ ಗರಿಷ್ಠ (89%) ಮಳೆ ಕೊರತೆಯಾಗಿದೆ. ಆರು ಜಿಲ್ಲೆಗಳಲ್ಲಿ ವಾಡಿಕೆಗಿಂತ 80% ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಅಭಾವವಾಗಿದೆ. ಕರಾವಳಿ ಭಾಗದಲ್ಲಿ 72% ರಷ್ಟು, ಮಲೆನಾಡಿನಲ್ಲಿ 80% ರಷ್ಟು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ 71% ರಷ್ಟು ಮಳೆ ಕೊರತೆಯಾಗಿದೆ. ಇದನ್ನೂ ಓದಿ: ದೇಶಕ್ಕೆ ಭಾರತ ಎಂಬ ಹೆಸರೇಕೆ ಬಂತು? ಇಂಡಿಯಾ ಹೆಸರು ಹೇಗೆ ಬಂತು?

    ಇತ್ತ ಬಿಹಾರ, ಪೂರ್ವ ಉತ್ತರಪ್ರದೇಶ, ಜಾರ್ಖಂಡ್, ಛತ್ತೀಸ್‍ಗಢ, ಗಂಗಾ ನದಿ ತೀರದ ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕದ ಕೆಲವು ಭಾಗಗಳು ಮತ್ತು ಮಹಾರಾಷ್ಟ್ರದಲ್ಲಿ ಕಡಿಮೆ ಮಳೆಯಾಗಿದೆ. ಅದೇ ವೇಳೆ, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆ ಸಾಮಾನ್ಯ ಪ್ರಮಾಣದಲ್ಲಿತ್ತು. ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ದಾಖಲಾದ ಸರಾಸರಿ 32.09 ಡಿಗ್ರಿ ಸೆಲ್ಸಿಯಸ್ ಉಷ್ಣತೆಯೂ 1901 ರ ಬಳಿಕದ ಗರಿಷ್ಠವಾಗಿದೆ. ಇದು ಸರಾಸರಿ 31.09 ಡಿಗ್ರಿ ಸೆಲ್ಸಿಯಸ್‍ಗಿಂತ ಒಂದು ಡಿಗ್ರಿಯಷ್ಟು ಹೆಚ್ಚಾಗಿದೆ.

    ಆಗಸ್ಟ್ ನಲ್ಲಿ ಕಡಿಮೆ ಮಳೆಗೆ ಕಾರಣಗಳೇನು?: ಆಗಸ್ಟ್ ನಲ್ಲಿ ಕಡಿಮೆ ಮಳೆಯಾಗಲು ಹವಾಮಾನಶಾಸ್ತ್ರಜ್ಞರು ಕೆಲವು ತಕ್ಷಣದ ಕಾರಣಗಳನ್ನು ನೀಡಿದ್ದಾರೆ. ಎಲ್ ನಿನೊ ಹವಾಮಾನ ಪರಿಸ್ಥಿತಿ ಹಾಗೂ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ನಿರ್ಮಾಣಗೊಂಡಿರುವ ಪ್ರತಿಕೂಲ ಸ್ಥಿತಿಗತಿಗಳು ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

    ಪೂರ್ವ ಮತ್ತು ಮಧ್ಯ ಶಾಂತ ಸಾಗರದ ಮೇಲ್ಮೈ ಬಿಸಿಯಾಗುವುದನ್ನು ಎಲ್ ನಿನೊ ಎಂದು ಕರೆಯಲಾಗುತ್ತದೆ. ಅದು ಮಳೆ ಕೊರತೆ, ಬೆಳೆ ಹಾನಿ, ಬೆಂಕಿ ಮತ್ತು ದಿಢೀರ್ ಪ್ರವಾಹಗಳಿಗೆ ಕಾರಣವಾಗುತ್ತದೆ. ಎಲ್ ನಿನೋ ಸಕ್ರಿಯವಾಗಿದ್ದಾಗ, ಭಾರತದಲ್ಲಿ ಮಾನ್ಸೂನ್ ದುರ್ಬಲಗೊಳ್ಳುತ್ತದೆ. ಇದರಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಬರಗಾಲ ಎದುರಾಗಿದೆ. ಎಲ್ ನಿನೊ ಕಳೆದ 65 ವರ್ಷಗಳಲ್ಲಿ 14 ಬಾರಿ ಪೆಸಿಫಿಕ್ ಸಾಗರದಲ್ಲಿ ಸಕ್ರಿಯವಾಗಿದೆ. ಈ ಬಾರಿ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಬರಗಾಲವಿತ್ತು. ಇದೇ ವೇಳೆ 5 ಬಾರಿ ಬರ ಬಂದರೂ ಅದರ ಪ್ರಭಾವ ಅಲ್ಪ ಪ್ರಮಾಣದಲ್ಲಿತ್ತು ಎಂದು ಮಾಪನಶಾಸ್ತ್ರ ಮತ್ತು ಹವಾಮಾನ ಬದಲಾವಣೆ ಸ್ಕೈಮೆಟ್ ಅಧ್ಯಕ್ಷ ಜಿ.ಪಂ. ಶರ್ಮಾ ಅವರು 1991 ರಂತಹ ಪರಿಸ್ಥಿತಿ 2023 ರಲ್ಲಿ ಉದ್ಭವಿಸುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ, ಸಾಮಾನ್ಯಕ್ಕಿಂತ 10 ಪ್ರತಿಶತ ಕಡಿಮೆ ಮಳೆಯಾಗಿದ್ದರೆ, ಹವಾಮಾನಶಾಸ್ತ್ರದ ವ್ಯಾಖ್ಯಾನದಲ್ಲಿ ಅದನ್ನು ಸೌಮ್ಯ ಬರ ಅಥವಾ ಮಧ್ಯಮ ಬರಗಾಲ ಎಂದು ಕರೆಯಲಾಗುತ್ತದೆ.

    ಆಗಸ್ಟ್ ನಲ್ಲಿ ಮಳೆ ಕಡಿಮೆಯಾಗಿ ಜನಸಾಮಾನ್ಯರ ಮೇಲೆ ಯಾವ ಪರಿಣಾಮ ಬೀರಲಿದೆ?: ಭಾರತದಲ್ಲಿ, ಹೊಲಗಳು, ಕೊಳಗಳು ಮತ್ತು ನೀರಿನ ಮೂಲಗಳನ್ನು ತುಂಬಲು 70% ನೀರು ಮಳೆಯಿಂದ ಪೂರೈಸುತ್ತದೆ. ದಕ್ಷಿಣ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಆಗಸ್ಟ್‍ನಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ. ಮುಂಗಾರು ಆರಂಭವಾದ ನಂತರ ರೈತರು ಭತ್ತ, ಜೋಳ, ಸೋಯಾಬೀನ್, ಕಬ್ಬು, ಶೇಂಗಾ ಇತ್ಯಾದಿ ಬಿತ್ತನೆ ಮಾಡುತ್ತಾರೆ. ದೀರ್ಘಕಾಲದ ಬರದಿಂದಾಗಿ, ಇದು ಮಣ್ಣಿನಲ್ಲಿ ಉಳಿಯಲಿಲ್ಲ, ಇದು ಬೆಳೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರಿತು. ಬೆಳೆಗಳು ಮಳೆಗಾಗಿ ಹತಾಶವಾಗಿವೆ, ಯಾವುದೇ ವಿಳಂಬವು ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರ ಫಲಿತಾಂಶವು ಆಹಾರ ಧಾನ್ಯಗಳ ಹಣದುಬ್ಬರದ ರೂಪದಲ್ಲಿ ಕಂಡುಬರುತ್ತದೆ.

    ಸೆಪ್ಟಂಬರ್‌ ನಲ್ಲಿ ಪರಿಸ್ಥಿತಿ ಸುಧಾರಣೆ?: ಮಳೆ ಪರಿಸ್ಥಿತಿಯು ಸೆಪ್ಟೆಂಬರ್ ತಿಂಗಳಲ್ಲಿ ಸುಧಾರಿಸುವ ಸಾಧ್ಯತೆಯಿದೆ. ಮಳೆಗಾಲದಲ್ಲಿ ಮಳೆರಹಿತ ಅವಧಿ ಹೆಚ್ಚುತ್ತಿದೆ. ಆದರೆ ಸೆಪ್ಟಂಬರ್ 2ರ ಬಳಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ದೇಶದ ಪೂರ್ವದ ಭಾಗಗಳು ಮತ್ತು ಸಮುದ್ರ ಆವರಿತ ದಕ್ಷಿಣದಲ್ಲಿ ಮಳೆ ಪುನರಾರಂಭಗೊಳ್ಳಲಿದೆ. ಬಳಿಕ ಅದು ನಿಧಾನವಾಗಿ ದೇಶದ ಇತರ ಭಾಗಗಳನ್ನು ವ್ಯಾಪಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಹಾರ ಪದಾರ್ಥಗಳು ದುಬಾರಿ – ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ

    ಆಹಾರ ಪದಾರ್ಥಗಳು ದುಬಾರಿ – ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ

    ನವದೆಹಲಿ: ಜುಲೈನಲ್ಲಿ ಶೇ. 6.71ರಷ್ಟಿದ್ದ ಭಾರತದ ಚಿಲ್ಲರೆ ಹಣದುಬ್ಬರವು(Retail Inflation) ಆಗಸ್ಟ್‌ನಲ್ಲಿ ಶೇ. 7ಕ್ಕೆ ಏರಿಕೆ ಕಂಡಿದೆ. ಮುಖ್ಯವಾಗಿ ಆಹಾರ ಪದಾರ್ಥಗಳ(Food items) ಬೆಲೆಯಲ್ಲಿ ಏರಿಕೆಯಾಗಿದೆ. ಸರ್ಕಾರದ ಅಂಕಿಅಂಶಗಳಿಂದ ತಿಳಿದುಬಂದಿದೆ.

    ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳು ಸಹ ಚಿಲ್ಲರೆ ಹಣದುಬ್ಬರ ಏರುಮುಖವಾಗಿತ್ತು, ಜೂನ್‍ನಲ್ಲಿ ಈ ದರವು ಶೇ. 7.01ಕ್ಕೆ ತಲುಪಿತ್ತು. ಸತತ 8ನೇ ತಿಂಗಳು ಈ ದರವು ಶೇ. 6ರಕ್ಕಿಂತಲೂ ಅಧಿಕ ಮಟ್ಟದಲ್ಲಿ ಮುಂದುವರಿದಿದೆ. ಭಾರತೀಯ ರಿಸರ್ವ್ ಬ್ಯಾಂಕ್(RBI) (ಆರ್‌ಬಿಐ) ಚಿಲ್ಲರೆ ಹಣದುಬ್ಬರಕ್ಕೆ ಶೇ.6ರ ಮಿತಿ ನಿಗದಿಪಡಿಸಿದೆ.

    ಆಹಾರ ಪದಾರ್ಥಗಳ ಹಣದುಬ್ಬರ ದರವು ಆಗಸ್ಟ್‌ನಲ್ಲಿ (August) ಶೇ. 7.62ಕ್ಕೆ ಹೆಚ್ಚಳವಾಗಿದೆ. ಈ ದರವು ಜುಲೈನಲ್ಲಿ ಶೇ. 6.75ಕ್ಕೆ ಇಳಿಕೆಯಾಗಿತ್ತು. ಮಳೆ ಹಾಗೂ ಬೆಳೆ ಹಾನಿಯ ಕಾರಣಗಳಿಂದ ತರಕಾರಿ(Vegetables) ಬೆಲೆ ಏರಿಕೆ ಆಗಿದ್ದು, ತರಕಾರಿ ಹಣದುಬ್ಬರವು ಆಗಸ್ಟ್‌ನಲ್ಲಿ ಶೇ 13.23ಕ್ಕೆ ತಲುಪಿದೆ. ಇದನ್ನೂ ಓದಿ: ಆಟೋ ಚಾಲಕನ ಮನೆಯಲ್ಲಿ ಊಟ ಮಾಡಿದ ಕೇಜ್ರಿವಾಲ್ – ರಿಕ್ಷಾದಲ್ಲೇ ಪ್ರಯಾಣಿಸಿ ಸರಳತೆ ಮೆರೆದ್ರು

    ವಾರ್ಷಿಕ ಆಧಾರದ ಮೇಲೆ ತರಕಾರಿಗಳು, ಸಾಂಬಾರ್ ಪದಾರ್ಥಗಳು, ಪಾದರಕ್ಷೆಗಳು ಮತ್ತು ‘ಇಂಧನ ಮತ್ತು ಲೈಟ್’ ಬೆಲೆ ಏರಿಕೆಯ ದರವು ಶೇಕಡಾ 10 ಕ್ಕಿಂತ ಹೆಚ್ಚಾಗಿದೆ. ಕಳೆದ ತಿಂಗಳಿನಲ್ಲಿ ಮೊಟ್ಟೆಯ(Egg) ಮೇಲೆ ಹಣದುಬ್ಬರ ಕಡಿತವಾಗಿರುವುದು ಕಂಡುಬಂದಿದೆ. ‘ಮಾಂಸ ಮತ್ತು ಮೀನು’ಗಳ(Meat-Fish) ದರ ಬಹುತೇಕ ಸಮತಟ್ಟಾಗಿದೆ.

    ಸತತ ಮೂರು ತ್ರೈಮಾಸಿಕಗಳಲ್ಲಿ ಸರಾಸರಿ ಹಣದುಬ್ಬರವು ಶೇ. 2ರಿಂದ 6ರ ಮಿತಿಯನ್ನು ದಾಟಿದೆ. ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಆರ್‌ಬಿಐ ಮತ್ತೆ ರೆಪೋ ದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ರೆಪೋ ದರ ಹೆಚ್ಚಳವಾದರೆ, ಗೃಹ ಸಾಲ,(Home Loan) ವಾಹನ ಸಾಲ (Vehicle Loan) ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿ ದರಗಳನ್ನು(Interest Rate) ಬ್ಯಾಂಕ್‍ಗಳು ಮತ್ತೆ ಏರಿಕೆ ಮಾಡುತ್ತವೆ.

    ಆಗಸ್ಟ್‌ನಲ್ಲಿ ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಭಾಗಗಳಲ್ಲಿ ಹಣದುಬ್ಬರವು ತೀವ್ರ ಏರಿಕೆ ಕಂಡಿದ್ದು, ಗ್ರಾಮೀಣ ಭಾಗದ ಹಣದುಬ್ಬರವು ಹಿಂದಿನ ಶೇ.6.8ರಿಂದ ಶೇ.7.15ಕ್ಕೆ ಹೆಚ್ಚಳವಾಗಿದೆ. ನಗರದ ಹಣದುಬ್ಬರವು ಶೇ.6.72ರಷ್ಟಿದೆ. ಇದನ್ನೂ ಓದಿ: ಸಚಿವ ಆನಂದ್ ಸಿಂಗ್, ಕಾರ್ಪೊರೇಟರ್ ನಡುವೆ ರಾಜೀನಾಮೆ ಸಮರ

    ಜುಲೈನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆಯು ಶೇ. 2.4 ರಷ್ಟು ಏರಿಕೆಯಾಗಿದೆ. 2021ರ ಜುಲೈನಲ್ಲಿ ಐಐಪಿ ಶೇ.11.5% ರಷ್ಟು ಬೆಳೆದಿದೆ. ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (ಎನ್‍ಎಸ್‍ಒ) ಬಿಡುಗಡೆ ಮಾಡಿದ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ದತ್ತಾಂಶದ ಪ್ರಕಾರ, ಉತ್ಪಾದನಾ ವಲಯದಲ್ಲಿನ ಉತ್ಪಾದನೆಯು 2022ರ ಜುಲೈನಲ್ಲಿ ಶೇ. 3.2 ರಷ್ಟು ಮುಟ್ಟಿದೆ. ಏಪ್ರಿಲ್ 2020ರಲ್ಲಿ ಕೊರೊನಾ ವೈರಸ್(Corona Virus) ಸೋಂಕಿನಿಂದಾಗಿ ವಿಧಿಸಲಾಗಿದ್ದ ಲಾಕ್‍ಡೌನ್ (Lockdown) ಹಿನ್ನೆಲೆ ಆರ್ಥಿಕ ಚಟುವಟಿಕೆಗಳಲ್ಲಿನ ಕುಸಿತದಿಂದಾಗಿ ಕೈಗಾರಿಕಾ ಉತ್ಪಾದನೆಯು ಶೇ. 57.3 ರಷ್ಟು ಕುಸಿದಿದೆ.

    ಜನಸಾಮಾನ್ಯರಿಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಜತೆಗೆ ಅಕ್ಕಿ ದರ ಹೆಚ್ಚಳದ ಶಾಕ್ ಕೂಡಾ ಸದ್ದಿಲ್ಲದೆ ತಟ್ಟಿದೆ. ಸಾಮಾನ್ಯವಾಗಿ ಕೆಜಿಗೆ 1 ಅಥವಾ 2 ರೂ. ಏರಿಕೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ಕೇವಲ ಎರಡು ತಿಂಗಳಲ್ಲಿ ಕೆಜಿಗೆ 8-10 ರೂ.ವರೆಗೆ ಏರಿಕೆಯಾಗಿದೆ. ಜುಲೈ ಕೊನೆ ವಾರದಲ್ಲಿ ಇದ್ದ ಅಕ್ಕಿ ದರಕ್ಕೂ, ಈಗಿನ ದರಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಅಸಹಜ ರೀತಿಯಲ್ಲಿ ಬೆಲೆ ಏರಿಕೆಯಾಗಿದೆ.

     

     

    Live Tv
    [brid partner=56869869 player=32851 video=960834 autoplay=true]

  • ಆಗಸ್ಟ್ 31 ರಿಂದ ವಿಮಾನ ಪ್ರಯಾಣ ದುಬಾರಿ – ಶುಲ್ಕ ಮುಕ್ತಗೊಳಿಸಿದ ಸರ್ಕಾರ

    ಆಗಸ್ಟ್ 31 ರಿಂದ ವಿಮಾನ ಪ್ರಯಾಣ ದುಬಾರಿ – ಶುಲ್ಕ ಮುಕ್ತಗೊಳಿಸಿದ ಸರ್ಕಾರ

    ನವದೆಹಲಿ: ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ವಿಮಾನ ಪ್ರಯಾಣ ದರದ ಮೇಲಿನ ಮಿತಿಗಳನ್ನು ಇದೀಗ ಸರ್ಕಾರ ಕೊನೆಗೊಳಿಸಲು ನಿರ್ಧರಿಸಿದ್ದು, ಆಗಸ್ಟ್ 31 ರಿಂದ ಪ್ರಯಾಣಿಕರಿಗೆ ಶುಲ್ಕ ವಿಧಿಸಲು ವಿಮಾನಯಾನ ಸಂಸ್ಥೆಗಳಿಗೆ ಮುಕ್ತ ಅವಕಾಶ ಕಲ್ಪಿಸಿಕೊಡಲು ಕೇಂದ್ರ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ.

    ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೈನಂದಿನ ಬೇಡಿಕೆ ಮತ್ತು ವಿಮಾನ ಇಂಧನ (ಎಟಿಎಫ್) ಬೆಲೆಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದ ನಂತರ ವಿಮಾನ ಪ್ರಯಾಣ ದರದ ಮೇಲಿನ ಮಿತಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಿಧಾನವಾಗಿ ವಿಮಾನಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆ ಕಾಣುತ್ತಿದೆ. ದೇಶೀಯ ಸಂಚಾರಕ್ಕೆ ವಿಮಾನಗಳು ಸಿದ್ಧವಾಗಿದೆ ಎಂದು ನಮಗೆ ವಿಶ್ವಾಸವಿದೆ. ಹಾಗಾಗಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಶುಲ್ಕ ವಿಧಿಸಲು ಮುಕ್ತ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಜಗತ್ತಿನಲ್ಲಿ 5 ವರ್ಷ ಕದನ ವಿರಾಮಕ್ಕೆ ಮೋದಿ ಸಮಿತಿ ರಚಿಸಿ: ಮೆಕ್ಸಿಕೋ ಅಧ್ಯಕ್ಷ

    ವಿಮಾನಗಳ ದೇಶೀಯ ಕಾರ್ಯಾಚರಣೆಗಳ ಪ್ರಸ್ತುತ ಸ್ಥಿತಿಯನ್ನು ಗಮನಿಸಿದ ಬಳಿಕ 2022ರ ಆಗಸ್ಟ್ 31 ರಿಂದ ಅನ್ವಯವಾಗುವಂತೆ ಶುಲ್ಕದ ಮಿತಿಯನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ವಿಮಾನಯಾನ ಸಚಿವಾಲಯ ಬುಧವಾರ ಆದೇಶಿಸಿದೆ. ಕೊರೊನಾ ಆರಂಭಗೊಂಡು ವಿಮಾನಯಾನ ನಿರ್ಬಂಧದ ಬಳಿಕ 2020ರ ಮೇ 25 ರಂದು ವಿಮಾನಯಾನ ಸಂಸ್ಥೆಗಳು ಪುನರಾರಂಭಗೊಂಡಾಗ ವಿಮಾನಯಾನದ ಅವಧಿಯನ್ನು ಅವಲಂಬಿಸಿ ಸಚಿವಾಲಯವು ದೇಶೀಯ ವಿಮಾನ ದರಗಳ ಮೇಲೆ ಕಡಿತ ಮತ್ತು ಮಿತಿಗಳನ್ನು ವಿಧಿಸಿತ್ತು. ಇದನ್ನೂ ಓದಿ: 4 ವರ್ಷಗಳಿಂದ ಸ್ಥಗಿತವಾಗಿದ್ದ ಮೈ ಶುಗರ್‌ ಕಾರ್ಖಾನೆ ಇಂದಿನಿಂದ ಆರಂಭ

    Live Tv
    [brid partner=56869869 player=32851 video=960834 autoplay=true]

  • ಆಗಸ್ಟ್ ನಲ್ಲಿ ಕನ್ನಡದ ಬಿಗ್ ಬಾಸ್ ಶುರು:  ಕಾಫಿನಾಡು ಚಂದುಗೆ ಅವಕಾಶ ನೀಡಿ ಎಂದ ನೆಟ್ಟಿಗರು

    ಆಗಸ್ಟ್ ನಲ್ಲಿ ಕನ್ನಡದ ಬಿಗ್ ಬಾಸ್ ಶುರು: ಕಾಫಿನಾಡು ಚಂದುಗೆ ಅವಕಾಶ ನೀಡಿ ಎಂದ ನೆಟ್ಟಿಗರು

    ನ್ನಡದ ಬಿಗ್ ಬಾಸ್ ಈ ಬಾರಿ ಎರಡು ವೇದಿಕೆಯಲ್ಲಿ ಮೂಡಿ ಬರಲಿದೆ. ಮೊದಲು ವೂಟ್ಸ್ ಓಟಿಟಿಯಲ್ಲಿ ಪ್ರಸಾರವಾದರೆ, ಟಿವಿಗಾಗಿಯೇ ಮತ್ತೊಂದು ಶೋ ಚಿತ್ರೀಕರಣ ಮಾಡಲಾಗುವುದು ಎಂದಿದೆ ಕಲರ್ಸ್ ಕನ್ನಡ ವಾಹಿನಿ. ಸೀಸನ್ 8 ಯಶಸ್ವಿಯಾಗಿ ಮುಗಿಸಿರುವ ವಾಹಿನಿಯು ಇದೀಗ ಸೀಸನ್ 9ಕ್ಕೆ ಕಾಲಿಟ್ಟಿದೆ. ಓಟಿಟಿಗಾಗಿ ಮತ್ತು ಟಿವಿಗಾಗಿ ಬೇರೆ ಬೇರೆ ಸೀಸನ್ ಗಳನ್ನು ಚಿತ್ರೀಕರಣ ಮಾಡುವುದಾಗಿ ವಾಹಿನಿ ಹೇಳಿಕೊಂಡಿದೆ.

    ಮೊದಲು ಓಟಿಟಿಯಲ್ಲಿ ಬಿಗ್ ಬಾಸ್ ಸೀಸನ್ 9 ಶುರುವಾಗಲಿದ್ದು, ಆಗಸ್ಟ್ ನಲ್ಲಿ ಪ್ರಸಾರವಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಈಗಾಗಲೇ ಬಿಗ್ ಬಾಸ್ ಮನೆ ಸಿಂಗಾರಗೊಳ್ಳುತ್ತಿದ್ದು, ಮೊನ್ನೆಯಷ್ಟೇ ಪ್ರೋಮೋ ಕೂಡ ಶೂಟ್ ಮಾಡಲಾಗಿದೆ. ಪ್ರೊಮೋ ಶೂಟ್ ನಲ್ಲಿ ಸುದೀಪ್ ಭಾಗಿಯಾಗಿದ್ದು, ಕೆಲವೇ ದಿನಗಳಲ್ಲೇ ಈ ಪ್ರೊಮೋ ನೋಡಬಹುದಾಗಿದೆಯಂತೆ. ಇದನ್ನೂ ಓದಿ:ಸುಶ್ಮಿತಾ ಸೇನ್ ಬಲೆಗೆ ಬಿದ್ದ ಲಲಿತ್ ಮೋದಿ : ನಾನು ಲಂಚ ತಗೆದುಕೊಂಡು ದೇಶ ಬಿಟ್ಟಿಲ್ಲ ಎಂದು ತಿರುಗೇಟು

    ಈಗಾಗೇ ದೊಡ್ಡಮನೆಗೆ ಯಾರೆಲ್ಲ ಹೋಗಬಹುದು ಎಂಬ ಚರ್ಚೆ ಶುರುವಾಗಿದ್ದು, ಕೆಲವು ಹೆಸರುಗಳು ಹರಿದಾಡುತ್ತಿವೆ. ನಿರ್ದೇಶಕ ನವೀನ್ ಕೃಷ್ಣ, ಪವಿತ್ರಾ ಲೋಕೇಶ್, ಗುರೂಜಿ ಸೇರಿದಂತೆ ಈ ಪಟ್ಟಿಯಲ್ಲಿದ್ದಾರೆ. ಈ ಯಾದಿಯಲ್ಲಿ ಕಾಫಿನಾಡು ಚಂದುಗೆ ಅವಕಾಶ ನೀಡುವಂತೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ವಾಹಿನಿಗೆ ಮನವಿ ಮಾಡಿಕೊಂಡಿದ್ದಾರೆ. ಆಟೋ ಡ್ರೈವರ್ ಆಗಿರುವ ಕಾಫಿನಾಡು ಚಂದು ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಮ್ಮದೇ ಆದ ರೀತಿಯಲ್ಲಿ ಹೇಳುತ್ತಾರೆ. ಇವರು ವಿಡಿಯೋಗಳು ಸಖತ್ ವೈರಲ್ ಆಗುತ್ತವೆ.

    Live Tv
    [brid partner=56869869 player=32851 video=960834 autoplay=true]

  • ಆಗಸ್ಟ್ ಮೂರನೇ ವಾರದಲ್ಲಿ ರವಿಚಂದ್ರನ್ ಪುತ್ರನ ಮದುವೆ: ಹಸೆಮಣೆ ಏರಲು ಮನೋರಂಜನ್ ಸಿದ್ಧತೆ

    ಆಗಸ್ಟ್ ಮೂರನೇ ವಾರದಲ್ಲಿ ರವಿಚಂದ್ರನ್ ಪುತ್ರನ ಮದುವೆ: ಹಸೆಮಣೆ ಏರಲು ಮನೋರಂಜನ್ ಸಿದ್ಧತೆ

    ಗಾಗಲೇ ಪುತ್ರಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಿ ಮುಗಿಸಿರುವ ಕ್ರೇಜಿಸ್ಟಾರ್ ರವಿಚಂದ್ರನ್, ಇದೀಗ ಹಿರಿಯ ಮಗನ ಮದುವೆಗೂ ಸಿದ್ಧತೆ ನಡೆಸಿದ್ದಾರೆ. ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ಹುಡುಗಿಯನ್ನು ಮನೋರಂಜನ್ ಕೈ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ಸ್ವತಃ ರವಿಚಂದ್ರನ್ ಅವರೇ ಹುಡುಗಿಯನ್ನು ಹುಡುಕಿದ್ದಾರಂತೆ.

    ತಂದೆಯಂತೆಯೇ ಸಿನಿಮಾ ರಂಗದಲ್ಲೇ ಮುಂದುವರೆದಿರುವ ಮನೋರಂಜನ್, ಈಗಾಗಲೇ ಹಲವು ಚಿತ್ರಗಳ್ಲಲಿ ನಟಿಸಿದ್ದಾರೆ. ಒಂದು ದೊಡ್ಡ ಗೆಲುವಿಗಾಗಿ ಕಾಯುತ್ತಿದ್ದಾರೆ. ಈ ವೇಳೆಯೇ ಮಗನಿಗೆ ಮದುವೆ ಮಾಡಲು ರವಿಚಂದ್ರನ್ ಸಿದ್ಧತೆ ನಡೆಸಿದ್ದಾರೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ ನಿವಾಸಿ ಆಗಿರುವ ಹುಡುಗಿಯೊಂದಿಗೆ ಆಗಸ್ಟ್ 21 ಹಾಗೂ 22 ರಂದು ಬೆಂಗಳೂರಿನಲ್ಲೇ ಮನೋರಂಜನ್ ಸಪ್ತಪದಿ ತುಳಿಯಲಿದ್ದಾರೆ ಎನ್ನುತ್ತಿವೆ ಮೂಲಗಳು. ಇದನ್ನೂ ಓದಿ:ನಟ ಶಿವರಂಜನ್ ಬೋಳ್ಳಣ್ಣವರ್ ಮೇಲೆ ಗುಂಡಿನ ದಾಳಿ

    ರವಿಚಂದ್ರನ್ ಕುಟುಂಬದಲ್ಲಿ ಸದ್ದಿಲ್ಲದೇ ಮದುವೆ ಸಿದ್ಧತೆಗಳು ನಡೆದಿದ್ದು, ಕೆಲವೇ ದಿನಗಳಲ್ಲೇ ದಕ್ಷಿಣ ಭಾರತದ ಅನೇಕ ಗಣ್ಯರಿಗೆ ಮದುವೆ ಆಮಂತ್ರಣ ನೀಡಲಿದ್ದಾರಂತೆ ಕ್ರೇಜಿಸ್ಟಾರ್. ಮಗಳ ಮದುವೆಯನ್ನು ವಿಭಿನ್ನವಾಗಿ ಮಾಡಿದ್ದ ಕ್ರೇಜಿಸ್ಟಾರ್ ಮಗನ ಮದುವೆಗಾಗಿ ಇನ್ನೇನು ಆಲೋಚನೆ ಮಾಡಿದ್ದಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    Live Tv
    [brid partner=56869869 player=32851 video=960834 autoplay=true]

  • ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್  ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?

    ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?

    ಬಾಲಿವುಡ್ ಅಂಗಳದಲ್ಲಿ ಬಿಗ್ ಫೈಟ್ ಗೆ ವೇದಿಕೆ ಸಜ್ಜಾಗುತ್ತಿದೆ. ಬಿಟೌನ್ ನ ಇಬ್ಬರು ಸೂಪರ್ ಸ್ಟಾರ್ ಗಳ ಚಿತ್ರಗಳು ಆಗಸ್ಟ್ 11ಕ್ಕೆ ಬಿಡುಗಡೆ ಆಗುತ್ತಿದ್ದು, ಗೆಲುವು ಯಾರಿಗೆ ಸಿಗಲಿದೆ ಎಂಬ ಲೆಕ್ಕಾಚಾರ ಈಗಿನಿಂದಲೇ ಶುರುವಾಗಿದೆ. ಕೇವಲ ಸಿನಿಮಾದಿಂದ ಮಾತ್ರವಲ್ಲ, ಇತರ ವಿಷಯಗಳಿಂದಾಗಿಯೂ ಸಿನಿಮಾದ ಸೋಲು ಗೆಲುವಿನ ಚರ್ಚೆಗಳು ನಡೆದಿವೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡು ತಿಂಗಳು ಇದ್ದರೂ, ಈಗಿನಿಂದಲೇ ಬಾಕ್ಸ್ ಆಫೀಸ್ ಲೆಕ್ಕಾಚಾರ ಕೂಡ ನಡೆದಿದೆ.

    ಬಾಲಿವುಡ್ ಇಬ್ಬರು ಖ್ಯಾತ ನಟರಾದ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಟನೆಯ ಚಿತ್ರಗಳು ಆಗಸ್ಟ್ 11 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿವೆ. ಅಕ್ಷಯ್ ನಟನೆಯ ರಕ್ಷಾ ಬಂಧನ್ ಮತ್ತು ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಏಕಕಾಲಕ್ಕೆ ತೆರೆ ಕಾಣುತ್ತಿವೆ. ಎರಡೂ ನಿರೀಕ್ಷಿತ ಚಿತ್ರಗಳು ಆಗಿದ್ದರಿಂದ, ಪ್ರೇಕ್ಷಕನ ಒಲವು ಯಾರ ಕಡೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಎರಡೂ ಸಿನಿಮಾಗಳು ತಮ್ಮದೇ ಆದ ಕಾರಣಗಳಿಂದಾಗಿ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿವೆ. ಇದನ್ನೂ ಓದಿ:ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ

    ಈಗಾಗಲೇ ಲಾಲ್ ಸಿಂಗ್ ಚಡ್ಡಾ ಟ್ರೈಲರ್ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಆಮೀರ್ ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಅದ್ಧೂರಿಯಾಗಿಯೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಟ್ರೇಲರ್ ಕೂಡ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಅದು ಕೂಡ ಪ್ರೇಕ್ಷಕರ ಗಮನ ಸೆಳೆದಿದೆ. ಎರಡೂ ಚಿತ್ರಗಳು ಕೂಡ ಭರವಸೆ ಮೂಡಿಸಿರುವುದರಿಂದ ದೊಡ್ಡ ಮಟ್ಟದಲ್ಲಿ ಫೈಟ್ ಎದುರಾಗಲಿದೆ.

    ಈ ಕುರಿತು ಮಾತನಾಡಿರುವ ಅಕ್ಷಯ್ ಕುಮಾರ್, ‘ಎರಡು ದೊಡ್ಡ ಸಿನಿಮಾಗಳು ಬಂದಾಗ ಈ ರೀತಿ ಗೊಂದಲ ಆಗುವುದು ಸಹಜ. ಹಾಗಂತ ನಾನು ಇದನ್ನು ಕ್ಲ್ಯಾಶ್ ಎಂದು ಕರೆಯುವುದಿಲ್ಲ. ಎರಡು ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತಿವೆ ಎಂದಷ್ಟೇ ಹೇಳುವ. ಎರಡೂ ಚಿತ್ರಗಳು ಚೆನ್ನಾಗಿ ಕಲೆಕ್ಷನ್ ಮಾಡಲಿವೆ ಎಂಬ  ನಂಬಿಕೆ ನನ್ನದು’ ಅಂತಾರೆ ಅಕ್ಷಯ್ ಕುಮಾರ್.

    Live Tv

  • ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

    ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

    – ಹಾಜರಾತಿ ಕಡ್ಡಾಯ ಅಲ್ಲ

    ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23 ರಿಂದ ಶಾಲೆಗಳು ಆರಂಭ ಮಾಡುವ ವಿಚಾರವಾಗಿ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

    ಆಗಸ್ಟ್ 23 ರಿಂದ ರಾಜ್ಯಾದ್ಯಂತ 9 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಶಾಲೆ ಆರಂಭಗೊಳಿಸಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ನಿತ್ಯ ಅರ್ಧ ದಿನ ಮಾತ್ರ ತರಗತಿ ನಡೆಸಲು ಸರ್ಕಾರ ಸೂಚಿಸಿದೆ. ಸೋಮವಾರ ದಿಂದ ಶುಕ್ರವಾರ 10 ರಿಂದ 1.30 ತರಗತಿ ಮಾಡಬೇಕು, ಶನಿವಾರ 10 ರಿಂದ 12.50 ವರೆಗೆ ಕ್ಲಾಸ್ ಮಾಡಬೇಕು, ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ಶಾಲೆಗಳಲ್ಲಿ ಪಡೆದುಕೊಳ್ಳಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು

    ಮಕ್ಕಳು ಮನೆಯಿಂದ ನೀರು, ಉಪಹಾರ ತರಲು ಅವಕಾಶವಿದ್ದು, ಶಾಲೆಗಳಲ್ಲಿ ಕುಡಿಯುವ ಬಿಸಿ ನೀರು ವ್ಯವಸ್ಥೆ ಮಾಡಬೇಕು. ಹಾಜರಾತಿ ಕಡ್ಡಾಯ ಅಲ್ಲ, ಆನ್‍ಲೈನ್ ನಲ್ಲಿ ಬೇಕಾದರು ಕೂಡ ಹಾಜರಾತಿ ಆಗಬಹುದು. ಒಂದು ತಂಡದಲ್ಲಿ 15-20 ವಿದ್ಯಾರ್ಥಿಗಳು ಮಾತ್ರ ಇರಬೇಕು. ವಿದ್ಯಾರ್ಥಿಗಳು ಪೆನ್ನು, ಪುಸ್ತಕ, ರಬ್ಬರ್ ಸೇರಿದಂತೆ ಯಾವ ವಸ್ತುಗಳನ್ನು ಹಂಚಿಕೊಳ್ಳಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

    ಮಾರ್ಗಸೂಚಿಯಲ್ಲಿ ಏನಿದೆ?

    ನಿತ್ಯ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ತಾಪಮಾನ ಪರಿಶೀಲನೆ ಮಾಡಬೇಕು. ಡೆಸ್ಕ್ ನಲ್ಲಿ ಕೂರಿಸುವುದು, ವಿದ್ಯಾರ್ಥಿಯಗಳ ಆಗಮನ ಮತ್ತು ನಿರ್ಗಮದ ವೇಳೆ ಶಾಲಾ-ಕಾಲೇಜುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮವಹಿಸಬೇಕು. ಶಾಲಾ-ಕಾಲೇಜು ಕೊಠಡಿಗಳು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸ್ಯಾನಿಟೈಸ್ ವ್ಯವಸ್ಥೆ ಶಾಲಾ-ಕಾಲೇಜುಗಳಲ್ಲಿ ಮಾಡಬೇಕು. ಇದನ್ನೂ ಓದಿ: ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

    ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಶಾಲೆ ಪ್ರವೇಶ ಇಲ್ಲ. ಪ್ರಾರ್ಥನೆ ಸಮಯ, ಊಟದ ಸಮಯದಲ್ಲಿ ಅಗತ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು. ಗುಂಪು ಕ್ರೀಡೆಗಳ ಆಯೋಜನೆ ಮಾಡುವಾಗ ಎಚ್ಚರವಹಿಸಬೇಕು. ಕಾಲೇಜುಗಳಲ್ಲಿ ಸ್ವಿಮ್ಮಿಂಗ್ ಪೂಲ್ ಇದ್ದರೆ ಕಡ್ಡಾಯವಾಗಿ ಅದನ್ನ ಕ್ಲೋಸ್ ಮಾಡಬೇಕು. ಶಾಲಾ-ಕಾಲೇಜು ಕ್ಯಾಂಪಸ್ ಗೆ ಸಾರ್ವಜನಿಕ ನಿಷೇಧ ಹೇರಬೇಕು. ವಿದ್ಯಾರ್ಥಿಗಳು ಲೈಬ್ರರಿಗಳಲ್ಲಿ ಕುಳಿತು ಓದಲು ನಿಷೇಧ. ಪುಸ್ತಕ ಪಡೆದು ಮನೆಯಲ್ಲಿ ಓದುವ ನಿಯಮ ಪಾಲನೆ ಮಾಡಬೇಕು. ಶಾಲಾ-ಕಾಲೇಜುಗಳ ಹಂತದ ಕ್ರೀಡಾ ಕೂಟಗಳ ಆಯೋಜನೆ ಮಾಡಬಾರದು.

    ಬಿಸಿಯೂಟ ಬದಲಾಗಿ ದಿನಸಿ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ಕೊಡುವ ನಿಯಮ ಮುಂದುವರೆಸಬೇಕು. ತರಗತಿಗಳು ಮುಗಿದ ಮೇಲೆ ನಿತ್ಯ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಲು ಅಗತ್ಯ ಕ್ರಮವಹಿಸಬೇಕು. ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳಿಗೆ ಶಾಲೆಗೆ ಪ್ರವೇಶ ನೀಡಬಾರದು. ಪ್ರತಿ ಶಾಲೆಯಲ್ಲಿ ಐಸೋಲೇಷನ್ ಕೊಠಡಿ ತೆರೆಯಬೇಕು. ಆರೋಗ್ಯ ವ್ಯತ್ಯಾಸ ಕಂಡು ಬರೋ ವಿದ್ಯಾರ್ಥಿಗೆ ಈ ಕೊಠಡಿ ಕೂರಿಸಲು ಕ್ರಮವಹಿಸಬೇಕು. ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸ್ ವ್ಯವಸ್ಥೆ ಮಾಡಲು ಕ್ರಮವಹಿಸಬೇಕು.

  • ವಾಹನೋದ್ಯಮ ಶೇ.14.16 ರಷ್ಟು ಚೇತರಿಕೆ – ಆಗಸ್ಟ್‌ನಲ್ಲಿ ಯಾವ ವಾಹನಗಳು ಎಷ್ಟು ಮಾರಾಟವಾಗಿದೆ?

    ವಾಹನೋದ್ಯಮ ಶೇ.14.16 ರಷ್ಟು ಚೇತರಿಕೆ – ಆಗಸ್ಟ್‌ನಲ್ಲಿ ಯಾವ ವಾಹನಗಳು ಎಷ್ಟು ಮಾರಾಟವಾಗಿದೆ?

    ನವದೆಹಲಿ: ಕೋವಿಡ್‌ 19 ವೇಳೆ ನೆಲಕಚ್ಚಿದ ವಾಹನ ಉದ್ಯಮ ಲಾಕ್‌ಡೌನ್‌ ತೆರವಾದ ಬಳಿಕ ಭಾರೀ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ.

    2019 ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ ಶೇ.14.16ರಷ್ಟು ಚೇತರಿಕೆ ಕಂಡಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್ಐಎಎಂ) ಹೇಳಿದೆ.

    ಈ ವರ್ಷದ ಆಗಸ್ಟ್‌ನಲ್ಲಿ ಒಟ್ಟು 2,15,916 ಪ್ರಯಾಣಿಕ ವಾಹನಗಳ ಮಾರಾಟ ಆಗಿದ್ದರೆ ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಒಟ್ಟು 1,89,129 ಮಾರಾಟ ಆಗಿತ್ತು. ಈ ಬಾರಿಯ ಆಗಸ್ಟ್‌ಗೂ ಮೊದಲಿನ ಒಂಬತ್ತು ತಿಂಗಳುಗಳ ಕಾಲ ಪ್ರಯಾಣಿಕ ವಾಹನಗಳ ಮಾರಾಟವು ನಿರಂತರವಾಗಿ ಕುಸಿತ ಕಂಡಿತ್ತು. ಆದರೆ ಈಗ ಆಟೋ ಕ್ಷೇತ್ರ ಚೇತರಿಕೆಯಾಗಿದ್ದು ಕೊರೊನಾ ಲಾಕ್‌ಡೌನ್‌ ಬಳಿಕ ಒಂದೊಂದೆ ಕ್ಷೇತ್ರಗಳು ಹಳಿಗೆ ಬರುತ್ತಿದ್ದು ನಿಧಾನವಾಗಿ ಆರ್ಥಿಕ ಪ್ರಗತಿ ಆಗುತ್ತಿದೆ.

    ಯಾವುದು ಎಷ್ಟು ಮಾರಾಟ?
    ಈ ಬಾರಿಯ ಆಗಸ್ಟ್‌ ತಿಂಗಳಿನಲ್ಲಿ ಪ್ರಯಾಣಿಕ ಕಾರುಗಳ ಮಾರಾಟ ಶೇ. 14.13ರಷ್ಟು ಏರಿಕೆ ಕಂಡಿದೆ. ಈ ಬಾರಿ 1,24,715 ಆಗಿದ್ದರೆ 2019ರ ಆಗಸ್ಟ್‌ನಲ್ಲಿ 1,09,277 ಕಾರುಗಳು ಮಾರಾಟಗೊಂಡಿತ್ತು.

    ಬಹು ಉಪಯೋಗಿ ವಾಹನಗಳ ಮಾರಾಟ ಶೇ.15.54ರಷ್ಟು ಏರಿಕೆಯಾಗಿದೆ. ಒಟ್ಟು 81,842 ಬಹು ಉಪಯೋಗಿ ವಾಹನಗಳು ಮಾರಾಟವಾಗಿದ್ದರೆ ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಒಟ್ಟು 70,837 ವಾಹನಗಳು ಮಾರಾಟವಾಗಿತ್ತು.

     

    ವ್ಯಾನ್‌ಗಳ ಮಾರಾಟದಲ್ಲಿ ಶೇ.3.82 ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಒಟ್ಟು 9,015 ವ್ಯಾನ್‌ಗಳ ಮಾರಾಟ ಆಗಿತ್ತು. ಈ ಆಗಸ್ಟ್‌ನಲ್ಲಿ 9,359 ವ್ಯಾನ್‌ಗಳು ಮಾರಾಟವಾಗಿವೆ.

    ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.3ರಷ್ಟು ಹೆಚ್ಚಳ ಕಂಡುಬಂದಿದೆ. ಈ ವರ್ಷದ ಆಗಸ್ಟ್‌ನಲ್ಲಿ 15,59,665 ಮಾರಾಟವಾಗಿದ್ದರೆ ಕಳೆದ ವರ್ಷ 15,14,196 ಮಾರಾಟಗೊಂಡಿತ್ತು.

    ದ್ವಿಚಕ್ರ ವಾಹನಗಳ ಪೈಕಿ ಬೈಕ್‌ಗಳ ಮಾರಾಟ ಶೇ.10.13ರಷ್ಟು ಬೆಳವಣಿಗೆಯಾಗಿದೆ. ಈ ಆಗಸ್ಟ್‌ನಲ್ಲಿ 10,32,476ರಷ್ಟು ಮಾರಾಟವಾಗಿದ್ದರೆ ಕಳೆದ ವರ್ಷ 9,37,486ರಷ್ಟು ಮಾರಾಟವಾಗಿತ್ತು. ಇದನ್ನೂ ಓದಿ: ಕಾರು ಪಾರ್ಕಿಂಗ್‌ ಸ್ಥಳ ಈಗ ಟೂರಿಸ್ಟ್‌ ಸ್ಪಾಟ್‌ – ವೈರಲ್‌ ವಿಡಿಯೋ ಸೆರೆಗೆ ಒಂದು ಕಮೆಂಟ್‌ ಕಾರಣ

    ಸ್ಕೂಟರ್ ಮಾರಾಟದಲ್ಲಿ ಶೇ 12.3ರಷ್ಟು ಇಳಿಕೆ ಆಗಿದೆ. ಕಳೆದ ವರ್ಷ 5,20,898 ಸ್ಕೂಟರ್‌ ಮಾರಾಟಗೊಂಡಿದ್ದರೆ ಈ ವರ್ಷದ ಆಗಸ್ಟ್‌ನಲ್ಲಿ 4,56,848 ಸ್ಕೂಟರ್‌ ಮಾರಾಟಗೊಂಡಿದೆ.

    ತ್ರಿಚಕ್ರ ವಾಹನ ಖರೀದಿಯಲ್ಲಿ ಶೇ.75.29ರಷ್ಟು ಭಾರೀ ಇಳಿಕೆಯಾಗಿದೆ. ಈ ವರ್ಷದ ಆಗಸ್ಟ್‌ನಲ್ಲಿ 14,534 ವಾಹನಗಳು ಮಾರಾಟಗೊಂಡಿದ್ದರೆ ಕಳೆದ ವರ್ಷ 58,818 ವಾಹನಗಳು ಮಾರಾಟಗೊಂಡಿತ್ತು.  ಇದನ್ನೂ ಓದಿ: ಶೀಘ್ರವೇ ಬರಲಿದೆ ಗುಜುರಿ ನೀತಿ – ಉದ್ದೇಶ ಏನು? ವಾಹನದ ದರ ನಿಗದಿ ಹೇಗೆ?

    ಏರಿಕೆ ಯಾಕೆ?
    ಲಾಕ್‌ಡೌನ್‌ ಅವಧಿಯಲ್ಲಿ ವಾಹನ ಖರೀದಿ ಮಾಡಲು ಆಗದವರು ಈ ಅವಧಿಯಲ್ಲಿ ಖರೀದಿಸಿದ್ದಾರೆ. ಎರಡನೇಯದಾಗಿ ಜನರು ಸಮೂಹ ಸಾರಿಗೆ ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಅಟೋ ಉದ್ಯಮ ಚೇತರಿಕೆ ಕಾಣುತ್ತಿದೆ.

  • ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ

    ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ

    – ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ 

    ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನಿಡಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.

    ಕಳೆದ 20 ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಡುವು ನೀಡಿದ್ದ ವರುಣದೇವ ಇಂದು ಮತ್ತೆ ನಗರದಲ್ಲಿ ಅಬ್ಬರಿಸಿದ್ದಾನೆ. ಆಗಸ್ಟ್ ಮೊದಲ ವಾರದ ಮಳೆ ಮಲೆನಾಡಿಗರಲ್ಲಿ ಆತಂಕ ಹುಟ್ಟಿಸಿತ್ತು. ಒಂದೇ ವಾರದ ಮಳೆ ಮಲೆನಾಡಲ್ಲಿ ಸಾಕಷ್ಟು ಅನಾಹುತ ಸೃಷ್ಟಿಸಿತ್ತು. ಈಗ ಮತ್ತೆ ದಿಢೀರ್ ಮಳೆ ಕಂಡು ಜನ ಆತಂಕಕ್ಕೀಡಾಗಿದ್ದಾರೆ.

    ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಬಾರೀ ಮಳೆ ಕಡಿಮೆಯಾಗಿದೆ. ಬರೊಬ್ಬರಿ 14 ವರ್ಷಗಳ ಬಳಿಕ ಮೊದಲ ಬಾರಿಗೆ ಆಗಸ್ಟ್ ತಿಂಗಳಿನಲ್ಲಿ ಅತ್ಯಂತ ಕನಿಷ್ಠ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಆದರೆ ದೇಶದಲ್ಲಿ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಪ್ರಮಾಣದ ಮಳೆಯಾಗಿದೆ. ಕಳೆದ 120 ವರ್ಷಗಳ ಅವಧಿಯಲ್ಲಿ ಸುರಿದ ಮಳೆ ಗರಿಷ್ಠ ಪ್ರಮಾಣದ ಮಳೆ ಸುರಿದಿದ್ದು, ಶೇ.27 ರಷ್ಟು ಅಧಿಕ ಪ್ರಮಾಣದ ಮಳೆ ಬಿದ್ದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

    ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಮೂರು ದಿನಗಳ ಕಾಲ ಉತ್ತರ ಭಾರತ, ಈಶಾನ್ಯ ರಾಜ್ಯಗಳು ಹಾಗೂ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾವ ಸಾಧ್ಯತೆ ಇದೆ.