Tag: ಆಕ್ಸಿಸ್ ಬ್ಯಾಂಕ್

  • ದೆಹಲಿ ಖಾಸಗಿ ಬ್ಯಾಂಕ್‌ನಲ್ಲಿ ಅಗ್ನಿ ಅವಘಡ – ಕಾರಣ ಸಸ್ಪೆನ್ಸ್

    ದೆಹಲಿ ಖಾಸಗಿ ಬ್ಯಾಂಕ್‌ನಲ್ಲಿ ಅಗ್ನಿ ಅವಘಡ – ಕಾರಣ ಸಸ್ಪೆನ್ಸ್

    ನವದೆಹಲಿ: ರಾಜಧಾನಿಯ ಧರಿಯಾಗಂಜ್ (Daryaganj) ಪ್ರದೇಶದ ಖಾಸಗಿ ಬ್ಯಾಂಕ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ.

    ಧರಿಯಾಗಂಜ್‌ನ ಆಕ್ಸಿಸ್ ಬ್ಯಾಂಕ್‌ನಲ್ಲಿ (Axis Bank) ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ. ಇದನ್ನೂ ಓದಿ: 4ನೇ ಮಗುವಿನ ತಾಯಿಯಾದ ಶಿವೊನ್‌ ಜಿಲಿಸ್‌ – 14ನೇ ಮಗುವಿಗೆ ಅಪ್ಪನಾದ ಎಲಾನ್‌ ಮಸ್ಕ್‌

    ಹಾನಿಯ ಪ್ರಮಾಣ ಮತ್ತು ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ ಎಂದು ದೆಹಲಿಯ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ‘ಗುಡ್ ಬ್ಯಾಡ್ ಅಗ್ಲಿ’ ಅವತಾರವೆತ್ತಿದ ಅಜಿತ್ ಕುಮಾರ್- ಟೀಸರ್‌ಗೆ ಫ್ಯಾನ್ಸ್ ಮೆಚ್ಚುಗೆ

  • ಆಕ್ಸಿಸ್ ಬ್ಯಾಂಕ್ ನೋಟಿಸ್‍ಗೆ ಹೆದರಿ ರೈತ ಆತ್ಮಹತ್ಯೆಗೆ ಶರಣು

    ಆಕ್ಸಿಸ್ ಬ್ಯಾಂಕ್ ನೋಟಿಸ್‍ಗೆ ಹೆದರಿ ರೈತ ಆತ್ಮಹತ್ಯೆಗೆ ಶರಣು

    ರಾಯಚೂರು: ಆಕ್ಸಿಸ್ ಬ್ಯಾಂಕ್ ಸಾಲದ ನೋಟಿಸ್‍ಗೆ ಹೆದರಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಬೆಣಕಲ್ ಗ್ರಾಮದಲ್ಲಿ ನಡೆದಿದೆ.

    ಬೆಣಕಲ್ ಗ್ರಾಮದ ನಿವಾಸಿ ರಾಮಪ್ಪ (35) ಆತ್ಮಹತ್ಯೆ ಮಾಡಿಕೊಂಡ ರೈತ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ರಾಮಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆಕ್ಸಿಸ್ ಬ್ಯಾಂಕ್‍ನಲ್ಲಿ 10 ಲಕ್ಷ ರೂ. ಸಾಲ ಮಾಡಿದ್ದ. ಮಳೆ ಇಲ್ಲದೆ ಬರಗಾಲ ಹಿನ್ನೆಲೆ ಬೆಳೆ ಬಾರದೆ ಸಾಲ ತೀರಿಸುವ ದಾರಿ ಕಾಣದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ರಾಮಪ್ಪ 20 ಎಕರೆ ಜಮೀನು ಹೊಂದಿದ್ದು, ಬ್ಯಾಂಕ್‍ನಿಂದ ಪಡೆದಿದ್ದ ಹಣವನ್ನು ಕೃಷಿ ಚಟುವಟಿಕೆಗಾಗಿ ಖರ್ಚು ಮಾಡಿದ್ದ. ಆದರೆ ಮಳೆಯಾಗದೇ ಫಸಲು ಕೈಕೊಟ್ಟಿದ್ದು, ಬ್ಯಾಂಕ್ ಸಾಲ ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕ್ಸಿಸ್ ಬ್ಯಾಂಕ್ ನೋಟಿಸ್ ಕಳುಹಿಸಿದೆ. ಇದಕ್ಕೆ ಹೆದರಿ ಪತ್ನಿ ಹಾಗೂ ಐದು ಜನ ಪುತ್ರಿಯರನ್ನು ಬಿಟ್ಟು ನೇಣಿಗೆ ಶರಣಾಗಿದ್ದಾನೆ.

    ಈ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿರುವುದರಿಂದ ರೈತರು ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ. ಈ ಮೂಲಕ ರಾಮಣ್ಣ ಸೇರಿದಂತೆ ಕಳೆದ 8 ತಿಂಗಳಲ್ಲಿ ಜಿಲ್ಲೆಯಲ್ಲಿ 20 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಆಕ್ಸಿಸ್ ಬ್ಯಾಂಕ್‍ನಿಂದ ಬೆಳಗಾವಿ ರೈತರೊಬ್ಬರಿಗೆ ಅರೆಸ್ಟ್ ವಾರೆಂಟ್

    ಆಕ್ಸಿಸ್ ಬ್ಯಾಂಕ್‍ನಿಂದ ಬೆಳಗಾವಿ ರೈತರೊಬ್ಬರಿಗೆ ಅರೆಸ್ಟ್ ವಾರೆಂಟ್

    ಬೆಳಗಾವಿ: ರಾಜ್ಯದ ರೈತರ ಜೊತೆ ಮತ್ತೆ ಆಕ್ಸಿಸ್ ಬ್ಯಾಂಕ್ ಕಣ್ಣಾ ಮುಚ್ಚಾಲೆ ಆಟ ಆರಂಭಿಸಿದ್ದು, ಈ ಬಾರಿ ಮತ್ತೆ ಜಿಲ್ಲೆಯ ರೈತರೊಬ್ಬರಿಗೆ ಬಂಧನದ ವಾರೆಂಟ್ ನೀಡಿದೆ.

    ಜಿಲ್ಲೆಯ ಸವದತ್ತಿ ತಾಲೂಕಿನ ಮಾಟೊಳಿ ಗ್ರಾಮದ ರೈತ ರುದ್ರಪ್ಪ ಛಬ್ಬಿ ಎಂಬವರಿಗೆ ಮುರಗೋಡ ಪೊಲೀಸರು ನಿನ್ನೆ ಬಂಧನ ವಾರಂಟ್ ನೀಡಿದ್ದಾರೆ. ಇದರಿಂದಾಗಿ ಗಾಬರಿಗೊಂಡ ರುದ್ರಪ್ಪ ರೈತ ಹೋರಾಟಗಾರರ ಬಳಿ ತಮ್ಮ ತನ್ನ ದುಃಖ ತೋಡಿಕೊಂಡಿದ್ದಾರೆ.

    ಈ ಹಿಂದೆಯೇ ಯಾವುದೇ ಬಂಧನ ವಾರಂಟ್ ನೀಡುವುದಿಲ್ಲ ಎಂದು ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗ ಮತ್ತೆ ರೈತರಿಗೆ ಬಂಧನ ವಾರೆಂಟ್ ನೀಡಲಾಗುತ್ತಿದೆ. ರಾಜ್ಯದ ಕೆಲವು ಭಾಗಗಳಲ್ಲಿ ತೀವ್ರ ಬರಗಾಲ ಎದುರಾಗಿದ್ದು, ರೈತರಿಗೆ ಸಾಲ ಮರುಪಾವತಿ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಇತ್ತೀಚೆಗಷ್ಟೇ ಆಕ್ಸಿಸ್ ಬ್ಯಾಂಕ್ ನೀಡಿದ್ದ ನೋಟಿಸ್‍ಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಅಶೋಖ ಖನಗಾವಿ ಜಯಗಳಿದ್ದಾರೆ. ಈ ಮೂಲಕ ಕೋಲ್ಕತ್ತಾ ಹೈಕೊರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಹೊರಡಿಸಿದೆ. ಅಶೋಕ ಖನಗಾವಿ ಹೋರಾಟ ರಾಜ್ಯದ ರೈತರಿಗೆ ಮಾದರಿಯಾಗಿದ್ದು, ಈ ಆದೇಶ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿರುವ ರೈತರಿಗೆ ಅನುಕೂಲವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಆಕ್ಸಿಸ್ ಬ್ಯಾಂಕಿನ ಎಟಿಎಂನಲ್ಲಿದ್ದ 4.5 ಲಕ್ಷಕ್ಕೂ ಹೆಚ್ಚು ಹಣ ಕದ್ದೊಯ್ದರು!

    ಆಕ್ಸಿಸ್ ಬ್ಯಾಂಕಿನ ಎಟಿಎಂನಲ್ಲಿದ್ದ 4.5 ಲಕ್ಷಕ್ಕೂ ಹೆಚ್ಚು ಹಣ ಕದ್ದೊಯ್ದರು!

    ದಾವಣಗೆರೆ: ಗ್ಯಾಸ್ ಕಟರ್ ಸಹಾಯದಿಂದ ಎಟಿಎಂನಲ್ಲಿದ್ದ ಹಣ ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಜಯದೇವ ವೃತ್ತದಲ್ಲಿರುವ ಆಕ್ಸಿಸ್ ಬ್ಯಾಂಕಿನ ಎಟಿಎಂನಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು, ಸುಮಾರು 4.5 ಲಕ್ಷಕ್ಕೂ ಹೆಚ್ಚು ಹಣವನ್ನು ದೋಚಿದ್ದಾರೆ. ಆಗಸ್ಟ್ 14 ರಿಂದ ಎಟಿಎಂ ಸೆಕ್ಯೂರಿಟಿ ಕೆಲಸ ಬಿಟ್ಟಿದ್ದನು. ಆಗಸ್ಟ್ 16 ರ ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ.

    ಸೆಕ್ಯೂರಿಟಿ ಇಲ್ಲದ ಸಮಯ ನೋಡಿ ಕಳ್ಳರು ಸ್ಕೇಚ್ ಹಾಕಿದ್ದಾರೆ ಎನ್ನಲಾಗಿದ್ದು, ಎಟಿಎಂನ ಒಳಗಿರುವ ಸಿಸಿ ಕ್ಯಾಮರಾವನ್ನು ಸಹ ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಸ್ಥಳಕ್ಕೆ ಎಸ್ಪಿ ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.

    ಈ ಸಂಬಂಧ ಕೆಟಿಜೆ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಈ 3 ಬ್ಯಾಂಕ್‍ಗಳಲ್ಲಿ ಇನ್ಮುಂದೆ ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ನಗದು ವ್ಯವಹಾರ ಮಾಡಿದ್ರೆ ಹೆಚ್ಚುವರಿ ಶುಲ್ಕ ಕಟ್ಬೇಕು

    ಈ 3 ಬ್ಯಾಂಕ್‍ಗಳಲ್ಲಿ ಇನ್ಮುಂದೆ ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ನಗದು ವ್ಯವಹಾರ ಮಾಡಿದ್ರೆ ಹೆಚ್ಚುವರಿ ಶುಲ್ಕ ಕಟ್ಬೇಕು

    ನವದೆಹಲಿ: ಬ್ಯಾಂಕ್‍ನಲ್ಲಿ ಇನ್ನು ಮುಂದೆ ಬೇಕಾಬಿಟ್ಟಿ ನಗದು ವ್ಯವಹಾರ ಮಾಡಿದ್ರೆ ದಂಡ ಕಟ್ಟಬೇಕಾಗುತ್ತದೆ. ಯಾಕಂದ್ರೆ ತಿಂಗಳಿಗೆ 4 ಬಾರಿ ವ್ಯವಹಾರ ಮಾಡಿದ ಬಳಿಕ ಮಾಡುವ ಪ್ರತಿಯೊಂದು ವ್ಯವಹಾರಕ್ಕೂ 150 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಲು ಹೆಚ್‍ಡಿಎಫ್‍ಸಿ, ಐಸಿಐಸಿಐ ಹಾಗೂ ಆಕ್ಸಿಸ್ ಬ್ಯಾಂಕ್‍ಗಳು ನಿರ್ಧಾರ ಮಾಡಿವೆ.

    ಈ ನಿಯಮ ಮಾರ್ಚ್ 1 ರಿಂದಲೇ ಜಾರಿಗೆ ಬಂದಿದ್ದು, ಸ್ಯಾಲರಿ ಅಕೌಂಟ್ ಹಾಗೂ ಉಳಿತಾಯ ಖಾತೆಗಳಿಗೂ ಅನ್ವಯ ಆಗಲಿದೆ ಎಂದು ಹೆಚ್‍ಡಿಎಫ್‍ಸಿ ಬ್ಯಾಂಕ್ ಹೇಳಿದೆ.

    ಹೆಚ್‍ಡಿಎಫ್‍ಸಿ ಬ್ಯಾಂಕ್: ಒಂದು ತಿಂಗಳಲ್ಲಿ ಮೊದಲ 4 ನಗದು ವ್ಯವಹಾರ ಉಚಿತವಾಗಿರುತ್ತದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಆದ್ರೆ ಅದೇ ತಿಂಗಳಲ್ಲಿ 5ನೇ ಬಾರಿಗೆ ನಗದು ಡೆಪಾಸಿಟ್ ಅಥವಾ ವಿತ್‍ಡ್ರಾ ಮಾಡಿದರೆ ಹೆಚ್ಚುವರಿ 150 ರೂ. ಶುಲ್ಕ ಕಟ್ಟಬೇಕಾಗುತ್ತದೆ. ಅಲ್ಲದೆ ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ದಿನವೊಂದಕ್ಕೆ 25 ಸಾವಿರ ರೂಪಾಯಿ ಮಾತ್ರ ತೆಗೆಯಬಹುದು ಅಂತಾ ಹೆಚ್‍ಡಿಎಫ್‍ಸಿ ಬ್ಯಾಂಕ್ ತಿಳಿಸಿದ್ದು, ಕ್ಯಾಶ್ ಹ್ಯಾಂಡ್ಲಿಂಗ್ ಶುಲ್ಕವನ್ನು ಹಿಂಪಡೆದಿದೆ.

    ಐಸಿಐಸಿಐ ಬ್ಯಾಂಕ್: ಐಸಿಐಸಿಐನ ಹೋಮ್ ಬ್ರಾಂಚ್‍ನಲ್ಲಿ ತಿಂಗಳ ಮೊದಲ 4 ನಗದು ವ್ಯವಹಾರ ಉಚಿತವಾಗಿರುತ್ತದೆ. ಅದೇ ತಿಂಗಳು 5ನೇ ಬಾರಿಗೆ ವ್ಯವಹಾರ ಮಾಡಿದ್ರೆ 1 ಸಾವಿರ ರೂ. ಗೆ 5 ರೂಪಾಯಿಯಂತೆ ತಿಂಗಳಿಗೆ ಕನಿಷ್ಠ 150 ರೂ. ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ. ಬೇರೆ ಎಟಿಎಂನಿಂದ ವಿತ್‍ಡ್ರಾ ಮಾಡುವ ಮಿತಿ ದಿನಕ್ಕೆ 50 ಸಾವಿರ ರೂ. ಇರಲಿದೆ. ಆದ್ರೆ ನಾನ್ ಹೋಮ್ ಬ್ರಾಂಚ್‍ಗಳಲ್ಲಿ ತಿಂಗಳ ಮೊದಲ ನಗದು ವಿತ್‍ಡ್ರಾವಲ್‍ಗೆ ಐಸಿಐಸಿಐ ಯಾವುದೇ ಶುಲ್ಕ ಪಡೆಯುವುದಿಲ್ಲ. ಆದ್ರೆ ಅನಂತರದ ವಿತ್‍ಡ್ರಾವಲ್‍ಗೆ 1 ಸಾವಿರ ರೂ.ಗೆ 5 ರೂ. ನಂತೆ ತಿಂಗಳಿಗೆ ಕನಿಷ್ಠ 150 ರೂ. ದಂಡ ಕಟ್ಟಬೇಕು. ಹಾಗೇ ಬೇರೆ ಕಡೆ ನಗದು ಡೆಪಾಸಿಟ್ ಮಾಡಿದ್ರೆ 1 ಸಾವಿರ ರೂ.ಗೆ 5 ರೂಪಾಯಿಯಂತೆ (ಕನಿಷ್ಟ 150 ರೂ.) ಬ್ರಾಂಚ್‍ಗಳಲ್ಲಿ ಶುಲ್ಕ ಕಟ್ಟಬೇಕು. ಕ್ಯಾಶ್ ಸ್ವೀಕೃತಿ ಮಷೀನ್‍ಗಳಲ್ಲಿ ಡೆಪಾಸಿಟ್ ಮಾಡಿದ್ರೆ ತಿಂಗಳ ಮೊದಲ ಡೆಪಾಸಿಟ್‍ಗೆ ಯಾವುದೇ ಶುಲ್ಕ ಇಲ್ಲ. ನಂತರದ ಡೆಪಾಸಿಟ್‍ಗೆ 1 ಸಾವಿರ ರೂ.ಗೆ 5 ರೂಪಾಯಿಯಂತೆ ಕನಿಷ್ಠ 150 ರೂ. ಶುಲ್ಕ ತೆರಬೇಕು.

    ಆಕ್ಸಿಸ್ ಬ್ಯಾಂಕ್: ಆಕ್ಸಿಸ್ ಬ್ಯಾಂಕ್‍ಗಳಲ್ಲಿ ತಿಂಗಳ ಮೊದಲ 5 ನಗದು ವ್ಯವಹಾರ ಅಥವಾ 10 ಲಕ್ಷ ರೂ.ವರಗಿನ ನಗದು ಡೆಪಾಸಿಟ್ ಅಥವಾ ವಿತ್‍ಡ್ರಾವಲ್ ಉಚಿತವಾಗಿರುತ್ತದೆ. ನಂತರದ ವ್ಯವಹಾರಕ್ಕೆ 1 ಸಾವಿರ ರೂ. ಗೆ 5 ರೂಪಾಯಿಯಂತೆ ಕನಿಷ್ಟ 150 ರೂ. ಶುಲ್ಕವನ್ನು ತೆರಬೇಕಾಗುತ್ತದೆ.

    ನಗದು ವ್ಯವಹಾರಕ್ಕೆ ಕಡಿವಾಣ ಹಾಕುವುದು ಹಾಗೂ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವುದು ಈ ನಿಯಮದ ಉದ್ದೇಶ ಎನ್ನಲಾಗಿದೆ. ಉಳಿದ ಬ್ಯಾಂಕ್‍ಗಳೂ ಇದೇ ನಿಯಮವನ್ನು ಜಾರಿ ಮಾಡುವ ಸಾಧ್ಯತೆಯಿದೆ. ಈ ನಿಯಮ ಜಾರಿ ನಿರ್ಧಾರ ಮುಂಚೂಣಿಯಲ್ಲಿರುವ ಬ್ಯಾಂಕ್‍ಗಳು ಮಾಡಿರುವ ತೀರ್ಮಾನವಾಗಿದೆಯೇ ಹೊರತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಕೇಂದ್ರ ಸರ್ಕಾರ ಮಾಡಿರುವುದಲ್ಲ. ಈ ಮೂರು ಬ್ಯಾಂಕ್‍ಗಳು ದಂಡ ಹಾಕುವುದಕ್ಕೆ ಆರ್‍ಬಿಐ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಆದ್ರೆ ಯಾವುದೇ ಹಣಕಾಸಿನ ವ್ಯವಹಾರ 3 ಲಕ್ಷ ಮೀರಿದ್ರೆ ದಂಡ ತೆರಬೇಕಾಗುತ್ತದೆ ಅಂತಾ ಕೇಂದ್ರ ಸರ್ಕಾರ ಬಜೆಟ್‍ನಲ್ಲೇ ಘೋಷಣೆ ಮಾಡಿತ್ತು.