Tag: ಆಕ್ಸಿಡೆಂಟ್

  • ತನುಶ್ರೀ ದತ್ತಾಗೆ ವಿಷ ಹಾಕಿ ಕೊಲ್ಲುವ ಪ್ರಯತ್ನ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ

    ತನುಶ್ರೀ ದತ್ತಾಗೆ ವಿಷ ಹಾಕಿ ಕೊಲ್ಲುವ ಪ್ರಯತ್ನ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ

    ಭಾರತದಲ್ಲಿ ಮೀಟೂ (MeToo) ಚಳುವಳಿ ಆರಂಭಿಸುವ ಮೂಲಕ ಭಾರತೀಯ ಸಿನಿಮಾ ರಂಗವನ್ನೇ ಬೆಚ್ಚಿಬೀಳಿಸುವಂತೆ ಮಾಡಿದವರು ಬಾಲಿವುಡ್ ನಟಿ ತನುಶ್ರೀ ದತ್ತಾ (Tanushree Dutt). ಸಿನಿಮಾಗಳಿಗಿಂತಲೂ ಇವರು ವಿವಾದಗಳ ಕಾರಣದಿಂದಾಗಿಯೇ ಸಖತ್ ಸುದ್ದಿ ಆದವರು. ಅದರಲ್ಲೂ ಬಾಲಿವುಡ್ ನ ಖ್ಯಾತ ನಾಮರ ನೀಚತನವನ್ನು ಬಯಲಿಗೆ ಎಳೆದ ಹೆಗ್ಗಳಿಕೆ ಕೂಡ ಇವರದ್ದು. ಈ ಎಲ್ಲ ಕಾರಣಗಳಿಂದಾಗಿ ತನುಶ್ರೀ ಜೀವ ಅಪಾಯದಲ್ಲಿತ್ತಂತೆ.

    ತಮ್ಮ ಮತ್ತು ತಮಗೆ ಗೊತ್ತಿರುವವರ ಮೇಲಾದ ಶೋಷಣೆಯ ಕುರಿತಾಗಿ ತನುಶ್ರೀ ಮಾತನಾಡಿದ ನಂತರ ಇಡೀ ಬಾಲಿವುಡ್ (Bollywood) ಇವರ ವಿರುದ್ಧ ತಿರುಗಿ ಬಿದ್ದಿದೆಯಂತೆ. ಅಷ್ಟೇ ಅಲ್ಲದೇ, ಇವರನ್ನು ವಿವಿಧ ಬಗೆಯಲ್ಲಿ ಕೊಲ್ಲುವ (Murder) ಪ್ರಯತ್ನವನ್ನೂ ಮಾಡಲಾಗಿದೆಯಂತೆ. ಇಂತಹ ಅಚ್ಚರಿಯ ವಿಷಯವನ್ನು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ

    ಮೊದ ಮೊದಲು ನನ್ನನ್ನು ಕಾರು ಆಕ್ಸಿಡೆಂಟ್ (Accident) ಮೂಲಕ ಕೊಲ್ಲುವ ಪ್ರಯತ್ನ ಮಾಡಲಾಯಿತು. ಅಲ್ಲದೇ, ವಿಷ (Poison) ಕುಡಿಸಿ ಸಾಯಿಸಲು ಯತ್ನಿಸಲಾಯಿತು. ಕಾರಿನ ಬ್ರೇಕ್ ಫೇಲ್ ಕೂಡ ಮಾಡಿದ್ದರು. ಹಾಗಾಗಿ ನನಗೆ ಅಪಘಾತವಾಗಿ ಮೂಳೆ ಕೂಡ ಮುರಿದಿತ್ತು. ಅದರಿಂದ ಆಚೆ ಬರಲು ಹಲವು ತಿಂಗಳುಗಳೇ ಬೇಕಾದವು ಎಂದಿದ್ದಾರೆ ತನುಶ್ರೀ.

    Live Tv
    [brid partner=56869869 player=32851 video=960834 autoplay=true]

  • ‘ಟೈಟಾನಿಕ್’ ನಟಿ ಕೇಟ್ ವಿನ್ಸ್ ಲೆಟ್  ಆಸ್ಪತ್ರೆ ದಾಖಲು: ಶೂಟಿಂಗ್ ಸೆಟ್ ನಲ್ಲಿ ನಡೆಯಿತು ಅವಘಡ

    ‘ಟೈಟಾನಿಕ್’ ನಟಿ ಕೇಟ್ ವಿನ್ಸ್ ಲೆಟ್ ಆಸ್ಪತ್ರೆ ದಾಖಲು: ಶೂಟಿಂಗ್ ಸೆಟ್ ನಲ್ಲಿ ನಡೆಯಿತು ಅವಘಡ

    ಟೈಟಾನಿಕ್ (Titanic) ಸಿನಿಮಾದ ಮೂಲಕ ರಾತ್ರೋರಾತ್ರಿ ಫೇಮಸ್ ಆದ ನಟಿ ಕೇಟ್ ವಿನ್ಸ್ ಲೆಟ್ (Kate Winslet). ಈ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಜಗತ್ತಿನ ಅತ್ಯಂತ ಪ್ರಭಾವಿ ನಟಿಯರ ಪಟ್ಟಿಯಲ್ಲೂ ಇವರು ಸೇರ್ಪಡೆಯಾದರು. ಶೂಟಿಂಗ್ ಸೆಟ್ ನಲ್ಲಿ ನಡೆದ ಅವಘಡದಿಂದಾಗಿ ಅವರು ಆಸ್ಪತ್ರೆ (Hospital) ಸೇರಿಕೊಂಡಿದ್ದಾರೆ. ಇದೀಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಕಿತ್ಸೆಗೂ ಅವರು ಸ್ಪಂದಿಸಿದ್ದಾರೆ ಎಂದು ವರದಿ ಆಗಿದೆ.

    ಸದ್ಯ ಕೇಟ್ ಹೊಸ ಸಿನಿಮಾದ ಶೂಟಿಂಗ್(Shooting) ನಲ್ಲಿ ತೊಡಗಿದ್ದರು. ಲೀ ಹೆಸರಿನಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ಅವರು ಸತತ ನಾಲ್ಕೈದು ವರ್ಷಗಳಿಂದಲೂ ನಟಿಸುತ್ತಿದ್ದಾರೆ.  ಈ ಸಿನಿಮಾಗಾಗಿ ಬೃಹತ್ ಸೆಟ್ ಗಳನ್ನು ಹಾಕಿದ್ದು, ಈ ಸೆಟ್ ನಿಂದ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಎತ್ತರದ ಪ್ರದೇಶದಿಂದ ಕೆಳಗೆ ಬಿದ್ದಿದ್ದರಿಂದ ಬಲವಾದ ಪೆಟ್ಟು ಬಿದ್ದಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:`ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

    ಸೆಟ್ ಮೇಲಿಂದ ಕೇಟ್ ಬೀಳುತ್ತಿದ್ದಂತೆ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಶೂಟಿಂಗ್ ನಿಲ್ಲಿಸಲಾಗಿದೆ. ಅವರು ಹೇಗೆ ಬಿದ್ದರು, ತಪ್ಪಾಗಿದ್ದು ಹೇಗೆ ಅನ್ನುವ ಕುರಿತು ಚರ್ಚೆ ಶುರುವಾಗಿದೆ. ಕೇಟ್ ಪ್ರಾಣಾಪಾಯದಿಂದ ಪಾರಾಗಿದ್ದು, ಕೆಲವೇ ದಿನಗಳಲ್ಲಿ ಮತ್ತೆ ಅವರು ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಲೀ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಅಮೆರಿಕಾದ ಖ್ಯಾತ ಮಹಿಳಾ ಫೋಟೋ ಜರ್ನಲಿಸ್ಟ್ ಎಲಿಜಬೆತ್ ಲೀ (Lee) ಮಿಲ್ಲರ್ ಬಯೋಪಿಕ್ ಆಗಿದ್ದು, ಕೇಟ್ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ.

    1997ರಲ್ಲಿ ತೆರೆಕಂಡ ಟೈಟಾನಿಕ್ ಸಿನಿಮಾ ಮೂಲಕ ಜಗತ್ತಿನ ಸಿನಿಮಾ ಪ್ರೇಮಿಗಳಿಗೆ ಪರಿಚಯವಾದ ಕೇಟ್, ಆನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ಜನಿಸಿರುವ ಇವರು, ಕಷ್ಟದ ಜೀವನದಲ್ಲೇ ನಡೆದು ಬಂದವರ. ಇವರ ತಂದೆ ಕೂಡ ಸಿನಿಮಾದಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಾ ಬಂದವರು. ಟೈಟಾನಿಕ್ ಸಿನಿಮಾ ಕೇಟ್ ಅದೃಷ್ಟವನ್ನೇ ಬದಲಿಸಿ ಬಿಟ್ಟಿತು.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಸೀರಿಯಲ್ ಆರ್ಯವರ್ಧನ್ ಗೆ ಭೀಕರ ಕಾರು ಅಪಘಾತ: ಅನಿರುದ್ಧ ನಟಿಸುತ್ತಿದ್ದ ಪಾತ್ರ ಖತಂ?

    ‘ಜೊತೆ ಜೊತೆಯಲಿ’ ಸೀರಿಯಲ್ ಆರ್ಯವರ್ಧನ್ ಗೆ ಭೀಕರ ಕಾರು ಅಪಘಾತ: ಅನಿರುದ್ಧ ನಟಿಸುತ್ತಿದ್ದ ಪಾತ್ರ ಖತಂ?

    ಜೀ ಕನ್ನಡ ವಾಹಿನಿಯು ಜೊತೆ ಜೊತೆಯಲಿ ಧಾರಾವಾಹಿಯ ಪ್ರೊಮೋವೊಂದನ್ನು ರಿಲೀಸ್ ಮಾಡಿದ್ದು, ಧಾರಾವಾಹಿಯ ಕಥೆಗೆ ಮೇಜರ್ ತಿರುವು ನೀಡಲಾಗಿದೆ. ಈವರೆಗೂ ಆರ್ಯವರ್ಧನ್ ಪಾತ್ರವನ್ನು ಕಥೆಯಲ್ಲಿ ಇಟ್ಟುಕೊಳ್ಳಲಾಗುವುದು ಎಂದಿದ್ದ ನಿರ್ಮಾಪಕರು ಆ ಪಾತ್ರವನ್ನು ಸಾಯಿಸಲು ಪ್ಲ್ಯಾನ್ ಮಾಡಿದ್ದಾರೆ ಎನ್ನುವ ಅನುಮಾನ, ಆ ಪ್ರೋಮೋ ನೋಡಿದ ಮೇಲೆ ವ್ಯಕ್ತವಾಗಿದೆ. ಆರ್ಯವರ್ಧನ್ ಸ್ಪೀಡ್ ಆಗಿ ಕಾರು ಓಡಿಸಿಕೊಂಡು ಹೋಗುತ್ತಿದ್ದು, ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆಯುತ್ತಾ ಸಾಗಿದೆ.

    ಈಗಾಗಲೇ ಆರ್ಯವರ್ಧನ್ ಅವರ ಸಹೋದರನ ಪಾತ್ರಕ್ಕೆ ನಟ ಹರೀಶ್ ರಾಜ್ ಆಯ್ಕೆಯಾಗಿದ್ದಾರೆ. ಅವರ ನಟನೆಯ ದೃಶ್ಯಗಳು ಕೂಡ ಪ್ರಸಾರವಾಗುತ್ತಿವೆ. ಆರ್ಯವರ್ಧನ್ ನನ್ನು ಕೊಲ್ಲುವ ಮೂಲಕ, ಆತನ ಸಾಮ್ರಾಜ್ಯಕ್ಕೆ ಹರೀಶ್ ರಾಜ್ ಪಾತ್ರ ಅಧಿಪತಿ ಆಗತ್ತಾ ಎನ್ನುವ ಅನುಮಾನ ಕೂಡ ಮೂಡುತ್ತಿದೆ. ಅಥವಾ ಹರೀಶ್ ರಾಜ್ ಪಾತ್ರವೇ ಆರ್ಯವರ್ಧನ್ ನ ಸಾಯಿಸ್ತಾ ಎನ್ನುವ ಪ್ರಶ್ನೆ ಮೂಡುವಂತೆಯೂ ಪ್ರೊಮೋದಲ್ಲಿ ತೋರಿಸಲಾಗಿದೆ. ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

    ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಪಾತ್ರಧಾರಿಗಳನ್ನು ಬದಲಾಯಿಸಲು ಒಂದು ತಂತ್ರವನ್ನು ಉಪಯೋಗಿಸಲಾಗುತ್ತದೆ. ಆಕ್ಸಿಡೆಂಟ್ ಮಾಡಿಸಿ, ಪ್ಲಾಸ್ಟಿಕ್ ಸರ್ಜರಿ ಮೂಲಕ ಹೊಸ ಕಲಾವಿದನನ್ನು ಪರಿಚಯ ಮಾಡಿಸಲಾಗುತ್ತದೆ. ಅದೇ ಹಳೆ ತಂತ್ರವನ್ನು ಜೊತೆ ಜೊತೆಯಲಿ ಧಾರಾವಾಹಿ ತಂಡ ಮಾಡುತ್ತಾ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಕೂಡ ಗೊತ್ತಾಗಲಿದೆ. ಅಥವಾ ಪರ್ಮನೆಂಟ್ ಆಗಿ ಪಾತ್ರವನ್ನೇ ಮುಗಿಸುತ್ತಾರಾ ಅದು ಕೂಡ ಸಾಧ್ಯತೆ ಇದೆ.

    ಇಂದು ರಿಲೀಸ್ ಆಗಿರುವ ಪ್ರೊಮೋ ನೋಡಿದರೆ ಇಂತಹ ಹತ್ತು ಹಲವು ಪ್ರಶ್ನೆಗಳು ಮೂಡುತ್ತಿದ್ದು, ಸ್ವತಃ ಧಾರಾವಾಹಿ ತಂಡವೇ ಕಥೆಯಲ್ಲಿ ರೋಚಕ ತಿರುವು ಎಂದು ಹೇಳಿಕೊಂಡಿದ್ದರಿಂದ ಅಂತಹ ತಿರುವು ಏನು? ಯಾವ ತಂತ್ರವನ್ನು ಹೆಣೆದು ಆರ್ಯವರ್ಧನ್ ಪಾತ್ರವನ್ನು ಉಳಿಸಿಕೊಳ್ಳುತ್ತಾರಾ? ಅಥವಾ ಮನೆಗೆ ಕಳುಹಿಸುತ್ತಾರೆ ಎನ್ನುವುದು ಸದ್ಯಕ್ಕಿರುವ ಸಸ್ಪೆನ್ಸ್.

    Live Tv
    [brid partner=56869869 player=32851 video=960834 autoplay=true]

  • ಆಸ್ಟ್ರೇಲಿಯಾದಲ್ಲಿ ಭೀಕರ ಆ್ಯಕ್ಸಿಡೆಂಟ್: ಪಂಜಾಬಿ ಜನಪ್ರಿಯ ಗಾಯಕ ನಿಧನ

    ಆಸ್ಟ್ರೇಲಿಯಾದಲ್ಲಿ ಭೀಕರ ಆ್ಯಕ್ಸಿಡೆಂಟ್: ಪಂಜಾಬಿ ಜನಪ್ರಿಯ ಗಾಯಕ ನಿಧನ

    ಸೆಡಾನ್ ನ 23 ವರ್ಷದ ಚಾಲಕನ ನಿರ್ಲಕ್ಷ್ಯದಿಂದಾಗಿ ಪಂಜಾಬಿಯ ಜನಪ್ರಿಯ ಗಾಯಕ ನಿರ್ವೈರ್ ಸಿಂಗ್ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಆಸ್ಟ್ರೇಲಿಯಾದ ಡಿಗ್ಗರ್ಸ್ ರೆಸ್ಟ್ ನಲ್ಲಿರುವ ಬುಲ್ಲಾ ಡಿಗ್ಗರ್ಸ್ ರೆಸ್ಟ್ ರಸ್ತೆಯಲ್ಲಿ ಈ ಭೀಕರ ಅಪಘಾತ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಮೆಲ್ಬೋರ್ನ್ ಬಳಿ ಒಟ್ಟು ಮೂರು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಈ ಅಪಘಾತದಲ್ಲಿ ಎರಡು ಮಕ್ಕಳ ತಂದೆಯಾಗಿರುವ, 42ರ ವಯಸ್ಸಿನ ನಿರ್ವೈರ್ ಸಿಂಗ್ ಮೃತಪಟ್ಟಿದ್ದಾರೆ. ಮಹಿಳೆಯೊಬ್ಬರಿಗೆ ಗಾಯವಾಗಿದ್ದು, ಅವರನ್ನು ಸ್ಥಳಿಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಪಂಜಾಬ್ ಸಂಗೀತ ಲೋಕದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ನಂತರ ಸಿಂಗ್, ಒಂಬತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾಗೆ ಬಂದಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಪಂಜಾಬ್ ನ ಕುರಾಲಿ ಪ್ರದೇಶದ ಸಿಂಗ್, ಒಂಬತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನೆಲೆಯೂರಿದ್ದರು. ಒಂದಷ್ಟು ದಿನ ಟ್ಯಾಕ್ಸಿ ಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೇ, ಹಲವಾರು ಆಲ್ಬಂಗೂ ಇವರು ಹಾಡಿದ್ದರು. ಮೈ ಟರ್ನ್ ಎಂಬ ಆಲ್ಬಂಗೆ ಹಾಡಿದ ‘ತೆರೆ ಬಿನಾ’ ಹಾಡು ಇಂದಿಗೂ ಫೇಮಸ್.

    Live Tv
    [brid partner=56869869 player=32851 video=960834 autoplay=true]

  • ಡ್ರಗ್ಸ್ ಸೇವಿಸಿ ಕಾರು ಅಪಘಾತ ಮಾಡಿಕೊಂಡಿದ್ದ ಖ್ಯಾತ ನಟಿ ಕೊನೆಗೂ ಉಳಿಯಲಿಲ್ಲ: ನಟಿಯ ನಿಧನಕ್ಕೆ ಹಾಲಿವುಡ್ ಕಂಬನಿ

    ಡ್ರಗ್ಸ್ ಸೇವಿಸಿ ಕಾರು ಅಪಘಾತ ಮಾಡಿಕೊಂಡಿದ್ದ ಖ್ಯಾತ ನಟಿ ಕೊನೆಗೂ ಉಳಿಯಲಿಲ್ಲ: ನಟಿಯ ನಿಧನಕ್ಕೆ ಹಾಲಿವುಡ್ ಕಂಬನಿ

    ಆಗಸ್ಟ್ 5 ರಂದು ನಡೆದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಾಲಿವುಡ್ ಖ್ಯಾತ ನಟಿ ಎನ್ ಹಿಚ್ (53) ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾರೆ. ಈ ಮಾಹಿತಿಯನ್ನು ಸ್ವತಃ ಅವರ ಪುತ್ರ ಹೋಮರ್ ಖಚಿತ ಪಡಿಸಿದ್ದಾರೆ. ಸಿಕ್ಸ್ ಡೇಸ್ ಸೆವನ್ ನೈಟ್ಸ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಇವರು ಕಾರು ಅಪಘಾತದ ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ, ಬಹುತೇಕ ಸುಟ್ಟು ಹೋಗಿದ್ದರು.  ಅಪಾರ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸಿದ್ದ ಹಿನ್ನೆಲೆಯಲ್ಲಿ ಇಂಥದ್ದೊಂದು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಡ್ರಗ್ಸ್ ಸೇವಿಸಿ ವೇಗವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಎನ್.ಹಿಚ್, ವೇಗದ ಕಂಟ್ರೋಲ್ ತಪ್ಪಿ ಮನೆಯೊಂದರ ಗೋಡೆಗೆ ಕಾರು ನುಗ್ಗಿಸಿದ್ದಾರೆ. ಗೋಡೆಗೆ ಕಾರು ಢಿಕ್ಕಿ ಹೊಡೆಯುತ್ತಿದ್ದಂತೆಯೇ ದಿಢೀರ್ ಅಂತ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಬೆಂಕಿಯ ಕಾರಣದಿಂದಾಗಿ ನಟಿಯನ್ನು ಆಚೆ ಕರೆದುಕೊಂಡು ಬರುವುದಕ್ಕೆ ಸಾಧ್ಯವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬಂದು, ನಟಿಯನ್ನು ಆಚೆ ತರುವಲ್ಲಿ ಬಹುತೇಕ ಸುಟ್ಟು ಹೋಗಿದ್ದಾರೆ ಎನ್.ಹಿಚ್. ಇದನ್ನೂ ಓದಿ:ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ಬಹುತೇಕ ಸುಟ್ಟು ನರಳಾಡುತ್ತಿದ್ದ ಎನ್.ಹಿಚ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಅವರು ಕೋಮಾಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಜೀವ ಉಳಿಸುವುದು ತೀರಾ ಕಷ್ಟವೆಂದು ವೈದ್ಯರು ಹೇಳಿರುವ ಕಾರಣದಿಂದಾಗಿ ನಟಿ ಅಂಗಾಂಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗಿದೆ ಇಹಲೋಕ ತ್ಯಜಿಸಿದ್ದಾರೆ. ಇವರ ನಿಧನಕ್ಕೆ ಹಾಲಿವುಡ್ ನ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡ್ರಗ್ಸ್ ಸೇವಿಸಿದ್ದ ಖ್ಯಾತ ನಟಿಯ ಕಾರು ಅಪಘಾತ: ಜೀವ ಉಳಿಯೋದು ಅನುಮಾನ ಎಂದ ವೈದ್ಯರು

    ಡ್ರಗ್ಸ್ ಸೇವಿಸಿದ್ದ ಖ್ಯಾತ ನಟಿಯ ಕಾರು ಅಪಘಾತ: ಜೀವ ಉಳಿಯೋದು ಅನುಮಾನ ಎಂದ ವೈದ್ಯರು

    ಬಾಲಿವುಡ್ ನ ಖ್ಯಾತ ನಟಿ,  ಸಿಕ್ಸ್ ಡೇಸ್ ಸೆವನ್ ನೈಟ್ಸ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಎನ್.ಹಿಚ್ ಅವರು ಕಾರು ಅಪಘಾತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಕುಟುಂಬಸ್ಥರು ಕೂಡ ಖಚಿತ ಪಡಿಸಿದ್ದಾರೆ ಎಂದು ಹೇಳಲಾಗಿದೆ. ಅಪಾರ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸಿದ್ದ ಹಿನ್ನೆಲೆಯಲ್ಲಿ ಇಂಥದ್ದೊಂದು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಡ್ರಗ್ಸ್ ಸೇವಿಸಿ ವೇಗವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಎನ್.ಹಿಚ್, ವೇಗದ ಕಂಟ್ರೋಲ್ ತಪ್ಪಿ ಮನೆಯೊಂದರ ಗೋಡೆಗೆ ಕಾರು ನುಗ್ಗಿಸಿದ್ದಾರೆ. ಗೋಡೆಗೆ ಕಾರು ಢಿಕ್ಕಿ ಹೊಡೆಯುತ್ತಿದ್ದಂತೆಯೇ ದಿಢೀರ್ ಅಂತ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಬೆಂಕಿಯ ಕಾರಣದಿಂದಾಗಿ ನಟಿಯನ್ನು ಆಚೆ ಕರೆದುಕೊಂಡು ಬರುವುದಕ್ಕೆ ಸಾಧ್ಯವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬಂದು, ನಟಿಯನ್ನು ಆಚೆ ತರುವಲ್ಲಿ ಬಹುತೇಕ ಸುಟ್ಟು ಹೋಗಿದ್ದಾರೆ ಎನ್.ಹಿಚ್. ಇದನ್ನೂ ಓದಿ:ಗಾಯಕ ಶಿವಮೊಗ್ಗ ಸುಬ್ಬಣ್ಣ ವಿಧಿವಶ

    ಬಹುತೇಕ ಸುಟ್ಟು ನರಳಾಡುತ್ತಿದ್ದ ಎನ್.ಹಿಚ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಅವರು ಕೋಮಾಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಜೀವ ಉಳಿಸುವುದು ತೀರಾ ಕಷ್ಟವೆಂದು ವೈದ್ಯರು ಹೇಳಿರುವ ಕಾರಣದಿಂದಾಗಿ ನಟಿ ಅಂಗಾಂಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಆಸ್ಪತ್ರೆಯಲ್ಲಿ ದಾಖಲಾಗಿಲ್ಲ ವಿಜಯ್ ದೇವರಕೊಂಡ, ಸಮಂತಾ?

    ಆಸ್ಪತ್ರೆಯಲ್ಲಿ ದಾಖಲಾಗಿಲ್ಲ ವಿಜಯ್ ದೇವರಕೊಂಡ, ಸಮಂತಾ?

    ಮಿಳಿನ ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ಇದೀಗ ‘ಖುಷಿ’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಎರಡು ವಾರಗಳಿಂದ ಅವರು ಶೂಟಿಂಗ್‌ಗಾಗಿ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದರು. ಚಿತ್ರೀಕರಣದ ಸಂದರ್ಭದಲ್ಲಿ ಅಪಘಾತವಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ ಎನ್ನುವ ಸುದ್ದಿ ಇತ್ತು. ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಇದನ್ನೂ ಓದಿ : ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್

    ವಿಜಯ್ ದೇವರಕೊಂಡ ಮತ್ತು ಸಮಂತಾ ಅವರಿದ್ದ ಜೀಪ್ ನದಿಗೆ ಉರುಳಿ, ಭಾರೀ ಅಪಘಾತವಾಗಿದೆ ಎನ್ನುವ ಸುದ್ದಿ ಎರಡ್ಮೂರು ದಿನಗಳಿಂದ ಭಾರೀ ಸದ್ದು ಮಾಡಿತ್ತು. ಇಬ್ಬರೂ ಅಭಿಮಾನಿಗಳು ಇದರಿಂದಾಗಿ ಸಹಜವಾಗಿಯೇ ಆತಂಕಕ್ಕೀಡಾಗಿದ್ದರು. ಆದರೆ ಈ ಸುದ್ದಿಯ ಅಸಲಿ ಕಥೆಯೇ ಬೇರೆ ಇದೆ ಎನ್ನುತ್ತಾರೆ ಇವರ ಆಪ್ತರು. ಇದನ್ನೂ ಓದಿ : ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ

    ಅಷ್ಟಕ್ಕೂ ಸಮಂತಾ ಮತ್ತು ದೇವರಕೊಂಡ ಶೂಟಿಂಗ್‌ಗಾಗಿ ಕಾಶ್ಮೀರಕ್ಕೆ ಹೋಗಿದ್ದು ನಿಜ. ಎರಡು ವಾರಗಳ ಕಾಲ ಕಾಶ್ಮೀರದಲ್ಲೇ ಚಿತ್ರೀಕರಣ ನಡೆದಿದೆ. ಆದರೆ ಯಾವುದೇ ಅವಘಡ ಸಂಭವಿಸಿಲ್ಲವಂತೆ. ಈ ಸುದ್ದಿ ಹಬ್ಬಿದ ದಿನ ಇಬ್ಬರೂ ತಮ್ಮ ತಮ್ಮ ಮನೆಯಲ್ಲೇ ಇದ್ದರಂತೆ. ಶೂಟಿಂಗ್ ಮುಗಿಸಿಕೊಂಡು ಈಗಾಗಲೇ ಅವರು ತಮ್ಮ ಮನೆ ಸೇರಿಕೊಂಡಿದ್ದಾರೆ. ಅಲ್ಲದೇ ಇಬ್ಬರೂ ಕರಣ್ ಜೋಹಾರ್ ಹುಟ್ಟುಹಬ್ಬದ ಪಾರ್ಟಿಯಲ್ಲೂ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ : ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಕಾಶ್ಮೀರದ ಶೂಟಿಂಗ್ ಮುಗಿದು ಮೂರ್ನಾಲ್ಕು ದಿನಗಳೇ ಆಗಿವೆ. ಇಬ್ಬರೂ ತಮ್ಮ ತಮ್ಮ ಮನೆಯಲ್ಲಿ ನೆಮ್ಮದಿಯಾಗಿ ಇದ್ದಾರೆ. ಈ ನಡುವೆ ಅಪಘಾತದ ಸುದ್ದಿ ಬಂದಿದೆ. ಈ ಸುದ್ದಿಯನ್ನು ಯಾರು, ಯಾಕೆ ಹಬ್ಬಿಸಿದರೋ ಗೊತ್ತಿಲ್ಲ. ಆದರೆ ಈ ಸುದ್ದಿಯು ಅವರ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದ್ದು ಸುಳ್ಳಲ್ಲ.

  • ಬೈಕ್ ಸವಾರರು, ಚಾಲಕರು ಈ ನಿಯಮಗಳು ಪಾಲಿಸಿಲ್ಲ ಅಂದ್ರೆ ವಿಮೆ ಸಿಗಲ್ಲ: ಹೈಕೋರ್ಟ್

    ಬೈಕ್ ಸವಾರರು, ಚಾಲಕರು ಈ ನಿಯಮಗಳು ಪಾಲಿಸಿಲ್ಲ ಅಂದ್ರೆ ವಿಮೆ ಸಿಗಲ್ಲ: ಹೈಕೋರ್ಟ್

    ಬೆಂಗಳೂರು: ಆಕ್ಸಿಡೆಂಟ್ ಆದಾಗ ಬೈಕ್ ಸವಾರರು ಐಎಸ್‍ಐ ಮಾರ್ಕಿರುವ ಹೆಲ್ಮೆಟ್ ಧರಿಸಿದ್ದರೆ ಮಾತ್ರ ವಿಮೆ ಸಿಗಲಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

    ಹೆಲ್ಮೆಟ್ ಧರಿಸುವುದು ಎಂದರೆ ನೆಪ ಮಾತ್ರಕ್ಕೆ ಯಾವುದೋ ಹೆಲ್ಮೆಟ್ ಧರಿಸುವುದು ಎಂದರ್ಥವಲ್ಲ. ರಕ್ಷಣಾತ್ಮಕ ಹೆಲ್ಮೆಟ್‍ನನ್ನೇ ಧರಿಸಬೇಕು. ಐಎಸ್‍ಐ ಸಂಖ್ಯೆ 4151: 1993 ಮುದ್ರೆಯೇ ಇರಬೇಕು. ಹೆಲ್ಮೆಟ್ ತಯಾರಿಕಾ ಕಂಪನಿ ಹೆಸರು, ದಿನಾಂಕ, ವರ್ಷ, ಗಾತ್ರದ ವಿವರ ನಮೂದಾಗಿರಬೇಕು. ನಂಬರ್, ಹೆಸರು ಯಾವುದು ಅಳಿಸಿ ಹೋಗುವಂತಿರಬಾರದು. ಸುಲಭವಾಗಿ ಓದುವಂತಿರಬೇಕು ಎಂದು ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ನೇತೃತ್ವದ ಏಕಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ.

    ಐಎಸ್‍ಐ ಮಾರ್ಕಿಲ್ಲದ ಹೆಲ್ಮೆಟ್ ಧರಿಸಿದ್ದಾಗ ಅಪಘಾತಕ್ಕೀಡಾಗಿ ಮೃತಪಟ್ಟರೆ ಅಥವಾ ಅಂಗ ಊನವಾದರೆ ವಿಮೆ ಕಂಪನಿ ವಿಮೆ ಪಾವತಿಸಬೇಕಿಲ್ಲ. ಕಾರಿನ ಸೀಟ್ ಬೆಲ್ಟ್ ಹಾಕದೇ ಇದ್ದರೆ ವಿಮೆ ಕೊಡಬೇಕಾಗಿಲ್ಲ ಎಂದು ಓರಿಯಂಟಲ್ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಇದನ್ನೂ ಓದಿ: ಕೈಗೆ ಸಿಕ್ಕ ಹೆಲ್ಮೆಟ್ ಹಾಕೊಂಡು ಪೊಲೀಸರಿಂದ ಬಚಾವಾದ್ರೆ ಸಾಕು ಅಂತಿದ್ರೆ ನೀವು ಈ ಸುದ್ದಿ ಓದ್ಲೇಬೇಕು

  • ಬೈದಿದ್ದಕ್ಕೆ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ಜೀವಂತ ಸಮಾಧಿ ಮಾಡಲು ಮುಂದಾಗಿದ್ದವರು ಅರೆಸ್ಟ್!

    ಬೈದಿದ್ದಕ್ಕೆ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ಜೀವಂತ ಸಮಾಧಿ ಮಾಡಲು ಮುಂದಾಗಿದ್ದವರು ಅರೆಸ್ಟ್!

    ಬೆಂಗಳೂರು: ಅಪಘಾತ ಮಾಡಿದವನ ಮೇಲೆ ಬಾಯಿಗೆ ಬಂದಂತೆ ಬೈದಿದ್ದಕ್ಕೆ ಆತನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಪ್ರವೀಣ್ ಅಪಹರಣಕ್ಕೆ ಒಳಗಾದ ಯುವಕ. ಸಂತೋಷ್, ಅರ್ಜುನ್, ಮುತ್ತು, ಜೀವಾ, ಮುರಳಿ ಪ್ರವೀಣ್ ನನ್ನು ಅಪಹರಣ ಮಾಡಿ ಕೊಲೆ ಮಾಡಲು ಮುಂದಾಗಿದ್ದರು. ಖಚಿತ ಮಾಹಿತಿ ಹಿನ್ನಲೆ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಶುಕ್ರವಾರ ರಾತ್ರಿ ರಸ್ತೆಯಲ್ಲಿ ಓಮ್ನಿ ಕಾರು ಡಿಯೋಗೆ ಡಿಕ್ಕಿ ಹೊಡೆದಿತ್ತು. ಈ ವಿಚಾರದ ಬಗ್ಗೆ ಡಿಯೋ ಓಡಿಸುತ್ತಿದ್ದ ಪ್ರವೀಣ್ ಓಮ್ನಿ ಚಾಲಕನಿಗೆ ಬಾಯಿಗೆ ಬಂದಂತೆ ಬೈದಿದ್ದ. ಎಲ್ಲರ ಎದುರು ಅವಮಾನ ಮಾಡಿದ ಎಂದು ಕಾರನ್ನು ಓಡಿಸ್ತಾ ಇದ್ದವರು ಪ್ರವೀಣ್ ನನ್ನು ಕಿಡ್ನ್ಯಾಪ್ ಮಾಡಿದ್ದರು.

    ಕಿಡ್ನ್ಯಾಪ್ ಮಾಡಿ ಮುನಿಸ್ವಾಮಪ್ಪ ಪಾಳ್ಯದಲ್ಲಿರುವ ಸ್ಮಶಾನಕ್ಕೆ ಹೋಗಿ ಹೊಡೆದು ಗುಂಡಿಯಲ್ಲಿ ಪ್ರವೀಣ್ ನನ್ನು ಜೀವಂತ ಸಮಾಧಿ ಮಾಡಲು ಪ್ಲಾನ್ ಮಾಡಿದ್ದರು. ಅಷ್ಟರಲ್ಲಿ ಸ್ಥಳೀಯರು ಕಿಡ್ನ್ಯಾಪ್ ಮಾಡಿದ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಖಚಿತ ಮಾಹಿತಿ ಹಿನ್ನಲೆ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿಗಳ ಪೈಕಿ ಒಬ್ಬನ ಅಜ್ಜ ಸ್ಮಶಾನವನ್ನು ಕಾಯುತ್ತಿದ್ದರು. ಹೀಗಾಗಿ ಹಲ್ಲೆ ಮಾಡಿ ಹೂತು ಹಾಕುವ ಉದ್ದೇಶದಿಂದ ಪ್ರವೀಣ್ ನನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿದ್ದಾರೆ.

  • ಸಮಾಧಿಯಾಗಿದ್ದ ವ್ಯಕ್ತಿಯ ಕೇಸ್ ಇದೀಗ ಮತ್ತೆ ಓಪನ್: ಬೆಂಗ್ಳೂರು ಪೊಲೀಸರ ತನಿಖೆಯ ಮೇಲೆ ಅನುಮಾನ!

    ಸಮಾಧಿಯಾಗಿದ್ದ ವ್ಯಕ್ತಿಯ ಕೇಸ್ ಇದೀಗ ಮತ್ತೆ ಓಪನ್: ಬೆಂಗ್ಳೂರು ಪೊಲೀಸರ ತನಿಖೆಯ ಮೇಲೆ ಅನುಮಾನ!

    ಬೆಂಗಳೂರು: ಸಮಾಧಿಯಾಗಿದ್ದ ವ್ಯಕ್ತಿಯ ಕೇಸ್ ಇದೀಗ ಮತ್ತೆ ಓಪನ್ ಆಗಿದೆ. ವರ್ಷದ ನಂತರ ಪ್ರಕರಣದ ಮರು ವಿಚಾರಣೆ ಆಗುತ್ತಿದ್ದು, ತನಿಖೆ ನಡೆಸಿದ ಪೊಲೀಸರ ಮೇಲೆಯೇ ಅನುಮಾನ ಎದ್ದಿದೆ.

    ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾದ ಸಲೀಂ ಎಂಬುವರ ಪತ್ನಿ ಅಪ್ಸಾನಾ ನೀಡಿದ ದೂರಿನಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿದೆ ಎಂದು ತಿಳಿದು ಪೊಲೀಸ್ ಆಯುಕ್ತರಾದ ಸುನೀಲ್ ಕುಮಾರ್ ಇದೀಗ ಪ್ರಕರಣದ ತನಿಖೆ ನಡೆಸುವಂತೆ ಚಂದ್ರಾಲೇಔಟ್ ಪೊಲೀಸರಿಗೆ ಸೂಚಿಸಿದ್ದಾರೆ.

    ಏನಿದು ಪ್ರಕರಣ?
    ಬೆಂಗಳೂರಿನ ಗಂಗೊಂಡನಹಳ್ಳಿ ನಿವಾಸಿಯಾದ ಸಲೀಂ ಎಂಬವರು 2016 ರ ಅಕ್ಟೋಬರ್ 18 ರಂದು ದೀಪಾಂಜಲಿ ನಗರದಲ್ಲಿ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಮೊದಲು ಚಂದ್ರಾಲೇಔಟ್‍ನ ಗುರುಶ್ರೀ ಆಸ್ಪತ್ರೆ ಸೇರಿದ್ದ ಸಲೀಂ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಗೆ ದಾಖಲಿಸಲಾಗಿತ್ತು. ಆದರೆ ಮರು ದಿನವೇ ಸಲೀಂ ಅವರನ್ನ ನಿಮ್ಹಾನ್ಸ್ ನಿಂದ ಡಿಸ್ಚಾರ್ಜ್ ಮಾಡಿಸಿದ್ದ ಸೋದರರಾದ ನದೀಂ ಹಾಗೂ ಖಲೀಮ್, ಅಣ್ಣ ತೀರಿಹೋಗಿದ್ದಾನೆಂದು ಮನೆಯವರಿಗೆ ಹೇಳಿ ಮಣ್ಣು ಮಾಡಿದ್ದರು.

    ಅನುಮಾನ ಮೂಡಿದ್ದು ಹೇಗೆ?
    ಸಲೀಂ ಅಪಘಾತಕ್ಕೆ ಒಳಗಾಗುವ ಮುನ್ನ ಸೋದರರ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ಗಲಾಟೆ ಆಗಿತ್ತು. ಅಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿ ಸಲೀಂ ಮೃತಪಟ್ಟಿರಲಿಲ್ಲ. ಹಾಗೆಯೇ ಸಲೀಂ ಮೃತಪಡದೆ ಇದ್ದುದರಿಂದ ಮರಣೋತ್ತರ ಪರೀಕ್ಷೆ ಸಹ ನಡೆದಿರಲಿಲ್ಲ. ಹೀಗಾಗಿ ಅನುಮಾನದಿಂದ ಪತಿಯ ಸಾವಿನ ಬಗ್ಗೆ ಪತ್ನಿ ಅಪ್ಸಾನಾ ಚಂದ್ರಾಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

    ಮತ್ತೆ ತನಿಖೆ ಯಾಕೆ?
    ದೂರು ದಾಖಲಿಸಿಕೊಳ್ಳಲು ಕಾಲಹರಣ ಮಾಡಿದ್ದ ಪೊಲೀಸರು 2017ರ ಮಾರ್ಚ್ 27 ರಂದು ನಾನ್ ಕಾಗ್ನಿಸೆಬಲ್ ರಿಪೋರ್ಟ್(ಗಂಭೀರವಲ್ಲದ ಕೃತ್ಯ) ಬರೆದುಕೊಟ್ಟು ಕೈತೊಳೆದುಕೊಂಡಿದ್ದರು. ಚಂದ್ರಾಲೇಔಟ್ ಠಾಣೆ ಪೊಲೀಸರು ಅಪ್ಸಾನಾ ದೂರನ್ನು ಮೊದಲಿಗೆ ತಿರಸ್ಕಾರದಿಂದ ನೋಡಿ ಕೊನೆಯಲ್ಲಿ ಎನ್‍ಸಿಆರ್ ದಾಖಲಿಸಿದ್ದಾರಾದರೂ ಅದರ ಬಗ್ಗೆಯೂ ಹಲವು ಅನುಮಾನಗಳು ಎದ್ದಿವೆ. ದಿನಾಂಕ, ಹೆಸರುಗಳೆಲ್ಲವೂ ತಪ್ಪಾಗಿದ್ದು ಬೇರೆ ಯಾರದ್ದೋ ಎನ್‍ಸಿಆರ್ ತಿದ್ದಿ ಇವರಿಗೆ ಕೊಟ್ಟಿದ್ದಾರೆಂಬ ಮಾತೂ ಕೇಳಿಬಂದಿದೆ. ಹಾಗೆಯೇ ಅಪ್ಸಾನಾ ಪತಿ ಸಲೀಂಗೆ ಪಿತ್ರಾರ್ಜಿತವಾಗಿ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯಿದ್ದು, ಅದನ್ನ ಕಬಳಿಸಲು ಸೋದರರೇ ಕೊಲೆ ಮಾಡಿದ್ದಾರೆಂಬ ಆರೋಪವೂ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಅಪಘಾತದಲ್ಲಿ ಸಲೀಂ ಮೃತಪಟ್ಟರೂ ಸಂಬಂಧಪಟ್ಟ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಿಸಿಲ್ಲ. ಅದರ ಜತೆಗೆ ನಿಮ್ಹಾನ್ಸ್ ನಲ್ಲಿ ಸಾಯುವ ಮುನ್ನವೇ ಸಲೀಂ ಅವರನ್ನ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದಿರುವುದು ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಆಸ್ತಿಗಾಗಿ ಸೋದರರೇ ಕೊಲೆ ಮಾಡಿದ್ರಾ ಎನ್ನುವ ಅನುಮಾನ ದಟ್ಟವಾಗಿದೆ.

    ತನಿಖೆಯ ಉಸ್ತುವಾರಿಯನ್ನ ಕೆಂಗೇರಿ ಗೇಟ್ ಎಸಿಪಿ ಪ್ರಕಾಶ್ ಅವರಿಗೆ ವಹಿಸಲಾಗಿದ್ದು ಚಂದ್ರಾ ಲೇಔಟ್ ಪೊಲೀಸರು ಮತ್ತೆ ತನಿಖೆ ಆರಂಭಿಸಿದ್ದಾರೆ. ಸದ್ಯ ಸಲೀಂ ಸೋದರರು ಹಾಗೂ ಕೃತ್ಯಕ್ಕೆ ಸಹಕರಿಸಿದ ಜಮೀರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಂಪೂರ್ಣ ತನಿಖೆಯ ನಂತರವೇ ಸಲೀಂ ಸಾವಿನ ರಹಸ್ಯ ಹೊರಬರಲಿದೆ.