ಸಿನಿಮಾ ಶೂಟಿಂಗ್ ಮುಗಿಸಿಕೊಂಡು ನಿಶ್ಚಿತಾರ್ಥಕ್ಕೆ ಬರುತ್ತಿದ್ದ ಛತ್ತೀಸ್ ಗಢದ ಖ್ಯಾತ ಖಳನಟ (Villain) ಸೂರಜ್ ಮೆಹರ್ (Suraj Mehr) ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. 40ರ ವಯಸ್ಸಿನ ನಟ ಅಖ್ರಿ ಫೈಸ್ಲಾ ಸಿನಿಮಾದ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ಬರುವಾಗ ಈ ಅವಘಡ ನಡೆದಿದೆ.
ಛತ್ತೀಸಗಢ ಸಿನಿಮಾ ರಂಗದಲ್ಲಿ ಬಹುಬೇಡಿಕೆಯ ನಟರಾಗಿದ ಸೂರಜ್, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಲನ್ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಬುಧವಾರ ಅವರ ಎಂಗೇಜ್ ಮೆಂಟ್ ಆಗಬೇಕಿತ್ತು. ಆದರೆ, ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ನಟನು ಪ್ರಯಾಣಿಸುತ್ತಿದ್ದ ಕಾರಿಗೆ ವೇಗವಾಗಿ ಬಂದ ಟ್ರಕ್ ಗುದ್ದಿರುವ ಪರಿಣಾಮ, ಸೂರಜ್ ತೀವ್ರವಾಗಿ ಗಾಯಗೊಂಡಿದ್ದರು. ಹಾಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇನ್ನೋರ್ವರಿಗೂ ಗಂಭೀರ ಗಾಯಗಳು ಆಗಿವೆಯಂತೆ.
ತಮ್ಮ ಸ್ಕೂಟಿಗೆ ಕಾರು ಡಿಕ್ಕಿ ಹೊಡೆಸಿ, ತಮ್ಮನ್ನು ಅವಾಚ್ಯ ಪದಗಳಿಂದ ನಟಿ (Actress) ಲಕ್ಷ್ಮಿ ಸಿದ್ದಯ್ಯ (Lakshmi Siddaiah) ನಿಂದಿಸಿದ್ದಾರೆ ಎಂದು ಇಬ್ಬರು ಹುಡುಗಿಯರು ಆರೋಪ ಮಾಡಿದ್ದರು. ತಮ್ಮನ್ನು ನಿಂದಿಸಿದ್ದಲ್ಲದೇ, ತಮ್ಮ ಮೊಬೈಲ್ ಕಿತ್ತುಕೊಂಡಿದ್ದಾರೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತಂತೆ ನಟಿ ಲಕ್ಷ್ಮಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದು ಡಿಸೆಂಬರ್ 6ರಂದು ನಡೆದಿರುವ ಘಟನೆ (Accident). ನಾನು ವೇಗವಾಗಿ ಕಾರು ಓಡಿಸ್ತಿದ್ದೆ ಎಂದು ಹೇಳ್ತಾರೆ. ಜ್ಞಾನ ಭಾರತಿ ರಸ್ತೆಯಲ್ಲಿ, ಅದೂ ಸಂಜೆ ವೇಳೆ ಕಾರನ್ನು ವೇಗವಾಗಿ ಓಡಿಸೋಕೆ ಸಾಧ್ಯವೇ ಇಲ್ಲ. ಆ ಹುಡುಗಿಯರು ಸುಳ್ಳು ಹೇಳುತ್ತಿದ್ದಾರೆ. ಅವರ ದ್ವಿಚಕ್ರವಾಹನಕ್ಕೆ ಟಚ್ ಆಗಿದ್ದು ನಿಜ. ಅವರೇ ನನ್ನ ಮೇಲೆ ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದು. ಅವರ ಅಣ್ಣ, ತಾಯಿ ಎಲ್ಲರೂ ಸ್ಥಳಕ್ಕೆ ಬಂದಿದ್ದರು. ನನಗೆ ಶೂಟಿಂಗ್ ಇದ್ದ ಕಾರಣ ಬೇಗ ಹೊರಟೆ. ದುಡ್ಡಿಗಾಗಿ ಅವರು ಬೇಡಿಕೆ ಇಟ್ಟರು. ನಾನು ಕೊಡುವುದಿಲ್ಲ ಎಂದೆ. ಅಷ್ಟೇ ಆಗಿದ್ದು. ಅವರು ಸುಳ್ಳು ಹೇಳುತ್ತಿದ್ದಾರೆ ಅಂತಾರೆ ಲಕ್ಷ್ಮಿ.
ತಪ್ಪು ಮಾಡಿಲ್ಲ ಹಾಗಾಗಿ ಕಾಸು ಕೊಡಲ್ಲ ಎಂದಿರುವ ಲಕ್ಷ್ಮಿ, ಆ ಸಹೋದರಿಯ ಕಡೆಯಿಂದ ತಮಗೆ ಕರೆ ಬಂದಾಗ ಎರಡು ಲಕ್ಷ ರೂಪಾಯಿ ಕೇಳಿದರು ಎಂದು ಲಕ್ಷ್ಮಿ ಹೇಳಿದ್ದಾರೆ. ಅವರ ಮೇಲೆ ಕಾನೂನು ರೀತಿಯ ಕ್ರಮಕ್ಕಾಗಿ ಕೋರ್ಟ್ ಗೆ ಮೊರೆ ಹೋಗುವುದಾಗಿಯೂ ನಟಿ ತಿಳಿಸಿದ್ದಾರೆ.
ಕನ್ನಡದ ಕಿರುತೆರೆ ಮತ್ತು ಹಿರಿತೆರೆ ನಟಿ ಲಕ್ಷ್ಮಿ ಸಿದ್ದಯ್ಯ ಮೇಲೆ ಗುರುತರ ಆರೋಪ ಬಂದಿದೆ. ಆಕ್ಸಿಡೆಂಟ್ (Accident) ಮಾಡಿದ್ದಲ್ಲದೇ, ಯುವತಿಯರ ಜೊತೆ ನಡುರಸ್ತೆಯಲ್ಲೇ ಲಕ್ಷ್ಮಿ (Lakshmi Siddaiah) ರಂಪಾಟ ಮಾಡಿದ್ದಾರೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಕ್ಸಿಡೆಂಟ್ ಮಾಡಿದ್ದಲ್ಲದೇ ಯುವತಿಗೆ ಹಲ್ಲೆ ಕೂಡ ನಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ಕಳೆದ ಡಿಸೆಂಬರ್ 6 ರಂದು ಜ್ಞಾನ ಭಾರತಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ಸ್ಕೂಟಿಯಲ್ಲಿ ಹೋಗುತ್ತಿದ್ದ ಮಾಧುರಿ ಮತ್ತು ಅವರ ಸೋದರಿ ಐಶ್ವರ್ಯಗೆ ನಟಿ ಲಕ್ಷ್ಮಿ ಅವರ ಕಾರು ಡಿಕ್ಕಿ ಹೊಡೆದಿದೆ. ಲಕ್ಷ್ಮಿ ಆಕ್ಸಿಡೆಂಟ್ ಮಾಡಿದ್ದಲ್ಲದೇ, ಮಾಧುರಿ ಮತ್ತು ಐಶ್ವರ್ಯ ಅವರ ಮೇಲೆ ಹಲ್ಲೆ ಕೂಡ ಮಾಡಿದ್ದಾರಂತೆ. ಜೊತೆಗೆ ಇವರ ಮೊಬೈಲ್ ಕೂಡ ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಟಿ ಲಕ್ಷ್ಮಿ ಚಲಾಯಿಸುತ್ತಿದ್ದ ಕಾರು ಮಾಧುರಿ ಮತ್ತು ಐಶ್ವರ್ಯ ಗಾಡಿಗೆ ಡಿಕ್ಕಿ ಹೊಡೆದಿದೆ. ಅಲ್ಲಿಂದ ಮಾತಿಗೆ ಮಾತು ಶುರುವಾಗಿದೆ. ಲಕ್ಷ್ಮಿ ಮತ್ತು ಅವರ ಜೊತೆಗಿದ್ದ ಆನಂದ್ ಕುಮಾರ್ ಎನ್ನುವವರು ಹಲ್ಲೆ ಮಾಡಿದ್ದಾರೆ ಎಂದು ಈ ಸೋದರಿಯರು ಆರೋಪ ಮಾಡಿದ್ದಾರೆ. ಜೊತೆಗೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದಾರೆ.
ಗಲಾಟೆ ನಡೆದು 3 ತಿಂಗಳಾದರೂ ಪೊಲೀಸರು ಕ್ರಮ ತಗೆದುಕೊಂಡಿಲ್ಲ ಎನ್ನುವುದು ಸೋದರಿಯರ ಆರೋಪ. ಮೊಬೈಲ್ ಸಹ ವಾಪಾಸ್ಸು ಕೊಡಿಸಿಲ್ಲ ಎನ್ನುತ್ತಾರೆ ಹಲ್ಲೆಗೊಳಗಾದವರು.
ನಟ ಯಶ್ (Yash) ಹುಟ್ಟು ಹಬ್ಬದಂದು ಬ್ಯಾನರ್ ಕಟ್ಟಲು ಹೋಗಿ ಆಗಿದ್ದ ದುರಂತ ಮಾಸುವ ಮುನ್ನವೇ, ಯಶ್ ಅಭಿಮಾನಿಯ ಕಾಲು ಮೇಲೆ ಕಾರು ಹಾದು ಮತ್ತೊಂದು ಅವಘಡ (Accident) ಸಂಭವಿಸಿದೆ. ಯಶ್ ನೋಡುವುದಕ್ಕಾಗಿ ಅವರ ಕಾರು ಹಿಂದೆಯೇ ಓಡುತ್ತಿದ್ದ ಅಭಿಮಾನಿಯ ಕಾಲು ಮೇಲೆ ಕಾರು ಹತ್ತಿ, ಕಾಲು ರಕ್ತಸಿಕ್ತವಾಗಿದೆ.
ಬಳ್ಳಾರಿಯ (Bellary) ನಗರದ ಹೊರವಲಯದಲ್ಲಿರುವ ಬಾಲಾಜಿನಗರದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಗೆ ಯಶ್ ದೇವಸ್ಥಾನದ ಉದ್ಘಾಟನೆಗೆ ಬಂದಿದ್ದರು. ಬಾಲಾಜಿ ನಗರದಲ್ಲಿ ನೂತನವಾಗಿ ನಿರ್ಮಾಣವಾದ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ, ಯಶ್ ಅಭಿಮಾನಿ ಕಾಲಿನ ಮೇಲೆ ಕಾರಿನ ಚಕ್ರ ಉರುಳಿದೆ.
ಯಶ್ ತೆರಳುವ ಸಮಯದಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳು ಕಾರ್ ಹಿಂಬಾಲಿಸಿದ್ದರು. ಈ ವೇಳೆ ಯಶ್ ಬೆಂಗಾವಲು ವಾಹನ ಅಭಿಮಾನಿ ಕಾಲಿನ ಮೇಲೆ ಹರಿದಿದೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ಪಟ್ಟಣದ ವಸಂತ (Vasanth) ಎಂಬ ಯುವಕನ ಮೇಲೆ ಕಾರು ಹರಿದಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಕಾರ್ ಹಿಂಬಾಲಿಸಿ ಬರವಾಗ ಈ ಘಟನೆ ನಡೆದಿದೆ.
ಕಳೆದ ಒಂದು ವಾರದಿಂದ ಉಸಿರೆ ಸಿನಿಮಾದ ಚಿತ್ರೀಕರಣ ಮಡಿಕೇರಿ ಸುತ್ತಮುತ್ತ ನಡೆಯುತ್ತಿದೆ. ಚಿತ್ರೀಕರಣ ನಡೆಸುತ್ತಿದ್ದ ಚಿತ್ರತಂಡ ಇಂದು ಮಕ್ಕಂಧೂರು ಬಳಿ ನಾಯಕ ಸಂತೋಷ್ (Santosh) ಮತ್ತು ನಾಯಕಿ ಅಪೂರ್ವ (Apoorva) ಬೈಕ್ ಓಡಿಸುವ ದೃಶ್ಯ ಚಿತ್ರಿಸುವ ವೇಳೆ ಆಯಾ ತಪ್ಪಿ ಜಾರಿ ಬಿದ್ದಿದ್ದಾರೆ. ಪರಿಣಾಮ ನಾಯಕ ಮತ್ತು ನಾಯಕಿ ಇಬ್ಬರ ಕಾಲುಗಳಿಗೆ ಪೆಟ್ಟಾಗಿದೆ.
ಬೈಕ್ ಅಪಘಾತವಾಗಿ ಇಬ್ಬರೂ ನೆಲಕ್ಕೆ ಉರುಳಿದ್ದಾರೆ. ಕೂಡಲೇ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹತ್ತಿರದ ಮಾದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ ಮತ್ತು ಇಂದಿನ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಪನೆಮ್ ಪ್ರಭಾಕರ್ ತಿಳಿಸಿದ್ದಾರೆ.
ಆರ್.ಎಸ್.ಪಿ. ಪ್ರೊಡಕ್ಷನ್ಸ್ ಮೂಲಕ ಲಕ್ಷ್ಮಿ ಹರೀಶ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ನಟ ತಿಲಕ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಬೇಜವಾಬ್ದಾರಿ ಪೊಲೀಸ್ ಅಧಿಕಾರಿ, ತನ್ನ ಹೆಂಡತಿಗೆ ಅನಾಮಿಕ ವ್ಯಕ್ತಿಯಿಂದ ಪ್ರಾಣಕ್ಕೆ ಆಪತ್ತು ಬಂದಾಗ ಆತ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ, ತನ್ನ ತಾಯಿಯನ್ನು ಕೊಂದವರ ಮೇಲೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಉಸಿರು ಚಿತ್ರದ ಕಥೆಯಾಗಿದೆ.
ನಿನ್ನೆ ರಾತ್ರಿ ನಟ ನಾಗಭೂಷಣ್ (Nagabhushan) ಕಾರು ಅಪಘಾತದಲ್ಲಿ (Accident) ಮಹಿಳೆಯೋರ್ವರು ಸಾವಿಗೀಡಾಗಿದ್ದು ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ನಂತರ ನಟ ನಾಗಭೂಷಣ್ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಎಲ್ಲ ಬೆಳವಣಿಗೆ ಕುರಿತಂತೆ ಸಂಚಾರ ದಕ್ಷಿಣ ಡಿಸಿಪಿ ಶಿವಪ್ರಕಾಶ್ ದೇವರಾಜ್ (Shivaprakash Devaraj) ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ರಾತ್ರಿ 9-30 ಕ್ಕೆ ಅಪಘಾತವಾಗಿದೆ. ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆಯಲ್ಲಿ ನಡೆದ ಈ ಘಟನೆಯಲ್ಲಿ ಪಾದಾಚಾರಿಗಳಾದ ಕೃಷ್ಣ ಮತ್ತು ಪ್ರೇಮಾ (Prema) ಎಂಬುವರಿಗೆ ಅಪಘಾತವಾಗಿತ್ತು. ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಕಾರು ಚಾಲಕ ವಾಹನ ಓಡಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಆಕ್ಸಿಡೆಂಟ್ ನಂತರ ಸ್ಪಾಟ್ ನಲ್ಲೇ ಪ್ರೇಮಾ ಮೃತಪಟ್ಟಿದ್ದಾರೆ. ಕೃಷ್ಣ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಚಾಲಕ ನಟನಾಗಿದ್ದು ಅರೆಸ್ಟ್ ಮಾಡಲಾಗಿದೆ. ಮುಂದಿನ ಪ್ರೊಸೀಜರ್ ನಡೆಸಲಾಗ್ತಿದೆ. ಇದನ್ನೂ ಓದಿ:ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ ರಚಿತಾ- ಸೋಶಿಯಲ್ ಮೀಡಿಯಾದಲ್ಲಿ ನಟಿ ಮನವಿ
ನಾಗಭೂಷಣ್ ಅವರನ್ನು ಈಗ ಸ್ಟೇಷನ್ ಬೇಲ್ ನೀಡಿ ಕಳಿಸಲಾಗಿದ್ದು, ಮುಂದಿನ ವಿಚಾರಣೆಗೆ ಮತ್ತೆ ಕರೆಯಲಾಗುತ್ತದೆ. ಪ್ರಾಥಮಿಕ ತನಿಖೆಯಲ್ಲಿ ಅತಿ ವೇಗ ಅಪಘಾತಕ್ಕೆ ಕಾರಣವಾಗಿದೆ ಎಂದು ಗೊತ್ತಾಗಿದ್ದು, ಆತ ಚಾಲನೆ ಮಾಡುವಾಗ ಕುಡಿದಿಲ್ಲ ಎಂದು ಗೊತ್ತಾಗಿದೆ. ರಾತ್ರಿಯೇ ಆಲ್ಕೊ ಹಾಲ್ ಟೆಸ್ಟಿಂಗ್ ಮೀಟರ್ ನಲ್ಲಿ ಕುಡಿದಿಲ್ಲ ಅನ್ನೋದು ಪತ್ತೆಯಾಗಿದೆ.
ಬ್ಲಡ್ ತೆಗೆದು ಟೆಸ್ಟಿಂಗ್ ಕೂಡ ಕಳುಹಿಸಲಾಗಿತ್ತು. ಆ ವರದಿಯಲ್ಲೂ ಕುಡಿದಿಲ್ಲ ಅನ್ನೋದು ಪತ್ತೆಯಾಗಿದೆ. ಆಕ್ಸಿಡೆಂಟ್ ಮಾಡಿದ ಬಳಿಕ ಸ್ಥಳೀಯರ ಜೊತೆ ಸೇರಿ ಚಾಲಕ ಅಂದರೆ ನಟ ನಾಗಭೂಷಣ್ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ ಎಂದು ಸಂಚಾರ ದಕ್ಷಿಣ ಡಿಸಿಪಿ ಶಿವಪಕ್ರಾಶ್ ದೇವರಾಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕನ್ನಡದ ಹೆಸರಾಂತ ನಟ ನಾಗಭೂಷಣ್ (Nagabhushan) ಕಾರು ಅಪಘಾತವಾಗಿದ್ದು (Accident), ಬೆಂಗಳೂರಿನ ವಸಂತಪುರದ ನಿವಾಸಿ 48ರ ವಯಸ್ಸಿನ ಪ್ರೇಮಾ (Prema) ಎನ್ನುವವರು ಸಾವನ್ನಪ್ಪಿದ್ದಾರೆ (Death). ನಿನ್ನೆ ತಡ ರಾತ್ರಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಒಂಬತ್ತು ಗಂಟೆಗೆ ನಾಗಭೂಷಣ್ ತಮ್ಮ ಮನೆಗೆ ತೆರಳುವಾಗ ಅಪಘಾತವಾಗಿದೆ ಎಂದು ತಿಳಿದು ಬಂದಿದೆ.
ಶೂಟಿಂಗ್ ಮುಗಿಸಿಕೊಂಡು ನಾಗಭೂಷಣ್ ಬರುವಾಗ ರಸ್ತೆಯಲ್ಲಿ ಅಡ್ಡಬಂದ ಪಾದಚಾರಿ ದಂಪತಿಗಳಾದ ಪ್ರೇಮಾ ಮತ್ತು ಕೃಷ್ಣ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ದಂಪತಿಗಳಿಬ್ಬರಿಗೂ ತೀವ್ರ ಗಾಯವಾಗಿದ್ದು, ಗಾಯಾಳುಗಳನ್ನು ಖುದ್ದಾಗಿ ನಾಗಭೂಷಣ್ ಅವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಪ್ರೇಮಾ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಪತಿ ಕೃಷ್ಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಗಭೂಷಣ್ ಅವರೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದರಿಂದ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮಾಹಿತಿ ಪಡೆಯುತ್ತಿದ್ದಾರೆ. ಮೃತರ ಪುತ್ರನು ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಫುಟ್ ಪಾತ್ ಮೇಲೆ ತಂದೆ ತಾಯಿ ವಾಕ್ ಮಾಡುವಾಗ ಕಾರು ಹಾಯ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಂಗಳೂರಿನ ಲಾಲ್ ಬಾಗ್ (Lal Bagh) ನಲ್ಲಿ ಫ್ಲವರ್ ಶೋ (Flower Show) ನಡೆಯುತ್ತಿದೆ. ಇದರಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವುದಕ್ಕಾಗಿ ನಟಿ ರಚಿತಾ ರಾಮ್ (Rachita Ram) ಇಂದು ಲಾಲ್ ಬಾಗ್ ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಚಿತಾ ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದೆ. ಜಸ್ಟ್ ಮಿಸ್ ಎನ್ನುವಂತೆ ಕಾರ್ಮಿಕ ಪಕ್ಕಕ್ಕೆ ಹಾರಿ ಅಪಘಾತದಿಂದ ತಪ್ಪಿಸಿಕೊಂಡಿದ್ದಾನೆ.
ಈ ಘಟನೆ ನಡೆದಾಗ ರಚಿತಾ ರಾಮ್ ಕಾರಲ್ಲಿ ಇದ್ದರೂ, ಏನೂ ಆಗಿಯೇ ಇಲ್ಲ ಎನ್ನುವಂತೆ ಪ್ಲವರ್ ಶೋನತ್ತ ತೆರಳಿದ್ದಾರೆ. ಕಾರು ನಿಲ್ಲಿಸದೇ ಕ್ಷಮೆಯಾಚನೆಯೂ ಮಾಡದೇ ಹೊರಟ ರಚಿತಾ ಹಾಗೂ ಡ್ರೈವರ್ ನಡೆಗೆ ಅಲ್ಲಿದ್ದವರು ಬೇಸರ ಮಾಡಿಕೊಂಡಿದ್ದಾರೆ.
ಆಕಸ್ಮಿಕ ಎನ್ನುವಂತೆ ಘಟನೆ ನಡೆದಿದ್ದರೂ, ರಚಿತಾ ರಾಮ್ ಕನಿಷ್ಠ ಮಾನವೀಯತೆ ದೃಷ್ಟಿಯಿಂದಾರೂ ಕಾರ್ಮಿಕನನ್ನು ಮಾತನಾಡಿಸಬೇಕಿತ್ತು ಎನ್ನುವುದು ಅಲ್ಲಿದ್ದವರ ಪ್ರತಿಕ್ರಿಯೆಯಾಗಿತ್ತು. ಆದರೆ, ರಚಿತಾ ಹಾಗೆ ಮಾಡಿಲ್ಲ ಎನ್ನುವುದೇ ಬೇಸರದ ಸಂಗತಿ.
ಕಿರುತೆರೆಯ ಖ್ಯಾತ ನಟಿ, ಹಿಂದಿಯ ಬಿಗ್ ಬಾಸ್ ವಿನ್ನರ್ ರುಬೀನಾ ದಿಲೈಕ್ ಪ್ರಯಾಣಿಸುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ರುಬೀನಾಗೆ ತೀವ್ರ ಗಾಯಗಳಾಗಿವೆ. ಬೆನ್ನಿಗೆ ಮತ್ತು ತಲೆಗೆ ಪೆಟ್ಟು ಬಿದ್ದು ಕಾರಣದಿಂದಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದ ರುಬೀನಾ ಕಾರಿಗೆ, ಹಿಂದಿನಿಂದ ಬಂದ ಟಾಟಾ ಯೋಧ ಟ್ರಕ್ ಗುದ್ದಿದೆ. ಪರಿಣಾಮ ರುಬೀನಾ ಅವರ ಬೆನ್ನು ಮತ್ತು ತೆಲೆಗೆ ಪೆಟ್ಟುಬಿದ್ದಿದೆ. ಫೋನ್ ನಲ್ಲಿ ಮಾತನಾಡುತ್ತಾ ಟ್ರಕ್ ಓಡಿಸುತ್ತಿದ್ದ ವ್ಯಕ್ತಿಯಿಂದಾಗಿ ಇದೀಗ ರುಬೀನಾ ಆಸ್ಪತ್ರೆ ಸೇರಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ ರುಬೀನಾ ಪತಿ, ನಟ ಅಭಿನವ್ ಶುಕ್ಲಾ. ಇದನ್ನೂ ಓದಿ:ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು
ಈ ಕುರಿತು ರುಬೀನಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಆದ ಘಟನೆಯನ್ನು ಹಂಚಿಕೊಂಡಿದ್ದಾರೆ. ಅಪಘಾತವಾದಾಗ ನಾನಾ ಆಘಾತಕ್ಕೊಳಗಾಗಿದ್ದೆ. ವೈದ್ಯಕೀಯ ಪರೀಕ್ಷೆಗಳ ನಂತರ ನಿರಾಳಳಾಗಿದ್ದೇನೆ. ಜಾಗರೂಕತೆಯನ್ನು ವಾಹನ ಚಲಾಯಿಸಿ. ರಸ್ತೆ ನಿಯಮಗಳನ್ನು ದಯವಿಟ್ಟು ಪಾಲಿಸಿ’ ಎಂದು ಅವರು ಮನವಿ ಮಾಡಿದ್ದಾರೆ.
ಮುಂಬೈ ಪೊಲೀಸರು ಅಭಿನವ್ ಶುಕ್ಲಾ ಹಾಕಿರುವ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್ ಠಾಣೆಗೆ ಬಂದು ಘಟನೆಯ ಬಗ್ಗೆ ದೂರು ಕೊಡಿ, ಅಗತ್ಯ ಕ್ರಮಗಳನ್ನು ತಗೆದುಕೊಳ್ಳುತ್ತೇವೆ ಎಂದಿದ್ದಾರೆ. ಅತ್ತ ರುಬೀನಾ ಅಭಿಮಾನಿಗಳು ‘ನೆಚ್ಚಿನ ನಟಿ ಬೇಗ ಚೇತರಿಸಿಕೊಳ್ಳಲಿ’ ಎಂದು ಹಾರೈಸಿದ್ದಾರೆ.
ಹಾಲಿವುಡ್ ನ ಖ್ಯಾತ ನಟ, ಅವೇಂಜರ್ಸ್ (Avengers) ಸರಣಿಯ ಮೂಲಕ ಮನೆಮಾತಾಗಿರುವ ನಟ ಜೆರ್ಮಿ ರನ್ನರ್ (Jeremy Runner)ಗೆ ಅಪಘಾತವಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಅವೇಂಜರ್ಸ್ ಸರಣಿಯಲ್ಲಿ ಹ್ಯಾಕ್ ಐ ಪಾತ್ರ ನಿರ್ವಹಿಸುತ್ತಿದ್ದ ಇವರು ದಟ್ಟ ಮಂಜು ಮಧ್ಯ ಕಾರು ಚಲಾಯಿಸುತ್ತಿರುವಾಗ ಅಪಘಾತಕ್ಕೀಡಾಗಿದೆ (Accident) ಎಂದು ಹೇಳಲಾಗುತ್ತಿದೆ. ಅಪಘಾತವಾದ ತಕ್ಷಣವೇ ಏರ್ ಲಿಫ್ಟ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೆರ್ಮಿ ವಾಸಿಸುತ್ತಿದ್ದ ನೆವಾಡಾದಲ್ಲಿ ಹಲವು ದಿನಗಳಿಂದ ಹಿಮಪಾತವಾಗುತ್ತಿದೆ. ಇಡೀ ಪ್ರದೇಶದ ಹಿಮದಿಂದ ಮುಚ್ಚಿದೆ. ಅಲ್ಲದೇ ವಿದ್ಯುತ್ ಕೂಡ ಕೈಕೊಟ್ಟಿದೆ. ಸಂಚಾರಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿದೆ. ಈ ಸಂದರ್ಭದಲ್ಲಿ ಜೆರ್ಮಿ ಕಾರು ಚಲಾಯಿಸಿದ್ದಾರೆ. ದಟ್ಟ ಮಂಜು ಇದ್ದ ಕಾರಣಕ್ಕಾಗಿ ರಸ್ತೆ ಕಾಣದೇ ಅಪಘಾತ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಟ್ರೋಫಿಯನ್ನು ರಾಕೇಶ್ ಅಡಿಗ ಗೆಲ್ಲಬೇಕಿತ್ತು: ಹೀಗೊಂದು ಅಭಿಯಾನ
ತೀವ್ರ ಗಾಯಗೊಂಡಿದ್ದ ಅವರನ್ನು ರಸ್ತೆ ಸಂಚಾರಕ್ಕೆ ಅನುಕೂಲ ಇಲ್ಲದ ಕಾರಣದಿಂದಾಗಿ ಏರ್ ಲಿಫ್ಟ್ ಮಾಡಲಾಗಿದೆ. ಸ್ಥಿತಿ ಗಂಭೀರವಾಗಿರುವುದರಿಂದ ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರಂತೆ ವೈದ್ಯರು. ಹಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಇವರು, ಆಸ್ಕರ್ ಪ್ರಶಸ್ತಿ ವಿಜೇತ ‘ಹರ್ಟ್ ಲಾಕರ್’ ಸಿನಿಮಾದಲ್ಲೂ ನಟಿಸಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ, ಫೇಮಸ್ ಅಂತ ಆಗಿದ್ದು ಅವೇಂಜರ್ಸ್ ಸೀರಿಸ್ ಮೂಲಕ ಎನ್ನುವುದು ವಿಶೇಷ.
Live Tv
[brid partner=56869869 player=32851 video=960834 autoplay=true]