Tag: ಆಕ್ಸಿಜನ್ ಮಾಸ್ಕ್

  • ಉಸಿರಾಟದ ಸಮಸ್ಯೆ; ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಬಂದು ಮತದಾರರಿಂದ ವೋಟ್

    ಉಸಿರಾಟದ ಸಮಸ್ಯೆ; ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಬಂದು ಮತದಾರರಿಂದ ವೋಟ್

    ಬೆಂಗಳೂರು: ಉಸಿರಾಟದ ಸಮಸ್ಯೆಯ ನಡುವೆಯೂ ಕೆಲ ಮತದಾರರು ಆಕ್ಸಿಜನ್ ಮಾಸ್ಕ್ (Oxygen Mask) ಹಾಕಿಕೊಂಡು ಬಂದು ಮತದಾನ (Voting) ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

    ಇಂಪ್ಯಾಕ್ಟ್ ಕಾಲೇಜ್ ಬೂತ್‌ನಲ್ಲಿ 62 ವರ್ಷದ ವೃದ್ಧರೊಬ್ಬರು ಉಸಿರಾಟ ಸಮಸ್ಯೆಯಿದ್ದರೂ ಮತ ಹಾಕುವ ಸಲುವಾಗಿ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಬಂದು ಮತ ಹಾಕಿದ್ದಾರೆ. ಇದನ್ನೂ ಓದಿ: ಕರ್ತವ್ಯ ನಿರತ ಚುನಾವಣಾ ಮಹಿಳಾ ಸಿಬ್ಬಂದಿ ನಿಧನ

    ಇನ್ನೊಂದೆಡೆ ರಾಜಾಜಿನಗರ ಎರಡನೇ ಬ್ಲಾಕ್‌ನ ನಿವಾಸಿ ಗೀತಾ (83) ಕಳೆದ ಮೂರು ವರ್ಷಗಳಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸುತ್ತಿದ್ದಾರೆ. ಇದೇ ವೇಳೆ ಅವರು ಹರಿದಾಸ ಸಾಹಿತ್ಯ ಕುರಿತು ಪಿಹೆಚ್‌ಡಿ ಮಾಡುತ್ತಿದ್ದಾರೆ. ಕಳೆದ ತಿಂಗಳು ಉತ್ತರಾಧಿಮಠದವರು ನಡೆಸಿದ ಹರಿದಾಸ ಸಾಹಿತ್ಯ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಹರಿದಾಸ ಸಾಹಿತ್ಯ ಕುರಿತು ಪಾಠ ಮಾಡುತ್ತಾರೆ. ಚುನಾವಣಾ ಪ್ರಚಾರಕ್ಕೆ ಹೋದಾಗ ನಾನು ವೋಟು ಹಾಕಬೇಕು. ಆಕ್ಸಿಜನ್ ಸಿಲಿಂಡರ್ ಇರುವ ಅಂಬುಲೆನ್ಸ್ ವ್ಯವಸ್ಥೆ ಮಾಡು ಎಂದು ಕಟ್ಟಪ್ಪಣೆ ಮಾಡಿದರು. ಅದೀಗ ಜಾರಿಗೊಂಡಿದೆ. ಅದೇ ರೀತಿ ಗೀತಮ್ಮ ವೋಟು ಹಾಕಿ ಎರಡೂ ಕೈ ಎತ್ತಿ ಜೈ ಶ್ರೀರಾಮ್ ಎಂದಿದ್ದಾರೆ. ಇದನ್ನೂ ಓದಿ: ಮತ ಹಾಕಲು ಬಂದಾಗ ಹೃದಯ ಸ್ತಂಭನ- ಮಹಿಳೆಯ ಪ್ರಾಣ ಉಳಿಸಿದ ವೈದ್ಯರು

    ಇನ್ನು ದಾಸರಹಳ್ಳಿಯಲ್ಲಿ ವೃದ್ಧ ಮಹಿಳೆಯೊಬ್ಬರು ಆಸ್ಪತ್ರೆಯಿಂದ ಆಕ್ಸಿಜನ್ ಹಾಕಿಕೊಂಡು ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ನೀಲಂ ಸಿನ್ಹಾ ಎಂಬ ವೃದ್ಧೆ ಶ್ವಾಸಕೋಶದ ಖಾಯಿಲೆಯಿಂದ ಬಳಲುತ್ತಿದ್ದು, ಉಸಿರಾಟದ ತೊಂದರೆ ಇದ್ದರೂ ಸಹ ಆಕ್ಸಿಜನ್ ಹಾಕಿಕೊಂಡು ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯಲ್ಲಿ ತನ್ನ ಮತ ಚಲಾಯಿಸಿದ್ದಾರೆ. ಇದನ್ನೂ ಓದಿ: ನೋಟಾಗಿಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ನಿಷೇಧಿಸಿ, ಮರು ಚುನಾವಣೆಗೆ ನಿರ್ದೇಶನ ಕೋರಿ ಅರ್ಜಿ

  • ಕೋವಿಡ್ ರೋಗಿಯ ಆಕ್ಸಿಜನ್ ತೆಗೆದು ಕೊಂದ ವಾರ್ಡ್‍ಬಾಯ್

    ಕೋವಿಡ್ ರೋಗಿಯ ಆಕ್ಸಿಜನ್ ತೆಗೆದು ಕೊಂದ ವಾರ್ಡ್‍ಬಾಯ್

    ಭೋಪಾಲ್: ವಾರ್ಡ್ ಬಾಯ್ ಆಕ್ಸಿಜನ್ ಮಾಸ್ಕ್ ತೆಗೆದ ನಂತರ ಕೊರೊನಾ ರೋಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಶಿರೋಪುರದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದ ಮೂಲಕ ಬೆಳಕಿಗೆ ಬಂದಿದೆ.

    ಮೃತಪಟ್ಟ ವ್ಯಕ್ತಿಯನ್ನು ಸುರೇಂದ್ರ ಶರ್ಮಾ ಎಂದು ಗುರುತಿಸಲಾಗಿದ್ದು, ಕೊರೊನಾ ಚಿಕಿತ್ಸೆಗಾಗಿ ಶಿವಪುರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಡರಾತ್ರಿ ವಾರ್ಡ್‍ಬಾಯ್ ಆಕ್ಸಿಜನ್ ಮಾಸ್ಕ್ ತೆರೆದ ಪರಿಣಾಮ ರೋಗಿ ಮೃತಪಟ್ಟಿದ್ದಾರೆ.

    ಆಸ್ಪತ್ರೆಯ ನಿರ್ವಹಣಾ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಸುರೇಂದ್ರ ಶರ್ಮಾ ಮೃತಪಟ್ಟಿರುವುದಾಗಿ ಮೃತರ ಮಗ ದೀಪಕ್ ಶರ್ಮಾ ಹಾಗೂ ಅವರ ಕುಟುಂಬದವರು ಆರೋಪಿಸಿದ್ದಾರೆ. ವಾರ್ಡ್‍ಬಾಯ್ ಒಳಗೆ ಬರುವ ಮುನ್ನ ಸುರೇಂದ್ರ ಕುಮಾರ್ ಜೊತೆ ಅವರ ಮಗ ದೀಪಕ್ ಶರ್ಮಾ ಇದ್ದರು.

    ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ದೀಪಕ್ ಶರ್ಮಾ, ಹಲವು ದಿನಗಳಿಂದ ನನ್ನ ತಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿರವಾಗಿತ್ತು ಹಾಗೂ ಸುಧಾರಿಸುತ್ತಿತ್ತು. ಆದರೆ ಬೆಳಗ್ಗೆ ಅವರ ಆಕ್ಸಿಜನ್ ಮಾಸ್ಕ್‍ನನ್ನು ವಾರ್ಡ್ ಬಾಯ್ ತೆಗೆದುಹಾಕಿದ್ದರಿಂದ ಉಸಿರಾಡಲು ಆಗದೇ ಒದ್ದಾಡಿ ಮೃತಪಟ್ಟಿದ್ದಾರೆ . ನಾನು ನರ್ಸ್ ಹಾಗೂ ವೈದ್ಯರಿಗೆ ಮತ್ತೆ ಆಕ್ಸಿಜನ್ ನೀಡುವಂತೆ ಕೇಳಿದೆ, ಆದರೆ ಅವರು ನಿರಾಕರಿಸಿದರು. ಆದಾದ ಸ್ವಲ್ಪ ಹೊತ್ತಿನಲ್ಲಿಯೇ ನನ್ನ ತಂದೆ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದ್ದಾರೆ.

    ಈ ಕುರಿತಂತೆ ಇದೀಗ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಧರ್ಯವರ್ದನ್ ಶರ್ಮಾ 48 ಗಂಟೆಗಳ ಒಳಗೆ ತನಿಖೆ ನಡಿಸಿ ವರದಿ ಸಲ್ಲಿಸಲು ಮೂರು ತಂಡಗಳನ್ನು ರಚಿಸಿದ್ದಾರೆ. ಅಲ್ಲದೇ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ಅರ್ಜುನ್ ಲಾಲ್ ಶರ್ಮಾ ಆರೋಪಿಗಳ ವಿರುದ್ಧ ಕಠೀಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.