Tag: ಆಕ್ರೋಶ

  • ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನು ತರಾಟೆಗೆ ತೆಗೆದುಕೊಂಡ ಸಂತ್ರಸ್ತರು

    ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನು ತರಾಟೆಗೆ ತೆಗೆದುಕೊಂಡ ಸಂತ್ರಸ್ತರು

    ಬೆಳಗಾವಿ: ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನು ಪ್ರವಾಹ ಪೀಡಿತ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಜನತೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ತಮ್ಮ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಹೋಟೆಲ್‍ನಲ್ಲಿ ತಿಂಗಳುಕಾಲ ತಂಗಿದ್ದ ಅನರ್ಹ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಪ್ರವಾಹ ಪೀಡಿತ ಗ್ರಾಮಸ್ಥರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

    ನಾವು ಮತ ಹಾಕಿದ್ದು ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ ಎಂದು. ನೀವು ರಾಜೀನಾಮೆ ನೀಡಿ ಮುಂಬೈಗೆ ಹಾರಲು ಅಲ್ಲ. ಶಾಸಕರಾಗಿ ಹದಿನಾಲ್ಕು ತಿಂಗಳಾಯಿತು ಈಗ ನೆನಪಾಯಿತೇ ಎಂದು ಪ್ರಶ್ನಿಸಿ ಮಹೇಶ್ ಕುಮಠಳ್ಳಿ ಹಾಗೂ ದರೂರ ಜಿಲ್ಲಾ ಪಂಚಾಯತ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  • ರೆಸಾರ್ಟ್ ರಾಜಕಾರಣ ಮಾಡಿದ್ರೆ ಕತ್ತಿನ ಪಟ್ಟಿ ಹಿಡಿದು ಬುದ್ಧಿ ಕಲಿಸಬೇಕಾಗುತ್ತೆ: ಮಂಡ್ಯ ರೈತರು

    ರೆಸಾರ್ಟ್ ರಾಜಕಾರಣ ಮಾಡಿದ್ರೆ ಕತ್ತಿನ ಪಟ್ಟಿ ಹಿಡಿದು ಬುದ್ಧಿ ಕಲಿಸಬೇಕಾಗುತ್ತೆ: ಮಂಡ್ಯ ರೈತರು

    ಮಂಡ್ಯ: ರೈತರ ಸಮಸ್ಯೆ ಬಗೆ ಹರಿಸೋದು ಬಿಟ್ಟು ಹೀಗೆ ರೆಸಾರ್ಟ್ ರಾಜಕಾರಣ ಮಾಡುತ್ತ ಕುಳಿತರೆ ನಿಮ್ಮ ಕತ್ತಿನ ಪಟ್ಟಿ ಹಿಡಿದು ಬುದ್ಧಿ ಕಲಿಸಬೇಕಾಗುತ್ತದೆ ಎಂದು ಜನಪ್ರತಿನಿಧಿಗಳಿಗೆ ಮಂಡ್ಯ ರೈತರು ಎಚ್ಚರಿಕೆ ನೀಡಿದ್ದಾರೆ.

    ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇಂದು ಮಂಡ್ಯದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ್ದ ರೈತರು, ಸರ್ಕಾರದ ನಡೆ ವಿರುದ್ಧ ಆಕ್ರೋಶ ಹೊರಹಾಕಿದರು. ಅಧಿಕಾರದ ಸಲುವಾಗಿ ರೆಸಾರ್ಟ್ ಸೇರಿರುವ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಅಸಮಾಧಾನವನ್ನು ರೈತರು ಹೊರಹಾಕಿದ್ದಾರೆ.

    ಈ ಮೈತ್ರಿ ಸರ್ಕಾರದಲ್ಲಿ ಜನರ ಕಷ್ಟಗಳಿಗೇ ಸ್ಪಂದಿಸುವ ಕೆಲಸ ಆಗುತ್ತಿಲ್ಲ. ಅಧಿಕಾರವನ್ನು ಉಳಿಸಿಕೊಳ್ಳಲು ಎಲ್ಲರೂ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ಇದರ ಜೊತೆ ವಿರೋಧ ಪಕ್ಷಕ್ಕೂ ರಾಜ್ಯದ ರೈತರ ಸಮಸ್ಯೆ ಬೇಕಾಗಿಲ್ಲ. ಅವರು ಕೂಡ ಅಧಿಕಾರವನ್ನು ಹಿಡಿಯಲು ಓಡಾಡುತ್ತಿದ್ದಾರೆ. ನಮ್ಮ ನಾಡಿನ ಜನ ಎಚ್ಚೆತ್ತು ಚುನಾವಣೆ ಸಮಯದಲ್ಲಿ ಮನೆ ಬಳಿ ಬರುವ ರಾಜಕಾರಣಿಗಳಿಗೇ ಬುದ್ಧಿ ಕಲಿಸಬೇಕು. ಯಾವುದೇ ಪಕ್ಷದವರು ಆಗಲಿ ಮೊದಲು ಜನರ ಕಷ್ಟವನ್ನು ಆಲಿಸಿ ನಂತರ ಅವರು ರಾಜಕಾರಣ ಮಾಡಲಿ ಎಂದು ರೈತರು ಜನಪ್ರತಿನಿಧಿಗಳಿಗೆ ಕ್ಲಾಸ್ ತೆಗೆದುಕೊಂಡರು.

    ನಿಮಗೆ ವೋಟ್ ಹಾಕಿರೋದು ಯಾಕೆ? ಇಲ್ಲಿ ನೀರಿಲ್ಲದೆ ನಮ್ಮ ಬೆಳೆಗಳು ಒಣಗುತ್ತಿವೆ. ನೀವು ನಮ್ಮ ಕಷ್ಟಕ್ಕೆ ಸ್ಪಂದಿಸದೇ ರೆಸಾರ್ಟ್ ಸೇರಿಕೊಂಡಿದ್ದೀರಿ? ನಿಮಗೆ ಮಾನ ಮರ್ಯಾದೆ ಇಲ್ಲವೇ? ಇದು ಹೀಗೆ ಮುಂದುವರಿದರೆ ನಿಮ್ಮ ಕತ್ತಿನ ಪಟ್ಟಿ ಹಿಡಿದು ಬುದ್ಧಿ ಕಲಿಸಬೇಕಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಮುಂದಿನ ಸಲ ಮೋದಿ ಹೆಸರು ಹೇಳಿದ್ರೆ ಬಾಯಲ್ಲಿ ಬೂಟು ಹಾಕ್ತೀವಿ: ಮುತಾಲಿಕ್

    ಮುಂದಿನ ಸಲ ಮೋದಿ ಹೆಸರು ಹೇಳಿದ್ರೆ ಬಾಯಲ್ಲಿ ಬೂಟು ಹಾಕ್ತೀವಿ: ಮುತಾಲಿಕ್

    ಕಲಬುರಗಿ: ಮುಂದಿನ ಸಲ ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕ್ತೇವಿ ಎಂದು ಬಿಜೆಪಿ ಸಂಸದರ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

    ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಮುಂದಿನ ಸಲ ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕ್ತೇವಿ ಎಂದು ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಜುಲೈ 1ರಂದು ವಿರಾಟ್ ಹಿಂದೂ ಮಹಾಸಮಾವೇಶ ಕಾರ್ಯಕ್ರಮದಲ್ಲಿ ಮುತಾಲಿಕ್ ಅವರು ಈ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಿಂದುತ್ವ ನೋಡಿ ಈ ಬಾರಿ ನಿಮಗೆ ವೋಟ್ ಹಾಕಿದ್ದೇವೆ. ಐದು ವರ್ಷ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ. ಮುಂದಿನ ಸಲ ಚುನಾವಣೆಯಲ್ಲಿ ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕ್ತೀವಿ ಎಂದು ವಾಗ್ದಾಳಿ ನಡೆಸಿದ್ದಾರೆ.

  • ಮಳೆಯಾದ್ರೆ ಕೆರೆಯಾಗುತ್ತೆ ಗ್ರಾಮದ ಮುಖ್ಯರಸ್ತೆ

    ಮಳೆಯಾದ್ರೆ ಕೆರೆಯಾಗುತ್ತೆ ಗ್ರಾಮದ ಮುಖ್ಯರಸ್ತೆ

    ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಮೆದೆಕೆರೆನಹಳ್ಳಿ ಗ್ರಾಮದಲ್ಲಿ ಮಳೆಯಾದರೆ ಮುಖ್ಯರಸ್ತೆಯೇ ಕೆರೆಯಾಗಿ ಮಾರ್ಪಾಡು ಆಗುತ್ತದೆ. ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ಗ್ರಾಮದಲ್ಲಿ ಮಳೆಯಾದರೆ ಸಾಕು ಇಲ್ಲಿನ ಮುಖ್ಯ ರಸ್ತೆ ಕೆರೆಯಾಗಿ ಮಾರ್ಪಾಡು ಆಗುತ್ತಿದ್ದು, ಶಾಲಾ ಮಕ್ಕಳು ಶಾಲೆಗೆ ಹೋಗಬೇಕು ಅಂದರೆ ಹರಸಾಹಸ ಪಡುವಂತಹ ಸ್ಥಿತಿ ಉಂಟಾಗಿದೆ. ಕಳೆದ ಒಂದು ವಾರದಿಂದ ಇದೇ ಪರಿಸ್ಥಿತಿ ಇದ್ದು ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

    ಮಳೆ ನೀರು ಸುವ್ಯವಸ್ಥಿತವಾಗಿ ಹೋಗಲು ಚರಂಡಿ ವ್ಯವಸ್ಥೆ ಮಾಡಿದರೆ ನೀರು ನಿಲ್ಲುವ ಪ್ರಶ್ನೆಯೇ ಇರುವುದಿಲ್ಲ. ಆದರೆ ಸುವ್ಯವಸ್ಥಿತವಾದ ಕಾಮಗಾರಿ ಮಾಡದೇ ಇದ್ದುದರಿಂದ ಗ್ರಾಮದ ಪ್ರಮುಖ ರಸ್ತೆಯೇ ಕೆರೆಯಾಗಿ ಮಾರ್ಪಡು ಆಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೂಡಲೇ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • ನಟ ವಿಜಯ್ ಬರ್ತ್ ಡೇ, ತಮಿಳುಮಯವಾದ ಶ್ರೀರಾಂಪುರ – ಕನ್ನಡಿಗರ ಆಕ್ರೋಶ

    ನಟ ವಿಜಯ್ ಬರ್ತ್ ಡೇ, ತಮಿಳುಮಯವಾದ ಶ್ರೀರಾಂಪುರ – ಕನ್ನಡಿಗರ ಆಕ್ರೋಶ

    ಬೆಂಗಳೂರು: ತಮಿಳು ನಟ ವಿಜಯ್ ಹುಟ್ಟು ಹಬ್ಬದ ಪ್ರಯುಕ್ತ ಶ್ರೀರಾಂಪುರ ತಮಿಳು ಮಯವಾಗಿದ್ದು ಇದಕ್ಕೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಮಿಳು ನಟ ವಿಜಯ್ ಅವರ ಬರ್ತ್ ಡೇ ಪ್ರಯುಕ್ತ ಅಖಿಲ ಕರ್ನಾಟಕ ಡಾ. ವಿಜಯ್ ಅಭಿಮಾನಿಗಳ ಸಂಘದಿಂದ ಶ್ರೀರಾಂಪುರದಲ್ಲಿ ವಿಜೃಂಭಣೆಯಿಂದ ಹುಟ್ಟು ಹಬ್ಬ ಆಚರಣೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಎಂಎಲ್‍ಎ ಹಾಗೂ ವಿಜಯ್ ಆಪ್ತ ಆನಂದ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.

    ಶ್ರೀರಾಂಪುರದ ಸನ್‍ರೈಸ್ ಸರ್ಕಲ್‍ನಲ್ಲಿ ಬೃಹತ್ ವೇದಿಕೆ ಹಾಕಿ, ಬೆಳಗ್ಗೆಯಿಂದ ವೇದಿಕೆಯಲ್ಲಿ ವಿಜಯ್ ನಟನೆಯ ತಮಿಳು ಹಾಡುಗಳಿಗೆ ನೃತ್ಯ ಮಾಡಲಾಗುತ್ತಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಆಗಮಿಸಿದ ಕೂಡಲೇ ಕನ್ನಡ ಭಕ್ತಿಗೀತೆಗಳನ್ನು ಹಾಕಿ ನೃತ್ಯ ಮಾಡಲಾಗಿದೆ ಎನ್ನಲಾಗಿದೆ.

    ಶ್ರೀರಾಂಪುರ ತಮಿಳುವಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಕನ್ನಡ ಪರ ಸಂಘಟನೆಗಳು ಕರ್ನಾಟಕದಲ್ಲಿ ಕನ್ನಡಕ್ಕೆ ನೆಲೆ ಇಲ್ಲದಾಂತಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇನ್ನೂ ವೇದಿಕೆಯ ಫ್ಲೆಕ್ಸ್‍ನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಫೋಟೋಗಳು ಕಂಡು ಬಂದಿವೆ.

  • ಮಾನ ಮರ್ಯಾದೆ ಇಲ್ವ ನಿಮಗೆ, ನಿಮ್ಮ ಹುದ್ದೆಗಾದರೂ ಗೌರವ ಬೇಡವೇ – ಶಾಸಕ ಸುರೇಶ್‍ಗೌಡ ಗರಂ

    ಮಾನ ಮರ್ಯಾದೆ ಇಲ್ವ ನಿಮಗೆ, ನಿಮ್ಮ ಹುದ್ದೆಗಾದರೂ ಗೌರವ ಬೇಡವೇ – ಶಾಸಕ ಸುರೇಶ್‍ಗೌಡ ಗರಂ

    ಮಂಡ್ಯ: ಮಾನ ಮರ್ಯಾದೆ ಇಲ್ವ ನಿಮಗೆ? ನಿಮ್ಮ ಹುದ್ದೆಗಾದರೂ ಗೌರವ ಬೇಡವೇ? ಕಾಲೇಜಿನಲ್ಲಿ ರಾಜಕೀಯ ಮಾಡುತ್ತಿದ್ದೀರಾ? ಎಂದು ರಿಸಲ್ಟ್ ಕಡಿಮೆ ಬಂದ ಶಾಲಾ, ಕಾಲೇಜು ಪ್ರಿನ್ಸಿಪಾಲರ ವಿರುದ್ಧ ಶಾಸಕ ಸುರೇಶ್‍ಗೌಡ ಆಕ್ರೋಶಗೊಂಡಿದ್ದಾರೆ.

    ಮಂಡ್ಯ ಜಿಲ್ಲೆ, ನಾಗಮಂಗಲದ ಪ್ರವಾಸಿ ಮಂದಿರದಲ್ಲಿ ಶೈಕ್ಷಣಿಕ ಉನ್ನತಿ ಕುರಿತು ನಡೆಯುತ್ತಿದ್ದ ಸಭೆಯಲ್ಲಿ ಸುರೇಶ್‍ಗೌಡ ಭಾಗಿಯಾಗಿದ್ದರು. ಈ ಸಭೆಯಲ್ಲಿ ತಾಲೂಕಿನ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಕೂಡ ಭಾಗಿಯಾಗಿದ್ದರು. ಈ ಸಭೆಯಲ್ಲಿ ರಿಸಲ್ಟ್ ಕಡಿಮೆಯಿದ್ದ ಶಾಲಾ ಕಾಲೇಜು ವಿರುದ್ಧ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.

    ಈ ವೇಳೆ ಇಬ್ಬರು ಪ್ರಾಂಶುಪಾಲರು ರಿಸಲ್ಟ್ ಕಡಿಮೆಯಾಗಲು ಕಾರಣ ತಿಳಿಸಲು ಬಂದಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಶಾಸಕರು ಬರೀ ಕಾರಣ ಹೇಳಬೇಡಿ. ಶಿಕ್ಷಕರು, ಪ್ರಿನ್ಸಿಪಾಲರು ನಿಮ್ಮ ಘನತೆ ಗೌರವ ಉಳಿಸಿಕೊಳ್ಳಬೇಕು. ಕೆಲವು ಕಡೆ ವಿದ್ಯಾರ್ಥಿಗಳು ಬಂದು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ನಿಮ್ಮಿಂದ ನೂರಾರು ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಅವರ ಭವಿಷ್ಯ ಏನಾಗಬೇಕು ಎಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

    ಸಮಸ್ಯೆ ಹೇಳುವವರು ಈಗ ಸಭೆ ಕರೆದಾಗ ಬಂದು ಹೇಳೋದಲ್ಲ. ನಾವು ಕ್ಷೇತ್ರದಲ್ಲೇ ಇರುತ್ತೇವೆ ಸಮಸ್ಯೆ ಬಂದ ತಕ್ಷಣ ಹೇಳಬೇಕು. ಇದೂವರೆಗೂ ನಿಮ್ಮ ಸಮಸ್ಯೆ ಹೇಳಿಲ್ಲ. ರಿಸಲ್ಟ್ ಬಗ್ಗೆ ಕೇಳಲು ಬಂದಾಗ ಸಮಸ್ಯೆ ಹೇಳುತ್ತೀರ ಎಂದು ಶಾಸಕ ಸುರೇಶ್‍ಗೌಡ ಆಕ್ರೋಶ ಹೊರ ಹಾಕಿದರು.

  • ಗೋಮಾಂಸ ತಿನ್ನುವವರು ರಾಕ್ಷಸ ಸಮಾನ: ಪೇಜಾವರ ಶ್ರೀ

    ಗೋಮಾಂಸ ತಿನ್ನುವವರು ರಾಕ್ಷಸ ಸಮಾನ: ಪೇಜಾವರ ಶ್ರೀ

    – ಹುಲಿ, ಸಿಂಹದಷ್ಟೇ ಗೋವು ಶ್ರೇಷ್ಠವಲ್ಲವೇ?

    ಉಡುಪಿ: ಗೋಮಾಂಸ ತಿನ್ನುವವ ರಾಕ್ಷಸ ಸಮಾನ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಕೃಷ್ಣಮಠದ ರಥಬೀದಿಯಲ್ಲಿ ನಡೆದ ದೇಸಿ ಗೋವು ಸಮ್ಮೇಳನದಲ್ಲಿ ಮಾತನಾಡಿದ ಅವರು, ಗೋವು ಭಕ್ಷಣೆ ಮಾಡುವವ ಮನುಷ್ಯನೇ ಅಲ್ಲ. ಗೋವು ಹಾಲು ಕೊಡುವ ಎಲ್ಲರ ತಾಯಿ. ಗೋವಿನ ಹಾಲು ಕುಡಿದವನಿಗೆ ಅದನ್ನು ಕೊಲ್ಲುವಾಗ ಏನೂ ಅನ್ನಿಸೋದಿಲ್ಲವೇ? ಗೋವನ್ನು ಕೊಲ್ಲುವವ ಮಾನವನೇ ಅಲ್ಲ. ಅವನು ರಾಕ್ಷಸ ಸಮಾನ. ಗೋಹತ್ಯೆ, ಗೋವು ಮಾಂಸ ಭಕ್ಷಣೆ ಹೇಯವಾದ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಧಾರ್ಮಿಕ ದೃಷ್ಟಿಗಿಂತ ಆಗದಿದ್ದರೆ, ಮಾನವೀಯ ದೃಷ್ಟಿಯಿಂದಾದರೂ ಗೋ ರಕ್ಷಣೆ ಮಾಡಿ. ಗೋ ರಕ್ಷಣೆಗೆ ಸರ್ಕಾರ ವಿಶೇಷ ಗಮನ ಕೊಡಬೇಕು ಎಂದು ಒತ್ತಾಯಿಸಿದರು. ಕೇಂದ್ರದಲ್ಲಿ ಮೋದಿ ಸರಕಾರ ಬಲವಾಗಿ ಬಂದಿದೆ. ಬಿಜೆಪಿಗೆ ಬಹುಮತ ಇದೆ. ಯಾವ ಪಕ್ಷದ ಬೆಂಬಲ ಇಲ್ಲದಿದ್ದರೂ ಮೊದಲ ವರ್ಷದಲ್ಲೇ ಗೋ ರಕ್ಷಣೆಗೆ ದೃಢ ಕಾನೂನು ತರಬೇಕು ಎಂದು ಮನವಿ ಮಾಡಿಕೊಂಡರು.

    ದೇಶದಲ್ಲಿ ಹುಲಿ, ಸಿಂಹ ಸಂತಾನ ಉಳಿಸಲು ಸರ್ಕಾರ ಬಹಳಷ್ಟು ಕ್ರಮ ಕೈಗೊಳ್ಳುತ್ತದೆ. ಆದರೆ ಗೋವಿನ ತಳಿ ಉಳಿಸಲು ಸರ್ಕಾರ ಈವರೆಗೆ ನಿಗದಿತ ಕ್ರಮ ಕೈಗೊಳ್ಳುವುದಿಲ್ಲ. ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಸಿಂಹ- ಹುಲಿಗಿಂತ ಗೋವು ಕೀಳಾಗಿಬಿಟ್ಟಿದೆಯೇ? ಹುಲಿ, ಸಿಂಹದಷ್ಟೇ ಗೋವು ಶ್ರೇಷ್ಠವಲ್ಲವೇ? ಎಂದು ಪ್ರಶ್ನಿಸಿದರು. ಬಳಿಕ ಗೋ ಸಾಗಾಟ, ಗೋವು ಕೊಲ್ಲುವ ವಿಧಾನ ಅತ್ಯಂತ ಭಯಾನಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಗೋವಿನ ಜೊತೆ ಗೂಳಿಯ ರಕ್ಷಣೆಯೂ ಆಗಬೇಕು. ಹಾಲು ಕೊಡುವ ಹಸುವಿರಬೇಕಾದರೆ ಎತ್ತು, ಕೋಣ ಇರಲೇಬೇಕು. ನಮ್ಮ ಭಾರತದ ದೇಸಿ ತಳಿ ಗೋವುಗಳ ರಕ್ಷಣೆ ಆಗಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು. ರಥಬೀದಿಯಲ್ಲಿ ಇಡೀ ದೇಶದ ದೇಸಿ ಹಸುಗಳ ಪ್ರದರ್ಶನ ನಡೆಯುತ್ತಿದ್ದು, ಬರುವ ಜನರಿಗೆ ಗೋವುಗಳ ಬಗ್ಗೆ ಮಾಹಿತಿಯನ್ನು ಕೊಡಲಾಗುತ್ತಿದೆ ಎಂದು ಸ್ವಾಮೀಜಿ ತಿಳಿಸಿದರು.

    https://www.youtube.com/watch?v=-atjvRa7zrk

  • ರಾತ್ರೋ ರಾತ್ರಿ ಎದ್ದುನಿಂತ ಅನಧಿಕೃತ ಮೊಬೈಲ್ ಟವರ್- ಸ್ಥಳೀಯರು ಗರಂ

    ರಾತ್ರೋ ರಾತ್ರಿ ಎದ್ದುನಿಂತ ಅನಧಿಕೃತ ಮೊಬೈಲ್ ಟವರ್- ಸ್ಥಳೀಯರು ಗರಂ

    ಕೊಪ್ಪಳ: ಜನ ವಾಸಿಸುವ ಸ್ಥಳದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಖಾಸಗಿ ಕಂಪನಿಯ ಅನಧಿಕೃತ ಮೊಬೈಲ್ ಟವರ್‌ವೊಂದು ಜಿಲ್ಲೆಯಲ್ಲಿ ರಾತ್ರೋ ರಾತ್ರಿ ನಿರ್ಮಾಣವಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಗಂಗಾವತಿಯ ಶರಣಬಸವೇಶ್ವರ ಕ್ಯಾಂಪ್‍ನ ಆಶ್ರಯ ಕಾಲೋನಿಯಲ್ಲಿ ಮೊಬೈಲ್ ಟವರ್ ನಿರ್ಮಾಣವಾಗಿದೆ. ಇನ್ನೂ ಇದನ್ನು ನಿರ್ಮಿಸಲು ಜಿಲ್ಲಾಡಳಿತ, ಹಾಗೂ ಪರಿಸರ ಮಾಲಿನ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರದೆ ಅನಧಿಕೃತವಾಗಿ ನಿರ್ಮಾಣ ಮಾಡಿದ್ದಾರೆ. ಇಲ್ಲಿ ವಾಸಿಸುವ ಜನರು ಎಲ್ಲಾ ಕೂಲಿ ಕಾರ್ಮಿಕರು. ಈ ಮಧ್ಯೆ ಇಂತಹ ಟವರ್ ಗಳಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಆದರೆ ಯಾರು ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಜನ ವಾಸಿಸುವ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತೆ. ಆದರೆ ಯಾವುದೇ ಪರವಾನಿಗೆ ಪಡೆಯದೆ ಖಾಸಗಿ ಕಂಪನಿಯ ಅನಧಿಕೃತ ಮೊಬೈಲ್ ಟವರ್‌ವೊಂದು ರಾತ್ರೋ ರಾತ್ರಿ ತಲೆ ಎತ್ತಿ ನಿಂತಿದೆ ಎಂದು ಸಾರ್ವಜನಿಕರು ಗರಂ ಆಗಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಜಿಲ್ಲಾಡಳಿತ ಮತ್ತು ತಾಲೂಕಿನ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ತಕ್ಷಣವೇ ಟವರ್ ನಿರ್ಮಾಣವನ್ನು ಸ್ಥಗಿತಗೊಳಿಸಿ, ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

  • ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾದ ಚಿತ್ರದುರ್ಗ ಕೋಟೆ

    ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾದ ಚಿತ್ರದುರ್ಗ ಕೋಟೆ

    ಚಿತ್ರದುರ್ಗ: ಐತಿಹಾಸಿಕ ಪ್ರವಾಸಿ ತಾಣವಾದ ಚಿತ್ರದುರ್ಗದ ಕೋಟೆಯಲ್ಲಿ ಬಿದ್ದರೆ ಸೀದಾ ಶಿವನ ಪಾದ ಗ್ಯಾರಂಟಿ ಎಂಬಂತಾಗಿದೆ. ಜಗತ್ ಪ್ರಸಿದ್ಧ ಕೋಟೆ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಪ್ರವಾಸಿ ತಾಣವೀಗ ಮೃತ್ಯುಕೂಪವಾಗಿ ಮಾರ್ಪಟ್ಟಿದೆ.

    ಹೌದು. ಲಕ್ಷಾಂತರ ಜನ ಪ್ರವಾಸಿಗರು ಬರುವ ಪ್ರಸಿದ್ಧ ಪ್ರವಾಸಿ ತಾಣವಾದ ಚಿತ್ರದುರ್ಗ ಕೋಟೆಯಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರವಿಲ್ಲ. ಅಪಾಯಕಾರಿ ಸ್ಥಳಗಳಲ್ಲಿ ಸೂಚನಾ ಫಲಕವೂ ಇಲ್ಲ. ಹೀಗೆ ಪುರಾತತ್ವ ಇಲಾಖೆ ಪ್ರಸಿದ್ಧ ಚಿತ್ರದುರ್ಗ ಕೋಟೆಯಲ್ಲಿ ನಿರ್ಲಕ್ಷ ತೋರುತ್ತಿರುವುದು ಪ್ರವಾಸಿಗರ ಕೆಂಗಣ್ಣಿಗೆ ಕಾರಣವಾಗಿದೆ.

    ಏಳುಸುತ್ತಿನ ಕೋಟೆಯೊಳಗೆ ಬಂದವರು ವಾಪಾಸ್ ಹೋಗುವುದೇ ಅನುಮಾನವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಕೋಟೆಯಲ್ಲಿನ ಅಪಾಯಕಾರಿ ಸ್ಥಳಗಳಲ್ಲಿ ಮುಂಜಾಗ್ರತಾ ಸೂಚನ ಫಲಕವಿಲ್ಲ. ನೂರಾರು ಅಡಿ ಎತ್ತರದ ತುಪ್ಪದ ಕೊಳ, ಗೋಪಾಲಸ್ವಾಮಿ ಹೊಂಡದಲ್ಲಿ ಪ್ರವಾಸಿಗರ ಜೀವಕ್ಕೆ ರಕ್ಷಣೆಯಿಲ್ಲ. ಪುರಾತತ್ವ ಇಲಾಖೆ ಪ್ರವಾಸಿಗರ ಹಣ ಮಾತ್ರ ಬೇಕು, ರಕ್ಷಣೆ ಮಾತ್ರ ಬೇಡ ಅನ್ನುತ್ತಿದೆ ಎಂದು ಇಲಾಖೆಯ ನಿರ್ಲಕ್ಷ್ಯಕ್ಕೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಏನಾದರೂ ಅವಘಡ ಸಂಭವಿಸಿದರೆ ಪ್ರಥಮ ಚಿಕಿತ್ಸೆ ನೀಡುವುದಕ್ಕೂ ಕೋಟೆಯಲ್ಲಿ ಸೂಕ್ತ ವ್ಯವಸ್ಥೆಯಿಲ್ಲ. ಅಹಿತಕರ ಘಟನೆಗಳು ಆದರೆ ಕೋಟೆ ಪ್ರವಾಸಿಗರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯೇ ಆಸರೆ. ಹೀಗಾಗಿ ಪ್ರವಾಸಿಗರಲ್ಲಿ ಆತಂಕ ಹೆಚ್ಚಾಗಿದೆ.

  • ಗೆಲ್ಲುವ ವ್ಯಕ್ತಿಯನ್ನು ಬಿಟ್ಟು ಇನ್ಯಾರೋ ವ್ಯಕ್ತಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ನಷ್ಟ: ಸಂಗಣ್ಣ ಕರಡಿ ಅಭಿಮಾನಿಗಳು

    ಗೆಲ್ಲುವ ವ್ಯಕ್ತಿಯನ್ನು ಬಿಟ್ಟು ಇನ್ಯಾರೋ ವ್ಯಕ್ತಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ನಷ್ಟ: ಸಂಗಣ್ಣ ಕರಡಿ ಅಭಿಮಾನಿಗಳು

    ಕೊಪ್ಪಳ: ಹಾಲಿ ಸಂಸದರಿಗೆ ಟಿಕೆಟ್ ನೀಡಲು ಮೀನಾ ಮೇಷ ತೋರುತ್ತಿರುವ ಬಿಜೆಪಿ ಹೈಕಮಾಂಡ್ ವಿರುದ್ಧ ಕೊಪ್ಪಳದಲ್ಲಿ ಆಕ್ರೋಶ ವ್ಯಕ್ತವಾಗುತ್ತದೆ.

    ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಚಾರವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಬೇಕು ಎಂದು ಗೊಂದಲದಲ್ಲಿದೆ. ಈ ವೇಳೆ ಹಾಲಿ ಸಂಸದ ಸಂಗಣ್ಣ ಕರಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

    ನಾಲ್ಕು ಬಾರಿ ಶಾಸಕರಾಗಿ ಮತ್ತು ಒಮ್ಮೆ ಸಂಸದರಾಗಿ ಆಯ್ಕೆಯಾದ ಸಂಗಣ್ಣ ಕರಡಿಯವರಿಗೆ ಟಿಕೆಟ್ ಕೊಡಲೇಬೇಕು. ಗೆಲ್ಲುವ ವ್ಯಕ್ತಿಯನ್ನು ಬಿಟ್ಟು ಇನ್ಯಾರೋ ವ್ಯಕ್ತಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ನಷ್ಟವಾಗುತ್ತದೆ. ಕರಡಿ ಸಂಗಣ್ಣಗೆ ಟಿಕೆಟ್ ಕೊಡಿ ಇಲ್ಲಾಂದ್ರೆ ನಾವ್ ಬಿಜೆಪಿ ಬೆಂಬಲಿಸಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಗಣ್ಣ ಕರಡಿ ಅಭಿಮಾನಿಗಳು ಪೋಸ್ಟ್ ಹಾಕಿದ್ದಾರೆ.

    ಇದರ ಜೊತೆಗೆ ಕೆಳಗಡೆ ನೊಂದ ಬಿಜೆಪಿ ಅಭಿಮಾನಿ ನೊಂದ ಮೋದಿ ಜೀ ಅಭಿಮಾನಿ. ಒಂದು ವೇಳೆ ಸಂಗಣ್ಣ ಕರಡಿಗೆ ಟಿಕೆಟ್ ತಪ್ಪಿದ್ದಲ್ಲಿ ನಾವು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಪೋಸ್ಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.