Tag: ಆಕ್ರಮಣ

  • ಭಾರತದ ಅನಿರೀಕ್ಷಿತ ನಡೆಯಿಂದ ಚೀನಾ ಆಕ್ರಮಣ ವಿಫಲ

    ಭಾರತದ ಅನಿರೀಕ್ಷಿತ ನಡೆಯಿಂದ ಚೀನಾ ಆಕ್ರಮಣ ವಿಫಲ

    – ಅಮೆರಿಕದ ನ್ಯೂಸ್‌ವೀಕ್‌ನಲ್ಲಿ ವರದಿ
    – ಅರ್ಧ ಶತಮಾನದಲ್ಲಿ ಮೊದಲ ಬಾರಿಗೆ ಭಾರತದ ಆಕ್ರಮಣಕಾರಿ ನೀತಿ

    ವಾಷಿಂಗ್ಟನ್: ಗಡಿಯಲ್ಲಿ ಭಾರತ ತೋರಿದ ಅನಿರೀಕ್ಷಿತ ನಡೆಯಿಂದ ಚೀನಾ ಆಕ್ರಮಣ ವಿಫಲವಾಗಿದೆ ಎಂದು ಅಮೆರಿಕದ ಪ್ರಮುಖ ನಿಯತಕಾಲಿಕೆ ನ್ಯೂಸ್‌ವೀಕ್‌ ಹೇಳಿದೆ.

    67 ವರ್ಷದ ಕ್ಸಿ ಜಿನ್‌ಪಿಂಗ್‌ ವಿಫಲವಾಗಿದ್ದಾರೆ. ಚೀನಾ ವಿಫಲವಾಗಿದ್ದಕ್ಕೆ ಕ್ಸಿ ಜಿನ್‌ಪಿಂಗ್‌ ವಿರುದ್ಧವೇ ಕಮ್ಯೂನಿಸ್ಟ್‌ ಪಕ್ಷದಲ್ಲಿ ಅಸಮಾಧಾನ ಎದ್ದಿದೆ ಎಂದು ವರದಿಯಾಗಿದೆ.

    ತನ್ನ ವಿರುದ್ಧ ಎದ್ದಿರುವ ಅಸಮಾಧಾನವನ್ನು ತಣಿಸಲು ಕ್ಸಿ ಜಿನ್‌ಪಿಂಗ್‌ ಮತ್ತೊಮ್ಮೆ ಭಾರತದ ಮೇಲೆ ಆಕ್ರಮಣ ಮಾಡಲು ಪಿಎಲ್‌ಎ ಸೈನಿಕರಿಗೆ ಸೂಚಿಸಬಹುದು ಎಂದು ಅದಾಜಿಸಿದೆ.

    ವಿಶೇಷವಾಗಿ ಗಲ್ವಾನ್‌ ಘರ್ಷಣೆಯನ್ನು ಪ್ರಸ್ತಾಪಿಸಿರುವ ನ್ಯೂಸ್‌ವೀಕ್‌, ಈ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದರೆ ಚೀನಾ ಕಡೆಯಲ್ಲೂ ಸಾವು ಸಂಭವಿಸಿದೆ. ಆದರೆ ಅಲ್ಲಿನ ಸರ್ಕಾರ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಆದರೆ ಚೀನಾದ 43 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.  ಇದನ್ನೂ ಓದಿ: ಭಾರತಕ್ಕೆ ಮೊದಲ ಪ್ರಾಶಸ್ತ್ಯ – ಚೀನಾಗೆ ಶಾಕ್‌ ನೀಡಿದ ಲಂಕಾ

    ಭಾರತ ಈ ರೀತಿಯ ಪ್ರತಿರೋಧ ತೋರುತ್ತದೆ ಎಂದು ಚೀನಾ ನಿರೀಕ್ಷೆ ಮಾಡಿರಲಿಲ್ಲ. ಅರ್ಧ ಶತಮಾನದಲ್ಲಿ ಮೊದಲ ಬಾರಿಗೆ ಭಾರತ ಚೀನಾ ವಿರುದ್ಧ ಆಕ್ರಮಣಕಾರಿ ನಡೆಯನ್ನು ಅನುಸರಿಸುತ್ತದೆ. ಕಳೆದ ತಿಂಗಳು ಗಡಿಯಲ್ಲಿನ ಆಯಕಟ್ಟಿನ ಸ್ಥಳಕ್ಕೆ ತೆರಳಲು ಚೀನಾ ಮುಂದಾಗಿತ್ತು. ಆದರೆ ಈ ಸ್ಥಳವನ್ನು ನಾವು ತಲುಪುವ ಮೊದಲು ಭಾರತದ ಸೈನಿಕರು ತಲುಪಿದ್ದನ್ನು ನೋಡಿ ಚೀನಿ ಸೈನಿಕರು ಆಶ್ಚರ್ಯಗೊಂಡಿದ್ದರು ಎಂದು ವರದಿಯಲ್ಲಿ ಹೇಳಿದೆ.

    ಯುದ್ಧದ ಇತಿಹಾಸ ನೋಡಿದರೆ ಚೀನಾ ಕೊನೆಯ ಬಾರಿ ಯುದ್ಧ ಮಾಡಿರುವುದು 1979ರಲ್ಲಿ. ವಿಯೆಟ್ನಾ ಯುದ್ಧದಲ್ಲಿ ಚೀನಾ ಸೋತಿದೆ. ಆದರೆ ಭಾರತ ಈಗ ಬದಲಾಗಿ ಆಕ್ರಮಣಕಾರಿ ನೀತಿ ಅನುಸರಿಸುತ್ತಿದ್ದು ದಿಟ್ಟ ಉತ್ತರ ನೀಡುತ್ತಿದೆ ಎಂದು ತಿಳಿಸಿದೆ.

  • ಇರಾನ್ ಕ್ಷಿಪಣಿ ದಾಳಿಗೆ 80 ಅಮೆರಿಕ ಸೈನಿಕರು ಹತ

    ಇರಾನ್ ಕ್ಷಿಪಣಿ ದಾಳಿಗೆ 80 ಅಮೆರಿಕ ಸೈನಿಕರು ಹತ

    – ನಾಳೆ ಬೆಳಗ್ಗೆ ಹೇಳಿಕೆ ನೀಡುತ್ತೇನೆ – ಟ್ರಂಪ್
    – ಯುದ್ಧ ಬಯಸಲ್ಲ, ದಾಳಿ ನಡೆಸಿದ್ರೆ ಹಿಮ್ಮೆಟ್ಟಿಸುತ್ತೇವೆ : ಇರಾನ್

    ದುಬೈ: ಅಮೆರಿಕ ಮತ್ತು ಇರಾನ್ ನಡುವಿನ ಕಿತ್ತಾಟ ಮತ್ತಷ್ಟು ಜೋರಾಗಿದೆ. ಇರಾನ್ ಬುಧವಾರ  ಕ್ಷಿಪಣಿ ದಾಳಿ ನಡೆಸಿ ಅಮೆರಿಕದ 80 ಸೈನಿಕರನ್ನು ಹತ್ಯೆ ಮಾಡಿದೆ.

    ಈ ಸಂಬಂಧ ಇರಾನ್ ಸರ್ಕಾರಿ ಮಾಧ್ಯಮ, ಖಂಡಾಂತರ ಕ್ಷಿಪಣಿ ದಾಳಿ ಮಾಡಿ ಇರಾಕ್‍ನಲ್ಲಿದ್ದ ಅಮೆರಿಕ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸಿದೆ. ನಮ್ಮ ದಾಳಿಯಲ್ಲಿ 80 ‘ಅಮೆರಿಕ ಉಗ್ರರು’ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.

    ಇರಾನ್ ಅಮೆರಿಕ ತನ್ನ ವೈರಿ ಎಂದು ಈಗಾಗಲೇ ಹೇಳಿಕೊಂಡಿದ್ದು ಉಗ್ರರ ನಾಡು ಎಂದು ಕರೆಯುತ್ತಿದೆ. ಅಮೆರಿಕದ ಸೈನಿಕರನ್ನು ಉಗ್ರಗಾಮಿಗಳಿಗೆ ಹೋಲಿಕೆ ಮಾಡುತ್ತಿದೆ. ತನ್ನ ಸೇನಾ ಕಮಾಂಡರ್ ಖಾಸಿಂ ಸುಲೇಮಾನಿ ಹತ್ಯೆ ಪ್ರತೀಕಾರ ತೀರಿಸುತ್ತೇವೆ ಎಂದು ಇರಾನ್ ಹೇಳಿತ್ತು. ಅದರಂತೆ ಈಗ ಈ ದಾಳಿ ನಡೆಸಿದ್ದೇವೆ ಎಂದು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದೆ.

    ಒಟ್ಟು 15 ಕ್ಷಿಪಣಿಗಳನ್ನು ಇರಾನ್ ಅಮೆರಿಕ ಸೇನೆಯ ಮೇಲೆ ಹಾರಿಸಿದೆ. ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ನಮ್ಮ ಕ್ಷಿಪಣಿಯನ್ನು ಅಮೆರಿಕ ಹೊಡೆದು ಹಾಕಿಲ್ಲ ಎಂದು ಇರಾನ್ ಸರ್ಕಾರಿ ಮಾಧ್ಯಮ ಹೇಳಿಕೊಂಡಿದೆ. ಇದನ್ನೂ ಓದಿ: ಅಮೆರಿಕದ ’52 ಟಾರ್ಗೆಟ್’ ಸಂಖ್ಯೆಗೆ ‘290’ ಪ್ರಸ್ತಾಪಿಸಿ ತಿರುಗೇಟು ಕೊಟ್ಟ ಇರಾನ್

    ಈ ಸಂಬಂಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ ಇರಾಕ್ ದೇಶದಲ್ಲಿರುವ ನಮ್ಮ ಎರಡು ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದೆ. ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದರ ಬಗ್ಗೆ ಮೌಲ್ಯಮಾಪನ ನಡೆಯುತ್ತಿದೆ. ವಿಶ್ವದಲ್ಲೇ ನಾವು ಬಲಿಷ್ಠವಾದ ಮಿಲಿಟರಿಯನ್ನು ಹೊಂದಿದ್ದು, ನಾಳೆ ಬೆಳಗ್ಗೆ ಹೇಳಿಕೆ ನೀಡುತ್ತೇನೆ ಎಂದು ಟ್ವೀಟ್ ಮಾಡಿ ಮತ್ತೊಂದು ದಾಳಿಯ ಮುನ್ಸೂಚನೆ ನೀಡಿದ್ದಾರೆ.

    ಇರಾನ್ ವಿದೇಶಾಂಗ ಸಚಿವ ಜಾವದ್ ಜರೀಫ್ ಈ ಸಂಬಂಧ ಪ್ರತಿಕ್ರಿಯಿಸಿ, ವಿಶ್ವಸಂಸ್ಥೆಯ 51ನೇ ಚಾರ್ಟರ್ ಅನ್ವಯ, ನಮ್ಮ ದೇಶದ ಪ್ರಜೆ ಮತ್ತು ಅಧಿಕಾರ ಮೇಲೆ ಹೀನ ದಾಳಿ ನಡೆಸಿದ್ದಕ್ಕೆ ಸ್ವಯಂ ರಕ್ಷಣೆಗಾಗಿ ಪ್ರತಿ ದಾಳಿ ನಡೆಸಲಾಗಿದೆ. ನಾವು ಯುದ್ಧವನ್ನು ಬಯಸುವುದಿಲ್ಲ. ಆದರೆ ನಮ್ಮ ಮೇಲೆ ಆಕ್ರಮಣ ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.