Tag: ಆಕ್ರಮ

  • ಚಿಕ್ಕಮ್ಮನ ಜೊತೆ ಅಕ್ರಮ ಸಂಬಂಧಕ್ಕಾಗಿ ಅಣ್ಣನ ಮಗನಿಂದಲೇ ಚಿಕ್ಕಪ್ಪನ ಹತ್ಯೆ

    ಚಿಕ್ಕಮ್ಮನ ಜೊತೆ ಅಕ್ರಮ ಸಂಬಂಧಕ್ಕಾಗಿ ಅಣ್ಣನ ಮಗನಿಂದಲೇ ಚಿಕ್ಕಪ್ಪನ ಹತ್ಯೆ

    ಹಾವೇರಿ: ತನಗೆ ಮೂವರು ಮಕ್ಕಳಿದ್ದರೂ ಅಣ್ಣನ ಮಗನನ್ನು ತನ್ನ ಸ್ವಂತ ಮಗ ಅನ್ನೋದಕ್ಕಿಂತಲೂ ಹೆಚ್ಚಾಗಿ ಬೆಳೆಸಿದ್ದ. ಆದರೆ ಆ ಅಣ್ಣನ ಮಗ ಚಿಕ್ಕಮ್ಮನಿಗಾಗಿ ಚಿಕ್ಕಪ್ಪನನ್ನೇ ಕೊಲೆ ಮಾಡಿ ಅರೆಸ್ಟ್ ಆಗಿದ್ದಾನೆ.

    ಹತ್ಯೆಯಾದ ವ್ಯಕ್ತಿಯನ್ನು ನಾಗೇಂದ್ರಮಟ್ಟಿಯ ನಿವಾಸಿಯಾದ 40 ವರ್ಷ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಈತ ಮೂರು ಮಕ್ಕಳು ಮಡದಿ ಜೊತೆ ಆಟೋರಿಕ್ಷಾ ಓಡಿಸಿಕೊಂಡು ಜೀವನ ಮಾಡುತ್ತಿದ್ದ ಮತ್ತು ಅನಾಥ ಎಂದು ತನ್ನ ಅಣ್ಣನ ಮಗ ಮಂಜುನಾಥ್(20) ಜೊತೆಯಲ್ಲೇ ಬೆಳೆಸುತ್ತಿದ್ದ.

    ಚಿಕ್ಕಮ್ಮ ಉಷಾಳ ಜೊತೆ ಮಂಜುನಾಥ್ ಕದ್ದುಮುಚ್ಚಿ ಲವ್ವಿಡವ್ವಿ ಶುರುವಿಟ್ಟಕೊಂಡಿದ್ದ. ಇದು ಯಲ್ಲಪ್ಪನಿಗೆ ಗೊತ್ತಾದ ನಂತರ ಇಬ್ಬರು ಸೇರಿ ಯಲ್ಲಪ್ಪ ಕೊಲೆ ಮಾಡಿ ಹಾವೇರಿಯ ಹೆಗ್ಗೇರಿ ಕೆರೆಯ ಬಳಿ ಐದು ಲೀಟರ್ ಪೆಟ್ರೋಲ್ ಹಾಕಿ ಸುಟ್ಟು, ಮೃತ ದೇಹವನ್ನು ಬಾವಿಯಲ್ಲಿ ಹಾಕಿ ಬಂದಿದ್ದಾರೆ.

    ಡಿಸೆಂಬರ್ 10 ರಂದು ರಾತ್ರಿ ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ ಯಲ್ಲಪ್ಪನನ್ನು ಮಂಜುನಾಥ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಅದಕ್ಕೆ ಯಲ್ಲಪ್ಪನ ಪತ್ನಿ ಚಿಕ್ಕಮ್ಮ ಉಷಾ ಸಹ ಸಾಥ್ ನೀಡಿದ್ದಾಳೆ. ನಂತರ ಕಳೆದ ಆರು-ಏಳು ತಿಂಗಳಿನಿಂದ ಗಂಡ ಮನೆ ಬಿಟ್ಟು ಹೋಗಿದ್ದಾನೆ ಎಂದು ಗ್ರಾಮಸ್ಥರ ಬಳಿ ಹೇಳಿದ್ದಳು.

    6 ತಿಂಗಳ ನಂತರ ಸ್ಥಳೀಯರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಈಗ ಚಿಕ್ಕಮ್ಮ ಉಷಾ ಹಾಗೂ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ.

  • ಅಕ್ರಮವಾಗಿ ನೆಲೆಸಿದ್ದ 21 ಆಫ್ರಿಕಾ ಪ್ರಜೆಗಳ ಬಂಧನ

    ಅಕ್ರಮವಾಗಿ ನೆಲೆಸಿದ್ದ 21 ಆಫ್ರಿಕಾ ಪ್ರಜೆಗಳ ಬಂಧನ

    ಬೆಂಗಳೂರು: ಆಫ್ರಿಕಾ ಖಂಡದಿಂದ ಬಂದು ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ 21 ಆಫ್ರಿಕಾ ಪ್ರಜೆಗಳನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಪ್ರಜೆಗಳೆಲ್ಲರೂ ವಿದ್ಯಾಭ್ಯಾಸ, ಟೂರಿಸ್ಟ್ ಹಾಗು ಬಿಸಿನೆಸ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು. ಆರೋಪಿಗಳು ವೀಸಾ ಅವಧಿ ಮುಗಿದಿದ್ದರೂ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಾಡಿಗೆ ಮನೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದರು.

    ಈ ವಿಷಯ ತಿಳಿದು ವಿದೇಶಿ ಪ್ರಜೆಗಳ ಮೇಲೆ ಕಣ್ಣಿಟ್ಟದ್ದ ಪೊಲೀಸರು ಇಂದು ಎಫ್‍ಆರ್‍ಆರ್‍ಒ ಮತ್ತು ಬೆಂಗಳೂರು ಈಶಾನ್ಯ ವಿಭಾಗ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ನಂತರ ಬಂಧಿತ ವಿದೇಶಿ ಪ್ರಜೆಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.