Tag: ಆಕಾಶವಾಣಿ

  • ಶಾಲಾ ಮಕ್ಕಳಿಗೆ ಆಕಾಶವಾಣಿ ಮೂಲಕ ಪಠ್ಯ ಬೋಧನೆ – ವೇಳಾಪಟ್ಟಿ ಪ್ರಕಟ

    ಶಾಲಾ ಮಕ್ಕಳಿಗೆ ಆಕಾಶವಾಣಿ ಮೂಲಕ ಪಠ್ಯ ಬೋಧನೆ – ವೇಳಾಪಟ್ಟಿ ಪ್ರಕಟ

    ಬೆಂಗಳೂರು: ಶಾಲಾ ಮಕ್ಕಳಿಗೆ (Student) ಆಕಾಶವಾಣಿ (Radio) ಮೂಲಕ ಪಠ್ಯ ಬೋಧನೆಯ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ವೇಳಾಪಟ್ಟಿಯನ್ನು ಪ್ರಕಟಗೊಳಿಸಿದೆ.

    ಗುಣಾತ್ಮಕ ಶಿಕ್ಷಣದ ಗುರಿ ಸಾಧನೆಯೊಂದಿಗೆ ಡಿಜಿಟಲ್‌ ಉಪಕ್ರಮದ ಅಳವಡಿಕೆ ಹಾಗೂ ತರಗತಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಏಕತಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಆಕಾಶವಾಣಿಯ ಮೂಲಕ ಶಾಲೆಗಳಲ್ಲಿ ರೇಡಿಯೋ ಪಾಠವನ್ನು ಪ್ರಸಾರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪ್ರಕಟ ಮಾಡಿರುವ ವೇಳಾಪಟ್ಟಿಯಲ್ಲಿ ನಾಳೆಯಿಂದ ಫೆಬ್ರವರಿ 23ರವರೆಗೆ ಆಕಾಶವಾಣಿಯಲ್ಲಿ ನಿತ್ಯ ಪಠ್ಯ ಬೋಧನೆ ನಡೆಯಲಿದೆ. 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪಠ್ಯ ಬೋಧನೆ ನಡೆಯಲಿದ್ದು, ಬಾನ್ ದನಿ ಕಾರ್ಯಕ್ರಮದ ಮೂಲಕ ಪಠ್ಯ ಬೋಧನೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

    ಬಾನ್ ದನಿ ಕಾರ್ಯಕ್ರಮವು ನೀತಿ ಕತೆ, ಯೋಗ ಮತ್ತು ಆರೋಗ್ಯ ಶಿಕ್ಷಣ, ವೃತ್ತಿ ಶಿಕ್ಷಣ ಮತ್ತು ಶೈಕ್ಷಣಿಕ ಮಾರ್ಗದರ್ಶನ ಹಾಗೂ ಇಂಗ್ಲಿಷ್ ಕಲಿಕೆಯನ್ನೊಳಗೊಂಡ ಸಾಮಾನ್ಯ ಪಾಠಗಳನ್ನು 1 ರಿಂದ 9ನೇ ತರಗತಿಗಳಿಗೆ ಒಳಗೊಂಡಿದೆ. 4 ಹಾಗೂ 5ನೇ ತರಗತಿಗಳಿಗೆ ಕನ್ನಡ ಮತ್ತು ಗಣಿತ ವಿಷಯಗಳ ಕಲಿವಿನ ಫಲ ಆಧಾರಿತ ಪಾಠಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಉಪವಾಸ ಸತ್ಯಾಗ್ರಹ ಮಾಡ್ತಿದ್ದ ಆಂಧ್ರ ಸಿಎಂ ಸಹೋದರಿ ಆಸ್ಪತ್ರೆಗೆ ದಾಖಲು

    ಈ ಕಾರ್ಯಕ್ರಮವು ಆಕಾಶವಾಣಿಯಲ್ಲಿ ಸೋಮವಾರದಿಂದ ಗುರುವಾರದವರೆಗೆ ಮಧ್ಯಾಹ್ನ 2.35 ರಿಂದ 3,00 ಗಂಟೆಯವರೆಗೆ ಪ್ರಸಾರಗೊಳ್ಳಲಿದ್ದು, ರಾಜ್ಯದ 13 ಆಕಾಶವಾಣಿ ಕೇಂದ್ರಗಳು ಹಾಗೂ 3 ವಿವಿಧ ಭಾರತಿ FM ಕೇಂದ್ರಗಳಿಂದ ಏಕಕಾಲದಲ್ಲಿ ರೇಡಿಯೋ ಅಲ್ಲದೆ, ಸಾಮಾನ್ಯ ಮೊಬೈಲ್, All India Radio Bangalore You Tube streaming ನಲ್ಲಿ ಮತ್ತು ಜಗತ್ತಿನಾದ್ಯಂತ Prasarabharathi news on air app ನಲ್ಲಿಯೂ ಕೇಳಬಹುದಾಗಿದೆ. ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ 3 ದಿನ ಮಳೆ – ಹವಾಮಾನ ಇಲಾಖೆ

    Live Tv
    [brid partner=56869869 player=32851 video=960834 autoplay=true]

  • ದಸರಾ ಕವಿಗೋಷ್ಠಿಯಲ್ಲಿ ಮೃತಪಟ್ಟ ಕವಿಯ ಹೆಸರು – ಆಮಂತ್ರಣ ಪತ್ರಿಕೆಯಲ್ಲಿ ಎಡವಟ್ಟು

    ದಸರಾ ಕವಿಗೋಷ್ಠಿಯಲ್ಲಿ ಮೃತಪಟ್ಟ ಕವಿಯ ಹೆಸರು – ಆಮಂತ್ರಣ ಪತ್ರಿಕೆಯಲ್ಲಿ ಎಡವಟ್ಟು

    ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು (Kannada And Culture Department) ಈ ಬಾರಿಯ ದಸರಾ (Mysuru Dasara) ಮುಖ್ಯ ಕವಿಗೋಷ್ಠಿಯಲ್ಲಿ (Literary Fest) ಮೃತಪಟ್ಟ ಕವಿಯ ಹೆಸರು ಸೇರಿಸಿ ಯಡವಟ್ಟು ಮಾಡಿಕೊಂಡಿದೆ.

    3 ವರ್ಷಗಳ ಹಿಂದೆಯೇ ಮೃತಪಟ್ಟಿರುವ ಹಿರಿಯ ಕವಿ ಹಾಗೂ ಮೈಸೂರು ಆಕಾಶವಾಣಿ (Mysuru Akashvani) ನಿರ್ವಾಹಕರಾಗಿದ್ದ ಜಿ.ಕೆ.ರವೀಂದ್ರ ಕುಮಾರ್ ಅವರ ಹೆಸರನ್ನು ಮುಖ್ಯಕವಿಗೋಷ್ಠಿಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಆಮಂತ್ರಣ ಪತ್ರಿಕೆ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದ್ದು, ವ್ಯಾಪಕ ಟೀಕೆಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಖ್ಯಾತ ನಟಿ ಆಶಾ ಪರೇಖ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

    ಅಷ್ಟೇ ಅಲ್ಲದೇ ಮೈಸೂರು-ಕೊಡಗು (Mysuru Kodagu) ಕ್ಷೇತ್ರದ ಸಂಸದ ಪ್ರತಾಪ್ ಸಿಂಹ (Pratap Simha) ಅವರನ್ನ ಕವಿಗೋಷ್ಠಿ ಸಮಿತಿಯವರು ಚಾಮರಾಜನಗರ ಲೋಕಸಭಾ ಕ್ಷೇತ್ರ ಎಂದು ಹೆಸರಿಸಿದ್ದಾರೆ. ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಿದ ಯಡವಟ್ಟಿಗೆ ಸಾಹಿತಿಗಳ ವಲಯದಲ್ಲೂ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಪ್ರಮೋದಾ ದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ – ಫೋಟೋ ವೈರಲ್

    ಈ ವಿಷಯ ತಿಳಿಯುತ್ತಿದ್ದಂತೆ ದಸರಾ ಕವಿಗೋಷ್ಠಿ ಉಪಸಮಿತಿ ಕಾರ್ಯಾಧ್ಯಕ್ಷ ಪ್ರೊ.ಎಂ.ಜಿ. ಮಂಜುನಾಥ್ (MG Manjunath) ಅವರನ್ನು ವಿಚಾರಿಸಿದರೆ, ಅದು ಅಧಿಕೃತ ಆಹ್ವಾನ ಪತ್ರಿಕೆಯಲ್ಲ. ಮೊದಲು ಆ ಹೆಸರಿತ್ತು ನಂತರ ಸರಿಪಡಿಸಲಾಗಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಖೇಲೋ ಇಂಡಿಯಾ 2ನೇ ಆವೃತ್ತಿಗೆ ರಾಜಧಾನಿ ಸಜ್ಜು – ಕ್ರೀಡಾಪಟುಗಳಿಗೆ ಏನೆಲ್ಲಾ ಸೌಲಭ್ಯವಿದೆ?

    ಖೇಲೋ ಇಂಡಿಯಾ 2ನೇ ಆವೃತ್ತಿಗೆ ರಾಜಧಾನಿ ಸಜ್ಜು – ಕ್ರೀಡಾಪಟುಗಳಿಗೆ ಏನೆಲ್ಲಾ ಸೌಲಭ್ಯವಿದೆ?

    ಬೆಂಗಳೂರು: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2ನೇ ಆವೃತ್ತಿ ಮುನ್ನಡೆಸಲು ಬೆಂಗಳೂರು ಸಜ್ಜಾಗಿದೆ. 2ನೇ ಅವೃತ್ತಿಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ನೆರವೇರಿಸಲಿದ್ದಾರೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

    ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021 ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿಯವರೆಗೆ ಸುಮಾರು 890 ಕ್ರೀಡಾಪಟುಗಳು ಆಗಮಿಸಿದ್ದು, ಉಳಿದವರು ಶೀಘ್ರವೇ ಬರುವ ನಿರೀಕ್ಷೆಯಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜಸ್ಥಾನ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಆಘಾತ – ತಂಡದೊಂದಿಗಿಲ್ಲ ಕೋಚ್ ಪಾಟಿಂಗ್

    KHELO INDIA 2

    ಪ್ರತಿ ಕ್ರೀಡಾಪಟುವಿಗೂ ಕೆಎಮ್‌ಎಫ್ ತಿನಿಸುಗಳ ಕಿಟ್ ನೀಡಿ ಸ್ವಾಗತಿಸಲಾಗುತ್ತಿದೆ. ಮೇ 3ರ ವರೆಗೆ ನಡೆಯಲಿರುವ ಕ್ರೀಡಾಕೂಟಕ್ಕೆ ಬರುವ ಕ್ರೀಡಾಪಟುಗಳಿಗಾಗಿ ಈಗಾಗಲೇ ಜೈನ್ ಗ್ಲೋಬಲ್ ವಿಶ್ವವಿದ್ಯಾನಿಲಯದಲ್ಲಿ 2800, ಶ್ರೀ ಶ್ರೀರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್‌ನಲ್ಲಿ 1500 ಹಾಗೂ ವಿವಿಧ ಹೋಟೆಲ್‌ಗಳಲ್ಲಿ 1556 ಪ್ರತಿನಿಧಿಗಳಿಗೆ ವಸತಿ ಸೌಲಭ್ಯ ಸಜ್ಜುಗೊಳಿಸಲಾಗಿದೆ. ಕ್ರೀಡಾಕೂಟಕ್ಕಾಗಿ ಬಿಎಂಟಿಸಿ 160 ಬಸ್ಸುಗಳನ್ನು ಒದಗಿಸಿದೆ. 2800 ಕಾರುಗಳನ್ನು ಕ್ರೀಡಾಕೂಟದಲ್ಲಿನ ವಿವಿಧ ಹಂತಗಳ ಪ್ರತಿನಿಧಿಗಳ ಪ್ರಯಾಣಕ್ಕಾಗಿ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: IPL ಶತಕ ಸಿಡಿಸಿ ಮೆರೆದವರು ಯಾರು – ಇಲ್ಲಿದೆ ಟಾಪ್ 10 ಸಿಕ್ಸರ್ ವೀರರ ಪಟ್ಟಿ

    khelobig

    ಈ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಯೋಗಾಸನ ಮತ್ತು ಮಲ್ಲಕಂಬದಂತಹ ದೇಶೀ ಕ್ರೀಡೆಗಳೊಂದಿಗೆ 20 ಕ್ರೀಡಾ ವಿಭಾಗಗಳಿವೆ. ವೇಯ್ಟ್ ಲಿಫ್ಟಿಂಗ್, ಜೂಡೋ, ಕುಸ್ತಿ, ಕಬ್ಬಡಿ, ವಾಲಿಬಾಲ್, ಈಜು, ಯೋಗಾಸನ, ಆರ್ಚರಿ, ಫೆನ್ಸಿಂಗ್, ಕರಾಟೆ, ಬಾಕ್ಸಿಂಗ್ ಹಾಗೂ ಫುಟ್‌ಬಾಲ್ ಸೇರಿದಂತೆ 13 ವಿಭಾಗಗಳ ಕ್ರೀಡೆಗಳು ಜೈನ್ ಯೂನಿವರ್ಸಿಟಿ ಗ್ಲೋಬಲ್ ಕ್ಯಾಂಪಸ್ ಪ್ರದರ್ಶನಗೊಳ್ಳಲಿವೆ. ಉಳಿದ ಕ್ರೀಡೆಗಳು ಶ್ರೀ ಕಂಠೀರವ ಸ್ಟೇಡಿಯಂ, ದಿ ಜೈನ್ ಸ್ಪೋರ್ಟ್ಸ್ ಸ್ಕೂಲ್, ಸಾಯಿ ನೇತಾಜಿ ಸುಭಾಷ್ ಸದರ್ನ್ ಸೆಂಟರ್ ಮತ್ತು ಕೆ.ಎಂ.ಕಾರಿಯಪ್ಪ ಹಾಕಿ ಸ್ಟೇಡಿಯಂ ಈ ಸ್ಥಳಗಳಲ್ಲಿ ನಡೆಯಲಿವೆ ಎಂದು ವಿವರಿಸಿದರು. ಇದನ್ನೂ ಓದಿ: ಪಠಾಣ್‌ Vs ಮಿಶ್ರಾ – ಭಾರತ ಶ್ರೇಷ್ಠ ದೇಶವಾಗಬಹುದು ಆದರೆ…

    DWD Khelo India

    ಪತ್ರಕರ್ತರಿಗೆ ಸೌಲಭ್ಯ: ಎಲ್ಲಾ ಕ್ರೀಡಾಂಗಣಗಳಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಪತ್ರಕರ್ತರಿಗೆ ಅನುಕೂಲವಾಗಲು ಮಾಧ್ಯಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಕ್ರೀಡಾಂಗಣದಲ್ಲಿಯೂ ಉಚಿತ ವೈಫೈ ಸೌಲಭ್ಯವಿರುತ್ತದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್, ಕೇಂದ್ರದ ಕ್ರೀಡಾ ಸಚಿವಾಲಯದ ರಾಜ್ಯ ನಿಶಿತ್ ಪ್ರಮಾಣಿಕ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಎಸ್.ಹೊರಟ್ಟಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸುವರು. ಆಹ್ವಾನಿತರನ್ನು ಹೊರತುಪಡಿಸಿ, ಉಳಿದೆಲ್ಲರಿಗೂ ಕ್ರೀಡಾಂಗಣದ ಹಿರಗೆ ಬೃಹತ್ ಪರದೆಯ ಮೇಲೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಆಕಾಶವಾಣಿ, ರೇಡಿಯೋ ಸಿಟಿ, ಡಿಡಿ ಸ್ಪೋರ್ಟ್ಸ್‌ ನಲ್ಲಿ ನೇರಪ್ರಸಾರವಾಗಲಿದೆ ಎಂದು ನಾರಾಯಣಗೌಡ ಮಾಹಿತಿ ನೀಡಿದರು.

  • ಆಕಾಶವಾಣಿಯಲ್ಲಿ SSLC ಪರೀಕ್ಷಾ ಸಿದ್ಧತೆ ಕಾರ್ಯಕ್ರಮ

    ಆಕಾಶವಾಣಿಯಲ್ಲಿ SSLC ಪರೀಕ್ಷಾ ಸಿದ್ಧತೆ ಕಾರ್ಯಕ್ರಮ

    ಬೆಂಗಳೂರು: ಮಾರ್ಚ್ ಕೊನೆಯ ವಾರ-ಏಪ್ರಿಲ್ ಮೊದಲ ವಾರದಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಮಕ್ಕಳಿಗೆ ಪರೀಕ್ಷಾ ಸಿದ್ಧತೆಯ ಮಾಹಿತಿ ನೀಡಲು ಎಸ್‍ಎಸ್‍ಎಲ್‍ಸಿ ಬೋರ್ಡ್ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಪ್ರತಿದಿನ ಆಕಾಶವಾಣಿಯಲ್ಲಿ ಪರೀಕ್ಷಾ ಸಿದ್ಧತೆ ಬಗ್ಗೆ ಕಾರ್ಯಕ್ರಮ ನಡೆಸುತ್ತಿದೆ. ಕಾರ್ಯಕ್ರಮ ಇಂದಿನಿಂದ ಪ್ರಾರಂಭವಾಗಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಇಂದಿನಿಂದ ಮಾರ್ಚ್ 24 ವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಆಕಾಶವಾಣಿಯಲ್ಲಿ ಪ್ರತಿದಿನ ಮಧ್ಯಾಹ್ನ 2:35 ರಿಂದ 3 ಗಂಟೆಯವರೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ರಾಜ್ಯದ 13 ಆಕಾಶವಾಣಿ ಕೇಂದ್ರಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ರಾಜ್ಯದ ನುರಿತ ಶಿಕ್ಷಕರು, ಶಿಕ್ಷಣ ತಜ್ಞರು, ಮಾನಸಿಕ ತಜ್ಞರು, ವೈದ್ಯರು, ಸಚಿವರು ಇಲಾಖೆ ಅಧಿಕಾರಿಗಳು ಪರೀಕ್ಷೆಯ ವಿವಿಧ ಆಯಾಮದ ಬಗ್ಗೆ ಮಾಹಿತಿ ನೀಡಲಿದ್ದಾರೆ.

    ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಸಂಜೆ 5:30 ಕ್ಕೆ ಬೆಂಗಳೂರಿನ ಎಫ್‍ಎಂ ರೇನ್ ಬೋ 101.3 ರಲ್ಲಿ ಮರು ಪ್ರಸಾರವಾಗಲಿದೆ. ಅಲ್ಲದೆ ವಿಶ್ವದಾದ್ಯಂತ ಮಧ್ಯಾಹ್ನ 2:35 ಕ್ಕೆ ಪ್ರಸಾರವಾಗಲಿದೆ. ಇದಲ್ಲದೆ NEWS on AIR ಆಪ್ ನಲ್ಲೂ ಮತ್ತು DTHನಲ್ಲೂ ಪ್ರಸಾರವಾಗಲಿದೆ. ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯ, ಸಮಾಜ ವಿಜ್ಞಾನ ಸೇರಿದಂತೆ ಎಲ್ಲಾ ವಿಷಯಗಳ ಸಮಸ್ಯೆ, ಪರೀಕ್ಷಾ ಸಮಯ ನಿರ್ವಹಣೆ ಕುರಿತು ಮಾಹಿತಿ ಸೇರಿದಂತೆ ಅನೇಕ ವಿಷಯಗಳ ಮಾಹಿತಿ ಲಭ್ಯವಾಗಲಿದೆ.

  • ಭಾಷೆ, ನೆಲ, ಜಲಕ್ಕೆ ಸಂಬಂಧಿಸಿದ ಪ್ರಶ್ನೆ ಎದುರಾದಾಗ ನಮ್ಮೆಲ್ಲರದ್ದು ಒಂದೇ ಪಕ್ಷ: ಸಿಎಂ

    ಭಾಷೆ, ನೆಲ, ಜಲಕ್ಕೆ ಸಂಬಂಧಿಸಿದ ಪ್ರಶ್ನೆ ಎದುರಾದಾಗ ನಮ್ಮೆಲ್ಲರದ್ದು ಒಂದೇ ಪಕ್ಷ: ಸಿಎಂ

    ಬೆಂಗಳೂರು: ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದ ನಾನು ಅಲ್ಲಿಂದ ಇಲ್ಲಿಯ ವರೆಗೆ ನಾಡು-ನುಡಿ ಬಗ್ಗೆ ರಾಜಿಮಾಡಿಕೊಂಡಿಲ್ಲ. ಭಾಷೆ, ನೆಲ, ಜಲಕ್ಕೆ ಸಂಬಂಧಿಸಿದ ಪ್ರಶ್ನೆ ಎದುರಾದಾಗ ನಮ್ಮೆಲ್ಲರದ್ದು ಒಂದೇ ಪಕ್ಷ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಆಕಾಶವಾಣಿಯಲ್ಲಿ ಭಾಷಣ ಮಾಡಿದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕನ್ನಡಕ್ಕೆ ಸಂಬಂಧಿಸಿದಂತೆ ನಾನು ರಾಜಕೀಯ ಲಾಭ-ನಷ್ಟದ ಕಡೆ ಯೋಚನೆ ಮಾಡದೆ ಕನ್ನಡ ಪ್ರೇಮಿಯಾಗಿಯೇ ನಿರ್ಧಾರ ಕೈಗೊಂಡಿದ್ದೇನೆ. ಕನ್ನಡ ಎನ್ನುವುದು ನನಗೆ ರಾಜಕೀಯ ಅಲ್ಲ. ನಾನು ಹುಟ್ಟು ಕನ್ನಡ ಪ್ರೇಮಿ ಎಂದು ಹೇಳಿದರು.

    ಹೀಗಾಗಿ ಇಲ್ಲಿ ಸಿಎಂ ಸಿದ್ದರಾಮಯ್ಯ ನವರು 62ನೇ ಆಕಾಶವಾಣಿಯಲ್ಲಿ ಮಾಡಿರುವ ಭಾಷಣದ ಯಥಾವತ್ ಕಾಪಿಯನ್ನು ಇಲ್ಲಿ ನೀಡಲಾಗಿದೆ.

    ಆತ್ಮೀಯ ನಾಡ ಬಾಂಧವರೆ,
    ಸರ್ವರಿಗೂ 62ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಭಾರತಕ್ಕೆ ಸ್ವಾತಂತ್ರ್ಯ ದೊರೆತಿದ್ದು 1947ರಲ್ಲಿ. ಭಾರತವು ಗಣರಾಜ್ಯವಾದದ್ದು 1950 ರಲ್ಲಿ. ಅಂತೆಯೇ, ಭಾಷಾವಾರು ಪ್ರಾಂತ್ಯಗಳ ರಚನೆಯಾದದ್ದು 1956 ರಲ್ಲಿ. ಕನ್ನಡಿಗರೆಲ್ಲರೂ ಸಾಂಸ್ಕøತಿಕವಾಗಿ ಹಾಗೂ ಭಾವನಾತ್ಮಕವಾಗಿ ಸಂಪೂರ್ಣವಾಗಿ ಒಂದಾಗಿ 61 ವರ್ಷಗಳು ಪೂರ್ಣಗೊಂಡಿವೆ.

    ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ, ಅದು ಕನ್ನಡದ ಜನ, ನೆಲ, ಜಲ, ಬದುಕು, ಸಾಹಿತ್ಯ, ಸಂಸ್ಕøತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡ ಕನ್ನಡತನ. ಕರ್ನಾಟಕದ ನೆಲದಲ್ಲಿ ವಾಸಿಸುತ್ತಿರುವವರೆಲ್ಲರೂ ಕನ್ನಡಿಗರು ಎಂದು ನಾವು ತಿಳಿದುಕೊಂಡಿದ್ದೇವೆ ಮತ್ತು ಹಾಗೆಯೇ ನಡೆದುಕೊಂಡಿದ್ದೇವೆ. ಇದಕ್ಕಾಗಿಯೇ ಇದು ಕನ್ನಡ ರಾಜ್ಯದ ಉತ್ಸವ. ಕನ್ನಡಿಗರ ಉತ್ಸವ. ಕನ್ನಡ ಎನ್ನುವುದು ನನಗೆ ರಾಜಕೀಯ ಅಲ್ಲ. ನಾನು ಹುಟ್ಟು ಕನ್ನಡ ಪ್ರೇಮಿ. ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದ ನಾನು ಅಲ್ಲಿಂದ ಇಲ್ಲಿಯ ವರೆಗೆ ನಾಡು-ನುಡಿ ಬಗ್ಗೆ ರಾಜಿಮಾಡಿಕೊಂಡಿಲ್ಲ. ಭಾಷೆ, ನೆಲ, ಜಲಕ್ಕೆ ಸಂಬಂಧಿಸಿದ ಪ್ರಶ್ನೆ ಎದುರಾದಾಗ ನಮ್ಮೆಲ್ಲರದ್ದು ಒಂದೇ ಪಕ್ಷ.

    ಕನ್ನಡ ಅಭಿಜಾತ ಭಾಷೆ. ಜಗತ್ತಿನಲ್ಲಿ ಅತ್ಯುತ್ತಮ ಸಾಹಿತ್ಯ ಸಂಪತ್ತನ್ನು ಹೊಂದಿರುವ ಕೆಲವೇ ಭಾಷೆಗಳಲ್ಲಿ ಕನ್ನಡವೂ ಒಂದು. ಇದಕ್ಕೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕನ್ನಡಕ್ಕೆ ಸಂಬಂಧಿಸಿದಂತೆ ನಾನು ರಾಜಕೀಯ ಲಾಭ-ನಷ್ಟದ ಕಡೆ ಯೋಚನೆ ಮಾಡದೆ ಕನ್ನಡ ಪ್ರೇಮಿಯಾಗಿಯೇ ನಿರ್ಧಾರ ಕೈಗೊಂಡಿದ್ದೇನೆ.

    ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇಕಡಾ ಐದರಷ್ಟು ಮೀಸಲಾತಿ, ಖಾಸಗಿ ಕ್ಷೇತ್ರದ ಉದ್ಯಮಗಳಲ್ಲಿಯೂ ಸಿ ಮತ್ತು ಡಿ ವರ್ಗದ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಮೀಸಲಾತಿ, ಸಿಬಿಎಸ್‍ಇ, ಐಸಿಎಸ್‍ಇ ಶಾಲೆಗಳು ಸೇರಿದಂತೆ ಎಲ್ಲಾ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸುವ ಭಾಷಾ ನೀತಿ ಜಾರಿ, ಗ್ರಾಮೀಣ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸಲು ಕ್ರಮ, ರಾಷ್ಟ್ರೀಕೃತ, ಗ್ರಾಮೀಣ ಮತ್ತು ಷೆಡ್ಯೂಲ್ಡ್ ಬ್ಯಾಂಕ್ ಗಳ ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಕಲಿಯುವಂತೆ ಸೂಚಿಸಿ ಸುತ್ತೋಲೆ, ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಸಿನೆಮಾ ಪ್ರದರ್ಶನ ಕಡ್ಡಾಯಗೊಳಿಸಿ ಆದೇಶ, ಗುಣಮಟ್ಟದ ಕನ್ನಡ ಸಿನಿಮಾಗಳಿಗೆ ಸಹಾಯಧನವನ್ನು 125 ಸಿನಿಮಾಗಳಿಗೆ ಹೆಚ್ಚಳ, ಕನ್ನಡೇತರರಿಗೆ ಕನ್ನಡ ಕಲಿಸಲು ಬೆಂಗಳೂರು ನಗರದಲ್ಲಿ ಕನ್ನಡ ಕಲಿಕಾ ಕೇಂದ್ರಗಳ ಪ್ರಾರಂಭ. ಇವು ಇತ್ತೀಚೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಪ್ರಮುಖ ಕನ್ನಡಪರ ನಿರ್ಧಾರಗಳು.

    ಪ್ರತಿಯೊಂದು ರಾಜ್ಯದ ರಾಜ್ಯಭಾಷೆಯು ಆ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಅಂಗೀಕರಿಸಿದೆ. ಮಾನ್ಯ ಮಾಡಿದೆ. ಮತ್ತೊಂದು ಭಾಷೆ ಆ ನೆಲದ ಬದುಕಿನ ಮೇಲೆ ಅಧಿಪತ್ಯವನ್ನು ಮೆರೆಯುವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು. ಸಂವಿಧಾನವೂ ಇದನ್ನು ಒಪ್ಪುವುದಿಲ್ಲ. ಸ್ಥಳೀಯತ್ವವನ್ನು ಉಳಿಸಿಕೊಂಡೇ ಅರ್ಥಾತ್ ಸ್ಥಳೀಯ ಭಾಷೆಯ ಸ್ವಾಯತ್ತತೆಯನ್ನು ಉಳಿಸಿಕೊಂಡೇ ಅನ್ಯಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ಕೊಡಬೇಕಾದುದ್ದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆ, ಇದನ್ನೇ ನಮ್ಮ ಸರ್ಕಾರ ಪಾಲಿಸುತ್ತಾ ಬಂದಿದೆ.

    ಇಂಗ್ಲೀಷ್ ಇಲ್ಲವೆ ಹಿಂದಿ ಭಾಷೆಗೆ ನಮ್ಮ ವಿರೋಧ ಖಂಡಿತ ಇಲ್ಲ. ಆದರೆ ಕನ್ನಡದ ಬೆಲೆ ತೆತ್ತು ಬೇರೆ ಭಾಷೆಗಳ ಹೇರಿಕೆಯನ್ನು ನಾವು ಒಪ್ಪುವುದಿಲ್ಲ. ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ಹಿಂದಿ ಭಾಷೆ ಹೇರಿಕೆ ವಿರುದ್ಧ ಕನ್ನಡ ಸಂಘಟನೆಗಳು ದನಿ ಎತ್ತಿದಾಗ ಸ್ಪಂದಿಸಿದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಜತೆ ವ್ಯವಹರಿಸಿ ಅಲ್ಲಿ ಕನ್ನಡ ಮತ್ತು ಇಂಗ್ಲೀಷ್ಗಳ ದ್ವಿ-ಭಾಷಾ ನೀತಿ ಜಾರಿಗೊಳಿಸಿತು. ನಮ್ಮ ಸರ್ಕಾರ, ರಾಜ್ಯ ಧ್ವಜ ಬೇಕೆಂಬ ಜನಾಭಿಪ್ರಾಯದ ಪರವಾಗಿ ಇದೆ. ಈ ಬೇಡಿಕೆಯನ್ನು ಮನ್ನಿಸಿ ಅದರ ಪರಿಶೀಲನೆಗಾಗಿ ತಜ್ಞರ ಸಮಿತಿಯನ್ನು ರಚಿಸಿದೆ. ಶೀಘ್ರದಲ್ಲಿಯೇ ಆ ಬಗ್ಗೆ ಅಧಿಕೃತ ನಿರ್ಧಾರ ಕೈಗೊಳ್ಳಲಿದೆ.

    ಇಂದು ಕನ್ನಡ ಭಾಷೆ ಅಷ್ಟೇ ಅಲ್ಲ ಎಲ್ಲಾ ಪ್ರಾದೇಶಿಕ ಭಾಷೆಗಳು ಬಹುದೊಡ್ಡ ಆತಂಕಗಳನ್ನು ಎದುರಿಸುತ್ತಿವೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಮಗು ಯಾವ ಭಾಷೆಯಲ್ಲಿ ಕಲಿಯಬೇಕೆಂಬ ತೀರ್ಮಾನ ಪಾಲಕರಿಗೆ ಸೇರಿದ್ದು ಎಂಬ ತೀರ್ಪು ನೀಡಿದೆ. ಇದು ಕೇವಲ ಕನ್ನಡ ಭಾಷೆಗೆ ಮಾತ್ರವಲ್ಲ ನಮ್ಮ ಇಡೀ ಸಮಾಜದ ರಚನೆಗೆ ಬಂದಿರುವ ಕುತ್ತು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಸಂವಿಧಾನದ ಆಶಯದಂತೆ ಆರು ವರ್ಷದಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಆ ಮಕ್ಕಳ ಒಳಿತಿಗಾಗಿ ಅಗತ್ಯವಾದ ಎಲ್ಲಾ ವಿವೇಚನಾಪೂರ್ವಕ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸೂಕ್ತ ಕಾನೂನು ರೂಪಿಸಿ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಬೇಕಾಗಿರುವುದು ರಾಜ್ಯದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮಾತೃ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಜಾರಿಗೊಳಿಸಲು ರಾಷ್ಟ್ರವ್ಯಾಪ್ತಿ ಅಭಿಪ್ರಾಯ ರೂಪಿಸಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕೆಂಬುದು ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರದ ಒತ್ತಾಯವಾಗಿದೆ.

    ನಮ್ಮ ಸರ್ಕಾರವು ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ಬುದ್ದಿಜೀವಿಗಳು, ಸಾಹಿತಿಗಳು ಹಾಗೂ ಕಾನೂನು ಪಂಡಿತರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಆಯೋಜಿಸಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರಲು ಪ್ರಧಾನ ಮಂತ್ರಿ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಆದರೆ, ಈ ಪತ್ರಗಳಿಗೆ ಈವರೆಗೂ ಪ್ರಧಾನಮಂತ್ರಿಯವರಿಂದ ಯಾವುದೇ ಸ್ಪಂದನೆ ದೊರೆತಿಲ್ಲ.

    ಕಲಿಕೆ ಎಂಬುದು ಕಲಿಯುವ ಮಕ್ಕಳ ಆಯ್ಕೆಯಾಗಿಲ್ಲ. ಬದಲಾಗಿ ಪಾಲಕ-ಪೋಷಕರ ಆಯ್ಕೆಯಾಗಿದೆ. ಆಂಗ್ಲ ಭಾಷಾ ಶಾಲೆಗಳಲ್ಲಿ ಕಲಿತರೆ ಮಾತ್ರ ಬದುಕು ಮತ್ತು ಭವಿಷ್ಯ ಎಂಬ ಹುಸಿ ನಂಬಿಕೆ ಪಾಲಕ-ಪೋಷಕರಲ್ಲಿ ಮನೆ ಮಾಡಿರುವುದು ಭಾಷಾ ಮಾಧ್ಯಮದ ಅನುಷ್ಠಾನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ವಿಶ್ವ ವಿಖ್ಯಾತ ಇಂಜಿನಿಯರ್. ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿದ ಭಾರತ ರತ್ನ ಸಿ. ಎನ್. ಆರ್. ರಾವ್ ಅವರು ವಿಶ್ವ ವಿಖ್ಯಾತ ವಿಜ್ಞಾನಿ. ಕನ್ನಡ ಮಾಧ್ಯಮದಲ್ಲೇ ಕಲಿತ ನಾನೂ ಕೂಡ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಆದಕಾರಣ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಅವಕಾಶಗಳಿಲ್ಲ, ಭವಿಷ್ಯವೇ ಇಲ್ಲ ಎಂಬ ಮಾತನ್ನು ನಾನು ಒಪ್ಪುವುದಿಲ್ಲ.

    ಇವೆಲ್ಲದರ ಬಗ್ಗೆಯೂ ಗಂಭೀರ ಚಿಂತನೆ ನಡೆಸಿರುವ ನಮ್ಮ ಸರ್ಕಾರ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಭಾಷೆಯನ್ನು ಒಂದು ವಿಷಯವನ್ನಾಗಿ ಬೋಧಿಸಲು ಐದು ಸಾವಿರ ಶಿಕ್ಷಕರಿಗೆ ದೀರ್ಘಾವಧಿ ತರಬೇತಿ ನೀಡಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ನಮ್ಮ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಮುಂದುವರೆಸುವುದರೊಂದಿಗೆ ನಲವತ್ತು ಲಕ್ಷಕ್ಕೂ ಹೆಚ್ಚು ಅಂಗನವಾಡಿ ಮಕ್ಕಳೂ ಸೇರಿದಂತೆ ಒಂದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ಒಂದು ಕೋಟಿಗೂ ಹೆಚ್ಚು ಮಕ್ಕಳಿಗೆ ವಾರಕ್ಕೆ ಐದು ಬಾರಿ ಕುಡಿಯಲು ಹಾಲು ಕೊಡುವ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ ಮಕ್ಕಳಲ್ಲಿನ ಪೌಷ್ಠಿಕತೆ ವೃದ್ಧಿಸಿದೆ. ಹಾಜರಾತಿ ಪ್ರಮಾಣದಲ್ಲೂ ಗಣನೀಯ ಏರಿಕೆ ಉಂಟಾಗಿದೆ.

    ಒಂದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೂ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಕಾಲು ಚೀಲ ಮತ್ತು ಬೂಟುಗಳನ್ನು ಒಳಗೊಂಡಂತೆ ಉಚಿತ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಪಠ್ಯ ಪುಸ್ತಕಗಳ ವಿತರಣೆ ಮಾಡಲಾಗುತ್ತಿದೆ. ಆಧುನಿಕ ವಿಜ್ಞಾನವನ್ನು ನಮ್ಮ ಭಾಷೆಯಲ್ಲಿ ಕಲಿಸುವುದು ಹಾಗೂ ಕಲಿಯುವುದು ಸಾಧ್ಯ ಇಲ್ಲ ಎನ್ನುವುದು ಅವೈಜ್ಞಾನಿಕ ಅಭಿಪ್ರಾಯ. ಕನ್ನಡ ಭಾಷೆ ಬೆಳೆಯಬೇಕಾದರೆ ಬೇರೆ ಬೇರೆ ಜ್ಞಾನ ಶಿಸ್ತುಗಳಲ್ಲಿ ತೊಡಗಿಸಿಕೊಂಡ ಪಂಡಿತರು, ವಿದ್ವಾಂಸರು ಕನ್ನಡ ಭಾಷೆಯ ಬಗ್ಗೆ ಇಚ್ಚಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಜ್ಞಾನಕ್ಷೇತ್ರಕ್ಕೆ ಸಂಬಂಧಿಸಿದ ಹೊರ ಪರಿಭಾಷೆಯನ್ನು ಕಂಡು ಕೊಳ್ಳಬೇಕು ಕನ್ನಡದ ಜ್ಞಾನ ಸಂಪತ್ತು, ಕನ್ನಡ ಶಬ್ದ ಸಂಪತ್ತು ಮತ್ತಷ್ಟು ಬೆಳೆಯಬೇಕು.

    ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿರುವ ಅನೇಕ ವೈದ್ಯರು ಕನ್ನಡದಲ್ಲಿ ಬರೆಯುತ್ತಿದ್ದಾರೆ. ಆದರೆ ತಂತ್ರಜ್ಞರು, ಎಂಜಿನಿಯರ್‍ಗಳು, ವಕೀಲರು ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಕನ್ನಡದಲ್ಲಿ ತಂತ್ರಜ್ಞಾನವನ್ನು ಹೇಳಲಿಕ್ಕೆ ಬರುವುದಿಲ್ಲ ಎನ್ನುವ ಪೂರ್ವ ನಿರ್ಧರಿತ ಅಭಿಪ್ರಾಯದಿಂದ ಅವರು ಹೊರಬರಬೇಕು. ಇಲ್ಲಿಯ ವರೆಗಿನ ಕನ್ನಡದ ಅಭಿವೃದ್ಧಿ ಎದುರಿಸಿದ ತೊಡಕುಗಳು, ಮುಂದಿರುವ ಸವಾಲುಗಳು ಹಾಗೂ ಮುಂದೆ ಆಗಬೇಕಾಗಿರುವ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾದ ಮತ್ತು ಜನಪರವಾದ ಭಾಷಾ ನೀತಿಯೊಂದನ್ನು ರೂಪಿಸುವ ಅಗತ್ಯ ಇದೆ. ಆದ್ದರಿಂದ ಬದಲಾಗುತ್ತಿರುವ ಕಾಲಮಾನ ಹಾಗೂ ಬದಲಾಗುತ್ತಿರುವ ಅಗತ್ಯಗಳನ್ನು ನೆನಪಲ್ಲಿಟ್ಟುಕೊಂಡು ಈ ನೀತಿಯನ್ನು ರೂಪಿಸಬೇಕಾಗುತ್ತದೆ.

    ರಾಜ್ಯ ಸರ್ಕಾರ ತನ್ನ ಆಡಳಿತದಲ್ಲಿ ಕನ್ನಡವನ್ನು ಬಳಸುವುದಕ್ಕೆ ಬದ್ಧವಾಗಿದೆ. ಮಂತ್ರಿಮಂಡಲದ ನಿರ್ಣಯಗಳು, ಮಂತ್ರಿಗಳ ಟಿಪ್ಪಣಿಗಳು, ವಿಧಾನ ಸಭೆಯ ಮುಂದೆ ಬರುವ ವಿಧೇಯಕಗಳು ಕನ್ನಡದಲ್ಲೇ ಇದ್ದುಬಿಟ್ಟರೆ ಕನ್ನಡ ಅನಿವಾರ್ಯವಾಗಿ ಆಡಳಿತದಲ್ಲಿ ನೆಲೆಗೊಳ್ಳುವಂತಾಗುತ್ತದೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ಕನ್ನಡವನ್ನು ಉಳಿಸಿ ಬೆಳೆಸುವುದು ಚುನಾಯಿತ ಸರ್ಕಾರದ ಕರ್ತವ್ಯ ಎನ್ನುವುದನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಆದರೆ, ಇದು ಸಾಧ್ಯವಾಗಬೇಕಾದರೆ ಕನ್ನಡಿಗರಾದ ತಮ್ಮೆಲ್ಲರ ಸಹಕಾರ ಅಗತ್ಯ. ಭಾಷೆ ಬೆಳೆಯಬೇಕಾದರೆ ಅದನ್ನು ಬಳಸಬೇಕಾಗುತ್ತದೆ. ಕನ್ನಡಿಗರೆಲ್ಲರೂ ದಿನನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುತ್ತೇವೆ ಎಂದು ಸಂಕಲ್ಪ ಮಾಡಿದರೆ ಕನ್ನಡದ ಸ್ಥಾನಮಾನ ಅಜರಾಮರವಾಗಿ ಉಳಿಯಲಿದೆ. ಆ ಸಂಕಲ್ಪವನ್ನು ತಾವು ಮಾಡುತ್ತೀರಿ ಎಂಬ ನಂಬಿಕೆ ಮತ್ತು ವಿಶ್ವಾಸ ನನ್ನಲ್ಲಿದೆ.

    ತಮ್ಮೆಲ್ಲರಿಗೂ ಮತ್ತೊಮ್ಮೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸುತ್ತೇನೆ.
    ಜೈ ಹಿಂದ್ ! ಜೈ ಕರ್ನಾಟಕ !!