Tag: ಆಕಾಶ

  • ಶುಕ್ರ ಗ್ರಹ ಈಗ ಪಳಪಳ ಹೊಳೆಯುತ್ತಾನೆ ಕಣ್ತುಂಬಿಕೊಳ್ಳಿ

    ಶುಕ್ರ ಗ್ರಹ ಈಗ ಪಳಪಳ ಹೊಳೆಯುತ್ತಾನೆ ಕಣ್ತುಂಬಿಕೊಳ್ಳಿ

    ಉಡುಪಿ: ಬಾನಲ್ಲಿ ಬೆಳ್ಳಿ ಚುಕ್ಕಿಗಳ ನಡುವೆ ಶುಕ್ರ ಗ್ರಹ (Venus) ಈಗ ಅತ್ಯಂತ ಸುಂದರವಾಗಿ ಗೋಚರಿಸಲಿದೆ. ಸುಮಾರು 19 ತಿಂಗಳಿಗೊಮ್ಮೆ ಸಂಜೆಯ ಪಶ್ಚಿಮ ಆಕಾಶದಲ್ಲಿ ವಿಜೃಂಭಿಸುವ ಶುಕ್ರ ಸುಮಾರು 43 ಡಿಗ್ರಿ ಎತ್ತರದಲ್ಲಿ ಹೊಳೆಯುತ್ತಿದೆ.

    ಜುಲೈ ತಿಂಗಳ ಅಂತ್ಯದವರೆಗೂ ಶುಕ್ರ ಹೊಳೆಯುತ್ತಾ ಆಗಸ್ಟ್ ಪ್ರಾರಂಭದಲ್ಲಿ ಕಣ್ಮರೆಯಾಗುತ್ತದೆ. ಆಗಸ್ಟ್ 8 ರಿಂದ ಆಗಸ್ಟ್ 19 ರವರೆಗೆ ಸೂರ್ಯನಿಗೆ (Sun) ನೇರ ಬಂದು ಕಾಣದಾದಾಗ ಆ ವಿದ್ಯಾಮಾನವನ್ನು ಶುಕ್ರಾಸ್ತ ಎನ್ನಲಾಗುತ್ತದೆ. ನಂತರ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಶುಕ್ರನ ಗೋಚರವಾಗಲಿದೆ. ಮೇ 30 ರಿಂದ ಭೂಮಿಗೆ ಸಮೀಪಿಸುತ್ತಿದ್ದಂತೆ ದಿನದಿಂದ ದಿನಕ್ಕೆ ದಿಗಂತದೆಡೆಗೆ ಕೆಳಗಿಳಿಯುತ್ತಾ, ಪ್ರಭೆ ಹೆಚ್ಚಿಸಿಕೊಳ್ಳುತ್ತಾ ಜುಲೈ 7 ರಂದು ಅತಿ ಹೆಚ್ಚಿನ ಪ್ರಭೆಯಲ್ಲಿ ಕಂಗೊಳಿಸುತ್ತದೆ.

    ಶುಕ್ರ ಈಗ ಭೂಮಿಯಿಂದ (Earth) ಸುಮಾರು 15 ಕೋಟಿ ಕಿ.ಮೀ ದೂರದಿಂದ ಆಗಸ್ಟ್ 8ರ ಹೊತ್ತಿಗೆ 4 ಕೋಟಿ ಕಿ.ಮೀ ಗೆ ಸಮೀಪಿಸುತ್ತದೆ. ಹೀಗೆ ಶುಕ್ರ ಗ್ರಹ ಕಾಣಲು ಪ್ರಮುಖ ಕಾರಣ ಬುಧ ಗ್ರಹದಂತೆ ಸೂರ್ಯ ಭೂಮಿಯ ದೂರಕ್ಕಿಂತ ಕಡಿಮೆ ದೂರದಲ್ಲಿ ಇರುವುದು. ಸೂರ್ಯನಿಂದ ಬುಧ ಸುಮಾರು 6 ಕೋಟಿ, ಶುಕ್ರ 11 ಕೋಟಿ ಕಿ.ಮೀ ದೂರ ಆದರೆ ಭೂಮಿ 15 ಕೋಟಿ ಕಿ.ಮೀ ದೂರವಿದೆ. ಹೀಗಾಗಿ ಸೌರವ್ಯೂಹದಲ್ಲಿ ಭೂಮಿಗಿಂತ ಒಳಗಿರುವ ಈ ಎರಡು ಗ್ರಹಗಳು ರಾತ್ರಿ ಇಡೀ ಕಾಣುವುದಿಲ್ಲ. ಕಾಣುವುದೇ ಪಶ್ಚಿಮ ಆಕಾಶದಲ್ಲಿ ಸಂಜೆ ಹಾಗೂ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಮಾತ್ರ. ಇದನ್ನೂ ಓದಿ: ಬ್ರಿಜ್‌ ಭೂಷಣ್‌ ತೆಗೆದು ಆ ಸ್ಥಾನಕ್ಕೆ ಮಹಿಳೆ ನೇಮಿಸಿ – ಅಮಿತ್‌ ಶಾಗೆ ಕುಸ್ತಿಪಟುಗಳ ಬೇಡಿಕೆ

    ಸಂಜೆ ಆಕಾಶದಲ್ಲಿ ಸೂರ್ಯಾಸ್ತದ ನಂತರ ಕೆಲ ಗಂಟೆ, ಹೆಚ್ಚೆಂದರೆ ದಿಗಂತದಿಂದ 47 ಡಿಗ್ರಿ ಎತ್ತರದಲ್ಲಿ ಹಾಗೂ ಬುಧ 27 ಡಿಗ್ರಿ ಎತ್ತರದಲ್ಲಿ ಮತ್ತೆ ಕೆಲ ಸಮಯ ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮೊದಲು ಕಾಣಿಸುತ್ತದೆ. ಸೂರ್ಯನಿಂದ ಶುಕ್ರ ಸುಮಾರು 11 ಕೋಟಿ ಕಿ.ಮೀ ಒಂದೇ ದೂರದಲ್ಲಿದೆಯಾದರೂ ಭೂಮಿಯಿಂದ ಯಾವಾಗಲೂ ಒಂದೇ ದೂರದಲ್ಲಿ ಇರುವುದಿಲ್ಲ. 19 ತಿಂಗಳಿಗೊಮ್ಮೆ ಅತಿ ಸಮೀಪ ದೂರ 4 ಕೋಟಿ ಕಿ.ಮೀ (ಆಗಸ್ಟ್ 13 ಇನ್ಫೀರಿಯರ್ ಕಂಜಂಕ್ಷನ್) ನಂತರ ಜನವರಿ 2025 ರಲ್ಲಿ ಅತ್ಯಂತ ದೂರ 26 ಕೋಟಿ ಕಿ.ಮೀ (ಸುಪೀರಿಯರ್ ಕಂಜಂಕ್ಷನ್) ಇರುತ್ತದೆ ಎಂದು ಹಿರಿಯ ಭೌತಶಾಸ್ತ್ರ ಉಪನ್ಯಾಸಕ ಎಪಿ ಭಟ್ ಮಾಹಿತಿ ನೀಡಿದ್ದಾರೆ.

    ಗ್ರಹಗಳಲ್ಲಿ ಬರಿಗಣ್ಣಿಗೆ ಶುಕ್ರನೇ ಚೆಂದ. ಸುಮಾರು 95% ಇಂಗಾಲದ ಆಕ್ಸೈಡುಗಳ ವಾತಾವರಣ ಸ್ವಲ್ಪ ರಂಜಕದ ಡೈಆಕ್ಸೈಡುಗಳಿಂದ ಅತಿ ಹೆಚ್ಚು ಸೂರ್ಯನ ಬೆಳಕನ್ನು ಪ್ರತಿ ಫಲಿಸುವುದರಿಂದ ಶುಕ್ರ ಪಳಪಳ ಹೊಳೆಯುತ್ತಾನೆ. ದೂರದರ್ಶಕದಲ್ಲೀಗ ಶುಕ್ರ ಗ್ರಹ ಚೌತಿಯ ಚಂದ್ರನಂತೆ ಕಾಣುತ್ತದೆ. ಜುಲೈ ಕೊನೆಯ ವಾರ ಬಿದಿಗೆ ಚಂದ್ರನಿಗಿಂತ ಕ್ಷೀಣವಾಗುತ್ತಾನೆ ಎಂದು ಡಾ. ಎಪಿ ಭಟ್ ವಿವರಿಸಿದ್ದಾರೆ. ಇದನ್ನೂ ಓದಿ: ಗೋ ಹತ್ಯೆ ನಿಷೇಧ ಬಗ್ಗೆ ಸರ್ಕಾರದಿಂದ ಸಮೀಕ್ಷೆ: ಸತೀಶ್ ಜಾರಕಿಹೊಳಿ

  • ಭೂಮಿಯಿಂದ 30 ಕಿ.ಮೀ ಎತ್ತರದಲ್ಲಿ ಹಾರಾಡಿತು ರಾಷ್ಟ್ರಧ್ವಜ

    ಭೂಮಿಯಿಂದ 30 ಕಿ.ಮೀ ಎತ್ತರದಲ್ಲಿ ಹಾರಾಡಿತು ರಾಷ್ಟ್ರಧ್ವಜ

    ನವದೆಹಲಿ: ಭಾರತ ತನ್ನ ಸ್ವಾತಂತ್ರ‍್ಯದ 75 ವರ್ಷಗಳನ್ನು ಪೂರೈಸಿದ್ದು, ಎಲ್ಲೆಡೆ ರಾಷ್ಟ್ರಧ್ವಜವನ್ನು ಹಾರಿಸಿ ಸಂಭ್ರಮಿಸಲಾಗುತ್ತಿದೆ. ಈ ಕ್ಷಣಕ್ಕೆ ಇನ್ನೂ ಹೆಚ್ಚಿನ ವಿಶೇಷತೆ ನೀಡಲು ಭೂಮಿಯಿಂದ ಸುಮಾರು 30 ಕಿ.ಮೀ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಲಾಗಿದೆ.

    ಸ್ಪೇಸ್ ಕಿಡ್ಜ್ ಇಂಡಿಯಾವು ಭೂಮಿಯಿಂದ ಸುಮಾರು 30 ಕಿ.ಮೀ ಎತ್ತರದಲ್ಲಿ ಭಾರತದ ಧ್ವಜವನ್ನು ಹಾರಿಸಿದೆ. ಧ್ವಜವನ್ನು ಭೂಮಿಯಿಂದ ಸುಮಾರು 1,06,000 ಅಡಿ ಎತ್ತರಕ್ಕೆ ಬಲೂನ್‌ನಲ್ಲಿ ಕಳುಹಿಸಲಾಗಿದೆ. ಇದನ್ನೂ ಓದಿ: ದೇಶ ವಿಭಜನೆ ಒಪ್ಪಿಕೊಳ್ಳದಿದ್ರೆ ಭಾರತ ಛಿದ್ರವಾಗ್ತಿತ್ತು- ಪಟೇಲ್ ಹೇಳಿಕೆ ಪುನರುಚ್ಚರಿಸಿದ ಸೋನಿಯಾ

    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಹಾಗೂ ಐತಿಹಾಸಿಕ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಹರ್ ಘರ್ ತಿರಂಗ ಅಭಿಯಾನದ ಭಾಗವಾಗಿ ಸ್ಪೇಸ್ ಕಿಡ್ಜ್ ಇಂಡಿಯಾ ಬಾನಿನಲ್ಲಿ ಬಾವುಟವನ್ನು ಹಾರಿಸಿದೆ.

    ಸ್ಪೇಸ್ ಕಿಡ್ಜ್ ಇಂಡಿಯಾ ಸಂಸ್ಥೆಯು ದೇಶಕ್ಕಾಗಿ ಯುವ ವಿಜ್ಞಾನಿಗಳನ್ನು ಸೃಷ್ಟಿಸುತ್ತದೆ ಹಾಗೂ ಪ್ರಪಂಚದಾದ್ಯಂತ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಈ ಸಂಸ್ಥೆ ಇತ್ತೀಚೆಗೆ ಉಪಗ್ರಹವನ್ನು ಲೋ ಅರ್ಥ್ ಆರ್ಬಿಟ್‌ಗೆ ಉಡಾಯಿಸಿತು. 75ನೇ ಸ್ವಾತಂತ್ರ್ಯವನ್ನು ಗುರುತಿಸಲು ಭಾರತದಾದ್ಯಂತ 750 ವಿದ್ಯಾರ್ಥಿನಿಯರು ಸೇರಿ ಆಜಾದಿಸ್ಯಾಟ್ ಅನ್ನು ಅಭಿವೃದ್ಧಿಪಡಿಸಿದ್ದರು. ಆದರೆ ಉಪಗ್ರಹವನ್ನು ಉಡಾವಣೆ ಮಾಡಲು ಬಳಸಿದ್ದ ಎಸ್‌ಎಸ್‌ಎಲ್‌ವಿ ರಾಕೆಟ್‌ನ ಮಿಷನ್ ವಿಫಲವಾಗಿತ್ತು. ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ 5 ಹೊಸ ಯೋಜನೆಗಳನ್ನು ಘೋಷಣೆ ಮಾಡಿದ ಸಿಎಂ

    Live Tv

  • ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ಚಿತ್ರ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ

    ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ಚಿತ್ರ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ

    ವಾಷಿಂಗ್ಟನ್: 13 ದಶಕೋಟಿ ವರ್ಷಗಳಷ್ಟು ಹಿಂದೆ ಜಗತ್ತು ಹೇಗಿತ್ತು? ಅಂದಿನ ಆಗಸದಲ್ಲಿ ಕಾಣುತ್ತಿದ್ದ ಶತಕೋಟಿ ತಾರೆಗಳು, ನಕ್ಷತ್ರಪುಂಜಗಳು ಯಾವ ಬಣ್ಣದಲ್ಲಿ ಕಂಗೊಳಿಸುತ್ತಿದ್ದವು? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ವೈಟ್‌ಹೌಸ್‌ನಲ್ಲಿ, 13 ದಶಕೋಟಿ ವರ್ಷಗಳಷ್ಟು ಹಿಂದಿನ ಬಾಹ್ಯಾಕಾಶ ಲೋಕವನ್ನು ತೆರೆದಿಡಲಾಗಿದೆ.

    ಜೇಮ್ಸ್ ವೆಬ್ ಟೆಲಿಸ್ಕೋಪ್ ಅತ್ಯದ್ಭುತ ಚಿತ್ರಗಳನ್ನು ಸೆರೆಹಿಡಿದಿದ್ದು, ಇದು ಪ್ರಪಂಚ ಹುಟ್ಟಿದ ಸಮಯ ಆಕಾಶ ಹೇಗೆ ಕಾಣಿಸುತ್ತಿತ್ತು ಎಂಬುದನ್ನು ಬಹಿರಂಗಪಡಿಸಿದೆ. ನೀಲಿ, ಕಿತ್ತಳೆ ಹಾಗೂ ಬಿಳಿ ಬಣ್ಣದಲ್ಲಿರುವ ಗ್ಯಾಲಾಕ್ಸಿಗಳು ಗಮನ ಸೆಳೆದಿವೆ. ಇನ್ನೂ ವಿಶೇಷವಾಗಿ ಈ ಟೆಲಿಸ್ಕೋಪ್ ತೆಗೆದಿರುವ ಮೊದಲ ಚಿತ್ರ ಇದಾಗಿದೆ. ಇದನ್ನೂ ಓದಿ: ಶಾರ್ಟ್‌ಕಟ್‌ ರಾಜಕೀಯದ ಮೂಲಕ ಮತಗಳನ್ನು ಸೆಳೆಯುವುದು ತುಂಬಾ ಸುಲಭ: ಪ್ರಧಾನಿ ಮೋದಿ

    2021ರ ಡಿಸೆಂಬರ್‌ನಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು ಅಮೆರಿಕ ಅಂತರಿಕ್ಷಕ್ಕೆ ಕಳುಹಿಸಿತ್ತು. ವಿಶ್ವದ ಸೃಷ್ಟಿಗೆ ಕಾರಣವಾದ ಬಿಗ್‌ಬ್ಯಾಂಗ್ (ಮಹಾಸ್ಫೋಟ) ಸಂಭವಿಸಿದ 800 ವರ್ಷಗಳ ಬಳಿಕದ ಚಿತ್ರಣ ಇದು ಎಂದು ತಜ್ಞರು ಅಂದಾಜು ಮಾಡಿದ್ದು, ಇದೊಂದು ಐತಿಹಾಸಿಕ ದಿನ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಣ್ಣಿಸಿದ್ದಾರೆ. ಇದನ್ನೂ ಓದಿ: ಬುಮ್ರಾ ಬೌಲಿಂಗ್‌ ದಾಳಿಗೆ ತತ್ತರಿಸಿದ ಆಂಗ್ಲರು – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

    ಇನ್ನು ಮುಂದೆ ಸೃಷ್ಟಿಗೆ ಕಾರಣವಾದ, ವಿಸ್ಮಯ ವಿಚಾರಗಳು ಹಾಗೂ ಅತ್ಯಗತ್ಯ ಮಾಹಿತಿಗಳನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಫೋಟೋಗಳನ್ನು ಸೆರೆಹಿಡಿಯುವ ಮೂಲಕ ಒದಗಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಅಕ್ಟೋಬರ್ 31ಕ್ಕೆ ‘ಬ್ಲೂ ಮೂನ್’ ವಿದ್ಯಮಾನ- ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ

    ಅಕ್ಟೋಬರ್ 31ಕ್ಕೆ ‘ಬ್ಲೂ ಮೂನ್’ ವಿದ್ಯಮಾನ- ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ

    ಬೆಂಗಳೂರು: ಅಕ್ಟೋಬರ್ 31ಕ್ಕೆ ನಭೋಮಂಡದಲ್ಲಿ ಬ್ಲೂ ಮೂನ್ ವಿದ್ಯಮಾನ ಜರುಗಲಿದೆ. ಬ್ಲೂ ಮೂನ್ ಅಂದ್ರೆ ಚಂದಿರ ನೀಲಿ ಬಣ್ಣಕ್ಕೆ ಬದಲಾಗಲ್ಲ. ಚಂದ್ರನ ಮೂಲ ಬಣ್ಣವಾಗಿರುವ ನೀಲಿ ಬಣ್ಣದಲ್ಲೇ ಚಂದ್ರನಿರಲಿದ್ದಾನೆ.

    ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆಗಳು ಬರುವ ಪ್ರಾಕೃತಿಕ ವಿದ್ಯಮಾನವನ್ನೇ ಬ್ಲೂಮೂನ್ ಅಂತಾ ಕರೆಯುತ್ತಾರೆ. ಪ್ರತಿ 2 ಅಥವಾ 3 ವರ್ಷಕ್ಕೊಮ್ಮೆ ಒಂದೇ ತಿಂಗಳಲ್ಲಿ 2 ಬಾರಿ ಹುಣ್ಣಿಮೆ ಸಂಭವಿಸುತ್ತದೆ. ಈ ರೀತಿ ಒಂದೇ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಸಂಭವಿಸುವ ವಿಶೇಷತೆಯನ್ನ ಬ್ಲೂಮೂನ್ ಎಂದು ಹೇಳಲಾಗುತ್ತದೆ. ಖಗೋಳ ಶಾಸ್ತ್ರದ ಪ್ರಕಾರ 29.531 ದಿನ ಅಥವಾ 29 ದಿನ, 12 ಗಂಟೆ 44 ನಿಮಿಷ, 38 ಸೆಕೆಂಡುಗಳಿಗೆ ಒಂದು ಚಂದ್ರಮಾನ ತಿಂಗಳು ಅಂತಾ ಪರಿಗಣಿಸಲಾಗುತ್ತದೆ. ಹೀಗಾಗಿ 2-3 ವರ್ಷಗಳಿಗೆ ಒಮ್ಮೆ 31 ದಿನ ಇರುವ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಸಂಭವಿಸುತ್ತದೆ.

    ಈ ತಿಂಗಳು ಅಕ್ಟೋಬರ್ 1ರಂದು ಹುಣ್ಣಿಮೆ ಘಟಿಸಿತ್ತು. ಈಗ ಇದೇ ತಿಂಗಳು ಅಕ್ಟೋಬರ್ 31ಕ್ಕೆ ಇನ್ನೊಂದು ಹುಣ್ಣಿಮೆ ಘಟಿಸುತ್ತಿದೆ. 2018ರಲ್ಲಿ ಕೂಡಾ ಬ್ಲೂಮೂನ್ ಸಂಭವಿಸಿತ್ತು. ಈಗ 2020 ಅಕ್ಟೋಬರ್ ನಲ್ಲಿ ಸಂಭವಿಸುತ್ತಿದೆ. ಮುಂದಿನ ಬ್ಲೂಮೂನ್ 2023ರ ಆಗಸ್ಟ್ 31ಕ್ಕೆ ಸಂಭವಿಸಲಿದೆ ಅನ್ನೋದು ವಿಜ್ಞಾನಿಗಳ ಮಾತಾಗಿದೆ. ಹಾಗಾಗಿ ಇದೊಂದು ಸಾಮಾನ್ಯ ವಿದ್ಯಮಾನ. ಸೌರವ್ಯೂಹದ ಸಾಮಾನ್ಯ ಪ್ರಕ್ರಿಯೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

    ಚಂದ್ರ ಮತ್ತು ಸೂರ್ಯ ಗ್ರಹಣ ಕೂಡಾ ವಿಜ್ಞಾನಿಗಳ ಪ್ರಕಾರ, ಸಾಮಾನ್ಯ ಪ್ರಕ್ರಿಯೆ. ಆದರೆ ಗ್ರಹಣ ಕಾಲ ಮತ್ತು ನಂತರದಲ್ಲಿ ಆಗುವ ಅನಾಹುತಗಳನ್ನ ಮಾನವ ಸಂಕುಲ ಅನುಭವಿಸಿಕೊಂಡು ಬರುತ್ತಿದೆ. ಸೂರ್ಯ ಗ್ರಹಣವಾದ್ರೆ, ರವಿ ಅಗ್ನಿಕಾರಕ ಆಗಿರೋದರಿಂದ ಸಾಲು ಸಾಲು ಅಗ್ನಿ ಅವಘಡಗಳು ಸಂಭವಿಸುತ್ತವೆ. ಚಂದ್ರಗ್ರಹಣವಾದ್ರೆ ಶಶಿ ಜಲಕಾರಕನಾಗಿರೋದ್ರಿಂದ ಜಲಪ್ರಳಯಕ್ಕೆ ಆಗುತ್ತೆ. ಈಗ ಅಕ್ಟೋಬರ್ 31ರಂದು ನಡೆಯಲಿರುವ ವಿಸ್ಮಯ ಚಂದ್ರನಿಗೆ ಸಂಬಂಧಿಸಿರೋದ್ರಿಂದ ಜಲಾಸುರ ಮತ್ತೆ ಆರ್ಭಟಿಸಲಿದ್ದಾನೆ ಎಂಬುವುದು ಜ್ಯೋತಿಷಿಗಳ ಮಾತು.

  • ಆಗಸದಲ್ಲಿ ಮಿನುಗುವ ಹವಳವಾಗಲಿದ್ದಾನೆ ಮಂಗಳ – ಇಂದು ಬಾನಲ್ಲಿ ನಡೆಯುತ್ತೆ ವಿಸ್ಮಯ

    ಆಗಸದಲ್ಲಿ ಮಿನುಗುವ ಹವಳವಾಗಲಿದ್ದಾನೆ ಮಂಗಳ – ಇಂದು ಬಾನಲ್ಲಿ ನಡೆಯುತ್ತೆ ವಿಸ್ಮಯ

    – ಖಗೋಳ ಶಾಸ್ತ್ರಜ್ಞ ಎ.ಪಿ ಭಟ್ ಮಾಹಿತಿ

    ಉಡುಪಿ: ಸಪ್ಟೆಂಬರ್ ತಿಂಗಳು ಪೂರ್ತಿ ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ ಹವಳ ಹೊಳೆಯಲಿದೆ. ಕಡು ಕೆಂಬಣ್ಣದಲ್ಲಿ ಮಂಗಳ ಗ್ರಹ ಬಹಳ ಆಕರ್ಷಕವಾಗಿ ಗೋಚರವಾಗುತ್ತಿದೆ. ಭೂಮಿ ಮೇಲೆ ನಿಂತರೆ ಆಗಸದಲ್ಲಿ ನಡೆಯುವ ಬದಲಾವಣೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಎಲ್ಲರಿಗೂ ಇದೆ.

    ಅಕ್ಟೊಬರ್ 13ರಂದು ಮಂಗಳ ಗ್ರಹ, ಭೂಮಿಗೆ ಸಮೀಪ ಬರುತ್ತಿದೆ. ಸುಮಾರು 2 ವರ್ಷ 2 ತಿಂಗಳಿಗೊಮ್ಮೆ ಭೂಮಿಗೆ ಮಂಗಳ ಹತ್ತಿರ ಬರುವ ಈ ವಿದ್ಯಮಾನವನ್ನು ಮಾರ್ಸ್ ಒಪೋಸಿಶನ್ ಎನ್ನುತ್ತಾರೆ. ಹೀಗೆ ಹತ್ತಿರ ಬಂದಾಗ ಮಂಗಳ ಬಹಳ ದೊಡ್ಡದಾಗಿ ಕಂಡು ಇಡೀ ರಾತ್ರಿ ಆಗಸದಲ್ಲಿ ಹವಳದಂತೆ ಕಾಣಿಸಲಿದೆ.

    ಸುಮಾರು 24 ಕೋಟಿ ಕಿ.ಮೀ ದೂರದಲ್ಲಿ ದೀರ್ಘ ವ್ರತ್ತಾಕಾರದಲ್ಲಿ ಸೂರ್ಯನಿಗೆ ಸುತ್ತು ಬರಲು ಈ ಮಂಗಳ ಗ್ರಹಕ್ಕೆ 687 ದಿನಗಳು ಬೇಕು. ಭೂಮಿಯೂ ಸುಮಾರು 15 ಕೋಟಿ ಕಿ.ಮೀ ದೂರದಲ್ಲಿ ಸೂರ್ಯನ ಸುತ್ತುವುದರಿಂದ ಈ ಎರಡೂ ಗ್ರಹಗಳು 2 ವರ್ಷ 50 ದಿನಗಳಲ್ಲಿ ಸಮಿಪಿಸಿ ಮತ್ತೆ ದೂರ ಸರಿಯುತ್ತವೆ ಎಂದು ಖಗೋಳ ಶಾಸ್ತ್ರಜ್ಞ ಎ.ಪಿ ಭಟ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಅಕ್ಟೋಬರ್ 13ರಂದು ಭೂಮಿಗೆ 6.2 ಕೋಟಿ ಕಿಲೋ ಮೀಟರ್ ದೂರದಲ್ಲಿ, ಹತ್ತಿರ ಬಂದು ಸುಂದರವಾಗಿ ದೊಡ್ಡದಾಗಿ ಕಾಣುತ್ತದೆ. 2021ರ ನವೆಂಬರ್ ಹೊತ್ತಿಗೆ ಭೂಮಿಯಿಂದ 39 ಕೋಟಿ ಕೀಮೀ ದೂರದಲ್ಲಿರುತ್ತಾ ಚಿಕ್ಕದಾಗಿ ಗೋಚರಿಸುತ್ತದೆ. ಮಳೆ ಕಡಿಮೆಯಾಗಿದೆ. ಮೋಡ ಸರಿದು ಆಗಸ ಸ್ವಚ್ಛವಾಗಿರುವ ಈ ಸಂದರ್ಭದಲ್ಲಿ ಈ ವಿದ್ಯಾಮಾನವನ್ನು ಕಣ್ತುಂಬಿಕೊಳ್ಳಿ ಎಂದು ಭಟ್ ಸಲಹೆ ನೀಡಿದ್ದಾರೆ.

    ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ, ಶುಕ್ರ ಗ್ರಹದ ಹೊಳಪನ್ನೂ ಮಂಗಳ ಮೀರಿಸಿದೆ. ಈ ತಿಂಗಳು ಪೂರ್ತಿ ಹೀಗೆ ಕಾಣುತ್ತದೆ. ನಾಡಿದ್ದು ಅಕ್ಟೋಬರ್ ಒಂದರಂದು ಮಂಗಳ ಹುಣ್ಣಿಮೆ ಚಂದ್ರನ ಪಕ್ಕದಲ್ಲಿರುತ್ತದೆ. ಇವುಗಳ ಜೊತೆಗೆ ನೆತ್ತಿಯ ಮೇಲೆ ಗುರು, ಶನಿ ಗ್ರಹಗಳನ್ನೂ ಬರೀ ಕಣ್ಣಿನಿಂದಲೇ ಗುರುತಿಸಬಹುದು. ರಾಜ್ಯದಲ್ಲಿ ಮಳೆ ಸುರಿಯುತ್ತಿರುವುದರಿಂದ ಮೋಡವಿಲ್ಲದ ಕಡೆ ಈ ಕೌತುಕ ಕಣ್ತುಂಬಿಕೊಳ್ಳಬಹುದು.

  • ಬಾನಂಗಳದಲ್ಲಿ ಶತಮಾನದ ಚಂದ್ರಗ್ರಹಣ- ಭಾರತ ಸೇರಿ ವಿಶ್ವದ ಹಲವೆಡೆ ಗೋಚರ

    ಬಾನಂಗಳದಲ್ಲಿ ಶತಮಾನದ ಚಂದ್ರಗ್ರಹಣ- ಭಾರತ ಸೇರಿ ವಿಶ್ವದ ಹಲವೆಡೆ ಗೋಚರ

    -ರಾಜ್ಯದ ಹಲವೆಡೆ ಮೋಡದ ಅಡ್ಡಿ

    ಬೆಂಗಳೂರು: ಅಪರೂಪದ ಅರ್ಧ ರಕ್ತ ಚಂದ್ರಗ್ರಹಣಕ್ಕೆ ಇಡೀ ಭೂಮಿ-ಆಕಾಶ ಸಾಕ್ಷಿಯಾಯ್ತು. 149 ವರ್ಷಗಳಲ್ಲೇ ಮೊದಲ ಬಾರಿಗೆ ವಿಶೇಷ ಚಂದ್ರಗ್ರಹಣ ನಡೆದಿದೆ.

    ನಭೋ ಮಂಡಲದ ಈ ಅಪರೂಪದ ಕೌತುಕವನ್ನು ಭಾರತ ಸೇರಿದಂತೆ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾದ ಜನ ವೀಕ್ಷಿಸಿದರು. ಆದರೆ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೋಡದಿಂದಾಗಿ ಗ್ರಹಣ ಕಾಣಿಸಲೇ ಇಲ್ಲ. ಇನ್ನುಳಿದಂತೆ ಕಲಬುರಗಿ, ಮೈಸೂರು, ದಾವಣಗೆರೆ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗ್ರಹಣ ಗೋಚರಿಸಿತು. ಎರಡು ದಿನಗಳ ಮಟ್ಟಿಗೆ ನಭೋ ಮಂಡಲದಲ್ಲಿ ಗ್ರಹಣದ ಪರಿಣಾಮ ಇರಲಿದೆ.

    ಭಾರತದಂತೆ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಗ್ರಹಣ ಗೋಚರಿಸಿತು. ಬರ್ಲಿನ್, ಚಿಕಾಗೋ, ಲಂಡನ್, ಮಲೇಷಿಯಾ ಸೇರಿದಂತೆ ಹಲವೆಡೆ ಅಪರೂಪದ ಗ್ರಹಣವನ್ನು ಜನ ಕಣ್ತುಂಬಿಕೊಂಡರು. ಗ್ರಹಣ ಹಿನ್ನೆಲೆಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಮಾಡಲಾಯಿತು. ರಾಯಚೂರು ಮತ್ತು ದಾವಣಗೆರೆಯ ರಾಘವೇಂದ್ರ ಸ್ವಾಮಿ ದೇಗುಲದಲ್ಲಿ ಹೋಮ-ಹವನ ನೆರವೇರಿಸಲಾಯ್ತು. ಇತ್ತ ಗ್ರಹಣ ಮುಗಿಯುತ್ತಿದ್ದಂತೆ ಚಿಕ್ಕಮಗಳೂರಿನ ಅನ್ನಪೂರ್ಣೇಶ್ವರಿಗೆ ಶುದ್ಧೋದಕ ಅಭಿಷೇಕ ಮಾಡಲಾಯಿತು. ಎಲ್ಲ ದೇಗುಲಗಳಲ್ಲಿ ಬೆಳಗ್ಗೆಯಿಂದಲೇ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತಿದೆ.

  • ಜುಲೈನಲ್ಲಿ ಡಬಲ್ ಗ್ರಹಣ

    ಜುಲೈನಲ್ಲಿ ಡಬಲ್ ಗ್ರಹಣ

    ಬೆಂಗಳೂರು: ಬಾಹ್ಯಾಕಾಶದ ವಿದ್ಯಮಾನ ಜನರಲ್ಲಿ ಆತಂಕವನ್ನ ಹೆಚ್ಚು ಮಾಡಿದೆ ಅನ್ನೋದರಲ್ಲಿ ಅನುಮಾನವೇ ಇಲ್ಲ. ಭೂಮಿ ಮೇಲೆ ನೆಡೆಯುತ್ತಿರೋ ಎಲ್ಲಾ ಅವಘಡಗಳಿಗೂ ನಭೋಮಂಡಲದಲ್ಲಿ ಜರುಗಲಿರೋ ಗ್ರಹಣ ಪ್ರಕ್ರಿಯೆಗೂ ಸಂಬಂಧ ಇದೆ ಅನ್ನೋದೇ ಭೀತಿಯನ್ನ ಹೆಚ್ಚು ಮಾಡಿದೆ. ಜುಲೈನಲ್ಲಿ ಒಂದು ಸೂರ್ಯ ಗ್ರಹಣ, ಮತ್ತೊಂದು ಚಂದ್ರಗ್ರಹಣ ಸಂಭವಿಸಲಿದೆ. 15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳಿಗೆ ನಭೋಮಂಡಲ ಸಾಕ್ಷಿಯಾಗಲಿದೆ.

    ಸೂರ್ಯ ಗ್ರಹಣ:
    ಜುಲೈ 2ರಂದು ಸೂರ್ಯಗ್ರಹಣ ಸಂಭವಿಸಲಿದೆ. ತಿಂಗಳ ಪ್ರಾರಂಭದಲ್ಲೇ ಸಂಭವಿಸುವ ಈ ಸೂರ್ಯ ಗ್ರಹಣವು ಒಟ್ಟು 4 ನಿಮಿಷ 33 ಸೆಕೆಂಡ್‍ಗಳ ಕಾಲ ಸಂಭವಿಸಲಿದೆ. ಕೊನೆಯದಾಗಿ 2017ರ ಆಗಸ್ಟ್ ನಲ್ಲಿ 2 ನಿಮಿಷ 40 ಸೆಕೆಂಡ್‍ಗಳ ಕಾಲ ಖಗ್ರಾಸ ಸೂರ್ಯ ಗ್ರಹಣ ಆಗಿತ್ತು. ಈ ವರ್ಷದ ಏಕೈಕ ಪೂರ್ಣ ಸೂರ್ಯ ಗ್ರಹಣ ಇದಾಗಿದೆ.

    ದಕ್ಷಿಣ ಪೆಸಿಫಿಕ್ ಸಾಗರ, ಚಿಲಿ ಮತ್ತು ಅರ್ಜೆಂಟಿನಾದಲ್ಲಿ ಸಂಪೂರ್ಣವಾಗಿ ಸೂರ್ಯಗ್ರಹಣವು ಗೋಚರವಾಗಲಿದೆ. ದಕ್ಷಿಣ ಅಮೆರಿಕ ಸೇರಿದಂತೆ ಇತರ ಭಾಗಗಳಲ್ಲಿ ಭಾಗಶಃ ಗ್ರಹಣವು ಗೋಚರವಾಗುವ ಸಾಧ್ಯತೆಯಿದೆ. ಪೂರ್ಣ ಸೂರ್ಯಗ್ರಹಣ ಭಾರತೀಯ ಕಾಲಮಾನ ರಾತ್ರಿ 10.25ಕ್ಕೆ ಸಂಭವಿಸಲಿದೆ. ಗ್ರಹಣದ ಮೊದಲ ಒಹಿನೋ ದ್ವೀಪದಲ್ಲಿ ಸ್ಥಳೀಯ ಕಾಲಮಾನ 10.24ಕ್ಕೆ ಆರಂಭವಾಗುತ್ತದೆ. ನಂತರ ಆಗ್ನೇಯದ ಕಡೆಗೆ ಸಾಗಲಿದೆ.

    ದಕ್ಷಿಣ ಅಮೆರಿಕಾದ ಒಹಿನೋ ದ್ವೀಪದಲ್ಲಿ ಈ ಗ್ರಹಣ ಮೊದಲು ಗೋಚರವಾಗಲಿದೆ. ಖಗೋಳ ಶಾಸ್ತ್ರಜ್ಞರ ಪ್ರಕಾರ ಇಲ್ಲಿ ಸುಮಾರು 2 ನಿಮಿಷ 53 ಸೆಕೆಂಡ ಕಾಣಿಸಿಕೊಳ್ಳಲಿದೆ ಎಂದು ಅಂದಾಜಿಸಿದ್ದಾರೆ. ಆದಾದ ಬಳಿಕ ಗಲಪೊಗಾಸ್ ದ್ವೀಪದಲ್ಲಿ ಗ್ರಹಣ ಗೋಚರ ಕೊನೆಯಾಗಲಿದೆ. ಇಲ್ಲಿ ಸುಮಾರು 4 ನಿಮಿಷ 23 ಸೆಕೆಂಡ್ ಸಮಯದಷ್ಟು ಗ್ರಹಣ ಕಾಣಿಸಿಕೊಳ್ಳಲಿದೆ. ಈ ಮಧ್ಯೆ ಚಿಲಿ, ಅರ್ಜೆಂಟಿನಾದಂಥಾ ದೇಶಗಳಿಗೂ ಅಲ್ಪ ಸ್ವಲ್ಪ ದರ್ಶನ ಸೂರ್ಯಗ್ರಹಣ ನೀಡಲಿದೆ.

    ಚಂದ್ರ ಗ್ರಹಣ:
    ಜುಲೈ 17ರಂದು ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿಯ ಚಂದ್ರಗ್ರಹಣ ಬಹುತೇಕ ಎಲ್ಲ ರಾಷ್ಟ್ರಗಳಲ್ಲಿಯೂ ಗೋಚರವಾಗಲಿದೆ. ಭಾರತದಲ್ಲಿಯೂ ಜುಲೈ 17 ಅಂದ್ರೆ 16ರ ಮಧ್ಯ ರಾತ್ರಿ ಸುಮಾರು 1.51 ನಿಮಿಷದ ಆಸುಪಾಸಿನಲ್ಲಿ ಗ್ರಹಣ ಗೋಚರಿಸಲಿದೆ.

    ಏಷ್ಯಾ, ಯುರೋಪ್ ರಾಷ್ಟ್ರಗಳಲ್ಲಿ ಪೂರ್ಣ ಪ್ರಮಾಣದ ಚಂದ್ರಗ್ರಹಣ ಗೋಚರವಾಗಲಿದೆ. ಉಳಿದಂತೆ ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ/ಈಶಾನ್ಯ ಅಮೆರಿಕಾ, ಪೆಸಿಫಿಕ್, ಅಂಟ್ಲಾಟಿಕ್, ಭಾರತದ ಸಾಗರಗಳಲ್ಲಿಯೂ ಚಂದ್ರ ಗ್ರಹಣ ಕಾಣಬಹುದಾಗಿದೆ. ಬೆಂಗಳೂರಲ್ಲಿ ಜುಲೈ 16ರ ಮಧ್ಯರಾತ್ರಿ (ಜುಲೈ 17) 1.51ಕ್ಕೆ ಆರಂಭಗೊಂಡು ಬೆಳಗಿನ ಜಾವ 5 ಗಂಟೆ 47 ನಿಮಿಷಕ್ಕೆ ಕೊನೆಯಾಗಲಿದೆ. ಒಂದು ವೇಳೆ ಆಕಾಶವು ಮೋಡಗಳಿಂದ ಕೂಡಿದ್ರೆ ಚಂದ್ರಗ್ರಹಣ ದರ್ಶನ ಸಿಗಲಾರದು.

  • ಆಕಾಶದಲ್ಲಿ ಮೂಡಿದ ಮೋಡಗಳ ಅಲೆ: ಫೋಟೋ ವೈರಲ್

    ಆಕಾಶದಲ್ಲಿ ಮೂಡಿದ ಮೋಡಗಳ ಅಲೆ: ಫೋಟೋ ವೈರಲ್

    ವಾಷಿಂಗ್‍ಟನ್: ಆಕಾಶದಲ್ಲಿ ಮೋಡಗಳ ಅಲೆ ಮೂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಜನರು ಆಶ್ಚರ್ಯಪಡುತ್ತಿದ್ದಾರೆ.

    ಮೋಡಗಳ ಫೋಟೋವನ್ನು ಮಂಗಳವಾರ ಸಂಜೆ ವರ್ಜೀನಿಯಾದ ಲೇಕ್ ಸ್ಮಿತ್ ಪರ್ವತದಲ್ಲಿ ಕ್ಲಿಕ್ಕಿಸಲಾಗಿದೆ. ಈ ಅಲೆಗಳ ಮೋಡವನ್ನು ಕೆಲ್ವಿನ್ ಹೆಲ್ಮ್‍ಹೋಲ್ಟ್ಜ್ ವೇವ್ ಎಂದು ಕರೆಯಲಾಗುತ್ತದೆ. ಇದರ ಫೋಟೋವನ್ನು ಆ್ಯಮಿ ಕ್ರಿಸ್ಟೈ ಹಂಟರ್ ಸೆರೆ ಹಿಡಿದಿದ್ದಾರೆ.

    ಆ್ಯಮಿ ಕ್ರಿಸ್ಟೈ ಈ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಾಕಿ ಅದಕ್ಕೆ, ಇಂದು ಸಂಜೆ ಸ್ಮಿತ್ ಮೌಂಟೇನ್‍ನಲ್ಲಿ ಅತ್ಯಂತ ತಂಪಾದ ಮೋಡಗಳು ಪರ್ವತದ ಮೇಲ್ಭಾಗದಲ್ಲಿ ಉರುಳುತ್ತಿದೆ. ಇದಕ್ಕೆ ಕೆಲ್ವಿನ್ ಹೆಲ್ಮ್‍ಹೋಲ್ಟ್ಜ್ ಮೋಡ ಎಂದು ಕರೆಯುತ್ತಾರೆ. ನಾನು ಈ ಫೋಟೋವನ್ನು ಹವಾಮಾನ ತಜ್ಞರಿಗೆ ಕಳುಹಿಸಿದ್ದೇನೆ. ಆಗ ಅವರು ಇದು ಅಪರೂಪದ ಮೋಡ ಹಾಗೂ ಇದರ ಬಗ್ಗೆ ವ್ಯಾಖ್ಯಾನ ಮಾಡಲು ಆಗುವುದಿಲ್ಲ ಎಂದು ಹೇಳಿದರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಾಕುತ್ತಿದ್ದಂತೆ 600ಕ್ಕೂ ಹೆಚ್ಚು ಶೇರ್ ಪಡೆದುಕೊಂಡಿದೆ. ಅಲ್ಲದೆ 144ಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. ಈ ಫೋಟೋ ನೋಡಿ ಕೆಲವರು ‘ಇದು ತುಂಬಾ ಸುಂದರವಾಗಿದೆ’ ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ‘ವಾವ್ ಇದು ಪೇಟಿಂಗ್ ರೀತಿ ಕಾಣಿಸುತ್ತಿದೆ’ ಎಂದು ಬಣ್ಣಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮುಂಗಾರಿಗೆ ಮುನ್ನ ಬಾನಲ್ಲಿ ರಂಗಿನೋಕುಳಿ- ಉಡುಪಿಯ ಪಶ್ಚಿಮ ಆಗಸದ ಚಿತ್ತಾರ ಬಲು ಆಕರ್ಷಕ

    ಮುಂಗಾರಿಗೆ ಮುನ್ನ ಬಾನಲ್ಲಿ ರಂಗಿನೋಕುಳಿ- ಉಡುಪಿಯ ಪಶ್ಚಿಮ ಆಗಸದ ಚಿತ್ತಾರ ಬಲು ಆಕರ್ಷಕ

    ಉಡುಪಿ: ಮುಂಗಾರು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕರಾವಳಿಯಲ್ಲಿ ಮಳೆ ಬರುವಂತಾಗಿದ್ದು, ಕಾರ್ಮೋಡ ಬಾನಲ್ಲಿ ಚಿತ್ತಾರ ಮೂಡಿಸಿದ್ದು ರಂಗಿನೋಕುಳಿ ಚೆಲ್ಲಿದೆ.

    ಕೇರಳ ರಾಜ್ಯಕ್ಕೆ ಮುಂಗಾರು ಕಾಲಿಟ್ಟಿದ್ದು, ಕರ್ನಾಟಕ ಕರಾವಳಿ ಮೂಲಕ ನಮ್ಮ ರಾಜ್ಯದಲ್ಲಿ ಮಳೆಯಾಗಲು ಕ್ಷಣಗಣನೆ ಆರಂಭವಾಗಿದೆ. ಉಡುಪಿಯಲ್ಲಿ ಭಾನುವಾರ ಸಂಜೆಯ ಬಾನು ಎಲ್ಲರನ್ನೂ ಆಕರ್ಷಿಸಿದೆ. ನೆರಳು ಬೆಳಕಿನಾಟದ ಚಂದ ಜನರ ಮನ ತಣಿಸಿದೆ.

    ಸಂಜೆ ಸೂರ್ಯ ಸಮುದ್ರಕ್ಕೆ ಇಳಿಯುತ್ತಿದ್ದಂತೆ ಬಾನಲ್ಲಿ ಹಳದಿ, ಕೆಂಪು, ನೀಲಿ, ಕಪ್ಪು, ಬಿಳಿ ಹೀಗೆ ನಾನಾ ಬಣ್ಣಗಳು ತುಂಬಿಕೊಂಡಿದೆ. ಛಾಯಾಗ್ರಾಹಕರಂತೂ ವಾರಾಂತ್ಯ ಆಗಸವನ್ನು ಸಂಪೂರ್ಣ ಆವರಿಸಿಕೊಂಡು ಬಿಟ್ಟಿದ್ದು ಕ್ಯಾಮೆರಾದಲ್ಲಿ ಮೋಡದ ವಿವಿಧ ಆಕಾರವನ್ನು ಸೆರೆ ಮಾಡಿಕೊಂಡಿದ್ದಾರೆ.

    ಪಶ್ಚಿಮ ಘಟ್ಟದಲ್ಲಿ ಕೆಲಕಾಲ ಧಾರಾಕಾರ ಮಳೆ ಸುರಿದಿದ್ದು ತಂಗಾಳಿ ಸಮುದ್ರದತ್ತ ಬೀಸಿ ವಾತಾಚರಣವನ್ನು ಕೂಲ್ ಮಾಡಿದೆ. ಇಂದು ರಾತ್ರಿ ಅಥವಾ ನಾಳೆ ಮುಂಗಾರಿನ ಮೊದಲ ಮಳೆ ಬೀಳುವ ಸಾಧ್ಯತೆಯಿದೆ.