Tag: ಆಕರ್ಷ್‌ ಭಟ್‌

  • ಸಿಹಿಸುದ್ದಿ ಹಂಚಿಕೊಂಡ `ರಾಧಾ ಕಲ್ಯಾಣ’ ಸೀರಿಯಲ್ ನಟಿ ರಾಧಿಕಾ ರಾವ್

    ಸಿಹಿಸುದ್ದಿ ಹಂಚಿಕೊಂಡ `ರಾಧಾ ಕಲ್ಯಾಣ’ ಸೀರಿಯಲ್ ನಟಿ ರಾಧಿಕಾ ರಾವ್

    `ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ’, `ರಾಧಾ ಕಲ್ಯಾಣ’ (Radha Kalyana)  ಸೀರಿಯಲ್‌ಗಳ ಮೂಲಕ ಮನೆ ಮಾತಾದ ಕರಾವಳಿ ನಟಿ ರಾಧಿಕಾ ರಾವ್ (Radhika Rao) ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: `ನಾಟು ನಾಟು’ ಸಾಂಗ್ ಆಸ್ಕರ್ ಗೆಲ್ಲೋಕೆ ನಾನೇ ಕಾರಣ: ಅಜಯ್ ದೇವಗನ್

    ತುಳು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ರಾಧಿಕಾ ರಾವ್ ಅವರು 2020ರಲ್ಲಿ ಆಕರ್ಷ್ ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ರಾಧಿಕಾ ಮತ್ತು ಆಕರ್ಷ್ ಭಟ್, ಪ್ರೀತಿಸಲು ಆರಂಭಿಸಿದ್ದರು. ಇಬ್ಬರ ಮನೆಯಲ್ಲೂ ಲವ್ ವಿಚಾರ ತಿಳಿಸಿ ಕುಟುಂಬದವರನ್ನು ಒಪ್ಪಿಸಿ ಈಗ ಮದುವೆ ಆಗಿದ್ದಾರೆ.

     

    View this post on Instagram

     

    A post shared by Radhika Rao (@radhikarao_official)

    ಈಗ ಮೂರು ವರ್ಷಗಳ ನಂತರ ರಾಧಿಕಾ – ಆಕರ್ಷ್ ದಂಪತಿ ಸಿಹಿಸುದ್ದಿ ನೀಡಿದ್ದಾರೆ. ನಟಿ ರಾಧಿಕಾ ಈಗ ಚೊಚ್ಚಲ ಮಗುವಿನ (First Child) ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನಟಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಾಯ್ತನದ ಖುಷಿಯಲ್ಲಿರುವ ನಟಿಗೆ ಸೆಲೆಬ್ರಿಟಿ ಸ್ನೇಹಿತರು, ಅಭಿಮಾನಿಗಳು ಶುಭಹಾರೈಸಿದ್ದಾರೆ.

    ರಾಧಿಕಾ ಪತಿ ಆಕರ್ಷ್ ಭಟ್ ಇಂಟರ್‌ನ್ಯಾಷನಲ್ ಮ್ಯಾಜೀಷಿಯನ್ ಮತ್ತು ಮೈಂಡ್ ರೀಡರ್ ಆಗಿದ್ದು, ಅವರು ಕೂಡ ಮಂಗಳೂರಿನವರಾಗಿದ್ದಾರೆ. ಸೃಜನ್ ಲೋಕೇಶ್ (Srujan Lokesh) ನಿರ್ಮಾಣದ `ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ ಸೀರಿಯಲ್‌ನಲ್ಲಿ ರಾಧಿಕಾ ನಾಯಕಿಯಾಗಿ ನಟಿಸಿದ್ದರು. `ಎಲ್ಲಿದ್ದೇ ಇಲ್ಲಿ ತನಕ’ ಚಿತ್ರದಲ್ಲಿ ನಟಿಸಿದ್ದಾರೆ.