Tag: ಆಂಬುಲೆನ್ಸ್

  • ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ: ಆಂಬುಲೆನ್ಸ್ ನಲ್ಲಿ ಪರದಾಡಿದ ಗರ್ಭಿಣಿ

    ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ: ಆಂಬುಲೆನ್ಸ್ ನಲ್ಲಿ ಪರದಾಡಿದ ಗರ್ಭಿಣಿ

    ಬಾಗಲಕೋಟೆ: ಆಂಬುಲೆನ್ಸ್ ನಲ್ಲಿ ಹೆರಿಗೆ ನೋವಿನಿಂದ ನರಳುತ್ತ, ಚಿಕಿತ್ಸೆಗಾಗಿ ಪರದಾಡುತ್ತಿದ್ದ ಮಹಿಳೆಗೆ ಕೊನೆಗೂ ಸೂಸೂತ್ರವಾಗಿ ಬಾಗಲಕೋಟೆ ನಗರದ ಕುಮಾರೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ.

    ಹುನಗುಂದ ತಾಲೂಕಿನ ಚಿಕ್ಕಕೊಡಗಲಿ ಗ್ರಾಮದ 22 ವರ್ಷದ ಚೈತ್ರ ಪವಾರ್ ಬೆಳ್ಳಂಬೆಳಿಗ್ಗೆ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಆದರೆ ಆಂಬುಲೆನ್ಸ್ ಮೂಲಕ ಗರ್ಭಿಣಿ ಚೈತ್ರರನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ಕರೆ ತಂದಾಗ ರಾಜ್ಯಾದ್ಯಂತ ವೈದ್ಯರ ಮುಷ್ಕರ ಇರುವ ಕಾರಣ ಆಸ್ಪತ್ರೆ ಸಿಬ್ಬಂದಿಗಳು ಚಿಕಿತ್ಸೆ ನೀಡಿರಲಿಲ್ಲ.

    ಈ ವಿಚಾರವಾಗಿ ಚೈತ್ರ ಮನೆಯವರು ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರ ಮಧ್ಯೆ ವಾಗ್ವಾದ ಕೂಡ ನಡೆಯಿತು. ಕೊನೆಗೆ ಸಮಯ ಪ್ರಜ್ಞೆ ಮೆರೆದ ಆಂಬ್ಯುಲೆನ್ಸ್ ಚಾಲಕ ಗರ್ಭಿಣಿ ಚೈತ್ರರನ್ನು ನೇರವಾಗಿ ಬಾಗಲಕೋಟೆ ಕುಮಾರೇಶ್ವರ ಖಾಸಗಿ ಆಸ್ಪತ್ರೆಗೆ ತಂದಾಗ, ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ ಪರಿಣಾಮ ಚೈತ್ರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ವೈದ್ಯರು ಚಿಕಿತ್ಸೆ ನೀಡಿ ನನ್ನ ಹಾಗೂ ಮಗುವಿನ ಪ್ರಾಣ ಉಳಿಸಿದರು ಎಂದ ಭಾವಕಾರಾದ ಚೈತ್ರ ಧನ್ಯವಾದ ತಿಳಿಸಿದರು. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯ ಡಾ. ಪಾಟೀಲ್ ಹೇಳಿದರು.

     

  • ಈಜಿಪುರದಿಂದ ಮಡಿಕೇರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಚಾಲಕ ವಶ

    ಈಜಿಪುರದಿಂದ ಮಡಿಕೇರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಚಾಲಕ ವಶ

    ಬೆಂಗಳೂರು: ಕಂಠಪೂರ್ತಿ ಕುಡಿದು ಸೈರನ್ ಹಾಕೊಂಡು ತಮಗೆ ತೋಚಿದಂತೆ ಓಡಾಡೋ ಆಂಬುಲೆನ್ಸ್ ಚಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದೇ ವಾರದಲ್ಲಿ ರಾತ್ರಿ ಡ್ರಿಂಕ್ ಅಂಡ್ ಡ್ರೈವ್ ತಡೆ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕ ಸಿಕ್ಕಿಬಿದ್ದಿದ್ದಾನೆ.

    ಕೆ.ಆರ್. ಪುರಂನ ಸತ್ಯಸಾಯಿ ಅರ್ಥೋಪೆಡಿಕ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‍ಗೆ ಸೇರಿದ ಆಂಬುಲೆನ್ಸ್ ಚಾಲಕ ಮಹೇಶ್ ಎಂದು ಗುರುತಿಸಲಾಗಿದ್ದು, ಈತ ಈಜಿಪುರದಿಂದ ರೋಗಿಯನ್ನು ಆಂಬುಲೆನ್ಸ್ ನಲ್ಲಿ ಮಡಿಕೇರಿಗೆ ಕರೆದೊಯ್ಯುತ್ತಿದ್ದ. ಈ ಸಂದರ್ಭದಲ್ಲಿ ಬೆಂಗಳೂರಿಗೆ ಬರುವಾಗ ಬಿಡದಿ ಬಳಿ ಕುಡಿದು ಸೈರನ್ ಬಳಸಿಕೊಂಡು ಚಾಲನೆ ಮಾಡುತ್ತಿದ್ದನು.

    ಹಲಸೂರು ಗೇಟ್ ಮಾರ್ಗದಲ್ಲಿ ಇನ್ಸ್‍ಪೆಕ್ಟರ್ ಮಹಮ್ಮದ್ ಆಂಬುಲೆನ್ಸ್ ಅನ್ನು ತಡೆದು ತಪಾಸಣೆ ನಡೆಸಿದಾಗ ಚಾಲಕನ ಕುಡಿದಿರುವುದು ತಿಳಿದಿದೆ. ನಂತರ ಪೊಲೀಸರು ಆಂಬುಲೆನ್ಸ್ ಅನ್ನು ವಶಕ್ಕೆ ಪಡೆದು ಚಾಲಕ ಮಹೇಶ್‍ಗೆ ದಂಡ ಹಾಕಿದ್ದಾರೆ.

     

     

     

  • ಬಾಲಕಿಯನ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಕೆಟ್ಟು ನಿಂತ ಆಂಬುಲೆನ್ಸ್

    ಬಾಲಕಿಯನ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಕೆಟ್ಟು ನಿಂತ ಆಂಬುಲೆನ್ಸ್

    ಮಂಡ್ಯ: ತೀವ್ರ ಜ್ವರದಿಂದ ಬಳಲುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಆಂಬುಲೆನ್ಸ್ ಕೆಟ್ಟುನಿಂತ ಪ್ರಕರಣ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಹೆಬ್ಬೆರೆಳು ಗ್ರಾಮದ ಬೋರಲಿಂಗಯ್ಯ ಮತ್ತು ಕುಮಾರಿ ದಂಪತಿಯ ಪುತ್ರಿ ನಾಲ್ಕು ವರ್ಷದ ಲಾವಣ್ಯ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಕಳೆದೆರೆಡು ದಿನದಿಂದ ಜ್ವರ ಬರುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ವಾಸಿಯಾಗಿರಲಿಲ್ಲ. ಮಧ್ಯರಾತ್ರಿ ಜ್ವರ ಹೆಚ್ಚಾಗಿದ್ದರಿಂದ ಹೆದರಿದ ಪೋಷಕರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

    ತಕ್ಷಣ ಸ್ಥಳಕ್ಕೆ ಬಂದ ಆಂಬುಲೆನ್ಸ್ ಬಾಲಕಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಟಿದೆ. ಆದರೆ ಆಸ್ಪತ್ರೆ ಇನ್ನೂ ನಾಲ್ಕು ಕಿಲೋಮೀಟರ್‍ನಷ್ಟು ದೂರವಿರುವಾಗಲೇ ಆಂಬುಲೆನ್ಸ್ ಕೆಟ್ಟುನಿಂತ ಪರಿಣಾಮ ಪೋಷಕರು ಆಟೋದಲ್ಲಿ ಬಾಲಕಿಯನ್ನು ಕರೆದುಕೊಂಡು ಬಂದು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮಂಡ್ಯದಲ್ಲಿ ಸರ್ಕಾರಿ ಆಂಬುಲೆನ್ಸ್ ಗಳು ಕೆಟ್ಟು ನಿಲ್ಲುತ್ತಿರುವ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು, ಕಳೆದ ಹತ್ತು ದಿನಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಸೆಪ್ಟೆಂಬರ್ 17 ರಂದು ರೋಗಿಯೊಬ್ಬರನ್ನು ಮಿಮ್ಸ್ ಆಸ್ಪತ್ರೆಯಿಂದ ಮೈಸೂರಿಗೆ ಸಾಗಿಸುತ್ತಿದ್ದ ಆಂಬುಲೆನ್ಸ್ ಇಂಡವಾಳು ಗ್ರಾಮದ ಬಳಿ ಕೆಟ್ಟು ನಿಂತಿತ್ತು. ಆಂಬುಲೆನ್ಸ್ ಗಳು ಪದೇ ಪದೇ ಕೆಟ್ಟು ನಿಲ್ಲುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಈ ಗ್ರಾಮದಲ್ಲಿ ರೋಗಿಗಳನ್ನು ಕೊಂಡೊಯ್ಯೋದಕ್ಕೆ ಆಂಬುಲೆನ್ಸ್ ಗಿಂತ ಮೊದ್ಲು ಟ್ರ್ಯಾಕ್ಟರ್ ಬರ್ಬೇಕು!

  • ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಾನಮತ್ತ ಆಂಬುಲೆನ್ಸ್ ಚಾಲಕ

    ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಾನಮತ್ತ ಆಂಬುಲೆನ್ಸ್ ಚಾಲಕ

    ಬೆಂಗಳೂರು: ಕುಡಿದು ಆಂಬುಲೆನ್ಸ್ ಚಲಾಯಿಸುತ್ತಿದ್ದ ಚಾಲಕನೊಬ್ಬ ಸಂಚಾರಿ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಹಲಸೂರು ಗೇಟ್ ಬಳಿ ನಡೆದಿದೆ.

    ಹಲಸೂರು ಗೇಟ್ ಸಂಚಾರಿ ಪೊಲೀಸರು ಶುಕ್ರವಾರ ರಾತ್ರಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಿನೇಶ್ ಎಂಬವನು ಕಂಠಪೂರ್ತಿ ಕುಡಿದು ಆಂಬುಲೆನ್ಸ್ ಚಲಾಯಿಸಿಕೊಂಡು ಬಂದಿದ್ದಾನೆ. ಪೊಲೀಸರು ಆಂಬುಲೆನ್ಸ್ ಡ್ರೈವರ್‍ನನ್ನು ತಪಾಸಣೆ ನಡೆಸಿದಾಗ ಶೇಕಡ 150 ರಷ್ಟು ಡ್ರಿಂಕ್ಸ್ ಮಾಡಿರೋದು ತಿಳಿದುಬಂದಿದೆ.

    ಹಲಸೂರು ಗೇಟ್ ಸಂಚಾರಿ ಪೊಲೀಸರು ಚಾಲಕ ದಿನೇಶ್‍ಗೆ ನೋಟಿಸ್ ಜಾರಿ ಮಾಡಿ ಆಂಬುಲೆನ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಕಳೆದೊಂದು ವಾರದಲ್ಲಿ ಕುಡಿದು ಆಂಬುಲೆನ್ಸ್ ಚಲಾಯಿಸುತ್ತಿದ್ದ ಡ್ರೈವರ್‍ಗಳು ಹೆಚ್ಚಾಗಿ ಸಿಕ್ಕಿ ಬೀಳ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕಂಠಪೂರ್ತಿ ಕುಡಿದು ಅಂಬುಲೆನ್ಸ್ ಚಾಲನೆ ಮಾಡಿದ್ದ ಚಾಲಕ ಪೊಲೀಸರ ವಶಕ್ಕೆ

    ಕಂಠಪೂರ್ತಿ ಕುಡಿದು ಅಂಬುಲೆನ್ಸ್ ಚಾಲನೆ ಮಾಡಿದ್ದ ಚಾಲಕ ಪೊಲೀಸರ ವಶಕ್ಕೆ

    ಬೆಂಗಳೂರು: ಕಂಠಪೂರ್ತಿ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಅಂಬುಲೆನ್ಸ್ ಚಾಲಕನನ್ನು ನಗರದ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    47 ವರ್ಷದ ರುದ್ರೇಶಪ್ಪ ಆಂಬುಲೆನ್ಸ್ ಚಾಲಕ. ರುದ್ರೇಶಪ್ಪ ಸುಂಕದಕಟ್ಟೆಯಿಂದ ಕೆಎಚ್‍ಬಿ ಜಂಕ್ಷನ್ ನಲ್ಲಿರುವ 108 ಅಂಬುಲೆನ್ಸ್ ಕಚೇರಿಗೆ ಆಗಮಿಸುತ್ತಿದ್ದನು. ಈ ವೇಳೆ ಪೊಲೀಸ್ ತಪಾಸಣೆ ಸಂದರ್ಭದಲ್ಲಿ ರುದ್ರೇಶಪ್ಪ ಮದ್ಯಪಾನ ಮಾಡಿರೋದು ಗೊತ್ತಾಗಿದೆ.

    ಟ್ರಾಫಿಕ್ ಪೊಲೀಸರು 108 ಅಂಬುಲೆನ್ಸ್ ವಾಹನವನ್ನು ಜಪ್ತಿ ಮಾಡಿ, ಚಾಲಕ ರುದ್ರೇಶಪ್ಪನ ವಿರುದ್ಧ ಡ್ರಂಕ್ ಆಂಡ್ ಡ್ರೈವ್ ಕೇಸ್ ದಾಖಲಿಸಿದ್ದಾರೆ.

  • ಸರ್ಕಾರಿ ಆಂಬುಲೆನ್ಸ್ ನಲ್ಲಿ ಮನೆ ಸಾಮಾಗ್ರಿ ಸಾಗಿಸಿದ ವೈದ್ಯ!

    ಸರ್ಕಾರಿ ಆಂಬುಲೆನ್ಸ್ ನಲ್ಲಿ ಮನೆ ಸಾಮಾಗ್ರಿ ಸಾಗಿಸಿದ ವೈದ್ಯ!

    ವಿಜಯಪುರ: ಸರ್ಕಾರಿ ಆಂಬುಲೆನ್ಸ್ ನಲ್ಲಿ ವೈದ್ಯ ತನ್ನ ಮನೆ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಸಾರ್ಜಜನಿಕರ ಕೈಗೆ ಸಿಕ್ಕಿ ಬಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರವಿ ಕಟ್ಟಿಮನಿ ಎಂಬಾತ ವಿಜಯಪುರದಿಂದ ಮಂಗಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ನಲ್ಲಿ ತನ್ನ ಮನೆಯ ಸಾಗ್ರಿಗಳನ್ನು ಕೊಂಡೊಯ್ಯುತ್ತಿದ್ದ. ಈ ವೇಳೆ ವಿಜಯಪುರದ ಹೊರವಲಯದಲ್ಲಿ ಸಾರ್ವಜನಿಕರ ಕೈಗೆ ವೈದ್ಯ ಮತ್ತು ಆಂಬುಲೆನ್ಸ್ ಚಾಲಕ ಸಿಕ್ಕಿ ಬಿದ್ದಿದ್ದಾರೆ.

    ಆಂಬುಲೆನ್ಸ್ ನಲ್ಲಿ ಮನೆಯ ಸಾಮಗ್ರಿಗಳನ್ನು ನೋಡಿ ಜನರು ವೈದ್ಯನಿಗೆ ಛೀಮಾರಿ ಹಾಕಿದರು.

    https://youtu.be/eVyBwDKejJI

  • ಆಂಬುಲೆನ್ಸ್ ನಲ್ಲೇ ಮಗುವಿನ ಜನನ- ವೈದ್ಯರು ಕೈ ಕೊಟ್ರೂ ಕೈ ಹಿಡಿದ ಆಂಬುಲೆನ್ಸ್ ಸಿಬ್ಬಂದಿಗೆ ಬಾಣಂತಿಯಿಂದ ಧನ್ಯವಾದ

    ಆಂಬುಲೆನ್ಸ್ ನಲ್ಲೇ ಮಗುವಿನ ಜನನ- ವೈದ್ಯರು ಕೈ ಕೊಟ್ರೂ ಕೈ ಹಿಡಿದ ಆಂಬುಲೆನ್ಸ್ ಸಿಬ್ಬಂದಿಗೆ ಬಾಣಂತಿಯಿಂದ ಧನ್ಯವಾದ

    ಚಿಕ್ಕಬಳ್ಳಾಪುರ: ಮಹಿಳೆಯೊಬ್ಬರು ಆಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನಡೆದಿದೆ.

    ಸಿದ್ದೇಪಲ್ಲಿ ಗ್ರಾಮದ ವೆಂಕಟರತ್ನಮ್ಮ ಎಂಬವರನ್ನು ಚಿಂತಾಮಣಿಯಿಂದ ಕೋಲಾರ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆಯೇ ಹೆರಿಗೆಯಾಗಿದೆ. ಮೊದಲು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದ ವೆಂಕಟರತ್ನಮ್ಮರಿಗೆ ಇಲ್ಲಿ ಸಹಜ ಹೆರಿಗೆಯಾಗೋದು ಕಷ್ಟ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚನೆ ನೀಡಿದ್ದರು. ಹೀಗಾಗಿ ಆಂಬುಲೆನ್ಸ್ ಮೂಲಕ ಕೋಲಾರ ಜಿಲ್ಲಾ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಹೆರಿಗೆ ನೋವು ಜಾಸ್ತಿಯಾಗಿ ವೆಂಕಟರತ್ನಮ್ಮರಿಗೆ ಸಹಜವಾಗಿಯೇ ಹೆರಿಗೆಯಾಗಿದ್ದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದು ಮತ್ತೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ ಸಹಜ ಹೆರಿಗೆ ಕಷ್ಟ ಅಂತ ನೆಪ ಹೇಳಿ ಕೋಲಾರ ಆಸ್ಪತ್ರೆಗೆ ಸಾಗಹಾಕಿದ್ದ ವೈದ್ಯರು ಹಾಗೂ ಶುಶ್ರೂಕಿಯರನ್ನ ವೆಂಕಟರತ್ನಮ್ಮ ಸಂಬಂಧಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮತ್ತೊಂದೆಡೆ ವೈದ್ಯರು ಕೈ ಕೊಟ್ರೂ ಹೆರಿಗೆಗೆ ಸಹಕರಿಸಿ ಸಹಜ ಹೆರಿಗೆ ಮಾಡಿಸಿದ ಆಂಬ್ಯುಲೆನ್ಸ್ ಸಿಬ್ಬಂದಿಗೆ ವೆಂಕಟರತ್ನಮ್ಮ ಸಂಬಂಧಿಕರು ಧನ್ಯವಾದಗಳನ್ನ ಅರ್ಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಆಂಬುಲೆನ್ಸ್ ಗೆ ಕಾದು ಸುಸ್ತಾಗಿ ಆಟೋದಲ್ಲೇ ಚಾಲಕನ ಶವ ಸಾಗಿಸಿದ್ರು- ತುಮಕೂರಲ್ಲಿ ಮನಕಲಕುವ ಘಟನೆ

    ಆಂಬುಲೆನ್ಸ್ ಗೆ ಕಾದು ಸುಸ್ತಾಗಿ ಆಟೋದಲ್ಲೇ ಚಾಲಕನ ಶವ ಸಾಗಿಸಿದ್ರು- ತುಮಕೂರಲ್ಲಿ ಮನಕಲಕುವ ಘಟನೆ

    ತುಮಕೂರು: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಶವ ಸಾಗಾಟ ಮಾಡಲು ವಾಹನ ಇಲ್ಲದ ಪರಿಣಾಮ ಆಟೋ ಚಾಲಕನ ಮೃತ ದೇಹವನ್ನು ಆಟೋದಲ್ಲೇ ಸಾಗಿಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

    ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಟೋ ಚಾಲಕ ಶಿವಕುಮಾರ್ ಎಂಬವರು ಹೃದಯಾಘಾತದಿಂದ ತನ್ನ ಆಟೋದಲ್ಲೇ ಮೃತಪಟ್ಟಿದ್ದಾರೆ. ಶಿವಕುಮಾರ ಮೃತಪಟ್ಟಿದ್ದನ್ನು ಖಾತ್ರಿ ಪಡಿಸಿಕೊಂಡ ಇತರ ಆಟೋ ಚಾಲಕರು ಶವವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ವಾಹನ ಹಳುಹಿಸುವಂತೆ 108 ವಾಹನಕ್ಕೆ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ತಿಳಿಸಿದ್ದಾರೆ.

    ಸುಮಾರು 3 ಗಂಟೆ ಕಾದರೂ ಕೂಡಾ ಯಾವುದೇ ವಾಹನ ಬಂದಿಲ್ಲ. ಪರಿಣಾಮ ವಿಧಿಯಿಲ್ಲದೆ ಕುಳಿತ ಸ್ಥಿತಿಯಲ್ಲೆ ಆಟೋದಲ್ಲಿ ಮೃತ ದೇಹವನ್ನು ಇರಿಸಿಕೊಂಡು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಆದ್ರೆ ಈ ಆರೋಪವನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ವೀರಭದ್ರಯ್ಯ ತಳ್ಳಿ ಹಾಕಿದ್ದಾರೆ. ಶವ ಸಾಗಿಸಲು ವಾಹನ ಕಳುಹಿಸಲಾಗಿತ್ತು. ಆದರೆ ಮೃತರ ಸಂಬಂಧಿಗಳು ಆತುರದಿಂದ ಆಟೋದಲ್ಲೆ ಶವ ಸಾಗಿಸಿದ್ದಾರೆ ಎಂದು ಹೇಳಿದ್ದಾರೆ.

     

  • ಆಂಬುಲೆನ್ಸ್ ಸಿಗದೆ 20 ಕಿ.ಮೀ ನಡೆದ ಗರ್ಭಿಣಿ – ರಸ್ತೆಯಲ್ಲೇ ಹೆರಿಗೆ, ಮಗು ಕೆಳಗೆ ಬಿದ್ದು ಸಾವು

    ಆಂಬುಲೆನ್ಸ್ ಸಿಗದೆ 20 ಕಿ.ಮೀ ನಡೆದ ಗರ್ಭಿಣಿ – ರಸ್ತೆಯಲ್ಲೇ ಹೆರಿಗೆ, ಮಗು ಕೆಳಗೆ ಬಿದ್ದು ಸಾವು

    ಭೋಪಾಲ್: ಆಂಬುಲೆನ್ಸ್ ಲಭ್ಯವಿರದ ಹಿನ್ನೆಲೆಯಲ್ಲಿ ಗರ್ಭಿಣಿಯೊಬ್ಬರು 20 ಕಿಲೋಮೀಟರ್ ದೂರದ ಆಸ್ಪತ್ರೆಗೆ ನಡೆದುಕೊಂಡು ಹೋಗ್ತಿದ್ದ ವೇಳೆ ಪ್ರಸವ ವೇದನೆ ತಾಳದೇ ದಾರಿ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆ ಮಧ್ಯಪ್ರದೇಶದ ಕತ್ನಿ ಜಿಲ್ಲೆಯಲ್ಲಿ ನಡೆದಿದೆ.

    ಆದ್ರೆ ದುರಾದೃಷ್ವವೆಂಬಂತೆ ನವಜಾತ ಹೆಣ್ಣು ಮಗು ಸಾವನ್ನಪ್ಪಿದೆ. ಇಲ್ಲಿನ ಬರ್ಮಾನಿ ಗ್ರಾಮದ ನಿವಾಸಿ ಬೀನಾ ಅವರಿಗೆ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಆದ್ರೆ ಸಕಾಲಕ್ಕೆ ಆಂಬುಲೆನ್ಸ್ ಬರದ ಕಾರಣ 20 ಕಿ.ಮೀ ದೂರದಲ್ಲಿದ್ದ ಬಾರ್ಹಿ ಕಮ್ಯುನಿಟಿ ಹೆಲ್ತ್ ಸೆಂಟರ್‍ಗೆ ಗಂಡನ ಜೊತೆಯಲ್ಲಿ ನಡೆದುಕೊಂಡೇ ಹೋಗಲು ನಿರ್ಧರಿಸಿದ್ರು.

    ಕಮ್ಯುನಿಟಿ ಹೆಲ್ತ್ ಸೆಂಟರ್‍ಗೆ ಆಂಬುಲೆನ್ಸ್ ಗಾಗಿ ಕರೆ ಮಾಡಲಾಗಿತ್ತು. ಆದ್ರೆ ಆಂಬುಲೆನ್ಸ್ ಬರಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ಧಾರೆ.

    ಇದನ್ನೂ ಓದಿ:  ಗರ್ಭಿಣಿಯನ್ನ ಜೋಳಿಗೆಯಲ್ಲೇ 16 ಕಿ.ಮೀ ಹೊತ್ತೊಯ್ದರು!

    ಗರ್ಭೀಣಿ ಬೀನಾ ಬಾರ್ಹಿ ನಗರ ತಲುಪುತ್ತಿದ್ದಂತೆ ಪೊಲೀಸ್ ಠಾಣೆಯೊಂದರ ಬಳಿ ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದ್ರೆ ಮಗು ನೆಲದ ಮೇಲೆ ಬಿದ್ದ ಕಾರಣ ಅಲ್ಲೇ ಸಾವನ್ನಪ್ಪಿತು ಎಂದು ಕುಟುಂಬದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಆದರೂ ಮಗು ಅವಧಿಗೂ ಮುನ್ನ ಅಂದ್ರೆ 7 ತಿಂಗಳಿಗೆ ಜನಿಸಿರುವ ಕಾರಣ ಅದು ಬದುಕುಳಿಯುವ ಸಂಭವ ಇರಲಿಲ್ಲ ಎಂದು ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಅಶೋಕ್ ಅವಾಧಿಯಾ ಹೇಳಿದ್ದಾರೆ.

    ಆಂಬುಲೆನ್ಸ್ ಯಾಕೆ ಕಳಿಸಿರಲಿಲ್ಲ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ಬಾರ್ಹಿ ಕಮ್ಯುನಿಟಿ ಹಲ್ತ್ ಸೆಂಟರ್‍ನಲ್ಲಿ ಅಂಬುಲೆನ್ಸ್ ಲಭ್ಯವಿಲ್ಲ ಅಂದ್ರು. ಜನನಿ ಎಕ್ಸ್ ಪ್ರೆಸ್(ಗರ್ಭಿಣಿಯರಿಗಾಗಿ ಆಂಬುಲೆನ್ಸ್ ಸೇವೆ) ನಮ್ಮ ನಿಯಂತ್ರಣದಡಿ ಇಲ್ಲ. ಭೋಪಾಲ್ ಮೂಲಕ ಲಭ್ಯವಿರುತ್ತದೆ ಅಂದ್ರು. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಅಂತ ಅವರು ಹೇಳಿದ್ರು.

  • ಸಾವಿನ ದವಡೆಯಲ್ಲಿದ್ದರೂ ಸಿಗದ ಆಂಬುಲೆನ್ಸ್, ಮೃತಪಟ್ಟ ಕಾರ್ಮಿಕ

    ಸಾವಿನ ದವಡೆಯಲ್ಲಿದ್ದರೂ ಸಿಗದ ಆಂಬುಲೆನ್ಸ್, ಮೃತಪಟ್ಟ ಕಾರ್ಮಿಕ

    ಮೈಸೂರು: ಹೃದಯಾಘಾತಗೊಂಡ ಕಾರ್ಮಿಕರೊಬ್ಬರಿಗೆ ಆಂಬುಲೆನ್ಸ್ ಸಿಗದ ಕಾರಣ ಮಾರ್ಗಮಧ್ಯೆ ಮೃತ ಪಟ್ಟ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸಂಗರಶೆಟ್ಟಿ ಗ್ರಾಮದಲ್ಲಿ ನಡೆದಿದೆ.

    ಮೃತ ಪಟ್ಟ ಕಾರ್ಮಿಕ ಗಾಂಧಿ(55) ಆಂಧ್ರಪ್ರದೇಶದ ನಿವಾಸಿಯಾಗಿದ್ದು, ಮೈಸೂರಿಗೆ ತಂಬಾಕು ಕೃಷಿ ಕೆಲಸಕ್ಕಾಗಿ ಬಂದಿದ್ದರು. ಗ್ರಾಮದ ಚಂದ್ರು ಅವರ ಬಳಿ ತಂಬಾಕು ಎಲೆಗಳನ್ನು ಮುರಿದು ಕ್ಯೂರಿಂಗ್ ಮಾಡುವ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮುಂಜಾನೆ ಎಲೆಗಳನ್ನು ಮುರಿಯುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಚಂದ್ರು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಬೆಟ್ಟದಪುರದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.

    ಹೆಚ್ಚಿನ ಚಿಕಿತ್ಸೆಗಾಗಿ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚನೆ ನೀಡಿದ್ದು ತಕ್ಷಣವೇ ಚಂದ್ರು ಆಂಬುಲೆನ್ಸ್ ಸಿಬ್ಬಂದಿಗೆ ಸಂಪರ್ಕಿಸಿದ್ದಾರೆ. ಆಂಬುಲೆನ್ಸ್ ಸಿಗದ ಕಾರಣ ಚಂದ್ರು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಪಿರಿಯಾಪಟ್ಟಣಕ್ಕೆ ಬರುತ್ತಿದ್ದಾಗ ಪಟ್ಟಣದ ಕ್ರೀಡಾಂಗಣ ಬಳಿ ಮತ್ತೊಮ್ಮೆ ತೀವ್ರ ಹೃದಯಾಘಾತಗೊಂಡು ಕಾರ್ಮಿಕ ಮಾರ್ಗಮಧ್ಯೆ ಮೃತ ಪಟ್ಟಿದ್ದಾರೆ.

    ಈ ಘಟನೆ ಸಂಭವಿಸಿದ ನಂತರ ಪಿರಿಯಾಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.