Tag: ಆಂಬುಲೆನ್ಸ್

  • ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಧಾರವಾಡ: ಹೆರಿಗೆಗೆಂದು (Delivery) ಗರ್ಭಿಣಿಯನ್ನು (Pregnant) ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಂಬುಲೆನ್ಸ್‌ನಲ್ಲೇ (Ambulance) ಮಗುವಿಗೆ ಜನ್ಮ ನೀಡಿದ ಪ್ರಸಂಗ ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ.

    ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೆನಕುಂಠಿ ಗ್ರಾಮದ ಆಫ್ರೀನ್ ಅಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮವಿತ್ತ ತಾಯಿ. ಗುರುವಾರ ಆಫ್ರೀನ್‌ಗೆ ಹೆರಿಗೆ ನೋವು ಆರಂಭವಾಗಿತ್ತು. ತಕ್ಷಣವೇ ಕುಟುಂಬದವರು 108 ಅಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಅಂಬುಲೆನ್ಸ್ ಸಿಬ್ಬಂದಿ ಕುಂದಗೋಳ ತಾಲೂಕು ಆಸ್ಪತ್ರೆಗೆ ಆಕೆಯನ್ನು ಸಾಗಿಸುತ್ತಿದ್ದ ಸಂದರ್ಭ ಹೆರಿಗೆ ನೋವು ಜೋರಾಗಿದೆ. ಇದನ್ನೂ ಓದಿ: ಗ್ಯಾರಂಟಿ ಗೊಂದಲದ ನಡುವೆ ಕರೆಂಟ್ ಬಿಲ್ ಗೋಲ್‌ಮಾಲ್: ಜೆಸ್ಕಾಂಗೆ ಲಕ್ಷಾಂತರ ರೂಪಾಯಿ ನಷ್ಟ

    ತಕ್ಷಣವೇ ಎಚ್ಚೆತ್ತುಕೊಂಡ ಅಶೋಕ್ ಪೂಜಾರ, ಬಸವರಾಜ ರಾಠೋಡ್ ಎಂಬ ಸಿಬ್ಬಂದಿ ಅಂಬುಲೆನ್ಸ್‌ನಲ್ಲೇ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕರ್ತವ್ಯ ಲೋಪ ಎಸಗಿದ್ರೆ ವರ್ಗಾವಣೆ ಇಲ್ಲ ನೇರವಾಗಿ ಸಸ್ಪೆಂಡ್- ಅಧಿಕಾರಿಗಳಿಗೆ ವಾರ್ನಿಂಗ್

  • ಹಾಸಿಗೆ ಹಿಡಿದಿದ್ದ ವ್ಯಕ್ತಿ ಆಂಬುಲೆನ್ಸ್‌ನಲ್ಲಿ ಬಂದು ಮತ ಚಲಾವಣೆ

    ಹಾಸಿಗೆ ಹಿಡಿದಿದ್ದ ವ್ಯಕ್ತಿ ಆಂಬುಲೆನ್ಸ್‌ನಲ್ಲಿ ಬಂದು ಮತ ಚಲಾವಣೆ

    ತುಮಕೂರು: ಅಪಘಾತದಲ್ಲಿ (Accident) ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಂಬುಲೆನ್ಸ್‌ನಲ್ಲಿ (Ambulence) ಬಂದು ಮತದಾನ (Voting) ಮಾಡಿದ ಘಟನೆ ತುಮಕೂರು (Tumakuru) ಜಿಲ್ಲೆಯಲ್ಲಿ ನಡೆದಿದೆ.

    ಸಂಪಗಿರಾಮು ಮತ ಚಲಾಯಿಸಿದ ವ್ಯಕ್ತಿ. ಇವರಿಗೆ ಅಫಘಾತವಾಗಿ ಗಂಭೀರ ಗಾಯವಾಗಿದ್ದರ ಪರಿಣಾಮ ನಾಲ್ಕು ತಿಂಗಳಿನಿಂದ ಹಾಸಿಗೆಯಲ್ಲಿಯೇ ಮಲಗಿದ್ದರು. ಇದೀಗ ಪತ್ನಿ ಜೊತೆ ಆಂಬುಲೆನ್ಸ್‌ನಲ್ಲಿ ಬಂದು ತುಮಕೂರು ನಗರದ ರೈಲ್ವೇ ಸ್ಟೇಷನ್ ರಸ್ತೆಯ ಮತಗಟ್ಟೆ ಸಂಖ್ಯೆ 148ರಲ್ಲಿ ಮತದಾನ ಮಾಡಿದ್ದಾರೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

    ಚುನಾವಣಾ ಸಿಬ್ಬಂದಿಯ ಸಹಾಯದಿಂದ ಇವರು ತಮ್ಮ ಮತದಾನವನ್ನು ಮಾಡಿದ್ದಾರೆ. ಎಂತಹ ಸ್ಥಿತಿಯಲ್ಲಿದ್ದರೂ ಮತ ಚಲಾಯಿಸಬೇಕು ಎಂಬ ಇವರ ಮಾತು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಇದನ್ನೂ ಓದಿ: ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ವಿಜಯಪುರ ಗ್ರಾಮಸ್ಥರು

  • ಭಾರತ್‌ ಜೋಡೋ ಪಾದಯಾತ್ರೆ ನಡುವೆ ಸಿಲುಕಿದ್ದ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ರಾಹುಲ್‌ ಗಾಂಧಿ

    ಭಾರತ್‌ ಜೋಡೋ ಪಾದಯಾತ್ರೆ ನಡುವೆ ಸಿಲುಕಿದ್ದ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ರಾಹುಲ್‌ ಗಾಂಧಿ

    ಚಿತ್ರದುರ್ಗ: ಕೇಂದ್ರದ ಬಿಜೆಪಿ ಆಡಳಿತದ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ಭಾರತ್‌ ಜೋಡೋ ಯಾತ್ರೆ (Bharat Jodo Yatra) ನಡೆಯುತ್ತಿದೆ. ಈ ಪಾದಯಾತ್ರೆ ಸದ್ಯ ಕರ್ನಾಟಕದಲ್ಲಿ ಮುಂದುವರಿದಿದ್ದು, ರಾಜ್ಯದಲ್ಲೂ ಪಾದಯಾತ್ರೆಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗುತ್ತಿದೆ. ಪಾದಯಾತ್ರೆಯುದ್ದಕ್ಕೂ ಹಲವಾರು ವಿಶೇಷತೆಗಳೊಂದಿಗೆ ರಾಹುಲ್‌ ಗಾಂಧಿಯವರು ಗಮನ ಸೆಳೆಯುತ್ತಿದ್ದಾರೆ.

    ರಾಹುಲ್‌ ಗಾಂಧಿ ನೇತೃತ್ವದ ಪಾದಯಾತ್ರೆಯು ರಾಜ್ಯಕ್ಕೆ ಬಂದು ಈವರೆಗೆ 11 ದಿನವಾಗಿದೆ. ಸದ್ಯ ಪಾದಯಾತ್ರೆಯು ಚಿತ್ರದುರ್ಗದ (Chitradurga) ಚಳ್ಳಕೆರೆ ಭಾಗದಲ್ಲಿ ಸಾಗುತ್ತಿದೆ. ಈ ವೇಳೆ ಚಳ್ಳಕೆರೆ ಹೊರಭಾಗದಿಂದ ಬರುತ್ತಿದ್ದ ಆಂಬುಲೆನ್ಸ್‌ ಪಾದಯಾತ್ರೆ ನಡುವೆ ಸಿಲುಕಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ರಾಹುಲ್‌ ಗಾಂಧಿ ಅವರು ತಕ್ಷಣ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟರು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಆಂಬುಲೆನ್ಸ್‌ ಸುಗಮವಾಗಿ ಹೋಗಲು ದಾರಿ ಬಿಟ್ಟರು. ಇದನ್ನೂ ಓದಿ: ರಾಹುಲ್ ಗಾಂಧಿ ಪಾದಕ್ಕೂ ಬಿಎಸ್‍ವೈ ಸಮ ಇಲ್ಲ ಎಂದು ನಾನು ಹೇಳಲ್ಲ: ಸಿದ್ದರಾಮಯ್ಯ

    ಪಾದಯಾತ್ರೆಯಲ್ಲಿ ರಾಹುಲ್‌ ಗಾಂಧಿ ಅವರೊಂದಿಗೆ ವಿದ್ಯಾರ್ಥಿಗಳು ಸಹ ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳ ಕೈ ಹಿಡಿದು ರಾಹುಲ್‌ ಪಾದಯಾತ್ರೆ ನಡೆಸಿದರು. ಈ ವೇಳೆ ಮಕ್ಕಳಿಗೆ ರಾಹುಲ್‌ ಚಾಕೊಲೇಟ್‌ ನೀಡಿದರು.

    ಪಾದಯಾತ್ರೆಯಲ್ಲಿ ಬಾಲಕಿಯೊಬ್ಬಳು ಭರತನಾಟ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಳು. ಬಾಲಕಿಯ ಭರತನಾಟ್ಯಕ್ಕೆ ರಾಹುಲ್‌ ಮನಸೋತರು. ನಾನಾ ವಿಶೇಷತೆಗಳೊಂದಿಗೆ ಪಾದಯಾತ್ರೆ ಸಾಗುತ್ತಿದೆ. ಇದನ್ನೂ ಓದಿ: ಕನಸಲ್ಲಿ ಬರುತ್ತಿದ್ದ ವಿಗ್ರಹಗಳು ಕಣ್ಣೆದುರೇ ಪ್ರತ್ಯಕ್ಷ

    Live Tv
    [brid partner=56869869 player=32851 video=960834 autoplay=true]

  • ಆಂಬುಲೆನ್ಸ್‌ಗೆ ದಾರಿ ಕಲ್ಪಿಸಲು ತಮ್ಮ ಬೆಂಗಾವಲು ವಾಹನ ನಿಲ್ಲಿಸಿದ ಯೋಗಿ ಆದಿತ್ಯನಾಥ್‌

    ಆಂಬುಲೆನ್ಸ್‌ಗೆ ದಾರಿ ಕಲ್ಪಿಸಲು ತಮ್ಮ ಬೆಂಗಾವಲು ವಾಹನ ನಿಲ್ಲಿಸಿದ ಯೋಗಿ ಆದಿತ್ಯನಾಥ್‌

    ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ತಮ್ಮ ಬೆಂಗಾವಲು ವಾಹನಗಳನ್ನು ನಿಲ್ಲಿಸಿ, ಟ್ರಾಫಿಕ್‌ನಲ್ಲಿ ಸಿಲುಕಿದ್ದ ಆಂಬುಲೆನ್ಸ್‌ಗೆ ಸಂಚಾರಕ್ಕೆ ದಾರಿ ಮಾಡಿಕೊಟ್ಟು ಮಾದರಿಯಾಗಿದ್ದಾರೆ.

    ಯೋಗಿ ಆದಿತ್ಯನಾಥ್‌ ಅವರ ಮಾನವೀಯ ನಡೆ ಕುರಿತು ಟ್ರಾಫಿಕ್‌ ಡಿಸಿಪಿ ಸುಭಾಷ್‌ ಚಂದ್ರ ಶಾಕ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 20 ಕಡೆ ದಾಳಿ, ಸಾವಿರಾರು ಜನರ ಹತ್ಯೆ – ಮೋದಿಗೆ ಕೊಲೆ ಬೆದರಿಕೆ

    ಹಜರತ್‌ಗಂಜ್‌ನಿಂದ ಬಂದರಿಯಾಬಾಗ್ ಕಡೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪ್ರಯಾಣ ಬೆಳೆಸಿದ್ದರು. ಬೆಂಗಾವಲು ವಾಹನಗಳು ಜೊತೆಯಲ್ಲಿ ಸಾಗಿದ್ದವು. ಈ ವೇಳೆ ಇತರೆ ವಾಹನಗಳ ನಡುವೆ ಟ್ರಾಫಿಕ್‌ನಲ್ಲಿ ಆಂಬುಲೆನ್ಸ್‌ವೊಂದು ಸಿಲುಕಿತ್ತು.

    ಯೋಗಿ ಆದಿತ್ಯನಾಥ್‌ ಅವರು ತಮ್ಮ ವಾಹನ ಹಾಗೂ ಬೆಂಗಾವಲು ವಾಹನಗಳ ಸುಗಮ ಸಂಚಾರಕ್ಕಾಗಿ, ಟ್ರಾಫಿಕ್‌ನಲ್ಲಿ ನಿಂತಿದ್ದ ಆಂಬುಲೆನ್ಸ್ ಕಂಡ ತಕ್ಷಣ, ಅವರು ತಮ್ಮ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿದರು. ನಂತರ ಆಂಬುಲೆನ್ಸ್‌ಗೆ ಹೋಗಲು ಅವಕಾಶ ಮಾಡಿಕೊಡುವಂತೆ ಸೂಚನೆ ನೀಡಿದರು ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಚಂಡೀಗಢವನ್ನು ಪಂಜಾಬ್‌ಗೆ ವರ್ಗಾಯಿಸಿ: ಪಂಜಾಬ್ ಸಿಎಂ ನಿರ್ಣಯ ಮಂಡನೆ

    ದ್ವಿಚಕ್ರ ವಾಹನ ಟ್ರಾಫಿಕ್‌ನಲ್ಲೇ ಇದ್ದ ಭಾಸ್ಕರ್ ಸಿಂಗ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಮಾನವೀಯ ನಡೆಗೆ ಇದು ನಿದರ್ಶನವಾಗಿದೆ ಎಂದು ಹೊಗಳಿದ್ದಾರೆ.

  • 23 ಕಿಮೀ ಅನ್ನು ಕೇವಲ 15 ನಿಮಿಷಗಳಲ್ಲಿ ಕ್ರಮಿಸಿ ಜೀವ ಉಳಿಸಿದ ಆಂಬುಲೆನ್ಸ್

    ಭೋಪಾಲ್: ಮೆದುಳು ನಿಷ್ಕ್ರಿಯಗೊಂಡಿದ್ದ ರೋಗಿಯ ಮೂತ್ರಪಿಂಡವನ್ನು ಗ್ರೀನ್ ಕಾರಿಡಾರ್ ವ್ಯವಸ್ಥೆಯಲ್ಲಿ ಆಂಬುಲೆನ್ಸ್ ಮೂಲಕ ಸಾಗಿಸಿ ಮತ್ತೊಬ್ಬ ರೋಗಿಯನ್ನು ಬದುಕಿಸಲಾಗಿದೆ. ಘಟನೆ ಭೋಪಾಲ್‌ನಲ್ಲಿ ನಡೆದಿದೆ.

    ಭೋಪಾಲ್‌ನಲ್ಲಿ ನಿರ್ಮಿಸಲಾಗಿದ್ದ ಗ್ರೀನ್ ಕಾರಿಡಾರ್ ವ್ಯವಸ್ಥೆಯಲ್ಲಿ ಆಂಬುಲೆನ್ಸ್ 23 ಕಿಮೀ ದಾರಿಯನ್ನು ಕೇವಲ 15 ನಿಮಿಷಗಳಲ್ಲಿ ಕ್ರಮಿಸಿ ರೋಗಿಯೊಬ್ಬರ ಜೀವ ಉಳಿಸಿದೆ.

    ಶಾಹಪುರದ ಬನ್ಸಾಲ್ ಆಸ್ಪತ್ರೆಯಿಂದ ಬೈರ್‌ಗಡದ ವಿವಾ ಆಸ್ಪತ್ರೆಯ ವರೆಗೆ ಸಂಚಾರ ಪೊಲೀಸರು ಶನಿವಾರ ಸಂಜೆ ಗ್ರೀನ್ ಕಾರಿಡಾರ್ ವ್ಯವಸ್ಥೆ ನಿರ್ಮಿಸಿದ್ದರು. ಈ ಎರಡೂ ಆಸ್ಪತ್ರೆಗಳು 23 ಕಿಮೀ ದೂರವಿದ್ದು, ಸಂಜೆ 4:20 ರಿಂದ 4:35ರ ವರೆಗೆ ಗ್ರೀನ್ ಕಾರಿಡಾರ್ ನಿರ್ಮಿಸಲಾಗಿತ್ತು. ಈ ವೇಳೆ ಆಂಬುಲೆನ್ಸ್ ಕೇವಲ 15 ನಿಮಿಷಗಳಲ್ಲಿ ಕ್ರಮಿಸಿ ರೋಗಿಗೆ ಮೂತ್ರಪಿಂಡ ಸಾಗಿಸಿ, ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವೃದ್ಧ

    ಮಹಿಳೆಯೊಬ್ಬರನ್ನು ಜನವರಿ 25ರಂದು ಮೆದುಳಿನ ರಕ್ತ ಸ್ರಾವದ ಕಾರಣ ಬನ್ಸಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ 4 ದಿನಗಳ ವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಮಹಿಳೆ ಗುಣಮುಖರಾಗುವ ಸೂಚನೆ ಕಾಣಿಸಲಿಲ್ಲ. ಬಳಿಕ ಅವರ ಅಂಗಾಂಗ ದಾನಕ್ಕೆ ಕುಟುಂಸ್ಥರು ಒಪ್ಪಿಗೆ ನೀಡಿದ್ದಾರೆ. ಇದನ್ನೂ ಓದಿ: ಪೆಗಾಸಸ್‌ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ಗೆ ಮನವಿ

    ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಲಿವರ್, ಕಡ್ನಿ, ಕಣ್ಣುಗಳನ್ನು ಬನ್ಸಾಲ್ ಆಸ್ಪತ್ರೆಗೆ ದಾನ ಮಾಡಲಾಗಿದ್ದು, ಒಂದು ಕಿಡ್ನಿಯನ್ನು ವಿವಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಕಿಡ್ನಿಯನ್ನು ಗ್ರೀನ್ ಕಾರಿಡಾರ್ ಮೂಲಕ ರವಾನೆ ಮಾಡಲಾಗಿದ್ದು, 70 ವರ್ಷದ ರೋಗಿಗೆ ಮೂತ್ರಪಿಂಡದ ಕಸಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

  • ಅಂಬುಲೆನ್ಸ್‌ಗೆ ದಾರಿ ಬಿಡದೇ ಪುಂಡಾಟ – ಕಾರು ಚಾಲಕ ಬಂಧನ

    ಅಂಬುಲೆನ್ಸ್‌ಗೆ ದಾರಿ ಬಿಡದೇ ಪುಂಡಾಟ – ಕಾರು ಚಾಲಕ ಬಂಧನ

    ಮಂಗಳೂರು: ಅಂಬುಲೆನ್ಸ್‌ಗೆ ಸರಿಸುಮಾರು 40 ಕಿಲೋಮೀಟರ್‌ ವರೆಗೂ ದಾರಿ ಬಿಡದೆ ಕಾರು ಚಾಲಕನೊಬ್ಬ ಪುಂಡಾಟ ಮೆರೆದ ಘಟನೆ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ವರದಿ ಆಗಿದೆ.

    ನಿನ್ನೆ ಸಂಜೆ ಮಂಗಳೂರಿನಿಂದ ಭಟ್ಕಳಕ್ಕೆ ರೋಗಿಯನ್ನು ಕರೆದುಕೊಂಡು ಹೊರಟಿದ್ದ ಅಂಬುಲೆನ್ಸ್‌ಗೆ ಮುಲ್ಕಿಯಿಂದ ಉಡುಪಿವರೆಗೆ ಸುಮಾರು 40 ಕಿ.ಮೀ. ದೂರ ದಾರಿ ಬಿಡದೇ ಕಾರು ಚಾಲಕ ಸತಾಯಿಸಿದ್ದಾನೆ. ಕೆಎ-19-ಎಂಡಿ 6843 ಮಂಗಳೂರು ರಿಜಿಸ್ಟ್ರೇಷನ್‍ನ ಕಾರು ಇದಾಗಿದ್ದು, ಮೊಹ್ಮದ್ ರಿಜ್ವಾನ್ ಎಂಬುವರ ಹೆಸರಿನಲ್ಲಿದೆ. ಅಂಬುಲೆನ್ಸ್‌ಗೆ ದಾರಿ ಬಿಡದ ಪುಂಡ ಕಾರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ಅತ್ಯಾಚಾರ ಆರೋಪಿ ಸೇರಿ 10 ಶಾಸಕರನ್ನು ಪಟ್ಟಿಯಿಂದ ಕೈಬಿಟ್ಟ ಬಿಜೆಪಿ

    ನಿನ್ನೆ ರಾತ್ರಿಯೂ ಕೂಡ, ಮಣಿಪಾಲದಿಂದ ಮಂಗಳೂರಿಗೆ ಹೋಗುತ್ತಿದ್ದ ಅಂಬುಲೆನ್ಸ್‌ಗೆ ಇದೇ ರೀತಿ ಕಿರಿಕ್ ಮಾಡಿದ್ದ ಎಂದು ಹೇಳಲಾಗುತ್ತಿದೆ. ಸದ್ಯ ಕಾರು ಚಾಲಕನ ವಿರುದ್ಧ ಸುರತ್ಕಲ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸೋಮೋಟೋ ಪ್ರಕರಣ ದಾಖಲಾಗಿತ್ತು. ಬಳಿಕ ಇದೀಗ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಗಳೂರಿನ ಅತ್ತಾವರ ನಿವಾಸಿ ಮೋನಿಶ್ ಎಂದು ಗುರುತಿಸಲಾಗಿದ್ದು ಕಾರು ಮತ್ತು ಮೋನಿಶ್‍ನನ್ನು ಪೊಲೀಸರು ಬಂಧಿಸಿ ವೀಡಿಯೋ ದಾಖಲೆ ಆಧರಿಸಿ ಅತೀ ವೇಗ, ನಿರ್ಲಕ್ಷ್ಯದ ಚಾಲನೆ, ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಯಕ್ಷಗಾನ ಕಲಾವಿದ ದುರ್ಮರಣ

     

  • ಐದು ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿದ ರವಿ ಸುಬ್ರಹ್ಮಣ್ಯ

    ಐದು ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿದ ರವಿ ಸುಬ್ರಹ್ಮಣ್ಯ

    ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಬಸವನಗುಡಿ ಶಾಸಕರಾದ ರವಿ ಸುಬ್ರಹ್ಮಣ್ಯ ರವರ ಮಾರ್ಗದರ್ಶನದಲ್ಲಿ, ನಿತ್ಯ ನಿರಂತರ ಸೇವಾ ಟ್ರಸ್ಟ್ (ರಿ) ವತಿಯಿಂದ ಕೊರೊನ ಸೇವೆಗಳಿಗಾಗಿ ಉಚಿತ 5 ಅಂಬುಲೆನ್ಸ್ ಗಳ ಸೇವೆಗೆ ಇಂದು ಶ್ರೀನಗರ ಬಸ್ ನಿಲ್ದಾಣದ ಬಳಿ ಚಾಲನೆ ನೀಡಲಾಯಿತು.

    ನಂತರ ಈ ಕುರಿತು ಮಾತನಾಡಿದ ರವಿ ಸುಬ್ರಹ್ಮಣ್ಯ, ನಿತ್ಯ ನಿರಂತರ ಸೇವಾ ಟ್ರಸ್ಟ್ ಬಸವನಗುಡಿ ಇದರ ಆಶ್ರಯದಲ್ಲಿ ನಾಗರಿಕರ ಅನುಕೂಲಕ್ಕಾಗಿ ಉಚಿತ ಅಂಬುಲೆನ್ಸ್ ಸೇವೆ ಒದಗಿಸಲಾಗುತ್ತಿದ್ದು, ಕೋವಿಡ್ -19 ನಿರ್ವಹಣೆಗೆ ಇದರಿಂದ ಅನುಕೂಲವಾಗಲಿದೆ ಎಂದು ಅಭಿಪ್ರಯಾಪಟ್ಟರು.

    ಈ ಸಂದರ್ಭದಲ್ಲಿ ನಿತ್ಯ ನಿರಂತರ ಸೇವಾ ಟ್ರಸ್ಟ್ ನ ಪ್ರಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬಸವನಗುಡಿ ವಿಧಾನಸಭಾ ಕ್ಷೇತ್ರದ ನಾಗರಿಕರು ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ ಉಚಿತ ಆಂಬ್ಯುಲೆನ್ಸ್ ಸೇವೆ ಪಡೆಯಬಹುದು ಎಂದು ತಿಳಿಸಿದ್ದಾರೆ. ರಾಜ್ ಗುರು-97428 58998, ಕಿಶನ್-98440 78232

  • ಕೊರೊನ ಸೋಂಕಿತರಿದ್ದ ಅಂಬುಲೆನ್ಸ್ ಗೆ ವಾಹನ ಡಿಕ್ಕಿ, ಬೆಂಕಿ – ಮೂವರ ಸ್ಥಿತಿ ಗಂಭೀರ

    ಕೊರೊನ ಸೋಂಕಿತರಿದ್ದ ಅಂಬುಲೆನ್ಸ್ ಗೆ ವಾಹನ ಡಿಕ್ಕಿ, ಬೆಂಕಿ – ಮೂವರ ಸ್ಥಿತಿ ಗಂಭೀರ

    ನೆಲಮಂಗಳ: ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅಂಬುಲೆನ್ಸ್ ಹೊತ್ತಿ ಉರಿದ ಘಟನೆ ನೆಲಮಂಗಲ ತಾಲೂಕಿನ ಎಡೆಹಳ್ಳಿ ಬಳಿ ನಡೆದಿದೆ.

    ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ, ನೆಲಮಂಗಲ ತಾಲೂಕಿನ ಎಡೆಹಳ್ಳಿ ಬಳಿ ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಂಬುಲೆನ್ಸ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಪರಿಣಾಮ ಅಂಬುಲೆನ್ಸ್ ನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ತುಮಕೂರು ಮಾರ್ಗದಿಂದ ಬೆಂಗಳೂರು ಕಡೆ ಅಂಬುಲೆನ್ಸ್ ಬರುತ್ತಿದ್ದ ವೇಳೆ ಘಟನೆ ನಡೆದಿದ್ದು, ಅಂಬುಲೆನ್ಸ್ ನಲ್ಲಿ ನಾಲ್ಕು ಜನ ಸೋಂಕಿತರು ಮತ್ತು ಚಾಲಕ ಸೇರಿ ಐವರು ಇದ್ದ ಬಗ್ಗೆ ಮಾಹಿತಿ ಇದೆ. ಕೂಡಲೇ ಸ್ಥಳೀಯರು ಅಂಬುಲೆನ್ಸ್ ಗೆ ತಗುಲಿದ್ದ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

  • 2 ಕಿ.ಮೀ ಓಡಿ ಅಂಬುಲೆನ್ಸ್‌ಗೆ ದಾರಿಮಾಡಿಕೊಟ್ಟ ಟ್ರಾಫಿಕ್ ಪೊಲೀಸ್- ವಿಡಿಯೋ

    2 ಕಿ.ಮೀ ಓಡಿ ಅಂಬುಲೆನ್ಸ್‌ಗೆ ದಾರಿಮಾಡಿಕೊಟ್ಟ ಟ್ರಾಫಿಕ್ ಪೊಲೀಸ್- ವಿಡಿಯೋ

    ಹೈದರಾಬಾದ್: ನೂರಾರು ವಾಹನಗಳು ಚಲಿಸುತ್ತಿರುವ ರಸ್ತೆಯಲ್ಲಿ 2 ಕಿ.ಮೀ ಓಡಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿರುವ ಹೈದರಾಬಾದ್ ಟ್ರಾಫಿಕ್ ಕಾನ್‍ಸ್ಟೆಬಲ್ ವಿಡಿಯೋ ಸಖತ್ ವೈರಲ್ ಆಗಿದೆ.

    ನವೆಂಬರ್2 ರಂದು ಸಂಜೆ ಸುಮಾರು 6 ರಿಂದ 7 ಗಂಟೆಗೆ ಸಮಯದಲ್ಲಿ ರಸ್ತೆಯಲ್ಲಿ ದಟ್ಟವಾದ ವಾಹನ ಸಂಚಾರ ಇತ್ತು. ಈ ವೇಳೆ ಅಂಬುಲೆನ್ಸ್‌ನಲ್ಲಿ ರೋಗಿ ಇರುವುದನ್ನು ಗಮನಿಸಿದ ಕಾನ್‍ಸ್ಟೆಬಲ್ ಜಿ.ಬಾಬ್ಜಿ ರಸ್ತೆಯ ಮಧ್ಯದಲ್ಲಿ ಓಡಿ ಟ್ರಾಫಿಕ್ ಕ್ಲೀಯರ್ ಮಾಡುತ್ತಾ ಸಾಗಿದ್ದಾರೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಹಲವರು ಕಾನ್‍ಸ್ಟೆಬಲ್ ಜಿ.ಬಾಬ್ಜಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕಾನ್‍ಸ್ಟೆಬಲ್ ಬಾಬ್ಜಿ ಅವರು ಹೈದರಾಬಾದ್ ನಗರದ ಜಿಪಿಒ ಜಂಕ್ಷನ್, ಅಬ್ದಿಸ್ ಮತ್ತು ಕೋಟಿಯ ಆಂಧ್ರ ಬ್ಯಾಂಕ್ ನಡುವಿನ ರಸ್ತೆಯಲ್ಲಿ ಸುಮಾರು 2 ಕಿ ಮೀ ಓಡಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಬ್ಜಿ ಅವರು, ಅಂಬ್ಯುಲೆನ್ಸ್ ಜಿಪಿಒ ಜಂಕ್ಷನ್‍ಗೆ ತಲುಪಿದಾಗ ಸಂಜೆ 7 ಗಂಟೆ ಆಗಿತ್ತು. ಟ್ರಾಫಿಕ್‍ನಲ್ಲಿ ಸಿಲುಕಿಕೊಂಡಿರುವುದನ್ನು ಗಮನಿಸಿದೆ. ನಾನು ಏನನ್ನಾದರೂ ಸಹಾಯ ಮಾಡಬಹುದಾಗಿತ್ತು ಎಂದುಕೊಂಡು ರಸ್ತೆಯಲ್ಲಿ ಆಂಧ್ರ ಬ್ಯಾಂಕ್ ಕಡೆಗೆ ಓಡಿ ಅಂಬುಲೆನ್ಸ್ ಗೆ ಸ್ವಲ್ಪ ಸ್ಥಳಾವಕಾಶ ನೀಡುವಂತೆ ವಾಹನ ಚಾಲಕರಲ್ಲಿ ಕೇಳಿಕೊಂಡೆ. ಆಗ ವಾಹನ ಸವಾರರು ಅಂಬುಲೆನ್ಸ್ ಹೋಗಲು ಜಾಗ ಮಾಡಿಕೊಟ್ಟರು ಎಂದು ಹಳಿದ್ದಾರೆ.

    ನನ್ನ ಪ್ರಾಮಾಣಿಕತೆಯನ್ನು ನೋಡಿದ ವಾಹನ ಚಾಲಕರು ಮೆಚ್ಚುಗೆಯೊಂದಿಗೆ ಚಪ್ಪಾಳೆ ತಟ್ಟಲು ಪ್ರಾರಂಭಿಸಿದರು. ಅನೇಕ ವಾಹನ ಚಾಲಕರು ಒಳ್ಳೆಯ ಕೆಲಸ ಎಂದು ಹೇಳಿದ್ದಾರೆ. ನನಗೆ ಅಪಾರ ಸಂತೋಷ ಮತ್ತು ತೃಪ್ತಿಯನ್ನು ನೀಡಿದೆ ಎಂದು ಟ್ರಾಫಿಕ್ ಕಾನ್‍ಸ್ಟೆಬಲ್ ಬಾಬ್ಜಿ ಸಂತಸ ವ್ಯಕ್ತಪಡಿಸಿದ್ದಾರೆ.

  • ಬೆಂಗ್ಳೂರಿನಿಂದ ಚಿಕ್ಕಮಗಳೂರಿಗೆ ಕರೆತರಲು 28 ಸಾವಿರ ಪಡೆದ ಅಂಬುಲೆನ್ಸ್ ಚಾಲಕ

    ಬೆಂಗ್ಳೂರಿನಿಂದ ಚಿಕ್ಕಮಗಳೂರಿಗೆ ಕರೆತರಲು 28 ಸಾವಿರ ಪಡೆದ ಅಂಬುಲೆನ್ಸ್ ಚಾಲಕ

    – ಚಾಲಕ ಅರೆಸ್ಟ್, ವಾಹನದಲ್ಲಿ ಬಂದವರು ಕ್ವಾರಂಟೈನ್ ಘಟಕಕ್ಕೆ

    ಚಿಕ್ಕಮಗಳೂರು: ಕೊರೊನಾ ಆತಂಕ ದಿನದಿಂದ ದಿನಕ್ಕೆ ವಿಶ್ವವನ್ನೇ ಕಿತ್ತು ತಿನ್ನುತ್ತಿದೆ. ಪರಿಸ್ಥಿತಿಯನ್ನ ನಿಯಂತ್ರಣಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೋರಾಡುತ್ತಿವೆ. ಆದರೆ ಅಂಬುಲೆನ್ಸ್ ಚಾಲಕರು ಕೊರೊನಾ ಆತಂಕವನ್ನೇ ದುರ್ಬಳಕೆ ಮಾಡಿಕೊಂಡು ಜನರಿಂದ ಹಣವನ್ನೂ ಪೀಕುವುದರ ಜೊತೆ ಸರ್ಕಾರದ ಕಣ್ಣಿಗೂ ಮಣ್ಣೆರೆಚುತ್ತಿದ್ದಾರೆ.

    ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಐದು ಜನಕ್ಕೆ 28 ಸಾವಿರ ಬಾಡಿಗೆ ಮಾತನಾಡಿಕೊಂಡು ಬಂದ ಅಂಬುಲೆನ್ಸ್ ಚಾಲಕನನ್ನು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಅಂಬುಲೆನ್ಸ್ ಈ ಹಳ್ಳಿಗೆ ಯಾಕೆ ಹೋಗುತ್ತಿದೆ ಎಂದು ಅನುಮಾನಗೊಂಡ ಪೊಲೀಸರು ಚೆಕ್ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಬೆಂಗಳೂರಿನಿಂದ ಬಂದ ಅಂಬುಲೆನ್ಸ್ ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಬಳಿಯ ಹೊಸ ಗಂಗೂರು ಗ್ರಾಮದ ಐವರನ್ನು ಚಿಕ್ಕಮಗಳೂರಿಗೆ ಕರೆ ತಂದಿತ್ತು. ಆದರೆ ಅಂಬುಲೆನ್ಸ್ ಅನ್ನೋ ಕಾರಣಕ್ಕೆ ಯಾವ ಚೆಕ್ ಪೋಸ್ಟ್ ನಲ್ಲೂ ಕೂಡ ತಪಾಸಣೆ ಮಾಡಿಲ್ಲ. ಆದರೆ ಗಾಡಿಯನ್ನು ಚೆಕ್ ಮಾಡಿದ ಲಿಂಗದಹಳ್ಳಿ ಪೊಲೀಸರು ಆಂಬುಲೆನ್ಸ್ ವಶಕ್ಕೆ ಪಡೆದು, ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. ಆಂಬುಲೆನ್ಸ್‍ನಲ್ಲಿ ಬಂದ ಹೊಸ ಗಂಗೂರಿನ ಐವರನ್ನು ಲಿಂಗದಹಳ್ಳಿಯಲ್ಲಿರೋ ಕ್ವಾರಂಟೈನ್ ಘಟಕಕ್ಕೆ ಬಿಟ್ಟಿದ್ದಾರೆ.