Tag: ಆಂಧ್ರ ಪ್ರದೇಶ

  • ಆಂಧ್ರದ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡುಗೆ ಕೊರೊನಾ

    ಆಂಧ್ರದ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡುಗೆ ಕೊರೊನಾ

    ಹೈದರಾಬಾದ್: ಆಂಧ್ರ ಪ್ರದೇಶದ ವಿರೋಧ ಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತಂತೆ ಚಂದ್ರಬಾಬು ನಾಯ್ಡು ಅವರು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

    ತೆಲುಗು ದೇಶಂ ಪಕ್ಷ(ಟಿಡಿಪಿ) ಮುಖ್ಯಶ್ಥರಾಗಿರುವ ಚಂದ್ರಬಾಬು ನಾಯ್ಡು ಅವರು, ನಾನು ಕೋವಿಡ್-19 ಟೆಸ್ಟ್ ಮಾಡಿಸಿಕೊಂಡಿದ್ದು, ಈ ವೇಳೆ ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನನಗೆ ಸೌಮ್ಯ ರೋಗಲಕ್ಷಣಗಳಿದ್ದು, ಇದೀಗ ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿದ್ದೇನೆ ಮತ್ತು ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ನನ್ನ ಜೊತೆ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಆದಷ್ಟು ಬೇಗ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸುತ್ತೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ಕೊಟ್ಟ ಮಹೇಶ್ ಸವಾನಿ

    ಆಂಧ್ರಪ್ರದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು 30,000 ಗಡಿ ದಾಟಿ 30,182 ಕ್ಕೆ ತಲುಪಿದೆ. ಸೋಮವಾರ ರಾಜ್ಯದಲ್ಲಿ 4,108 ಕೊರೊನಾ ಹೊಸ ಪ್ರಕರಣಗಳು ವರದಿಯಾಗಿದ್ದು, ವಿಶಾಖಪಟ್ಟಣಂ ಜಿಲ್ಲೆಯಲ್ಲಿ 1,018 ಮತ್ತು ಚಿತ್ತೂರಿನಲ್ಲಿ 1,004 ಹೊಸ ಪ್ರಕರಣಗಳು ದಾಖಲಾಗಿದೆ. ಇದನ್ನೂ ಓದಿ: ರಜನಿಕಾಂತ್ ಪುತ್ರಿಗೆ ಡಿವೋರ್ಸ್ ನೀಡಿದ ಧನುಷ್

  • ಆಂಧ್ರಪ್ರದೇಶ ಪ್ರವಾಹ – ತಲಾ 25 ಲಕ್ಷ ದೇಣಿಗೆ ನೀಡಿದ ಚಿರಂಜೀವಿ, ರಾಮ್‍ಚರಣ್

    ಆಂಧ್ರಪ್ರದೇಶ ಪ್ರವಾಹ – ತಲಾ 25 ಲಕ್ಷ ದೇಣಿಗೆ ನೀಡಿದ ಚಿರಂಜೀವಿ, ರಾಮ್‍ಚರಣ್

    ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಮೆಗಾಸ್ಟಾರ್ ಚಿರಂಜೀವಿ ಹಾಗೂ ನಟ ರಾಮ್ ಚರಣ್ ತೇಜ ಸಂತ್ರಸ್ತರಿಗೆ ಸಹಾಯ ಹಸ್ತಚಾಚಿದ್ದಾರೆ.

    ಆಂಧ್ರಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ಹಾನಿಯುಂಟಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಜನರ ಕಷ್ಟಕ್ಕೆ ಟಾಲಿವುಡ್ ನಟ ಜೂನಿಯರ್ ಎನ್‍ಟಿಆರ್ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದವರಿಗೆ ಸಹಾಯ ಮಾಡಲು ಆಂಧ್ರಪ್ರದೇಶ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುವುದಾಗಿ ಬುಧವಾರ ಘೋಷಿಸಿದ್ದರು. ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ

    ಇದೀಗ ನಟ ಚಿರಂಜೀವಿ ಮತ್ತು ಅವರ ಪುತ್ರ ರಾಮ್ ಚರಣ್ ತೇಜ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 25 ಲಕ್ಷ ರೂ. ನೀಡುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ. “ಆಂಧ್ರಪ್ರದೇಶದಲ್ಲಿ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ವ್ಯಾಪಕವಾಗಿ ಹಾನಿಯುಂಟಾಗಿರುವ ವಿಚಾರ ಬಹಳ ನೋವುಂಟು ಮಾಡಿದೆ. ಪ್ರವಾಹದಿಂದ ಉಂಟಾದ ವ್ಯಾಪಕ ವಿನಾಶ ಮತ್ತು ಹಾನಿಯಿಂದ ನನಗೆ ನೋವಾಗಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ.25 ಲಕ್ಷ ರೂ. ಕೊಡುಗೆ ನೀಡುತ್ತಿದ್ದೇನೆ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಆಂಧ್ರಪ್ರದೇಶ ಪ್ರವಾಹ ಸಂತ್ರಸ್ತರಿಗೆ ಮಿಡಿದ ಟಾಲಿವುಡ್ ಸ್ಟಾರ್ಸ್

    ಮತ್ತೊಂದೆಡೆ ರಾಮ್‍ಚರಣ್ ತೇಜ ಅವರು, ಭಯಾನಕ ಪ್ರವಾಹದಿಂದಾಗಿ ಆಂಧ್ರಪ್ರದೇಶದ ಜನತೆ ಅನುಭವಿಸುತ್ತಿರುವ ಕಷ್ಟವನ್ನು ನೋಡಲು ಹೃದಯ ಭಾರವೆನಿಸುತ್ತಿದೆ. ಜನರಿಗೆ ಸಹಾಯ ಮಾಡಲು ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿಯ ನನ್ನದೊಂದು ಪುಟ್ಟ ಕಾಣಿಕೆ ನೀಡುತ್ತಿದ್ದೇನೆ ಎಂದು  ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

  • 2 ಕೋಟಿ ವೆಚ್ಚದಲ್ಲಿ ಜಗನ್ ಮೋಹನ ರೆಡ್ಡಿ ದೇವಾಲಯ ನಿರ್ಮಿಸಿದ ಶಾಸಕ

    2 ಕೋಟಿ ವೆಚ್ಚದಲ್ಲಿ ಜಗನ್ ಮೋಹನ ರೆಡ್ಡಿ ದೇವಾಲಯ ನಿರ್ಮಿಸಿದ ಶಾಸಕ

    ಹೈದರಾಬಾದ್: ಆಂಧ್ರ ಪ್ರದೇಶದ ವೈಎಸ್‍ಆರ್ ಕಾಂಗ್ರೆಸ್ ಶಾಸಕ ಹಾಗೂ ಪಕ್ಷದ ಮುಖ್ಯಸ್ಥರೊಬ್ಬರು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರಿಗೆ ಭವ್ಯವಾದ ದೇವಸ್ಥಾನವೊಂದನ್ನು ನಿರ್ಮಿಸಿದ್ದಾರೆ.

    ವೈಎಸ್‌ಆರ್‌ಪಿಸಿಯ ಶಾಸಕ ಬಿ. ಮಧುಸೂಧನ್ ರೆಡ್ಡಿ ತಮ್ಮ ಗೌರವವನ್ನು ಪ್ರದರ್ಶಿಸಲು ಮತ್ತು ಸರ್ಕಾರದ ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದೇವಾಲಯವನ್ನು ನಿರ್ಮಿಸಿರುವುದಾಗಿ ತಿಳಿಸಿದ್ದು, ಈ ದೇವಾಲಯವನ್ನು ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ತಜ್ಞರು ವಿನ್ಯಾಸಗೊಳಿಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ:ತಾಲಿಬಾನಿಗಳನ್ನ RSS, ಬಜರಂಗದಳಕ್ಕೆ ಹೋಲಿಸಿದ ಕವಿ ಮುನ್ವರ್ ರಾಣಾ

    ಚಿತ್ತೂರು ಜಿಲ್ಲೆಯ ಶ್ರೀಕಳಹಸ್ತಿ ಪಟ್ಟಣದಲ್ಲಿ ಬುಧವಾರ ಆಂಧ್ರಪ್ರದೇಶ ಸರ್ಕಾರದ ಯೋಜನೆಯಡಿಯಲ್ಲಿ ನಿರ್ಮಿಸಲಾದ ನವರತ್ನಲು ದೇವಾಲಯವನ್ನು ಉದ್ಘಾಟಿಸಲಾಯಿತು. ‘ಜಗನಣ್ಣ ನಾರತ್ನಳ ನಿಲಯಂ’ ಎಂದು ಕರೆಯಲ್ಪಡುವ ದೇವಾಲಯದಲ್ಲಿ 9 ಸ್ತಂಭಗಳಿವೆ. ಇದು ರಾಜ್ಯ ಸರ್ಕಾರವು ಜಾರಿಗೊಳಿಸುತ್ತಿರುವ ಒಂಬತ್ತು ಕಲ್ಯಾಣ ಯೋಜನೆಗಳನ್ನು ಸೂಚಿಸುತ್ತದೆ. ಈ ಕುರಿತಂತೆ ಬಿ. ಮಧುಸೂಧನ್ ರೆಡ್ಡಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ನಮ್ಮ ಜಗನ್ನಣ್ಣ, ಬಡ ಜನರ ಕುಟುಂಬಗಳಿಗೆ ಸಂತಸ ತರುವ ದೇವರು ಎಂದು ಹೇಳಿದ್ದು, ಹೊಸದಾಗಿ ನಿರ್ಮಿಸಲಾಗಿರುವ ದೇವಾಲಯದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ – ಸಿಬಿಐ ತನಿಖೆಗೆ ಆದೇಶ

    ಮನೆಯ ಮೇಲ್ಭಾಗದ ಮಿರರ್ ಹಾಲ್‍ನಲ್ಲಿ ಜಗನ್ ಮೋಹನ್ ರೆಡ್ಡಿಯವರ ಪ್ರತಿಮೆ ಹಾಗೂ ಫೋಟೋಗಳನ್ನು ಇಡಲಾಗಿದೆ. ಇದು ಆಗಸ್ಟ್ 20ರಂದು ಉದ್ಘಾಟನೆಯಾಗಲಿದೆ. ಅಲ್ಲದೇ ಕೇಂದ್ರ ಫಲಕವನ್ನು ಆಂಧ್ರಪ್ರದೇಶದ ನಕ್ಷೆಯೊಂದಿಗೆ ಕೆತ್ತಲಾಗಿದೆ. ಜೊತೆಗೆ ಜಗನ್ ರೆಡ್ಡಿ, ವೈಎಸ್‌ಆರ್‌ಪಿಸಿಯ ಧ್ವಜ ಮತ್ತು ಪಕ್ಷದ ಚಿಹ್ನೆ ನವ ರತ್ನಗಳನ್ನು ಬೆಳ್ಳಿ ಹಾಗೂ ಚಿನ್ನದಿಂದ ಮಾಡಲ್ಪಟ್ಟಿದೆ. ದೇವಾಲಯಕ್ಕೆ ಭೇಟಿ ನೀಡುವವರಿಗೆ ಜಗನ್ ಮೋಹನ್ ರೆಡ್ಡಿ ಮಾಡಿದ ಕಲ್ಯಾಣ ಯೋಜನೆಗಳ ತಿಳಿಸುವ ಕಿರು ಪುಸ್ತಕವನ್ನು ನೀಡಲಾಗುತ್ತದೆ ಎಂದಿದ್ದಾರೆ.

    ಅನೇಕರು ನಾನು ಜಗನ್ ಮೋಹನ್ ರೆಡ್ಡಿಯವರು ನಾರತ್ನಳ ನಿಲಯವನ್ನು ಏಕೆ ಕಟ್ಟಿದ್ದೇನೆ ಎಂದು ಟೀಕಿಸಬಹುದು. ಆದರೆ ಬ್ರಿಟಿಷರ ಪ್ರತಿಮೆಗಳನ್ನು ಗೋದಾವರಿ ನದಿಯ ಅಣೆಕಟ್ಟಿನಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಜನರಿಗೆ ಒಳ್ಳೆಯದನ್ನು ಮಾಡುವ ವ್ಯಕ್ತಿಯ ಪ್ರತಿಮೆಯನ್ನು ನಿರ್ಮಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    ಜಗನ್‍ರವರು ಜಾರಿಗೊಳಿಸಿರುವ ನವ ರತ್ನಗಳ ಯೋಜನೆ ರಾಜ್ಯದ ಆರು ಕೋಟಿ ಜನಸಂಖ್ಯೆಯಲ್ಲಿ 5 ಕೋಟಿ ಜನರಿಗೆ ಪ್ರಯೋಜನವಾಗುತ್ತಿದೆ. ಇಂತಹ ಬೃಹತ್ ಯೋಜನೆ ಭಾರತದಲ್ಲಿ ಎಲ್ಲಿಯೂ ಇಲ್ಲ. ಅದಕ್ಕಾಗಿಯೇ ನಾನು ಇದನ್ನು ನಿರ್ಮಿಸಿದ್ದೇನೆ ಎಂದು ತನ್ನ ಕೆಲಸವನ್ನು ಮಧುಸೂಧನ್ ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಲಿಂಗಿಗಳಿಗೆ ಜೊತೆಯಾಗಿ ವಾಸಿಸಲು ಅನುಮತಿ ನೀಡಿದ ಯುಪಿ ಕೋರ್ಟ್

     

  • ಬಳ್ಳಾರಿಯಲ್ಲಿ ಮತ್ತೆ ಅಕ್ರಮ ಅದಿರು ಸಾಗಾಟ

    ಬಳ್ಳಾರಿಯಲ್ಲಿ ಮತ್ತೆ ಅಕ್ರಮ ಅದಿರು ಸಾಗಾಟ

    ಬಳ್ಳಾರಿ: ಗಣಿನಾಡಲ್ಲಿ ಸಂಪೂರ್ಣವಾಗಿ ಅಕ್ರಮ ಗಣಿಗಾರಿಕೆ ಹಾಗೂ ಸಾಗಾಟ ಸದ್ದು ಮತ್ತೆ ಶುರುವಾಗಿ ಬಿಟ್ಟಿದೆ. ಬಳ್ಳಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಅಕ್ರಮ ಗಣಿ ಸಾಗಾಟ ಮಾಡುತ್ತಿದ್ದ 20ಕ್ಕೂ ಹೆಚ್ಚು ಲಾರಿಗಳನ್ನ ವಶಕ್ಕೆ ಪಡೆದಿದ್ದಾರೆ.

    ಗಣಿನಾಡು ಬಳ್ಳಾರಿ ಅಂದರೆ ಅಕ್ರಮ ಗಣಿಗಾರಿಕೆ, ಅಕ್ರಮ ಗಣಿ ಸಾಗಾಟ ಎನ್ನುವುದು ಇಡೀ ದೇಶಕ್ಕೇ ಸಾರಿತು. ಮಾಜಿ ಸಚಿವ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿಕೊಂಡು ಸಿಬಿಐ ತನಿಖೆ ಆರಂಭಿಸಿದ ಬಳಿಕ ಸುಪ್ರೀಂ ಕೋರ್ಟ್ ಗಣಿ ರಪ್ತಿಗೆ ನಿಷೇಧ ಹೇರಿತ್ತು. ಪ್ಲಾಂಟ್ ಇದ್ದವರಿಗೆ ಗಣಿಗಾರಿಕೆ ಮಾತ್ರ ಅವಕಾಶ ಮಾಡಿ ಕೊಟ್ಟಿತ್ತು. ಆದರೆ ಇಂದು ಸುಪ್ರೀಂ ಕೋರ್ಟ್ ಆದೇಶದ ಮಧ್ಯೆಯೂ ಕೋಟಿ ಕೋಟಿ ಬೆಲೆ ಬಾಳುವ ಕಬ್ಬಿಣದ ಗಣಿಯನ್ನು ಆಂಧ್ರಕ್ಕೆ ಅಕ್ರಮವಾಗಿ ರವಾನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

    ಬಳ್ಳಾರಿ ಪೊಲೀಸರು ಫ್ಲೈ ಹ್ಯಾಶ್ ತುಂಬಿಕೊಂಡು ಆಂಧ್ರಕ್ಕೆ ತೆರಳುತ್ತಿದ್ದ, ಲಾರಿಗಳ ಮೇಲೆ ನಿಗಾ ಇಟ್ಟು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಫ್ಲೈ ಹ್ಯಾಶ್ ಒಯ್ಯುವ ನೆಪದಲ್ಲಿ ಅದಿರನ್ನ ಸಾಗಾಟ ಮಾಡುತ್ತಿರುವ ಅಂಶ ಗೊತ್ತಾಗಿದೆ. ಪ್ಲೈ ಹ್ಯಾಶ್ ಮಧ್ಯೆ 43 ಪಸೆರ್ಂಟ್ ನಷ್ಟು ಅದಿರನ್ನು ತುಂಬಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 20 ಲಾರಿಗಳನ್ನು ಸೀಜ್ ಮಾಡಲಾಗಿದೆ.

    ಈ ಕುರಿತಂತೆ ಕಾರ್ಯಾಚರಣೆ ನಡೆದ ಖಾಕಿ ಟೀಂ ಅದಿರು ಸಾಗಾಣಿಕೆ ಮಾಡುತ್ತಿದ್ದ ಲಾರಿ ಡ್ರೈವರ್ಸ್ ಹಾಗೂ ಕ್ಲೀನರ್ ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ಅದಿರು ಸಾಗಾಟವನ್ನು ಬಳ್ಳಾರಿ ಎಸ್ಪಿ ಸೈದುಲ್ ಅಡಾವತ್ ದೃಢಪಡಿಸಿದ್ದು, ಸೂಕ್ತ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಇತ್ತ ಅದಿರು ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇಸ್ಪಾತ್ ಎನ್ನುವ ಸ್ಪಾಂಜ್ ಐರೆನ್ ಕಂಪನಿಯಿಂದ ಫ್ಲೈ ಹ್ಯಾಶ್ ರವಾನೆಗೆ ಪರವಾನಿಗೆ ಪಡೆದು ಅದರಲ್ಲಿ ಅದಿರನ್ನ ಸಾಗಾಟ ಮಾಡಲಾಗುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ಮಾತನಾಡಿರುವ ಲಾರಿ ಡ್ರೈವರ್‍ಗಳು ಇದು ಪ್ಲೈ ಹ್ಯಾಶ್ ಎಂದುಕೊಂಡಿದ್ವಿ, ಆದರೆ ಅದಿರು ತುಂಬಲಾಗಿದೆ ಎನ್ನುವುದು ಗೊತ್ತಿರಲಿಲ್ಲ. ಇದೇ ರೀತಿ ಇಪ್ಪತ್ತು ದಿನಗಳಿಂದ ಸಾಗಾಟ ಮಾಡಿದ್ದೇವೆ. ನಮ್ಮದೇನು ತಪ್ಪಿಲ್ಲ ಎನ್ನುತ್ತಿದ್ದಾರೆ. ಇದನ್ನೂ ಓದಿ:ದೇವಸ್ಥಾನದಲ್ಲಿ ಬಿಜೆಪಿ ಮುಖಂಡನ ಮಗಳ ಅದ್ಧೂರಿ ವಿವಾಹ- ಜಿಲ್ಲಾಡಳಿತದಿಂದ ತಡೆ

  • ಮಹಿಳೆ ಸೇರಿದಂತೆ 6 ಮಾವೋವಾದಿಗಳನ್ನ ಹೊಡೆದುರಳಿಸಿದ ಆ್ಯಂಟಿ ನಕ್ಸಲ್ ಫೋರ್ಸ್

    ಮಹಿಳೆ ಸೇರಿದಂತೆ 6 ಮಾವೋವಾದಿಗಳನ್ನ ಹೊಡೆದುರಳಿಸಿದ ಆ್ಯಂಟಿ ನಕ್ಸಲ್ ಫೋರ್ಸ್

    ಹೈದರಾಬಾದ್: ಇಂದು ಬೆಳಗ್ಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣ ವ್ಯಾಪ್ತಿಯಲ್ಲಿ ಆರು ಮಾವೋವಾದಿಗಳನ್ನು ಆ್ಯಂಟಿ ನಕ್ಸಲ್ ಫೋರ್ಸ್ ಹೊಡೆದುರಳಿಸಿದೆ. ಮೃತರಲ್ಲಿ ಓರ್ವ ಮಹಿಳೆ ಸಹ ಒಬ್ಬರು. ಮೃತರು ನಿಷೇಧಿತ ತಂಡ ಸಿಪಿಐ(ಮಾವೋವಾದಿ)ಯ ಸದಸ್ಯರಾಗಿದ್ದರು.

    ಇಂದು ಬೆಳಗ್ಗೆ ಆ್ಯಂಟಿ ನಕ್ಸಲ್ ಫೋರ್ಸ್ ಗ್ರೌಂಡ್ ಮತ್ತು ವಿಶೇಷ ದಳದವರು ಥಿಗ್ಲಮೆಟ್ಟಾ ಗ್ರಾಮದ ವ್ಯಾಪ್ತಿಯಲ್ಲಿ ಸರ್ಚಿಂಗ್ ಆಪರೇಷನ್ ಆರಂಭಿಸಿದ್ದರು. ಈ ವೇಳೆ ಮಾವೋವಾದಿಗಳು ಮತ್ತು ಸರ್ಚಿಂಗ್ ಆಪರೇಷನ್ ತಂಡದ ನಡುವೆ ಗುಂಡಿನ ಕಾಳಗ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಒಟ್ಟು ಆರು ಜನರನ್ನು ಹೊಡೆದುರಳಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

    ಸುರಕ್ಷಬಲ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ. ಮೃತರ ಬಳಿಯಲ್ಲಿದ್ದ ಆಯುಧಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸರ್ಚಿಂಗ್ ಆಪರೇಷನ್ ಮುಂದುವರಿದಿದೆ ಎಂದು ಚಿಂತಾಪಲ್ಲೆಯ ಎಎಸ್‍ಪಿ ವಿದ್ಯಾಸಾಗರ್ ಹೇಳಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಕೊಂದು ಸೇಡು ತೀರಿಸಿಕೊಳ್ಳುತ್ತೇವೆ – ಕೇರಳ ಸಿಎಂಗೆ ಮಾವೋವಾದಿಗಳಿಂದ ಪತ್ರ

  • ಗಾಂಜಾಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ಹತ್ಯೆಗೈದ ತಾಯಿ

    ಗಾಂಜಾಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ಹತ್ಯೆಗೈದ ತಾಯಿ

    ಹೈದರಾಬಾದ್: ಗಾಂಜಾ ಚಟಕ್ಕೆ ದಾಸನಾಗಿದ್ದ 17 ವರ್ಷದ ಮಗನನ್ನು ತಾಯಿಯೇ ಕೊಂದಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಪಟ್ಟಣದಲ್ಲಿ ನಡೆದಿದೆ. ಗಾಂಜಾಕ್ಕಾಗಿ ಹಣ ನೀಡುವಂತೆ ಯುವಕ ತಾಯಿಯನ್ನು ಪೀಡಿಸಿದ್ದಾಗ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೌರ ಕಾರ್ಮಿಕಳಾಗಿ ಕೆಲಸ ಮಾಡಿಕೊಂಡಿದ್ದ ಆರೋಪಿ ಸುಮಲತಾ, ತನ್ನ ಮಗನೊಂದಿಗೆ ಗುಂಟೂರಿನ ಎಟಿ ಅಗ್ರಹಾರಂ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು. ಪತಿ ಮರಣದ ನಂತರ ಮನೆ ನಡೆಸಲು ಒಬ್ಬಳೇ ದುಡಿಯುತ್ತಿದ್ದ ತಾಯಿ ಬಳಿ ಗಾಂಜಾ ಖರೀದಿಸಲು ಹಣ ನೀಡು ಎಂದು ಸಿದ್ಧಾರ್ಥ್ ಆಗಾಗ ಪೀಡಿಸುತ್ತಿದ್ದನು. ಇದರಿಂದ ಕೋಪಗೊಂಡ ತಾಯಿ ಮಗನನ್ನು ಕೊಲೆ ಮಾಡಿದ್ದಾಳೆ.

    ಶನಿವಾರ ಮನೆಯಿಂದ ಹೊರಡುವಾಗ ಸುಮಲತಾ ಕೊನೆಗೂ ಅವನನ್ನು ಮುಗಿಸಿ ಬಿಟ್ಟೆ ಎಂದು ಹೇಳಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡ ನೆರೆಹೊರೆಯವರು ಅನುಮಾನಗೊಂಡು ಮನೆ ಒಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿದ್ಧಾರ್ಥ್ ಮೃತದೇಹ ಪತ್ತೆಯಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆ ಕುರಿತಂತೆ ಆರೋಪಿ ಸುಮಲತಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ (302)ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ, ಮನವಿ ಮಾಡ್ಕೊಂಡ ಮುಸ್ಲಿಂ ಮಹಿಳೆ

    ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ, ಮನವಿ ಮಾಡ್ಕೊಂಡ ಮುಸ್ಲಿಂ ಮಹಿಳೆ

    ಹೈದರಾಬಾದ್: ಮುಸ್ಲಿಂ ಮಹಿಳೆಯೊಬ್ಬರು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ತಾಹೇರಾ ಟ್ರಸ್ಟ್‍ನ ಸಂಘಟಕರಾಗಿರುವ ಜಹರಾ ಬೇಗಂ, ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದ ಇತರರಿಗೂ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಮಾಡಬೇಕಾಗಿ ಮನವಿ ಮಾಡಿದ್ದಾರೆ.

    ಮುಸ್ಲಿಮರು ಸೇರಿದಂತೆ ಇತರ ಎಲ್ಲಾ ಧರ್ಮದವರು, ವಿನಾಯಕ ಚತುರ್ಥಿ, ದಸರಾ, ರಾಮ ನವಮಿ ಹಬ್ಬದ ಪೂಜೆಗಳಿಗೆ ಹೇಗೆ ಹಿಂದೂ ಸಹೋದರ-ಸಹೋದರಿಯರಿಗೆ ಧನ ಸಹಾಯ ಮಾಡುತ್ತಿವೋ ಅದೇ ಮಾದರಿ ಶ್ರೀ ರಾಮ ದೇವಾಲಯ ನಿರ್ಮಾಣಕ್ಕೆ ಕೂಡ ದೇಣಿಗೆ ನೀಡೋಣ ಎಂದು ಕರೆ ನೀಡಿದ್ದಾರೆ. ಇದು ಭಾರತದ ಸಂಸ್ಕøತಿ, ಸಂಪ್ರದಾಯ ಮತ್ತು ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ತೋರಿಸುತ್ತಿದೆ.

    ನಿಧಿ ಸಂಗ್ರಹಣಾ ಕಾರ್ಯಕ್ರಮದ ಸಂದರ್ಭದಲ್ಲಿ ಜಹರಾ ಬೇಗಂ, ನಿಧಿ ಸಂಗ್ರಹದ ಮೂಲಕ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಸಹಾಯ ಮಾಡಬೇಕೆಂದು ಮುಸ್ಲಿಂ ಸಮುದಾಯದವರಿಗೆ ಮನವಿ ಮಾಡಿದರು. ಅಲ್ಲದೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಬಹುದು. ಅದು ಹತ್ತು ರೂಪಾಯಿಯಂತಹ ಸಣ್ಣ ಮೊತ್ತ ಆಗಿದ್ದರೂ ಸಹ ನೀಡಬಹುದು ಎಂದು ತಿಳಿಸಿದರು.

    ಕಳೆದ ಹತ್ತು ವರ್ಷಗಳಿಂದ ಹಳ್ಳಿಗಳಲ್ಲಿ ಕೆಲಸ ಮಾಡುವ ವೇಳೆ ಹಲವಾರು ಹಿಂದೂಗಳು ಮಸೀದಿ ನಿರ್ಮಾಣಕ್ಕೆ, ಈದ್ಗಾ ಮತ್ತು ಮುಸ್ಲಿಂ ಸಮುದಾಯದ ಸ್ಮಶಾನ ನಿರ್ಮಾಕ್ಕಾಗಿ ತಮ್ಮ ಭೂಮಿಗಳನ್ನು ದಾನ ಮಾಡಿರುವುದನ್ನು ನೋಡಿದ್ದೇನೆ. ಮುಸ್ಲಿಮೇತರರು ಕೂಡ ತಮ್ಮ ಇಚ್ಛೆ ಪ್ರಕಾರ ಹೆಚ್ಚಿನ ಪ್ರಮಾಣದ ಕೃಷಿ ಭೂಮಿಯನ್ನು ಮುಸ್ಲಿಮರಿಗೆ ದಾನ ಮಾಡಿದ್ದಾರೆ. ಜೊತೆಗೆ ಮಸೀದಿ, ಈದ್ಗಾ, ಸ್ಮಶಾನ ನಿರ್ಮಾಣಕ್ಕೆ ಧನ ಸಹಾಯವನ್ನು ಕೂಡ ಮಾಡಿದ್ದಾರೆ ಎಂದು ಹೇಳಿದರು.

  • ಗೆಳತಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆಗೈದು ಆತ್ಮಹತ್ಯೆಗೆ ಯತ್ನ

    ಗೆಳತಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆಗೈದು ಆತ್ಮಹತ್ಯೆಗೆ ಯತ್ನ

    – ಜೀವನ್ಮರಣ ಹೋರಾಟದಲ್ಲಿ ಯುವತಿ

    ಹೈದರಾಬಾದ್: ಯುವಕನೋರ್ವ ಗೆಳತಿಯ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಇಂದು ನಡೆದಿದೆ.

    ಶ್ರೀಕಾಂತ್ ಗೆಳತಿ ಪ್ರಿಯಾಂಕ ಮೇಲೆ ಚಾಕುವಿನಿಂದ ದಾಳಿ ನಡೆಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಿಯಾಂಕ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ನಡುರಸ್ತೆಯಲ್ಲಿ ದಾಳಿ ನಡೆದಿದ್ದು, ಸ್ಥಳೀಯರು ಇಬ್ಬರನ್ನೂ ಕೆಜಿಹೆಚ್ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವತಿಯ ಕತ್ತಿನ ಭಾಗದಲ್ಲಿ ದೊಡ್ಡ ಪ್ರಮಾಣದ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾಳೆ ಎಂದು ಕೆಜಿಹೆಚ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

    ಶ್ರೀಕಾಂತ್ ಮತ್ತು ಪ್ರಿಯಾಂಕ ಪರಸ್ಪರ ಪ್ರೀತಿಸುತ್ತಿದ್ದರು ಎಂದು ವರದಿಯಾಗಿದ್ದು, ಶ್ರೀಕಾಂತ್ ನ ಈ ನಿರ್ಧಾರಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

     

  • ಕರ್ನೂಲಿನ 27 ವಿದ್ಯಾರ್ಥಿಗಳಿಗೆ ಸೋಂಕು – 4 ಶಾಲೆಗಳು ಬಂದ್‌

    ಕರ್ನೂಲಿನ 27 ವಿದ್ಯಾರ್ಥಿಗಳಿಗೆ ಸೋಂಕು – 4 ಶಾಲೆಗಳು ಬಂದ್‌

    ಕರ್ನೂಲ್‌: ಆಂಧ್ರದ ಕರ್ನೂಲಿನ 27 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ 4 ಖಾಸಗಿ ಶಾಲೆಗಳನ್ನು 10 ದಿನ ಬಂದ್‌ ಮಾಡಲಾಗಿದೆ.

    ಶ್ರಿಶೈಲಂ ಮಂಡಲದ ಸುನ್ನಿಪೆಂಟಾ ಪ್ರದೇಶದ 4 ಶಾಲೆಗಳ 9-10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ 10 ದಿನ ಶಾಲೆಯನ್ನು ಮುಚ್ಚಿ ಸ್ಯಾನಿಟೈಸ್‌ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಪ್ರಕಟಿಸಿದ್ದಾರೆ.

    ವಿದ್ಯಾರ್ಥಿಗಳು ಅಟೋ ರಿಕ್ಷಾದಲ್ಲಿ ಶಾಲೆಗೆ ಆಗಮಿಸುವ ವೇಳೆ ಸೋಂಕು ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 4 ಶಾಲೆಗಳ ಎಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಲಾಗಿದೆ.

    ಈ ಬಗ್ಗೆ ಕರ್ನೂಲ್‌ ಜಿಲ್ಲಾ ಶಿಕ್ಷಣ ಅಧಿಕಾರಿ ಸಾಯಿರಾಮ್‌ ಪ್ರತಿಕ್ರಿಯಿಸಿ, ಪೋಷಕರ ಒಪ್ಪಿಗೆಯ ಹಿನ್ನೆಲೆಯಲ್ಲಿ ಪ್ರೌಢಶಾಲೆ ಮತ್ತು ಕಾಲೇಜುಗಳ 25 -30 ಸಾವಿರ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ಕೋವಿಡ್‌ 19 ನಿಯಮಗಳನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ ಅನ್‌ಲಾಕ್‌ ಮಾರ್ಗಸೂಚಿಯಂತೆ ಆಂಧ್ರ ಪ್ರದೇಶದಲ್ಲಿ 9, 10, ಪದವಿ ಪೂರ್ವ ತರಗತಿಗಳು ಸೆ. 21ರಿಂದ ಆರಂಭಗೊಂಡಿತ್ತು.

  • ಬಿಟೆಕ್ ವಿದ್ಯಾರ್ಥಿನಿ ಕೊಲೆ ಪ್ರಕರಣ- ಪೊಲೀಸರ ಎದುರು ಆರೋಪಿಯ ಅಚ್ಚರಿಯ ಹೇಳಿಕೆ

    ಬಿಟೆಕ್ ವಿದ್ಯಾರ್ಥಿನಿ ಕೊಲೆ ಪ್ರಕರಣ- ಪೊಲೀಸರ ಎದುರು ಆರೋಪಿಯ ಅಚ್ಚರಿಯ ಹೇಳಿಕೆ

    – ಇಬ್ಬರಿಗೂ ವರ್ಷದ ಹಿಂದೆಯೇ ಮದುವೆಯಾಗಿತ್ತು
    – ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಫೋಟೋ

    ಹೈದರಾಬಾದ್: ಆಂಧ್ರ ಪ್ರದೇಶದ ವಿಜಯರವಾಡ ನಗರದ ಬಿಟೆಕ್ ವಿದ್ಯಾರ್ಥಿನಿ ದಿವ್ಯ ತೇಜಸ್ವಿನಿ ಕೊಲೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಲಭಿಸಿದ್ದು, ಪ್ರಕರಣದ ಆರೋಪಿ ನಾಗೇಂದ್ರ ಪೊಲೀಸರ ಎದುರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

    ದಿವ್ಯ ತೇಜಸ್ವಿನಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ನಾಗೇಂದ್ರ ಬಾಬು, ಗುಂಟೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಕೃತ್ಯದ ಕುರಿತು ಪೊಲೀಸರ ಬಳಿ ಹೇಳಿಕೆ ನೀಡಿರುವ ಆರೋಪಿ, ದಿವ್ಯ ತೇಜಸ್ವಿನಿ ಹಾಗೂ ನನಗೆ ಒಂದು ವರ್ಷದ ಹಿಂದೆಯೇ ಮದುವೆಯಾಗಿತ್ತು. ಆಕೆ ಬಲವಂತ ಮಾಡಿದ ಹಿನ್ನೆಲೆಯಲ್ಲೇ ಮದುವೆಯಾಗಿದ್ದೆವು. ಆದರೆ ಆಕೆಯ ಕುಟುಂಬಸ್ಥರು ಕಳೆದ 7 ತಿಂಗಳಿಂದ ನ್ನಿಂದ ಆಕೆಯನ್ನು ದೂರ ಮಾಡಿದ್ದರು. ಮಾತನಾಡಲು ಕೂಡ ಅವಕಾಶ ನೀಡುತ್ತಿರಲಿಲ್ಲ.

    ಮೂರು ವರ್ಷಗಳಿಂದ ನನಗೆ ದಿವ್ಯ ಪರಿಚಯ. ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಕುಟುಂಬಸ್ಥರು ನಮ್ಮ ಮದುವೆಗೆ ಒಪ್ಪಿಗೆ ಸೂಚಿಸಿದ ಕಾರಣ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ, ಇಬ್ಬರೂ ಚಾಕುವಿನಿಂದ ಕತ್ತು ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೇವು ಎಂದು ಮಾಹಿತಿ ನೀಡುವುದಾಗಿ ವರದಿಯಾಗಿದೆ.

    ಇತ್ತ ಮೃತ ವಿದ್ಯಾರ್ಥಿನಿ ಹಾಗೂ ಆರೋಪಿ ನಾಗೇಂದ್ರ ಇಬ್ಬರು ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರೂ ಪ್ರೀತಿ ಮದುವೆಯಾಗಿದ್ದರು ಎಂಬ ಚರ್ಚೆ ನಡೆಯುತ್ತಿದೆ. ಅಲ್ಲದೇ ಇಬ್ಬರ ವಾಟ್ಸಾಪ್ ಚಾಟ್ ಫೋಟೋಗಳು ಸಾಕಷ್ಟು ವೈರಲ್ ಆಗಿದೆ. ಆದರೆ ತಮ್ಮ ಮಗಳಿಗೆ ಮದುವೆಯಾಗಿಲ್ಲ, ಫೋಟೋಗಳು ಎಲ್ಲವೂ ಸುಳ್ಳು ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಗಳನ್ನು ನಿರಾಕರಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿಗುತ್ತಿರುವ ಮಾಹಿತಿಯ ಅನ್ವಯ ಎಲ್ಲಾ ಪ್ರಕಾರಗಳಲ್ಲೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಸಂಪೂರ್ಣ ತನಿಖೆ ಬಳಿಕಷ್ಟೇ ಪ್ರಕರಣದ ಸತ್ಯಾಂಶ ಬೆಳಕಿಗೆ ಬರಬೇಕಿದೆ.