– ಪೆಟ್ರೋಲ್ ಬಂಕ್ ಬಳಿ ಅಡ್ಡಾದಿಡ್ಡಿ ಬೈಕ್ ಚಲಾಯಿಸಿರುವ ದೃಶ್ಯ ಸೆರೆ
ಅಮರಾವತಿ: ಆಂಧ್ರ ಖಾಸಗಿ ಬಸ್ ದುರಂತಕ್ಕೂ ಮುನ್ನ ಬೈಕ್ ಸವಾರ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ್ದ ವಿಡಿಯೋ ವೈರಲ್ ಆಗಿದೆ.
ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಶುಕ್ರವಾರ ಬೆಳಗಿನ ಜಾವ 20 ಜನರನ್ನು ಬಲಿತೆಗೆದುಕೊಂಡ ಭೀಕರ ಬಸ್ ದುರಂತ ತನಿಖೆ ಹೊಸ ತಿರುವು ಪಡೆದುಕೊಂಡಿದೆ. ಅಪಘಾತಕ್ಕೆ ಸ್ವಲ್ಪ ಮೊದಲು ಬೈಕ್ ಚಾಲಕ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೊ ವೈರಲ್ ಆಗಿದೆ. ಇದನ್ನೂ ಓದಿ: Kurnool Bus Fire | ದುರಂತಕ್ಕೀಡಾದ ಖಾಸಗಿ ಬಸ್ ಮೇಲಿದೆ 23 ಸಾವಿರಕ್ಕೂ ಹೆಚ್ಚು ದಂಡ
ಪೆಟ್ರೋಲ್ ಬಂಕ್‌ವೊಂದರಲ್ಲಿ ರಾತ್ರಿ ವೇಳೆ ಬೈಕ್ ಸವಾರ ಪೆಟ್ರೋಲ್ ಹಾಕಿಸಿದ್ದಾನೆ. ಆತ ಕುಡಿದ ಮತ್ತಿನಲ್ಲಿದ್ದಂತೆ ವರ್ತಿಸಿದ್ದಾನೆ. ಸ್ಟ್ಯಾಂಡ್ ಹಾಕಿದ್ದ ಬೈಕನ್ನು ಹಾಗೆಯೇ ತಿರುಗಿಸಿ ಸ್ಟಾರ್ಟ್ ಮಾಡಿಕೊಂಡು ಅಡ್ಡಾದಿಡ್ಡಿ ಬೈಕ್ ಚಲಾಯಿಸಿರುವುದು ಕಂಡುಬಂದಿದೆ.
ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಖಾಸಗಿ ಐಷಾರಾಮಿ ಬಸ್‌ಗೆ ಡಿಕ್ಕಿ ಹೊಡೆಯುವ ಸ್ವಲ್ಪ ಸಮಯದ ಮೊದಲು ಬೈಕ್ ಸವಾರ ಶಿವಶಂಕರ್ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದಾನೆ. ಡಿಕ್ಕಿಯ ನಂತರ ವಿ ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿದ್ದು, ಶಿವಶಂಕರ್ ಅವರ ಬೈಕನ್ನು ಸುಮಾರು 200 ಮೀಟರ್‌ಗಳಷ್ಟು ಎಳೆದೊಯ್ದಿದೆ. ಬೈಕ್‌ನಿಂದ ಘರ್ಷಣೆ ಮತ್ತು ಇಂಧನ ಸೋರಿಕೆಯಿಂದಾಗಿ ಬಸ್‌ಗೆ ಭಾರಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ದೃಢಪಡಿಸಿವೆ. ಇದನ್ನೂ ಓದಿ: Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ
ತೆಲಂಗಾಣ ಸಚಿವ ಜೂಪಲ್ಲಿ ಕೃಷ್ಣ ರಾವ್ ಅವರು ಅಪಘಾತಕ್ಕೆ ಬಸ್ ಚಾಲಕ ಮತ್ತು ಟ್ರಾವೆಲ್ ಏಜೆನ್ಸಿಯನ್ನು ದೂಷಿಸಿದ್ದಾರೆ. ಇಬ್ಬರನ್ನೂ ಬಂಧಿಸಿ ನಿರ್ಲಕ್ಷ್ಯದ ಚಾಲನೆಯ ಆರೋಪ ಹೊರಿಸಲಾಗಿದೆ.
ಬೆಂಗಳೂರು: ಆಂಧ್ರದಲ್ಲಿ ರಾಜ್ಯದ ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿದ್ದು, ಶೀಘ್ರವೇ ತನಿಖೆಯಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B Y Vijayendra) ಆಗ್ರಹಿಸಿದ್ದಾರೆ.
ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರಾಗಿದ್ದ ಕೆ.ವಿ. ಪ್ರಶಾಂತ್ ರೆಡ್ಡಿ ಹಾಗೂ ಅವರ ತಂದೆ ವೀರಸ್ವಾಮಿರೆಡ್ಡಿ ಅವರು ಹತ್ಯೆಗೀಡಾಗಿರುವ ಘಟನೆ ಅತ್ಯಂತ ಅಮಾನವೀಯ ಹಾಗೂ ದುಃಖಕರ, ಈ ದುರ್ಘಟನೆಯನ್ನು ಖಂಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರುವೆ.
— Vijayendra Yediyurappa (@BYVijayendra) July 23, 2025
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರಾಗಿದ್ದ ಕೆ.ವಿ.ಪ್ರಶಾಂತ್ ರೆಡ್ಡಿ ಹಾಗೂ ಅವರ ತಂದೆ ವೀರಸ್ವಾಮಿರೆಡ್ಡಿ ಅವರು ಹತ್ಯೆಗೀಡಾಗಿರುವ ಘಟನೆ ಅತ್ಯಂತ ಅಮಾನವೀಯ ಹಾಗೂ ದುಃಖಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಂಧ್ರದಲ್ಲಿ ಬೆಂಗಳೂರಿನ ಉದ್ಯಮಿಗಳ ಅಪಹರಿಸಿ ಕೊಲೆ
ಏನಿದು ಪ್ರಕರಣ?
ಮಂಗಳವಾರ (ಜು.22) ರಾತ್ರಿ ಆಂಧ್ರದಲ್ಲಿದ್ದ ವೀರಸ್ವಾಮಿರೆಡ್ಡಿ ಹಾಗೂ ಕೆ.ವಿ.ಪ್ರಶಾಂತ್ ರೆಡ್ಡಿ ಅವರ ಮಗ ಬುಧವಾರ ಚೆಕ್‌ಬೌನ್ಸ್ ಪ್ರಕರಣ ಸಂಬಂಧ ಕೋರ್ಟ್ಗೆ ತೆರಳುತ್ತಿದ್ದರು. ಈ ವೇಳೆ 6 ಜನ ದುರ್ಷ್ಕಮಿಗಳು ಕಪ್ಪು ಬಣ್ಣದ ಕಾರಿನಲ್ಲಿ ಬಂದು ಇಬ್ಬರನ್ನು ಅಪಹರಿಸಿ ಬಳಿಕ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.
-ಹನಿಮೂನ್ ಹತ್ಯೆಯಂತೆ ಕೊಲ್ಲಲು ನಿರ್ಧರಿಸಿದ್ದ ಆರೋಪಿ ಐಶ್ವರ್ಯ -ಕೊಲೆ ಬಳಿಕ 20 ಲಕ್ಷ ಸಾಲ ಪಡೆದು ಲಡಾಖ್, ಅಂಡಮಾನ್ ಹೋಗುವ ಪ್ಲ್ಯಾನ್ ಮಾಡಿದ್ದ ಜೋಡಿ
ಹೈದರಾಬಾದ್: ಮದುವೆಯಾದ ಒಂದು ತಿಂಗಳ ಬಳಿಕ ಪತ್ನಿ, ಆಕೆಯ ಪ್ರಿಯಕರ ಹಾಗೂ ಪತ್ನಿಯ ತಾಯಿ ಸೇರಿಕೊಂಡು ಗಂಡನನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಸಂಗತಿಗಳು ಬಯಲಾಗುತ್ತಿವೆ.
ಹೌದು, ಕೊಲೆಗೂ ಮುನ್ನ ಆರೋಪಿ ಐಶ್ವರ್ಯ ಹಾಗೂ ಆಕೆಯ ಪ್ರಿಯಕರ ತಿರುಮಲ್ ರಾವ್ (Tirumal Rao) ಸೇರಿಕೊಂಡು ಮೇಘಾಲಯ ಹನಿಮೂನ್ ಹತ್ಯೆಯ ಕುರಿತು ಚರ್ಚಿಸಿದ್ದರು. ಈ ಕುರಿತು ತನಿಖೆ ವೇಳೆ ಆರೋಪಿಗಳಿಬ್ಬರು ಮಾಹಿತಿ ಬಿಚ್ಚಿಟ್ಟಿದ್ದು, ಪ್ರಾರಂಭದಲ್ಲಿ ಮೇಘಾಲಯದ (Meghalaya) ರಾಜಾ ರಘುವಂಶಿಯ (Raja Raghuvanshi) ಕೊಲೆ ನಡೆದ ರೀತಿಯಲ್ಲಿ ತೇಜೇಶ್ವರ್‌ನ್ನು ಕೊಲ್ಲಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಿಗೆ ಪತಿ ಶವವಾಗಿ ಪತ್ತೆ – ಬ್ಯಾಂಕ್ ಉದ್ಯೋಗಿ ಜೊತೆಗಿನ ಅಫೇರ್ ಕಾರಣ; ರಹಸ್ಯ ಬಯಲು
ಪ್ಲ್ಯಾನ್ ಏನಿತ್ತು?
ಮೊದಲಿಗೆ ಐಶ್ವರ್ಯ ಹಾಗೂ ತೇಜೇಶ್ವರ್ ಇಬ್ಬರು ಸೇರಿಕೊಂಡು ಬೈಕ್‌ನಲ್ಲಿ ತೆರಳುತ್ತಾರೆ. ಮಾರ್ಗಮಧ್ಯೆ ಹಂತಕರು ಅವರಿಬ್ಬರನ್ನು ಅಡ್ಡಗಟ್ಟಿ, ತೇಜೇಶ್ವರ್‌ನನ್ನು ಕೊಲೆ ಮಾಡುತ್ತಾರೆ. ಬಳಿಕ ಐಶ್ವರ್ಯ ಪ್ರಿಯಕರ ತಿರುಮಲ್ ರಾವ್ ಜೊತೆ ಅಲ್ಲಿಂದ ಪರಾರಿಯಾಗುತ್ತಾಳೆ. ಇದರಿಂದ ಪೊಲೀಸರು ಗೊಂದಲಕ್ಕೊಳಗಾಗಿ, ಯಾರೋ ಕೊಲೆ ಮಾಡಿ, ಐಶ್ವರ್ಯಳನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದುಕೊಳ್ಳುತ್ತಾರೆ ಎಂದು ಪ್ಲ್ಯಾನ್ ಮಾಡಿದ್ದರು. ಇವರಿಬ್ಬರು ಪ್ಲ್ಯಾನ್ ಮಾಡಿದಂತೆಯೇ ಮೇಘಾಲಯದಲ್ಲಿ ರಾಜಾ ರಘುವಂಶಿಯ ಕೊಲೆ ನಡೆದಿತ್ತು. ಆದರೆ ಮೇಘಾಲಯ ಪೊಲೀಸರ ತನಿಖೆ ವೇಳೆ ಸೋನಮ್ ಸಿಕ್ಕಿಬಿದ್ದಳು, ಕೊನೆಗೆ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಳು. ಹೀಗಾಗಿ ತಮ್ಮ ಕೇಸ್‌ಲ್ಲಿ ಕೊನೆಗೆ ಹೀಗಾಗಬಹುದು ಎಂಬ ಭಯದಿಂದ ಈ ಪ್ಲ್ಯಾನ್ ಅನ್ನು ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ.
ಅದಲ್ಲದೇ ಐಶ್ವರ್ಯ ತನ್ನ ಪತಿಯ ಚಲನವಲನಗಳನ್ನು ಪತ್ತೆಹಚ್ಚಲು ಆತನ ಬೈಕ್‌ನಲ್ಲಿ ಜಿಪಿಎಸ್‌ನ್ನು ಅಳವಡಿಸಿದ್ದಳು. ಜೊತೆಗೆ ಇದೆಲ್ಲವನ್ನು ನೋಡಿಕೊಳ್ಳಲು ರಾಜೇಶ್ ಎಂಬಾತನನ್ನು ನೇಮಿಸಿದ್ದಳು. ಕೊಲೆ ಬಳಿಕ 20 ಲಕ್ಷ ಸಾಲ ಪಡೆದು ಐಶ್ವರ್ಯ ಹಾಗೂ ರಾವ್ ಇಬ್ಬರು ಸೇರಿಕೊಂಡು ಲಡಾಖ್‌ಗೆ ಹೋಗುವ ಪ್ಲ್ಯಾನ್ ಮಾಡಿದ್ದರು. ಜೊತೆಗೆ ಟಿಕೆಟ್ ಕೂಡ ಬುಕ್ ಮಾಡಿದ್ದರು. ಜೊತೆಗೆ ಅಂಡಮಾನ್‌ಗೆ ಹೋಗುವ ಯೋಜನೆಯೂ ಇತ್ತು ಎಂದು ತಿಳಿದುಬಂದಿದೆ.
ಒಟ್ಟು ತೇಜೇಶ್ವರ್‌ನ್ನು ಕೊಲೆ ಮಾಡಲು ಐದು ಬಾರಿ ಯತ್ನಿಸಲಾಗಿತ್ತು ಎಂದು ತಿಳಿದುಬಂದಿದೆ. ಸದ್ಯ ಪ್ರಕರಣ ಸಂಬಂಧ 8 ಜನರನ್ನು ಬಂಧಿಸಲಾಗಿದ್ದು, ಪತ್ನಿ ಐಶ್ವರ್ಯ, ಆಕೆಯ ಪ್ರಿಯಕರ ತಿರುಮಲ್ ರಾವ್, ಆಕೆಯ ತಾಯಿ ಸುಜಾತಾ, ತಿರುಮಲ್ ರಾವ್ ತಂದೆ, ಮಾಜಿ ಹೆಡ್ ಕಾನ್‌ಸ್ಟೆಬಲ್, ಹಂತಕರಾದ ನಾಗೇಶ್, ಪರಶುರಾಮ್ ಮತ್ತು ರಾಜೇಶ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: 10 ದಿನದಲ್ಲಿ ಪ್ರೀತಿ, ಪ್ರಣಯ – ಇನ್ಸ್ಟಾದಲ್ಲಿ ಪರಿಚಯವಾದ ವಿವಾಹಿತ ಪ್ರಿಯತಮೆಯ ಕೊಲೆಯಲ್ಲಿ ಅಂತ್ಯ!
ತಾಯಿ-ಮಗಳ ತ್ರಿಕೋನ ಪ್ರೇಮ:
ಆರೋಪಿ ಐಶ್ವರ್ಯ ತಾಯಿ ಸುಜಾತಾ ಬ್ಯಾಂಕ್‌ನಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಐಶ್ವರ್ಯ ತಾಯಿಗೆ ತಿರುಮಲ್ ರಾವ್ ಎಂಬ ಅಧಿಕಾರಿಯ ಪರಿಚಯವಾಗಿತ್ತು. ಬಳಿಕ 2016ರಲ್ಲಿ ಅವರಿಬ್ಬರ ನಡುವೆ ಸಂಬಂಧ ಬೆಳೆಯಿತು. ಅದಾದ ನಂತರ ಒಂದು ಬಾರಿ ಸುಜಾತಾ ರಜೆಗೆಂದು ಹೋದಾಗ ಐಶ್ವರ್ಯ ಹಾಗೂ ತಿರುಮಲ್ ರಾವ್ ನಡುವೆ ಸಂಬಂಧ ಬೆಳೆಯಿತು. ಬಳಿಕ 2019ರಲ್ಲಿ ತಿರುಮಲ್ ರಾವ್‌ಗೆ ಬೇರೆಯೊಬ್ಬರ ಜೊತೆ ಮದುವೆಯಾಯಿತು. ಆತನು ಕೂಡ ತನ್ನ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಮಗಳು ತಿರುಮಲ್ ರಾವ್ ಜೊತೆ ಸಂಬಂಧ ಹೊಂದಿದ್ದಾಳೆಂದು ಸುಜಾತಾಗೆ ಗೊತ್ತಾದಾಗ ಆ ಸಂಬಂಧವನ್ನು ಕೊನೆಗೊಳಿಸುವಂತೆ ತಿಳಿಸಿದ್ದಳು. ಬಳಿಕ ತೇಜೇಶ್ವರ್‌ನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಳು. ಅದಾದ ನಂತರ ಫೆಬ್ರವರಿಯಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಆದರೆ ಅದೇ ವೇಳೆ ಐಶ್ವರ್ಯ ಕಾಣೆಯಾದಳು. ಓಡಿಹೋಗಿರಬಹುದು ಅಂದುಕೊಂಡಿದ್ದೆವು, ಆದರೆ ಸ್ವಲ್ಪ ದಿನಗಳ ನಂತರ ಮನೆಗೆ ಮರಳಿದ ಐಶ್ವರ್ಯ, ನನ್ನ ಸ್ನೇಹಿತೆಯೊಬ್ಬಳು ವರದಕ್ಷಿಣೆ ಕಿರುಕುಳದಿಂದ ಬಳಲುತ್ತಿದ್ದಳು. ಆಕೆಯನ್ನು ಭೇಟಿಯಾಗಲು ಹೋಗಿದ್ದೆ ಅಂತ ಹೇಳಿದ್ದಳು. ಬಳಿಕ ನಾನು ತೇಜೇಶ್ವರ್‌ನ್ನನ್ನ ಪ್ರೀತಿಸುತ್ತಿದ್ದೇನೆ ಅವನನ್ನೇ ಮದುವೆಯಾಗುತ್ತೇನೆ ಎಂದಿದ್ದಳು. ಆದರೆ ಕುಟುಂಬಸ್ಥರ ಮಾಹಿತಿ ಪ್ರಕಾರ, ತೇಜೇಶ್ವರ್‌ಗೆ ಆಕೆಯೊಂದಿಗೆ ಮದ್ವೆ ಬೇಡ ಅಂತಲೇ ಹೇಳಿದ್ದೆವು. ಆದ್ರೆ ಮಗ ನಮ್ಮ ಮಾತು ಕೇಳದಿದ್ದರಿಂದ ಮೇ ತಿಂಗಳಲ್ಲಿ ಮದುವೆ ನಿಶ್ಚಯಿಸಲಾಯಿತು ಎಂದರು. ಅವನು ಕಾಣೆಯಾದ ಬಳಿಕ ಅವಳು ಅಳುತ್ತಿರಲಿಲ್ಲ, ದುಃಖ ಪಡಲಿಲ್ಲ. ಇದೆಲ್ಲವನ್ನು ಗಮನಿಸಿ ನಮಗೆ ಆಕೆಯ ಮೇಲೆ ಅನುಮಾನ ಉಂಟಾಗಿತ್ತು. ಹೀಗಾಗಿ ನಾವು ಆಕೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ತಿಳಿಸಿದ್ದಾರೆ.
ಘಟನೆ ಏನು?
ಮೇ 18ರಂದು ಮೃತ ತೇಜೇಶ್ವರ್ ಹಾಗೂ ಐಶ್ವರ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೂ.17ರಂದು ತೇಜೇಶ್ವರ್ ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರು, ಕರ್ನೂಲ್ ನಗರದ ಸುಮಾರು 30-40 ಕಿ.ಮೀ ದೂರದಲ್ಲಿರುವ ಪಣ್ಯಂ ಮಂಡಲದ ಸುಗಲಿಮೆಟ್ಟುವಿನಲ್ಲಿ ಆತನ ಮೃತದೇಹವನ್ನು ಪತ್ತೆಹಚ್ಚಿದ್ದರು. ಆತನ ಮುಂಗೈಯಲ್ಲಿ ತೆಲುಗುವಿನಲ್ಲಿ ಅಮ್ಮ ಎಂದು ಬರೆಯಲಾಗಿತ್ತು. ದೇಹದ ಮೇಲೆ ಚಾಕುವಿನಿಂದಾದ ಗಾಯದ ಗುರುತು, ಕುತ್ತಿಗೆ ಸೀಳಿದ ಗಾಯಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ:Honeymoon Murder | ಕೊನೆಗೂ ತಮ್ಮಿಬ್ಬರ ಸಂಬಂಧ ಒಪ್ಪಿಕೊಂಡ ಸೋನಂ ರಘುವಂಶಿ – ರಾಜ್
ಅಮರಾವತಿ: ಆಂಧ್ರಪ್ರದೇಶದಲ್ಲಿ (Andhra Pradesh) ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ (Jagan Mohan Reddy) ಬೃಹತ್ ರ‍್ಯಾಲಿ ನಡೆಸುವ ವೇಳೆ ಭಾರೀ ಅವಘಡ ಸಂಭವಿಸಿದೆ. ಜಗನ್ ತೆರಳುತ್ತಿದ್ದ ಕಾರಿನಡಿ ಸಿಲುಕಿ 55 ವರ್ಷ ವ್ಯಕ್ತಿ ಮೃತಪಟ್ಟಿದ್ದಾರೆ.
ನವೀನ್, ಸಂತೋಷ್, ಲೋಕೇಶ್ ಸೇರಿ ಒಟ್ಟು 6 ಮಂದಿ ಆಂಧ್ರಪ್ರದೇಶದ ಕಡೆಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಕಾರು ಕರ್ನೂಲ್ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ನವೀನ್, ಸಂತೋಷ್ ಹಾಗೂ ಲೋಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಮಹಾಮಳೆಗೆ ಕಾಂಪೌಂಡ್ ಗೋಡೆ ಕುಸಿದು ಮಹಿಳೆ ಸಾವು
ಇನ್ನುಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ನೂಲ್ ಪೊಲೀಸ್ ಠಾಣೆಯಲ್ಲಿ(Kurnool Police Station) ಪ್ರಕರಣ ದಾಖಲಾಗಿದೆ.
ಹೈದರಾಬಾದ್: ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹೈದರಾಬಾದ್‌ನಲ್ಲಿ (Hyderabad) ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು (Suspected Terrorists) ಬಂಧಿಸಿದ್ದಾರೆ.
ವಿಜಯನಗರದ ಸಿರಾಜ್ ಮತ್ತು ಹೈದರಾಬಾದ್‌ನ ಸಮೀರ್ ಬಂಧಿತರು. ಯೋಜನೆಯ ಭಾಗವಾಗಿ ಸಿರಾಜ್ ವಿಜಯನಗರದಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದ. ಸೌದಿ ಅರೇಬಿಯಾ ಮೂಲದ ಐಸಿಸ್ ಮಾಡ್ಯೂಲ್ ಇವರಿಗೆ ಹೈದರಾಬಾದ್‌ನಲ್ಲಿ ದಾಳಿ ನಡೆಸಲು ಮಾರ್ಗದರ್ಶನ ನೀಡುತ್ತಿದ್ದ. ಆಂಧ್ರಪ್ರದೇಶದ ವಿಜಯನಗರದಲ್ಲಿ ಸಿರಾಜ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಇನ್ನೋರ್ವ ಶಂಕಿತ ಉಗ್ರನ ಬಗ್ಗೆ ಸಿರಾಜ್ ಬಾಯ್ಬಿಟ್ಟಿದ್ದಾನೆ. ಬಳಿಕ ಪೊಲೀಸರು ಸಮೀರ್‌ನನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಏರೋಸ್ಪೇಸ್ ಎಂಜಿನಿಯರ್ ಸಾವು ಕೇಸ್‌ಗೆ ಟ್ವಿಸ್ಟ್ – 2 ಮಕ್ಕಳ ತಂದೆಯೊಂದಿಗೆ ಪ್ರೇಮ ವೈಫಲ್ಯ
ಶಂಕಿತ ಉಗ್ರರು ಅಲ್ ಹಿಂದ್ ಇತ್ತೆಹಾದುಲ್ ಮುಸ್ಲಿಮೀನ್ ಸಂಘಟನೆ ನಡೆಸುತ್ತಿದ್ದರು. ಸಮೀರ್ ಇಂಜಿನಿಯರಿಂಗ್ ಮುಗಿಸಿ, ಲಿಫ್ಟ್ ಆಪರೇಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಶಂಕಿತರು ಬ್ಲಾಸ್ಟ್ ಸಲುವಾಗಿ ಪೊಟ್ಯಾಸಿಯಮ್ ಕ್ಲೊರೇಡ್ ಹಾಗೂ ಸಲ್ಫರ್‌ನಂತಹ ರಾಸಾಯನಿಕಗಳನ್ನು ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದರು. ಈ ತಿಂಗಳು 21-22 ರಂದು ವಿಜಯನಗರ ಪ್ರದೇಶದಲ್ಲಿ ಪೂರ್ವಭ್ಯಾಸಕ್ಕೆ ತಯಾರಿ ಮಾಡಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಾನ್ಯತಾ ಟೆಕ್ ಪಾರ್ಕ್ ಜಲಾವೃತ – ಪರ್ಯಾಯ ಮಾರ್ಗ ಬಳಸುವಂತೆ ಮನವಿ
ಶಂಕಿತ ಉಗ್ರರ ಮನೆಯಿಂದ ಅಮೋನಿಯಾ, ಸಲ್ಫರ್ ಮತ್ತು ಅಲ್ಯೂಮಿನಿಯಂ ಪುಡಿ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಇಬ್ಬರು ಶಂಕಿತ ಉಗ್ರರನ್ನು ಶೀಘ್ರದಲ್ಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ ನಾಲ್ಕು ದಿನ ರಾಜ್ಯಕ್ಕೆ ಮಳೆ ಎಚ್ಚರಿಕೆ – ಬೆಂಗಳೂರಿಗೆ ಇಂದು ಯೆಲ್ಲೋ ಅಲರ್ಟ್
ಚಾಮರಾಜನಗರ: ಆಂಧ್ರ ಪ್ರದೇಶದ ಬಹುಕೋಟಿ ಅಬಕಾರಿ ಹಗರಣ (Andhra Pradesh Excise Scam) ಪ್ರಕರಣದ ಪ್ರಮುಖ ಆರೋಪಿ ಬಾಲಾಜಿ ಗೋವಿಂದಪ್ಪನನ್ನು ಎಸ್‌ಐಟಿ (SIT) ವಶಕ್ಕೆ ಪಡೆದಿದೆ.
ಆರೋಪಿ ಬಾಲಾಜಿ ಗೋವಿಂದಪ್ಪನನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು ಆಂಧ್ರ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಜಗನ್‌ಮೋಹನ್ ರೆಡ್ಡಿ ಪತ್ನಿ ವೈಎಸ್ ಭಾರತಿ ಅಧ್ಯಕ್ಷೆಯಾಗಿರುವ ಭಾರತಿ ಸಿಮೆಂಟ್ ಪ್ರೈವೆಟ್ ಲಿಮಿಟೆಡ್‌ನ ನಿರ್ದೇಶಕ ಹಾಗು ಲೆಕ್ಕಪರಿಶೋಧಕರಾಗಿರುವ ಬಾಲಾಜಿ ಗೋವಿಂದಪ್ಪ ಬಿಳಿಗಿರಿರಂಗನ ಬೆಟ್ಟದ ಖಾಸಗಿ ರೆಸಾರ್ಟ್‌ನಲ್ಲಿ ಕಳೆದ ಒಂದು ವಾರದಿಂದ ಉಳಿದುಕೊಂಡಿದ್ದರು. ಇದನ್ನೂ ಓದಿ: ಅವರು ನಮ್ಮ ತಲೆಗೆ ಹೊಡೆದ್ರೆ, ನಾವು ಎದೆ ಬಗೆಯುತ್ತೇವೆ: ಪಾಕ್‌ಗೆ ರಾಜನಾಥ್ ಸಿಂಗ್ ಖಡಕ್ ಸಂದೇಶ
ಜಗನ್‌ಮೋಹನ್ ರೆಡ್ಡಿ ಸಿಎಂ ಆಗಿದ್ದ ಅವಧಿಯಲ್ಲಿ ಅಬಕಾರಿ ಹಗರಣ ನಡೆದಿತ್ತು. ಈ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಬಾಲಾಜಿ ಗೋವಿಂದಪ್ಪಗೆ ನೋಟಿಸ್ ನೀಡಿತ್ತು. ನೋಟಿಸ್ ಜಾರಿಯಾದ ಬಳಿಕ ಆಂಧ್ರದಿಂದ ಗೋವಿಂದಪ್ಪ ನಾಪತ್ತೆಯಾಗಿದ್ದರು. ಆರೋಪಿಯ ಜಾಡು ಪತ್ತೆ ಮಾಡಿದ ಎಸ್‌ಐಟಿ ಬಾಲಾಜಿ ಗೋವಿಂದಪ್ಪನನ್ನು ವಶಕ್ಕೆ ಪಡೆದಿದೆ. ಇದನ್ನೂ ಓದಿ: ಪಾಕ್ ಧ್ವಜ, ಸರಕುಗಳ ಮಾರಾಟ ನಿಲ್ಲಿಸುವಂತೆ ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರ ವಾರ್ನಿಂಗ್
ಆರೋಪಿ ಬಾಲಾಜಿ ಗೋವಿಂದಪ್ಪ ರಾತ್ರಿ ಸಂಚಾರ ನಿರ್ಬಂಧ ಉಲ್ಲಂಘನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಆರೋಪವನ್ನು ಬಿಆರ್‌ಟಿ ಅರಣ್ಯಾಧಿಕಾರಿಗಳು ನಿರಾಕರಿಸಿದ್ದಾರೆ. ಬಿಳಿಗಿರಿರಂಗನಬೆಟ್ಟಕ್ಕೆ ಗುಂಬಳ್ಳಿ ಚೆಕ್‌ಪೋಸ್ಟ್ ಮೂಲಕ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಪ್ರವೇಶ ನಿರ್ಬಂಧ ಇದೆ. ಈ ಸಮಯದಲ್ಲಿ ಯಾರಿಗೂ ಪ್ರವೇಶಾವಕಾಶ ನೀಡಿಲ್ಲ. ಆರೋಪಿತ ವ್ಯಕ್ತಿ ಮೇ 8 ರಂದು ಬೆಳಿಗ್ಗೆ 9 ಗಂಟೆ ನಂತರ ಬಿಳಿಗಿರಿರಂಗನ ಬೆಟ್ಟಕ್ಕೆ ಬಂದಿದ್ದಾರೆ. ಸಿಸಿಟಿವಿ ಪರಿಶೀಲಿಸಲಾಗಿದೆ. ನಿರ್ಬಂಧಿತ ಅವಧಿಯಲ್ಲಿ ಯಾವುದೇ ಖಾಸಗಿ ವಾಹನಕ್ಕೆ ಪ್ರವೇಶ ನೀಡಿಲ್ಲ ಎಂದು ಬಿಆರ್‌ಟಿ ಯಳಂದೂರು ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ದಾಳಿ ನಂತ್ರ ಪಾಕ್‌ನಲ್ಲಿ ಪರಮಾಣು ವಿಕಿರಣ ಸೋರಿಕೆ ಆಗ್ತಿದ್ಯಾ? ಮತ್ತೆ ಜಗತ್ತಿನ ಮುಂದೆ ಬೆತ್ತಲಾದ ಪಾಕ್
ಹೈದರಾಬಾದ್: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಾಸಾ ಬಳಿ ಇಂದು ಬೆಳಗ್ಗೆ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ವಿಶಾಖಪಟ್ಟಣಂ ಮಾರ್ಗವಾಗಿ ಪಶ್ಚಿಮ ಬಂಗಾಳದ ಶಾಲಿಮಾರ್‌ಗೆ ಪ್ರಯಾಣಿಸುತ್ತಿದ್ದ ಫಲಕ್‌ನುಮಾ ಎಕ್ಸ್‌ಪ್ರೆಸ್ ರೈಲು (Falaknuma Superfast Express) ಅನಿರೀಕ್ಷಿತವಾಗಿ ಬೇರ್ಪಟ್ಟಿದೆ (2 ತುಂಡಾಗಿ – Train Splits). ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೇ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈಲ್ವೆ ಅಧಿಕಾರಿಗಳು (Railway Officials), ರೈಲಿನಲ್ಲಿ ಯಾವುದೇ ಅಲರ್ಟ್ ತಿಳಿಯದೇ ಏಕಾಏಕಿ ಎರಡು ಎಸಿ ಬೋಗಿಗಳು ಬೇರ್ಪಟ್ಟಿವೆ. ಕೂಡಲೇ ಎಚ್ಚೆತ್ತ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿ, ದೊಡ್ಡ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಲಿ, ಸಾವು-ನೋವಿಗಳಾಗಲಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಬಳಿಕ ಏನಾಯ್ತು?
ವಿಷಯ ತಿಳಿಯುತ್ತಿದ್ದಂತೆ ರೈಲ್ವೇ ಸಿಬ್ಬಂದಿ ಘಟನಾ ಸ್ಥಳಕ್ಕೆ ತ್ವರಿತವಾಗಿ ಭೇಟಿ ನೀಡಿದ್ದಾರೆ. ಅಗತ್ಯ ರಿಪೇರಿ ಮಾಡಿ ಬೇರ್ಪಟ್ಟ ಬೋಗಿಗಳನ್ನು ಮತ್ತೆ ಜೋಡಿಸಿದ್ದಾರೆ. ಸುರಕ್ಷತೆಯ ಎಲ್ಲಾ ಪ್ರೋಟೋಕಾಲ್ (ಶಿಷ್ಟಾಚಾರ) ಪಾಲಿಸಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿದೆ. ಆದಾಗ್ಯೂ ಏಕಾಏಕಿ ಬೋಗಿಗಳು ಬೇರ್ಪಡಲು ಕಾರಣವೇನು ಅನ್ನೋದರ ಕುರಿತು ರೈಲ್ವೇ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ರೈಲು ಸಂಚಾರದ ಮೇಲೆ ಪರಿಣಾಮ
ಫಲಕ್‌ನುಮಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬೇರ್ಪಟ್ಟ ಕಾರಣದಿಂದಾಗಿ ಬ್ರಹ್ಮಪುರ ಮತ್ತು ವಿಶಾಖಪಟ್ಟಣಂ ನಡುವಿನ ರೈಲು ಸೇವೆಗಳಲ್ಲಿ ತಾತ್ಕಾಲಿಕ ಅಡಚಣೆ ಉಂಟಾಗಿತ್ತು.
ಅಮರಾವತಿ: 14 ವರ್ಷದ ಭಾರತೀಯ ಅಮೆರಿಕನ್ ವಿದ್ಯಾರ್ಥಿ ಹೃದಯ ಸಂಬಂಧಿ ಕಾಯಿಲೆ (Heart Disease) ಪತ್ತೆಹಚ್ಚುವ ಕೃತಕ ಬುದ್ಧಿಮತ್ತೆ ಆಧಾರಿತ (AI) ಅಪ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು.. ಎನ್‌ಆರ್‌ಐ ವಿದ್ಯಾರ್ಥಿ ಸಿದ್ಧಾರ್ಥ್ ನಂದ್ಯಾಲ (Siddharth Nandyala) ಕೇವಲ 7 ಸೆಕೆಂಡುಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಹಚ್ಚುವ ʻಸಿರ್ಕಾಡಿಯಾ-ವಿʼ (CircadiaV) ಎಐ ಆಧಾರಿತ ಆ್ಯಪ್‌ವೊಂದನ್ನ ಸಿದ್ಧಪಡಿಸಿದ್ದಾರೆ. ಅನಂತರಪುರದ ಮೂಲದ ಸಿದ್ಧಾರ್ಥ್ ಸದ್ಯ ಅಮೆರಿಕದ ಡಲ್ಲಾಸ್ ನಗರದಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಿಂದ ದೇಶದ ಸಾಮೂಹಿಕ ಪ್ರಜ್ಞೆ ಬಲಗೊಂಡಿದೆ – ಲೋಕಸಭೆಯಲ್ಲಿ ಮೋದಿ ಶ್ಲಾಘನೆ
14ರ ವಿದ್ಯಾರ್ಥಿ ಕಂಡುಹಿಡಿದ ಈ ಆ್ಯಪ್ ಸ್ಮಾರ್ಟ್ ಫೋನ್ ಸಹಾಯದಿಂದ ಹೃದಯ ರಕ್ತನಾಳಗಳ ಕಾಯಿಲೆಯನ್ನು ಬಹುಬೇಗನೆ ಪತ್ತೆಹಚ್ಚುತ್ತದೆ. ಹೃದಯದ ಮಿಡಿತವನ್ನು ಗ್ರಹಿಸುತ್ತದೆ. ಶೇ.96ಕ್ಕಿಂತ ಹೆಚ್ಚು ನಿಖರತೆಯನ್ನು ಸೂಚಿಸುತ್ತದೆ. ಈಗಾಗಲೇ ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆ ಸೇರಿದಂತೆ ಅಮೆರಿಕದಲ್ಲಿ 15,000ಕ್ಕೂ ಹೆಚ್ಚು ರೋಗಿಗಳು ಹಾಗೂ ಭಾರತದಲ್ಲಿ 700 ರೋಗಿಗಳಿಗೆ ಇದನ್ನು ಪರೀಕ್ಷಿಸಲಾಗಿದೆ. ಖುದ್ದು ಸಿದ್ಧಾರ್ಥ್ ಅವರೇ ಸ್ಮಾರ್ಟ್ ಫೋನ್ ಬಳಸಿ ರೋಗಿಗಳನ್ನು ಪರೀಕ್ಷಿಸಿ ಯಶಸ್ವಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮೋದಿ ಬಳಿ ಉದ್ಧವ್ ಠಾಕ್ರೆ ಕ್ಷಮೆಯಾಚಿಸಿ, ಬಿಜೆಪಿ ಜೊತೆ ಮತ್ತೆ ಮೈತ್ರಿಗೆ ಸಿದ್ಧ ಎಂದಿದ್ರು: ಏಕನಾಥ್ ಶಿಂಧೆ
ಸಿಎಂ ಚಂದ್ರಬಾಬು ನಾಯ್ಡು ಅವರು ತಮ್ಮೊಂದಿಗೆ ಚರ್ಚಿಸಲು ಕೇಂದ್ರ ಸಚಿವಾಲಯಕ್ಕೆ ಆಹ್ವಾನಿಸಿದ್ದರು. ಸುಮಾರು ಅರ್ಧಗಂಟೆಗಳ ಕಾಲ ಸಿದ್ಧಾರ್ಥ್ ಜೊತೆಗೆ ಚರ್ಚೆ ನಡೆಸಿದರು. ಇಂತಹ ಪ್ರಯತ್ನಗಳೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡುವಂತೆ ಪ್ರೋತ್ಸಾಹಿಸಿದರು. ಜೊತೆಗೆ ಈ ರೀತಿ ಕೊಡುಗೆಗಳನ್ನು ನೀಡುವ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಸರ್ಕಾರದ ಸಂಪೂರ್ಣ ಬೆಂಬಲ ಇರಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ನಿಮ್ಮನ್ನು ಭಾರತದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದೇವೆ: ಸುನಿತಾ ವಿಲಿಯಮ್ಸ್‌ಗೆ ಮೋದಿ ಪತ್ರ
ಅಮರಾವತಿ: ಇನ್ನುಮುಂದೆ 2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ ನೀಡುವುದಾಗಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಘೋಷಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಳ ವಿಚಾರ ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಮೊನ್ನೆಯಷ್ಟೇ ಮಧ್ಯಪ್ರದೇಶದ ನಿಗಮವೊಂದು ನಾಲ್ಕು ಮಕ್ಕಳನ್ನು ಹೆತ್ತರೇ 1 ಲಕ್ಷ ನಗದು ಬಹುಮಾನ ಘೋಷಿಸಿತ್ತು. ಈ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಈ ಹೇಳಿಕೆ ನೀಡಿದ್ದಾರೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿಲ್ಲದವರು ಸರಪಂಚ್ ಆಗಲು ಸಾಧ್ಯವಿಲ್ಲ. ಪುರಸಭೆ ಕೌನ್ಸಿಲರ್, ಪಾಲಿಕೆ ಮೇಯರ್ ಆಗಲು ಸಾಧ್ಯವಿಲ್ಲ ಎಂದು ನಾಯ್ಡು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕ ಜಂಗಲ್ ರಾಜ್ಯ ಆಗಿದೆ – ಬೀದರ್ ಗುಂಡಿನ ದಾಳಿಗೆ ಬೊಮ್ಮಾಯಿ ದಿಗ್ಭ್ರಮೆ
ಹಳೆ ತಲೆಮಾರಿನವರು ಹೆಚ್ಚೆಚ್ಚು ಮಕ್ಕಳನ್ನು ಹೊಂದಿರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಒಂದು ಮಗುವನ್ನು ಮಾತ್ರ ಪಡೆಯುತ್ತಿದ್ದೀರಿ. ನಿಮ್ಮ ಪೋಷಕರು ನಿಮ್ಮಂತೆಯೇ ಯೋಚಿಸಿದ್ದರೆ ಈ ಜಗತ್ತಿಗೆ ನೀವು ಬರುತ್ತಿರಲಿಲ್ಲ. ಹೀಗೆ ಮಾಡದೇ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ಬಗ್ಗೆ ಗಮನ ಕೊಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 2ನೇ ಹೆಂಡ್ತಿ ಬಿಟ್ಟು ತನ್ನ ಬಳಿಯೇ ಇರುವಂತೆ ಒತ್ತಾಯ – ಮೊದಲ ಹೆಂಡ್ತಿಯನ್ನೇ ಹತ್ಯೆಗೈದ ಗಂಡ