Tag: ಆಂಧ್ರಪ್ರದೇಶ ಡಿಸಿಎಂ

  • ಧರ್ಮಸ್ಥಳ ವಿರುದ್ಧ ಅಪಪ್ರಚಾರ ಆರೋಪ – ಶ್ರೀ ಕ್ಷೇತ್ರದ ಪರ ನಿಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್

    ಧರ್ಮಸ್ಥಳ ವಿರುದ್ಧ ಅಪಪ್ರಚಾರ ಆರೋಪ – ಶ್ರೀ ಕ್ಷೇತ್ರದ ಪರ ನಿಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್

    ಮಂಗಳೂರು: ಧರ್ಮಸ್ಥಳ (Dharmasthala) ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ (Pawan Kalyan) ಶ್ರೀ ಕ್ಷೇತ್ರ ಧರ್ಮಸ್ಥಳದ ಪರ ನಿಂತಿದ್ದಾರೆ.

    ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣ ಆರಂಭದಿಂದಲೂ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಬರುತ್ತಿದೆ. ಇದೀಗ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಆಂಧ್ರಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ನಿಂತಿದ್ದು, ಶ್ರೀ ಮಂಜುನಾಥನ ಸನ್ನಿಧಾನಕ್ಕೆ ಆಗಮಿಸಲಿದ್ದಾರೆ.ಇದನ್ನೂ ಓದಿ: ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಮಾವ ವಿಠಲ ಗೌಡ: ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ

    ಗುರುವಾರ (ಸೆ.11) ಪವನ್ ಕಲ್ಯಾಣ್ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ವಿಶೇಷ ಸೇವೆ ನೆರವೇರಲಿದ್ದು, ಈ ಮೂಲಕ ಕ್ಷೇತ್ರದ ಅಪಪ್ರಚಾರ ವಿರುದ್ಧ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಇದೇ ವೇಳೆ ದೇವಸ್ಥಾನದ ಮುಂಭಾಗದಲ್ಲಿ ವಿಶೇಷ ಆರತಿ ಸೇವೆ ನಡೆಯಲಿದೆ.

  • ಆಂಧ್ರಪ್ರದೇಶ ಡಿಸಿಎಂ ಆಗಿ ಪವನ್‌ ಕಲ್ಯಾಣ್‌ ನೇಮಕ

    ಆಂಧ್ರಪ್ರದೇಶ ಡಿಸಿಎಂ ಆಗಿ ಪವನ್‌ ಕಲ್ಯಾಣ್‌ ನೇಮಕ

    ಅಮರಾವತಿ: ಆಂಧ್ರಪ್ರದೇಶದ (Andhra Pradesh DCM) ನೂತನ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಎಂದು ಸಿಎಂ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ನಾಯ್ಡು, ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾದ ಪವನ್ ಕಲ್ಯಾಣ್ ಅವರಿಗೆ ಅಭಿನಂದನೆಗಳು. ಕ್ಯಾಬಿನೆಟ್‌ನಲ್ಲಿರುವ ನನ್ನ ಎಲ್ಲ ಸಹೋದ್ಯೋಗಿಗಳಿಗೆ ಅವರ ಖಾತೆಗಳನ್ನು ನಿಯೋಜಿಸಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಪವನ್‌ ಕಲ್ಯಾಣ್‌ ಜೊತೆಗಿನ ಫೋಟೋ ಶೇರ್‌ ಮಾಡಿ ಸಂಭ್ರಮಿಸಿದ ರಾಮ್‌ ಚರಣ್‌ ಪತ್ನಿ

    ಒಟ್ಟಾಗಿ ನಾವು ಆಂಧ್ರಪ್ರದೇಶದ ಜನರಿಗೆ ಸೇವೆ ಸಲ್ಲಿಸಲು ಮತ್ತು ಜನಪರ ಆಡಳಿತದ ಯುಗವನ್ನು ಪ್ರಾರಂಭಿಸಲು ಪ್ರತಿಜ್ಞೆ ಮಾಡಿದ್ದೇವೆ. ಸಚಿವರಾಗಿ ನಮ್ಮ ಜನರ ನಿರೀಕ್ಷೆಗಳನ್ನು ಈಡೇರಿಸಲು ನೀವು ಶ್ರಮಿಸುತ್ತೀರಿ ಎಂಬ ವಿಶ್ವಾಸ ನನಗಿದೆ. ಸೇವೆ ಮತ್ತು ಭಕ್ತಿಯ ಈ ಪಯಣವನ್ನು ಆರಂಭಿಸುತ್ತಿರುವ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು ಎಂದು ಸಿಎಂ ತಿಳಿಸಿದ್ದಾರೆ.

    ಪವನ್‌ ಕಲ್ಯಾಣ್‌ ಅವರಿಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಪರಿಸರ, ಅರಣ್ಯ, ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳನ್ನು ನೀಡಲಾಗಿದೆ. ನಾಯ್ಡು ಅವರ ಪುತ್ರ ನಾರಾ ಲೋಕೇಶ್‌ಗೆ ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಖಾತೆಗಳನ್ನು ನೀಡಲಾಗಿದೆ. ಇದನ್ನೂ ಓದಿ: ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು, ಸಚಿವರಾಗಿ ಪವನ್‌ ಕಲ್ಯಾಣ್‌ ಪ್ರಮಾಣವಚನ ಸ್ವೀಕಾರ

    ನಾಯ್ಡು ಅವರು 24 ಸಚಿವರೊಂದಿಗೆ ಬುಧವಾರ ವಿಜಯವಾಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸಮಾರಂಭದಲ್ಲಿ ರಾಜಕೀಯ ಮತ್ತು ತೆಲುಗು ಚಿತ್ರರಂಗದ ಪ್ರಮುಖರು ಭಾಗವಹಿಸಿದ್ದರು.