Tag: ಆಂಧ್ರಪ್ರದೇಶದ

  • ಸಂಕ್ರಾಂತಿ ವೇಳೆ ಕೋಳಿ ಅಂಕಕ್ಕೆ ಬ್ರೇಕ್ ಹಾಕಲು ಪೊಲೀಸರು ಸಜ್ಜು

    ಸಂಕ್ರಾಂತಿ ವೇಳೆ ಕೋಳಿ ಅಂಕಕ್ಕೆ ಬ್ರೇಕ್ ಹಾಕಲು ಪೊಲೀಸರು ಸಜ್ಜು

    ಅಮರಾವತಿ: ದಕ್ಷಿಣ ಭಾರತದ ಹೆಚ್ಚಿನ ಕಡೆಗಳಲ್ಲಿ ನಡೆಸಲಾಗುವ ಜೂಜಿನ ಆಟ ಕೋಳಿ ಅಂಕಕ್ಕೆ ಆಂಧ್ರಪ್ರದೇಶದಲ್ಲಿ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಸಂಕ್ರಾಂತಿಗೆ ಕೆಲವೇ ದಿನಗಳು ಬಾಕಿ ಇರುವಾಗ ಕೋಳಿ ಅಂಕ ಜನರು ಸಜ್ಜಾಗುತ್ತಿದ್ದಂತೆ ಪೊಲೀಸರು ಅದರ ನಿರ್ಬಂಧದ ಕಟ್ಟೆಚ್ಚರಿಕೆ ನೀಡಿದ್ದಾರೆ.

    ಕೋಳಿ ಅಂಕ ನಿಷೇಧ ಕೆಲವು ವರ್ಷಗಳ ಹಿಂದೆಯಷ್ಟೇ ಜಾರಿಯಾಗಿತ್ತು. ಹೀಗಿದ್ದರೂ ಜನರು ಅದನ್ನು ಮರೆತು ಮತ್ತೆ ಕೋಳಿ ಅಂಕಕ್ಕೆ ಸಜ್ಜಾಗುತ್ತಿದ್ದಾರೆ. ಮುಖ್ಯವಾಗಿ ಆಂಧ್ರಪ್ರದೇಶದ ಪೂರ್ವ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಕೋಳಿ ಅಂಕ ಹಾಗೂ ಬೆಟ್ಟಿಂಗ್ ನಡೆಯುವ ಪ್ರಮುಖ ಕೇಂದ್ರಗಳೆಂದು ವರದಿಯಾಗಿದೆ. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ದರೋಡೆ – ಇಬ್ಬರು ಹೆಡ್ ಕಾನ್‍ಸ್ಟೇಬಲ್ ಸಸ್ಪೆಂಡ್

    ಮಂಗಳವಾರ ಪೊಲೀಸರು ಸಂಕ್ರಾಂತಿಗೆಂದು ಸಿದ್ಧಪಡಿಸಿದ್ದ 4 ಕೋಳಿಗಳನ್ನು ಸೆರಹಿಡಿದು, ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಪಶ್ಚಿಮ ಗೋದಾವರಿಯ ಎಲೂರಿನಲ್ಲಿ ಬೆಟ್ಟಿಂಗ್ ದಂಧೆಯೊಂದನ್ನು ಬೇಧಿಸಿ 1.20 ಲಕ್ಷ ರೂ.ಯನ್ನು ವಶಪಡಿಸಿಕೊಂಡಿದ್ದಾರೆ.

    ಕೋಳಿ ಅಂಕದಲ್ಲಿ ಪಂಟರ್ ಕೋಳಿಗಳ ಕಾಲಿಗೆ ಚಿಕ್ಕ ಕತ್ತಿಯನ್ನು ಕಟ್ಟಿ ಕಾಳಗಕ್ಕೆ ಬಿಡಲಾಗುತ್ತದೆ. ಎರಡು ಕೋಳಿಗಳಲ್ಲಿ ಯಾವುದಾದರೂ ಒಂದು ಸಾಯುವ ವರೆಗೂ ಕಾಳಗ ಮುಂದುವರಿಯುತ್ತದೆ. ಇದರಲ್ಲಿ ಪ್ರಾಣಿ ಹಿಂಸೆಯೊಂದಿಗೆ ಬೆಟ್ಟಿಂಗ್ ಕೂಡಾ ನಡೆಯುವ ಕಾರಣ ಈ ಆಟವನ್ನು ದಕ್ಷಿಣ ಭಾರತ ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಇದನ್ನೂ ಓದಿ: ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್

    ಇಂತಹ ಕಾನೂನು ಬಾಹಿರ ಆಟಗಳಲ್ಲಿ ತೊಡಗಿಗೊಳ್ಳುವುದು ಅಥವಾ ಪ್ರೋತ್ಸಾಹಿಸುವುದು ತಿಳಿದು ಬಂದಲ್ಲಿ ಕಾನೂನು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತದೆ.

  • ದಲಿತ ಯುವಕನಿಗೆ ಥಳಿಸಿದ್ದ ಆಂಧ್ರದ ನಟ ಉಡುಪಿಯಲ್ಲಿ ಅರೆಸ್ಟ್

    ದಲಿತ ಯುವಕನಿಗೆ ಥಳಿಸಿದ್ದ ಆಂಧ್ರದ ನಟ ಉಡುಪಿಯಲ್ಲಿ ಅರೆಸ್ಟ್

    ಉಡುಪಿ: ಆಂಧ್ರಪ್ರದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ದಲಿತ ಯುವಕನ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ತೆಲುಗು ಚಿತ್ರ ನಿರ್ಮಾಪಕ, ತೆಲುಗು ಬಿಗ್‍ಬಾಸ್ ಸ್ಪರ್ಧಿ ಆರೋಪಿ ನೂತನ್ ನಾಯ್ಡುನನ್ನು ಉಡುಪಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

    ಆಂಧ್ರಪ್ರದೇಶ, ವಿಶಾಖಪಟ್ಟಣ ಪೊಲೀಸರಿಂದ ಶನಿವಾರ ಬೆಳಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಪೊಲೀಸರು ಆರೋಪಿಯನ್ನು ರೈಲ್ಲೇ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮಂಗಳೂರಿನಿಂದ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.

    ಉಡುಪಿ ಮತ್ತು ಮಣಿಪಾಲ ಠಾಣೆ ಪಿಎಸ್‍ಐ ನೇತೃತ್ವದ ತಂಡ ಆರೋಪಿಯನ್ನು ಸುತ್ತುವರಿದಾಗ ತನ್ನ ಬಳಿಯಿದ್ದ ಒಂದು ಮೊಬೈಲ್ ಅನ್ನು ಎಸೆಯಲು ಮುಂದಾಗಿದ್ದಾನೆ. ಆರೋಪಿ ನೂತನ್ ಬಳಿಯಿಂದ ನಾಲ್ಕು ಮೊಬೈಲ್ ಫೋನ್‍ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಂದು ಗಂಟೆ ಬಳಿಕ ಆರೋಪಿ ನೂತನ್‍ನ್ನು ವಿಶಾಖಪಟ್ಟಣ ಪೊಲೀಸರು ವಶಕ್ಕೆ ಪಡೆದುಕೊಂಡರು. ವಿಶಾಖಪಟ್ಟಣ ಪೊಲೀಸರು ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಶಾಖಪಟ್ಟಣಕ್ಕೆ ಕರೆದೊಯ್ದಿದ್ದಾರೆ.