Tag: ಆಂದ್ರ ಪ್ರದೇಶ

  • ಚಿಕ್ಕಬಳ್ಳಾಪುರ ಎರಡು ಪ್ರತ್ಯೇಕ ಅಪಘಾತ- ಐದು ಮಂದಿಯ ದಾರುಣ ಸಾವು

    ಚಿಕ್ಕಬಳ್ಳಾಪುರ ಎರಡು ಪ್ರತ್ಯೇಕ ಅಪಘಾತ- ಐದು ಮಂದಿಯ ದಾರುಣ ಸಾವು

    -ತಂದೆ ತಾಯಿ ಮಗನ ದಾರುಣ ಸಾವು

    ಚಿಕ್ಕಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ ಸಂಭವಿಸಿದ್ದು ಐದು ಮಂದಿಯ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯಲ್ಲಿ ನಡೆದಿದೆ.

    ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಬಳಿ ನಡೆದಿದೆ. ಇದನ್ನೂ ಓದಿ: ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್‌ – ದಾಸನಿಗಾಗಿ ರೂಟ್‌ ಮ್ಯಾಪ್‌ ಚೇಂಜ್‌?

    ಮೃತರನ್ನು ಸೂರಜ್ (27) ಹಾಗೂ ಕಮಲ್ (26) ಗುರುತಿಸಲಾಗಿದ್ದು ಉತ್ತರ ಪ್ರದೇಶದ (Uttarpradesh) ಖಾನಾಪುರ್ (Khanapur) ನಿವಾಸಿಗಳು ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡ ಜೈಸಿಂಗ್, ಯು ಜೈಸಿಂಗ್ ಅವರನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ ಇಬ್ಬರಿಗೆ ಹಿಂದೂಪೂರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ವೈದ್ಯೆ ಅತ್ಯಾಚಾರ-ಕೊಲೆ ಕೇಸ್; ಐಎಂಎ ಸದಸ್ಯತ್ವದಿಂದ ಆರ್‌ಜಿ ಕರ್‌ ಆಸ್ಪತ್ರೆ ಮಾಜಿ ವೈದ್ಯ ಡಾ. ಸಂದೀಪ್‌ ಅಮಾನತು‌

    ಆರು ಮಂದಿ ಆಂಧ್ರಪ್ರದೇಶದ (Andrapradesh) ಸತ್ಯಸಾಯಿ ಜಿಲ್ಲೆಯ ಹಿಂದೂಪುರ ಬಳಿಯ ಕೈಗಾರಿಕಾ ಪ್ರದೇಶ ಶ್ಯಾಮ್ ಪೈರಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿಕೊಂಡು ಗೌರಿಬಿದನೂರು ಮಾರ್ಗವಾಗಿ ಇನ್ನೋವಾ ಕಾರಿನಲ್ಲಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರು ಚಾಲಕನ ಅತಿ ವೇಗವೇ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಪಲ್ಟಿಯಾಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: Video | ರಾತ್ರೋರಾತ್ರಿ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ!

    ಇನ್ನೂ ಚಿಂತಾಮಣಿ ತಾಲೂಕಿನ ದಂಡುಪಾಳ್ಯ ಗೇಟ್ ಬಳಿ ಕಾರು ಹಾಗೂ ಟಿಟಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮಗ ಶ್ರೀಕಾಂತ್, ತಂದೆ ಶ್ರೀನಿವಾಸಲು ಹಾಗೂ ತಾಯಿ ಪುಷ್ಪ ಮೃತಪಟ್ಟಿದ್ದಾರೆ. ಟಿಟಿಯಲ್ಲಿದ್ದ 12 ಮಂದಿಯೂ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಗುಜರಾತ್‌ನಲ್ಲಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ – ಮಗುವಿನ ಅಪ್ಪನ ಸ್ನೇಹಿತನಿಂದಲೇ ಕೃತ್ಯ

  • ಅನುಮಾನಾಸ್ಪದ ರೀತಿಯಲ್ಲಿ ಒಂಟಿ ಸಲಗ ಸಾವು – ಜನರೇ ವಿಷ ಹಾಕಿ ಕೊಂದ್ರಾ?

    ಅನುಮಾನಾಸ್ಪದ ರೀತಿಯಲ್ಲಿ ಒಂಟಿ ಸಲಗ ಸಾವು – ಜನರೇ ವಿಷ ಹಾಕಿ ಕೊಂದ್ರಾ?

    ಕೋಲಾರ: ಜಿಲ್ಲೆಯ ಗಡಿ ಪ್ರದೇಶವಾದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯಂನಲ್ಲಿ ಒಂಟಿ ಸಲಗವೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ.

    ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯಂನ ನಾಯುಡು ಎಂಬ ಮಾವಿನ ತೋಟದಲ್ಲಿ ಅನುಮಾನಾಸ್ಪದವಾಗಿ ಆನೆಯೊಂದು ಮೃತಪಟ್ಟಿದೆ. ಬಂಗಾರಪಾಳ್ಯಂ ಅರಣ್ಯ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ಕಳೆದೊಂದು ತಿಂಗಳಿನಿಂದ 5 ಆನೆಗಳ ಹಿಂಡು ಬೀಡು ಬಿಟ್ಟಿದ್ದವು. ಮಾವಿನ ತೋಪಿನಲ್ಲಿ ಆನೆ ಸಾವನ್ನಪ್ಪಿದ್ದನ್ನು ಕಂಡ ಕುರಿಗಾಹಿಗಳು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.

    ಘಟನೆ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಐದು ಆನೆಗಳ ಹಿಂಡು ಆಗಾಗ ಜಿಲ್ಲೆಯ ಕೆಜಿಎಫ್ ಹಾಗೂ ಬಂಗಾರಪೇಟೆ ತಾಲೂಕಿನ ಗಡಿ ಪ್ರದೇಶದಲ್ಲಿ ದಾಳಿ ನಡೆಸಿ ರೈತರ ಬೆಳೆ ಹಾನಿ ಮಾಡಿದ್ದವು. ಅಲ್ಲದೇ ಮಾವು ಸೇರಿದಂತೆ ವಿವಿಧ ಬೆಳೆಗಳ ನಾಶ ಮಾಡಿದ್ದರಿಂದ ರೈತರೇ ಆನೆಗೆ ವಿಷ ಹಾಕಿ ಕೊಂದಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

  • ಡೆತ್‍ನೋಟ್ ಬರೆದಿಟ್ಟು, ಮಕ್ಕಳಿಗೆ ವಿಷವುಣಿಸಿ ದಂಪತಿ ಆತ್ಮಹತ್ಯೆ

    ಡೆತ್‍ನೋಟ್ ಬರೆದಿಟ್ಟು, ಮಕ್ಕಳಿಗೆ ವಿಷವುಣಿಸಿ ದಂಪತಿ ಆತ್ಮಹತ್ಯೆ

    ವಿಶಾಖಪಟ್ಟಣಂ: ದಂಪತಿ ತಮ್ಮ ಇಬ್ಬರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ನಡೆದಿದೆ.

    ಡಿ. ರಾಜೇಶ್ ರೆಡ್ಡಿ, ಪತ್ನಿ ಸೌಮ್ಯಾ ಹಾಗೂ ಮಕ್ಕಳಾದ 9 ವರ್ಷದ ಡಿ.ವಿಷ್ಣುತೇಜಾ ಮತ್ತು 5 ವರ್ಷದ ಡಿ.ಜಾಹ್ನವಿ ಮೃತಪಟ್ಟಿದ್ದಾರೆ. ರಾಜೇಶ್ ರೆಡ್ಡಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದರು. ಈ ಘಟನೆ ಗುರುವಾದ ಸಂಜೆ ನಗರದ ಅರಿಲೋವಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮುಸ್ತಫ ಕಾಲೋನಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಾಜೇಶ್ ಮತ್ತು ಸೌಮ್ಯ ಮೂಲತಃ ಪ್ರಕಾಶಂ ಜಿಲ್ಲೆಯವರಾಗಿದ್ದು, ಜೀವನೋಪಾಯಕ್ಕಾಗಿ ಕೆಲಸ ಹುಡುಕಿಕೊಂಡು ಕಳೆದ ವರ್ಷದ ಜುಲೈನಲ್ಲಿ ವಿಶಾಖಪಟ್ಟಣಂಗೆ ಬಂದಿದ್ದರು. ಆದರೆ ಹಣಕಾಸು ಸಮಸ್ಯೆ ಹಿನ್ನೆಲೆಯಲ್ಲಿ ರಾಜೇಶ್ ಮತ್ತು ಸೌಮ್ಯಾ ತಮ್ಮ ಮಕ್ಕಳಿಗೆ ವಿಷ ಹಾಕಿ ನಂತರ ಇಬ್ಬರೂ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಎಸಿಪಿ ಪಿ. ರಾಮಚಂದ್ರ ರಾವ್ ತಿಳಿಸಿದ್ದಾರೆ.

    ದಂಪತಿ ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್ ಬರೆದಿದ್ದು, ಕುಟುಂಬ ಕಲಹ ಮತ್ತು ಹಣಕಾಸಿನ ತೊಂದರೆಯಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ ಅಂತ ತಿಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.