Tag: ಆಂದೋಲ ಶ್ರೀ

  • ಯತ್ನಾಳ್ ಒಪ್ಪಿದರೆ ಶಿವಸೇನೆ ಪಕ್ಷಕ್ಕೆ ಸ್ವಾಗತಿಸುತ್ತೇವೆ – ಆಂದೋಲ ಶ್ರೀ

    ಯತ್ನಾಳ್ ಒಪ್ಪಿದರೆ ಶಿವಸೇನೆ ಪಕ್ಷಕ್ಕೆ ಸ್ವಾಗತಿಸುತ್ತೇವೆ – ಆಂದೋಲ ಶ್ರೀ

    -RSS ಬಗ್ಗೆ ಮಾತಾಡೋದು ಪ್ರಿಯಾಂಕ್ ಖರ್ಗೆಗೆ ಶೋಭೆ ತರಲ್ಲ

    ರಾಯಚೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಒಪ್ಪಿದರೆ ಶಿವಸೇನೆ ಪಕ್ಷಕ್ಕೆ ಸ್ವಾಗತಿಸುತ್ತೇವೆ ಎಂದು ಶಿವಸೇನೆ ರಾಜ್ಯಾಧ್ಯಕ್ಷ ಆಂದೋಲ ಸಿದ್ಧಲಿಂಗ ಸ್ವಾಮಿಯವರು ತಿಳಿಸಿದ್ದಾರೆ.

    ರಾಯಚೂರಿನಲ್ಲಿ (Raichuru) ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ನಮ್ಮ ಉದ್ದೇಶ ಒಂದೇ. ಅವರ ಜೊತೆ ಮಾತುಕತೆ ನಡೆಸುತ್ತೇವೆ. ನಾಳೆ ವಿಜಯಪುರ ಪ್ರವಾಸಕ್ಕೆ ಹೋಗುತ್ತಿದ್ದೇವೆ. ಆಗ ಅವರೊಂದಿಗೆ ಮಾತನಾಡುತ್ತೇವೆ. ಒಂದು ವೇಳೆ ಅವರು ಒಪ್ಪಿಕೊಂಡರೆ, ಒಂದೇ ಪ್ಲಾಟ್‌ಫಾರಂನಲ್ಲಿ ಹೋರಾಟ ಮಾಡೋಣ ಅಂದ್ರೆ ನಾವು ಸಿದ್ಧರಿದ್ದೇವೆ. ಅವರನ್ನ ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇವೆ ಎಂದಿದ್ದಾರೆ.ಇದನ್ನೂ ಓದಿ:ಸರ್ಕಾರಕ್ಕೆ ನೈತಿಕತೆ ಇದ್ದರೆ ಪ್ರಿಯಾಂಕ್ ಮೇಲೆ ಕೇಸ್ ದಾಖಲಿಸಲಿ: ಅಶ್ವಥ್ ನಾರಾಯಣ್

    ಬಿಜೆಪಿಯೂ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತದೆ. ಶಿವಸೇನೆಯೂ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತದೆ. ಶಿವಸೇನೆ, ಬಿಜೆಪಿ ಬೇರೆ ಅಲ್ಲ. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಸರ್ಕಾರವಿದೆ. ರಾಜ್ಯದಲ್ಲಿ ಹಿಂದೂಗಳ ಮತ ಒಡೆಯದಂತೆ ಸಂಘಟನೆ ಮಾಡುತ್ತೇವೆ. ನಮ್ಮ ಶಿವಸೇನೆ ಮತ್ತು ಬಿಜೆಪಿ ಹೈಕಮಾಂಡ್ ಏನು ನಿರ್ಣಯ ಮಾಡುತ್ತದೆಯೋ ಆ ನಿಟ್ಟಿನಲ್ಲಿ ನಾವು ಕರ್ನಾಟಕದಲ್ಲಿ ಮುಂದುವರಿಯುತ್ತೇವೆ ಎಂದು ತಿಳಿಸಿದ್ದಾರೆ.

    ಇನ್ನೂ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ, ಬಿಕೆ ಹರಿಪ್ರಸಾದ್, ಸಂತೋಷ್ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಒಳ್ಳೆಯ ಧ್ಯೇಯೋದ್ದೇಶದಿಂದಲೇ ಆರ್‌ಎಸ್‌ಎಸ್ 100 ವರ್ಷದ ಸಂಭ್ರಮಾಚರಣೆ ಮಾಡುತ್ತಿದೆ. ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಮಾತನಾಡುವುದು ಪ್ರಿಯಾಂಕ್ ಖರ್ಗೆಗೆ ಶೋಭೆ ತರಲ್ಲ. ಮಹಿಷಾಸುರ, ಭಸ್ಮಾಸುರ ಸೇರಿ ಹಲವರ ಹೆಸರು ಕೇಳಿದ್ವಿ. ಸರ್ಕಾರದ ಕೆಲಮಂತ್ರಿಗಳು, ಪ್ರತಿನಿಧಿಗಳು ತಮ್ಮ ಬಾಯಿ ಚಪಲಕ್ಕೆ ಚಪಲಾಸುರರಂತೆ ಹೊರಹೊಮ್ಮುತ್ತಿದ್ದಾರೆ. ಇದನ್ನು ಶಿವಸೇನೆ ಪಕ್ಷ ಉಗ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

    ಆರ್‌ಎಸ್‌ಎಸ್ ನೋಂದಣಿಯಾಗಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಾವುಟ ಹಾರಿಸಿಯೇ ದೇಶ ಭಕ್ತಿ ಪ್ರದರ್ಶನ ಮಾಡೋ ಅವಶ್ಯಕತೆ ಇಲ್ಲ. ಡೋಂಗಿ ರಾಷ್ಟ್ರಭಕ್ತಿ ಆರ್‌ಎಸ್‌ಎಸ್‌ನಲ್ಲಿಲ್ಲ. ಇದನ್ನು ಟೀಕೆ ಮಾಡುವವರ ಹತ್ತಿರ ಡೋಂಗಿ ರಾಷ್ಟ್ರಭಕ್ತಿ ಇದೆ. ಇವರ ಸಚಿವರು, ಇವರ ರಾಜ್ಯಸಭಾ ಸದಸ್ಯರು ವಿಧಾನಸೌಧದಲ್ಲಿ ನಿಂತ್ಕೊಂಡು ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳ್ತಾರೆ. ಶತಾಯ ಗತಾಯ ಪ್ರಯತ್ನ ಮಾಡಿದ್ರೂ ಆರ್‌ಎಸ್‌ಎಸ್‌ನ್ನು ಮುಟ್ಟೋಕೆ ಆಗಲ್ಲ. ಹಿಂದೂತ್ವಕ್ಕಾಗಿ ಹೊರಟಂತವರು ಪಕ್ಷ ಮಾಡಿದ್ರೆ ಸ್ವಾಗತ ಮಾಡ್ತೇವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ನೀವು ಪಿತೂರಿಯಲ್ಲಿ ತೊಡಗಿದ್ದೀರಿ – ರೈಲ್ವೇ ಹಗರಣದಲ್ಲಿ ಲಾಲು, ರಾಬ್ಡಿ, ತೇಜಸ್ವಿ ವಿರುದ್ಧ ದೋಷಾರೋಪ ನಿಗದಿ

  • ಹಿಂದೂಗಳನ್ನು ಕೆಣಕಿದ್ರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತೆ- ಆಂದೋಲಶ್ರೀ ವಿವಾದಾತ್ಮಕ ಹೇಳಿಕೆ

    ಹಿಂದೂಗಳನ್ನು ಕೆಣಕಿದ್ರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತೆ- ಆಂದೋಲಶ್ರೀ ವಿವಾದಾತ್ಮಕ ಹೇಳಿಕೆ

    – ಮೋದಿ ಇಲ್ಲದೇ ಭಾರತವಿಲ್ಲ ಯತ್ನಾಳ್ ಇಲ್ಲದೇ ಕರ್ನಾಟಕವಿಲ್ಲ

    ಯಾದಗಿರಿ: ಶಿವಮೊಗ್ಗದಲ್ಲಿ (Shivamogga) ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ನಡೆದ ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಆಂದೋಲಶ್ರೀ (Andola Shri) ಶಿವಮೊಗ್ಗ ಘಟನೆಯನ್ನ ಖಂಡಿಸುತ್ತಾ ಎರಡು ಬಾರಿ ಹೊಡೆದ್ರೆ ಎರಡು ತುಂಡು ಆಗ್ತೀರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಶಿವಮೊಗ್ಗದಲ್ಲಿ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ಆಗಿದೆ. ಜೊತೆಗೆ ಹಿಂದೂ ಮಹಿಳೆಯರಿಗೆ ಎಚ್ಚರಿಕೆ ಕೊಡ್ತಾರೆ. ನೀವು ಸುಮ್ನೆ ಇದ್ದರೆ ಸರಿ, ಇಲ್ಲದಿದ್ರೆ ರೇಪ್ ಮಾಡ್ತೀವಿ ಅಂತಾ ಎಚ್ಚರಿಕೆ ಕೊಡ್ತಾರೆ. ಅಂತಹ ದುಷ್ಟ ಸಾಬ್ರೆ ನಿಮ್ಮ ಹತ್ರ ಮಂಡ್ ತಲ್ವಾರ್ ಇರಬಹುದು. ಮಂಡ್ ತಲ್ವಾರ್ ನಿಂದ ಎದುರಿಸಲು ಬಂದ್ರೆ, ನಮ್ಮಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ಖಡ್ಗ, ಛತ್ರಪತಿ ಶಿವಾಜಿ ಖಡ್ಗವಿದೆ. ನಮ್ದೂ ಏಕ್ ಮಾರ್ ದೋ ತುಕಡಾ. ಒಂದು ಬಾರಿ ಹೊಡೆದ್ರೆ ಎರಡು ತುಕಡಿಯಾಗುತ್ತೀರಿ. ಒಂದು ದೇಹ ಪಾಕಿಸ್ತಾನಕ್ಕೆ ಹೋಗಬೇಕು. ಇನ್ನೊಂದು ದೇಹ ಬಾಂಗ್ಲಾದೇಶಕ್ಕೆ ಹೋಗಬೇಕು ಎಂದು ವಿವಾದಾತ್ಮಕ ಮಾತುಗಳನ್ನಾಡಿದ್ರು.

    ಹಿಂದೂಗಳನ್ನು ಕೆಣಕಬೆಡಿ, ಕೆಣಕಿದ್ರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತದೆ. ಹಿಂದೂಗಳ ಮೇಲೆ ಟಾರ್ಗೆಟ್ ಮಾಡುತ್ತಿದ್ರು, ಇಲ್ಲಿ ನರಸತ್ತ ಸರ್ಕಾರವಿದೆ. ಕ್ರಮಕೈಗೊಳ್ಳಲು ಮುಂದೆ ಬರುತ್ತಿಲ್ಲ. ಹಿಂದೂ ಜಾಗೃತನಾದರೆ ಭಾರತ ಉಳಿಯಲು ಸಾಧ್ಯ. 2024ರಲ್ಲಿ ಮತ್ತೆ ಮೋದಿ ಅವರನ್ನು ಪಿಎಂ ಮಾಡಬೇಕು. ಮೋದಿ ಇಲ್ಲದೇ ಭಾರತವಿಲ್ಲ ಯತ್ನಾಳ್ ಇಲ್ಲದೇ ಕರ್ನಾಟಕವಿಲ್ಲ. ಪಾಕಿಸ್ತಾನಕ್ಕೆ ಸದೆ ಬಡಿಯುವ ನೇತಾರರು ಬೇಕಾಗಿದ್ದಾರೆ. ಭಾರತ, ಹಿಂದೂ ಸುರಕ್ಷಿತವಾಗಿ ಇರಬೇಕಾದರೆ ಭಗತ್ ಸಿಂಗ್ ಹೇಳಿದ ಹಾಗೆ ಪ್ರತಿಯೊಬ್ಬರ ಮನೆಯಲ್ಲಿಯೂ ಬಂದೂಕು ಇಟ್ಟುಕೊಳ್ಳಬೇಕು. ಬಂದೂಕು ಮನೆಯಲ್ಲಿ ಇಟ್ಟುಕೊಂಡರೆ ಭಾರತ ಸುರಕ್ಷಿತವಾಗಿ ಇರುತ್ತದೆ ಎಂದು ಹೇಳಿದರು.

    ಇದೇ ವೇಳೆ ಗೃಹ ಸಚಿವ ಜಿ.ಪರಮೇಶ್ವರ್ ಉಡಾಫೆ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಆಂದೋಲನ ಶ್ರೀ, ಶಿವಮೊಗ್ಗದಲ್ಲಿ ಸಣ್ಣ ಘಟನೆಯಾಗಿದೆ ಅಂದಿದ್ದಾರೆ. ಪರಮೇಶ್ವರ್ ಅವರೇ, ಇದೇ ಮುಸ್ಲಿಮರು ನಿಮ್ಮ ಮನೆಗೆ ಬಂದು ನಿಮ್ಮ ಹೆಣ್ಮಕ್ಕಳಿಗೆ ಬೆದರಿಕೆ ಹಾಕಿದ್ರೆ ನಿಮ್ಮ ಸ್ಥಿತಿ ಏನಿರುತಿತ್ತು?. ಅವರ ಗುರಿ ಒಂದೇ 2047ಕ್ಕೆ ಭಾರತವನ್ನು ಇಸ್ಲಾಂ ಮಾಡುವುದಾಗಿದೆ. ಮೋದಿ, ಯೋಗಿ ಈ ದೇಶದಲ್ಲಿದ್ರೆ ನಿಮ್ಮ ಕನಸು ನನಸಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಮಗೆ ತಾಕತ್, ಧಮ್ ಇದ್ರೆ ಇಸ್ಲಾಂ ಧರ್ಮದ ಬಗ್ಗೆ ಮಾತಾಡಿ: ಆಂದೋಲ ಶ್ರೀ

    ನಿಮಗೆ ತಾಕತ್, ಧಮ್ ಇದ್ರೆ ಇಸ್ಲಾಂ ಧರ್ಮದ ಬಗ್ಗೆ ಮಾತಾಡಿ: ಆಂದೋಲ ಶ್ರೀ

    ಯಾದಗಿರಿ: ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲೀನ್ (Udhayanidhi Stalin) ಅವಹೇಳನಕಾರಿ ಹೇಳಿಕೆಗೆ ಯಾದಗಿಯಲ್ಲಿ (Yadagiri) ಶ್ರೀ ರಾಮಸೇನೆ (Sriramasene) ರಾಷ್ಟ್ರೀಯ ಗೌರಾವಾಧ್ಯಕ್ಷ ಆಂದೋಲ ಶ್ರೀ (Andola Shree) ತೀವ್ರವಾಗಿ ಖಂಡಿಸಿದ್ದಾರೆ.

    ನಿಮಗೆ ತಾಕತ್ತು ದಮ್ಮು ಇದ್ರೇ ಸನಾತನ ಧರ್ಮದ ಬದಲು ಇಸ್ಲಾಂ ಭಯೋತ್ಪಾದಕತೆ, ಕ್ರಿಶ್ಚಿಯನ್ನರ್ ಬಗ್ಗೆ ಮಾತನಾಡಿ ಎಂದು ನೇರವಾಗಿ ಸವಾಲ್ ಎಸೆದಿದ್ದಾರೆ. ಕೇವಲ ಸನಾತನ ಭಾರತೀಯ ಧರ್ಮವನ್ನು ಟೀಕಿಸುವುದು ಶೋಭೆ ತರುವಂತದ್ದಲ್ಲ ಎಂದಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಆಕ್ರೋಶ; ಆನ್‌ಲೈನ್ ಮೂಲಕ ದೂರು ದಾಖಲಿಸಲು ಮುಂದಾದ ಹಿಂದೂ ಸಂಘಟನೆಗಳು

    ಸನಾತನ ಧರ್ಮ ನಾಶಕ್ಕೆ ಯತ್ನಿಸಿ ಮುಸ್ಲಿಮರು, ಕ್ರಿಶ್ಚಿಯನ್ ಇದೇ ಮಣ್ಣಲಿ ಹೆಣವಾಗಿದ್ದಾರೆ. ನಿಮ್ಮ ಅಜ್ಜ ಕರುಣಾನಿಧಿ ಸಹ ಶ್ರೀರಾಮ ಹಾಗೂ ಭಾರತೀಯ ಸಂಸ್ಕೃತಿ ಬಗ್ಗೆ ಟೀಕೆ ಮಾಡಿ ಏನೂ ಸಾಧಿಸೋಕೆ ಆಗಲಿಲ್ಲ. ನಿಮ್ಮಿಂದಲೂ ಸಾಧ್ಯವಿಲ್ಲ ಅಂತ ಉದಯನಿಧಿ ವಿರುದ್ಧ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮಿಗಳು ಆಕ್ರೋಶ ವ್ಯಕ್ತಪಡಿಸಿದರು.

    ಎಲ್ಲಾ ರಾಜ್ಯದ ಮಂತ್ರಿಗಳು ಜಾತ್ಯಾತೀತ ಪಕ್ಷ ಅಂದುಕೊಂಡು ಸನಾತನ ಧರ್ಮದ ಬಗ್ಗೆ ನಾಲಿಗೆ ಉದ್ದುದ್ದ ಚಾಚುತ್ತಿದ್ದಾರೆ. ದುರಹಂಕಾರದಿಂದ ನಾಲಿಗೆ ಹರಿಬಿಟ್ಟು ಸನಾತನ ಧರ್ಮದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತಮಿಳುನಾಡಿನ ಸಿಎಂ ಸ್ಟಾಲೀನ್ ಪುತ್ರ ಉದಯನಿಧಿ ಸ್ಟಾಲೀನ್ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಇದ್ದಂಗೆ, ಅದನ್ನು ನಿರ್ಮೂಲನೆ ಮಾಡಬೇಕು ಅಂತ ಸನಾತನ ಧರ್ಮಕ್ಕೆ ನಿಂದನೆ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಮು ಪ್ರಚೋದನೆ ಭಾಷಣ ಪ್ರಕರಣ – ಆಂದೋಲ ಸಿದ್ದಲಿಂಗ ಶ್ರೀ ದೋಷಿ

    ಕೋಮು ಪ್ರಚೋದನೆ ಭಾಷಣ ಪ್ರಕರಣ – ಆಂದೋಲ ಸಿದ್ದಲಿಂಗ ಶ್ರೀ ದೋಷಿ

    ಯಾದಗಿರಿ: ಕೋಮು ಪ್ರಚೋದನೆ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂದೋಲದ ಸಿದ್ದಲಿಂಗ ಸ್ವಾಮಿ (Andola Sri Siddalinga Swamiji) ದೋಷಿ ಎಂದು ಯಾದಗಿರಿಯ ಸೀನಿಯರ್ ಸಿವಿಲ್ ಕೋರ್ಟ್ (Court) ತೀರ್ಪು ನೀಡಿದೆ.

    ಯಾದಗಿರಿ (Yadagiri) ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ 2015ರ ಜನವರಿ 2ರಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿತ್ತು.

    ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಐಪಿಸಿ ಕಲಂ 153 (ಎ), 295ರಡಿಯಲ್ಲಿ ನಗರ ಪೊಲೀಸ್ ಠಾಣೆಯ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 8 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಧೀಶ ರವೀಂದ್ರ ಹೊನೋಲೆ ಅವರಿಂದ ತೀರ್ಪು ಹೊರಬಿದ್ದಿದೆ.

    ಗುರುವಾರ ತೀರ್ಪು ಪ್ರಕಟಿಸಿರುವ ನ್ಯಾಯಾಧೀಶರು, ಆಂದೋಲದ ಕರುಣೇಶ್ವರ ಮಠದ ಪೀಠಾಧಿಪತಿ ಹಾಗೂ ಶ್ರೀರಾಮಸೇನೆ (Srirama Sene) ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ. ಇದನ್ನೂ ಓದಿ: 2 ದಶಕಗಳಿಂದ ಹಾಲಿ ಶಾಸಕರಿಗೆ ಸೋಲು – ಇದು ಆಳಂದ ವಿಶೇಷತೆ

    ತೀರ್ಪು ನೀಡುತ್ತಿದ್ದಂತೆ ದೋಷಿಯ ಹಿನ್ನೆಲೆಯ ವರದಿ ನೀಡುವಂತೆ ಪ್ರೋಬೇಷನರಿ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ. ಹಿನ್ನೆಲೆಯ ವರದಿ ಆಧಾರದ ಮೇಲೆ ಆಂದೋಲ ಶ್ರೀಗಳಿಗೆ ಶಿಕ್ಷೆ ಪ್ರಮಾಣ ನಿರ್ಧಾರವಾಗಲಿದೆ. ಇದನ್ನೂ ಓದಿ: ರಾಜಕೀಯ ಅನುಭವ ಇಲ್ಲದೇ ಇದ್ರೂ ಶಿರಾದಲ್ಲಿ ತಾವರೆ ಅರಳಿಸಿದ ರಾಜೇಶ್‌ ಗೌಡ!

  • ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ: ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ

    ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ: ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ

    ಕಲಬುರಗಿ: ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ (Assembly Election) ಬಿಜೆಪಿಯಿಂದ (BJP) ಟಿಕೆಟ್ ನೀಡಿದರೆ ಖಂಡಿತವಾಗಿಯೂ ಸ್ಪರ್ಧಿಸುವೆ ಎಂದು ಶ್ರೀರಾಮ ಸೇನೆಯ (Sri Rama Sene) ರಾಜ್ಯಾಧ್ಯಕ್ಷ ಆಂದೋಲ ಶ್ರೀ (Andola Shree) ತಿಳಿಸಿದರು.

    ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ನಾನು ಚುನಾವಣೆ ನಿಲ್ಲುತ್ತೇನೆ ಎಂಬುದರ ಬಗ್ಗೆ ವಿಷಯ ಕೇಳಿ ಬರುತ್ತದೆ. ಇಲ್ಲಿವರೆಗೆ ನಾವು ಯಾರನ್ನೂ ಟಿಕೆಟ್‌ಗಾಗಿ ಸಂಪರ್ಕ ಮಾಡಿಲ್ಲ. ನನ್ನನ್ನೂ ಯಾವುದೇ ಮಖಂಡರು ಸಂಪರ್ಕ ಮಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲದ ಕಾಂಗ್ರೆಸ್ ಶಾಸಕ – ಬಿಜೆಪಿಯಿಂದ ಆಕ್ರೋಶ

    ಒಂದು ವೇಳೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಟ್ಟರೆ ಮಾತ್ರ ಸ್ಪರ್ಧಿಸುವೆ. ಸ್ವತಂತ್ರ್ಯ ಅಭ್ಯರ್ಥಿ ಅಥವಾ ಮತ್ಯಾವ ಪಕ್ಷದಿಂದ ಚುನಾವಣೆಗೆ ನಿಲ್ಲುವುದಿಲ್ಲ. ಹಿಂದುತ್ವ, ದೇಶದ ಅಭಿವೃದ್ಧಿ ಬಗ್ಗೆ ಚಿಂತನ ನಡೆಸುವವರನ್ನು ಬೆಂಬಲಿಸಲಾಗವುದು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಆಡಳಿತಾಧಿಕಾರಿ

    Live Tv
    [brid partner=56869869 player=32851 video=960834 autoplay=true]

  • ಎಷ್ಟೇ ನಿರ್ಬಂಧ ಹೇರಿದ್ರು, ನಮ್ಮ ಪ್ರವೇಶವನ್ನು ತಡೆಯಲು ಸಾಧ್ಯವಿಲ್ಲ: ಆಂದೋಲ ಶ್ರೀ

    ಎಷ್ಟೇ ನಿರ್ಬಂಧ ಹೇರಿದ್ರು, ನಮ್ಮ ಪ್ರವೇಶವನ್ನು ತಡೆಯಲು ಸಾಧ್ಯವಿಲ್ಲ: ಆಂದೋಲ ಶ್ರೀ

    ಬೀದರ್: ಬೀದರ್ ಜಿಲ್ಲಾಡಳಿತ ಎಷ್ಟೇ ನಿರ್ಬಂಧ ಹೇರಿದರೂ ಕೂಡಾ 12ಕ್ಕೆ ಕಲ್ಯಾಣದಲ್ಲಿ ನಡೆಯುವ ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಕಾರ್ಯಕ್ರಮಕ್ಕೆ ನಮ್ಮ ಪ್ರವೇಶವನ್ನು ತಡೆಯಲು ಸಾಧ್ಯವಿಲ್ಲ ಎಂದು ಬೀದರ್ ಜಿಲ್ಲಾಡಳಿತಕ್ಕೆ ಆಂದೋಲ ಶ್ರೀಗಳು ಸವಾಲ್ ಹಾಕಿದರು.

    9 ದಿನಗಳ ಕಾಲ ಪ್ರಮೋದ್ ಮುತಾಲಿಕ್ ಅವರನ್ನು ಹಾಗೂ ನನ್ನನ್ನು ಬೀದರ್ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಇದಕ್ಕೆ ಕಾರಣ ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಎಂಬ ಕಾರ್ಯಕ್ರಮ ಎಂದು ಜಿಲ್ಲಾಡಳಿತದ ವಿರುದ್ಧ ಶ್ರೀಗಳು ಕಿಡಿಕಾರಿದರು.

    ಈ ಕಾರ್ಯಕ್ರಮದಲ್ಲಿ ಭಾಗಿಯಾದರೆ ಕೋಮು ಸೌಹಾರ್ದ ಹಾಗೂ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂಬ ನೆಪವನ್ನು ಹೇಳಿ ಜಿಲ್ಲಾಡಳಿತ ನಮ್ಮನ್ನು ಬ್ಯಾನ್ ಮಾಡಿದೆ. ಇಂದು ಕಲ್ಯಾಣದಲ್ಲಿ ಯಾವುದೇ ಸಭೆ, ಸಮಾರಂಭ ಇಲ್ಲದೆ ಇದ್ದರೂ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದು, ಖಂಡನೀಯವಾಗಿದ್ದು, ಬಿಜೆಪಿ ಸರ್ಕಾರದ ಹಿಂದೂ ವಿರೋಧಿ ನೀತಿ ಇಂದು ಎದ್ದು ಕಾಣುತ್ತಿದ್ದು ಇದು ನಾಚೀಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೀದರ್ ಜಿಲ್ಲಾ ಪ್ರವೇಶಕ್ಕೆ ಪ್ರಮೋದ್ ಮುತಾಲಿಕ್, ಆಂದೋಲನ ಶ್ರೀಗಳಿಗೆ ಬ್ಯಾನ್

    ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಛೂಬಿಟ್ಟು ಸರ್ಕಾರ ಹಿಂದೂ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಮೂಲ ಅನುಭವ ಮಂಟಪವನ್ನು ಶಾಂತಿಯಿಂದ ಪಡೆಯಬೇಕು ಎಂದು ಮಠಾಧೀಶರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಸರ್ಕಾರವೇ ಈ ರೀತಿ ನಿರ್ಬಂಧ ಹೇರುವ ಮೂಲಕ ಗೊಂದಲ ಸೃಷ್ಟಿ ಮಾಡಿ ಶಾಂತಿಗೆ ಕಾರಣರಾಗುತ್ತಿದೆ ಎಂದು ಶ್ರೀರಾಮ್ ಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಶ್ರೀಗಳು ಬೀದರ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: 5 ವರ್ಷದ ಬಾಲಕಿಯ ಮಾದರಿಯನ್ನು ಮಂಕಿಪಾಕ್ಸ್ ಪರೀಕ್ಷೆಗೆ ಕಳುಹಿಸಿದ ವೈದ್ಯರು

  • ಆಜಾನ್ ವಿರುದ್ಧ ಆರತಿ, ಹನುಮಾನ್ ಚಾಲೀಸಾ ಪಠಿಸಲು ಹಿಂದೂಪರ ಸಂಘಟನೆಗಳ ನಿರ್ಧಾರ

    ಆಜಾನ್ ವಿರುದ್ಧ ಆರತಿ, ಹನುಮಾನ್ ಚಾಲೀಸಾ ಪಠಿಸಲು ಹಿಂದೂಪರ ಸಂಘಟನೆಗಳ ನಿರ್ಧಾರ

    ಬೆಂಗಳೂರು: ಆಜಾನ್ ವಿಚಾರದಲ್ಲಿ ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯಗೊಂಡಿದೆ. ಆದರೆ ಸರ್ಕಾರದಿಂದ ಯಾವುದೇ ಕ್ರಮ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು ದೇವಾಲಯಗಳಲ್ಲಿ ಆರತಿ, ಹನುಮಾನ್ ಚಾಲೀಸಾ ಪಠಿಸಲು ನಿರ್ಧರಿಸಿವೆ.

    ಈ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಮತ್ತು ಆಂದೋಲ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಪರ ಸಂಘಟನೆಗಳು ಆಜಾನ್ ಕೂಗುವುದನ್ನು ನಿಷೇಧಿಸಲು ಮೇ 1 ರವರೆಗೂ ಗಡುವು ನೀಡಿದ್ದವು. ಮೇ 1ರ ಒಳಗೆ ಮಸೀದಿಯ ಧ್ವನಿವರ್ಧಕ ತೆರವಿಗೆ ಶ್ರೀರಾಮಸೇನೆ ಗಡುವು ನೀಡಿತ್ತು. ಆದರೆ ಸರ್ಕಾರ ಮೇ 1 ಆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿವೆ.

    court order law

    ಸಾರ್ವಜನಿಕ, ವಸತಿ ಸ್ಥಳಗಳಲ್ಲಿ ಆಜಾನ್ ಕೂಗಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಡೆಸಿಬಲ್ ಕಡಿಮೆ ಇಡಬೇಕು ಅಂತಾ ಸುಪ್ರೀಂ ಕೋರ್ಟ್ ಸ್ಪಷ್ಟವಾದ ಆದೇಶ ನೀಡಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ. ಸರ್ಕಾರಕ್ಕೆ ನೀಡಿದ್ದ ಗಡುವು ಅಂತ್ಯವಾದ ಹಿನ್ನೆಲೆ ಹಿಂದೂಪರ ಸಂಘಟನೆಗಳಿಂದ ಆಜಾನ್ ವಿರುದ್ಧ ಹೋರಾಟ ನಡೆಯಲಿದೆ ಎಂದು ಸಂಘಟನೆಗಳು ತಿಳಿಸಿವೆ.

    ರಾಜ್ಯಾದ್ಯಂತ ಮೇ 9 ನೇ ತಾರೀಖು ಮೈಕ್ ಪ್ರಾರ್ಥನೆ ತಡೆಯದಿದ್ದರೆ ಹಿಂದೂ ಸಂಘಟನೆಗಳಿಂದ ಸಂಘರ್ಷವಾಗಲಿದ್ದು, ಆಜಾನ್ ವಿರುದ್ಧ ಆರತಿ, ಹನುಮಾನ್ ಚಾಲೀಸಾ ಪಠಣ ಪಠಿಸಲಾಗುವುದು. ಹಿಂದೂ ದೇವಾಲಯಗಳ ಬಳಿ ಶ್ರೀರಾಮನ ಭಜನೆ ಮಾಡಲು ಶ್ರೀರಾಮ ಸೇನೆ ನಿರ್ಧರಿಸಿದೆ.

    ಮೇ 9 ರ ಬೆಳ್ಳಗ್ಗೆ 5 ಗಂಟೆಗೆ ದೇಗುಲ, ಮಠದಲ್ಲಿ ಭಜನೆ ನಡೆಸುವ ಪ್ಲ್ಯಾನ್ ಹಾಕಿಕೊಂಡಿದೆ. ಹಿಂದೂಪರ ಸಂಘಟನೆಗಳು ಅಂದು ರಾಜ್ಯದ ದೇವಾಲಯಗಳಲ್ಲಿ ಮೈಕ್ ಹಾಕಿ ಕೀರ್ತನೆ, ಭಜನೆ ಪಠಣೆ ಮಾಡಲಿವೆ.

  • ಮಠಗಳಿಂದ 30% ಕಮಿಷನ್ ಆರಂಭವಾಗಿದ್ದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ: ಆಂದೋಲ ಶ್ರೀ

    ಮಠಗಳಿಂದ 30% ಕಮಿಷನ್ ಆರಂಭವಾಗಿದ್ದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ: ಆಂದೋಲ ಶ್ರೀ

    ಬೆಂಗಳೂರು: ಕಮಿಷನ್ ದಂಧೆ ಆರಂಭವಾಗಿದ್ದೆ ಕಾಂಗ್ರೆಸ್‌ ಸರ್ಕಾರದಲ್ಲಿ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಆಂದೋಲ ಮಠದ  ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಹೇಳಿದ್ದಾರೆ.

    ಮಠಗಳಿಗೆ ಬರುವ ಅನುದಾನದಲ್ಲಿ 30% ಕಮಿಷನ್ ನೀಡಬೇಕು ಎಂಬ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ದಿಂಗಾಲೇಶ್ವರ ಸ್ವಾಮೀಜಿಯವರ ಆರೋಪವನ್ನು ನಾವು ಕೂಡ ಒಪ್ಪಿಕೊಳ್ಳುತ್ತೇವೆ. ಆದರೆ ಕಮಿಷನ್ ದಂಧೆ ಬಿಜೆಪಿ ಸರ್ಕಾರದಲ್ಲಿ ಆರಂಭವಾಗಿಲ್ಲ. 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 30% ಕಮಿಷನ್ ಆರಂಭವಾಗಿದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯ ಹಿಂದಿದ್ದಾರಾ ಮೌಲ್ವಿ?

    DINGALESWARA

    ಮಠಗಳಿಂದ 30% ಕಮಿಷನ್ ಆರಂಭವಾಗಿದ್ದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಸರ್ಕಾರದಿಂದ 50 ಲಕ್ಷ ರೂ. ಅನುದಾನ ಪಡೆಯಲು, 15 ಲಕ್ಷ ರೂ. ಕಮಿಷನ್ ಕೊಟ್ಟಿದ್ದೆ. ಈ ವಿಚಾರ ಅಂದೇ ಬಹಿರಂಗಪಡಿಸಲು ಮುಂದಾಗಿದ್ದಾಗ ಕೆಲ ಮಠಾಧೀಶರು ತಡೆದಿದ್ದರು ಎಂದು ಹೇಳಿದರು.

    ಈ ವಿವಾದವನ್ನು ಇಂದು ಬಿಜೆಪಿ ಸರ್ಕಾರಕ್ಕೆ‌ ಮಾತ್ರ ಕಳಂಕ ಅಂಟಿಸುತ್ತಿರುವುದು ಕಳವಳಕಾರಿ. ಸರ್ಕಾರದಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿದರೆ ಮಾತ್ರ ಬೆಳಕಿಗೆ ಬರುತ್ತದೆ ಎಂದು ತಿಳಿಸಿದರು.

  • ಮುಸ್ಲಿಂ ಗುಲಾಮಿ ಹೆಸರು ತೆಗೆದು ಸರ್ಕಲ್‍ಗಳಿಗೆ ಹಿಂದೂ ರಾಜರ, ಸಾಹಿತಿಗಳ ಹೆಸರಿಡಬೇಕು: ಆಂದೋಲ ಶ್ರೀ

    ಮುಸ್ಲಿಂ ಗುಲಾಮಿ ಹೆಸರು ತೆಗೆದು ಸರ್ಕಲ್‍ಗಳಿಗೆ ಹಿಂದೂ ರಾಜರ, ಸಾಹಿತಿಗಳ ಹೆಸರಿಡಬೇಕು: ಆಂದೋಲ ಶ್ರೀ

    ಕಲಬುರಗಿ: ಮುಸ್ಲಿಂ ಗುಲಾಮಿ ಹೆಸರು ತೆಗೆದು ನಗರದ ಆ ಸರ್ಕಲ್‍ಗಳಿಗೆ ಹಿಂದೂ ರಾಜರ, ಸಾಹಿತಿಗಳ ಹೆಸರಿಡಬೇಕು ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಊರು ಗ್ರಾಮಗಳಿಗೆ ಮುಸ್ಲಿಂ ರಾಜರ ಹೆಸರುಗಳಿವೆ. ಮುಸ್ಲಿಂ ರಾಜರು ತಮಗೆ ಬೇಕಾದಂತೆ ತಮ್ಮವರ ಹೆಸರು ಇಟ್ಟಿದ್ದಾರೆ. ಜಿಲ್ಲೆಯಲ್ಲಿ ಕೂಡಾ ಅನೇಕ ಮುಸ್ಲಿಂ ರಾಜರ ಹೆಸರುಗಳಿವೆ. ಗುಲಾಮಿ ಹೆಸರು ಬದಲಾಯಿಸಿ ಹಿಂದೂ ರಾಜ ಮಹಾರಾಜರು, ಸಾಹಿತಿಗಳ ಹೆಸರನ್ನಿಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕ- ಕಥೆಯೇ ರೋಚಕ!

    ಹಿಂದೂಗಳು ಬಿಜೆಪಿಗೆ ಮತಹಾಕಿ ಅಧಿಕಾರಕ್ಕೆ ತಂದಿದ್ದಾರೆ. ಹಿಂದೂಗಳ ಬೇಡಿಕೆಯನ್ನು ಇಡೇರಿಸಬೇಕು. ನಿಮ್ಮನ್ನು ಬಿಟ್ಟು ಕಾಂಗ್ರೆಸ್, ಜೆಡಿಎಸ್‍ನವರು ಮಾಡುತ್ತಾರೆಯೇ? ಕಾನೂನಿನ ಪ್ರಕಾರ ಹಿಂದೂಗಳ ಬೇಡಿಕೆ ಈಡೇರಿಸಬೇಕು. ಹೆಸರು ಬದಲಾವಣೆ ಜೊತೆಗೆ ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ಜಾರಿಯಾದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ. ಮುಜರಾಯಿ ಅಧೀನಕ್ಕೆ ಒಳಪಡುವ ದೇವಸ್ಥಾನಗಳ ಸುತ್ತ ಕಡ್ಡಾಯವಾಗಿ ಹಿಂದೂಗಳಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

  • ರಾಮ ಸುಳ್ಳು ಅಂದೋರೆಲ್ಲ ಗೋರಿ ಸೇರಿದ್ದು, ಇನ್ನೊಬ್ಬ ಉಳಿದಿದ್ದಾನೆ: ಆಂದೋಲ ಶ್ರೀ

    ರಾಮ ಸುಳ್ಳು ಅಂದೋರೆಲ್ಲ ಗೋರಿ ಸೇರಿದ್ದು, ಇನ್ನೊಬ್ಬ ಉಳಿದಿದ್ದಾನೆ: ಆಂದೋಲ ಶ್ರೀ

    ಕಲಬುರಗಿ: ರಾಮ ಸುಳ್ಳು ಅಂದೋರೆಲ್ಲ ಗೋರಿ ಸೇರಿದ್ದು, ಇನ್ನೊಬ್ಬ ಉಳಿದಿದ್ದಾನೆ. ಆತ ಮೈಸೂರಿನ ಸೈತಾನ್, ಅವನೂ ಗೋರಿ ಸೇರಲಿದ್ದಾನೆ ಎಂದು ಆಂದೋಲ ಕರುಣೇಶ್ವರ ಮಠದ ಸಿದ್ದಲಿಂಗಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಜಗತ್ ವೃತ್ತದಲ್ಲಿ ಆಯೋಜಿಸಿರುವ ರಾಮ ಮಂದಿರ ಕಟ್ಟುವ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ರಾಮ ಸುಳ್ಳು ಎಂದಿದ್ದ ಕರುಣಾನಿಧಿ ಗೋರಿ ಸೇರಿದ್ದು, ಕಿಡ್ನಿ ವೈಫಲ್ಯದಿಂದ ಯು.ಆರ್.ಅನಂತಮೂರ್ತಿ ಗೋರಿ ಸೇರಿದ್ದಾರೆ. ಹಿಂದೂಗಳ ವಿರುದ್ಧ ಮಾತನಾಡುತ್ತಿದ್ದ ಗೌರಿ ಲಂಕೇಶ್ ಗೋರಿ ಸೇರಿದ್ದಾಳೆ. ಇನ್ನೊಬ್ಬ ಉಳಿದಿದ್ದಾನೆ. ಮೈಸೂರಿನ ಸೈತಾನ್ ಅವನೂ ಗೋರಿ ಸೇರಲಿದ್ದಾನೆ ಎಂದು ಪರೋಕ್ಷವಾಗಿ ಭಗವಾನ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

    ಇದೇ ವೇಳೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಮುಂದಾದ ಫಾತಿಮಾಳನ್ನು ವೇಶ್ಯೆ ಎಂದು ಲೇವಡಿ ಮಾಡಿದ ಸ್ವಾಮೀಜಿ, ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸಿದ ಇಂಥವರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸುವುದಾಗಿ ಹೇಳುತ್ತಾರೆ. ಮೊದಲು ಇಂಥವರನ್ನು ಜೈಲಿಗೆ ಕಳುಹಿಸಬೇಕು ಎಂದು ಕಿಡಿಕಾರಿದರು. ರಾಮನ ಹೆಸರಲ್ಲಿ ಮೋದಿ ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಬದ್ಧರಾಗಿರಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv