Tag: ಆಂಟೋನಿ ತಟ್ಟಿಲ್‌

  • ಬೆಸ್ಟ್ ಫ್ರೆಂಡ್ ಕೀರ್ತಿ ಸುರೇಶ್ ಮದುವೆಯಲ್ಲಿ ಕನ್ನಡತಿ ಸೋನು ಗೌಡ

    ಬೆಸ್ಟ್ ಫ್ರೆಂಡ್ ಕೀರ್ತಿ ಸುರೇಶ್ ಮದುವೆಯಲ್ಲಿ ಕನ್ನಡತಿ ಸೋನು ಗೌಡ

    ಹುಭಾಷಾ ನಟಿ ಕೀರ್ತಿ ಸುರೇಶ್ (Keerthy Suresh) ಮದುವೆ ಇತ್ತೀಚೆಗೆ ಗೋವಾದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಮದುವೆಯಲ್ಲಿ ಕನ್ನಡದ ‘ಗುಳ್ಟು’ ನಟಿ ಸೋನು ಗೌಡ (Sonu Gowda) ಭಾಗಿಯಾಗಿದ್ದು, ಸುಂದರ ಫೋಟೋವೊಂದನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಉಗ್ರಂ ಮಂಜು ಅಬ್ಬರಕ್ಕೆ ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್

    ಎರಡು ಸುಂದರ ಹೃದಯಗಳು ಒಟ್ಟಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗುವುದು ತುಂಬಾ ಖುಷಿಯ ವಿಚಾರ. ಈ ಸುಂದರ ದಂಪತಿಗೆ ಮತ್ತೊಮ್ಮೆ ಹ್ಯಾಪಿ ಮ್ಯಾರೀಡ್ ಲೈಫ್, ನಿಮ್ಮ ಜೀವನ ಸುಂದರವಾಗಿರಲಿ ಎಂದು ನಟಿ ಸೋನು ಶುಭಹಾರೈಸಿದ್ದಾರೆ. ಮದುವೆಯಲ್ಲಿ ಕೀರ್ತಿ ದಂಪತಿ ಜೊತೆ ತೆಗೆದ ಸುಂದರ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ.

    ಈ ಹಿಂದೆಯೇ ಸಂದರ್ಶನವೊಂದರಲ್ಲಿ ಕೀರ್ತಿ ಜೊತೆಗಿನ ಸ್ನೇಹದ ಬಗ್ಗೆ ಸೋನು ಮಾತನಾಡಿದ್ದರು.  ಕಾಮನ್ ಫ್ರೆಂಡ್ ಮೂಲಕ ಕೀರ್ತಿ ಸುರೇಶ್ ಪರಿಚಯವಾಗಿದ್ದು, ಇದೀಗ ಸೋನು ಅವರಿಗೂ ಕೀರ್ತಿ ಬೆಸ್ಟ್ ಫ್ರೆಂಡ್ ಆಗಿದ್ದಾರೆ. ನಾವು ಫೋನ್‌ನಲ್ಲೂ ಮಾತನಾಡುತ್ತೇವೆ, ಆದರೆ ಸಿನಿಮಾ ಬಗ್ಗೆ ಮಾತನಾಡೋದಿಲ್ಲ, ಕೀರ್ತಿ ಅವರು ಆಹಾರ ಪ್ರಿಯೆ. ಹಾಗಾಗಿ ಆಹಾರದ ವಿಚಾರವಾಗಿ ಹೆಚ್ಚಾಗಿ ಮಾತನಾಡುತ್ತೇವೆ ಎಂದಿದ್ದರು ಸೋನು. ಹಾಗಾಗಿ ನಟಿಯ ಮದುವೆಯಲ್ಲಿ ಸೋನುಗೆ ವಿಶೇಷವಾಗಿ ಆಹ್ವಾನ ನೀಡಲಾಗಿತ್ತು.

    ಇನ್ನೂ ಡಿ.12ರಂದು ಗೋವಾದಲ್ಲಿ ಆಂಟೋನಿ ತಟ್ಟಿಲ್ (Antony Thattil) ಜೊತೆ ಕೀರ್ತಿ ಮದುವೆಯಾದರು. ಈ ಮದುವೆಯಲ್ಲಿ ದಳಪತಿ ವಿಜಯ್, ತ್ರಿಷಾ, ಜವಾನ್ ಡೈರೆಕ್ಟರ್ ಅಟ್ಲಿ ದಂಪತಿ, ಕಲ್ಯಾಣಿ ಪ್ರಿಯಾದರ್ಶನ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದರು.

  • ಸಹನಟನ ಜೊತೆ ರೊಮ್ಯಾಂಟಿಕ್ ಪೋಸ್ ಕೊಟ್ಟ ಕೀರ್ತಿ ಸುರೇಶ್‌ಗೆ ನೆಟ್ಟಿಗರಿಂದ ಟೀಕೆ

    ಸಹನಟನ ಜೊತೆ ರೊಮ್ಯಾಂಟಿಕ್ ಪೋಸ್ ಕೊಟ್ಟ ಕೀರ್ತಿ ಸುರೇಶ್‌ಗೆ ನೆಟ್ಟಿಗರಿಂದ ಟೀಕೆ

    ಸೌತ್ ಬೆಡಗಿ ಕೀರ್ತಿ ಸುರೇಶ್ (Keerthy Suresh) ಡಿ.12ರಂದು ಆಂಟೋನಿ ತಟ್ಟಿಲ್ (Antony Thattil) ಜೊತೆ ಹಸೆಮಣೆ ಏರಿದರು. ಈ ಬೆನ್ನಲ್ಲೇ ಕೀರ್ತಿ ನಟಿಸಿರುವ ಮೊದಲ ಬಾಲಿವುಡ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ನವವಧು ಕೀರ್ತಿ ಸುರೇಶ್ ಇದೀಗ ನಟ ವರುಣ್ ಧವನ್ ಜೊತೆ ರೊಮ್ಯಾಂಟಿಕ್ ಪೋಸ್ ಕೊಟ್ಟಿದ್ದಕ್ಕೆ ನೆಟ್ಟಿಗರು ಟೀಕಿಸಿದ್ದಾರೆ.

    ‘ಬೇಬಿ ಜಾನ್’ ಬಾಲಿವುಡ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಇತ್ತೀಚೆಗೆ ಮಾಡ್ರನ್ ಡ್ರೆಸ್ ತೊಟ್ಟು ಮಾಂಗಲ್ಯ ಧರಿಸಿ ಬಂದಿದ್ದಕ್ಕೆ ನಟಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಈ ಬೆನ್ನಲ್ಲೇ ವರುಣ್ (Varun Dhawan) ಜೊತೆ ಕ್ಲೋಸ್ ಆಗಿ ಪೋಸ್ ಕೊಟ್ಟಿದ್ದಕ್ಕೆ ನಟಿ ವಿರುದ್ಧ ನೆಟ್ಟಿಗರು ರಾಂಗ್ ಆಗಿದ್ದಾರೆ. ಮದುವೆಯಾಗಿ 10 ದಿನ ಕಳೆದಿಲ್ಲ. ಇಷ್ಟು ರೊಮ್ಯಾಂಟಿಕ್ ಆಗಿ ನಟನೊಂದಿಗೆ ಪೋಸ್ ಕೊಡುವ ಅಗತ್ಯ ಇದ್ಯಾ? ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ಕೆಲ ಪರ ವಿರೋಧದ ಚರ್ಚೆಗೆ ನಡೆಯುತ್ತಿದೆ.

    ಇನ್ನೂ ಇದೇ ಡಿ.12ರಂದು ಗೋವಾದಲ್ಲಿ ನಟಿ ಅದ್ಧೂರಿಯಾಗಿ ಮದುವೆಯಾದರು. 15 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು. ಈ ಮದುವೆಗೆ ತ್ರಿಷಾ, ದಳಪತಿ ವಿಜಯ್, ಕಲ್ಯಾಣಿ ಪ್ರಿಯಾದರ್ಶನ್, ಅಟ್ಲಿ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

  • ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್

    ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್

    ಸೌತ್ ಬ್ಯೂಟಿ ಕೀರ್ತಿ ಸುರೇಶ್ (Keerthy Suresh) ಅವರು ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ (Antony Thattil) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖುಷಿ ಖುಷಿಯಾಗಿ ನಟಿ ಗೋವಾದಲ್ಲಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಸೃಜನ್ ಲೋಕೇಶ್ ಗುಡ್ ನ್ಯೂಸ್- ಮತ್ತೆ ಶುರುವಾಗಲಿದೆ ‘ಮಜಾ ಟಾಕೀಸ್’

    35 ವರ್ಷದ ಆಂಟೋನಿ ತಟ್ಟಿಲ್ ಜೊತೆ ನಟಿ ಇಂದು (ಡಿ.12) ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗುವ ಮೂಲಕ 15 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ಜರುಗಿದೆ. ಈ ಮದುವೆಯಲ್ಲಿ ವಿಜಯ್‌ ದಳಪತಿ ಭಾಗಿಯಾಗಿ ನವಜೋಡಿಗೆ ಶುಭಕೋರಿದ್ದಾರೆ.

    ಉದ್ಯಮಿಯಾಗಿ ಆಂಟೊನಿ ತಟ್ಟಲ್ ಅವರು ಯಶಸ್ಸು ಕಂಡಿದ್ದಾರೆ. ಕೀರ್ತಿ ಸುರೇಶ್ ಅವರು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಕೀರ್ತಿ ಸುರೇಶ್ ಅವರ ಮದುವೆಯ ಫೋಟೋಗಳು ವೈರಲ್ ಆಗಿವೆ. ಅಭಿಮಾನಿಗಳು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

    ಇನ್ನೂ ಡಿ.25ರಂದು ಕೀರ್ತಿ ಸುರೇಶ್ ನಟಿಸಿರುವ ‘ಬೇಬಿ ಜಾನ್’ (Baby John) ಬಾಲಿವುಡ್ ಚಿತ್ರ ಕೂಡ ರಿಲೀಸ್ ಆಗಿದೆ. ಮೊದಲ ಬಾಲಿವುಡ್ ಚಿತ್ರಕ್ಕೆ ಅವರು ವರುಣ್ ಧವನ್‌ಗೆ ನಾಯಕಿಯಾಗಿದ್ದಾರೆ.