Tag: ಆಂಜನೇಯ ದೇಗುಲ

  • ಆಂಜನೇಯ ದೇಗುಲ ನಿರ್ಮಾಣಕ್ಕೆ 1.83 ಲಕ್ಷ ದೇಣಿಗೆ ನೀಡಿದ ಭಿಕ್ಷುಕಿ

    ಆಂಜನೇಯ ದೇಗುಲ ನಿರ್ಮಾಣಕ್ಕೆ 1.83 ಲಕ್ಷ ದೇಣಿಗೆ ನೀಡಿದ ಭಿಕ್ಷುಕಿ

    – ದೇವರ ಕಾರ್ಯದಲ್ಲಿ ತನ್ನದೂ ಪಾಲಿರಲಿ ಅಂತ ದೇಣಿಗೆ

    ರಾಯಚೂರು: ಆಂಜನೇಯ ದೇಗುಲ ನಿರ್ಮಾಣಕ್ಕಾಗಿ ವಯಸ್ಸಾದ ಭಿಕ್ಷುಕಿಯೊಬ್ಬರು 1.83 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಅಚ್ಚರಿ ಮೂಡಿಸಿರುವ ಘಟನೆ ರಾಯಚೂರು (Raichuru) ತಾಲೂಕಿನ ಬಿಜನಗೇರಾ ಗ್ರಾಮದಲ್ಲಿ ನಡೆದಿದೆ.

    ಹೌದು, ದಾನ ಮಾಡಲು, ದೇಣಿಗೆ ನೀಡಲು ಶ್ರೀಮಂತರೇ ಆಗಬೇಕಿಲ್ಲ. ಹೃದಯ ಶ್ರೀಮಂತಿಕೆಯಿದ್ರೆ ಭಿಕ್ಷುಕರು ಸಹ ಲಕ್ಷಾಂತರ ರೂಪಾಯಿ ದೇಣಿಗೆ ನೀಡಬಹುದು. ಹಾಗೆಯೇ 60 ವರ್ಷದ ರಂಗಮ್ಮ ಎಂಬುವವರು ಭಿಕ್ಷೆಯಿಂದ ಬಂದ ಹಣದಲ್ಲೇ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ.

    ಸುಮಾರು 30 ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ಬಂದು ಬಿಜನಗೇರಾ ಗ್ರಾಮದಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ರಂಗಮ್ಮ ಭಿಕ್ಷುಕಿಯಾದ್ರು ಮಹಾದಾನಿಯಾಗಿದ್ದಾಳೆ. ಯಾರ ಬಳಿಯೂ ಮಾತನಾಡದ ವೃದ್ಧೆ ಡಬ್ಬಿ, ಗಂಟುಗಳಲ್ಲಿ ಕೂಡಿಟ್ಟಿದ್ದ ಹಣ ಆಕಸ್ಮಿಕವಾಗಿ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಗ್ರಾಮಸ್ಥರೇ ಹಣವನ್ನ ಎಣಿಸಿ, ಈ ಹಣ ಏನು ಮಾಡುತ್ತಿಯಾ ಅಂತ ವೃದ್ಧೆಯನ್ನ ಕೇಳಿದ್ದಾರೆ. ಆಗ ಅವರು ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.ಇದನ್ನೂ ಓದಿ: ಟ್ಯಾರಿಫ್‌ ವಾರ್‌ಗೆ ಸೆಡ್ಡು| P-8I ವಿಮಾನ ಖರೀದಿಸಲ್ಲ ಎಂದ ಭಾರತ

    ಇದಕ್ಕೂ ಮುನ್ನ ನಾಲ್ಕು ವರ್ಷಗಳ ಹಿಂದೆ ವೃದ್ಧೆಯ ಬಳಿ 30 ಸಾವಿರ ರೂ. ಇರುವುದನ್ನ ಗಮನಿಸಿದ ಗ್ರಾಮಸ್ಥರು ಪುಟ್ಟ ಸೂರನ್ನ ನಿರ್ಮಿಸಿ ಕೊಟ್ಟಿದ್ದರು. 4*5 ಅಡಿ ಸೂರಿನಲ್ಲೇ ಇರುವ ರಂಗಮ್ಮಳಿಗೆ ಜನ ಇದ್ದಲ್ಲಿಗೆ ಬಂದು ಭಿಕ್ಷೆ ಕೊಟ್ಟು ಹೋಗುತ್ತಾರೆ. ಊರಿನವರೇ ಸೀರೆ, ಊಟ ಕೊಡುತ್ತಿದ್ದಾರೆ. ದಾರಿಹೋಕರು, ಆಟೋ ರಿಕ್ಷಾ ಚಾಲಕರು, ಟಂಟಂ ಚಾಲಕರು ವೃದ್ಧೆಗೆ ಹಣ ನೀಡಿದರೆ ತಮ್ಮ ವ್ಯಾಪಾರ ಜೋರಾಗಿ ನಡೆಯುತ್ತದೆ ಎಂದು ನಿತ್ಯ ಹತ್ತು, ಇಪ್ಪತ್ತು, ನೂರು ರೂಪಾಯಿ ಸೇರಿ ತಿಳಿದಷ್ಟು ಕೊಡುತ್ತಾರೆ. ಈ ಭಿಕ್ಷೆಯ ಹಣವನ್ನೇ ವೃದ್ಧೆ ದೇವಸ್ಥಾನದ ನಿರ್ಮಾಣಕ್ಕೆ ತನ್ನ ಸೇವೆಯೂ ಇರಲಿ ಅಂತ ನೀಡಿದ್ದಾರೆ. ದೇವಸ್ಥಾನಗಳ ಮುಂದೆ ಸಾಮಾನ್ಯವಾಗಿ ಭಿಕ್ಷುಕರು ಕಾಣುತ್ತಾರೆ ಆದ್ರೆ ಇಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಭಿಕ್ಷುಕಿಯೊಬ್ಬರು ದೇಣಿಗೆ ನೀಡಿದ್ದಾರೆ.

    ಊಟಕ್ಕಾಗಿ ಮಾತ್ರ ಕೈ ಚಾಚುವ ರಂಗಮ್ಮನ ಬಳಿಯಿದ್ದ ದುಡ್ಡನ್ನ ಕೆಲ ಪುಂಡರು ಕದ್ದಿರುವ ಉದಾಹರಣೆಗಳೂ ಇವೆ. ತೆಲುಗು ಭಾಷೆ ಮಾತನಾಡುವ ರಂಗಮ್ಮ ಯಾರೊಂದಿಗೂ ಬೆರೆಯದೇ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಇತ್ತೀಚಿಗೆ ದೇವಸ್ಥಾನ ಲೋಕಾರ್ಪಣೆಯಾಗಿದ್ದು, ರಂಗಮ್ಮ ಗ್ರಾಮದ ದೈವದ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಗ್ರಾಮಸ್ಥರು ರಂಗಮ್ಮನ ಬಗ್ಗೆ ಈಗ ಹೆಮ್ಮೆ ವ್ಯಕ್ತಪಡಿಸುತ್ತಿದ್ದು, ಸನ್ಮಾನಿಸಿ ಗೌರವಿಸಿದ್ದಾರೆ.ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ‍್ಯ – ರಾಹುಲ್ ವಿರುದ್ಧ ಹೆಚ್‌ಡಿಕೆ ಕಿಡಿ

  • ರಾಜ್ಯದಲ್ಲಿಂದು ಶ್ರೀರಾಮನವಮಿ ಆಚರಣೆ – ಆಂಜನೇಯನ ದೇಗುಲಗಳಲ್ಲಿ ರಾಮನ ಆರಾಧನೆ

    ರಾಜ್ಯದಲ್ಲಿಂದು ಶ್ರೀರಾಮನವಮಿ ಆಚರಣೆ – ಆಂಜನೇಯನ ದೇಗುಲಗಳಲ್ಲಿ ರಾಮನ ಆರಾಧನೆ

    ಬೆಂಗಳೂರು: ನಾಡಿನೆಲ್ಲೆಡೆ ಇಂದು ರಾಮನವಮಿ ಸಂಭ್ರಮ. ರಾಮ ಹುಟ್ಟಿದ ದಿನವನ್ನು ಅದ್ದೂರಿಯಾಗಿ ಆಚರಿಸಲು ಬೆಂಗಳೂರಿನಾದ್ಯಂತ ಸಿದ್ಧತೆ ಮಾಡಲಾಗಿದ್ದು, ರಥಯಾತ್ರೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ರಾಜಧಾನಿ ಎಲ್ಲೆಡೆ ಇಂದು ರಾಮ ನಾಮ ಭಜನೆ ಜಪಿಸಲಿದೆ. ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿದೆ. ಇಡೀ ದಿನ ಭಕ್ತರು ಉಪವಾಸ ಇದ್ದು ವ್ರತ ಮಾಡಿ ಪಾನಕ, ಕೋಸಂಬರಿ, ಮಜ್ಜಿಗೆ ಸೇವಿಸಿದರೆ ಶುಭ ಆಗುತ್ತೆ ಅನ್ನೋ ನಂಬಿಕೆಯಿದೆ.

    ಒಂದೆಡೆ ದೇವಾಲಯಗಳಲ್ಲಿ ಜೈ ರಾಮ ಭಜನೆ ಮೊಳಗುತ್ತಿದ್ರೇ ಮತ್ತೊಂದೆಡೆ ರಾಮನವಮಿ ಅಂಗವಾಗಿ ಬೃಹತ್ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ನಗರದ ಕೋರಮಂಗಲದ ಎರಡನೇ ಕ್ರಾಸ್ ನಿಂದ ಸಂಜೆ 4 ಗಂಟೆಯಿಂದ ಆರಂಭವಾಗಲಿದೆ. ಇನ್ನೊಂದೆಡೆ ವಿಶ್ವ ಹಿಂದೂ ಪರಿಷದ್ ಹೆಬ್ಬಾಳ ಘಟಕದಿಂದಲೂ ರಾಮರಥ ಯಾತ್ರೆ ಶೋಭಾ ಯಾತ್ರೆಯನ್ನು ಆಯೋಜಿಸಲಾಗಿದೆ. ಈ ರಥಯಾತ್ರೆ ಸಂಜೆ 4 ಕ್ಕೆ ಅಶ್ವಥನಗರದಿಂದ ಆರಂಭವಾಗಿ ಸಂಜಯನಗರ ಮುಖ್ಯರಸ್ತೆಯ ಮೂಲಕ ಸಾಗಿ ಭೂಪಸಂದ್ರದಲ್ಲಿ ಕೊನೆಯಾಗುವುದು.

    ಇತ್ತ ಇಂದಿನಿಂದ 2 ದಿನಗಳ ಕಾಲ ಗಾಳಿ ಆಂಜನೇಯ, ಸ್ಯಾಟಲೈಟ್ ಬಸ್ ನಿಲ್ದಾಣದ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿಷೇಧವಿದೆ. 2 ದಿನಗಳ ಕಾಲ ಗಾಳಿ ಆಂಜನೇಯ ದೇಗುಲದಲ್ಲಿ ರಥೋತ್ಸವ ನಡೆಯಲಿದ್ದು, 2 ದಿನ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಬೇಕಿದೆ. ಇದನ್ನೂ ಓದಿ: ಸುರ್ಜೆವಾಲ ಟ್ವೀಟ್‌ಗೆ ಯಾವುದೇ ಕಿಮ್ಮತ್ತಿಲ್ಲ : ಬೊಮ್ಮಾಯಿ

    ಪರ್ಯಾಯ ಮಾರ್ಗ ಎಲ್ಲಿ..?
    * ಮೈಸೂರು ಕಡೆ ಹೋಗುವವರು ಹೊಸಗುಡ್ಡದಹಳ್ಳಿ ಜಂಕ್ಷನ್ ಬಳಿ ಎಡ ತಿರುವು – ಟಿಂಬರ್ ಯಾರ್ಡ್ ಬಡಾವಣೆ ಮೂಲಕ – ಹೊಸಕೆರೆಹಳ್ಳಿ ರಸ್ತೆ ಮಾರ್ಗವಾಗಿ – ಮೈಸೂರು ಕಡೆ ಹೋಗಬಹುದು.
    * ಬೆಂಗಳೂರು ಕಡೆ ಬರುವವರು ಕಿಂಕೋ ಜಂಕ್ಷನ್ ಬಳಿ ಎಡ ತಿರುವು – ಮೇಲ್ಸೇತುವೆ ಮೂಲಕ ಬಾಪೂಜಿ ಜಂಕ್ಷನ್ ಮೂಲಕ ನಗರಕ್ಕೆ ಎಂಟ್ರಿ

  • ಆಂಜನೇಯನಿಗೆ ಪೂಜೆ ಸಲ್ಲಿಸುತ್ತಿದ್ದಾಗ 11 ಅಡಿ ಎತ್ತರದಿಂದ ಜಾರಿ ಬಿದ್ದು ಅರ್ಚಕ ಸಾವು!

    ಆಂಜನೇಯನಿಗೆ ಪೂಜೆ ಸಲ್ಲಿಸುತ್ತಿದ್ದಾಗ 11 ಅಡಿ ಎತ್ತರದಿಂದ ಜಾರಿ ಬಿದ್ದು ಅರ್ಚಕ ಸಾವು!

    ಚೆನ್ನೈ: ಆಂಜನೇಯ ದೇವರಿಗೆ ಪೂಜೆ ಮಾಡುವ ವೇಳೆ 11 ಅಡಿ ಎತ್ತರದಿಂದ ಅರ್ಚಕರೊಬ್ಬರು ಬಿದ್ದು ಸಾವನ್ನಪ್ಪಿರುವ ದುರ್ಘಟನೆ ತಮಿಳುನಾಡಿನಲ್ಲಿ ನಾಮಕ್ಕಲ್ ದೇಗುಲದಲ್ಲಿ ನಡೆದಿದೆ.

    ನಾಮಕ್ಕಲ್‍ನಲ್ಲಿ 18 ಅಡಿ ಎತ್ತರದ ಆಂಜನೇಯನ ವಿಗ್ರಹವಿರುವ ದೇಗುಲವಿದೆ. ಅಲ್ಲಿ ದೇವರ ಪೂಜೆ ವೇಳೆ ಮಾಲಾರ್ಪಣೆ ಮಾಡುವಾಗ ಏಣಿಯಿಂದ ಬಿದ್ದು ಅರ್ಚಕರಾದ ವೆಂಕಟೇಶ್(53) ಸಾವನ್ನಪ್ಪಿದ್ದಾರೆ. ಭಾನುವಾರ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಭಕ್ತರೊಬ್ಬರು ವಿಶೇಷ ಹಾರವನ್ನು ನೀಡಿದ್ದರು. ಈ ವೇಳೆ ಕಬ್ಬಿಣದ ಮೆಟ್ಟಿಲ ಮೇಲೆ ನಿಂತು ದೇವರಿಗೆ ಹಾರ ಹಾಕಲು ಮುಂದಾಗುತ್ತಿದ್ದಾಗ ಕಾಲು ಜಾರಿ 11 ಅಡಿ ಎತ್ತರದಿಂದ ಅರ್ಚಕರು ಕೆಳಗೆ ಬಿದ್ದಿದ್ದಾರೆ.

    ಕಾಲು ಜಾರಿದ ಪರಿಣಾಮ ನೇರವಾಗಿ ಕೆಳಗೆ ಕಲ್ಲಿನ ಮೇಲೆ ಬಿದ್ದ ಅರ್ಚಕರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳದಲ್ಲಿದ್ದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಮೊದಲೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಅರ್ಚಕರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮೃತಟ್ಟಿದ್ದಾರೆ. ಈ ಘಟನೆ ನಡೆದ ಬಳಿಕ ಕೆಲವು ಗಂಟೆಗಳ ಕಾಲ ದೇಗುಲಕ್ಕೆ ಬೀಗ ಹಾಕಲಾಗಿತ್ತು.

    ದೇವಸ್ಥಾನದ ಇತಿಹಾಸದಲ್ಲೇ ಈ ರೀತಿ ದುರ್ಘಟನೆ ನಡೆದಿರಲಿಲ್ಲ. ಈ ವಿಚಾರ ದೇಗುಲದ ಸದಸ್ಯರಿಗೆ ನೋವು ತಂದಿದೆ. ವೆಂಕಟೇಶ್ ಅವರು ಬಹಳ ವರ್ಷಗಳಿಂದ ಅರ್ಚಕರಾಗಿ ದೇವರಿಗೆ ಸೇವೆ ಸಲ್ಲಿಸುತ್ತಿದ್ದರು. ಅವರೊಡನೆ ಸಹೋದರ ನಾಗರಾಜನ್ ಅವರು ಕೂಡ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ದೇವಸ್ಥಾನದ ಆಡಳಿತ ಮಂಡಳಿ ಸಂತಾಪ ಸೂಚಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv