Tag: ಅಹಮದಬಾದ್

  • ಮಾತನಾಡಲು ನಿರಾಕರಿಸಿದಕ್ಕೆ ಯುವತಿಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕ್ದ

    ಮಾತನಾಡಲು ನಿರಾಕರಿಸಿದಕ್ಕೆ ಯುವತಿಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕ್ದ

    ಗಾಂಧಿನಗರ: ಮಾತನಾಡಲು ನಿರಾಕರಿಸಿದ 25 ವರ್ಷದ ಯುವತಿಗೆ ಆ್ಯಸಿಡ್ ದಾಳಿ ನಡೆಸುವುದಾಗಿ ವ್ಯಕ್ತಿಯೋರ್ವ ಬೆದರಿಕೆ ಹಾಕಿರುವ ಘಟನೆ ಅಹಮದಬಾದ್‍ನಲ್ಲಿ ನಡೆದಿದೆ.

    ಇದೀಗ ಯುವತಿ ಆ್ಯಸಿಡ್ ದಾಳಿ ಬೆದರಿಕೆಯೊಡ್ಡಿದ್ದ ಆರೋಪಿ ವಿರುದ್ಧ ವೆಜಾಲ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಹಮದಾಬಾದ್‍ನ ಜುಹಾಪುರದ ನಿವಾಸಿಯಾಗಿರುವ ಸಂತ್ರಸ್ತೆ, ವೆಜಲ್‍ಪುರದಲ್ಲಿ ವಾಸಿಸುವ ಮನ್ಸೂರಿ ಇಬ್ಬರೂ ಸುಮಾರು ಏಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಆದರೆ ಇದೀಗ ಯುವತಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ರೇಪ್ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!

    ಮನ್ಸೂರಿ ಶನಿವಾರ ಮಧ್ಯಾಹ್ನ ಸಂತ್ರಸ್ತೆ ಮನೆಗೆ ಆಗಮಿಸಿ ಮತನಾಡುವುದನ್ನು ನಿಲ್ಲಿಸಿರುವ ಕುರಿತಂತೆ ಪ್ರಶ್ನಿಸಿದ್ದಾನೆ. ಆಗ ಯುವತಿ ನಿನ್ನೊಂದಿಗೆ ಸ್ನೇಹ ಬೆಳೆಸಲು ಇಷ್ಟವಿಲ್ಲ ಎಂದು ಹೇಳಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಮನ್ಸೂರಿ ಆಕೆಯ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಈ ವೇಳೆ ಯುವತಿ ಕಿರುಚಾಡಿದ್ದರಿಂದ ಅವರ ನೆರೆಹೊರೆಯವರು ಧಾವಿಸಿದಾರೆ. ಆಗ ವ್ಯಕ್ತಿ ಸಂತ್ರಸ್ತೆಗೆ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಈ ಘಟನೆ ಕುರಿತಂತೆ ಯುವತಿ ತನ್ನ ತಂದೆಗೆ ವಿವರಿಸಿದಾಗ ಕೂಡಲೇ ಪೊಲೀಸರನ್ನು ಸಂಪರ್ಕಿಸಲು ತಿಳಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಕ್ರಮಿನಲ್ ಬೆದರಿಕೆ ಮತ್ತು ಇತರ ದೂರುಗಳನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ಹಿರಿಯರ ಕಿರುಕುಳ – ಚರ್ಚಿನಲ್ಲಿಯೇ ಪಾದ್ರಿ ಆತ್ಮಹತ್ಯೆಗೆ ಯತ್ನ

  • ಮೋದಿ ಲಸಿಕೆ ಪ್ರವಾಸ – ಗುಜರಾತಿನ ಅಹಮದಾಬಾದ್‍ಗೆ ಬಂದಿಳಿದ ಪ್ರಧಾನಿ

    ಮೋದಿ ಲಸಿಕೆ ಪ್ರವಾಸ – ಗುಜರಾತಿನ ಅಹಮದಾಬಾದ್‍ಗೆ ಬಂದಿಳಿದ ಪ್ರಧಾನಿ

    ಅಹಮದಾಬಾದ್: ಕೊರೊನಾ ಲಸಿಕೆ ಅಭಿವೃದ್ಧಿ ಪರಿಶೀಲನೆಗೆ ಇಂದು ಪ್ರಧಾನಿ ಮೋದಿಯವರು ಪ್ರವಾಸಗೈಗೊಂಡಿದ್ದು, ಸದ್ಯ ಗುಜರಾತಿನ ಅಹಮದಾಬಾದ್‍ಗೆ ಬಂದಿದ್ದಾರೆ.

    ಕೋವಿಡ್ ಲಸಿಕೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆಯಲು ಮೋದಿ ಇಂದು ಅಹಮದಾಬಾದ್‍, ಪುಣೆ ಮತ್ತು ಹೈದರಾಬಾದಿಗೆ ಪ್ರವಾಸಗೈಗೊಂಡಿದ್ದಾರೆ. ಈ ಪ್ರವಾಸದ ಅಂಗವಾಗಿ ಈಗ ಗುಜರಾತಿನ ಅಹಮದಾಬಾದ್‍ಗೆ ಬಂದಿರುವ ಮೋದಿಯವರು ಝೈಡಸ್ ಬಯೋಟೆಕ್ ಪಾರ್ಕ್ ಗೆ ಭೇಟಿ ನೀಡಲಿದ್ದಾರೆ.

    ಝೈಡಸ್ ಬಯೋಟೆಕ್ ಪಾರ್ಕ್ ಭೇಟಿಯ ನಂತರ ಇಂದು ಪ್ರಧಾನಿ ಹೈದರಾಬಾದ್‍ನ ಭಾರತ್ ಬಯೋಟೆಕ್ ಮತ್ತು ಪುಣೆಯ ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಭೇಟಿ ನೀಡಲಿದ್ದಾರೆ. ಇಂದು ಬೆಳಗ್ಗೆಯಿಂದ ಸಂಜೆಯವರಿಗೂ ಲಸಿಕೆ ಪ್ರವಾಸದಲ್ಲಿ ಭಾಗಿಯಾಗಲಿರುವ ಮೋದಿ, ಇಂದು ಮಧ್ಯಾಹ್ನ ಹೈದರಾಬಾದ್‍ನ ಭಾರತ್ ಬಯೋಟೆಕ್ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಸಂಜೆ ವೇಳೆಗೆ ಪುಣೆಯ ಸೆರಮ್ ಸಂಸ್ಥೆಗೆ ತೆರಳಲಿದ್ದಾರೆ.

    ಇಂದು ಮೋದಿ ಭೇಟಿ ನೀಡಲಿರುವ ಕಂಪನಿಗಳ ಕೊರೊನಾ ಲಸಿಕೆ ಸಂಶೋಧನೆ ಮತ್ತು ಯಾವ ಹಂತಕ್ಕೆ ಬಂದಿವೆ ಎಂಬ ಮಾಹಿತಿ ನೀಡುವುದಾದರೆ, ಅಹಮದಾಬಾದ್‍ ಝೈಡಸ್ ಬಯೋಟೆಕ್ ಸಂಸ್ಥೆಯು ಝೈಕೋವಿ-ಡಿ ಎಂಬ ಕೋವಿಡ್ ಲಸಿಕೆಯನ್ನು ತಯಾರು ಮಾಡುತ್ತಿದೆ. ಸದ್ಯ ಈ ಕಾರ್ಯ 2ನೇ ಹಂತದಲ್ಲಿ ಇದ್ದು, ಜೂನ್ ಬಳಿಕವೇ ಲಸಿಕೆ ಸಿಗುವ ನಿರೀಕ್ಷೆ ಇದೆ.

    ಇದರ ಜೊತೆಗೆ ಹೈದರಾಬಾದ್‍ನ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಕಂಪನಿ ಸೇರಿ ಜಂಟಿಯಾಗಿ ಉತ್ಪಾದನೆ ಮಾಡುತ್ತಿರುವ ಕೊವ್ಯಾಕ್ಸಿನ್ ಲಸಿಕೆ 3ನೇ ಹಂತದ ಪ್ರಯೋಗ ನಡೆಸುತ್ತಿದೆ. ಪುಣೆಯ ಸೆರಮ್ ಇನ್‍ಸ್ಟಿಟ್ಯೂಟ್ ಆಕ್ಸ್ ಫರ್ಡ್ ವಿವಿ ಸಹಭಾಗಿತ್ವದಲ್ಲಿ ಆಸ್ಟ್ರಾಜೆನಿಕಾ ಎಂಬ ಕೊರೊನಾ ಲಸಿಕೆಯನ್ನು ತಯಾರು ಮಾಡುತ್ತಿದ್ದು, 3ನೇ ಹಂತದ ಪ್ರಯೋಗವನ್ನು ನಡೆಸುತ್ತಿದೆ.

  • ಸಿಂಹಗಳ ದಾಳಿಯಿಂದ ಮಾಲೀಕನನ್ನು ರಕ್ಷಿಸಿದ ಶ್ವಾನ!

    ಸಿಂಹಗಳ ದಾಳಿಯಿಂದ ಮಾಲೀಕನನ್ನು ರಕ್ಷಿಸಿದ ಶ್ವಾನ!

    ಅಹಮದಾಬಾದ್: ಸಿಂಹಗಳ ದಾಳಿಗೆ ಒಳಗಾಗಿದ್ದ ಕುರಿಗಾಹಿ ಮಾಲೀಕನನ್ನು ಸಾಕುನಾಯಿ ಕಾಪಾಡಿದ ಘಟನೆ ಗುಜರಾತ್ ನ ಅಮ್ರೆಲಿ ಜಿಲ್ಲೆಯ ಅಂಬಾರ್ಡಿ ಗ್ರಾಮದಲ್ಲಿ ನಡೆದಿದೆ.

    ಈ ಮೂಲಕ ನಾಯಿ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧ ಇರುವುದು ಮತ್ತೊಮ್ಮೆ ಸಾಬೀತಾಗಿದೆ. ಕುರಿಗಾಹಿಯೊಬ್ಬರ ಮೇಲೆ ಸಿಂಹಗಳು ದಾಳಿ ನಡೆಸಿದ ಸಂದರ್ಭದಲ್ಲಿ ಆತ ಸಾಕಿದ ನಾಯಿ ಪ್ರಾಣದ ಹಂಗು ತೊರೆದು ಮಾಲೀಕನ ಪ್ರಾಣ ರಕ್ಷಿಸಿದೆ.

    ಭಾವೇಶ್ ಹಮೀರ್ ಭರ್ವಾದ್ (25) ಸಿಂಹಗಳ ದಾಳಿಯಿಂದ ಪಾರಾದ ಕುರಿಗಾಹಿ. ಸಿಂಹಗಳ ದಾಳಿಯಿಂದಾಗಿ ಕುರಿಗಾಹಿ ಭಾವೇಶ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಗ್ರಾಮಸ್ಥರು ಸಾವರ್ಕುಂಡ್ಲಾದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    ಏನಿದು ಘಟನೆ?
    ಭಾವೇಶ್ ಎಂದಿನಂತೆ ಶನಿವಾರ ತನ್ನ ಕುರಿಗಳ ಹಿಂಡು ಹಾಗೂ ಸಾಕುನಾಯಿಯೊಂದಿಗೆ ಅಂಬಾರ್ಡಿ ಗ್ರಾಮದ ಹೊರವಲಯದಲ್ಲಿ ಕುರಿಮೇಯಿಸಲು ತೆರಳಿದ್ದರು. ಈ ವೇಳೆ ಕುರಿಹಿಂಡಿನ ಮೇಲೆ ಏಕಾಏಕಿ ಮೂರು ಸಿಂಹಗಳು ದಾಳಿ ನಡೆಸಿದ್ದು, ಮೂರು ಕುರಿಗಳನ್ನು ಕೊಂದು ಹಾಕಿವೆ. ಇದೇ ವೇಳೆ ಸಿಂಹಗಳ ದಾಳಿಯಿಂದ ತನ್ನ ಕುರಿಗಳನ್ನು ರಕ್ಷಿಸಲು ಹೋದ ಭಾವೇಶ್ ಮೇಲೆಯೂ ಸಿಂಹಗಳು ದಾಳಿ ನಡೆಸಿವೆ.

    ಅಷ್ಟರಲ್ಲೇ ಆತ ಸಾಕಿದ ನಾಯಿ ಜೋರಾಗಿ ಬೋಗಳಲಾರಂಭಿಸಿ ಸಿಂಹಗಳು ಮುಂದೆ ಬರದಂತೆ ತಡೆದಿದೆ. ನಾಯಿ ನಿರಂತರ ಬೊಗಳುತ್ತಿರುವುದನ್ನು ಕೇಳಿಸಿಕೊಂಡ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದ್ದರಿಂದ ಜನರ ಗುಂಪು ನೋಡಿ ಗಾಬರಿಗೊಂಡ ಸಿಂಹಗಳು ಸ್ಥಳದಿಂದ ಓಡಿಹೋಗಿವೆ.

  • ಪರೀಕ್ಷಾ ಕೇಂದ್ರದಲ್ಲಿ ಬರೋಬ್ಬರಿ 200 ಕೆಜಿ ನಕಲು ಚೀಟಿ ವಶ!

    ಪರೀಕ್ಷಾ ಕೇಂದ್ರದಲ್ಲಿ ಬರೋಬ್ಬರಿ 200 ಕೆಜಿ ನಕಲು ಚೀಟಿ ವಶ!

    ಅಹಮದಬಾದ್: ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದ್ದ ಕೇಂದ್ರದ ಮೇಲೆ ಅಧಿಕಾರಿಗಳು ನಡೆಸಿದ ವೇಳೆ ಸುಮಾರು 200 ಕೆಜಿ ತೂಕದ ನಕಲು ಚೀಟಿಗಳನ್ನು ವಶ ಪಡಿಸಿಕೊಂಡಿರುವ ಘಟನೆ ಜುನಾಗಢ್ ನ ವಂಥಾಲಿ ನಗರದಲ್ಲಿ ನಡೆದಿದೆ.

    ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು ಸ್ವಾಮಿ ನಾರಾಯಣ ಗುರುಕುಲ ಪರೀಕ್ಷಾ ಕೇಂದ್ರದ 15 ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದು, ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದ್ದ ಕಾರಣ ಕೆಲ ಪರೀಕ್ಷಾ ಕೇಂದ್ರದ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಮಾರ್ಚ್ 31 ರವರೆಗೂ ಪರೀಕ್ಷೆಗಳು ನಡೆಯಲಿದ್ದು, ನಕಲು ಮಾಡುವುದನ್ನು ತಡೆಯಲು ಅಗತ್ಯ ಕ್ರಮಕೈಗೊಂಡಿದ್ದಾಗಿ ಮಾಹಿತಿ ನೀಡಿದ್ದಾರೆ.

    ಕಳೆದ ತಿಂಗಳು ನಡೆದ 10ನೇ ತರಗತಿಯ ಪರೀಕ್ಷೆ ವೇಳೆ ಇದೇ ಪರೀಕ್ಷಾ ಕೇಂದ್ರ ಬಳಿ ವಿದ್ಯಾರ್ಥಿಗಳು ನಕಲು ಚೀಟಿಗಳನ್ನು ಬಳಕೆ ಮಾಡಿದ್ದರು. ಶಾಲೆಯ ಮುಂಭಾಗದ ರಸ್ತೆಯಲ್ಲಿ ಪರೀಕ್ಷೆ ನಡೆದ ಬಳಿಕ ಅವುಗಳನ್ನು ಎಸೆಯಲಾಗಿತ್ತು. ಮೈಕ್ರೋ ಜೆರಾಕ್ಸ್ ಬಳಸಿ ನಕಲಿ ಚೀಟಿ ತಯಾರಿಸಿದ್ದರು. ಈ ಕುರಿತು ತಮಗೇ ದೂರು ಬಂದ ಬಳಿಕ ಹೆಚ್ಚಿನ ನಿಗಾ ವಹಿಸಲಾಗಿತ್ತು ಎಂದು ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳನ್ನು ನಕಲು ಮಾಡುವುದನ್ನು ಪತ್ತೆ ಹಚ್ಚಲು ಕಾಲೇಜಿ ಸಿಬ್ಬಂದಿಯಿಂದ ಮೆಗಾ ಪ್ಲಾನ್-ಕಾಲೇಜಿನ ನಡೆಗೆ ಎಲ್ಲಡೆ ಭಾರೀ ವಿರೋಧ!

    ಪರೀಕ್ಷೆಯ ನಕಲಿ ಮಾಡದಂತೆ ಮೊದಲೇ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿತ್ತು. ಅದ್ರು ಪರೀಕ್ಷೆ ನಡೆಯುವ ವೇಳೆ ವಿದ್ಯಾರ್ಥಿಗಳು ನಕಲು ಮಾಡಲು ಮುಂದಾಗಿದ್ದಾರೆ. ಈ ವೇಳೆ ದಾಳಿ ನಡೆಸಿ ನಕಲು ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ. ವಿಜ್ಞಾನ ವಿಭಾಗದ ರಸಾಯನ ಶಾಸ್ತ್ರ ಪರೀಕ್ಷೆ ನಡೆಯುತ್ತಿದ್ದ ಸಾಮೂಹಿಕ ನಕಲು ಬೆಳಕಿಗೆ ಬಂದಿದೆ.

    ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದ ಎಲ್ಲಾ ವಿದ್ಯಾರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿರುವ ಅಧಿಕಾರಿಗಳು, ವಿದ್ಯಾರ್ಥಿಗಳಿಂದ ಒಟ್ಟಾರೆ 200 ಕೆಜಿ ತೂಕದ ಚೀಟಿಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.